ಫೆಬ್ರವರಿ 20, 2026 – ಶುಕ್ರವಾರದ ರಾಶಿ ಭವಿಷ್ಯ

ಮೇಷ ರಾಶಿ ದಿನಭವಿಷ್ಯ : ಇಂದು ಮೇಷ ರಾಶಿಯವರಿಗೆ ಶುಭಫಲಗಳು ಹಾಗೂ ಕೆಲ ಎಚ್ಚರಿಕೆಗಳೂ ಒಂದೇ ವೇಳೆ ಕಾಣಿಸುತ್ತವೆ. ವಕೀಲರಿಗೆ ಇದು ಅತ್ಯುತ್ತಮ ಸಮಯವಾಗಿದ್ದು, ವಾಣಿಜ್ಯ ಸಂಸ್ಥೆ ನಡೆಸುವವರು ಹಾಗೂ ಲೆಕ್ಕ ಪರಿಶೋಧಕರು ಆದಾಯವನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ. ಉಪನ್ಯಾಸಕರಿಗೆ ಸಿಹಿ ಸುದ್ದಿಗಳು ಕೇಳಿಬರುವ ಸಾಧ್ಯತೆಗಳಿವೆ. ಮಕ್ಕಳಿಗೆ ಸರ್ಕಾರಿ ಉದ್ಯೋಗ ದೊರೆಯುವ ಯೋಗವೂ ಕಾಣಿಸುತ್ತಿದೆ. ಆಸ್ತಿ ಮಾರಾಟಕ್ಕೆ ಸಂಬಂಧಿಸಿದ ಅಡಚಣೆಗಳು ನಿವಾರಣೆಯಾಗಲಿದ್ದು, ಪಾಲುದಾರಿಕೆ ವ್ಯವಹಾರಗಳಲ್ಲಿ ಇದ್ದ ಸಮಸ್ಯೆಗಳು ಪರಿಹಾರವಾಗುವ ಸೂಚನೆ ಇದೆ. ಪತಿ-ಪತ್ನಿಯರ ನಡುವೆ ಇದ್ದ ಭಿನ್ನಾಭಿಪ್ರಾಯಗಳು ದೂರವಾಗಿ, ಮುಕ್ತ ಮನಸ್ಸಿನಿಂದ ಸಂಸಾರ ಸಾಗಲಿದೆ. ವಿವಾಹ ಸಂಬಂಧಿತ ಸಮಸ್ಯೆಗಳಿಗೆ ಬಂಧುಗಳ ನೆರವಿನಿಂದ ಪರಿಹಾರ ದೊರೆಯಲಿದೆ. ಹಣಕಾಸು ಪರಿಸ್ಥಿತಿ ಉತ್ತಮವಾಗಿರಲಿದೆ. ಮಾನಸಿಕ ನೆಮ್ಮದಿಗಾಗಿ ದೂರ ಪ್ರಯಾಣ ಕೈಗೊಳ್ಳುವ ಸಾಧ್ಯತೆ ಇದೆ. ಬಹುಕಾಲದ ಆಶೆಯೊಂದು ಇಂದು ನೆರವೇರಬಹುದು. ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ದೊರೆಯಲಿದೆ. ಕಛೇರಿ ಕಾರ್ಯಗಳು ವೇಗ ಪಡೆದು ನಿಮ್ಮ ಕಾರ್ಯನಿರ್ವಹಣೆಗೆ ಮೆಚ್ಚುಗೆ ಸಿಗಲಿದೆ. ಆದರೆ, ಇಂದು ಕೋಪವನ್ನು ನಿಯಂತ್ರಿಸುವುದು ಅತ್ಯಂತ ಮುಖ್ಯ. ದುಡುಕಿನ ನಿರ್ಧಾರಗಳಿಂದ ಅಮೂಲ್ಯ ಹಣ ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದಿರಿ. ಹಿತಶತ್ರುಗಳಿಂದ ತೊಂದರೆ ಎದುರಾಗುವ ಸೂಚನೆ ಇರುವುದರಿಂದ ಹೆಚ್ಚು ಮಾತಾಡುವುದನ್ನು ತಪ್ಪಿಸಿ, ಅನಾವಶ್ಯಕ ಸಂಪರ್ಕಗಳನ್ನು ಕಡಿಮೆ ಮಾಡುವುದು ಒಳಿತು. ಶುಭ ಫಲಗಳಿಗಾಗಿ ಶಿವಲಿಂಗಕ್ಕೆ ಆರಾಧನೆ ಮಾಡುವುದು ಶ್ರೇಯಸ್ಕರ.

 

ವೃಷಭ ರಾಶಿ ದಿನಭವಿಷ್ಯ : ಇಂದು ವೃಷಭ ರಾಶಿಯವರಿಗೆ ಮಿಶ್ರ ಫಲಗಳು ಕಾಣಿಸಿಕೊಳ್ಳಲಿವೆ. ಉದ್ಯೋಗದಲ್ಲಿ ಆತಂಕ ಮತ್ತು ಸಣ್ಣಪುಟ್ಟ ತೊಂದರೆಗಳು ಕಾಡುವ ಸಾಧ್ಯತೆ ಇದ್ದರೂ, ತಾಳ್ಮೆಯಿಂದ ನಡೆದುಕೊಂಡಲ್ಲಿ ಯಶಸ್ಸು ನಿಮ್ಮದೇ ಆಗಲಿದೆ. ಇರುವ ಆಸ್ತಿಯನ್ನು ಮಾರಾಟ ಮಾಡಿ ಹೊಸ ಮನೆ ಖರೀದಿಸುವ ಯೋಗವಿದೆ. nಅಧಿಕಾರಿಗಳಿಗೆ ವಿದೇಶ ಪ್ರಯಾಣದ ಸುವರ್ಣ ಅವಕಾಶ ದೊರೆಯಬಹುದು. ಸ್ಟಾಕ್ ಹಾಗೂ ಷೇರು ವ್ಯವಹಾರಗಳಲ್ಲಿ ಲಾಭದಾಯಕ ಫಲಗಳು ಕಂಡುಬರುವ ಸಾಧ್ಯತೆ ಇದೆ. ಮಹಿಳಾ ಉದ್ಯಮಿದಾರರು ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿ ಆದಾಯವನ್ನು ಹೆಚ್ಚಿಸಿಕೊಳ್ಳುವರು. ವಾಹನ ವ್ಯಾಪಾರ ವ್ಯವಹಾರಗಳಲ್ಲಿ ಲಾಭವಾಗಲಿದೆ. ದಲ್ಲಾಳಿಗಳಿಗೆ ಆದಾಯ ದ್ವಿಗುಣವಾಗುವ ಸೂಚನೆ ಇದೆ. ಆದರೆ ಸಾಲದ ವ್ಯವಹಾರಗಳಲ್ಲಿ ತೊಡಗುವುದು ಒಳ್ಳೆಯದಲ್ಲ. ತಾತ್ಕಾಲಿಕ ಉಪನ್ಯಾಸಕರಿಗೆ ಖಾಯಂ ನೇಮಕಾತಿಯ ಭಾಗ್ಯ ಸಿಗುವ ಸಾಧ್ಯತೆ ಇದೆ. ಗೊಬ್ಬರ, ಬೀಜೋತ್ಪಾದನೆ ಹಾಗೂ ಕ್ರಿಮಿನಾಶಕ ಔಷಧ ಉದ್ಯಮದಲ್ಲಿ ತೊಡಗಿರುವವರಿಗೆ ಧನಲಾಭವಾಗಲಿದೆ. ಬಾಕಿ ವಸೂಲಾತಿ ಸುಲಭವಾಗಲಿದೆ. ನಿರ್ಣಯಗಳನ್ನು ಕೈಗೊಳ್ಳುವಾಗ ಉದ್ವೇಗಕ್ಕೆ ಒಳಗಾಗಬೇಡಿ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಪ್ರೀತಿಪಾತ್ರರೊಂದಿಗೆ ಉತ್ತಮ ಒಡನಾಟ ಇರುತ್ತದೆ. ಸಂಶೋಧನಾ ವಿಭಾಗದಲ್ಲಿ ಕೆಲಸ ಮಾಡುತ್ತಿರುವವರಿಗೆ ಹೆಚ್ಚಿನ ಅಭಿವೃದ್ದಿ ಸಾಧ್ಯತೆ ಇದೆ. ಆರೋಗ್ಯದ ವಿಚಾರದಲ್ಲಿ ಅಲ್ಪ ಮಟ್ಟಿನ ಕಿರಿಕಿರಿ ಕಾಣಿಸಬಹುದು, ಆದ್ದರಿಂದ ಜಾಗ್ರತೆ ವಹಿಸಿ. ಉದ್ಯೋಗ ಕ್ಷೇತ್ರದಲ್ಲಿ ಸೂಕ್ತ ಸ್ಥಾನಮಾನ ಮತ್ತು ಮಾನ್ಯತೆ ದೊರೆಯಲಿದೆ.

 

ಮಿಥುನ ರಾಶಿ ದಿನಭವಿಷ್ಯ : ಮಿಥುನ ರಾಶಿಯವರು ಇಂದು ಯಾವುದೇ ಮಹತ್ವದ ವಿಚಾರವಾಗಲಿ, ಪತ್ನಿಯ ಸಲಹೆ ಮತ್ತು ಸಹಕಾರ ಪಡೆದು ಮುಂದುವರೆಯುವುದು ಒಳಿತು. ಉದ್ಯೋಗ ಬದಲಾವಣೆ ಕುರಿತು ಯೋಚನೆ ಇದ್ದರೆ ಅವಶ್ಯಕತೆ ಇದ್ದಾಗ ಮಾತ್ರ ನಿರ್ಧಾರ ಕೈಗೊಳ್ಳಿ. ಉದ್ಯೋಗದಲ್ಲಿನ ಬದಲಾವಣೆಯಿಂದ ಸಂಪಾದನೆಯಲ್ಲಿ ಪ್ರಗತಿ ಕಾಣಬಹುದು. ಸರಕಾರದ ಆಧೀನದಲ್ಲಿ ನಡೆಯುವ ವ್ಯಾಪಾರ, ಕಾಂಟ್ರಾಕ್ಟರ್ ಕೆಲಸಗಳು ಲಾಭ ತರಲಿವೆ. ಆದರೆ ಬಿಲ್ಲಿಂಗ್ ವ್ಯವಹಾರಗಳಲ್ಲಿ ಸ್ವಲ್ಪ ವಿಳಂಬವಾಗುವ ಸಾಧ್ಯತೆ ಇದೆ. ಕಿರುತೆರೆ ಮತ್ತು ಬೆಳ್ಳಿತೆರೆಯ ಕಲಾವಿದರಿಗೆ ಇದು ಮಹತ್ವದ ಸಮಯವಾಗಿದ್ದು, ಹಣಕಾಸಿನ ಚೇತರಿಕೆ ಕಾಣಬಹುದು. ನಿರಂತರ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರಿಗೆ ಸಿಹಿ ಸುದ್ದಿಗಳು ದೊರೆಯುವ ಸಾಧ್ಯತೆ ಇದೆ. ಕೃಷಿಗೆ ಸಂಬಂಧಿಸಿದ ಯಂತ್ರೋಪಕರಣಗಳ ಖರೀದಿ ಯೋಗವಿದೆ. ಕೆಲಸದಲ್ಲಿರುವವರಿಗೆ ಮುಂಬಡ್ತಿ ಸಿಗುವ ಸಾಧ್ಯತೆ ಇದೆ. ಆದರೆ ಅತಿಯಾದ ಹಣದ ಆಸೆಯಿಂದಾಗಿ ಸಂಕಷ್ಟ ಉಂಟಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದಿರಿ. ಗೌರವಕ್ಕೆ ಚ್ಯುತಿ ತರುವ ಘಟನೆಗಳ ಸಂಭವವಿದೆ, ಆದ್ದರಿಂದ ನಡೆ-ನುಡಿಯಲ್ಲಿ ಜಾಗ್ರತೆ ಅಗತ್ಯ. ನಿಮ್ಮ ಕೆಲಸಕ್ಕೆ ಕುಟುಂಬದವರು ಹಾಗೂ ಮೇಲಾಧಿಕಾರಿಗಳು ಪ್ರಶಂಸೆ ನೀಡಲಿದ್ದಾರೆ. ಕಾರ್ಯಕ್ಷೇತ್ರದಲ್ಲಿ ಒಮ್ಮತ ಮೂಡಿಸಲು ಸಹೋದ್ಯೋಗಿಗಳ ಸಹಕಾರ ಅಗತ್ಯವಾಗಲಿದೆ. ಸಂಜೆ ನಂತರ ಸಂತೋಷದ ಕೂಟದಲ್ಲಿ ಭಾಗಿಯಾಗುವಿರಿ. ಇಂದು ತಾಯಿಯ ಮಾತುಗಳಿಗೆ ವಿಶೇಷ ಮಹತ್ವ ನೀಡಿ. ಅವರ ಸಲಹೆ ಕೇಳಿ ನಡೆದುಕೊಂಡರೆ ದಿನ ಯಶಸ್ವಿಯಾಗಲಿದೆ.

 

ಕರ್ಕಾಟಕ ರಾಶಿ ದಿನಭವಿಷ್ಯ : ಕರ್ಕಾಟಕ ರಾಶಿಯವರಿಗೆ ಇಂದು ಅತ್ಯಂತ ಶುಭಕರ ದಿನ. ಆರ್ಥಿಕವಾಗಿ ಅಭಿವೃದ್ಧಿ ಕಂಡುಬರುವುದರ ಜೊತೆಗೆ ಅಧಿಕಾರ ಪ್ರಾಪ್ತಿಯ ಯೋಗವೂ ಇದೆ. ಸಂತಾನ ಭಾಗ್ಯ ದೊರೆಯುವ ಸಾಧ್ಯತೆಗಳು ಉಜ್ವಲವಾಗಿವೆ. ಆಸ್ತಿ ಹಾಗೂ ವಾಹನ ಖರೀದಿಯ ಯೋಗವೂ ಕಾಣಿಸುತ್ತಿದೆ. ವ್ಯಾಪಾರದಲ್ಲಿ ಲಾಭ ದೊರೆಯಲಿದೆ. ಬಹುಕಾಲದಿಂದ ನಿರೀಕ್ಷಿಸುತ್ತಿದ್ದ ವಿದೇಶ ಪ್ರಯಾಣದ ಅಡಚಣೆಗಳು ನಿವಾರಣೆಯಾಗಿ ವೀಸಾ ಸಿಗುವ ಸಾಧ್ಯತೆ ಇದೆ. ಉದ್ಯೋಗಕ್ಕಾಗಿ ವಿದೇಶ ಪ್ರಯಾಣವೂ ಸಾಧ್ಯ. ವರ್ಷಗಳಿಂದ ಶ್ರಮಿಸುತ್ತಿದ್ದವರಿಗೆ ಇದೀಗ ಭಾಗ್ಯದ ಬಾಗಿಲು ತೆರೆದಂತಾಗಿದೆ. ಮದುವೆ ಆಭರಣಗಳ ಖರೀದಿ ಸಾಧ್ಯತೆ ಇದ್ದು, ವಿವಾಹ ಮಾತುಕತೆಯಲ್ಲಿ ಪ್ರಗತಿ ಕಂಡುಬರುತ್ತದೆ. ಉದ್ಯೋಗದಲ್ಲಿ ಹೊಸ ಮಾರ್ಗವನ್ನು ಕಂಡುಕೊಳ್ಳುವಿರಿ. ಗೃಹ ನಿರ್ಮಾಣ ಸಂಬಂಧಿತ ವಿಚಾರಗಳಲ್ಲಿ ನೆಮ್ಮದಿ ಸಿಗಲಿದೆ. ಕಚೇರಿ ಕಾರ್ಯಗಳು ಅತ್ಯಂತ ಸುಗಮವಾಗಿ ಸಾಗಲಿವೆ. ನಿಮ್ಮ ಸಂಗಾತಿಗೆ ನೂತನ ಉದ್ಯೋಗ ದೊರೆಯುವ ಯೋಗವಿದೆ. ಇಂದು ನಿಮ್ಮ ನಿರ್ದಿಷ್ಟ ಕೆಲಸಗಳಿಗೆ ಮಾತ್ರ ಒತ್ತು ನೀಡಿ, ಶ್ರದ್ಧೆಯಿಂದ ನಿರ್ವಹಿಸುವುದು ಉತ್ತಮ ಫಲ ನೀಡಲಿದೆ. ರೈತಾಪಿ ವರ್ಗದವರಿಗೆ ಸಂತಸದ ದಿನವಾಗಿದ್ದು, ಬೆಳೆಗಳಿಗೆ ನಿರೀಕ್ಷಿತ ಹಣ ಲಭ್ಯವಾಗುವ ಸಾಧ್ಯತೆ ಇದೆ. ಒಟ್ಟಾರೆ, ಪ್ರಗತಿ ಮತ್ತು ಸಂತೋಷ ತುಂಬಿದ ದಿನ.

 

ಸಿಂಹ ರಾಶಿ ದಿನಭವಿಷ್ಯ: ಸಿಂಹ ರಾಶಿಯವರಿಗೆ ಇಂದು ಮಿಶ್ರ ಫಲಗಳು ಕಂಡುಬರುವ ಸಾಧ್ಯತೆ ಇದೆ. ಮಕ್ಕಳಿಂದ ಅಸಮಂಜಸ ವರ್ತನೆ ಅಥವಾ ನೀಚ ಕಾರ್ಯಗಳತ್ತ ಆಸಕ್ತಿ ತೋರಿಸುವುದರಿಂದ ತೊಂದರೆ ಉಂಟಾಗಬಹುದು. ಶತ್ರುವಾಧೆ ಹಾಗೂ ಅನಾರೋಗ್ಯ ಕಾಡುವ ಸೂಚನೆ ಇದೆ. ಮಗಳ ಕುಟುಂಬದ ವಿಚಾರದಲ್ಲಿ ಚಿಂತೆ ಉಂಟಾಗಬಹುದು. ಪ್ರೇಮಿಗಳ ನಡುವೆ ಕಲಹ ಸಂಭವಿಸಬಹುದು. ದಿನಗೂಲಿ ನೌಕರರಿಗೆ ಸಿಹಿ ಸುದ್ದಿ ದೊರೆಯುವ ಸಾಧ್ಯತೆ ಇದೆ. ವಂಶಸ್ಥರಿಂದ ಕಳೆದುಕೊಂಡಿರುವ ಆಸ್ತಿಯನ್ನು ಮರಳಿ ಖರೀದಿಸುವ ಯೋಗವಿದೆ. ವಿವಾಹಾಕಾಂಕ್ಷಿಗಳಿಗೆ ಕಂಕಣಬಲ ಕೂಡಿಬರುವ ಸಾಧ್ಯತೆ ಇದೆ. ಗೃಹಬಳಕೆ ವಸ್ತುಗಳ ಮಾರಾಟಗಾರರಿಗೆ ಲಾಭವಾಗಲಿದೆ. ಹೊಸ ಯೋಜನೆಯೊಂದಕ್ಕೆ ನಾಂದಿ ಹಾಡುವಿರಿ. ಗೃಹದಲ್ಲಿ ನೆಮ್ಮದಿ ನೆಲೆಸುವ ಸಾಧ್ಯತೆ ಇದೆ. ನಿಮ್ಮ ಸಹವರ್ತಿಗಳ ಸಲಹೆ ಇಂದು ಅತ್ಯಂತ ಅಗತ್ಯವಾಗಲಿದೆ. ನಿರ್ದಿಷ್ಟ ಕೆಲಸಗಳ ಕಡೆ ಹೆಚ್ಚು ಒತ್ತು ಮತ್ತು ಶ್ರದ್ಧೆ ನೀಡಿದರೆ ನಿಮ್ಮ ಕನಸುಗಳು ಸಾಕಾರವಾಗುವತ್ತ ಸಾಗಬಹುದು. ಸ್ನೇಹಿತರ ಮಾತುಗಳನ್ನು ಆಲಿಸಿ, ದುಡುಕಿನ ನಿರ್ಧಾರಗಳನ್ನು ತಪ್ಪಿಸುವುದು ಒಳಿತು. ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ, ಶಾಂತ ಮನಸ್ಸಿನಿಂದ ದಿನವನ್ನು ನಿರ್ವಹಿಸಿದರೆ ಯಶಸ್ಸು ನಿಮ್ಮದಾಗಲಿದೆ.

 

ಕನ್ಯಾ ರಾಶಿ ದಿನಭವಿಷ್ಯ : ಕನ್ಯಾ ರಾಶಿಯವರು ಇಂದು ತಮ್ಮ ಬುದ್ಧಿಶಕ್ತಿ ಮತ್ತು ಜ್ಞಾನವನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡರೆ ಹೊಸ ಉದ್ಯಮ ಆರಂಭಿಸುವ ಯೋಗವಿದೆ. ಸರಕಾರದ ಆಧೀನದಲ್ಲಿ ನಡೆಯುವ ವ್ಯಾಪಾರ-ವ್ಯವಹಾರಗಳು ಹಾಗೂ ಕಾಂಟ್ರಾಕ್ಟರ್ ಕೆಲಸಗಳ ಟೆಂಡರ್ ಪ್ರಕ್ರಿಯೆಯಲ್ಲಿ ವಿಳಂಬ ಉಂಟಾಗುವ ಸಾಧ್ಯತೆ ಇದೆ. ಎದುರಾಳಿಗಳ ಒಳಸಂಚು ಇರುವ ಸೂಚನೆ ಇರುವುದರಿಂದ ಎಚ್ಚರಿಕೆಯಿಂದ ನಡೆದುಕೊಳ್ಳಿ. ಬ್ಯಾಂಕಿನಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ವರ್ಗಾವಣೆಯಲ್ಲಿ ಅಡಚಣೆ ಹಾಗೂ ಕೆಲಸದ ಒತ್ತಡ ಹೆಚ್ಚಾಗಬಹುದು. ಮನೆ ಕಟ್ಟಲು ಪಾಯಪೂಜೆ ಮಾಡುವ ಅವಕಾಶ ದೊರೆಯಬಹುದು. ಸಮಸ್ಯೆಗಳನ್ನು ಅತ್ಯಂತ ನಾಜೂಕಿನಿಂದ ಮತ್ತು ಚಾತುರ್ಯದಿಂದ ಪರಿಹರಿಸುವ ಅವಕಾಶ ನಿಮ್ಮ ಕೈಯಲ್ಲಿದೆ. ರಾಜಕೀಯ ಕ್ಷೇತ್ರದಲ್ಲಿ ಇರುವವರು ಇಂದಿನ ದಿನ ರಾಜಕೀಯ ಚಟುವಟಿಕೆಗಳಿಂದ ದೂರ ಉಳಿಯುವುದು ಒಳಿತು. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಯ ಕಾಣಿಸಬಹುದಾದ್ದರಿಂದ ಗಮನ ಹರಿಸಿ. nಉದ್ಯೋಗ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಸಂಭವಿಸಬಹುದು. ರೈತಾಪಿ ವರ್ಗದವರಿಗೆ ಸಾಕಷ್ಟು ಸಿಹಿ ಸುದ್ದಿಗಳು ದೊರೆಯುವ ಸಾಧ್ಯತೆ ಇದೆ. ಕುಟುಂಬದವರ ಮಾತುಗಳನ್ನು ಆಲಿಸಿ, ಹಣಕಾಸಿನ ವಿಷಯದಲ್ಲಿ ಮೋಸ ಹೋಗದಂತೆ ಜಾಗ್ರತೆ ವಹಿಸಿ. ನಿಮಗೆ ಸಿಗುವ ಉತ್ತಮ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ದೊಡ್ಡ ಹೆಸರು ಮಾಡಬಹುದಾಗಿದೆ.

 

ತುಲಾ ರಾಶಿ ದಿನಭವಿಷ್ಯ: ತುಲಾ ರಾಶಿಯವರಿಗೆ ಇಂದು ಪ್ರಗತಿ ಮತ್ತು ಗೌರವದ ದಿನ. ಹೋಟೆಲ್ ಮಾಲೀಕರು ತಮ್ಮ ವ್ಯಾಪಾರವನ್ನು ವಿಸ್ತರಿಸಿ ಹೊಸತನಕ್ಕೆ ಕೈ ಹಾಕುವಿರಿ. ಸರ್ಕಾರಿ ಉದ್ಯೋಗಸ್ಥರು ಧನಲಾಭ ಪಡೆಯುವ ಸಾಧ್ಯತೆ ಇದೆ. ಜನಪ್ರತಿನಿಧಿಗಳಿಗೆ ತಮ್ಮ ವೃತ್ತಿಯಲ್ಲಿ ಲಾಭದೊಂದಿಗೆ ಉನ್ನತ ಸ್ಥಾನಮಾನ ದೊರೆಯುವ ಸೂಚನೆ ಇದೆ. ಗುತ್ತಿಗೆ ಆಧಾರಿತ ನೌಕರರಿಗೆ ಖಾಯಂ ನೇಮಕಾತಿಯ ಸೌಭಾಗ್ಯ ಲಭಿಸಬಹುದು. ಹೊಸ ವಾಹನ ಖರೀದಿಸುವ ಯೋಗವೂ ಇದೆ. ಆದರೆ ತಾಂತ್ರಿಕ ಪರಿಣಿತಿ ಹೊಂದಿದವರು ಉದ್ಯೋಗ ಪಡೆಯುವಲ್ಲಿ ತಾತ್ಕಾಲಿಕ ವಿಫಲತೆ ಎದುರಿಸಬಹುದು. ಧೈರ್ಯ ಕಳೆದುಕೊಳ್ಳಬೇಡಿ; ಮುಂದಿನ ಅವಕಾಶಗಳು ಉತ್ತಮವಾಗಿರುತ್ತವೆ. ಇತರರ ಸಹಾಯಕ್ಕಾಗಿ ಧಾವಿಸಬೇಕಾದ ಪರಿಸ್ಥಿತಿ ಎದುರಾಗಬಹುದು. ದಿನ ನೆಮ್ಮದಿಯಾಗಿದ್ದರೂ ಸ್ವಲ್ಪ ಮಟ್ಟಿನ ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆ ಇದೆ. ಮಾನಸಿಕ ಶಾಂತಿಗಾಗಿ ದೇವಾಲಯಗಳಿಗೆ ಭೇಟಿ ನೀಡುವುದು ಒಳಿತು. ಹೊಸ ಒಪ್ಪಂದ ಮಾಡಿಕೊಳ್ಳುವ ಅವಕಾಶ ಸಿಗಬಹುದು. ಕುಟುಂಬ ಸದಸ್ಯರ ನಡುವೆ ಒಮ್ಮತ ಮೂಡಿ ಬರಲಿದೆ. ಸಮಾಜದಲ್ಲಿ ನಿಮಗೆ ಸಿಗಬೇಕಿದ್ದ ಗೌರವ ಮತ್ತು ಪ್ರಶಸ್ತಿಗಳು ದೊರೆಯುವ ಸಾಧ್ಯತೆ ಇದೆ. ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿ ಸಂತೋಷದ ಕ್ಷಣಗಳನ್ನು ಅನುಭವಿಸುವಿರಿ. ಒಟ್ಟಾರೆ, ಶ್ರದ್ಧೆ ಮತ್ತು ಸಮತೋಲನದಿಂದ ನಡೆದುಕೊಂಡರೆ ಉತ್ತಮ ಫಲಿತಾಂಶಗಳನ್ನು ಪಡೆಯುವ ದಿನ.

 

ವೃಶ್ಚಿಕ ರಾಶಿ ದಿನಭವಿಷ್ಯ : ವೃಶ್ಚಿಕ ರಾಶಿಯವರಿಗೆ ಇಂದು ಹೋರಾಟದ ನಂತರದ ಬೆಳಕಿನ ದಿನ. ಹೋಟೆಲ್ ಮತ್ತು ಖಾನಾವಳಿ ಮಾಲೀಕರು ಕಷ್ಟ-ನಷ್ಟಗಳಿಗೆ ಹೆದರದೆ ಗಟ್ಟಿತನದಿಂದ ಮುಂದುವರಿದರೆ ಮುಂದಿನ ದಿನಗಳಲ್ಲಿ ಉತ್ತಮ ಲಾಭ ಕಾಣುವಿರಿ. ಇಂದಿಗೆ ವ್ಯಾಪಾರದಲ್ಲಿ ಅಲ್ಪ ಪ್ರಮಾಣದ ಲಾಭ ಸಿಗಬಹುದು. ಉದ್ಯೋಗ ಕ್ಷೇತ್ರದಲ್ಲಿ ಅಧಿಕಾರಿಗಳಿಗೆ ಅಧಿಕಾರದೊಂದಿಗೆ ಹಣಬಲವೂ ಹೆಚ್ಚಾಗುವ ಸಾಧ್ಯತೆ ಇದೆ. ಉದ್ಯೋಗ ಬದಲಾಯಿಸಲು ಸೂಕ್ತ ಸಮಯ ಬಂದಿದ್ದರೂ ಮನಸ್ಸಿನಲ್ಲಿ ಆತಂಕ ಕಾಡಬಹುದು. ಬಹುಕಾಲದ ಹೋರಾಟದ ಜೀವನಕ್ಕೆ ಇಂದು ತೆರೆ ಬೀಳುವ ಸಾಧ್ಯತೆ ಇದ್ದು, ಬಯಸಿದ ಉದ್ಯೋಗ ಸಿಗುವ ಯೋಗವಿದೆ. ಸರ್ಕಾರದ ಮಧ್ಯವರ್ತಿಗಳಿಗೆ ಧನಲಾಭ ಕಾಣಿಸಬಹುದು. ನಗರ ಪ್ರದೇಶದಲ್ಲಿ ವಾಣಿಜ್ಯ ಮಳಿಗೆ ಖರೀದಿಸುವ ಸಾಧ್ಯತೆ ಇದೆ. ಆದರೆ ಭೂ ವ್ಯವಹಾರಗಳಲ್ಲಿ ಮೋಸ ಹಾಗೂ ಮಾತಿನ ತಗಾದೆ ಸಂಭವಿಸಬಹುದಾದ್ದರಿಂದ ಎಚ್ಚರಿಕೆ ಅಗತ್ಯ. ಮೇಲಧಿಕಾರಿಗಳ ಅವಕೃಪೆಗೆ ತುತ್ತಾಗದಂತೆ ಸಂಯಮದಿಂದ ವರ್ತಿಸಿ. ದೇವಿ ದರ್ಶನದ ಭಾಗ್ಯ ದೊರೆಯಬಹುದು. ನಿಮ್ಮ ಬೇಡಿಕೆಗಳಿಗೆ ಸ್ಪಷ್ಟ ರೂಪ ನೀಡಿ ಮುಂದಿಟ್ಟರೆ ಅವು ಈಡೇರುವ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿ ಪ್ರೀತಿ ಮತ್ತು ವಾತ್ಸಲ್ಯ ಹೆಚ್ಚಾಗಲಿದೆ. ಒಟ್ಟಾರೆ, ಶಾಂತಿ ಮತ್ತು ಸಮತೋಲನದಿಂದ ನಡೆದುಕೊಂಡರೆ ಉತ್ತಮ ಫಲಿತಾಂಶಗಳನ್ನು ಕಾಣುವ ದಿನ.

 

ಧನು ರಾಶಿ ದಿನಭವಿಷ್ಯ

ಧನು ರಾಶಿಯವರಿಗೆ ಇಂದು ಅವಕಾಶಗಳು ಮತ್ತು ಎಚ್ಚರಿಕೆಗಳು ಒಂದೇ ವೇಳೆ ಎದುರಾಗುವ ದಿನ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರಿಗೆ ಧನಲಾಭದ ಸೂಚನೆ ಇದೆ. ಸಂಗೀತ ವಾದ್ಯಗಳ ತಯಾರಿಕಾ ಕ್ಷೇತ್ರದಲ್ಲಿರುವವರಿಗೆ ಹೆಚ್ಚಿನ ಲಾಭ ದೊರೆಯಬಹುದು. ಮಾರುಕಟ್ಟೆಯಲ್ಲಿ ಹೊಸ ಹೋಟೆಲ್ ಪ್ರಾರಂಭಿಸುವ ಯೋಗವೂ ಕಾಣಿಸುತ್ತದೆ. ಕುಟುಂಬದಲ್ಲಿ ಮಂಗಳ ಕಾರ್ಯ ನೆರವೇರಲಿದ್ದು, ಬಹುಕಾಲದಿಂದ ಪ್ರೀತಿಸಿದ್ದವರೊಂದಿಗೆ ಇಂದು ಆನಂದಬಾಷ್ಪ ಹರಿಯುವ ಕ್ಷಣ ಎದುರಾಗಬಹುದು. ನೌಕರರಿಗೆ ಸಿಹಿ ಸುದ್ದಿ ದೊರೆಯುವ ಸಾಧ್ಯತೆ ಇದೆ. ಕೃಷಿ ಕ್ಷೇತ್ರದಲ್ಲಿರುವವರಿಗೆ ಸಂತಸದ ದಿನ. ಆದರೆ ಹಣಕಾಸು ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರುವವರು ಆತಂಕದ ಪರಿಸ್ಥಿತಿಯನ್ನು ಎದುರಿಸಬಹುದು. ಷೇರು ವ್ಯವಹಾರಗಳಲ್ಲಿ ಎಚ್ಚರಿಕೆಯಿಂದ ಇರಬೇಕು. ಆಸ್ತಮಾ ಅಥವಾ ಉಸಿರಾಟ ಸಂಬಂಧಿತ ಸಮಸ್ಯೆಗಳು ಕಾಡುವ ಸಾಧ್ಯತೆ ಇರುವುದರಿಂದ ಆರೋಗ್ಯದ ಬಗ್ಗೆ ಗಮನ ಹರಿಸಿ. ಸಂಯಮದಿಂದ ನಡೆದುಕೊಂಡರೆ ಮನೆಯಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗುತ್ತದೆ. ಮಹತ್ತರ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾದ ಸಂದರ್ಭ ಎದುರಾಗಬಹುದು. ಮನಸ್ಸಿನಲ್ಲಿ ಇರುವ ಹಲವು ಕೋರಿಕೆಗಳು ಈಡೇರಲಿದ್ದರೂ ತಾಳ್ಮೆ ಅತ್ಯವಶ್ಯಕ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಅವಕಾಶ ಸಿಗಲಿದೆ. ಹಿತಶತ್ರುಗಳ ಬಗ್ಗೆ ಜಾಗ್ರತೆ ವಹಿಸಿ. ರಾತ್ರಿ ನಂತರ ಸಹೋದರರಿಂದ ಮನಶಾಂತಿಗೆ ಧಕ್ಕೆಯುಂಟಾಗುವ ಸಂದರ್ಭ ಸಂಭವಿಸಬಹುದಾದ್ದರಿಂದ ಶಾಂತವಾಗಿ ನಿರ್ವಹಿಸುವುದು ಒಳಿತು. ಒಟ್ಟಾರೆ, ಸಮತೋಲನ ಮತ್ತು ಎಚ್ಚರಿಕೆಯಿಂದ ನಡೆದುಕೊಂಡರೆ ಯಶಸ್ಸು ನಿಮ್ಮದಾಗಲಿದೆ.

 

ಮಕರ ರಾಶಿ ದಿನಭವಿಷ್ಯ : ಮಕರ ರಾಶಿಯವರಿಗೆ ಇಂದು ಮಹತ್ವದ ತಿರುವುಗಳ ದಿನವಾಗಬಹುದು. ಎರಡನೇ ಮದುವೆಯನ್ನು ಬಯಸಿದವರಿಗೆ ಕುಟುಂಬ ನ್ಯಾಯಾಲಯದ ತೀರ್ಪಿನ ನಂತರ ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ. ಪ್ರೀತಿ ವಿಚಾರದಲ್ಲಿ ಜಯ ದೊರೆಯಬಹುದು. ಬೇಕರಿ, ಕ್ಯಾಂಟೀನ್, ಕಾಂಡಿಮೆಂಟ್ಸ್ ವ್ಯಾಪಾರದಲ್ಲಿರುವವರಿಗೆ ಉತ್ತಮ ಆದಾಯ ದೊರೆಯಲಿದೆ. ದೇವರ ಸಾಮಗ್ರಿ, ಪೂಜಾ ಸಾಮಗ್ರಿ, ಹೋಮ–ಹವನ ಗ್ರಂಥಿ ಅಂಗಡಿ ಮಾಲೀಕರಿಗೂ ಉತ್ತಮ ಲಾಭದ ಸೂಚನೆ ಇದೆ. ಮಾರುಕಟ್ಟೆಯಲ್ಲಿ ವಾಣಿಜ್ಯ ಮಳಿಗೆ ಖರೀದಿಸುವ ಯೋಗವಿದೆ. ಸ್ವಂತ ಉದ್ಯೋಗದಲ್ಲಿ ತೊಡಗಿರುವವರಿಗೆ ಲಾಭವಾಗಲಿದೆ. ಹಣಕಾಸಿನ ವಿಷಯದಲ್ಲಿ ದಿನ ಉತ್ತಮವಾಗಿದ್ದರೂ ವ್ಯವಹಾರಗಳಲ್ಲಿ ಜಾಗರೂಕರಾಗಿರುವುದು ಒಳಿತು. ದುಡ್ಡಿನ ವಿಷಯದಲ್ಲಿ ಅಲ್ಪ ಲಾಭ ಕಾಣಬಹುದು. ಅಧಿಕ ಖರ್ಚು ಸಂಭವಿಸುವುದರಿಂದ ಖರ್ಚು ನಿಯಂತ್ರಣ ಅಗತ್ಯ. ಪ್ರಯಾಣದಲ್ಲಿ ಎಚ್ಚರಿಕೆ ವಹಿಸಿ. ಈಗಾಗಲೇ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರೆ ನೋವುಗಳು ಹೆಚ್ಚಾಗುವ ಸಾಧ್ಯತೆ ಇದೆ. ಶೀತ ಸಂಬಂಧಿತ ತೊಂದರೆಗಳು ಕಾಡಬಹುದು. ಪರಸ್ಥಳ ವಾಸದ ಸಂದರ್ಭ ಎದುರಾಗಬಹುದು. ಒಟ್ಟಾರೆ, ವಿವೇಕದಿಂದ ನಡೆದುಕೊಂಡರೆ ಲಾಭ ಮತ್ತು ಯಶಸ್ಸು ಸಾಧಿಸಬಹುದಾದ ದಿನ.

 

ಕುಂಭ ರಾಶಿ ದಿನಭವಿಷ್ಯ : ಕುಂಭ ರಾಶಿಯವರಿಗೆ ಇಂದು ಮಿಶ್ರ ಫಲಗಳ ದಿನ. ಪ್ರೀತಿಸಿದವರಿಗೆ ಮದುವೆ ವಿಚಾರದಲ್ಲಿ ಸಂಪೂರ್ಣ ಬೆಂಬಲ ದೊರೆಯಲಿದೆ. ದಂಪತಿ ವರ್ಗದವರು ವಿಚ್ಛೇದನ ವಿಚಾರ ಮರೆತು ಒಮ್ಮತ ಸಾಧಿಸುವುದು ಉತ್ತಮ. ನಿಮ್ಮ ಬಾಳು ಬೆಳಗುತ್ತಿದ್ದು, ಕಹಿ ನೆನಪುಗಳನ್ನು ಮರೆತು ಸಾಗುವುದು ಸೂಕ್ತ. ಐ.ಟಿ. ಉದ್ಯೋಗಸ್ಥರು ನಿಮ್ಮ ಚುರುಕುತನ ಮತ್ತು ಕಾರ್ಯದಕ್ಷತೆಯಿಂದ ಉನ್ನತ ಸ್ಥಾನಮಾನ ಪಡೆಯುವ ಸಾಧ್ಯತೆ ಇದೆ. ಪಾಲುದಾರಿಕೆ ವ್ಯವಹಾರಗಳಲ್ಲಿ ತೊಡಗಿಕೊಳ್ಳುವುದನ್ನು ತಕ್ಷಣ ಬಿಡಿ; ಹಣಕಾಸಿನ ಒಡಂಬಡಿಕೆಗಳಿಂದ ದೂರ ಇರಲಿ. ಸ್ವಗೃಹ ನಿರ್ಮಾಣ ಯೋಚನೆ ಯಶಸ್ವಿಯಾಗಲಿದೆ. ಭೂ ವ್ಯಾಪಾರದಲ್ಲಿ ಕೆಲವೊಂದು ವಿವಾದಗಳು ಸಂಭವಿಸಬಹುದು. ಲೋಹದ ವ್ಯಾಪಾರದಲ್ಲಿ ಲಾಭದ ಸೂಚನೆ ಇದೆ, ಆದರೆ ಅಂತರ್ಜಾಲ ವ್ಯವಹಾರಗಳಲ್ಲಿ ಧನ ನಷ್ಟದ ಸಾಧ್ಯತೆ ಇದೆ. ಸುಸಜ್ಜಿತ ಗೃಹ ಕಟ್ಟಡ ಖರೀದಿ ಯೋಗವಿದೆ. ಪರಿಶ್ರಮದಿಂದ ಬಹುದಿನಗಳಿಂದ ಇರುವ ಕನಸು ನನಸಾಗಬಹುದು. ಮನೆಗೆ ಬಂಧುಗಳ ಆಗಮನ ಸಂಭವಿಸಬಹುದು. ವಿದ್ಯಾರ್ಥಿಗಳಿಗೆ ಮುಂದಿನ ವ್ಯಾಸಂಗದ ವಿಷಯದಲ್ಲಿ ನಿಖರತೆ ಮೂಡಲಿದೆ. ಆದರೆ, ದಾಯದಿಗಳಿಂದ ಕಲಹ ಸಂಭವಿಸಬಹುದು. ಮಕ್ಕಳಿಗೆ ಅನಾರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಸ್ತ್ರೀಯರಿಗೆ ಹಣಕಾಸಿನ ವಿಷಯದಲ್ಲಿ ಮಹಾ ಮೋಸದ ಸಂಭವವಿದೆ. ಈ ಸಂದರ್ಭಗಳಲ್ಲಿ ಗುರು ಹಾಗೂ ಹಿರಿಯರ ಆಶೀರ್ವಾದ ಪಡೆದು ಅವರ ಸೂಚನೆ ಪಾಲಿಸುವುದು ಅತ್ಯಗತ್ಯ. ಆತ್ಮೀಯರಿಂದ ಸಾಕಷ್ಟು ಲಾಭ ಸಿಗುವ ಸೂಚನೆ ಇದೆ. ಒಟ್ಟಾರೆ, ಜಾಗ್ರತೆಯಿಂದ ಮತ್ತು ಪರಿಶ್ರಮದಿಂದ ನಡೆದುಕೊಂಡರೆ ದಿನವನ್ನು ಯಶಸ್ವಿಯಾಗಿ ನಿರ್ವಹಿಸಬಹುದಾಗಿದೆ.

 

ಮೀನ ರಾಶಿ ದಿನಭವಿಷ್ಯ : ಮೀನ ರಾಶಿಯವರಿಗೆ ಇಂದು ಕೆಲವು ವಿಸ್ತೃತ ಯೋಗಗಳು ಹಾಗೂ ಎಚ್ಚರಿಕೆಗಳು ಸಂಯೋಜಿತವಾಗಿ ಇವೆ. ಪ್ರೀತಿ ವಿಚಾರದಲ್ಲಿ ಲವ್ ಮ್ಯಾರೇಜ್ ಯೋಗ ಇಲ್ಲದಿರುವುದರಿಂದ, ಪ್ರೇಮಿಗಳಲ್ಲಿ ಸಂಭವಿಸಿದ ಕೆಲವು ಆಕಸ್ಮಿಕ ಘಟನೆಗಳನ್ನು ಮರೆತು ಮತ್ತೆ ಒಟ್ಟಾಗಿ ಬಾಳುವ ಪ್ರಯತ್ನ ಉತ್ತಮ. ಕಹಿ ನೆನಪುಗಳನ್ನು ಮರೆತು ಮುಂದೆ ಸಾಗಿದರೆ ನಿಮ್ಮ ಬಾಳು ಬೆಳಗಲಿದೆ. ಸರಕಾರಿ ಅಧಿಕಾರಿಗಳಿಗೆ ವಿಶೇಷ ಗೌರವ ದೊರೆಯಲಿದೆ ಮತ್ತು ಹೆಚ್ಚಿನ ಜವಾಬ್ದಾರಿ ನಿಡಲಾಗುವುದು. ಹಿತೈಷಿಗಳ ಬಗ್ಗೆ ಜಾಗೃತಿ ಅಗತ್ಯ. ಉನ್ನತ ಅಧ್ಯಯನಕ್ಕಾಗಿ ವಿದೇಶ ಪ್ರವಾಸ ಬಯಸಿದವರಿಗೆ ಶುಭ ಯೋಗ ಇದೆ. ವಿಕಲಚೇತನರ ಸಂಸ್ಥೆಯನ್ನು ನಡೆಸುವವರಿಗೆ ದೇಶ–ವಿದೇಶದಿಂದ ನಿಮ್ಮ ಕಾರ್ಯಕ್ಕೆ ಮೆಚ್ಚುಗೆ ಮತ್ತು ಧನಸಹಾಯ ಸಿಗಲಿದೆ. ಸುಸಜ್ಜಿತ ವಾಣಿಜ್ಯ ಸಂಕೀರ್ಣ ಅಥವಾ ಮಳಿಗೆ ಖರೀದಿಸುವ ಅವಕಾಶ ನಿಮ್ಮಿಗೆ ದೊರೆಯಲಿದೆ. ನಿಮ್ಮೆಲ್ಲ ಕೆಲಸಗಳಲ್ಲಿ ಬಂಧುಗಳ ಸಂಪೂರ್ಣ ಸಹಕಾರ ದೊರೆಯಲಿದೆ. ವಾಹನ ಚಲಾವಣೆಯಲ್ಲಿ ಎಚ್ಚರಿಕೆ ವಹಿಸಿ. ಕೃಷಿ ಕೆಲಸಗಳು ಸುಗಮವಾಗಿ ಸಾಗಲಿವೆ. ಆರೋಗ್ಯದಲ್ಲಿ ಆಕಸ್ಮಿಕ ಏರು–ಪೇರುಗಳ ಸಂಭವವಿದೆ. ಹಣಕಾಸಿನಲ್ಲಿ ಲಾಭ ಹೆಚ್ಚಾಗಿದ್ದು, ಆದ್ರೆ ಹೆಚ್ಚು ಖರ್ಚು ಸಹವಾಗಲಿದೆ. ದುಷ್ಟ ಜನರನ್ನು ಹತ್ತಿರ ಸೇರಿಸಬೇಡಿ. ಸಾಕಷ್ಟು ತಿರುಗಾಟ ಮತ್ತು ಪರಿಶ್ರಮದ ನಂತರ ನಿಮ್ಮ ಕಾರ್ಯಗಳಲ್ಲಿ ಸಾಧನೆ ಸಿದ್ಧಿಯಾಗಲಿದೆ. ಇಂದಿನ ದಿನದ ಪ್ರಮುಖ ಲಾಭಗಳು: ಅಧಿಕ ಆದಾಯ, ಕುಟುಂಬದಲ್ಲಿ ಸಂತೋಷ , ವಿವಾಹ ಯೋಗ , ಭಾಗ್ಯದಲ್ಲಿ ಅನಿರೀಕ್ಷಿತ ಬೆಳವಣಿಗೆ , ಉದ್ಯೋಗ ಲಾಭ ಹಾಗೂ ಉದ್ಯೋಗ ಬದಲಾವಣೆ, ಆರ್ಥಿಕ ಚೇತರಿಕೆ ಒಟ್ಟಾರೆ, ದಿನವು ಯಶಸ್ಸು, ಲಾಭ ಮತ್ತು ಸಂತೋಷಗಳೊಂದಿಗೆ ಸಾಗುವ ಸಾಧ್ಯತೆ ಇರುವುದರಿಂದ ಜಾಗ್ರತೆ ಮತ್ತು ಶ್ರಮ ಮುಖ್ಯ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

3 days ago

   
Image 1
Image 1

ಫೆಬ್ರವರಿ 23, 2026, ಸೋಮವಾರದ ರಾಶಿ ಭವಿಷ್ಯ

ಮೇಷ ರಾಶಿ ಭವಿಷ್ಯ: ವ್ಯಾಪಾರದಲ್ಲಿ ದ್ವಿಗುಣ ಲಾಭ, ವಿದೇಶ ಯೋಗ, ಪ್ರೀತಿಯ ಕನ... ಓದನ್ನು ಮುಂದುವರಿಸಿ


Edited by: ಬಾನು

22 hours ago

   
Image 1

ಭಾನುವಾರ ರಾಶಿ ಭವಿಷ್ಯ ಭಾನುವಾರ ಫೆಬ್ರವರಿ 1, 2026,

ಮೇಷ ರಾಶಿ ಭವಿಷ್ಯ: ಶ್ರಮಕ್ಕೆ ಫಲ – ಹೊಸ ಆರಂಭಗಳ ಸೂಚನೆ

ಮ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಶನಿವಾರದ ರಾಶಿ ಭವಿಷ್ಯ,- ಫೆಬ್ರವರಿ 21, 2026,

ಮೇಷ ರಾಶಿ ಭವಿಷ್ಯ: ಸಾಡೇ ಸಾತಿಯ ಪ್ರಭಾವದಲ್ಲಿ ಎಚ್ಚರಿಕೆ ಅಗತ್ಯ... ಓದನ್ನು ಮುಂದುವರಿಸಿ


Edited by: ಬಾನು

2 days ago

   

ಶನಿವಾರದ ರಾಶಿ ಭವಿಷ್ಯ,-ಫೆಬ್ರವರಿ 21, 2026

ಮೇಷ ರಾಶಿ ಭವಿಷ್ಯ: ಸಾಡೇ ಸಾತಿಯ ಪ್ರಭಾವದಲ್ಲಿ ಎಚ್ಚರಿಕೆ ಅಗತ್ಯ... ಓದನ್ನು ಮುಂದುವರಿಸಿ


Edited by: ಬಾನು

2 days ago

   

ಫೆಬ್ರವರಿ 19, 2026, ಗುರುವಾರದ ರಾಶಿ ಭವಿಷ್ಯ

ಮೇಷ ರಾಶಿ: ಮದುವೆ ವಿಚಾರದಲ್ಲಿ ಅಡಚಣೆ – ವ್ಯಾಪಾರದಲ್ಲಿ ಭರ್ಜರಿ... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1

ಫೆಬ್ರವರಿ 18, 2026 - ಬುಧವಾರದ ರಾಶಿ ಭವಿಷ್ಯ

ಮೇಷ ರಾಶಿ : ದಾಂಪತ್ಯದಲ್ಲಿ ಸಣ್ಣ ಕಲಹ, ವಿದೇಶ ಯೋಗದಿಂದ ಲಾಭದ ಸೂ... ಓದನ್ನು ಮುಂದುವರಿಸಿ


Edited by: ಬಾನು

5 days ago

   
Image 1

ಫೆಬ್ರವರಿ 17, 2026 - ಮಂಗಳವಾರದ ರಾಶಿ ಭವಿಷ್ಯ

ಮೇಷ ರಾಶಿ : ವಿದೇಶ ಪ್ರಯಾಣ ಯೋಗ, ಆಸ್ತಿ ಖರೀದಿ ಸಾಧ್ಯತೆ ಈ ಅವಧಿ... ಓದನ್ನು ಮುಂದುವರಿಸಿ


Edited by: ಬಾನು

6 days ago

   
Image 1
ಬೆಂಗಳೂರು ನಗರ

ಫೆಬ್ರವರಿ 16, 2026, ಸೋಮವಾರದ ರಾಶಿ ಭವಿಷ್ಯ

ಮೇಷ: ನಿಮ್ಮ ತಾಳ್ಮೆ ಮತ್ತು ಶ್ರಮ ಫಲ ನೀಡಲಿದೆ. ಆರ್ಥಿಕ ಪ್ರಗತಿಯ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1

ಫೆಬ್ರವರಿ 13, 2026 – ಶುಕ್ರವಾರದ ರಾಶಿ ಭವಿಷ್ಯ

ಮೇಷ: ಕಛೇರಿಯಲ್ಲಿ ಉಂಟಾದ ಕೆಲವು ಗೊಂದಲಗಳು ನಿಮ್ಮ ಮನಸ್ಸನ್ನು... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1

ಫೆಬ್ರವರಿ 12, 2026, ಗುರುವಾರದ ರಾಶಿ ಭವಿಷ್ಯ

ಮೇಷ ರಾಶಿ : ಜನರಿಗೆ ಶುಭ ವರ್ತನೆಗಳು – ಹಣ, ಪ್ರೀತಿ ಮತ್ತು ಆರೋಗ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1