ಶನಿವಾರದ ರಾಶಿ ಭವಿಷ್ಯ,- ಫೆಬ್ರವರಿ 21, 2026,
ಮೇಷ ರಾಶಿ ಭವಿಷ್ಯ: ಸಾಡೇ ಸಾತಿಯ ಪ್ರಭಾವದಲ್ಲಿ ಎಚ್ಚರಿಕೆ ಅಗತ್ಯ ಮೇಷ ರಾಶಿಯವರಿಗೆ ಸದ್ಯ ಸಾಡೇ ಸಾತಿ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಜೀವನದ ಹಲವು ಕ್ಷೇತ್ರಗಳಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಅಗತ್ಯವಾಗಿದೆ. ಹೊಸ ವ್ಯಾಪಾರ ವ್ಯವಹಾರಗಳು ಅಥವಾ ಒಡಂಬಡಿಕೆಗಳಿಗೆ ಇದು ಸೂಕ್ತ ಸಮಯವಲ್ಲ. ತುರ್ತು ನಿರ್ಧಾರಗಳಿಂದ ಆರ್ಥಿಕ ಮುಗ್ಗಟ್ಟು ಉಂಟಾಗುವ ಸಾಧ್ಯತೆ ಇದೆ. ದಂಪತಿಗಳ ಜೀವನದಲ್ಲಿ ಅಶಾಂತಿ ಕಾಣಿಸಬಹುದು. ಸಣ್ಣ ವಿಚಾರಗಳೇ ದೊಡ್ಡ ಜಗಳಗಳಿಗೆ ಕಾರಣವಾಗುವ ಸಾಧ್ಯತೆ ಇರುವುದರಿಂದ ಸಹನೆ ಅಗತ್ಯ. ಕುಟುಂಬದಲ್ಲೂ ಅಣ್ಣ-ತಮ್ಮಂದಿರ ನಡುವೆ ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಎದುರಾಗಬಹುದು. ಸಹೋದರಿಯರಿಂದ ಮನಸ್ತಾಪ ಸಂಭವಿಸಬಹುದು. ವ್ಯಾಪಾರಸ್ಥರಿಗೆ ಸಾಮಾನ್ಯಕ್ಕಿಂತ ಹೆಚ್ಚು ಲಾಭದ ಸೂಚನೆಗಳಿದ್ದರೂ, ಹಣಕಾಸಿನ ನಿರ್ವಹಣೆಯಲ್ಲಿ ಎಚ್ಚರಿಕೆ ಅವಶ್ಯಕ. ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಉತ್ತಮ ಫಲಿತಾಂಶ ದೊರೆಯುವ ಸಾಧ್ಯತೆ ಇದೆ. ಆದರೆ ಪಂಚಮಸ್ಥಾನದಲ್ಲಿ ಕೇತು ಪರಿಣಾಮದಿಂದ ಉದ್ಯೋಗ ಕ್ಷೇತ್ರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಬಹುದು. ಹಿರಿಯ ಅಧಿಕಾರಿಗಳಿಂದ ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಪ್ರಶಂಸೆ ದೊರೆಯುವ ಸಾಧ್ಯತೆ ಇದೆ. ವಿವಾಹ ನಿರೀಕ್ಷೆಯಲ್ಲಿರುವವರಿಗೆ ಶುಭ ಸುದ್ದಿ ದೊರೆಯಬಹುದು. ಪ್ರೇಮಿಗಳ ಬಾಂಧವ್ಯದಲ್ಲಿ ವೃದ್ಧಿ ಕಂಡುಬರಬಹುದು. ಮಕ್ಕಳಿಂದ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ. ರಾಜಕೀಯ ರಂಗದ ಜನಪ್ರತಿನಿಧಿಗಳಿಗೆ ಅಧಿಕಾರ ಕಳೆದುಕೊಳ್ಳುವ ಭೀತಿ ಕಾಡಬಹುದು. ಸಾಲಗಾರರಿಂದ ಅವಮಾನ ಎದುರಾಗುವ ಸಂದರ್ಭಗಳಿವೆ. ಚಲನಚಿತ್ರ ಕ್ಷೇತ್ರದ ನಟ-ನಟಿಯರಿಗೆ ನಿರೀಕ್ಷಿತ ಲಾಭ ಸಿಗದೇ ನಷ್ಟ ಸಂಭವಿಸಬಹುದು. ಒಟ್ಟಾರೆ, ಈ ಅವಧಿಯಲ್ಲಿ ಶಾಂತಿ, ಸಹನೆ ಮತ್ತು ಸೂಕ್ತ ಯೋಜನೆಯೊಂದಿಗೆ ಮುಂದುವರಿಯುವುದು ಉತ್ತಮ. ಹೊಸ ವ್ಯಾಪಾರ ಆರಂಭಕ್ಕೆ ಇದು ಅನುಕೂಲಕರ ಕಾಲವಲ್ಲ; ಆದ್ದರಿಂದ ಮಹತ್ವದ ನಿರ್ಧಾರಗಳನ್ನು ಮುಂದೂಡುವುದು ಒಳಿತು.
ವೃಷಭ ರಾಶಿ ಭವಿಷ್ಯ: ಗುರುಬಲದಿಂದ ಶುಭಯೋಗ, ರಾಹು-ಕೇತುಗಳಿಂದ ಎಚ್ಚರಿಕೆ ಅಗತ್ಯ ವೃಷಭ ರಾಶಿಯವರಿಗೆ ಸದ್ಯ ಕೃಷಿ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಸ್ವಲ್ಪ ಮಂದಗತಿ ಕಂಡುಬರುವ ಸಾಧ್ಯತೆ ಇದೆ. ಆದರೂ ಗುರುಬಲ ಅನುಕೂಲಕರವಾಗಿರುವುದರಿಂದ ಯುವಕರಿಗೆ ಮತ್ತು ಯುವತಿಯರಿಗೆ ಮದುವೆ ಯೋಗ ಬಲವಾಗಿರುತ್ತದೆ. ಬಹಳ ದಿನಗಳಿಂದ ನಿರೀಕ್ಷಿಸಿದ್ದ ಶುಭ ಮಂಗಳ ಕಾರ್ಯಗಳು ನೆರವೇರಲಿವೆ. ವೃತ್ತಿಗೆ ಸಂಬಂಧಿಸಿದಂತೆ ವಿದೇಶ ಪ್ರವಾಸದ ಅವಕಾಶಗಳು ದೊರೆಯಬಹುದು. ಆದರೆ ರಾಹು ಕೇತು ಪ್ರಭಾವದಿಂದ ಮಿತ್ರರೊಂದಿಗೆ, ಉದ್ಯೋಗ ಕ್ಷೇತ್ರದಲ್ಲಿ ಹಾಗೂ ಪ್ರೀತಿಸಿದವರೊಂದಿಗೆ ಜಗಳಗಳ ಸಂಭವವಿದೆ. ಮಾತಿನ ಜಾಗ್ರತೆ ಅತ್ಯವಶ್ಯಕ. ನಿಮ್ಮ ವ್ಯಕ್ತಿತ್ವದ ಆಕರ್ಷಣೆ ಹೆಚ್ಚಾಗಿ ಜನರಿಂದ ಮೆಚ್ಚುಗೆ ದೊರೆಯಲಿದೆ. ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ಸಿಗಲಿದೆ. ಅಧಿಕಾರಿ ವರ್ಗದವರಿಗೆ ಕೆಲಸದ ಒತ್ತಡ ಹೆಚ್ಚಾಗಬಹುದು, ಆದರೆ ಪ್ರಯತ್ನಕ್ಕೆ ಸೂಕ್ತ ಪ್ರತಿಫಲ ದೊರೆಯಲಿದೆ. ಖಾಸಗಿ ಉದ್ಯೋಗಿಗಳಿಗೆ ನಾಯಕತ್ವದ ಅವಕಾಶಗಳು ಲಭಿಸಬಹುದು. ಮಾತಾಪಿತೃಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಸಹೋದರಿಯ ಆಗಮನದಿಂದ ಮನೆಗೆ ಸಂತೋಷ ವಾತಾವರಣ ಉಂಟಾಗಲಿದೆ. ಮನೆ ಕಟ್ಟಡ ಕಾರ್ಯಾರಂಭ ಅಥವಾ ಗೃಹ ನಿರ್ಮಾಣದ ಯೋಚನೆಗಳು ಮುಂದುವರಿಯಬಹುದು. ಹೊಸ ಉದ್ಯೋಗ ಆರಂಭಿಸುವ ವಿಚಾರದಲ್ಲಿ ದ್ವಂದ್ವ ಉಂಟಾದರೂ, ತಾಳ್ಮೆಯಿಂದ ನಿರ್ಧಾರ ತೆಗೆದುಕೊಳ್ಳುವುದು ಒಳಿತು. ಅತಿಯಾಗಿ ನಂಬಿ ಸಾಲ ಮಾಡುವುದು ಸಂಕಷ್ಟ ತರಬಹುದು. ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ. ರಾಜಕಾರಣಿಗಳಿಗೆ ರಾಜಮನ್ನಣೆ ದೊರೆಯುವ ಸೂಚನೆಗಳಿವೆ. ಶತ್ರುಗಳೊಂದಿಗೆ ವೈಮನಸ್ಯಕ್ಕಿಂತ ಸೌಹಾರ್ದತೆಯಿಂದ ನಡೆದುಕೊಳ್ಳುವುದು ಲಾಭದಾಯಕ. ನ್ಯಾಯಾಲಯದ ವಿಚಾರಗಳಲ್ಲಿ ತೀರ್ಪು ತಡವಾದರೂ ಕೊನೆಗೆ ನಿಮ್ಮ ಪರವಾಗಿಯೇ ಆಗುವ ಸಾಧ್ಯತೆ ಇದೆ. ನಟ-ನಟಿಯರಿಗೆ ಹೊಸ ಅವಕಾಶಗಳು ದೊರೆಯಬಹುದು. ಅಣ್ಣ-ತಮ್ಮ, ಸಹೋದರಿಯರೊಂದಿಗೆ ಪ್ರೀತಿ ಬಾಂಧವ್ಯ ವೃದ್ಧಿಯಾಗಲಿದೆ. ಪ್ರಯಾಣ ಸಂದರ್ಭದಲ್ಲಿ ಹೆಲ್ಮೆಟ್ ಧರಿಸುವುದನ್ನು ಮರೆಯಬೇಡಿ. ಪತ್ನಿಯ ಮಾರ್ಗದರ್ಶನ ಪಡೆದು ಮುಂದುವರಿದರೆ ಜೀವನದಲ್ಲಿ ಯಶಸ್ಸು ನಿಮ್ಮದಾಗಲಿದೆ.
ಮಿಥುನ ರಾಶಿ ಭವಿಷ್ಯ: ಭಾಗ್ಯಸ್ಥಾನದಲ್ಲಿ ಶುಕ್ರ, ಮಿಶ್ರ ಫಲಗಳ ಸೂಚನೆ ಮಿಥುನ ರಾಶಿಯವರಿಗೆ ಆರ್ಥಿಕ ಸ್ಥಿತಿಯಲ್ಲಿ ಕ್ರಮೇಣ ಚೇತರಿಕೆ ಕಂಡುಬರುವ ಲಕ್ಷಣಗಳಿವೆ. ಭಾಗ್ಯಸ್ಥಾನದಲ್ಲಿ ಶುಕ್ರ ಗ್ರಹ ಇರುವುದರಿಂದ ವ್ಯಾಪಾರ ವ್ಯವಹಾರಗಳಲ್ಲಿ ಧನಲಾಭ ಸಾಧ್ಯತೆ ಇದೆ. ಹಣಕಾಸಿನ ಅಡತಡೆಗಳು ನಿವಾರಣೆಯಾಗುವ ಸೂಚನೆಗಳು ದೊರೆಯುತ್ತಿವೆ. ಮದುವೆ ಮಾತುಕತೆಗಳು ಮರುಚಾಲನೆಗೊಂಡು ಉತ್ತಮ ದಿಕ್ಕಿನಲ್ಲಿ ಸಾಗಬಹುದು. ದಾಂಪತ್ಯ ಜೀವನ ರೋಮಾಂಚನಕಾರಿಯಾಗಿ ರೂಪುಗೊಳ್ಳಲಿದೆ. ಪತ್ನಿ ನಿಮ್ಮ ಕುಟುಂಬ ವರ್ಗದೊಂದಿಗೆ ಭಾವನಾತ್ಮಕವಾಗಿ ಹೊಂದಿಕೊಳ್ಳುವಳು. ಸಂತಾನಭಾಗ್ಯವೂ ಶೀಘ್ರದಲ್ಲೇ ಲಭಿಸುವ ಸಾಧ್ಯತೆ ಇದೆ. ಆದರೆ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬರಬಹುದು. ಅಜೀರ್ಣ ಸಮಸ್ಯೆ ಹಾಗೂ ನರದೌರ್ಬಲ್ಯ ಮತ್ತೆ ಕಾಡುವ ಸಂಭವವಿದೆ. ಹೆಣ್ಣು ಮಕ್ಕಳಿಗೆ ಹೊಟ್ಟೆ ಭಾಗದಲ್ಲಿ ನೋವು ಕಾಣಿಸಬಹುದು — ಆರೋಗ್ಯದ ಕಡೆ ಗಮನ ಅಗತ್ಯ. ಉದ್ಯೋಗ ಕ್ಷೇತ್ರದಲ್ಲಿ ಮಾನಸಿಕ ಹಿಂಸೆ ಅಥವಾ ಒತ್ತಡ ಎದುರಾಗಬಹುದು. ನಿಮ್ಮಲ್ಲಿರುವ ಪ್ರತಿಭೆ ಮತ್ತು ಶಕ್ತಿಯಿಂದ ಸ್ವತಂತ್ರ ಪ್ರಯತ್ನದ ಮೂಲಕ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಬಹುದು. ರೆವಿನ್ಯೂ ಇಲಾಖೆಯ ಉದ್ಯೋಗಿಗಳು ಕರ್ತವ್ಯ ನಿರ್ವಹಣೆಯಲ್ಲಿ ವಿಶೇಷ ಜಾಗ್ರತೆ ವಹಿಸಬೇಕು. ವ್ಯಾಪಾರಿಗಳಿಗೆ ಸ್ವಲ್ಪ ತೊಡಕುಗಳು ಎದುರಾಗಬಹುದು. ಚೀಟಿ ವ್ಯವಹಾರಗಳಲ್ಲಿ ಧನ ನಷ್ಟ ಸಂಭವಿಸಬಹುದು, ಆದ್ದರಿಂದ ಇಂತಹ ಹೂಡಿಕೆಗಳನ್ನು ತಪ್ಪಿಸುವುದು ಒಳಿತು. ಬೇರೆಯವರಿಗೆ ಮಧ್ಯಸ್ಥಿಕೆ ವಹಿಸಿ ಸಾಲ ನೀಡುವುದು ಅನಾಹುತ ತರಬಹುದು. ಶತ್ರುಗಳ ಬಾಧೆ ಕಾಡುವ ಸಾಧ್ಯತೆ ಇದೆ. ಪ್ರೇಮಿಗಳ ಮನಸ್ಸಿನಲ್ಲಿ ಬೇಸರ ಉಂಟಾಗಬಹುದು. ಆತ್ಮೀಯರು ದೂರವಾಗುವ ಭಾವನೆ ಮೂಡಬಹುದು. ಆದರೂ ನಂಬಿರುವ ಸ್ತ್ರೀ ಅಥವಾ ಪುರುಷರಿಂದ ಮನಸ್ಸಿಗೆ ಸಮಾಧಾನ ಮತ್ತು ಲಾಭ ದೊರೆಯಲಿದೆ. ಹಣ ಹೂಡಿಕೆ ಮಾಡುವ ಅವಕಾಶಗಳು ಕಂಡುಬಂದರೂ, ಆಲೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಅನಾವಶ್ಯಕ ಪ್ರಯಾಣಗಳನ್ನು ತಪ್ಪಿಸುವುದು ಒಳಿತು. ಒಟ್ಟಾರೆ, ಈ ಅವಧಿಯಲ್ಲಿ ಜಾಗ್ರತೆ ಮತ್ತು ಧೈರ್ಯದಿಂದ ನಡೆದುಕೊಂಡರೆ ಮಿಶ್ರ ಫಲಗಳ ಮಧ್ಯೆ ಉತ್ತಮ ಅವಕಾಶಗಳನ್ನು ಸಾಧಿಸಬಹುದು.
ಕರ್ಕಾಟಕ ರಾಶಿ ಭವಿಷ್ಯ: ಗ್ರಹಸ್ಥಿತಿಯಿಂದ ಶುಭಕಾರ್ಯಗಳ ಜೊತೆಗೆ ಎಚ್ಚರಿಕೆಯ ಸೂಚನೆ ಕರ್ಕಾಟಕ ರಾಶಿಯವರ ಕುಟುಂಬದಲ್ಲಿ ಶುಭ ಮಂಗಳ ಕಾರ್ಯಗಳು ಜರುಗುವ ಸಾಧ್ಯತೆ ಹೆಚ್ಚಾಗಿದೆ.ಬುಧ ಶುಕ್ರ ಗ್ರಹ ಪ್ರಭಾವದಿಂದ ದಂಪತಿಗಳಿಗೆ ಸಮಾಧಾನ ಹಾಗೂ ಸಂತಾನ ಫಲಶ್ರುತಿ ದೊರೆಯುವ ಸೂಚನೆಗಳಿವೆ. ಕುಟುಂಬ ವಾತಾವರಣದಲ್ಲಿ ಸಂತೋಷದ ಕ್ಷಣಗಳು ಹೆಚ್ಚಾಗಲಿವೆ. ಆದರೆ ಆರೋಗ್ಯದ ಕಡೆ ಗಮನ ಅಗತ್ಯ. ಶೀತ, ನೆಗಡಿ, ಕೆಮ್ಮು ಮುಂತಾದ ಸಮಸ್ಯೆಗಳು ಕಾಣಿಸಬಹುದು. ಹವಾಮಾನ ಬದಲಾವಣೆಗೆ ಎಚ್ಚರಿಕೆ ವಹಿಸುವುದು ಒಳಿತು. ಶೇರು ಮಾರುಕಟ್ಟೆಯಲ್ಲಿ ಲಾಭದ ಸೂಚನೆಗಳಿವೆ. ಭೂಮಿ ಖರೀದಿ ಅಥವಾ ಬಂಡವಾಳ ಹೂಡಿಕೆ ಮಾಡಲು ಇದು ಉತ್ತಮ ದಿನವಾಗಿರಬಹುದು. ಸ್ವತಂತ್ರ ವ್ಯಾಪಾರ ನಡೆಸುವವರಿಗೆ ಸಂತೋಷಕರ ಫಲಿತಾಂಶ ಸಿಗಲಿದೆ. ಆದರೆ ಪಾಲುದಾರಿಕೆ ವ್ಯವಹಾರಗಳಲ್ಲಿ ನಷ್ಟ ಸಂಭವಿಸುವ ಸಾಧ್ಯತೆ ಇರುವುದರಿಂದ ಜಾಗ್ರತೆ ಅಗತ್ಯ. ಲೇವಾದೇವಿ ವ್ಯವಹಾರಗಳಲ್ಲೂ ನಷ್ಟ ತಪ್ಪಿಸಲು ಸೂಕ್ತ ಪರಿಶೀಲನೆ ಅಗತ್ಯ. ಉದ್ಯೋಗ ಕ್ಷೇತ್ರದಲ್ಲಿ ಇಲ್ಲಸಲ್ಲದ ಆಪಾದನೆಗಳು ಎದುರಾಗಬಹುದು. ಸರ್ಕಾರಿ ಉದ್ಯೋಗಿಗಳು ತಮ್ಮದಲ್ಲದ ತಪ್ಪುಗಳಿಗೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಮೇಲಾಧಿಕಾರಿಗಳ ಮೇಲೆ ಪ್ರಭಾವಶಾಲಿ ವ್ಯಕ್ತಿಗಳ ಒತ್ತಡ ಹೆಚ್ಚಾಗಬಹುದು. ಅತಿಥಿ ಶಿಕ್ಷಕರಿಗೆ ಕರ್ತವ್ಯದಲ್ಲಿ ಹಿನ್ನಡೆ ಕಾಣಿಸಬಹುದು. ದಾಂಪತ್ಯ ಜೀವನದಲ್ಲಿ ಕೆಲವೊಮ್ಮೆ ನಿರಾಸಕ್ತಿ ಅಥವಾ ಸಂಗಾತಿಯಿಂದ ಬೇಸರ ಉಂಟಾಗಬಹುದು. ಶತ್ರುಗಳಿಂದ ಕಾಟ ಎದುರಾಗುವ ಸೂಚನೆಗಳಿವೆ. ಆದ್ದರಿಂದ ಸಹನೆ ಮತ್ತು ಸಮನ್ವಯದೊಂದಿಗೆ ನಡೆದುಕೊಳ್ಳುವುದು ಒಳಿತು. ಒಟ್ಟಾರೆ, ಶುಭಕಾರ್ಯಗಳ ಜೊತೆಗೆ ಜಾಗ್ರತೆ ಅಗತ್ಯವಿರುವ ಮಿಶ್ರ ಫಲಗಳ ದಿನವಾಗಿದೆ.
ಸಿಂಹ ರಾಶಿ ಭವಿಷ್ಯ: ಗುರುಕೃಪೆಯಿಂದ ಹೊಸ ಅವಕಾಶಗಳು, ಎಚ್ಚರಿಕೆಯಿಂದ ನಡೆದುಕೊಳ್ಳಿ ಸಿಂಹ ರಾಶಿಯವರಿಗೆ ಈ ಅವಧಿಯಲ್ಲಿ ಮಿಶ್ರ ಫಲಗಳ ಸೂಚನೆ ಇದೆ. ಗುರು ಶುಭಫಲ ನೀಡುತ್ತಿರುವುದರಿಂದ ಹೊಸ ಬಿಸಿನೆಸ್ ಆರಂಭಿಸಲು ಇದು ಅನುಕೂಲಕರ ಕಾಲವಾಗಿದೆ. ಉದ್ಯೋಗ ಕ್ಷೇತ್ರದಲ್ಲಿ ಧನಲಾಭ ಕಂಡುಬರುವ ಸಾಧ್ಯತೆ ಇದೆ. ಕೃಷಿಭೂಮಿ ಖರೀದಿ ಅಥವಾ ಗೃಹನಿರ್ಮಾಣದ ಆಸೆ ನೆರವೇರುವ ಲಕ್ಷಣಗಳಿವೆ. ಆದರೆ ತಂತ್ರಜ್ಞಾನ ಪದವಿ ಹೊಂದಿದವರಿಗೆ ಉದ್ಯೋಗದಲ್ಲಿ ಸ್ವಲ್ಪ ಹಿನ್ನಡೆ ಎದುರಾಗಬಹುದು. ಉದ್ಯೋಗ ಕ್ಷೇತ್ರದಲ್ಲಿ ವೈಯಕ್ತಿಕ ತೇಜೋವಧೆ ಅಥವಾ ಪ್ರತಿಷ್ಠೆಗೆ ಧಕ್ಕೆಯಾಗುವ ಸಂದರ್ಭಗಳು ಉಂಟಾಗಬಹುದು. ಉದ್ಯೋಗ ಬದಲಾವಣೆ ಯೋಚನೆ ಇದ್ದರೆ ಸದ್ಯಕ್ಕೆ ಮುಂದೂಡುವುದು ಒಳಿತು. ಭೂ ಸಂಬಂಧಿ ಒಪ್ಪಂದಗಳಲ್ಲಿ ಜಾಗ್ರತೆ ಅಗತ್ಯ. ದಾಖಲೆಗಳನ್ನು ಪರಿಶೀಲಿಸಿ ಮಾತ್ರ ಒಪ್ಪಿಕೊಳ್ಳಿ. ಭೂ ವ್ಯವಹಾರಗಳಲ್ಲಿ ಆರ್ಥಿಕ ಚೇತರಿಕೆ ಕಂಡುಬರುವ ಸಾಧ್ಯತೆ ಇದ್ದರೂ, ಅವಿವೇಕಿ ನಿರ್ಧಾರಗಳಿಂದ ನಷ್ಟವಾಗಬಹುದು. ಹೋಟೆಲ್ ಉದ್ಯಮದಲ್ಲಿ ನಿರೀಕ್ಷಿತ ಲಾಭ ಸಿಗದೇ ನಷ್ಟ ಸಂಭವಿಸಬಹುದು. ಪ್ರೀತಿ-ಪ್ರೇಮ ವಿಷಯಗಳಲ್ಲಿ ಮೂರನೇ ವ್ಯಕ್ತಿಯಿಂದ ತೊಂದರೆ ಎದುರಾಗಬಹುದು. ಪರಸ್ತ್ರೀ ಸಹವಾಸದಿಂದ ಅನಾವಶ್ಯಕ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ — ಪ್ರತಿಷ್ಠೆ ಕಾಪಾಡಿಕೊಳ್ಳುವುದು ಮುಖ್ಯ. ಹಣಕಾಸಿನ ವಿಚಾರದಲ್ಲಿ ಸಹೋದರ-ಸಹೋದರಿಯರೊಂದಿಗೆ ಜಗಳ ಸಂಭವಿಸಬಹುದು. ಕುಟುಂಬದಲ್ಲಿ ಮಾತಿನ ಜಾಗ್ರತೆ ಅಗತ್ಯ. ಮದುವೆ ವಿಚಾರದಲ್ಲಿ ಸ್ವಲ್ಪ ವಿಳಂಬ ಉಂಟಾಗಬಹುದು. ಕೆಲವರು ಬಾಡಿಗೆ ಮನೆ ಬದಲಾಯಿಸುವ ಪರಿಸ್ಥಿತಿ ಎದುರಿಸಬಹುದು. ಒಟ್ಟಾರೆ, ಅವಕಾಶಗಳು ಇದ್ದರೂ ಎಚ್ಚರಿಕೆಯಿಂದ ನಡೆದುಕೊಂಡರೆ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.
ಕನ್ಯಾ ರಾಶಿ ಭವಿಷ್ಯ: ಕಾನೂನು ನಿವಾರಣೆ ಮತ್ತು ಆರ್ಥಿಕ ಚೇತರಿಕೆ ಕನ್ಯಾ ರಾಶಿಯವರಿಗೆ ಈ ಅವಧಿಯಲ್ಲಿ ಕಾನೂನು ಸಂಬಂಧಿತ ಅಡಚಣೆಗಳು ನಿವಾರಣೆಯಾಗುವ ಸಾಧ್ಯತೆ ಇದೆ. ಕರ್ಮ ಸ್ಥಾನದಲ್ಲಿ ಗುರುಬಲ ಇರುವುದರಿಂದ ಕೆಲವರಿಗೆ ವಿದೇಶ ಪ್ರವಾಸದ ಅವಕಾಶ ದೊರೆಯಬಹುದು. ವೃತ್ತಿ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಆರ್ಥಿಕ ಚೇತರಿಕೆ ಕಾಣಿಸಿಕೊಳ್ಳಲಿದೆ. ಎಲ್ಲಾ ತರಹದ ವ್ಯಾಪಾರಗಳಲ್ಲಿ ಸುಧಾರಣೆ ಕಂಡುಬರುವ ಸೂಚನೆಗಳಿವೆ. ವಿಶೇಷವಾಗಿ ಹಾರ್ಡ್ವೇರ್, ಸ್ಟೇಷನರಿ, ದಿನಸಿ, ಸಿದ್ಧ ಉಡುಪು ವ್ಯಾಪಾರಗಳಲ್ಲಿ ಧನಲಾಭ ಸಾಧ್ಯತೆ ಇದೆ. ತಂದೆಯಿಂದ ಆಸ್ತಿ ಅನುಕೂಲವಾಗುವ ಲಕ್ಷಣಗಳಿವೆ. ಅತ್ತೆ ಮನೆ ಕಡೆಯಿಂದಲೂ ಆಸ್ತಿ ಭಾಗ್ಯ ದೊರೆಯಬಹುದು. ಆದರೆ ಆಸ್ತಿ ವಿಚಾರದಲ್ಲಿ ದಾಯಾದಿಗಳಿಂದ ಕಿರಿಕಿರಿ ಎದುರಾಗಬಹುದು. ಸ್ಥಿರಾಸ್ತಿ ಕಳೆದುಕೊಳ್ಳುವ ಭೀತಿ ಕಾಡಬಹುದು. ದಾಖಲೆಗಳನ್ನು ಜಾಗ್ರತೆಯಿಂದ ಪರಿಶೀಲಿಸುವುದು ಒಳಿತು. ಉದ್ಯೋಗ ಕ್ಷೇತ್ರದಲ್ಲಿ ತೊಂದರೆಗಳು ಎದುರಾಗಬಹುದು. ನೀವು ಎಲ್ಲರ ಕಷ್ಟಕ್ಕೆ ಸಹಾಯ ಮಾಡುವ ಸ್ವಭಾವದವರಾಗಿದ್ದರೂ, ನಿಮ್ಮ ಕಷ್ಟದ ಸಮಯದಲ್ಲಿ ನಿರೀಕ್ಷಿತ ಸಹಾಯ ಸಿಗದಿರುವುದು ಮನಸ್ಸಿಗೆ ನೋವು ತರಬಹುದು. ಮಕ್ಕಳ ಸ್ವಯಂಕೃತ ತಪ್ಪುಗಳಿಂದ ಪೊಲೀಸ್ ಸ್ಟೇಷನ್ ಅಥವಾ ಕೋರ್ಟ್ ಅಲೆದಾಟ ಸಂಭವಿಸಬಹುದು — ಆದ್ದರಿಂದ ಮಕ್ಕಳ ಮೇಲೆ ಗಮನ ಅಗತ್ಯ. ಮಗಳ ಸಂಸಾರದಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಮೋಜು-ಮಸ್ತಿಯಿಂದ ಅನಾವಶ್ಯಕ ಖರ್ಚುಗಳಿಂದ ಧನಹಾನಿ ಸಂಭವಿಸಬಹುದು. ಮದುವೆ ಚರ್ಚೆಗಳು ಮುಂದುವರಿಯುವ ಸೂಚನೆಗಳಿವೆ. ಒಟ್ಟಾರೆ, ಆರ್ಥಿಕವಾಗಿ ಚೇತರಿಕೆಯ ಕಾಲವಾದರೂ ಕುಟುಂಬ ಮತ್ತು ಆಸ್ತಿ ವಿಚಾರಗಳಲ್ಲಿ ಜಾಗ್ರತೆ ಅಗತ್ಯವಿದೆ.
ತುಲಾ ರಾಶಿ ಭವಿಷ್ಯ : ಶುಕ್ರ ಸ್ವಾಮಿಯ ಅನುಗ್ರಹದಿಂದ ತುಲಾ ರಾಶಿಯವರಿಗೆ ಈ ಅವಧಿ ಮಿಶ್ರ ಫಲಕಾರಿಯಾಗಿದೆ. ಮನೆಯಲ್ಲಿ ಶುಭ ಮಂಗಳ ಕಾರ್ಯಗಳು ನೆರವೇರಲಿದ್ದು ಸಂತಸದ ವಾತಾವರಣ ಕಂಡುಬರುತ್ತದೆ. ಗುರು, ಶನಿ ಹಾಗೂ ರಾಹುಗಳ ಅನುಕೂಲದಿಂದ ಸರ್ಕಾರಿ ಉದ್ಯೋಗ ಪ್ರಯತ್ನಿಸುವವರಿಗೆ ಯಶಸ್ಸಿನ ಸಾಧ್ಯತೆ ಇದೆ. ವಿದೇಶ ಪ್ರವಾಸ ಅಥವಾ ವಿದೇಶದಲ್ಲಿ ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಉತ್ತಮ ಅವಕಾಶಗಳು ದೊರೆಯುವ ಸಾಧ್ಯತೆ ಇದೆ. ಪ್ರೇಮಿಗಳ ವಿವಾಹ ಯೋಗ ಕಾಣಿಸುತ್ತಿದೆ. ದಾಂಪತ್ಯ ಜೀವನದಲ್ಲಿ ಪತ್ನಿಯಿಂದ ಸೂಕ್ತ ಸಲಹೆ ಹಾಗೂ ಬೆಂಬಲ ಸಿಗುತ್ತದೆ. ಭೂಮಿ ಮತ್ತು ಆಸ್ತಿ ವ್ಯವಹಾರಗಳಲ್ಲಿ ಜಯ ಲಭಿಸುವ ಸೂಚನೆ ಇದೆ. ಕಳೆದುಕೊಂಡಿರುವ ವಸ್ತುಗಳು ಪುನಃ ದೊರಕುವ ಸಾಧ್ಯತೆ ಇದೆ. ಹಣಕಾಸಿನ ವ್ಯವಹಾರಗಳು ಮಧ್ಯಮ ಮಟ್ಟದಲ್ಲಿ ಸಾಗಲಿವೆ; ಆದರೆ ಪರಿಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳಿಗೆ ಮಹತ್ತರ ಯೋಜನೆಗಳು ನಿಮ್ಮನ್ನು ಹುಡುಕಿ ಬರಬಹುದು. ಗೃಹ ನಿರ್ಮಾಣ ಕಾರ್ಯಗಳು ಪೂರ್ಣಗೊಳ್ಳುವ ಸೂಚನೆ ಇದೆ. ವಾಹನ ವ್ಯವಹಾರಸ್ಥರಿಗೆ ಲಾಭದ ನಿರೀಕ್ಷೆ ಇದೆ. ಕೋರ್ಟ್ ಕೇಸ್ ಸಂಬಂಧಿತ ವಿಚಾರಗಳಲ್ಲಿ ಕ್ರಮೇಣ ಪ್ರಗತಿ ಕಾಣಬಹುದು. ಆದರೆ ಶತ್ರುಗಳ ತೊಂದರೆಗಳು ಎದುರಾಗುವ ಸಾಧ್ಯತೆ ಇದೆ. ಆರೋಗ್ಯದಲ್ಲಿ ಹೊಸ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಜಾಗ್ರತೆ ವಹಿಸಬೇಕು. ಹಳೆಯ ಸಂಗಾತಿಯ ಜೀವನಾಂಶ ಮರುಕಳಿಸುವ ಸಾಧ್ಯತೆ ಇದೆ. ರಾಜಕಾರಣಿಗಳಿಗೆ ಯಶಸ್ಸಿನ ಜೊತೆಗೆ ಅಪವಾದಗಳು ಎದುರಾಗಬಹುದು, ಹಿತೈಷಿಗಳ ಬಗ್ಗೆ ಎಚ್ಚರಿಕೆ ಅಗತ್ಯ. ಸ್ತ್ರೀ ವ್ಯಾಮೋಹಕ್ಕೆ ಒಳಗಾಗದಂತೆ ಜಾಗ್ರತೆ ವಹಿಸಬೇಕು. ಪ್ರೇಮ ಸಂಬಂಧಗಳಲ್ಲಿ ಬದಲಾವಣೆ ಸಂಭವಿಸಬಹುದು. ಕೆಲವರಿಗೆ ಸಂಬಂಧ ಮುಕ್ತಾಯದಂತಹ ಪರಿಸ್ಥಿತಿಗಳು ಎದುರಾಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಧೈರ್ಯ, ಸಹನೆ ಮತ್ತು ವಿವೇಕದಿಂದ ನಡೆದುಕೊಂಡರೆ ಉತ್ತಮ ಫಲಿತಾಂಶಗಳನ್ನು ಕಾಣಬಹುದು.
ವೃಶ್ಚಿಕ ರಾಶಿ ಭವಿಷ್ಯ : ಈ ವಾರದ ಅಂತ್ಯದಲ್ಲಿ ಆಸ್ತಿ ಮತ್ತು ಭೂಮಿ ಖರೀದಿಗೆ ಶುಭಯೋಗ ಕಂಡುಬರುತ್ತಿದೆ. ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿ ಭಾಗ್ಯ ಲಭಿಸುವ ಸಾಧ್ಯತೆ ಇದೆ. ಕುಟುಂಬದಲ್ಲಿ ಮದುವೆ ವಿಚಾರವಾಗಿ ಸಡಗರ-ಸಂಭ್ರಮ ಕಂಡುಬರುತ್ತದೆ. ಅವಿವಾಹಿತರಿಗೆ ವಿವಾಹ ಯೋಗ ಬಲವಾಗಿದೆ. ವೃತ್ತಿ ಕ್ಷೇತ್ರದಲ್ಲಿ ಸ್ಥಾನ ಬದಲಾವಣೆ ಅಥವಾ ವರ್ಗಾವಣೆಯ ಕನಸು ನನಸಾಗುವ ಸಾಧ್ಯತೆ ಇದೆ. ಬಹುಕಾಲದಿಂದ ನಿರೀಕ್ಷಿಸಿದ್ದ ಪ್ರಮೋಷನ್ ಈ ಅವಧಿಯಲ್ಲಿ ನೆರವೇರಬಹುದು. ಉದ್ಯೋಗ ಸಂದರ್ಶನ ನೀಡಿದವರಿಗೆ ಉತ್ತಮ ಪ್ರತಿಕ್ರಿಯೆ ದೊರೆಯಲಿದೆ — ಇದು ಭವಿಷ್ಯದ ಯಶಸ್ಸಿನ ಮೊದಲ ಹೆಜ್ಜೆಯಾಗಬಹುದು. ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಅನಿರೀಕ್ಷಿತವಾಗಿ ಆದಾಯ ಹೆಚ್ಚಳವಾಗುವ ಸೂಚನೆ ಇದೆ. ಕೃಷಿಕರಿಗೆ ಧನಲಾಭ ಸಿಗಲಿದೆ. ಶುಭ ಮಂಗಳ ಕಾರ್ಯಗಳು ಜರುಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸುಖ, ಶಾಂತಿ ಮತ್ತು ಸಮಾಧಾನ ವಾತಾವರಣ ಇರುತ್ತದೆ. ಆರೋಗ್ಯದ ವಿಷಯದಲ್ಲಿ ಸುಧಾರಣೆ ಕಾಣಬಹುದು. ಮನೆಗೆ ಅಲಂಕಾರಿಕ ಗೃಹೋಪಕರಣಗಳ ಖರೀದಿ ಸಂತೋಷ ತರಲಿದೆ.ಮಹಿಳಾ ಉದ್ಯೋಗಿಗಳಿಗೆ ವೃತ್ತಿಯಲ್ಲಿ ಪ್ರಗತಿ ಕಂಡುಬಂದರೂ ಸಹೋದ್ಯೋಗಿ ಮಹಿಳೆಯಿಂದ ಸ್ವಲ್ಪ ತೊಂದರೆ ಉಂಟಾಗಬಹುದು — ಸಹನೆ ಅಗತ್ಯ. ಸ್ವತಂತ್ರ ಉದ್ಯಮಿಗಳಿಗೆ ಲಾಭದ ಸೂಚನೆ ಇದೆ. ಹೋಟೆಲ್ ಉದ್ಯಮದಾರರಿಗೆ ಉತ್ತಮ ಆದಾಯ ಸಾಧ್ಯತೆ ಇದೆ. ಸಂಗಾತಿಯಿಂದ ಅತಿ ಉದ್ವೇಗ ಉಂಟಾಗುವ ಸಾಧ್ಯತೆ ಇರುವುದರಿಂದ ಸಂಯಮದಿಂದ ವರ್ತಿಸಬೇಕು. ಒಂದೇ ಕುಟುಂಬದ ಮಹಿಳೆಯರ ಮಧ್ಯೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ. ಕಂದಾಯ/ವರಮಾನ ಇಲಾಖೆಯ ನೌಕರರು ನಿವೇಶನ ಖರೀದಿಸುವ ಯೋಗ ಇದೆ. ಒಟ್ಟಿನಲ್ಲಿ ಪರಿಶ್ರಮ ಮತ್ತು ವಿವೇಕದಿಂದ ನಡೆದುಕೊಂಡರೆ ಈ ಅವಧಿ ಉತ್ತಮ ಫಲಿತಾಂಶಗಳನ್ನು ನೀಡಲಿದೆ.
ಧನಸ್ಸು ರಾಶಿ ಭವಿಷ್ಯ : ಈ ಸಮಯದಲ್ಲಿ ಗುರು ಮತ್ತು ಶುಕ್ರರ ಬಲ ನಿಮಗೆ ಅನುಕೂಲ ನೀಡುತ್ತಿದೆ. ಅವಿವಾಹಿತರಿಗೆ ಮದುವೆ ಯೋಗ ದೃಢವಾಗಿದೆ. ಈ ಅವಧಿಯಲ್ಲಿ ಸಿಹಿ ಮತ್ತು ಕಹಿ ಅನುಭವಗಳು ಎರಡೂ ಸಂಭವಿಸುವ ಸಾಧ್ಯತೆ ಇದೆ – ಸಂತೋಷದ ಕ್ಷಣಗಳ ಜೊತೆ ಸವಾಲುಗಳು ಕೂಡ ಎದುರಾಗಲಿವೆ. ಮಾತಾಪಿತೃ ಹಾಗೂ ಪತ್ನಿಯಿಂದ ದೊರಕುವ ಅನುಭವಗಳು ನಿಮಗೆ ಪ್ರಯೋಜನ ನೀಡುತ್ತವೆ. ನಿಶ್ಚಲವಾದ ಸಂಪತ್ತು ಚೇತರಿಕೆಯ ಲಕ್ಷಣಗಳಿವೆ. ಪ್ರೇಮದ ಸಂಗಾತಿಯಿಂದ ಸಂತೋಷ ಅನುಭವಿಸುವಿರಿ. ವಾಹನ ಚಲಿಸುವಾಗ ಎಚ್ಚರಿಕೆ ಅಗತ್ಯ. ರಾಜಕಾರಣಿಗಳಿಗೆ ಈ ಅವಧಿ ನಿಮ್ಮ ಸ್ಥಾನಮಾನ ಹೆಚ್ಚಳದಾಗಿದೆ; ಶಕ್ತಿ ಪ್ರದರ್ಶನ ಹಾಗೂ ಉನ್ನತ ಸ್ಥಾನ ದೊರೆಯುವ ಅವಕಾಶ ಇದೆ. ಆದರೆ ಮಾತಿನಲ್ಲಿ ಸೌಜನ್ಯ ಮತ್ತು ಮಮಕಾರವನ್ನು ಕಾಪಾಡಿಕೊಳ್ಳಬೇಕು. ವಿರೋಧಿಗಳು ಮಿತ್ರರಾಗಿ ಹೋಗುವ ಸಾಧ್ಯತೆ ಇದೆ. ಸರ್ಕಾರಿ ಸೌಮ್ಯ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದವರಿಗೆ ಲಾಭ ಸಿಗಬಹುದು. ಆಕಸ್ಮಿಕವಾಗಿ ಆರೋಗ್ಯದ ತೊಂದರೆಗಳು ಸಂಭವಿಸಬಹುದು – ಗ್ಯಾಸ್ಟ್ರಿಕ್ ಮತ್ತು ಹೃದಯ ಸಂಬಂಧಿ ಸಮಸ್ಯೆಗಳನ್ನು ಲಘುವಾಗಿ ತಡೆಯಬೇಡಿ, ನಿರ್ಲಕ್ಷ್ಯ ಜೀವಕ್ಕೆ ಅಪಾಯಕಾರಿಯಾಗಿದೆ. ಕುಟುಂಬದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಸಂಘರ್ಷ ಸಂಭವಿಸಬಹುದು. ಹಣಕಾಸಿನ ಸಮಸ್ಯೆಯಿಂದ ಸಂಬಂಧಿಕರಿಂದ ಉದ್ವೇಗ ಅನುಭವಿಸಬಹುದು. ವಿದೇಶದಲ್ಲಿ ನೆಲೆಸಿರುವವರಿಗೆ ಉದ್ಯೋಗ ಬದಲಾವಣೆ ನಿರೀಕ್ಷೆಯಲ್ಲಿದ್ದವರಿಗೆ ಹೊಸ ಅವಕಾಶಗಳು ಕಾಣಿಸುತ್ತವೆ. ಸಂದರ್ಶನಗಳಿಗೆ ಪೂರ್ವ ತಯಾರಿ ಮಾಡಿಕೊಳ್ಳಿ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಅಕಸ್ಮಾತ್ ಬುದ್ಧಿವಂತಿಕೆ ತೊಂದರೆ ಉಂಟುಮಾಡಬಹುದು. ಆತ್ಮೀಯ ಸ್ನೇಹಿತ ಅಥವಾ ನಂಬಿದವರಿಂದ ನಿಮ್ಮ ತಿಳಿವಳಿಕೆಗೆ ಹೊರತುಮಾಡಿ ಪ್ರಮುಖ ದಾಖಲೆಗಳ ಮೇಲೆ ಸಹಿ ಮಾಡಿಸಿಕೊಳ್ಳುವ ಸಾಧ್ಯತೆ ಇದೆ. ಪ್ರೇಮಿಗಳ ಸಂಬಂಧದಲ್ಲಿ ಸಂತೋಷದ ಕೊರತೆ ಕಾಣಬಹುದು. ಆದರೆ ದಾನ, ಸದ್ಗುಣ, ಲೋಕೋಪಕಾರದ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಲಿದೆ. ನರದೌರ್ಬಲ್ಯತೆ ಕಡಿಮೆಯಾಗುತ್ತದೆ. ನೇತ್ರದ ಸಮಸ್ಯೆಗಳು ಕೆಲವು ಸಮಯ ಕಾಡಬಹುದು. ಪಿತೃ ಪಿಂಡ ಸಂಬಂಧಿ ದೋಷಗಳಿಂದ ಮನೆಯಲ್ಲಿ ಅಶಾಂತಿ, ಮದುವೆ ವಿಳಂಬ, ಆರ್ಥಿಕ ನಷ್ಟ, ದಾರಿದ್ರ್ಯ, ಜಿಗುಪ್ಸೆ ಸೇರಿದಂತೆ ಹಲವಾರು ಸಮಸ್ಯೆಗಳು ಎದುರಾಗಬಹುದು. ಒಟ್ಟಿನಲ್ಲಿ, ಜಾಗ್ರತೆ, ಸಮಾಧಾನ ಮತ್ತು ಸೂಕ್ಷ್ಮತೆಯಿಂದ ನಡೆದುಕೊಂಡರೆ ಈ ಸಮಯವನ್ನು ಯಶಸ್ವಿಯಾಗಿ ದಾಟಬಹುದು.
ಮಕರ ರಾಶಿ ಭವಿಷ್ಯ : ಈ ಅವಧಿಯಲ್ಲಿ ಕುಜ ಮತ್ತು ರಾಹು ಅನೂಕೂಲಕರವಾಗಿಲ್ಲ; ದಂಪತಿಗಳು ಮತ್ತು ಪ್ರೇಮಿಗಳ ನಡುವೆ ಕೆಲವೊಂದು ಕಲಹಗಳು ಸಂಭವಿಸಬಹುದು. ಉದ್ಯೋಗದಲ್ಲಿ ಸಹ ಅತಿಯಾದ ಕಲಹ ಸಂಭವಿಸಬಹುದಾಗಿದೆ. ಆಸ್ತಿ ವಿಷಯದ ಸರ್ಕಾರಿ ತಿದ್ದುಪಡಿ/ಅನುಮತಿ ಪಡೆಯಲು ಇಂದು ಸೂಕ್ತ ಸಮಯ. ಹೆಣ್ಣು ಮಕ್ಕಳ ಆರೋಗ್ಯದ ಕಡೆ ವಿಶೇಷ ಜಾಗ್ರತೆ ವಹಿಸಬೇಕು. ಸಣ್ಣ ಕೈಗಾರಿಕೆ ಪ್ರಾರಂಭಿಸುವ ಚಿಂತನೆ ಇರುವವರಿಗೆ ಇದು ಉತ್ತಮ ಸಮಯ. ರಿಯಲ್ ಎಸ್ಟೇಟ್ ಉದ್ಯಮದಾರರು ಮತ್ತು ಕೈಗಾರಿಕಾ ಮಾಲೀಕರು ಹೆಚ್ಚಿನ ಆರ್ಥಿಕ ಲಾಭ ಪಡೆಯುವ ಸಾಧ್ಯತೆ ಇದೆ. ಹೊಸ ರೂಪರೇಷೆಗಳು/ಯೋಜನೆಗಳನ್ನು ರಚಿಸಲಾಗುವುದು. ಪ್ರೇಮಿಗಳ ಮದುವೆ ಕಾರ್ಯಕ್ಕೆ ಪರಿವಾರದಿಂದ ಬೆಂಬಲ ಸಿಗುತ್ತದೆ. ಹೊಸ ಉದ್ಯಮದ ಆದಾಯದ ಮೂಲಗಳನ್ನು ರಚಿಸಲಾಗುವುದು ಮತ್ತು ದೀರ್ಘಾವಧಿಯ ಕಾರ್ಯತಂತ್ರವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ಕೆಳದರ್ಜೆಯ ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಸಂಪೂರ್ಣ ಬೆಂಬಲ ಸಿಗುತ್ತದೆ; ನಿಮ್ಮ ಸ್ಥಾನ ಮತ್ತು ಘನತೆ ಹೆಚ್ಚಾಗಲಿದೆ. ನ್ಯಾಯಾಲಯದ ತೀರ್ಪುಗಳು ನಿಮ್ಮ ಪರವಾಗಿ ಗೋಚರಿಸುವ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಪ್ರಣಯದ ಸರಸ ಸಂಬಂಧಗಳು ಹೆಚ್ಚು ಗಾಢವಾಗುತ್ತವೆ. ವ್ಯಾಪಾರ ವಹಿವಾಟಿನಲ್ಲಿ ಕೆಲವೊಮ್ಮೆ ಗೊಂದಲಗಳು ಸಂಭವಿಸಬಹುದು, ಆದರೆ ಧನಾಗಮನದಲ್ಲಿ ಹೆಚ್ಚಿನ ತೊಂದರೆ ಎದುರಾಗುವ ಸಾಧ್ಯತೆ ಕಡಿಮೆ. ಉದ್ಯೋಗ ಬದಲಾವಣೆಯ ಯೋಚನೆ ಇರುವವರಿಗೆ ಇದು ಸೂಕ್ತ ಸಮಯ. ದೇಶ ಹಾಗೂ ವಿದೇಶದಲ್ಲಿ ನೆಲೆಸಿರುವ ಉದ್ಯೋಗಾಂಕ್ಷಿಗಳಿಗೆ ಉದ್ಯೋಗ ಭಾಗ್ಯ ಮತ್ತು ಹಣಕಾಸಿನಲ್ಲಿ ಸುಧಾರಣೆ ಕಾಣಲಿದೆ. ಆದರೆ ದಂಪತಿಗಳಿಗೆ ಹಣಕಾಸಿನ ಸಮಸ್ಯೆಗಳು ಕಂಡುಬರುತ್ತವೆ; ನವದಂಪತಿಗಳಿಗೆ ಸಂತಾನ ಸಮಸ್ಯೆಗಳ ಸಾಧ್ಯತೆ ಇದೆ. ಒಟ್ಟಿನಲ್ಲಿ, ಜಾಗ್ರತೆ, ಯೋಜನೆ ಮತ್ತು ಸಂಯಮದಿಂದ ನಡೆದುಕೊಂಡರೆ ಹಣಕಾಸು ಮತ್ತು ವೃತ್ತಿ ವಿಚಾರಗಳಲ್ಲಿ ಉತ್ತಮ ಫಲಿತಾಂಶ ಲಭಿಸುತ್ತದೆ.
ಕುಂಭ ರಾಶಿ ಭವಿಷ್ಯ : ಈ ಅವಧಿಯಲ್ಲಿ ನೀವು ಪ್ರಯತ್ನಿಸಿದ ಯೋಜನೆಗಳು ಕಾರ್ಯರೂಪಕ್ಕೆ ಬಂದು ಯಶಸ್ಸು ಕಾಣುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ಏರುಪೇರುಗಳು ಸಂಭವಿಸಬಹುದು; ಆದ್ದರಿಂದ ಹಣಕಾಸು ನಿರ್ವಹಣೆಯಲ್ಲಿ ಎಚ್ಚರಿಕೆ ವಹಿಸಬೇಕು. ಆಕಸ್ಮಿಕ ಕಹಿ ಸುದ್ದಿ ಕೇಳಬಹುದು, ಅದು ಪ್ರಯಾಣ ಅಥವಾ ಪಾರ್ಟ್ನರ್ ಸಂಬಂಧಿತ ವಿಚಾರಗಳಿಗೆ ಪರಿಣಾಮ ಬೀರುತ್ತದೆ. ದಂಪತಿಗಳಿಗೆ ಕೆಲವು ಅತೃಪ್ತಿ, ಗೊಂದಲ, ಮತ್ತು ಹತಾಶೆಯ ಪರಿಸ್ಥಿತಿಗಳು ಎದುರಾಗಬಹುದು. ದಾಂಪತ್ಯದಲ್ಲಿ ತೃಪ್ತಿ ಇದ್ದರೂ ಕೂಡ ಸಂಪೂರ್ಣ ಸಮಾಧಾನ ಕಾಣದೆ ಹೋದಂತೆ ಅನುಭವಿಸಬಹುದು. ಹಿತಶತ್ರುಗಳಿಂದ ವಿವಿಧ ರೀತಿಯ ಕಷ್ಟಗಳು ಎದುರಾಗಬಹುದು; ಅವರಿಂದ ಬಲಹೀನರಾಗದೆ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಪಾರ್ಟ್-ಟೈಮ್ ಕೆಲಸ ಅಥವಾ ಹೆಚ್ಚುವರಿ ವ್ಯವಹಾರಗಳಲ್ಲಿ ತೊಡಗಿಸುವುದು ಲಾಭದಾಯಕವಾಗಿದೆ. ನಿಮ್ಮ ಜನ್ಮ ನಕ್ಷತ್ರ ಮತ್ತು ರಾಶಿ ಅನುಸಾರವಾದ ಆದಾಯ ತರುವ ನಿರ್ದಿಷ್ಟ ಕೆಲಸಗಳಲ್ಲಿ ತೊಡಗಿಸಿಕೊಂಡರೆ ಉತ್ತಮ ಫಲಿತಾಂಶ ಸಿಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳಿಂದ ಸಕಾರಾತ್ಮಕ ಸ್ಪಂದನೆ ಪಡೆಯುವ ಸಾಧ್ಯತೆ ಇದೆ. ಪಾರ್ಟ್ನರ್ ಶಿಪ್ ವ್ಯವಹಾರದಲ್ಲಿ ಯಾರನ್ನೂ ಹೆಚ್ಚು ನಂಬದಂತಹ ಪರಿಸ್ಥಿತಿಗಳು ಎದುರಾಗಬಹುದು; ನಿಮ್ಮ ಉದ್ವೇಗದಿಂದ ಸಂಗಾತಿ ಅಥವಾ ಜೊತುದಾರರು ದೂರ ಹೋಗುವ ಸಾಧ್ಯತೆ ಇದೆ. ನೂತನ ರಾಜಕಾರಣಿಗಳ ಮೇಲೆ ನಿಮ್ಮ ವರ್ಚಸ್ಸು ಕೆಲವು ಸಂದರ್ಭಗಳಲ್ಲಿ ಹೆಚ್ಚಾಗಬಹುದು. ಆಗಾಗ ಹಣಕಾಸಿನಲ್ಲಿ ಅಡಚಣೆಗಳೂ ಎದುರಾಗಬಹುದು. ಅಪರಿಚಿತರೊಂದಿಗೆ ಸ್ನೇಹ ಮಾಡಬೇಡಿ; ನಿಮ್ಮ ಸುರಕ್ಷತೆ ಮತ್ತು ಹಣಕಾಸು ವಿಚಾರಗಳಲ್ಲಿ ಎಚ್ಚರಿಕೆ ಇರಲಿ. ಒಟ್ಟಿನಲ್ಲಿ, ಯೋಜನೆ, ಎಚ್ಚರಿಕೆ ಮತ್ತು ಧೈರ್ಯದಿಂದ ನಡೆದುಕೊಂಡರೆ ಈ ಸಮಯವನ್ನು ಯಶಸ್ವಿಯಾಗಿ ದಾಟಬಹುದು, ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಹೊಸ ಉದ್ಯೋಗ-ವ್ಯವಹಾರದಲ್ಲಿ ಸಾಧನೆ ಕಾಣಬಹುದು.
ಮೀನ ರಾಶಿ ಭವಿಷ್ಯ : ಈ ವಾರ ಮೀನ ರಾಶಿ ಗುರುವಿನ ಶನಿ ಸ್ಥಿತಿ ಅಶುಭಕರವಾಗಿದೆ. ಹೊಸ ಪ್ರಯತ್ನಗಳಲ್ಲಿ ಹೆಚ್ಚು ಮುಗ್ಗರಿಸಬೇಡಿ. ಷೇರು ಮತ್ತು ಹಣಕಾಸು ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭ ಇಲ್ಲದಿರುವ ಸಾಧ್ಯತೆ ಇದೆ. ದ್ವಾದಶ ಸ್ಥಾನದಲ್ಲಿ ರಾಹು ಇದ್ದು, ಮಂಗಳ ಸಂಬಂಧಿ ಕೆಲಸಗಳಲ್ಲಿ ವಿಳಂಬ ಸಂಭವಿಸಬಹುದು. ಮನರಂಜನೆ, ಪ್ರವಾಸ ಅಥವಾ ಮೋಜಿನ ಹವ್ಯಾಸಗಳಿಂದ ಹಣಹಾನಿ ಸಂಭವಿಸಬಹುದು. ಆದರೆ, ಹಿಂದಿರುಗಿ ಸಿಗುವ ಹಣ ದುಃಖದ ಸಂದರ್ಭಗಳಲ್ಲಿ ಸಹಾಯವಾಗಲಿದೆ. ಪ್ರೀತಿಯ ಜೀವನದಲ್ಲಿ ಸ್ವಲ್ಪ ಕಹಿಘಟನೆಗಳು ಸಂಭವಿಸಬಹುದು; ಈ ವೇಳೆ ಕ್ಷಮಾಶೀಲತೆ ಮತ್ತು ಅರ್ಥಮಾಡಿಕೊಳ್ಳುವ ಮನೋಭಾವ ಮುಖ್ಯ. ಮಹತ್ವಪೂರ್ಣ ದಾಖಲೆಗಳಿಗೆ ಸಹಿ ಮಾಡುವಾಗ ಜಾಗರೂಕತೆಯಿರಲಿ. ಪಾಲುದಾರಿಕೆ ವ್ಯವಹಾರಗಳಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಮುನಿಸಿಕೊಂಡಿರುವ ಪತ್ನಿ ನಿಮ್ಮೊಂದಿಗೆ ಸಂಬಂಧವನ್ನು ಪುನಃ ಗಾಢಗೊಳಿಸಬಹುದಾಗಿದೆ. ಕೌಶಲ್ಯ ಪ್ರದರ್ಶನಕ್ಕೆ ಅವಕಾಶಗಳು ಲಭಿಸಲಿದೆ. ಸರ್ಕಾರಿ ದ್ರವ ವ್ಯಾಪಾರಿಗಳು ಮತ್ತು ಮೀನುಗಾರರಿಗೆ ವಿಶೇಷ ಆರ್ಥಿಕ ಚೇತರಿಕೆ ಸಿಗಲಿದೆ. ಸೋದರರೊಂದಿಗೆ ಸ್ವಲ್ಪ ತಕರಾರು ಸಂಭವಿಸಬಹುದು. ಜಿಲ್ಲಾಧಿಕಾರಿಗಳ ಹತ್ತಿರ ಮಾತನಾಡುವಾಗ ಎಚ್ಚರಿಕೆ ಕಾಪಾಡಿ. ಕಾನೂನಿಗೆ ತಕ್ಕಂತೆ ತೀರ್ಪು ಸ್ವೀಕರಿಸುವುದೇ ಸೂಕ್ತ. ಸೋಮಾರಿತನ, ಜಿಗುಪ್ಸೆ ನಿಮ್ಮ ಉನ್ನತಿಗೆ ಅಡ್ಡಿಯಾಗಬಹುದು. ದಾಯಾದಿಗಳ ಆಸ್ತಿ ಖರೀದಿಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಿ. ಹಲವು ವರ್ಷಗಳಿಂದ ಕಾಡುತ್ತಿದ್ದ ಅನಾರೋಗ್ಯದಿಂದ today ಮುಕ್ತಿ ಸಿಗಲಿದೆ. ನರದೌರ್ಬಲ್ಯ ಸಮಸ್ಯೆ ಎದುರಾಗಬಹುದು. ಕೆಲವೊಮ್ಮೆ ಎಷ್ಟೇ ಪ್ರಯತ್ನ ಮಾಡಿದರೂ ಫಲ ಕಾಣದ ಅನುಭವ ಸಾಧ್ಯ. ಹೆಂಡತಿಯೊಂದಿಗೆ ಸಣ್ಣ ವಿವಾದಗಳು ಸಂಭವಿಸಬಹುದು. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಹೋಟೆಲ್ ಉದ್ಯಮದಲ್ಲಿ ನಷ್ಟ ಸಾಧ್ಯ, ಭೂಮಿ ಖರೀದಿಯಲ್ಲಿ ಮೋಸ ಸಂಭವಿಸಬಹುದು. ಕಲಾವಿದರಿಗೆ ಜನಮನ್ನಣೆ ಸಿಗಲಿದೆ, ಬೇಡಿಕೆ ಹೆಚ್ಚಾಗಲಿದೆ. ಮಹಿಳಾ ಉದ್ಯೋಗಿಗಳಿಗೆ ಕಚೇರಿಯಲ್ಲಿ ಸ್ವಲ್ಪ ಕಿರಿಕಿರಿ ಸಂಭವಿಸಬಹುದು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಫೆಬ್ರವರಿ 23, 2026, ಸೋಮವಾರದ ರಾಶಿ ಭವಿಷ್ಯ
ಮೇಷ ರಾಶಿ ಭವಿಷ್ಯ: ವ್ಯಾಪಾರದಲ್ಲಿ ದ್ವಿಗುಣ ಲಾಭ, ವಿದೇಶ ಯೋಗ, ಪ್ರೀತಿಯ ಕನ... ಓದನ್ನು ಮುಂದುವರಿಸಿ
ಭಾನುವಾರ ರಾಶಿ ಭವಿಷ್ಯ ಭಾನುವಾರ ಫೆಬ್ರವರಿ 1, 2026,
ಮೇಷ ರಾಶಿ ಭವಿಷ್ಯ: ಶ್ರಮಕ್ಕೆ ಫಲ – ಹೊಸ ಆರಂಭಗಳ ಸೂಚನೆ
ಮ... ಓದನ್ನು ಮುಂದುವರಿಸಿ
ಶನಿವಾರದ ರಾಶಿ ಭವಿಷ್ಯ,-ಫೆಬ್ರವರಿ 21, 2026
ಮೇಷ ರಾಶಿ ಭವಿಷ್ಯ: ಸಾಡೇ ಸಾತಿಯ ಪ್ರಭಾವದಲ್ಲಿ ಎಚ್ಚರಿಕೆ ಅಗತ್ಯ... ಓದನ್ನು ಮುಂದುವರಿಸಿ
ಫೆಬ್ರವರಿ 20, 2026 – ಶುಕ್ರವಾರದ ರಾಶಿ ಭವಿಷ್ಯ
ಮೇಷ ರಾಶಿ ದಿನಭವಿಷ್ಯ : ಇಂದು ಮೇಷ ರಾಶಿಯವರಿಗೆ ಶುಭಫಲಗಳು ಹಾಗೂ... ಓದನ್ನು ಮುಂದುವರಿಸಿ
ಫೆಬ್ರವರಿ 19, 2026, ಗುರುವಾರದ ರಾಶಿ ಭವಿಷ್ಯ
ಮೇಷ ರಾಶಿ: ಮದುವೆ ವಿಚಾರದಲ್ಲಿ ಅಡಚಣೆ – ವ್ಯಾಪಾರದಲ್ಲಿ ಭರ್ಜರಿ... ಓದನ್ನು ಮುಂದುವರಿಸಿ
ಫೆಬ್ರವರಿ 18, 2026 - ಬುಧವಾರದ ರಾಶಿ ಭವಿಷ್ಯ
ಮೇಷ ರಾಶಿ : ದಾಂಪತ್ಯದಲ್ಲಿ ಸಣ್ಣ ಕಲಹ, ವಿದೇಶ ಯೋಗದಿಂದ ಲಾಭದ ಸೂ... ಓದನ್ನು ಮುಂದುವರಿಸಿ
ಫೆಬ್ರವರಿ 17, 2026 - ಮಂಗಳವಾರದ ರಾಶಿ ಭವಿಷ್ಯ
ಮೇಷ ರಾಶಿ : ವಿದೇಶ ಪ್ರಯಾಣ ಯೋಗ, ಆಸ್ತಿ ಖರೀದಿ ಸಾಧ್ಯತೆ ಈ ಅವಧಿ... ಓದನ್ನು ಮುಂದುವರಿಸಿ
ಫೆಬ್ರವರಿ 16, 2026, ಸೋಮವಾರದ ರಾಶಿ ಭವಿಷ್ಯ
ಮೇಷ: ನಿಮ್ಮ ತಾಳ್ಮೆ ಮತ್ತು ಶ್ರಮ ಫಲ ನೀಡಲಿದೆ. ಆರ್ಥಿಕ ಪ್ರಗತಿಯ... ಓದನ್ನು ಮುಂದುವರಿಸಿ
ಫೆಬ್ರವರಿ 13, 2026 – ಶುಕ್ರವಾರದ ರಾಶಿ ಭವಿಷ್ಯ
♈ಮೇಷ: ಕಛೇರಿಯಲ್ಲಿ ಉಂಟಾದ ಕೆಲವು ಗೊಂದಲಗಳು ನಿಮ್ಮ ಮನಸ್ಸನ್ನು... ಓದನ್ನು ಮುಂದುವರಿಸಿ
ಫೆಬ್ರವರಿ 12, 2026, ಗುರುವಾರದ ರಾಶಿ ಭವಿಷ್ಯ
ಮೇಷ ರಾಶಿ : ಜನರಿಗೆ ಶುಭ ವರ್ತನೆಗಳು – ಹಣ, ಪ್ರೀತಿ ಮತ್ತು ಆರೋಗ... ಓದನ್ನು ಮುಂದುವರಿಸಿ