ವಾವ್.. ಭಾನುವಾರದ ಸ್ಪೆಷಲ್ ರುಚಿಯಾದ ಮಟನ್ ಕೈಮಾ ಉಂಡೆ ಸಾರು

ಉಂಡೆಗೆ ಬೇಕಾಗುವ ಪದಾರ್ಥಗಳು ಏನೇನು... 

ಮಟನ್ ಕೈಮಾ- 500 ಗ್ರಾಂ

ಮಟನ್ ಮೂಳೆ – 4 ಪೀಸ್‌

ಕೊಬ್ಬರಿ - ಸ್ವಲ್ಪ

ಉಪ್ಪು- ರುಚಿಗೆ ತಕ್ಕಷ್ಟು

ಕಾಳು ಮೆಣಸು- ಸ್ವಲ್ಪ

ದನಿಯಾಪುಡಿ- 1 ಚಮಚ

ಅಚ್ಚ ಖಾರದ ಪುಡಿ- 1 ಚಮಚ

ಬೆಳ್ಳುಳ್ಳು- ಸ್ವಲ್ಪ

ಚಕ್ಕೆ, ಲವಂಗ- ಸ್ವಲ್ಪ

ಗಸಗಸೆ- ಸ್ವಲ್ಪ

ಮೊಟ್ಟೆ- 1ಹುರಿಗಡಲೆ-ಸ್ವಲ್ಪ

 

ಸಾರಿಗೆ ಬೇಕಾಗುವ ಪದಾರ್ಥಗಳ ಬಗ್ಗೆ ತಿಳಿಯೋಣ....

ತೆಂಗಿನ ತುರಿ- ಒಂದು ಬಟ್ಟಲು

ಈರುಳ್ಳಿ-1

ಬೆಳ್ಳುಳ್ಳಿ-ಸ್ವಲ್ಪ

ಚಕ್ಕೆ, ಲವಂಗ- ಸ್ವಲ್ಪ

ಟೊಮೆಟೋ- ಒಂದು ಸಣ್ಣದ್ದು

ಗಸಗಸೆ- ಸ್ವಲ್ಪ

ಕೊತ್ತಂಬರಿ ಸೊಪ್ಪು- ಸ್ವಲ್ಪ

ಎಣ್ಣೆ- ಸ್ವಲ್ಪ

 

ಮಾಡುವ ವಿಧಾನದ ಬಗ್ಗೆ ತಿಳಿಸುತ್ತೇವೆ.... 

ಮೊದಲಿಗೆ ಮೊಟ್ಟೆ ಹಾಗೂ ಹುರಿಗಡಲೆ ಬಿಟ್ಟು ಮೇಲೆ ತಿಳಿಸಿದ ಉಂಡೆಗೆ ಬೇಕಾದ ಎಲ್ಲಾ ಪದಾರ್ಥಗಳನ್ನು ನೀರು ಹಾಕದೆ ಮಿಕ್ಸಿ ಜಾರ್ ನಲ್ಲಿ ಪುಡಿ ಮಾಡಿಕೊಳ್ಳಬೇಕು. ನಂತರ ಇದಕ್ಕೆ ಒಂದು ಮೊಟ್ಟೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಹುರಿಗಡಲೆಯನ್ನು ಪುಡಿ ಮಾಡಿಟ್ಟುಕೊಳ್ಳಬೇಕು.‌

 

ನಂತರ ಒಂದು ಪಾತ್ರೆಗೆ ಕೈಮಾ, ರುಬ್ಬಿಕೊಂಡ ಮಸಾಲೆಯನ್ನು, ಹುರಿಗಡಲೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು.

 

ನಂತರ ಕುಕ್ಕರ್'ನ್ನು ಒಲೆಯ ಮೇಲಿಟ್ಟು, ಸ್ವಲ್ಪ ಎಣ್ಣೆ ಹಾಕಿ ಕಾದ ನಂತರ ಈರುಳ್ಳಿ, ಅರಿಶಿನವನ್ನು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ಬಳಿಕ ಮೂಳೆಗಳನ್ನು ಹಾಕಿ ಸ್ವಲ್ಪ ನೀರು, ಉಪ್ಪು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು.

 

ಬಳಿಕ ಮಿಕ್ಸಿ ಜಾರ್'ಗೆ ಈ ಮೇಲೆ ಹೇಳಿದ ಸಾರಿನ ಮಸಾಲೆಗೆ ಬೇಕಾದ ಎಲ್ಲಾ ಪದಾರ್ಥಗಳನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಈ ರುಬ್ಬಿಕೊಂಡ ಮಸಾಲೆಯನ್ನು ಬೆಂದ ಮೂಳೆಗಳಿಗೆ ಹಾಕಿ. ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ 10-10-15 ಕುದಿಯಲು ಬಿಡಬೇಕು. ಕುಡಿಯುತ್ತಿರುವ ಈ ಮಸಾಲೆಗೆ ಈಗಾಗಲೇ ಮಾಡಿಟ್ಟುಕೊಂಡ ಕೈಮಾ ಉಂಡೆಗಳನ್ನು ಹಾಕಿ 10-20 ನಿಮಿಷ ಬೇಯಿಸಿದರೆ ರುಚಿಕರವಾದ ಕೈಮಾ ಉಂಡೆ ಸಾರು ಸವಿಯಲು ಸಿದ್ಧ.

 

 


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

5 months ago

   
Image 1
Image 1

ಬರೀ ಚಿಕನ್ ತಿಂದು ಬೋರ್ ಆಗಿದ್ಯಾ? ಸಂಡೇ ಸ್ಪೆಷಲ್.. ಎಂದಾದರೂ ಟೇಸ್ಟಿ ಮಾವಿನಕಾಯಿ ಚಿಕನ್ ಗ್ರೇವಿ ತಿಂದಿದ್ದೀರಾ!?..

ಚಿಕನ್ ಗೆ ಹಾಕುವ ಮಸಾಲೆ, ಖಾರ ಹಾಗೂ ಮಾವಿನಕಾಯಿಯಲ್ಲಿನ ಹುಳಿ ಡಿಫರೆಂಟ್ ಟೇಸ್ಟ್ ಕೊಡು... ಓದನ್ನು ಮುಂದುವರಿಸಿ


Edited by: ಬಾನು

5 months ago

   
Image 1

ಮಾವಿನಕಾಯಿ ಸೀಜನ್‌ ನಲ್ಲಿ ಒಮ್ಮೆಯಾದರೂ ಟ್ರೈ ಮಾಡಿ ಮಾವಿನಕಾಯಿ ಚಟ್ನಿ..!! ಸೂಪರ್‌ ಟೇಸ್ಟ್

ಈ ಸೀಸನ್ ನಲ್ಲಿ ನೀವು ಮಾವಿನಕಾಯಿ ಚಟ್ನಿ ತಿಂದಿದ್ದೀರಾ? ತಿಂದಿಲ್ಲ ಅಂದರೆ ಈ ಸೂಪರ್ ರ... ಓದನ್ನು ಮುಂದುವರಿಸಿ


Edited by: ಮಾಲತಿ

6 months ago

   
Image 1

ಈ ಸೀಜನ್‍ನಲ್ಲಿ ಸಾಮಾನ್ಯವಾಗಿ ಸಿಗೋ ಮಾವಿನಕಾಯಿ ಜಲ್‌ʼಜೀರಾ ನೀರು ಒಮ್ಮೆ ಮಾಡಿ ನೋಡಿ ..!

ಬೇಸಿಗೆ ಅಂದ್ಮೇಲೆ ಮಾವಿನಕಾಯಿ ಸೀಜನ್ ಕೂಡ ಹೌದು. ಹೀಗಾಗಿ ಈ ಸೀಜನ್‍ನಲ್ಲಿ ಸಿಗೋ ಮಾವಿ... ಓದನ್ನು ಮುಂದುವರಿಸಿ


Edited by: ಮಾಲತಿ

6 months ago

   
Image 1

ಬೇಸಿಗೆ ಬಿಸಿಯಲ್ಲಿ ಗರಿಗರಿಯಾಗಿ, ರುಚಿಕರವಾಗಿ ಮನೆಯಲ್ಲೇ ಮಾಡಿ ಆಲೂಗಡ್ಡೆಯ ಹಪ್ಪಳ

ಊಟ ಮಾಡುವಾಗ ಅನ್ನ-ಸಾಂಬಾರ್ ಅಥವಾ ಅನ್ನ-ರಸಂ ಜೊತೆ ಸೈಡ್ಸ್ ಆಗಿ ಸಂಡಿಗೆ ಇದ್ದರೆ ಅದರ... ಓದನ್ನು ಮುಂದುವರಿಸಿ


Edited by: ಬಾನು

7 months ago

   
Image 1

ಪುಳಿಯೋಗರೆ, ಚಿತ್ರಾನ್ನ ತಿಂದು ಬೇಸರ ಆಗಿದ್ರೆ ನಾಲಿಗೆಗೆ ರುಚಿಸೋ ಮಸಾಲಾ ರೈಸ್‌ ಟ್ರೈ ಮಾಡಿ..ಈ ಮಸಾಲ ರೈಸ್‌ ಸಖತ್‌ ಟೇಸ್ಟಿ

ಒಂದೇ ರೀತಿಯ ರೈಸ್‌ಬಾತ್‌ ಅಂದ್ರೆ ಯಾರಿಗೆ ಹಿಡಿಸುತ್ತೆ ಹೇಳಿ.  ರೈಸ್‌ಬಾತ್‌ಗಳು... ಓದನ್ನು ಮುಂದುವರಿಸಿ


Edited by: ಬಾನು

7 months ago

   
Image 1

ಮಕ್ಕಳ ಬಾಯಲ್ಲಿ ನೀರೂರಿಸುತ್ತೆ ʼಪೋಟ್ಯಾಟೋʼ ಲಾಲಿಪಾಪ್ :ರೆಸಿಪಿ ಮಾಡುವುದು ಹೇಗೆ

ಬೇಕಾಗುವಪದಾರ್ಥಗಳು :

ಬೇಯಿಸಿದ ಆಲೂಗಡ್ಡೆ 2-3, ಹೆಚ್ಚಿಕೊ... ಓದನ್ನು ಮುಂದುವರಿಸಿ


Edited by: ಬಾನು

7 months ago

   
Image 1

ಸುಲಭವಾಗಿ ಮಾಡಬಹುದು 'ವೆಜಿಟೆಬಲ್' ಕಬಾಬ್ ; ರೆಸಿಪಿ ಮಾಡುವುದು ಹೇಗೆ

ಕಬಾಬ್ ಎಂದ ಕೂಡಲೇ ಹೆಚ್ಚಿನವರಿಗೆ ನಾನ್ ವೆಜ್ ನೆನಪಿಗೆ ಬರುತ್ತದೆ. ಆದರೆ, ವೆಜಿಟೆಬಲ್... ಓದನ್ನು ಮುಂದುವರಿಸಿ


Edited by: ಬಾನು

7 months ago

   
Image 1

ಶ್ರೀರಾಮನವಮಿಯಂದು ಹಬ್ಬದ ವಿಶೇಷ ಪಾನಕ, ನೀರು ಮಜ್ಜಿಗೆ, ಕೋಸಂಬರಿ ಮಾಡೋದು ಹೇಗೆ.?

ಇಂದು ರಾಮನವಮಿ ಹಬ್ಬದ ಸಂಭ್ರಮ. ರಾಮನವಮಿ ಪ್ರಯುಕ್ತ ರಾಜ್ಯದ ಶ್ರೀ ರಾಮ ದೇವಾಲಯಗಳಲ್ಲಿ... ಓದನ್ನು ಮುಂದುವರಿಸಿ


Edited by: ಮಾಲತಿ

7 months ago

   
Image 1

ಈರುಳ್ಳಿ ಪಕೋಡ ಮಾಡಿ ಬೋರ್‌ ಆಗಿದ್ಯಾ ಹಾಗಿದ್ರೆ ಟ್ರೈ ಮಾಡಿ ಮಿಕ್ಸ್‌ ವೆಜಿಟೆಬಲ್ಸ್‌ ಪಕೋಡ

ಬೇಕಾಗುವ ಪದಾರ್ಥಗಳು:

ಅಕ್ಕಿಹಿಟ್ಟು – ೨ ಚಮಚ

ಕಡ್ಲ... ಓದನ್ನು ಮುಂದುವರಿಸಿ


Edited by: ಮಾಲತಿ

7 months ago

   
Image 1

ಮಟನ್‌ನಲ್ಲಿ ಡಿಫರೆಂಟಾಗಿ ಪುದಿನಾ ಮಟನ್‌ ಕರ್ರಿ ಮಾಡುವ ವಿಧಾನ ತಿಳಿಯೋಣ !!

ಪುದಿನಾ ಮಟನ್‌ ಕರ್ರಿ ಮಾಡಲು ಬೇಕಾಗುವ ಬೇಕಾಗುವ ಸಾಮಗ್ರಿಗಳು

... ಓದನ್ನು ಮುಂದುವರಿಸಿ


Edited by: ಮಾಲತಿ

7 months ago

   
Image 1