ಫೆಬ್ರವರಿ 23, 2026, ಸೋಮವಾರದ ರಾಶಿ ಭವಿಷ್ಯ
ಮೇಷ ರಾಶಿ ಭವಿಷ್ಯ: ವ್ಯಾಪಾರದಲ್ಲಿ ದ್ವಿಗುಣ ಲಾಭ, ವಿದೇಶ ಯೋಗ, ಪ್ರೀತಿಯ ಕನಸು ಇಂದು ನನಸಾಗುವ ಸೂಚನೆ
ಮೇಷ ರಾಶಿಯವರಿಗೆ ಇಂದು ಆರ್ಥಿಕ ಹಾಗೂ ವೈಯಕ್ತಿಕ ಬದುಕಿನಲ್ಲಿ ಮಹತ್ವದ ಬೆಳವಣಿಗೆಗಳ ದಿನವಾಗಲಿದೆ. ವ್ಯಾಪಾರದಲ್ಲಿ ದ್ವಿಗುಣ ಲಾಭ ಗಳಿಸುವ ಸಾಧ್ಯತೆ ಇದ್ದು, ಹೊಸ ಯೋಜನೆಗಳು ಯಶಸ್ಸಿನ ಹಾದಿಯಲ್ಲಿ ಸಾಗಲಿವೆ. ವಿದೇಶ ಪ್ರವಾಸದ ಯೋಗವೂ ಕಾಣಿಸುತ್ತಿದ್ದು, ವಿದೇಶದಲ್ಲಿ ವ್ಯಾಪಾರ ಆರಂಭಿಸಲು ಹಣಕಾಸಿನ ಸಹಾಯ ದೊರೆಯುವ ಸಾಧ್ಯತೆ ಇದೆ. ನೌಕರಿಯಲ್ಲಿ ಇರುವವರಿಗೆ ಮಹತ್ವದ ಕೆಲಸದ ನಿಮಿತ್ತ ವರ್ಗಾವಣೆ ಸಾಧ್ಯ. ಇದರಿಂದ ಮುಂದಿನ ದಿನಗಳಲ್ಲಿ ಉತ್ತಮ ಅವಕಾಶಗಳು ತೆರೆದಿಡಲಿವೆ. ಸರ್ಕಾರದ ಸೌಲಭ್ಯಗಳು ದೊರೆಯುವ ಸಾಧ್ಯತೆ ಇದ್ದು, ಹೊಸ ಜಾಗ ಖರೀದಿ ಮಾಡಿ ಮನೆ ಕಟ್ಟುವ ಭಾಗ್ಯ ಕೂಡ ನಿಮಗೆ ಲಭಿಸಬಹುದು. ಇಂದು ನಿಮ್ಮ ಅತ್ಯಂತ ಪ್ರೀತಿಯ ಕನಸು ನನಸಾಗುವ ಸುಳಿವುಗಳಿವೆ. ಆದರೆ ಪ್ರಿಯತಮೆಯೊಂದಿಗೆ ಸಣ್ಣಪುಟ್ಟ ವಾದಗಳು ಉಂಟಾಗುವ ಸಾಧ್ಯತೆ ಇರುವುದರಿಂದ ವಿವಾದಾತ್ಮಕ ವಿಷಯಗಳ ಬಗ್ಗೆ ಚರ್ಚೆ ತಪ್ಪಿಸುವುದು ಒಳಿತು. ಪತ್ನಿಯ ಸಹಾಯವನ್ನು ಗೌರವದಿಂದ ಸ್ವೀಕರಿಸಿ, ಸಂಗಾತಿಯ ಭಾವನೆಗಳನ್ನು ನಿರ್ಲಕ್ಷಿಸಬೇಡಿ. ಅವರ ಮನಸ್ಸು ಮಗುವಿನಂಥ ಮುಗ್ಧವಾಗಿರುತ್ತದೆ — ದ್ರೋಹ ಅಥವಾ ಅವಮಾನವು ನಿಮ್ಮ ಮನಶಾಂತಿಗೆ ಭಂಗ ತರುವುದು. ಉದ್ಯೋಗ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಹಣಕಾಸಿನ ನೆರವು ನೀಡಲು ಸಿದ್ಧರಾಗುವಿರಿ. ಅಜ್ಞಾತ ಮೂಲಗಳಿಂದ ಹಣ ಲಭಿಸುವ ಸಾಧ್ಯತೆ ಇದ್ದು, ಇದರಿಂದ ಆರ್ಥಿಕ ಸಂಕಷ್ಟಗಳು ನಿವಾರಣೆಯಾಗಬಹುದು. ಸಾಮಾಜಿಕ ಸಮಾರಂಭಗಳಲ್ಲಿ ಭಾಗವಹಿಸುವ ಮೂಲಕ ಪ್ರಭಾವಿ ವ್ಯಕ್ತಿಗಳೊಂದಿಗೆ ಬಾಂಧವ್ಯ ವೃದ್ಧಿಯಾಗಲಿದೆ. ಇವು ಮುಂದಿನ ದಿನಗಳಲ್ಲಿ ನಿಮಗೆ ಉಪಯುಕ್ತವಾಗುವ ಸಾಧ್ಯತೆ ಹೆಚ್ಚು.
ಸಲಹೆ: ಇಂದು ಸಹನಶೀಲತೆ ಮತ್ತು ಸಂಯಮ ಮುಖ್ಯ. ಸಂಬಂಧಗಳನ್ನು ಕಾಪಾಡಿಕೊಳ್ಳುವುದೇ ನಿಮ್ಮ ಯಶಸ್ಸಿನ ಕೀಲಿ.
ವೃಷಭ ರಾಶಿ ಭವಿಷ್ಯ: ಕೋರ್ಟ್ ವಿಚಾರಗಳಲ್ಲಿ ಮುನ್ನಡೆ, ಹೊಸ ಉದ್ಯಮದಿಂದ ಧನ ಲಾಭ
ವೃಷಭ ರಾಶಿಯವರಿಗೆ ಇಂದು ಮಹತ್ವದ ನಿರ್ಧಾರಗಳ ದಿನ. ಕೋರ್ಟ್–ಕಚೇರಿ ಸಂಬಂಧಿತ ಕೆಲಸಗಳು ಅಂತಿಮ ಹಂತ ತಲುಪಲಿದ್ದು, ಕೋರ್ಟ್‌ಗೆ ಹಾಜರಾಗುವ ಅಗತ್ಯ ಉಂಟಾಗಬಹುದು. ದೀರ್ಘಕಾಲದ ವಿಚಾರಗಳು ಇನ್ನು ಮುಗಿಯುವ ಲಕ್ಷಣಗಳು ಗೋಚರಿಸುತ್ತಿವೆ. ಬಂಧುಗಳ ಆಗಮನದಿಂದ ಮನೆಮಾತಿನಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಲಿದೆ. ಮಕ್ಕಳಿಗೆ ಉನ್ನತ ಶಿಕ್ಷಣದ ಭಾಗ್ಯ ದೊರೆಯಲಿದ್ದು, ಕೆಲವರಿಗೆ ಸರ್ಕಾರಿ ನೌಕರಿ ಸಾಧ್ಯತೆ ಕೂಡ ಕಾಣಿಸುತ್ತದೆ. ಇದು ಕುಟುಂಬಕ್ಕೆ ಹೆಮ್ಮೆ ತರಲಿದೆ. ಹಳೆಯ ಸಂಗಾತಿ ಆರ್ಥಿಕ ಸಂಕಷ್ಟದಲ್ಲಿದ್ದರೆ ಅವರಿಗೆ ನೆರವು ನೀಡುವ ಮನಸ್ಸು ನಿಮ್ಮದಲ್ಲಿರುತ್ತದೆ. ನಿಮ್ಮ ಪ್ರೀತಿಯ ಸಂಗಾತಿಗೆ ಶಾಶ್ವತ ಪರಿಹಾರ ಒದಗಿಸಲು ನೀವು ಸಫಲರಾಗುವಿರಿ. ಹಳೆಯ ಸಂಬಂಧ ಪುನಃ ಜೀವಂತವಾಗುವ ಸಾಧ್ಯತೆ ಕೂಡ ಇದೆ. ಆಪ್ತ ಸಂಬಂಧಿಕರ ಬೆಂಬಲದಿಂದ ಹೊಸ ಉದ್ಯಮ ಆರಂಭಿಸುವ ಯೋಚನೆ ನೆರವೇರಲಿದೆ. ಈ ವ್ಯವಹಾರದಿಂದ ಧನಲಾಭ ಕಾಣುವಿರಿ. ಆದರೆ ಮಧ್ಯಸ್ಥಿಕೆ ವಹಿಸಿ ನೀಡಿದ ಹಣದಲ್ಲಿ ತೊಂದರೆ ಎದುರಾಗುವ ಸಾಧ್ಯತೆ ಇದ್ದು, ಹಣಕಾಸು ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ. ಕೆಲವರು ಹಣಕಾಸಿನ ಸಮಸ್ಯೆಗಳನ್ನು ಎದುರಿಸಬಹುದು. ಈ ಸಂದರ್ಭದಲ್ಲಿ ಮಾತಾ–ಪಿತೃಗಳ ಸಲಹೆ ಉಪಯುಕ್ತವಾಗುತ್ತದೆ. ಒತ್ತಡದ ಕೆಲಸಗಳ ನಡುವೆ ಕುಟುಂಬವನ್ನು ಮರೆಯಬೇಡಿ. ಪತ್ನಿಯ ಕಷ್ಟ–ಸುಖಗಳನ್ನು ಅರಿತು ಸಹಾನುಭೂತಿಯಿಂದ ನಡೆದುಕೊಳ್ಳಿ. ಪ್ರೀತಿ, ಪ್ರಣಯದಲ್ಲಿ ಹೆಚ್ಚು ಸಮಯ ವ್ಯಯಿಸುವುದು ನಿಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡಬಹುದು. ಆದ್ದರಿಂದ ಭಾವನೆಗಿಂತ ವಿವೇಕಕ್ಕೆ ಆದ್ಯತೆ ನೀಡಿ.
ಸಲಹೆ: ಹಣಕಾಸು ವಿಚಾರಗಳಲ್ಲಿ ಜಾಗರೂಕತೆ ಮತ್ತು ಕುಟುಂಬದೊಂದಿಗೆ ಸಮತೋಲನ ಕಾಯ್ದುಕೊಳ್ಳುವುದು ಇಂದು ಅತ್ಯಂತ ಮುಖ್ಯ.
ಮಿಥುನ ರಾಶಿ ಭವಿಷ್ಯ: ವಿವಾಹ ಯೋಗ, ಉದ್ಯೋಗದಲ್ಲಿ ಪ್ರಗತಿ, ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿದ ಲಾಭ
ಮಿಥುನ ರಾಶಿಯವರಿಗೆ ಇಂದು ಭಾಗ್ಯೋದಯದ ದಿನವಾಗಬಹುದು. ಅವಿವಾಹಿತರಿಗೆ ಮಾಂಗಲ್ಯ ಭಾಗ್ಯ ಕೂಡಿ ಬರಲಿದ್ದು, ವಿವಾಹ ಯೋಗ ಸ್ಪಷ್ಟವಾಗಿ ಕಾಣಿಸುತ್ತಿದೆ. ದಂಪತಿಗಳಿಗೆ ಸಂತಾನ ಭಾಗ್ಯವೂ ದೊರೆಯುವ ಸಾಧ್ಯತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಿರುವವರು ಉತ್ತೀರ್ಣರಾಗುವ ಶುಭ ಸುದ್ದಿ ಪಡೆಯಬಹುದು. ಉದ್ಯೋಗವಿಲ್ಲದವರಿಗೆ ಉದ್ಯೋಗ ಲಭಿಸುವ ಅವಕಾಶ ಇದೆ. ಖಾಸಗಿ ಉದ್ಯೋಗಸ್ಥರಿಗೆ ಅನಿರೀಕ್ಷಿತ ಪ್ರಗತಿ ಸಿಗಲಿದ್ದು, ನೌಕರದಾರರಿಗೆ ಅಧಿಕಾರಿಗಳಿಂದ ಶುಭವಾರ್ತೆ ಬರಬಹುದು. ಗಣ್ಯ ವ್ಯಕ್ತಿಯ ಭೇಟಿಯಿಂದ ಇಚ್ಚಿಸಿದ ಸ್ಥಳಕ್ಕೆ ವರ್ಗಾವಣೆ ಸಾಧ್ಯತೆ ಇದೆ. ಆದರೆ ಉದ್ಯೋಗದಲ್ಲಿ ಮಾನಸಿಕ ಕಿರುಕುಳ ಮುಂದುವರಿಯುವ ಸಾಧ್ಯತೆ ಇದೆ. ಸಾರ್ವಜನಿಕ ಇಲಾಖೆಯ ಉದ್ಯೋಗಿಗಳು ಅಧಿಕ ಪ್ರಸಂಗದಿಂದ ಸಾರ್ವಜನಿಕರಿಂದ ತೊಂದರೆ ಅನುಭವಿಸಬಹುದು. ಎದುರಾಳಿಗಳು ನಿಮ್ಮನ್ನು ಕುಗ್ಗಿಸಲು ಕಾಯುತ್ತಿರುವುದರಿಂದ ಎಚ್ಚರಿಕೆ ಅಗತ್ಯ. ನಿಮ್ಮ ಸುತ್ತಲಿನ ಜನರು ಪಿಸುಮಾತು ಆಡಬಹುದು — ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ವ್ಯಾಪಾರಿಗಳಿಗೆ ಇದು ಶುಭ ಸಮಯ. ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿದ ಧನ ಲಾಭ ಕಾಣಬಹುದು. ಹಿಂದೆ ಮಾಡಿದ ಹಣದ ಹೂಡಿಕೆಗಳು ಉತ್ತಮ ಫಲ ನೀಡಲಿದ್ದು, ಭವ್ಯ ಬಂಗ್ಲೆಯಲ್ಲಿ ವಾಸಿಸುವ ಸುವರ್ಣ ಅವಕಾಶ ದೊರೆಯಬಹುದು. ಭೂಮಿ ಸಂಬಂಧಿತ ಸಮಸ್ಯೆಗಳು ನಿವಾರಣೆಯಾಗುವ ಲಕ್ಷಣಗಳಿವೆ. ಕೋರ್ಟ್–ಕಚೇರಿ ಕೆಲಸಗಳಲ್ಲಿ ಜಯ ಸಾಧಿಸುವಿರಿ. ವಾಹನ ಖರೀದಿ ಯೋಗವೂ ಇದೆ. ವಿದೇಶ ಪ್ರವಾಸದ ಪ್ರಯತ್ನಗಳು ಚುರುಕುಗೊಳ್ಳಲಿವೆ. ಪ್ರೇಮ ಪ್ರಕರಣಗಳು ಹೊಸ ತಿರುವು ಪಡೆಯಬಹುದು. ಆದರೆ ಪರಸ್ತ್ರೀ ಮೋಹ ಅಥವಾ ಅನೈತಿಕ ಪ್ರೀತಿ ಮನಶಾಂತಿಗೆ ಧಕ್ಕೆ ತರಬಹುದು. ನವದಂಪತಿಗಳಿಗೆ ವೈರಾಗ್ಯ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಪರಸ್ಪರ ಅರ್ಥೈಸಿಕೊಳ್ಳುವುದು ಮುಖ್ಯ.ಮಾತಾ–ಪಿತೃಗಳಿಂದ ಧನ ಸಹಾಯ ದೊರೆಯಬಹುದು, ಇದರಿಂದ ಕೆಲವು ಆರ್ಥಿಕ ಅಡಚಣೆಗಳು ನಿವಾರಣೆಯಾಗಲಿವೆ.
ಸಲಹೆ: ಯಶಸ್ಸಿನ ನಡುವೆ ವಿನಯ ಮತ್ತು ನೀತಿ ಮರೆತಬೇಡಿ. ಎಚ್ಚರಿಕೆಯಿಂದ ನಡೆದುಕೊಂಡರೆ ಇಂದಿನ ದಿನ ನಿಮ್ಮ ಜೀವನದಲ್ಲಿ ಮಹತ್ವದ ತಿರುವು ತರಬಹುದು.
ಸಿಂಹ ರಾಶಿ ಭವಿಷ್ಯ: ಹಣಕಾಸಿನ ಒತ್ತಡ, ಉದ್ಯೋಗದಲ್ಲಿ ಸವಾಲು, ಜಾಗ್ರತೆ ಅಗತ್ಯ
ಸಿಂಹ ರಾಶಿಯವರಿಗೆ ಇಂದು ಕಠಿಣ ಪರೀಕ್ಷೆಯ ದಿನವಾಗಬಹುದು. ಬರಬೇಕಾದ ಹಣ ವಿಳಂಬವಾಗುವುದರಿಂದ ಕೊಡಬೇಕಾದ ಸಾಲದ ಬಾಧೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಕಷ್ಟ–ನಷ್ಟಗಳು ಎದುರಾಗಬಹುದು. ಹೊಸದಾಗಿ ಉದ್ಯೋಗ ಆರಂಭಿಸುವ ಹಂಬಲವನ್ನು ತಾತ್ಕಾಲಿಕವಾಗಿ ತಡೆಯುವುದು ಒಳಿತು. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮನ್ನು ದುರುಪಯೋಗಪಡಿಸಿಕೊಂಡು ತೊಂದರೆ ನೀಡುವ ಸಂದರ್ಭಗಳು ಎದುರಾಗಬಹುದು. ಅಪಮಾನ ಅಥವಾ ಅವಮಾನ ಭೀತಿ ಕಾಡಬಹುದು. ಸಹೋದ್ಯೋಗಿಗಳೊಂದಿಗೆ ಅನಾವಶ್ಯಕ ಜಗಳಗಳನ್ನು ತಪ್ಪಿಸಿ. ಉದ್ಯೋಗ ಸ್ಥಳಾಂತರ ಬಯಸಿದವರಿಗೆ ಇದು ಶುಭ ಸಮಯವಲ್ಲ. ವ್ಯಾಪಾರದಲ್ಲಿ ಎದುರಾಳಿಗಳಿಂದ ಹಾಗೂ ಪಕ್ಕದವರಿಂದ ಅಡಚಣೆಗಳು ಉಂಟಾಗಬಹುದು. ಆರ್ಥಿಕ ನಷ್ಟದಿಂದ ಚಿಂತೆ ಹೆಚ್ಚಾಗಬಹುದು. ಟ್ರಾನ್ಸ್‌ಪೋರ್ಟ್ ಹಾಗೂ ಹಣಕಾಸು ವ್ಯವಹಾರಗಳಲ್ಲಿ ಏರುಪೇರು ಕಾಣಬಹುದು. ಆಸ್ತಿ ಖರೀದಿಯಲ್ಲಿ ಮೋಸ ಸಂಭವ ಇರುವುದರಿಂದ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ. ಮಧ್ಯಸ್ಥಿಕೆ ವಹಿಸಿದ ಹಣಕ್ಕೆ ನೀವು ಜವಾಬ್ದಾರರಾಗುವ ಭೀತಿ ಕಾಡಬಹುದು. ಕುಟುಂಬ ಜೀವನದಲ್ಲಿ ಹಿರಿಯರೊಂದಿಗೆ ಆಸ್ತಿ ವಿಚಾರವಾಗಿ ವಾದ-ಮನಸ್ಥಾಪ ಸಂಭವ. ದಂಪತಿಗಳಲ್ಲಿ ಕಿರಿಕಿರಿ ಮುಂದುವರಿಯುವ ಸಾಧ್ಯತೆ ಇದೆ. ಪರಸ್ತ್ರಿ ಸಂಪರ್ಕದಿಂದ ಕುಟುಂಬದಲ್ಲಿ ಕಲಹ ಉಂಟಾಗಬಹುದು — ಎಚ್ಚರಿಕೆ ಅಗತ್ಯ. ಸಂಗಾತಿಯ ಮನೆಯಿಂದ ಕೆಟ್ಟ ಸುದ್ದಿ ಕೇಳುವ ಸಾಧ್ಯತೆ ಇದೆ. ಅವಿವಾಹಿತರಿಗೆ ವಿವಾಹ ಯೋಗ ಇದ್ದರೂ, ಎರಡನೇ ಮದುವೆ ಬಯಸಿದವರಿಗೆ ಅಡಚಣೆಗಳು ಎದುರಾಗಬಹುದು. ಪ್ರೇಮಿಗಳಲ್ಲಿ ಭಿನ್ನಾಭಿಪ್ರಾಯ ಹೆಚ್ಚಾಗುವ ಸಾಧ್ಯತೆ ಇದೆ. ಮಕ್ಕಳು ವಿದ್ಯೆಯಲ್ಲಿ ಅನಾಸಕ್ತಿ ತೋರಿಸಬಹುದು ಹಾಗೂ ಕೆಟ್ಟ ಸಂಗಡಿಗರ ಸಹವಾಸದಿಂದ ಚಿಂತೆ ಉಂಟಾಗಬಹುದು. ಬಂಧುಗಳಿಂದ ಅಸಮಾಧಾನಕರ ಸುದ್ದಿ ಕೇಳುವ ಸಾಧ್ಯತೆ ಇದೆ. ವಾಹನ ಅಪಘಾತ ಸಂಭವಿಸುವ ಸೂಚನೆ ಇರುವುದರಿಂದ ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸಿ.
ಸಲಹೆ: ಇಂದು ತಾಳ್ಮೆ ಮತ್ತು ಎಚ್ಚರಿಕೆ ಮುಖ್ಯ. ಹಣಕಾಸು, ಆಸ್ತಿ ಹಾಗೂ ಸಂಬಂಧಗಳ ವಿಷಯದಲ್ಲಿ ಆಲೋಚಿತ ನಿರ್ಧಾರಗಳನ್ನು ಕೈಗೊಳ್ಳಿ.
ಕನ್ಯಾ ರಾಶಿ ಭವಿಷ್ಯ: ಆಸ್ತಿ ಯೋಗ, ವಿದೇಶ ಶಿಕ್ಷಣ ಅವಕಾಶ, ಶ್ರಮಕ್ಕೆ ಫಲ
ಕನ್ಯಾ ರಾಶಿಯವರಿಗೆ ಇಂದು ಪ್ರಗತಿ ಮತ್ತು ಪರೀಕ್ಷೆಗಳ ಸಂಯೋಜಿತ ದಿನ. ಪ್ರವಾಸ ಕೈಗೊಳ್ಳುವವರು ಹೆಚ್ಚಿನ ಜಾಗ್ರತೆ ವಹಿಸಬೇಕು. ವಿಶೇಷವಾಗಿ ಮೊದಲ ಬಾರಿ ಗರ್ಭಧರಿಸಿರುವ ಗರ್ಭಿಣಿಯರು ಆರೋಗ್ಯದ ಕಡೆ ಗಮನಹರಿಸುವುದು ಅಗತ್ಯ. ನೌಕರಿಗಳಿಗೆ ಪ್ರಗತಿ ಸಾಧ್ಯತೆ ಇದ್ದರೂ, ಕಿರಿಯರಿಂದಾಗುವ ಕಿರುಕುಳ ನಿಮ್ಮ ಮುಂದಿನ ಹೆಜ್ಜೆಗೆ ಅಡ್ಡಿಯಾಗಬಹುದು. ಕೆಲ ಸಂದರ್ಭಗಳಲ್ಲಿ ಅಪಮಾನಕರ ಪ್ರಸಂಗಗಳನ್ನು ಎದುರಿಸಬೇಕಾಗಬಹುದು. ಆದರೆ ನಿಮ್ಮ ಚತುರತೆ ಮತ್ತು ಏಕಾಗ್ರತೆ ಈ ದಿನ ಮಹತ್ವ ಪಡೆಯಲಿದೆ. ಉದ್ಯೋಗದಲ್ಲಿ ಮಾಡಿದ ಹಳೆಯ ಶ್ರಮಕ್ಕೆ ಇಂದು ಫಲ ಸಿಗುವ ಸೂಚನೆ ಇದೆ. ಉನ್ನತ ವ್ಯಾಸಂಗಕ್ಕಾಗಿ ವಿದೇಶ ಪ್ರವಾಸ ಕೈಗೊಳ್ಳುವ ಅವಕಾಶ ದೊರೆಯಬಹುದು. ಭೂಮಿ ಮತ್ತು ಆಸ್ತಿ ವ್ಯವಹಾರಗಳಲ್ಲಿ ಉತ್ತಮ ಫಲಿತಾಂಶ ಕಂಡುಬರುವುದು. ಈ ಬಾರಿ ನಿವೇಶನ ಖರೀದಿ ಯತ್ನ ಯಶಸ್ವಿಯಾಗಲಿದೆ. ಕೆಲವರು ಕೃಷಿಭೂಮಿ ಖರೀದಿಸುವ ಸಾಧ್ಯತೆ ಇದೆ. ಒಳ್ಳೆಯ ಕರ್ಮಗಳಿಗೆ ಉತ್ತಮ ಫಲ ದೊರೆಯಲಿದ್ದು, ಮನೆಯಲ್ಲಿ ಶುಭಮಂಗಲ ಕಾರ್ಯಗಳು ನೆರವೇರಬಹುದು. ಆದರೆ ಕೆಲವರಿಗೆ ಕೆಟ್ಟ ಕರ್ಮದ ಪರಿಣಾಮವಾಗಿ ಹಣಕಾಸಿನ ಸಮಸ್ಯೆಗಳು ಅಥವಾ ಮದುವೆ ವಿಳಂಬ ಸಂಭವಿಸಬಹುದು. ದಂಪತಿಗಳು ಸಂತಾನಕ್ಕಾಗಿ ಮೊರೆಹಾಕುವ ಸಂದರ್ಭ ಎದುರಾಗಬಹುದು; ಈ ಬಾರಿ ಗಂಡು ಸಂತಾನ ಪ್ರಾಪ್ತಿ ಯೋಗವೂ ಇದೆ. ಲೇವಾದೇವಿಗಾರರಿಗೆ ಸಾಲ ಮರುಪಾವತಿ ಕಷ್ಟಗಳು ಎದುರಾಗಬಹುದು. ಆದರೂ ಆರ್ಥಿಕವಾಗಿ ಉತ್ತಮ ಸ್ಥಿತಿ ಕಂಡುಬರುವ ಸಾಧ್ಯತೆ ಇದೆ. ನಿಮ್ಮ ಸಂಗಾತಿ ನಿಮ್ಮ ಬೆಂಬಲಕ್ಕೆ ಕಂಕಣಬದ್ಧವಾಗಿ ನಿಲ್ಲುವರು. ದಾಂಪತ್ಯ ಜೀವನದಲ್ಲಿ ಸಂತೋಷದ ಕ್ಷಣಗಳನ್ನು ಅನುಭವಿಸುವಿರಿ. ಒತ್ತಡ ನಿವಾರಣೆಗೆ ಆತ್ಮೀಯರೊಂದಿಗೆ ಬೆರೆತು ಮಾತನಾಡುವುದು ಒಳಿತು. ಕೆಲಸಕಾರ್ಯಗಳಲ್ಲಿ ಏಕಾಗ್ರತೆ ರೂಢಿಸಿಕೊಳ್ಳಿ.
ಸಲಹೆ: ಶ್ರಮ, ಶ್ರದ್ಧೆ ಮತ್ತು ಸಂಯಮದಿಂದ ನಡೆದುಕೊಂಡರೆ ಇಂದು ನಿಮಗೆ ಮಹತ್ವದ ಸಾಧನೆಗಳ ದಿನವಾಗಬಹುದು.
ತುಲಾ ರಾಶಿ ಭವಿಷ್ಯ: ಸಾಲ ತೀರಿಸುವ ಅವಕಾಶ, ವೃತ್ತಿಯಲ್ಲಿ ಸಾಧನೆ, ಸಂಬಂಧಗಳಲ್ಲಿ ಎಚ್ಚರಿಕೆ
ತುಲಾ ರಾಶಿಯವರಿಗೆ ಇಂದು ಮಿಶ್ರ ಫಲಗಳ ದಿನ. ನೌಕರಿಗಳಿಗೆ ಬಡ್ತಿ ಯೋಗ ಕಾಣಿಸದ ಕಾರಣ ಹೆಚ್ಚುವರಿ ಪ್ರಯತ್ನಗಳಿಗೆ ಇದು ಸೂಕ್ತ ಕಾಲವಲ್ಲ. ಅಧಿಕಾರಿಗಳಿಂದ ಕೆಲವು ಸಮಸ್ಯೆಗಳು ಎದುರಾಗಬಹುದು. ಹಿತಶತ್ರುಗಳು ಅಡ್ಡಿಪಡಿಸುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ನಡೆದುಕೊಳ್ಳಿ. ವೃತ್ತಿ ಕ್ಷೇತ್ರದಲ್ಲಿ ಟಾರ್ಗೆಟ್ ಸಾಧಿಸುವಲ್ಲಿ ನೀವು ಸಫಲರಾಗುವಿರಿ. ಇದರಿಂದ ನಿಮ್ಮ ಕಾರ್ಯನಿಷ್ಠೆಗೆ ಮೆಚ್ಚುಗೆ ಸಿಗಬಹುದು. ಬಾಕಿ ಹಣಗಳನ್ನು ಯಶಸ್ವಿಯಾಗಿ ವಸೂಲಿ ಮಾಡುವ ಸಾಧ್ಯತೆ ಇದೆ. ಸಾಲ ಮರುಪಾವತಿ ಕಾರ್ಯಾಚರಣೆಯೂ ಯಶಸ್ವಿಯಾಗಬಹುದು, ಇದರಿಂದ ಸಾಲದ ಒತ್ತಡ ಸ್ವಲ್ಪ ಕಡಿಮೆಯಾಗಲಿದೆ. ಕೃಷಿಕರಿಗೆ ಬೆಳೆ ನಷ್ಟ ಅಥವಾ ಕಳ್ಳತನದಿಂದ ಚಿಂತೆ ಉಂಟಾಗುವ ಸಾಧ್ಯತೆ ಇದೆ. ಹಣಕಾಸಿನ ವ್ಯವಹಾರಗಳಲ್ಲಿ ಜಾಗ್ರತೆ ಅಗತ್ಯ. ಕುಟುಂಬದಲ್ಲಿ ಕಲಹಗಳು ಏರ್ಪಡುವ ಲಕ್ಷಣಗಳಿವೆ. ಸೋದರ–ಸೋದರಿಯರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಸಂಗಾತಿಯೊಂದಿಗಿನ ಮನಸ್ತಾಪಗಳನ್ನು ಮರೆತು ಸಮಾಧಾನದಿಂದ ಮುಂದೆ ಸಾಗುವುದು ಒಳಿತು. ನವದಂಪತಿಗಳಿಗೆ ಗಂಡು ಸಂತಾನ ಪ್ರಾಪ್ತಿ ಯೋಗ ಕಾಣಿಸುತ್ತದೆ. ಆಸ್ತಿ ವ್ಯವಹಾರಗಳು ವ್ಯಾಜ್ಯಗಳಿಂದ ಕೂಡಿರಬಹುದು. ಅಗತ್ಯ ಕಾರ್ಯಗಳಿಗೆ ಬಂಧುಗಳಿಂದ ಅಡಚಣೆ ಎದುರಾಗಬಹುದು. ಕೆಲವರು ಚುಚ್ಚು ಮಾತುಗಳು ಅಥವಾ ತಪ್ಪು ಮಾರ್ಗದರ್ಶನ ನೀಡುವ ಸಾಧ್ಯತೆ ಇದೆ. ಕೆಲವು ಅಹಿತಕರ ಘಟನೆಗಳು ಮನಸ್ಸಿಗೆ ಕಿರಿಕಿರಿ ತರಬಹುದು.
ಸಲಹೆ: ಧೈರ್ಯ ಮತ್ತು ಸಮಾಧಾನ ಕಾಪಾಡಿಕೊಳ್ಳಿ. ಹಣಕಾಸು ಮತ್ತು ಕುಟುಂಬ ವಿಷಯಗಳಲ್ಲಿ ಸಹನೆ ತಾಳಿದರೆ ಸಮಸ್ಯೆಗಳು ನಿಧಾನವಾಗಿ ಸರಿಹೋಗುತ್ತವೆ.
ವೃಶ್ಚಿಕ ರಾಶಿ ಭವಿಷ್ಯ: ವಿವಾಹ ಯೋಗ, ವ್ಯಾಪಾರ ಲಾಭ, ಉದ್ಯೋಗದಲ್ಲಿ ಎಚ್ಚರಿಕೆ ಅಗತ್ಯ
ವೃಶ್ಚಿಕ ರಾಶಿಯವರಿಗೆ ಇಂದು ಮಿಶ್ರ ಫಲಗಳು ಕಂಡುಬರುತ್ತವೆ. ವಿವಾಹ ಮಂಗಳ ಕಾರ್ಯಗಳು ನೆರವೇರಲಿದ್ದು, ವಿವಾಹ ಯೋಗ ಸ್ಪಷ್ಟವಾಗಿದೆ. ಎರಡನೇ ವಿವಾಹ ಬಯಸಿದವರಿಗೆ ಕೂಡ ಶುಭ ಫಲ ಸಾಧ್ಯ. ಮನಸ್ಸಿನಲ್ಲಿಟ್ಟ ಕಾರ್ಯಗಳು ಕೈಗೂಡುವ ಸಮಯ ಇದು. ಕುಟುಂಬದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಲಿದೆ. ವ್ಯಾಪಾರದಲ್ಲಿ ಅಧಿಕ ಲಾಭ ದೊರೆಯುವ ಸೂಚನೆ ಇದೆ. ಆದರೆ ಪಾಲುದಾರಿಕೆ ವ್ಯವಹಾರಗಳನ್ನು ತಪ್ಪಿಸುವುದು ಒಳಿತು. ಯಾರಿಂದಲೂ ಸಹಾಯ ನಿರೀಕ್ಷಿಸದೆ ಸ್ವಂತ ಶಕ್ತಿಯಿಂದ ಉದ್ಯಮ ಆರಂಭಿಸಿದರೆ ಯಶಸ್ಸು ಸಿಗಬಹುದು. ಮಹಿಳಾ ಉದ್ಯೋಗಿಗಳಿಗೆ ಅಪವಾದಗಳು ಹೆಚ್ಚಾಗುವ ಸಾಧ್ಯತೆ ಇದೆ. ನೌಕರರಿಗೆ ಅಧಿಕಾರಿಗಳಿಂದ ಕಿರುಕುಳ ಹಾಗೂ ಉದ್ಯೋಗ ಭದ್ರತೆಯ ಬಗ್ಗೆ ಆತಂಕ ಕಾಡಬಹುದು. ಅಪಮಾನ ಅಥವಾ ಅವಮಾನ ಭೀತಿ ಎದುರಾಗಬಹುದು. ಉದ್ಯೋಗ ಸ್ಥಳಾಂತರ ಬಯಸಿದರೆ ಇದು ಸೂಕ್ತ ಸಮಯವಲ್ಲ. ಸಾಲಗಾರರಿಂದ ತೊಂದರೆ ಎದುರಾಗಬಹುದು. ದಂಪತಿಗಳಿಗೆ ಆಗಾಗ ಅನಾರೋಗ್ಯ ಕಾಡಿ ಆರೋಗ್ಯಕ್ಕಾಗಿ ಹಣ ವ್ಯಯವಾಗುವ ಸಾಧ್ಯತೆ ಇದೆ. ಸತಿಪತಿಯರಲ್ಲಿ ವಿರಸ ಉಂಟಾಗಬಹುದು. ಅನಾವಶ್ಯಕ ಸಂಚಾರ ಅಥವಾ ಅನುಮಾನಗಳಿಂದ ಕಲಹ ಹೆಚ್ಚಾಗುವ ಸಾಧ್ಯತೆ ಇದೆ. ಕೆಲವರಿಗೆ ನಂಬಿಕೆ ಇಟ್ಟ ಮಹಿಳೆಯಿಂದ ಮೋಸ ಸಂಭವಿಸಬಹುದು. ತಂದೆ, ಸಹೋದರ ಹಾಗೂ ಸಹೋದರಿಯರೊಂದಿಗೆ ವಾಗ್ವಾದ ಉಂಟಾಗುವ ಸಾಧ್ಯತೆ ಇದೆ. ಕೋರ್ಟ್–ಕಚೇರಿ ಕೆಲಸಗಳಲ್ಲಿ ಅಪಯಶಸ್ಸು ಸಂಭವಿಸಬಹುದು, ಆದ್ದರಿಂದ ಕಾನೂನು ವಿಷಯಗಳಲ್ಲಿ ಜಾಗ್ರತೆ ಅಗತ್ಯ. ದೂರದ ಪ್ರವಾಸಗಳನ್ನು ತಾತ್ಕಾಲಿಕವಾಗಿ ತಪ್ಪಿಸುವುದು ಒಳಿತು. ಆದರೆ ವಿದೇಶಕ್ಕೆ ಹೊರಡುವ ಕನಸು ಮುಂದಿನ ದಿನಗಳಲ್ಲಿ ನನಸಾಗುವ ಸೂಚನೆ ಇದೆ.
ಸಲಹೆ: ಆತ್ಮನಿರ್ಭರತೆಯಿಂದ ನಡೆದುಕೊಳ್ಳಿ. ಸಂಬಂಧಗಳಲ್ಲಿ ನಂಬಿಕೆ ಹಾಗೂ ಸಹನೆ ಕಾಪಾಡಿಕೊಂಡರೆ ಸವಾಲುಗಳನ್ನು ಸುಲಭವಾಗಿ ಜಯಿಸಬಹುದು.
ಧನು ರಾಶಿ ಭವಿಷ್ಯ: ಸರ್ಕಾರಿ ನೌಕರಿ ಯೋಗ, ಬಡ್ತಿ ಸಾಧ್ಯತೆ, ವ್ಯಾಪಾರಿಗಳಿಗೆ ಲಾಭದ ಕಾಲ
ಧನು ರಾಶಿಯವರಿಗೆ ಇಂದು ಶ್ರೇಯೋಭಿವೃದ್ಧಿಯ ದಿನ. ವಿಶೇಷವಾಗಿ ಮಹಿಳೆಯರಿಗೆ ಶುಭ ಫಲಗಳು ಕಾಣಿಸಿಕೊಳ್ಳಲಿವೆ. ಸರ್ಕಾರಿ ನೌಕರಿ ಯೋಗ ಬಲವಾಗಿದ್ದು, ಹೊಸ ಉದ್ಯೋಗ ಪ್ರಾರಂಭಿಸಲು ಇದು ಉತ್ತಮ ಸಮಯ. ನೌಕರದಾರರು ಬಡ್ತಿ ಹಾಗೂ ವರ್ಗಾವಣೆ ಪಡೆದು ಸುಖ–ಸಂತೋಷ ಅನುಭವಿಸುವ ಸಾಧ್ಯತೆ ಇದೆ. ಉದ್ಯೋಗಸ್ಥರಿಗೆ ನೆಮ್ಮದಿಯ ವಾತಾವರಣ ನಿರ್ಮಾಣವಾಗಲಿದೆ. ಸ್ನೇಹಿತರು ಹಾಗೂ ಸಹೋದರರಿಂದ ಹೊಸ ವ್ಯಾಪಾರ ಆರಂಭಿಸಲು ಹಣಕಾಸಿನ ನೆರವು ದೊರೆಯಬಹುದು. ಮೊಬೈಲ್, ಎಲೆಕ್ಟ್ರಿಕಲ್, ಸ್ಟೇಷನರಿ, ಪುಸ್ತಕ ಮತ್ತು ಕಂಪ್ಯೂಟರ್ ವ್ಯಾಪಾರಿಗಳಿಗೆ ಧನಲಾಭದ ಸಮಯ. ಹಳೆಯ ಸಾಲ ಮರುಪಾವತಿ ಮಾಡಲು ಅನುಕೂಲಕರ ಕ್ಷಣ ದೊರೆಯಬಹುದು. ಕೈಯಲ್ಲಿ ಹಣ ಉಳಿಯುವ ಸಾಧ್ಯತೆ ಇದೆ. ಜೀವ ವಿಮೆ ಹೂಡಿಕೆ ಮಾಡುವುದೂ ಉತ್ತಮ. ನಿರುದ್ಯೋಗಿಗಳಿಗೆ ಪರೀಕ್ಷೆಗಳಲ್ಲಿ ಅನುಕೂಲಕರ ಫಲ ದೊರೆಯುವ ಸೂಚನೆ ಇದೆ. ಸೋದರ ಮಾವನಿಂದ ಧನ ಸಹಾಯ ಲಭಿಸಬಹುದು. ಆದರೆ ಕೆಲ ಎಚ್ಚರಿಕೆಗಳೂ ಅಗತ್ಯ. ಪರಸ್ತ್ರೀಯರಿಗಾಗಿ ಹಣ ಅಪವ್ಯಯ ಮಾಡುವ ಪ್ರವೃತ್ತಿ ತೊಂದರೆ ತರಬಹುದು. ಮಕ್ಕಳಲ್ಲಿ ತಪ್ಪು ಚಟುವಟಿಕೆಗಳ ಆಸಕ್ತಿ ಕಾಣಿಸಬಹುದು — ಪೋಷಕರು ಗಮನ ಹರಿಸಬೇಕು. ದಂಪತಿಗಳ ನಡುವೆ ಮೂರನೇ ವ್ಯಕ್ತಿಯಿಂದ ಕಲಹ ಉಂಟಾಗುವ ಸಾಧ್ಯತೆ ಇದೆ. ಭೂಮಿ ಸಂಬಂಧಿತ ಕದನಗಳು ಎದುರಾಗಬಹುದು. ಕೋರ್ಟ್ ತೀರ್ಪು ತಾತ್ಕಾಲಿಕವಾಗಿ ತಡೆಗೊಳ್ಳುವ ಸಾಧ್ಯತೆ ಇದೆ. ಧರ್ಮದ ಮಠಾಧಿಪತಿಗಳಿಗೆ ಹಣ ಗಳಿಕೆಯ ಅವಕಾಶಗಳು ಹೆಚ್ಚಾಗಬಹುದು.
ಸಲಹೆ: ಹಣಕಾಸಿನ ವಿಚಾರದಲ್ಲಿ ವಿವೇಕದಿಂದ ನಡೆದುಕೊಳ್ಳಿ. ಕುಟುಂಬ ಹಾಗೂ ಮಕ್ಕಳ ಮೇಲೆ ಗಮನ ಹರಿಸಿ, ಉತ್ತಮ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡರೆ ದಿನ ಯಶಸ್ವಿಯಾಗುತ್ತದೆ.
ಮಕರ ರಾಶಿ ಭವಿಷ್ಯ: ಉದ್ಯೋಗದಲ್ಲಿ ಜವಾಬ್ದಾರಿ ಹೆಚ್ಚಳ, ಭೂ ವ್ಯವಹಾರದಲ್ಲಿ ಎಚ್ಚರಿಕೆ, ಕೃಷಿಗೆ ಲಾಭ
ಮಕರ ರಾಶಿಯವರಿಗೆ ಇಂದು ಜಾಗ್ರತೆ ಮತ್ತು ಶ್ರಮ ಎರಡೂ ಅಗತ್ಯ. ನಿಮ್ಮ ಕೆಲಸದಲ್ಲಿ ಲೋಪ ಉಂಟಾದರೆ ಅನೇಕ ತೊಂದರೆಗಳು ಎದುರಾಗಬಹುದು. ಅಧಿಕಾರಿಗಳಿಂದ ಉಪದ್ರವ ಅಥವಾ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಕೆಲವರಿಗೆ ಬಡ್ತಿ ದೊರಕದ ನಿರಾಶೆ ಕಾಡಬಹುದು; ಮತ್ತೊಂದೆಡೆ ಕೆಲವರಿಗೆ ಬಡ್ತಿ ಸಿಕ್ಕರೂ ಜವಾಬ್ದಾರಿಗಳು ಹೆಚ್ಚಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಸ್ಥಾನ ಬದಲಾವಣೆ ಸಂಭವಿಸಬಹುದು. ಹಿರಿಯ ಅಧಿಕಾರಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆಯುವ ಸೂಚನೆಯೂ ಇದೆ. ಹೊಸ ಯೋಜನೆಗಳನ್ನು ತಾತ್ಕಾಲಿಕವಾಗಿ ಮುಂದೂಡುವುದು ಒಳಿತು. ಕೋರ್ಟ್–ಕಚೇರಿ ಕೆಲಸಗಳಲ್ಲಿ ಹಿನ್ನಡೆ ಕಾಣಬಹುದು. ಶತ್ರುಗಳಿಂದ ಹಾನಿ ಸಂಭವಿಸುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ. ಭೂ ವ್ಯವಹಾರಗಳಲ್ಲಿ ವಿಶೇಷ ಜಾಗ್ರತೆ ವಹಿಸಿ. ಹಣಕಾಸು ಅಪವ್ಯಯ ಅಥವಾ ಮೋಸದ ಸಾಧ್ಯತೆ ಇದೆ. ಆದರೆ ಸಹೋದರನೊಂದಿಗೆ ಆಸ್ತಿ ವಿಚಾರದಲ್ಲಿ ಇದ್ದ ಸಮಸ್ಯೆ ಬಗೆಹರಿಯುವ ಸೂಚನೆ ಇದೆ. ಕೃಷಿಕರು ವಾಣಿಜ್ಯ ಬೆಳೆ ಬೆಳೆದು ಆರ್ಥಿಕ ಪ್ರಗತಿ ಕಾಣುವರು. ಗುತ್ತಿಗೆದಾರರಿಗೆ ಉತ್ತಮ ಆದಾಯ ಸಾಧ್ಯ. ಷೇರು ಮಾರುಕಟ್ಟೆಯಲ್ಲಿ ಅಲ್ಪ ಅನುಕೂಲ ಮಾತ್ರ. ಅವಿವಾಹಿತರಿಗೆ ವಿವಾಹ ಯೋಗ ಇದೆ. ದಂಪತಿಗಳಿಗೆ ಸಂತಾನಯೋಗವೂ ಕಾಣಿಸುತ್ತದೆ. ಆದರೆ ಪ್ರೇಮಿಗಳಲ್ಲಿ ಇದ್ದಕ್ಕೆ ಇದ್ದಂತೆ ವಿರಸ ಉಂಟಾಗಬಹುದು. ತಪ್ಪು ನಿರ್ಧಾರಗಳಿಂದ ಅನಾವಶ್ಯಕ ತೊಂದರೆಗಳು ಎದುರಾಗುವ ಸಾಧ್ಯತೆ ಇದೆ. ನಟ–ನಟಿಯರಿಗೆ ಬೇಡಿಕೆ ಹೆಚ್ಚಾಗುವ ಸೂಚನೆ ಇದೆ, ಇದು ಅವರ ವೃತ್ತಿಜೀವನದಲ್ಲಿ ಹೊಸ ಅವಕಾಶಗಳನ್ನು ತರುತ್ತದೆ.
ಸಲಹೆ: ಪ್ರತಿಯೊಂದು ನಿರ್ಧಾರವನ್ನು ಆಲೋಚಿಸಿ ಕೈಗೊಳ್ಳಿ. ವಿಶೇಷವಾಗಿ ಭೂಮಿ ಮತ್ತು ಹಣಕಾಸು ವ್ಯವಹಾರಗಳಲ್ಲಿ ಜಾಗ್ರತೆ ತಾಳಿದರೆ ದಿನ ಉತ್ತಮ ಫಲ ನೀಡುತ್ತದೆ.
ಕುಂಭ ರಾಶಿ ಭವಿಷ್ಯ: ಆರ್ಥಿಕ ಸುಧಾರಣೆ, ವಿವಾಹ–ಸಂತಾನ ಯೋಗ, ಉದ್ಯೋಗದಲ್ಲಿ ಪ್ರಶಂಸೆ
ಕುಂಭ ರಾಶಿಯವರಿಗೆ ಇಂದು ಶ್ರೇಯೋಭಿವೃದ್ಧಿ ಮತ್ತು ಸುಭಫಲಗಳ ದಿನ. ವ್ಯವಹಾರಗಳಲ್ಲಿ ಆರ್ಥಿಕ ಸ್ಥಿತಿಯಲ್ಲಿ ಗಣನೀಯ ಸುಧಾರಣೆ ಕಂಡುಬರುವುದರಿಂದ ವ್ಯಾಪಾರಿಗಳಿಗೆ ಲಾಭದ ದಿನ. ಸಿಮೆಂಟ್, ಕಬ್ಬಿಣ, ಮರಳು, ಇಟ್ಟಿಗೆ ವ್ಯಾಪಾರದಲ್ಲಿ ಯಶಸ್ವೀ ಬೆಳವಣಿಗೆ ಕಾಣುವ ಸಂಭವವಿದೆ. ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಉತ್ತಮ ಬದಲಾವಣೆ ಸಂಭವಿಸಲಿದೆ. ಬಾಕಿ ಹಣವನ್ನು ಯಶಸ್ವಿಯಾಗಿ ವಸೂಲಿ ಮಾಡಬಹುದಾಗಿದೆ. ಟ್ರಾವೆಲ್ಸ್ ವ್ಯವಹಾರದಲ್ಲಿ ಸಣ್ಣ ಆರ್ಥಿಕ ನಷ್ಟ ಸಂಭವಿಸಬಹುದು. ವೈಯಕ್ತಿಕ ಜೀವನದಲ್ಲಿ ಇಂದು ವಿಶೇಷ ಸಂತೋಷದ ದಿನ. ವಿವಾಹ ಯೋಗ, ಸಂತಾನಯೋಗ ಮತ್ತು ಪುತ್ರ ಯೋಗ ಸ್ಪಷ್ಟವಾಗಿವೆ. ಪತಿ–ಪತ್ನಿ ನಡುವಿನ ಪ್ರೀತಿ ಮಧುರವಾಗಿ ಇರಲಿದೆ. ಸಂಗಾತಿ ಜೊತೆ ಪ್ರೇಕ್ಷಣೀಯ ಸ್ಥಳಕ್ಕೆ ಭೇಟಿ ನಡೆಸಬಹುದು. ಮದುವೆ ಬಯಸಿದವರಿಗೆ ಯಶಸ್ಸು ದೊರೆಯುತ್ತದೆ. ಮಕ್ಕಳ ಮದುವೆ ವಿಷಯ ಚರ್ಚಿಸಲು ಉತ್ತಮ ಕಾಲವಾಗಿದೆ, ಆದರೆ ಮಕ್ಕಳ ದೇಹಾಲಸ್ಯದಿಂದ ಕೆಲವು ತೊಂದರೆ ಎದುರಾಗಬಹುದು. ಅಳಿಸಿ ಹೋದ ಬಂಧುಗಳೊಂದಿಗೆ ಮತ್ತೆ ಉತ್ತಮ ಬಾಂಧವ್ಯ ನಿರ್ಮಾಣವಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಸಮಯ. ಖಾಸಗಿ ಉದ್ಯೋಗಿಗಳಿಗೆ ಸಂಬಳ ಏರಿಕೆ ಸಾಧ್ಯ. ನೌಕರರಿಗೆ ಅಧಿಕಾರಿಯಿಂದ ಉತ್ತಮ ಪ್ರಶಂಸೆ ಸಿಗಬಹುದು. ಸರ್ಕಾರಿ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ. ಕಾನೂನು ಹೋರಾಟ ನಿಮ್ಮ ಪರವಾಗಿ ಆಗುತ್ತದೆ. ಆದರೆ ಕೆಲವು ಎಚ್ಚರಿಕೆಗಳೂ ಅಗತ್ಯ: ಬಂಧು–ಮಿತ್ರರು ನಿಮ್ಮ ಬಗ್ಗೆ ತಪ್ಪು ಭಾವಿಸಬಹುದು. ಸಹೋದ್ಯೋಗಿಗಳು ಹಿಂಡಿ ಹಿಪ್ಪಿ ಮಾಡುವ ಪ್ರವೃತ್ತಿ ತೋರಬಹುದು. ದೂರದ ಪ್ರವಾಸ ಅಥವಾ ಅನಿರೀಕ್ಷಿತ ಸಂಚಾರ ತಪ್ಪಿಸುವುದು ಶ್ರೇಯಸ್ಕರ. ರಾಜಕಾರಣಿಗಳಿಂದ ಜಾಗ್ರತೆಯಾಗಿರಿ. ಶತ್ರು ನಾಶದ ಕಡೆ ಗಮನ ನೀಡಬೇಕು.
ಸಲಹೆ: ಹಣಕಾಸು, ವ್ಯವಹಾರ ಮತ್ತು ಕುಟುಂಬ ಸಂಬಂಧಗಳಲ್ಲಿ ಜಾಗ್ರತೆ ತಾಳುವುದರಿಂದ ಇಂದು ಯಶಸ್ಸು ಮತ್ತು ನೆಮ್ಮದಿ ನಿಮ್ಮ ಪಾಲಾಗುತ್ತದೆ.
ಮೀನ ರಾಶಿ ಭವಿಷ್ಯ: ಉದ್ಯೋಗದಲ್ಲಿ ಪಾರದರ್ಶಕತೆಯೊಂದಿಗೆ ಯಶಸ್ಸು, ವ್ಯವಹಾರದಲ್ಲಿ ಲಾಭ, ವೈಯಕ್ತಿಕ ಸಂಬಂಧಗಳಲ್ಲಿ ಸಮಾಧಾನ
ಮೀನ ರಾಶಿಯವರಿಗೆ ಇಂದು ವ್ಯವಹಾರ, ಉದ್ಯೋಗ ಮತ್ತು ವೈಯಕ್ತಿಕ ಜೀವನದಲ್ಲಿ ಮಿಶ್ರ ಫಲಗಳ ದಿನ. ನೌಕರರಿಗೆ ಬದಲಿ ನೌಕರಿ ಯೋಗ ಕಂಡುಬರುತ್ತಿದೆ. ಅವಿವಾಹಿತರಿಗೆ ವಿವಾಹ ಯೋಗವೂ ಸ್ಪಷ್ಟವಾಗಿದೆ. ಹಳೆಯ ಸಂಗಾತಿಯ ನೆನಪು ಕೆಲವು ಕ್ಷಣಗಳಲ್ಲಿ ಕಾಡಬಹುದು, ಆದರೆ ಅದು ನಿಮ್ಮ ದಿನಚರ್ಯೆಗೆ ಅಡ್ಡಿಯಲ್ಲ. ಉದ್ಯೋಗದಲ್ಲಿ ಸಮಸ್ಯೆಗಳು ಎದುರಾದರೂ, ನಿಮ್ಮ ಚಾಣಾಕ್ಷತೆಯಿಂದ ಪಾರಾಗುವಿರಿ. ಐ.ಟಿ ಉದ್ಯೋಗಸ್ಥರು ಒತ್ತಡದ ನಡುವೆ ಕೆಲಸ ನಿರ್ವಹಿಸಬೇಕಾಗಬಹುದು. ಸಹೋದರರಿಂದ ಆಸ್ತಿ ವಿಚಾರದಲ್ಲಿ ಕೆಲ ಮಾನಸಿಕ ಕಿರಿಕಿರಿ ಸಂಭವಿಸಬಹುದು. ಅಧಿಕಾರಿಗಳಿಂದ ಅಥವಾ ಬಂಧುಗಳಿಂದ ಮಾಡಲಾದ ಸಹಾಯಗಳು ಇಂದು ನಿಮಗೆ ಮರುಪಾವತಿ ಆಗಬಹುದು. ವ್ಯಾಪಾರದಲ್ಲಿ ಲಾಭದ ಸೂಚನೆ: ಹೊಸ ಅಂಗಡಿ ಪ್ರಾರಂಭಿಸಿದವರು ನಿಧಾನಗತಿಯಲ್ಲಿ ಫಲಿತಾಂಶ ಪಡೆಯಲಿದ್ದಾರೆ. ಭೂಮಿ–ಕಟ್ಟಡ ವ್ಯಾಪಾರಗಳಲ್ಲಿ ಧನ ಲಾಭ ಕಂಡುಬರುತ್ತದೆ. ಮಧ್ಯಸ್ಥಿಕೆ ವಹಿಸಿದ ವ್ಯವಹಾರಗಳಲ್ಲಿ ಎಚ್ಚರಿಕೆ ವಹಿಸಿ, ಹೊಸ ಒಪ್ಪಂದಗಳಿಗೆ ಅಂಗೀಕಾರ ಮಾಡುವ ಸಮಯ. ಆದಾಯದ ಮೂಲ ಸ್ಪಷ್ಟವಾಗಲಿದೆ. ಪತಿ–ಪತ್ನಿ ನಡುವಿನ ಸಾಮರಸ್ಯ ಹೆಚ್ಚಾಗುತ್ತದೆ. ಪ್ರೇಮಿಗಳಿಗೆ ಇಂದು ಸೇರಲು ಉತ್ಸಾಹ ಇದೆ; ಪ್ರೇಮ ಪ್ರಸಂಗಗಳಲ್ಲಿ ಯಶಸ್ಸು ದೊರೆಯುತ್ತದೆ. ಕುಟುಂಬ ಮತ್ತು ಬಂಧುಗಳಿಗೆ ಸಹಾಯ ಮಾಡುವ ಸಾಧ್ಯತೆ ಇದೆ, ವಿಶೇಷವಾಗಿ ಕಷ್ಟದಲ್ಲಿರುವವರಿಗೆ. ಆರೋಗ್ಯದಲ್ಲಿ ಏರುಪೇರು, ಮೂಲವ್ಯಾಧಿ ಅಥವಾ ಪಾದ ಉರಿತದಿಂದ ತೊಂದರೆ ಕಾಣಬಹುದು; ಮೋಹನ ಚಲಿಸುವಾಗ ಜಾಗ್ರತೆಯನ್ನು ಕಾಪಾಡಿ. ಕಾನೂನು ವ್ಯಾಜ್ಯಗಳಲ್ಲಿ ನಿಮ್ಮ ಪರ ಫಲ ದೊರೆಯುವ ಸೂಚನೆ ಇದೆ.
ಸಲಹೆ: ಉದ್ಯೋಗ ಮತ್ತು ವ್ಯವಹಾರದಲ್ಲಿ ಶ್ರದ್ಧೆ, ವೈಯಕ್ತಿಕ ಸಂಬಂಧಗಳಲ್ಲಿ ಸಹನೆ, ಮತ್ತು ಆರೋಗ್ಯದ ಕಡೆ ಜಾಗ್ರತೆ ಮುಖ್ಯ. ಎಚ್ಚರಿಕೆಯೊಂದಿಗೆ ನಡೆದುಕೊಂಡರೆ ದಿನ ನಿಮ್ಮ ಪಾಲಿಗೆ ಯಶಸ್ವಿಯಾಗಲಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಭಾನುವಾರ ರಾಶಿ ಭವಿಷ್ಯ ಭಾನುವಾರ ಫೆಬ್ರವರಿ 1, 2026,
ಮೇಷ ರಾಶಿ ಭವಿಷ್ಯ: ಶ್ರಮಕ್ಕೆ ಫಲ – ಹೊಸ ಆರಂಭಗಳ ಸೂಚನೆ
ಮ... ಓದನ್ನು ಮುಂದುವರಿಸಿ
ಶನಿವಾರದ ರಾಶಿ ಭವಿಷ್ಯ,- ಫೆಬ್ರವರಿ 21, 2026,
ಮೇಷ ರಾಶಿ ಭವಿಷ್ಯ: ಸಾಡೇ ಸಾತಿಯ ಪ್ರಭಾವದಲ್ಲಿ ಎಚ್ಚರಿಕೆ ಅಗತ್ಯ... ಓದನ್ನು ಮುಂದುವರಿಸಿ
ಶನಿವಾರದ ರಾಶಿ ಭವಿಷ್ಯ,-ಫೆಬ್ರವರಿ 21, 2026
ಮೇಷ ರಾಶಿ ಭವಿಷ್ಯ: ಸಾಡೇ ಸಾತಿಯ ಪ್ರಭಾವದಲ್ಲಿ ಎಚ್ಚರಿಕೆ ಅಗತ್ಯ... ಓದನ್ನು ಮುಂದುವರಿಸಿ
ಫೆಬ್ರವರಿ 20, 2026 – ಶುಕ್ರವಾರದ ರಾಶಿ ಭವಿಷ್ಯ
ಮೇಷ ರಾಶಿ ದಿನಭವಿಷ್ಯ : ಇಂದು ಮೇಷ ರಾಶಿಯವರಿಗೆ ಶುಭಫಲಗಳು ಹಾಗೂ... ಓದನ್ನು ಮುಂದುವರಿಸಿ
ಫೆಬ್ರವರಿ 19, 2026, ಗುರುವಾರದ ರಾಶಿ ಭವಿಷ್ಯ
ಮೇಷ ರಾಶಿ: ಮದುವೆ ವಿಚಾರದಲ್ಲಿ ಅಡಚಣೆ – ವ್ಯಾಪಾರದಲ್ಲಿ ಭರ್ಜರಿ... ಓದನ್ನು ಮುಂದುವರಿಸಿ
ಫೆಬ್ರವರಿ 18, 2026 - ಬುಧವಾರದ ರಾಶಿ ಭವಿಷ್ಯ
ಮೇಷ ರಾಶಿ : ದಾಂಪತ್ಯದಲ್ಲಿ ಸಣ್ಣ ಕಲಹ, ವಿದೇಶ ಯೋಗದಿಂದ ಲಾಭದ ಸೂ... ಓದನ್ನು ಮುಂದುವರಿಸಿ
ಫೆಬ್ರವರಿ 17, 2026 - ಮಂಗಳವಾರದ ರಾಶಿ ಭವಿಷ್ಯ
ಮೇಷ ರಾಶಿ : ವಿದೇಶ ಪ್ರಯಾಣ ಯೋಗ, ಆಸ್ತಿ ಖರೀದಿ ಸಾಧ್ಯತೆ ಈ ಅವಧಿ... ಓದನ್ನು ಮುಂದುವರಿಸಿ
ಫೆಬ್ರವರಿ 16, 2026, ಸೋಮವಾರದ ರಾಶಿ ಭವಿಷ್ಯ
ಮೇಷ: ನಿಮ್ಮ ತಾಳ್ಮೆ ಮತ್ತು ಶ್ರಮ ಫಲ ನೀಡಲಿದೆ. ಆರ್ಥಿಕ ಪ್ರಗತಿಯ... ಓದನ್ನು ಮುಂದುವರಿಸಿ
ಫೆಬ್ರವರಿ 13, 2026 – ಶುಕ್ರವಾರದ ರಾಶಿ ಭವಿಷ್ಯ
♈ಮೇಷ: ಕಛೇರಿಯಲ್ಲಿ ಉಂಟಾದ ಕೆಲವು ಗೊಂದಲಗಳು ನಿಮ್ಮ ಮನಸ್ಸನ್ನು... ಓದನ್ನು ಮುಂದುವರಿಸಿ
ಫೆಬ್ರವರಿ 12, 2026, ಗುರುವಾರದ ರಾಶಿ ಭವಿಷ್ಯ
ಮೇಷ ರಾಶಿ : ಜನರಿಗೆ ಶುಭ ವರ್ತನೆಗಳು – ಹಣ, ಪ್ರೀತಿ ಮತ್ತು ಆರೋಗ... ಓದನ್ನು ಮುಂದುವರಿಸಿ