ಭಾನುವಾರ ರಾಶಿ ಭವಿಷ್ಯ ಭಾನುವಾರ ಫೆಬ್ರವರಿ 1, 2026,
ಮೇಷ ರಾಶಿ ಭವಿಷ್ಯ: ಶ್ರಮಕ್ಕೆ ಫಲ – ಹೊಸ ಆರಂಭಗಳ ಸೂಚನೆ
ಮೇಷ ರಾಶಿಯವರಿಗಾಗಿ ಈ ಅವಧಿ ಹೊಸ ಅವಕಾಶಗಳು ಮತ್ತು ಸಾಧನೆಗಳ ಸಂಕೇತವಾಗಿ ಕಾಣಿಸುತ್ತಿದೆ. ಪ್ರೇಮ ಸಂಬಂಧದಲ್ಲಿ ಇರುವವರು ಸ್ವತಂತ್ರ ಮನೋಭಾವದಿಂದ ಹೊರಬಂದು ಮದುವೆ ವಿಷಯದಲ್ಲಿ ಆತ್ಮೀಯರ ಸಲಹೆ ಪಡೆಯುವುದು ಒಳಿತು. ಕುಟುಂಬದ ಆಶೀರ್ವಾದದೊಂದಿಗೆ ಮುಂದಿನ ಹೆಜ್ಜೆ ಇಡುವ ಸಾಧ್ಯತೆ ಇದೆ. ಭೂ ಸಂಬಂಧಿತ ವ್ಯವಹಾರಗಳಲ್ಲಿ ಉತ್ತಮ ಆದಾಯ ದೊರೆಯುವ ಸೂಚನೆಗಳಿವೆ. ಉದ್ಯೋಗದ ನಿಮಿತ್ತ ಹೆಚ್ಚು ಪ್ರವಾಸ ಮಾಡಬೇಕಾಗಬಹುದು; ಇದರಿಂದ ಆರೋಗ್ಯದ ಕಡೆ ವಿಶೇಷ ಗಮನ ಹರಿಸುವುದು ಅಗತ್ಯ. ಒಂದು ಸಂಸ್ಥೆಯಲ್ಲಿ ಜವಾಬ್ದಾರಿಯುತ ಮುಂದಾಳತ್ವ ವಹಿಸುವ ಅವಕಾಶ ಸಿಗಬಹುದು. ಮನೆ ಕಟ್ಟುವ ಕಾರ್ಯಕ್ಕೆ ಚಾಲನೆ ಸಿಗುವ ಸಾಧ್ಯತೆ ಇದೆ. ಮಕ್ಕಳ ಮದುವೆ ಯೋಗವೂ ಎದುರಾಗಬಹುದು. ಸಾಲದಿಂದ ಮುಕ್ತಿ ದೊರೆಯುವ ಜೊತೆಗೆ ಹೊಸ ವಾಹನ ಖರೀದಿ ಯೋಗವೂ ಕಾಣಿಸುತ್ತಿದೆ. ತಮಗೆ ಬರಬೇಕಾದ ಬಾಕಿ ಹಣ ಕೈ ಸೇರಲಿದೆ. ಈ ಹಿಂದೆ ಪಟ್ಟಿದ್ದ ಶ್ರಮಕ್ಕೆ ಈಗ ಸಮರ್ಪಕ ಪ್ರತಿಫಲ ದೊರೆಯಲಿದೆ. bವ್ಯಾಪಾರ–ವ್ಯವಹಾರದಲ್ಲಿ ತೊಡಗಿರುವವರಿಗೆ ಹೊಸ ಆದಾಯ ಮೂಲಗಳು ಗೋಚರಿಸಲಿವೆ. ಹೊಸ ಉದ್ಯಮ ಆರಂಭಿಸುವ ಚಿಂತನೆಯೂ ಮೂಡಬಹುದು. ನವಯುವಕರು ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು ಸಾಮಾಜಿಕ ಗೌರವ ಮತ್ತು ಸಮ್ಮಾನವನ್ನು ಪಡೆಯುವ ಸಾಧ್ಯತೆ ಇದೆ. ವಿದೇಶ ಪ್ರವಾಸದ ಕನಸು ನನಸಾಗುವ ಲಕ್ಷಣಗಳಿವೆ. ಆದರೆ ಉದ್ಯೋಗ ಬದಲಾವಣೆಗೆ ಇದು ಸೂಕ್ತ ಸಮಯವಲ್ಲ. ಸರಕಾರಿ ನೌಕರಿ ಬಯಸುವವರು ಹೆಚ್ಚಿನ ಶ್ರಮವಹಿಸಬೇಕು. ಶಿಕ್ಷಕರ ಮಕ್ಕಳಿಗೆ ಕಂಕಣಬಲದ ಭಾಗ್ಯ ದೊರೆಯುವ ಯೋಗವಿದೆ. ಒಟ್ಟಿನಲ್ಲಿ, ಮೇಷ ರಾಶಿಯವರಿಗೆ ಇದು ಪ್ರಗತಿ ಮತ್ತು ಸಾಧನೆಯ ಕಾಲ.
ವೃಷಭ ರಾಶಿ ಭವಿಷ್ಯ: ಉದ್ಯೋಗ ಭಾಗ್ಯ ಮತ್ತು ಆರ್ಥಿಕ ಲಾಭದ ಸೂಚನೆ
ವೃಷಭ ರಾಶಿಯವರಿಗೆ ಈ ಅವಧಿ ಉತ್ತಮ ಫಲಿತಾಂಶಗಳನ್ನು ತರುತ್ತದೆ. ಮಾಹಿತಿ ತಂತ್ರಜ್ಞಾನ ಪದವಿ ಪಡೆದವರಿಗೆ ಉದ್ಯೋಗ ಭಾಗ್ಯ ದೊರೆಯುವ ಸಾಧ್ಯತೆ ಇದೆ. ಈಗಾಗಲೇ ಕೆಲಸದಲ್ಲಿರುವವರಿಗೆ ಆದಾಯದಲ್ಲಿ ಏರಿಕೆ ಕಂಡುಬರಲಿದೆ. ಆದರೆ ಹಣಕಾಸಿನ ವ್ಯವಹಾರಿಕ ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಮೊದಲು ಯೋಚನೆ ಮಾಡುವುದು ಒಳಿತು. ಮನೆಯಲ್ಲಿ ತಯಾರಿಸಿದ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಹಾಗೂ ಲಾಭ ಸಿಗಲಿದೆ. ನೂತನ ಬಟ್ಟೆ ಮಳಿಗೆ ಆರಂಭಿಸುವ ಚಿಂತನೆಗಳು ಮೂಡಬಹುದು. ಚಿನ್ನದ ವ್ಯಾಪಾರಸ್ಥರಿಗೆ ಭಾರೀ ಲಾಭದ ಸಾಧ್ಯತೆ ಇದೆ. ಉದ್ಯೋಗದಲ್ಲಿ ವರ್ಗಾವಣೆ ಅಥವಾ ವೇತನ ಹೆಚ್ಚಳವಾಗುವ ಸಾಧ್ಯತೆಗಳು ಗೋಚರಿಸುತ್ತಿವೆ. ಸುಸಜ್ಜಿತ ಮನೆ ಖರೀದಿಸುವ ಯೋಗವೂ ಇದೆ. ಆಕಸ್ಮಿಕ ಧನಪ್ರಾಪ್ತಿಯ ಸಾಧ್ಯತೆ ಕಾಣಿಸುತ್ತದೆ. ಅರ್ಧಕ್ಕೆ ನಿಂತಿದ್ದ ಕಟ್ಟಡ ಕಾಮಗಾರಿಗಳನ್ನು ಪುನರಾರಂಭ ಮಾಡಬೇಕಾಗಬಹುದು. ಸಂಗಾತಿಯ ಸಹಕಾರದಿಂದ ದೂರ ಪ್ರಯಾಣದ ಯೋಜನೆ ರೂಪಿಸಬಹುದು. ಬಂಧುಗಳ ಆಗಮನದಿಂದ ಮನೆಯಲ್ಲಿ ಸ್ವಲ್ಪ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ. ಮನರಂಜನೆಗಾಗಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಖರೀದಿಸುವಿರಿ. ಮಗಳ ಸಂಸಾರದ ವಿಚಾರವಾಗಿ ಹೆಚ್ಚು ಚಿಂತನೆ ಮಾಡುವ ಸಂದರ್ಭ ಎದುರಾಗಬಹುದು. ಒಟ್ಟಾರೆ, ವೃಷಭ ರಾಶಿಯವರಿಗೆ ಈ ಅವಧಿ ಆರ್ಥಿಕ ಪ್ರಗತಿ ಮತ್ತು ಕುಟುಂಬ ಸಂಬಂಧಿತ ವಿಚಾರಗಳಲ್ಲಿ ಎಚ್ಚರಿಕೆಯ ಅವಧಿಯಾಗಿದೆ.
ಮಿಥುನ ರಾಶಿ ಭವಿಷ್ಯ: ಜವಾಬ್ದಾರಿ ಹೆಚ್ಚಳ – ಆದಾಯದಲ್ಲಿ ಚೇತರಿಕೆ
ಮಿಥುನ ರಾಶಿಯವರಿಗೆ ಕೆಲಸದಲ್ಲಿ ಹೆಚ್ಚು ಒತ್ತಡ ಕಂಡುಬಂದರೂ ಕುಟುಂಬಕ್ಕೆ ಸಮಯ ನೀಡುವುದು ಅಗತ್ಯ. ಮನೆಯ ಸಣ್ಣ ವಿಷಯಗಳನ್ನು ತಾತ್ಸಾರ ಮಾಡದೇ ಗಮನವಹಿಸುವುದು ಉತ್ತಮ. ಉದ್ಯೋಗದ ನಿಮಿತ್ತ ದೂರದ ಪ್ರವಾಸ ಸಾಧ್ಯತೆ ಇದೆ. ನಿರಂತರ ಕೆಲಸದಿಂದಾಗಿ ವಿಶ್ರಾಂತಿಯ ಅವಶ್ಯಕತೆ ಅನಿಸಬಹುದು; ಸಂಗಾತಿಯೊಂದಿಗೆ ಕಿರು ಪ್ರವಾಸ ಕೈಗೊಳ್ಳುವ ಸಾಧ್ಯತೆಯೂ ಇದೆ. ವಾಣಿಜ್ಯ ಮಳಿಗೆ ಖರೀದಿ ಮಾಡುವ ಯೋಗ ಇದೆ. ಕೃಷಿ ಭೂಮಿಯಲ್ಲಿ ವಾಣಿಜ್ಯ ಬೆಳೆ ಬೆಳೆಸುವ ಚಿಂತನೆ ಮೂಡಬಹುದು. ಹೈನುಗಾರಿಕೆಯಲ್ಲಿ ಆರ್ಥಿಕ ಚೇತರಿಕೆ ಕಾಣಿಸಿಕೊಳ್ಳಲಿದೆ. ಕುಕ್ಕುಟ ಉದ್ಯಮ ಅಥವಾ ಸಿದ್ಧ ಉಡುಪು ಅಂಗಡಿ ಆರಂಭಿಸುವ ಯೋಚನೆ ರೂಪುಗೊಳ್ಳಬಹುದು. ಸಂಗಾತಿಯೊಂದಿಗೆ ಸಂಬಂಧ ಸೌಹಾರ್ದಯುತವಾಗಿರುತ್ತದೆ. ಆದರೆ ಸರಸ ಸಲ್ಲಾಪದ ವೇಳೆ ಭಿನ್ನಾಭಿಪ್ರಾಯ ಮೂಡದಂತೆ ಎಚ್ಚರಿಕೆಯಿಂದ ವರ್ತಿಸುವುದು ಒಳಿತು. ಮೂಲ ಕಸುಬುದಾರರು ಹಾಗೂ ವ್ಯಾಪಾರ-ವ್ಯವಹಾರ ನಡೆಸುವವರಿಗೆ ಲಾಭದ ಪ್ರಮಾಣದಲ್ಲಿ ಏರಿಕೆ ಕಂಡುಬರಲಿದೆ. “ಕಾಯಕವೇ ಕೈಲಾಸ” ಎಂಬ ನಂಬಿಕೆಯೊಂದಿಗೆ ಸಾಗುತ್ತಿರುವ ನಿಮಗೆ ಹೊಸ ಜವಾಬ್ದಾರಿ ಹೆಗಲೇರಬಹುದು. ಕೆಲಸದ ಒತ್ತಡ ಸ್ವಲ್ಪ ಮಟ್ಟಿಗೆ ಹೆಚ್ಚಾಗುವ ಸಾಧ್ಯತೆ ಇದೆ. ಹಣದ ಒಳಹರಿವು ಉತ್ತಮವಾಗಿರುತ್ತದೆ. ಸಹೋದ್ಯೋಗಿಗಳೊಂದಿಗೆ ವಾಗ್ವಾದ ಸಂಭವಿಸಬಹುದು, ಆದ್ದರಿಂದ ಮಾತಿನ ಮೇಲೆ ಹಿಡಿತ ಇರಲಿ. ಮದುವೆ ವಿಚಾರದಲ್ಲಿ ಸ್ವಲ್ಪ ವಿಳಂಬ ಎದುರಾಗುವ ಸಾಧ್ಯತೆ ಇದೆ. ಒಟ್ಟಾರೆ, ಮಿಥುನ ರಾಶಿಯವರಿಗೆ ಇದು ಶ್ರಮ ಮತ್ತು ಸಾಧನೆಯ ಅವಧಿ; ಸಮತೋಲನ ಕಾಪಾಡಿದರೆ ಉತ್ತಮ ಫಲ ಸಿಗಲಿದೆ.
ಕರ್ಕಾಟಕ ರಾಶಿ ಭವಿಷ್ಯ: ಎಚ್ಚರಿಕೆ ಮತ್ತು ಆತ್ಮಪರಿಶೀಲನೆಯ ಅವಧಿ
ಕರ್ಕಾಟಕ ರಾಶಿಯವರಿಗೆ ಈ ಅವಧಿಯಲ್ಲಿ ಕೆಲವು ಅನಿರೀಕ್ಷಿತ ಬದಲಾವಣೆಗಳು ಸಂಭವಿಸುವ ಸಾಧ್ಯತೆ ಇದೆ. ಪ್ರೇಮ ಸಂಬಂಧಗಳಲ್ಲಿ ಅಸ್ಥಿರತೆ ಕಂಡುಬರಬಹುದು; ಮನಸ್ಸು ಚಂಚಲವಾಗಿರುವುದರಿಂದ ಮಹತ್ವದ ನಿರ್ಧಾರಗಳನ್ನು ತಾಳ್ಮೆಯಿಂದ ತೆಗೆದುಕೊಳ್ಳುವುದು ಒಳಿತು. ಸರಕು ಸಾರಿಗೆ ವ್ಯವಹಾರ ನಡೆಸುವವರಿಗೆ ಅಡ್ಡಿ-ಆತಂಕಗಳು ಎದುರಾಗಬಹುದು ಹಾಗೂ ಆರ್ಥಿಕ ನಷ್ಟ ಸಂಭವಿಸುವ ಸಾಧ್ಯತೆ ಇದೆ. ಪಾಲುದಾರಿಕೆ ವ್ಯವಹಾರಗಳಲ್ಲಿ ವಿಶೇಷ ಎಚ್ಚರಿಕೆ ಅಗತ್ಯ. ಹಣದ ವಿಚಾರದಲ್ಲಿ ಮನಸ್ತಾಪಗಳು ಮುಂದುವರಿಯಬಹುದು. “ಲಕ್ಷ್ಮಿ ತಾಂಡವ” ಇದ್ದರೂ ಕೈಯಲ್ಲಿ ಹಣ ಉಳಿಯದ ಪರಿಸ್ಥಿತಿ ಕಾಣಿಸಬಹುದು. ವಾಹನ ಖರೀದಿ ಯೋಗವಿದೆ. ಮದುವೆಯ ಅಡೆತಡೆಗಳು ನಿವಾರಣೆಯಾಗುವ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಪುನರ್ಮಿಲನ ಸಂತೋಷವನ್ನು ತರಬಹುದು. ಹಳೆಯ ಸಾಲಗಳ ವಸೂಲಾತಿ ಸಾಧ್ಯತೆ ಇದೆ. ನಿಮಗೆ ಸಂಬಂಧಿಸದ ವಿಷಯಗಳಿಂದ ಅಪವಾದ ಎದುರಾಗುವ ಸಂಭವವಿದೆ. ಕುಟುಂಬದ ಸಂಬಂಧಿಗಳ ಚುಚ್ಚು ಮಾತುಗಳು ಮನಸ್ಸಿಗೆ ಬೇಸರ ಉಂಟುಮಾಡಬಹುದು. ದೂರ ಪ್ರಯಾಣವನ್ನು ಸಾಧ್ಯವಾದಷ್ಟು ತಪ್ಪಿಸುವುದು ಉತ್ತಮ. ವಿದೇಶ ಪ್ರವಾಸದ ಕುರಿತು ನಿರ್ಧಾರ ಕೈಗೊಳ್ಳುವ ಮೊದಲು ಫಲಿತಾಂಶದ ಬಗ್ಗೆ ಸಮಗ್ರವಾಗಿ ಚಿಂತನೆ ಮಾಡಿ. ಆಮಿಷಗಳಿಗೆ ಒಳಗಾಗದಂತೆ ಜಾಗ್ರತೆ ವಹಿಸಬೇಕು. ತಾವು ನೆಲೆಸಿರುವ ಊರಿನಲ್ಲೇ ಹೊಸ ಉದ್ಯಮ ಆರಂಭಿಸುವ ಯೋಚನೆ ಯಶಸ್ವಿಯಾಗುವ ಸಾಧ್ಯತೆ ಇದೆ. “ಮದುವೆ ವಿಳಂಬ ಏಕೆ?” ಎಂಬ ಪ್ರಶ್ನೆ ಕಾಡಬಹುದು, ಆದರೆ ತಾಳ್ಮೆಯಿಂದ ನಡೆದುಕೊಂಡರೆ ಸೂಕ್ತ ಸಮಯದಲ್ಲಿ ಶುಭವಾರ್ತೆ ದೊರೆಯಲಿದೆ. ಒಟ್ಟಾರೆ, ಕರ್ಕಾಟಕ ರಾಶಿಯವರಿಗೆ ಇದು ಎಚ್ಚರಿಕೆ, ಆತ್ಮಪರಿಶೀಲನೆ ಮತ್ತು ಸಮತೋಲನ ಕಾಪಾಡಬೇಕಾದ ಕಾಲ.
ಸಿಂಹ ರಾಶಿ ಭವಿಷ್ಯ: ತಾಳ್ಮೆ ಮತ್ತು ಜಾಗ್ರತೆ ಅಗತ್ಯ
ಸಿಂಹ ರಾಶಿಯವರಿಗೆ ಈ ಅವಧಿ ಸವಾಲುಗಳಿಂದ ಕೂಡಿರಬಹುದು. ನಿಮ್ಮ ಮೃದು ಧೋರಣೆ ಮತ್ತು ನಡವಳಿಕೆಯಿಂದ ವ್ಯಾಪಾರದಲ್ಲಿ ನಷ್ಟ ಸಂಭವಿಸುವ ಸಾಧ್ಯತೆ ಇದೆ; ಆದ್ದರಿಂದ ವ್ಯವಹಾರ ನಿರ್ಧಾರಗಳಲ್ಲಿ ಕಟ್ಟುನಿಟ್ಟಿನ ಕ್ರಮ ಅಗತ್ಯ. ಪ್ರೇಮ ಸಂಬಂಧದಲ್ಲಿರುವವರು ಅವಸರದ ಹೆಜ್ಜೆ ಇಡುವುದನ್ನು ತಪ್ಪಿಸಬೇಕು. ಹೋಟೆಲ್ ಉದ್ಯಮದಾರರು ಮುಂದಿನ ಯೋಜನೆಗಳ ಕುರಿತು ಅನುಭವಿಗಳ ಮಾರ್ಗದರ್ಶನ ಪಡೆಯುವುದು ಒಳಿತು. ತೈಲ ಉತ್ಪಾದನೆ ಕ್ಷೇತ್ರದಲ್ಲಿ ಇರುವವರಿಗೆ ಆರ್ಥಿಕ ಚೇತರಿಕೆ ಕಂಡುಬರುವ ಸಾಧ್ಯತೆ ಇದೆ. ಸಾಲ ಮರುಪಾವತಿಯಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ನಿವೇಶನ ಖರೀದಿ ಯೋಗವಿದ್ದು, ಹೊಸ ಉದ್ಯಮ ಆರಂಭಿಸುವ ಚಿಂತನೆ ಮೂಡಬಹುದು. ದಂಪತಿಗಳಿಗೆ ಸಂತಾನ ವಿಚಾರವಾಗಿ ಚಿಂತನೆ ಹೆಚ್ಚಾಗಬಹುದು. ಈ ಸಂದರ್ಭದಲ್ಲಿ ವೈದ್ಯಕೀಯ ಸಲಹೆ ಹಾಗೂ ಮಾನಸಿಕ ಶಾಂತಿ ಅಗತ್ಯ. ಮಾತಾಪಿತರ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವುದು ಅವಶ್ಯಕ. ನಿಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವ ಸಂದರ್ಭ ಎದುರಾಗಬಹುದು; ಮಧ್ಯಸ್ಥರ ಕುತಂತ್ರದಿಂದ ಅಸಮಾಧಾನ ಉಂಟಾಗುವ ಸಾಧ್ಯತೆ ಇದೆ. ದುಡುಕಿನಿಂದ ಕೈಗೊಂಡ ನಿರ್ಧಾರಗಳು ಸಾಲದ ಹೊಣೆಗಾರಿಕೆಯನ್ನು ಹೆಚ್ಚಿಸಬಹುದು. ಸರ್ಕಾರಿ ಉದ್ಯೋಗಕ್ಕಾಗಿ ಇತರರ ಸಹಾಯ ನಿರೀಕ್ಷಿಸುವುದು ಫಲಪ್ರದವಾಗದಿರಬಹುದು. ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೆ ಸ್ವಂತ ಶ್ರಮದ ಮೇಲೆ ಭರವಸೆ ಇಡುವುದು ಒಳಿತು. bಆರ್ಥಿಕ ಪರಿಸ್ಥಿತಿ ಸ್ವಲ್ಪ ಅಸ್ಥಿರವಾಗಿರಬಹುದು. ನಿಮ್ಮ ಯೋಚನೆಗಳು ಸರಿಯಾಗಿದ್ದರೂ ತಕ್ಷಣ ಮಾನ್ಯತೆ ದೊರೆಯದಿರಬಹುದು. ಪರಿಸ್ಥಿತಿಯನ್ನು ಸಮತೋಲನದಿಂದ ಸ್ವೀಕರಿಸಿ ಗುರಿ ಸಾಧನೆಗಾಗಿ ಹೋರಾಡಬೇಕು. ಹಣಕಾಸಿನ ಸಮಸ್ಯೆಗಳು ಹಾಗೂ ಮದುವೆ ವಿಳಂಬದ ಬಗ್ಗೆ ಚಿಂತೆ ಕಾಡಿದರೂ, ತಾಳ್ಮೆ ಮತ್ತು ಶ್ರದ್ಧೆಯಿಂದ ಮುಂದುವರಿದರೆ ಶೀಘ್ರದಲ್ಲೇ ಸುಧಾರಣೆ ಕಾಣಬಹುದು. ಒಟ್ಟಾರೆ, ಸಿಂಹ ರಾಶಿಯವರಿಗೆ ಇದು ಆತ್ಮನಿಗ್ರಹ ಮತ್ತು ಶ್ರಮದ ಮೂಲಕ ಮುನ್ನಡೆಯುವ ಕಾಲ.
ಕನ್ಯಾ ರಾಶಿ ಭವಿಷ್ಯ: ಲಾಭದ ಸೂಚನೆ – ಎಚ್ಚರಿಕೆಯ ಅಗತ್ಯ
ಕನ್ಯಾ ರಾಶಿಯವರಿಗೆ ಈ ಅವಧಿ ಮಿಶ್ರ ಫಲಿತಾಂಶಗಳನ್ನು ತರುತ್ತದೆ. ನೀರು ಸರಬರಾಜು ಉದ್ಯಮದಲ್ಲಿರುವವರಿಗೆ ಉತ್ತಮ ಆರ್ಥಿಕ ಲಾಭ ದೊರೆಯುವ ಸಾಧ್ಯತೆ ಇದೆ. ಹಳೆಯ ಮನೆಯನ್ನು ವಾಸ್ತು ಪ್ರಕಾರ ಪರಿಷ್ಕರಿಸುವ ಯೋಚನೆ ಕೈಗೆತ್ತಿಕೊಳ್ಳಬಹುದು. ಹೆಣ್ಣು ಮಕ್ಕಳಿಗೆ ಕಂಕಣಬಲದ ಭಾಗ್ಯ ಕಾಣುತ್ತದೆ. ಉದ್ಯೋಗ ಹುಡುಕುತ್ತಿರುವವರಿಗೆ ಅವಕಾಶಗಳು ಲಭ್ಯವಾಗುವ ಸೂಚನೆ ಇದೆ. ಸ್ವಂತ ದುಡಿಮೆಯಿಂದ ವಾಹನ ಖರೀದಿಸುವ ಯೋಗವಿದೆ. ಕೃಷಿ ಉತ್ಪನ್ನಗಳ ವ್ಯವಹಾರದಲ್ಲಿ ಬೆಳವಣಿಗೆ ಕಂಡುಬರಲಿದೆ. ಹಣಕಾಸಿನ ವ್ಯವಹಾರಗಳು ಸುಗಮವಾಗುವ ಸಾಧ್ಯತೆ ಇದೆ. ಸರ್ಕಾರದ ಕೆಲಸ-ಕಾರ್ಯಗಳಿಗೆ ಸಂಬಂಧಿಸಿದ ಹೋರಾಟ ಮುಂದುವರಿಯಬಹುದು; ತಾಳ್ಮೆ ಮತ್ತು ನಿಯಮ ಪಾಲನೆ ಅಗತ್ಯ. ನಿಮ್ಮ ಸಹನೆ ಮತ್ತು ಸರಳತೆಯನ್ನು ಕೆಲವರು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ. ವಿರೋಧಿಗಳು ಒಳಸಂಚು ನಡೆಸುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ನಡೆಯಬೇಕು. ಮಿತಿ ಹಾಕಿಕೊಳ್ಳದಿದ್ದರೆ ನಿಮ್ಮನ್ನು ಬಳಸಿಕೊಳ್ಳುವ ಸಂದರ್ಭ ಎದುರಾಗಬಹುದು. ತಮಗೆ ಬಾಕಿ ಇರುವ ಹಣವನ್ನು ವಾಪಸು ಪಡೆಯಲು ಹರಸಾಹಸ ಪಡಬೇಕಾಗಬಹುದು. ಸಾಲಗಾರರೊಂದಿಗೆ ವೈಷಮ್ಯ ಉಂಟಾಗುವ ಸಾಧ್ಯತೆ ಇದೆ. ಮಾತಿನ ಮೇಲೆ ಹಿಡಿತ ಮತ್ತು ಕಾನೂನುಬದ್ಧ ಕ್ರಮಗಳು ಉತ್ತಮ ಫಲ ನೀಡಬಹುದು. ಒಟ್ಟಾರೆ, ಕನ್ಯಾ ರಾಶಿಯವರಿಗೆ ಇದು ಶ್ರಮದಿಂದ ಸಾಧನೆ ಮಾಡುವ ಕಾಲ; ಜಾಣ್ಮೆಯಿಂದ ನಡೆದುಕೊಂಡರೆ ಲಾಭ ಮತ್ತು ಸ್ಥಿರತೆ ಸಿಗಲಿದೆ.
ತುಲಾ ರಾಶಿ ಭವಿಷ್ಯ: ಲಾಭ ಮತ್ತು ಜಾಗ್ರತೆ ಎರಡೂ ಅಗತ್ಯ
ತುಲಾ ರಾಶಿಯವರಿಗೆ ಉದ್ಯೋಗ ಬದಲಾವಣೆ ವಿಚಾರದಲ್ಲಿ ಗೊಂದಲ ಉಂಟಾಗಬಹುದು. ತುರ್ತು ನಿರ್ಧಾರ ಕೈಗೊಳ್ಳದೆ, ಸೂಕ್ತ ಪರಿಶೀಲನೆಯ ನಂತರವೇ ಮುಂದುವರಿಯುವುದು ಒಳಿತು. ಬಯಸಿದ ಊರಿಗೆ ವರ್ಗಾವಣೆ ದೊರಕಿದರೆ ಸಂತಸ ಉಂಟಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಭಾರೀ ಧನಲಾಭದ ಸೂಚನೆಗಳಿವೆ. ತೆಂಗಿನ ಬೆಳೆ ಹಾಗೂ ಅಡಿಕೆ ಕೃಷಿಕರಿಗೆ, ಮಧ್ಯವರ್ತಿಗಳಿಗೆ ಮತ್ತು ಸಂಬಂಧಿತ ಉದ್ಯಮದಾರರಿಗೆ ಹೇರಳ ಲಾಭ ಸಾಧ್ಯತೆ ಇದೆ. ನೀರು ಸರಬರಾಜು ಮಾಡುವವರಿಗೆ ಧನ ಲಾಭ ದೊರೆಯಲಿದೆ. ಗುತ್ತಿಗೆದಾರರಿಗೆ ಹೊಸ ಟೆಂಡರ್ ಅವಕಾಶಗಳು ಎದುರಾಗಬಹುದು. ಬಹುಕಾಲದಿಂದ ಕಾಡುತ್ತಿದ್ದ ಕಣ್ಣಿನ ಸಮಸ್ಯೆಗಳು ನಿವಾರಣೆಯಾಗುವ ಸಾಧ್ಯತೆ ಇದೆ. ಮದುವೆಗಾಗಿ ಹಣದ ಸಹಾಯ ಕೇಳಲು ಕೆಲವರು ನಿಮ್ಮನ್ನು ಸಂಪರ್ಕಿಸಬಹುದು. ದಾನ-ಧರ್ಮ ಕಾರ್ಯಗಳಲ್ಲಿ ತೊಡಗಿಕೊಳ್ಳುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ದೇವಸ್ಥಾನ ಪ್ರತಿಷ್ಠಾಪನೆ ಬಗ್ಗೆ ಚಿಂತನೆ ಮಾಡುವಿರಿ. ಒಗ್ಗಟ್ಟಿನ ಕುಟುಂಬ ವಿಚಾರದಲ್ಲಿ ಹೊರಗಿನವರು ಮೂಗು ತೂರಿಸುತ್ತಿದ್ದಾರೆ ಎಂಬ ಭಾವನೆ ಮೂಡಬಹುದು. ಸೋದರ-ಸೋದರಿಯರೊಂದಿಗೆ ಆಸ್ತಿ ವಿಚಾರ ಚರ್ಚಿಸುವಾಗ ನಾಲಿಗೆಯ ಮೇಲೆ ಹಿಡಿತ ಇರಲಿ; ಸಾವಧಾನವಾಗಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಉತ್ತಮ. ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ ತಪ್ಪಿಸಬೇಕು; ಅಪಘಾತ ಸಂಭವಿಸುವ ಸಾಧ್ಯತೆ ಇದೆ. ವಾಹನಕ್ಕೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಿ ನಂತರವೇ ಪ್ರಯಾಣ ಕೈಗೊಳ್ಳಿ. ಒಟ್ಟಾರೆ, ತುಲಾ ರಾಶಿಯವರಿಗೆ ಇದು ಲಾಭದ ಕಾಲವಾದರೂ, ಜಾಗ್ರತೆ ಮತ್ತು ವಿವೇಕದಿಂದ ನಡೆದುಕೊಂಡರೆ ಮಾತ್ರ ಸಂಪೂರ್ಣ ಯಶಸ್ಸು ದೊರೆಯಲಿದೆ.
ವೃಶ್ಚಿಕ ರಾಶಿ ಭವಿಷ್ಯ: ಆರೋಗ್ಯದ ಜಾಗ್ರತೆ – ನ್ಯಾಯದಲ್ಲಿ ಜಯ
ವೃಶ್ಚಿಕ ರಾಶಿಯವರಿಗೆ ಈ ಅವಧಿಯಲ್ಲಿ ತಾಪಮಾನ ಏರಿಳಿತದಿಂದ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ದೇಹದ ತೂಕ ಹೆಚ್ಚಳದಿಂದ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಆಹಾರ ಮತ್ತು ವ್ಯಾಯಾಮದ ಕಡೆ ಗಮನ ಹರಿಸಬೇಕು. ಥೈರಾಯ್ಡ್ ಸಮಸ್ಯೆ ಇರುವವರು ವಿಶೇಷ ಎಚ್ಚರಿಕೆ ವಹಿಸಬೇಕು. ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ಅಗತ್ಯ. ಮಕ್ಕಳಿಗೆ ಉನ್ನತ ಉದ್ಯೋಗ ಸಿಗುವ ಶುಭಸೂಚನೆ ಇದೆ. ನವದಂಪತಿಗಳಿಗೆ ಸಂತಾನ ಅಪೇಕ್ಷಿತರಿಗೆ ಶುಭವಾರ್ತೆ ಕೇಳಿಬರಲಿದೆ. ಸಂಗಾತಿ ಮನೆಯಿಂದ ಸಂತಸದ ಸುದ್ದಿ ದೊರೆಯಬಹುದು. ಭೂಮಿಗೆ ಸಂಬಂಧಿಸಿದ ಪ್ರಯತ್ನಗಳು ವಿಫಲವಾಗುವ ಸಾಧ್ಯತೆ ಇರುವುದರಿಂದ ತುರ್ತು ಹೂಡಿಕೆಗಳನ್ನು ತಪ್ಪಿಸುವುದು ಒಳಿತು. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಗೊಂದಲ ಉಂಟಾಗಬಹುದು. ಆದರೆ ಕೋರ್ಟ್ ತೀರ್ಪು ನಿಮ್ಮ ಪರ ಬರುವ ಸಾಧ್ಯತೆ ಇದೆ; ಇದರಿಂದ ಆಸ್ತಿ ಸಮಸ್ಯೆ ಬಗೆಹರಿಯಲಿದೆ. ಹೋಟೆಲ್ ಉದ್ಯಮದಾರರಿಗೆ ಆರ್ಥಿಕ ಚೇತರಿಕೆ ಕಂಡುಬರಲಿದೆ. ವಿದೇಶದಲ್ಲಿ ಕಾರ್ಯನಿರ್ವಹಿಸುವವರಿಗೆ ಉದ್ಯೋಗ ಸಂಬಂಧಿತ ಸಮಸ್ಯೆಗಳು ಕಾಡುವ ಸಾಧ್ಯತೆ ಇದೆ, ಆದ್ದರಿಂದ ಪರ್ಯಾಯ ಯೋಜನೆ ಸಿದ್ಧವಾಗಿರಲಿ. ತಂತ್ರಜ್ಞಾನ ಪದವಿ ಹೊಂದಿದವರು ಹೊಸ ಉದ್ಯೋಗ ಅವಕಾಶಗಳ ಬಗ್ಗೆ ಆಲೋಚನೆ ಮಾಡಬಹುದು. ಗೃಹಪಯೋಗಿ ಸಾಧನಗಳನ್ನು ಖರೀದಿಸುವ ಚಿಂತನೆ ಮೂಡಬಹುದು. ಒಟ್ಟಾರೆ, ವೃಶ್ಚಿಕ ರಾಶಿಯವರಿಗೆ ಇದು ಆರೋಗ್ಯದ ಜಾಗ್ರತೆ ಹಾಗೂ ನ್ಯಾಯ-ಆಸ್ತಿ ವಿಚಾರದಲ್ಲಿ ನಿರ್ಧಾರಕಾರಿ ಅವಧಿ.
ಧನಸ್ಸು ರಾಶಿ ಭವಿಷ್ಯ: ಪ್ರಯತ್ನಕ್ಕೆ ಫಲ – ಜಾಗ್ರತೆ ಮತ್ತು ವಿನಯ ಅಗತ್ಯ
ಧನಸ್ಸು ರಾಶಿಯವರಿಗೆ ಈ ಅವಧಿ ಪ್ರಯತ್ನಕ್ಕೆ ತಕ್ಕ ಫಲ ನೀಡುವ ಸಮಯವಾಗಿದೆ. ಪ್ರೇಮಿಗಳ ಆಲೋಚನೆಗಳು ಸರಿಯಾಗಿದ್ದರೂ ಅದನ್ನು ವಿರೋಧಿಸುವವರು ಇರಬಹುದು; ಆದ್ದರಿಂದ ಜಾಗ್ರತೆ ಮತ್ತು ಸಮತೋಲನ ಅಗತ್ಯ. ವಿರೋಧಿಗಳನ್ನು ಪ್ರೀತಿಯಿಂದ ಗೆಲ್ಲುವುದು ಉತ್ತಮ ಮಾರ್ಗ. ಕೃಷಿ ಕಾರ್ಯಗಳಿಂದ ಉತ್ತಮ ಧನಲಾಭ ದೊರೆಯಲಿದೆ. ಕೃಷಿಕರು ಸಂಗ್ರಹಿಸಿದ ದವಸ-ಧಾನ್ಯಗಳಿಗೆ ಭಾರಿ ಲಾಭ ಸಿಗುವ ಸಾಧ್ಯತೆ ಇದೆ. ರೈತರ ಮಕ್ಕಳಿಗೆ ಉದ್ಯೋಗ ಸಿಗುವ ಯೋಗವಿದ್ದು, ಮದುವೆ ವಿಚಾರದಲ್ಲಿ ಸ್ವಲ್ಪ ವಿಳಂಬ ಸಂಭವಿಸಬಹುದು. ದಂಪತಿಗಳಿಗೆ ಸಂತಾನದ ಶುಭಸುದ್ದಿ ದೊರೆಯುವ ಸಾಧ್ಯತೆ ಇದೆ. ಹಳಸಿಹೋದ ಸಂಬಂಧಗಳು ಮತ್ತೆ ಸೇರುವ ದಿನಗಳು ಎದುರಾಗಬಹುದು. ಕುಟುಂಬ ಕಲಹಗಳಿಂದ ಮುಕ್ತಿ ಸಿಗಲಿದೆ. ಮಕ್ಕಳಿಗೆ ಉದ್ಯೋಗ ಭಾಗ್ಯ ಕಾಣಿಸುತ್ತದೆ. ಆದರೆ ಹಗಲುಗನಸು ಕಾಣುವುದನ್ನು ಬಿಟ್ಟು ವಾಸ್ತವಿಕ ಯೋಜನೆಗಳತ್ತ ಗಮನ ಹರಿಸಬೇಕು. ನಿಮ್ಮ ಸಾಮರ್ಥ್ಯ ಮೀರಿದ ಹಣಕಾಸು ವ್ಯವಹಾರಗಳನ್ನು ಕೈಗೆತ್ತಿಕೊಳ್ಳಬೇಡಿ. ಹಿತಶತ್ರುಗಳಿಂದ ಕಿರುಕುಳ ಉಂಟಾಗುವ ಸಾಧ್ಯತೆ ಇದೆ; ಶಾಂತಿಯುತ ಮತ್ತು ಕಾನೂನುಬದ್ಧ ಪರಿಹಾರ ಹುಡುಕುವುದು ಒಳಿತು. ಉದರ ಸಂಬಂಧಿತ ಕಾಯಿಲೆ ಇರುವವರು ವೈದ್ಯರ ಸಲಹೆಯಂತೆ ಆಹಾರ ಪಥ್ಯ ಪಾಲಿಸಬೇಕು. ಮೇಲಧಿಕಾರಿಗಳೊಂದಿಗೆ ಮಾತುಕತೆ ನಡೆಸುವಾಗ ವಿನಮ್ರತೆ ಮತ್ತು ಸಹನಶೀಲತೆ ಇರಲಿ. ಇದು ಮುಂದಿನ ದಿನಗಳಲ್ಲಿ ಪ್ರಮೋಷನ್ ಭಾಗ್ಯ ನಿಮ್ಮದಾಗಲು ಸಹಕಾರಿಯಾಗಲಿದೆ. ಒಟ್ಟಾರೆ, ಧನಸ್ಸು ರಾಶಿಯವರಿಗೆ ಇದು ಶ್ರಮ, ಜಾಣ್ಮೆ ಮತ್ತು ವಿನಯದಿಂದ ಸಾಧನೆ ಮಾಡುವ ಕಾಲ.
ಮಕರ ರಾಶಿ ಭವಿಷ್ಯ: ನಾಯಕತ್ವದ ಅವಕಾಶ – ಎಚ್ಚರಿಕೆಯ ಅವಧಿ
ಮಕರ ರಾಶಿಯವರಿಗೆ ಹಲವು ವರ್ಷಗಳಿಂದ ಕನಸಾಗಿ ಉಳಿದಿದ್ದ ಸುಂದರ ಮನೆ ಕಟ್ಟುವ ಆಶೆ ಈಡೇರಲಿರುವ ಸೂಚನೆಗಳಿವೆ. ಧನ ಆಗಮನದಿಂದ ಸಂತಸ ಹೆಚ್ಚಾಗಲಿದೆ. ಹೈನುಗಾರಿಕೆಯಲ್ಲಿ ತೊಡಗಿರುವವರು ಹೊಸ ಥಳಿಯ ಹಸುಗಳನ್ನು ಖರೀದಿಸುವ ಯೋಚನೆ ಮಾಡಬಹುದು, ಇದು ಭವಿಷ್ಯದಲ್ಲಿ ಲಾಭದಾಯಕವಾಗಲಿದೆ. ಒಂದು ಗುಂಪಿನ ನಾಯಕತ್ವ ಸಿಗುವ ಸಾಧ್ಯತೆ ಇದೆ; ಇದು ನಿಮ್ಮ ವ್ಯಕ್ತಿತ್ವಕ್ಕೆ ಹೊಸ ಬೆಳಕು ನೀಡಲಿದೆ. ಉದ್ಯೋಗ ಕ್ಷೇತ್ರದಲ್ಲಿ ಕೆಲವು ಅಡಚಣೆಗಳು ನಿವಾರಣೆಯಾಗಲಿವೆ. ಪತ್ನಿ ಕಡೆಯಿಂದ ಆಸ್ತಿ ಸಿಗುವ ಭಾಗ್ಯವೂ ಕಂಡುಬರುತ್ತದೆ. bಆದರೆ ಆರೋಗ್ಯದ ಕಡೆ ವಿಶೇಷ ಗಮನ ಅಗತ್ಯ. ಉದ್ಯೋಗದಲ್ಲಿ ಹಿತೈಷಿಗಳಿಂದ ಕಾಡಾಟ ಉಂಟಾಗಬಹುದು, ಆದ್ದರಿಂದ ಜಾಣ್ಮೆಯಿಂದ ವರ್ತಿಸಬೇಕು. ಹಣಕಾಸು ವಿಚಾರದಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಒಳಿತು. ವಾಹನ ಚಾಲನೆ ಮಾಡುವಾಗ ಎಚ್ಚರಿಕೆಯಿಂದಿರಿ. ವಾಹನಕ್ಕೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳು ನಿಮ್ಮ ಹತ್ತಿರವೇ ಇರಲಿ. ಅಜಾಗರೂಕತೆಯಿಂದ ಬೆಲೆಬಾಳುವ ವಸ್ತುಗಳನ್ನು ಕಳೆದುಕೊಳ್ಳುವ ಸಂಭವವಿದೆ. ನಿಮ್ಮ ಅತಿಯಾದ ಕೋಪದಿಂದ ಆಪ್ತರೊಂದಿಗೆ ಮನಸ್ತಾಪ ಉಂಟಾಗಬಹುದು; ಆದ್ದರಿಂದ ಮಾತು ಮತ್ತು ವರ್ತನೆಯಲ್ಲಿ ಹಿಡಿತ ಇರಲಿ. ಸಂಗಾತಿಯೊಂದಿಗೆ ಭಾವನಾತ್ಮಕ ವಿಷಯಗಳಲ್ಲಿ ಸೂಕ್ತ ಹಾಗೂ ಸಮತೋಲನದ ತೀರ್ಮಾನ ಕೈಗೊಳ್ಳುವುದು ಒಳಿತು. ಒಟ್ಟಾರೆ, ಮಕರ ರಾಶಿಯವರಿಗೆ ಇದು ಸಾಧನೆ, ನಾಯಕತ್ವ ಮತ್ತು ಜಾಗ್ರತೆಯ ಅವಧಿ.
ಕುಂಭ ರಾಶಿ ಭವಿಷ್ಯ: ಸಾಮಾಜಿಕ ಮೆಚ್ಚುಗೆ – ಶ್ರಮಕ್ಕೆ ಫಲ
ಕುಂಭ ರಾಶಿಯವರಿಗೆ ಈ ಅವಧಿ ಸಾಮಾಜಿಕ ಮತ್ತು ವೈಯಕ್ತಿಕ ಕ್ಷೇತ್ರಗಳಲ್ಲಿ ವಿಶೇಷವಾಗಲಿದೆ. ಜನಪ್ರತಿನಿಧಿಗಳು, ಸಮಾಜಸೇವಕರು, ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ರಾಜಕಾರಣಿಗಳು ರಚನಾತ್ಮಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಮಾಧ್ಯಮದವರಿಂದ ಭಾರಿ ಮೆಚ್ಚುಗೆ ಪಡೆಯುವ ಸಾಧ್ಯತೆ ಇದೆ. ಬಲಭಾಗದ ಕಣ್ಣಿಗೆ ಸ್ವಲ್ಪ ತೊಂದರೆ ಕಾಣಬಹುದು; ಆರೋಗ್ಯದ ಕಡೆ ಗಮನ ಹರಿಸಬೇಕು. ಮಕ್ಕಳ ಮದುವೆ ಸಾಮೂಹಿಕ ಕಾರ್ಯಕ್ರಮಗಳಲ್ಲಿ ಸಂಭವಿಸಬಹುದು. ನೂತನ ಗೃಹಪ್ರವೇಶ ಕೆಲವು ಕಾರಣಗಳಿಂದ ವಿಳಂಬವಾಗುವ ಸಾಧ್ಯತೆ ಇದೆ. ಆಸ್ತಿ ಮಾರಾಟ ಪ್ರಯತ್ನ ಯಶಸ್ವಿಯಾಗಬಹುದು, ಮತ್ತು ಯಾವುದೇ ಮೂಲಗಳಿಂದ ಧನ ಲಾಭವೂ ಸಾಧ್ಯ. ಕೃಷಿ ಭೂಮಿ ಖರೀದಿಸುವ ಯೋಚನೆ ಕೂಡ ಉಂಟಾಗಬಹುದು. ಮದುವೆ ಯೋಗವೂ ಇದೆ. ಲೇವಾದೇವಿಗಾರರಿಗೂ ಸ್ವಲ್ಪ ಮಟ್ಟಿಗೆ ನೆಮ್ಮದಿ ಸಿಗಲಿದೆ. ಹಣದ ಬಾಕಿ ಪಡೆಯಬೇಕಾದರೆ ಹೆಚ್ಚು ಶ್ರಮ ಮತ್ತು ಧೈರ್ಯದಿಂದ ಪ್ರಯತ್ನಿಸಿ; ದೀರ್ಘಾವಧಿ ಹೂಡಿಕೆ ತಪ್ಪಿಸಬೇಕು. ಹಿರಿಯರಿಗೆ ದಯಾ-ದಾಕ್ಷಿಣ್ಯ ತೋರಿಸಿ, ಮಾತಿನಲ್ಲಿ ಸದಾ ಸೌಜನ್ಯ ಇರಲಿ. ಯಾರ ಮೇಲಿನ ಕೋಪವನ್ನು ವ್ಯಕ್ತಪಡಿಸಬೇಡಿ, ಇಲ್ಲದಿದ್ದರೆ ಅನವಶ್ಯಕ ಸಂಕಷ್ಟ ಎದುರಾಗಬಹುದು. ಪ್ರೇಯಸಿಯೊಂದಿಗೆ ಮೃದುವಾದ ಮತ್ತು ಸೌಜನ್ಯ ವರ್ತನೆ ನಿರ್ವಹಿಸುವುದು ಮುಖ್ಯ; ಅವರ ಸ್ವಭಾವವೂ ತೀರ ಮೃದು ಮತ್ತು ಸಹಾಯಕವಾಗಿದೆ. ಒಟ್ಟಾರೆ, ಕುಂಭ ರಾಶಿಯವರಿಗೆ ಇದು ಸಾಮಾಜಿಕ ಸ್ವೀಕಾರ, ಆರ್ಥಿಕ ಪ್ರಯತ್ನ ಮತ್ತು ವೈಯಕ್ತಿಕ ಸೌಹಾರ್ದ್ಯ ಹೆಚ್ಚುವ ಕಾಲ.
ಮೀನ ರಾಶಿ ಭವಿಷ್ಯ: ಒಗ್ಗಟ್ಟಿನಿಂದ ಸಾಧನೆ – ಸಂತಸದ ಸೂಚನೆಗಳು
ಮೀನ ರಾಶಿಯವರಿಗೆ ಈ ಅವಧಿ ವೈಯಕ್ತಿಕ ಹಾಗೂ ವೃತ್ತಿಪರ ಕ್ಷೇತ್ರಗಳಲ್ಲಿ ಮಿಶ್ರ ಫಲ ನೀಡಲಿದೆ. ರೈತರಿಗೆ ಮಕ್ಕಳ ಮದುವೆ ಬಗ್ಗೆ ಸ್ವಲ್ಪ ಚಿಂತೆ ಕಾಣಬಹುದು, ಆದರೆ ಫಸಲಿಗೆ ಉತ್ತಮ ಬೆಳೆ ಸಿಗುವ ಸಾಧ್ಯತೆ ಇದೆ. ವ್ಯಾಪಾರ ವಹಿವಾಟುಗಳಲ್ಲಿ ಭಾರಿ ಅಭಿವೃದ್ಧಿ ಎದುರಾಗಲಿದೆ; ಸ್ವಂತ ಪ್ರಯತ್ನದಿಂದ ಪ್ರಾರಂಭಿಸಿದ ಯೋಜನೆಗಳು ಯಶಸ್ವಿಯಾಗುವವು. ಲೇವಾದೇವಿ ವ್ಯವಹಾರಗಳಲ್ಲಿ ಲಾಭವಿದೆ. ವಿದೇಶ ಪ್ರವಾಸ ಸಾಧ್ಯತೆ ಉಂಟು; ಉನ್ನತ ವ್ಯಾಸಂಗ ಸಫಲವಾಗಲಿದೆ. ದಂಪತಿಗಳಿಗೆ ಸಂತಾನದ ಸಿಹಿ ಸುದ್ದಿ ಕಾದಿದೆ. ಹೊಸ ವ್ಯವಹಾರ ಪ್ರಾರಂಭ ಮತ್ತು ಮನೆ ಕಟ್ಟಡ ಆರಂಭಕ್ಕೂ ಯೋಗವಿದೆ. ತಂತ್ರಜ್ಞಾನ ಪದವಿ ಹೊಂದಿದವರಿಗೆ ಬೇಡಿಕೆ ಹೆಚ್ಚಾಗಲಿದೆ. ಎಲ್ಲಾ ದಾಖಲೆಗಳು ಭದ್ರವಾಗಿರಲಿ, ಉದ್ಯೋಗಸ್ಥರಿಗೆ ಪ್ರಾಮುಖ್ಯತೆಯು ಹೆಚ್ಚಾಗಲಿದೆ. ಪ್ರೇಯಸಿಯೊಂದಿಗೆ ರುಚಿಕಟ್ಟಾದ ಊಟ-ತಿಂಡಿ ಅನುಭವಿಸಬಹುದು. ದಂಪತಿಗಳಿಗೆ ಸಂಬಂಧಿಕರಿಂದ ಔತಣಕೂಟಕ್ಕೆ ಆಹ್ವಾನ ದೊರೆಯಲಿದೆ. ದೇವತಾರಾಧನೆಗೆ ಕುಟುಂಬ ಸಮೇತ ಭಾಗವಹಿಸುವ ಸಾಧ್ಯತೆ ಇದೆ. ಕುಟುಂಬದೊಳಗೆ ಮದುವೆ ವಿಚಾರ ಪ್ರಸ್ತಾವಾಗಬಹುದು; ದಂಪತಿಗಳು ಸಣ್ಣ-ಪುಟ್ಟ ಭಿನ್ನಾಭಿಪ್ರಾಯ ಎದುರಿಸಬಹುದು, ಮಧ್ಯಸ್ಥಿಕೆ ಜನರಿಂದ ಸಹಕಾರ ದೊರೆಯಬಹುದು. ಆದರೆ, “ಮದುವೆ ವಿಳಂಬ ಏಕೆ?” ಅಥವಾ ಹಣಕಾಸಿನಲ್ಲಿ ತೊಂದರೆ ಏಕೆ? ಎಂಬ ಪ್ರಶ್ನೆಗಳು ಮನಸ್ಸನ್ನು ಕಾಡಬಹುದು. ಈ ಸಂದರ್ಭದಲ್ಲಿ ತಾಳ್ಮೆ, ಸಮತೋಲನ ಮತ್ತು ಬೋಧನೆ-ಮಧ್ಯಸ್ಥಿಕೆಯನ್ನು ಪಾಲಿಸುವುದು ಮುಖ್ಯ. ಹಣಕಾಸು ತೊಂದರೆ ಇದ್ದರೆ ತ್ವರಿತ ನಿರ್ಧಾರಗಳನ್ನಾಡದೆ, ಯೋಜನೆ ರೂಪಿಸಿ ಸಾಗುವುದು ಉತ್ತಮ.ಒಟ್ಟಾರೆ, ಮೀನ ರಾಶಿಯವರಿಗೆ ಇದು ಪ್ರಗತಿ, ಕುಟುಂಬ-ಸಂತಾನ ಸಂಬಂಧ ಮತ್ತು ವೈಯಕ್ತಿಕ ಜವಾಬ್ದಾರಿಯ ಅವಧಿ; ಸಮತೋಲನ ಮತ್ತು ಜಾಗ್ರತೆಯಿಂದ ಮುನ್ನಡೆಯುವುದೇ ಯಶಸ್ಸಿನ ಗುಟ್ಟು
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಫೆಬ್ರವರಿ 23, 2026, ಸೋಮವಾರದ ರಾಶಿ ಭವಿಷ್ಯ
ಮೇಷ ರಾಶಿ ಭವಿಷ್ಯ: ವ್ಯಾಪಾರದಲ್ಲಿ ದ್ವಿಗುಣ ಲಾಭ, ವಿದೇಶ ಯೋಗ, ಪ್ರೀತಿಯ ಕನ... ಓದನ್ನು ಮುಂದುವರಿಸಿ
ಶನಿವಾರದ ರಾಶಿ ಭವಿಷ್ಯ,- ಫೆಬ್ರವರಿ 21, 2026,
ಮೇಷ ರಾಶಿ ಭವಿಷ್ಯ: ಸಾಡೇ ಸಾತಿಯ ಪ್ರಭಾವದಲ್ಲಿ ಎಚ್ಚರಿಕೆ ಅಗತ್ಯ... ಓದನ್ನು ಮುಂದುವರಿಸಿ
ಶನಿವಾರದ ರಾಶಿ ಭವಿಷ್ಯ,-ಫೆಬ್ರವರಿ 21, 2026
ಮೇಷ ರಾಶಿ ಭವಿಷ್ಯ: ಸಾಡೇ ಸಾತಿಯ ಪ್ರಭಾವದಲ್ಲಿ ಎಚ್ಚರಿಕೆ ಅಗತ್ಯ... ಓದನ್ನು ಮುಂದುವರಿಸಿ
ಫೆಬ್ರವರಿ 20, 2026 – ಶುಕ್ರವಾರದ ರಾಶಿ ಭವಿಷ್ಯ
ಮೇಷ ರಾಶಿ ದಿನಭವಿಷ್ಯ : ಇಂದು ಮೇಷ ರಾಶಿಯವರಿಗೆ ಶುಭಫಲಗಳು ಹಾಗೂ... ಓದನ್ನು ಮುಂದುವರಿಸಿ
ಫೆಬ್ರವರಿ 19, 2026, ಗುರುವಾರದ ರಾಶಿ ಭವಿಷ್ಯ
ಮೇಷ ರಾಶಿ: ಮದುವೆ ವಿಚಾರದಲ್ಲಿ ಅಡಚಣೆ – ವ್ಯಾಪಾರದಲ್ಲಿ ಭರ್ಜರಿ... ಓದನ್ನು ಮುಂದುವರಿಸಿ
ಫೆಬ್ರವರಿ 18, 2026 - ಬುಧವಾರದ ರಾಶಿ ಭವಿಷ್ಯ
ಮೇಷ ರಾಶಿ : ದಾಂಪತ್ಯದಲ್ಲಿ ಸಣ್ಣ ಕಲಹ, ವಿದೇಶ ಯೋಗದಿಂದ ಲಾಭದ ಸೂ... ಓದನ್ನು ಮುಂದುವರಿಸಿ
ಫೆಬ್ರವರಿ 17, 2026 - ಮಂಗಳವಾರದ ರಾಶಿ ಭವಿಷ್ಯ
ಮೇಷ ರಾಶಿ : ವಿದೇಶ ಪ್ರಯಾಣ ಯೋಗ, ಆಸ್ತಿ ಖರೀದಿ ಸಾಧ್ಯತೆ ಈ ಅವಧಿ... ಓದನ್ನು ಮುಂದುವರಿಸಿ
ಫೆಬ್ರವರಿ 16, 2026, ಸೋಮವಾರದ ರಾಶಿ ಭವಿಷ್ಯ
ಮೇಷ: ನಿಮ್ಮ ತಾಳ್ಮೆ ಮತ್ತು ಶ್ರಮ ಫಲ ನೀಡಲಿದೆ. ಆರ್ಥಿಕ ಪ್ರಗತಿಯ... ಓದನ್ನು ಮುಂದುವರಿಸಿ
ಫೆಬ್ರವರಿ 13, 2026 – ಶುಕ್ರವಾರದ ರಾಶಿ ಭವಿಷ್ಯ
♈ಮೇಷ: ಕಛೇರಿಯಲ್ಲಿ ಉಂಟಾದ ಕೆಲವು ಗೊಂದಲಗಳು ನಿಮ್ಮ ಮನಸ್ಸನ್ನು... ಓದನ್ನು ಮುಂದುವರಿಸಿ
ಫೆಬ್ರವರಿ 12, 2026, ಗುರುವಾರದ ರಾಶಿ ಭವಿಷ್ಯ
ಮೇಷ ರಾಶಿ : ಜನರಿಗೆ ಶುಭ ವರ್ತನೆಗಳು – ಹಣ, ಪ್ರೀತಿ ಮತ್ತು ಆರೋಗ... ಓದನ್ನು ಮುಂದುವರಿಸಿ