ಬೇಸಿಗೆ ಬಿಸಿಯಲ್ಲಿ ಗರಿಗರಿಯಾಗಿ, ರುಚಿಕರವಾಗಿ ಮನೆಯಲ್ಲೇ ಮಾಡಿ ಆಲೂಗಡ್ಡೆಯ ಹಪ್ಪಳ

ಊಟ ಮಾಡುವಾಗ ಅನ್ನ-ಸಾಂಬಾರ್ ಅಥವಾ ಅನ್ನ-ರಸಂ ಜೊತೆ ಸೈಡ್ಸ್ ಆಗಿ ಸಂಡಿಗೆ ಇದ್ದರೆ ಅದರ ಮಜಾನೇ ಬೇರೆ. ಸಂಡಿಗೆ ರುಚಿನೇ ಹಾಗೇ ಹೊಟ್ಟೆ ತುಂಬಾ ಊಟ ಮಾಡುವಂತೆ ಮಾಡುತ್ತದೆ. ಬೇಸಿಗೆಗಾಲ ಬಂತು ಅಂದರೆ ಹಲವರ ಮನೆಯಲ್ಲಿ ಸಂಡಿಗೆ ತಯಾರಿ ಜೋರಾಗಿರುತ್ತದೆ. ಒಂದು ಬಾರಿ ಮಾಡುವ ಈ ಹಪ್ಪಳ ವರ್ಷವಿಡೀ ಬೇಕೆನ್ನಿಸುವಷ್ಟು ಮಾಡಿಕೊಂಡು ತಿನ್ನಬಹುದು.

 

ಇದರಲ್ಲಿ ಖಾರ ಕೂಡ ಕಡಿಮೆ ಇರುವುದರಿಂದ ಮಕ್ಕಳು ಸಹ ಇಷ್ಟಪಟ್ಟು ತಿನ್ನುತ್ತಾರೆ. ಗರಿಗರಿಯಾಗಿ, ರುಚಿಕರವಾಗಿ ನೀವು ನಿಮ್ಮ ಊಟದ ಜೊತೆ ಸವಿಯಲು ಹಪ್ಪಳವನ್ನು ರೆಡಿ ಮಾಡಿಟ್ಟುಕೊಳ್ಳಿ. ಸುಲಭವಾಗಿರುವ ಈ ರೆಸಿಪಿಯನ್ನು ನೀವು ಫಾಲೋ ಮಾಡಿದರೆ, ಯಾವುದೇ ರಿಸ್ಕ್ ಇಲ್ಲದೇ ವರ್ಷವಿಡೀ ಬೇಕಾಗುವಷ್ಟು ಟೇಸ್ಟಿ ಹಪ್ಪಳ ಮಾಡಿಕೊಂಡು ತಿನ್ನಬಹುದು. ಆಲೂಗಡ್ಡೆಯ ಹಪ್ಪಳವನ್ನು ಈಸಿಯಾಗಿ ಮಾಡುವ ವಿಧಾನ ನೋಡೋಣ.

 

ಊಟಕ್ಕೆ, ಅಥವಾ ಫ್ರೀ ಟೈಮ್‌ನಲ್ಲಿ ತಿನ್ನಲು ಹಪ್ಪಳ ತುಂಬಾ ಚೆನ್ನಾಗಿರುತ್ತದೆ. ಮಾರುಕಟ್ಟೆಯಲ್ಲೂ ವಿವಿಧ ರೀತಿಯ ಹಪ್ಪಳವನ್ನು ನೀವು ನೋಡಿರುತ್ತೀರಿ. ಇದನ್ನು ಮನೆಯಲ್ಲೂ ತುಂಬಾ ಸುಲಭವಾಗಿ ತಯಾರಿಸಬಹುದು. ನಾವಿಂದು ಆಲೂಗಡ್ಡೆ ಹಾಗೂ ಅಡುಗೆ ಮನೆಯಲ್ಲಿ ಸಿಗೋ ಕೆಲ ಸಿಂಪಲ್ ಸಾಮಾಗ್ರಿಗಳಿಂದ ಹಪ್ಪಳವನ್ನು ಹೇಗೆ ಮಾಡೋದು ಎಂಬುದನ್ನು ಹೇಳಿಕೊಡುತ್ತೇವೆ. ಆಲೂಗಡ್ಡೆ ಹಪ್ಪಳದ ಸಿಂಪಲ್ ರೆಸಿಪಿ ಇಲ್ಲಿದೆ.

 

ಬೇಕಾಗುವ ಪದಾರ್ಥಗಳು:
ಆಲೂಗಡ್ಡೆ - 1 ಕೆಜಿ
ಕಲ್ಲುಪ್ಪು - ರುಚಿಗೆ ತಕ್ಕಷ್ಟು
ಕೆಂಪು ಮೆಣಸಿನಪುಡಿ - 2 ಟೀಸ್ಪೂನ್
ಜೀರಿಗೆ - 1 ಟೀಸ್ಪೂನ್
ಎಣ್ಣೆ - ಹಪ್ಪಳ ತಯಾರಿಸಲ ಬೇಕಾಗುವಷ್ಟು

 

ಮಾಡುವ ವಿಧಾನ:
* ಮೊದಲಿಗೆ ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗೆದು ಮ್ಯಾಶ್ ಮಾಡಿ.
* ಅದಕ್ಕೆ ಕಲ್ಲುಪ್ಪು, ಕೆಂಪು ಮೆಣಸಿನಪುಡಿ ಹಾಗೂ ಜೀರಿಗೆ ಸೇರಿಸಿ ಹಿಟ್ಟಿನಂತೆ ಚೆನ್ನಾಗಿ ಮಿಶ್ರಣ ಮಾಡಿ.
* ಈಗ ಮಿಶ್ರಣದಿಂದ ಪುಟ್ಟ ಪುಟ್ಟ ಉಂಡೆಗಳನ್ನು ತಯಾರಿಸಿ.
* ಎರಡು ಪ್ಲಾಸ್ಟಿಕ್ ಹಾಳೆಗಳನ್ನು ತೆಗೆದುಕೊಳ್ಳಿ. ಒಂದು ಹಾಳೆಯ ಮೇಲ್ಭಾಗದಲ್ಲಿ ಸ್ವಲ್ಪ ಎಣ್ಣೆ ಸವರಿ, ಅದರ ಮೇಲೆ ಆಲೂಗಡ್ಡೆಯ ಉಂಡೆಯನ್ನಿಟ್ಟು, ಅದರ ಮೇಲೆ ಮತ್ತೆ ಎಣ್ಣೆ ಸವರಿದ ಮತ್ತೊಂದು ಪ್ಲಾಸ್ಟಿಕ್ ಹಾಳೆಯನ್ನಿಡಿ.

 

* ಈಗ ನಿಧಾನವಾಗಿ ಕೈಗಳಿಂದ ಒತ್ತಿಕೊಂಡು ತೆಳ್ಳಗಿನ ಪೂರಿಯಂತೆ ಮಾಡಿ. ನಿಮ್ಮ ಬಳಿ ರೋಲಿಂಗ್ ಪಿನ್ ಇದ್ದರೆ ಲಟ್ಟಿಸಲು ಅದನ್ನು ಬಳಸಬಹುದು.
* ಈಗ ಪ್ಲಾಸ್ಟಿಕ್‌ನಿಂದ ಹಪ್ಪಳವನ್ನು ನಿಧಾನವಾಗಿ ಬೇರ್ಪಡಿಸಿ, ಒಂದು ದೊಡ್ಡ ಪ್ಲಾಸ್ಟಿಕ್ ಹಾಳೆಯಲ್ಲಿ ಹರಡಿ. ಎಲ್ಲಾ ಹಪ್ಪಳವನ್ನು ಹೀಗೇ ಮುಂದುವರಿಸಿ, ದೊಡ್ಡ ಪ್ಲಾಸ್ಟಿಕ್ ಹಾಳೆಯಲ್ಲಿ ಜೋಡಿಸಿಕೊಳ್ಳಿ.
* ಈಗ ಹಪ್ಪಳವನ್ನು ಜೋಡಿಸಿದ ಪ್ಲಾಸ್ಟಿಕ್ ಹಾಳೆಯನ್ನು ಸೂರ್ಯನ ಬಿಸಿಲಿನಲ್ಲಿ ಇಡಿ. ಹಪ್ಪಳ ಎರಡೂ ಬದಿ ಚೆನ್ನಾಗಿ ಒಣಗಲು ಒಂದೆರಡು ದಿನ ಬೇಕಾಗಬಹುದು.
* ಹಪ್ಪಳ ಸಂಪೂರ್ಣ ಒಣಗಿದ ಬಳಿಕ ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿಡಿ. ನಿಮಗೆ ಬೇಕೆನಿಸಿದಾಗ ಇದನ್ನು ಬಿಸಿ ಎಣ್ಣೆಯಲ್ಲಿ ಹುರಿದುಕೊಂಡು ಸವಿಯಬಹುದು.

 

 


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

4 months ago

   
Image 1
Image 1

ವಾವ್.. ಭಾನುವಾರದ ಸ್ಪೆಷಲ್ ರುಚಿಯಾದ ಮಟನ್ ಕೈಮಾ ಉಂಡೆ ಸಾರು

ಉಂಡೆಗೆ ಬೇಕಾಗುವ ಪದಾರ್ಥಗಳು ಏನೇನು... 

ಮಟನ್ ಕೈಮಾ... ಓದನ್ನು ಮುಂದುವರಿಸಿ


Edited by: ಬಾನು

3 months ago

   
Image 1

ಬರೀ ಚಿಕನ್ ತಿಂದು ಬೋರ್ ಆಗಿದ್ಯಾ? ಸಂಡೇ ಸ್ಪೆಷಲ್.. ಎಂದಾದರೂ ಟೇಸ್ಟಿ ಮಾವಿನಕಾಯಿ ಚಿಕನ್ ಗ್ರೇವಿ ತಿಂದಿದ್ದೀರಾ!?..

ಚಿಕನ್ ಗೆ ಹಾಕುವ ಮಸಾಲೆ, ಖಾರ ಹಾಗೂ ಮಾವಿನಕಾಯಿಯಲ್ಲಿನ ಹುಳಿ ಡಿಫರೆಂಟ್ ಟೇಸ್ಟ್ ಕೊಡು... ಓದನ್ನು ಮುಂದುವರಿಸಿ


Edited by: ಬಾನು

3 months ago

   
Image 1

ಮಾವಿನಕಾಯಿ ಸೀಜನ್‌ ನಲ್ಲಿ ಒಮ್ಮೆಯಾದರೂ ಟ್ರೈ ಮಾಡಿ ಮಾವಿನಕಾಯಿ ಚಟ್ನಿ..!! ಸೂಪರ್‌ ಟೇಸ್ಟ್

ಈ ಸೀಸನ್ ನಲ್ಲಿ ನೀವು ಮಾವಿನಕಾಯಿ ಚಟ್ನಿ ತಿಂದಿದ್ದೀರಾ? ತಿಂದಿಲ್ಲ ಅಂದರೆ ಈ ಸೂಪರ್ ರ... ಓದನ್ನು ಮುಂದುವರಿಸಿ


Edited by: ಮಾಲತಿ

4 months ago

   
Image 1

ಈ ಸೀಜನ್‍ನಲ್ಲಿ ಸಾಮಾನ್ಯವಾಗಿ ಸಿಗೋ ಮಾವಿನಕಾಯಿ ಜಲ್‌ʼಜೀರಾ ನೀರು ಒಮ್ಮೆ ಮಾಡಿ ನೋಡಿ ..!

ಬೇಸಿಗೆ ಅಂದ್ಮೇಲೆ ಮಾವಿನಕಾಯಿ ಸೀಜನ್ ಕೂಡ ಹೌದು. ಹೀಗಾಗಿ ಈ ಸೀಜನ್‍ನಲ್ಲಿ ಸಿಗೋ ಮಾವಿ... ಓದನ್ನು ಮುಂದುವರಿಸಿ


Edited by: ಮಾಲತಿ

4 months ago

   
Image 1

ಪುಳಿಯೋಗರೆ, ಚಿತ್ರಾನ್ನ ತಿಂದು ಬೇಸರ ಆಗಿದ್ರೆ ನಾಲಿಗೆಗೆ ರುಚಿಸೋ ಮಸಾಲಾ ರೈಸ್‌ ಟ್ರೈ ಮಾಡಿ..ಈ ಮಸಾಲ ರೈಸ್‌ ಸಖತ್‌ ಟೇಸ್ಟಿ

ಒಂದೇ ರೀತಿಯ ರೈಸ್‌ಬಾತ್‌ ಅಂದ್ರೆ ಯಾರಿಗೆ ಹಿಡಿಸುತ್ತೆ ಹೇಳಿ.  ರೈಸ್‌ಬಾತ್‌ಗಳು... ಓದನ್ನು ಮುಂದುವರಿಸಿ


Edited by: ಬಾನು

4 months ago

   
Image 1

ಮಕ್ಕಳ ಬಾಯಲ್ಲಿ ನೀರೂರಿಸುತ್ತೆ ʼಪೋಟ್ಯಾಟೋʼ ಲಾಲಿಪಾಪ್ :ರೆಸಿಪಿ ಮಾಡುವುದು ಹೇಗೆ

ಬೇಕಾಗುವಪದಾರ್ಥಗಳು :

ಬೇಯಿಸಿದ ಆಲೂಗಡ್ಡೆ 2-3, ಹೆಚ್ಚಿಕೊ... ಓದನ್ನು ಮುಂದುವರಿಸಿ


Edited by: ಬಾನು

4 months ago

   
Image 1

ಸುಲಭವಾಗಿ ಮಾಡಬಹುದು 'ವೆಜಿಟೆಬಲ್' ಕಬಾಬ್ ; ರೆಸಿಪಿ ಮಾಡುವುದು ಹೇಗೆ

ಕಬಾಬ್ ಎಂದ ಕೂಡಲೇ ಹೆಚ್ಚಿನವರಿಗೆ ನಾನ್ ವೆಜ್ ನೆನಪಿಗೆ ಬರುತ್ತದೆ. ಆದರೆ, ವೆಜಿಟೆಬಲ್... ಓದನ್ನು ಮುಂದುವರಿಸಿ


Edited by: ಬಾನು

4 months ago

   
Image 1

ಶ್ರೀರಾಮನವಮಿಯಂದು ಹಬ್ಬದ ವಿಶೇಷ ಪಾನಕ, ನೀರು ಮಜ್ಜಿಗೆ, ಕೋಸಂಬರಿ ಮಾಡೋದು ಹೇಗೆ.?

ಇಂದು ರಾಮನವಮಿ ಹಬ್ಬದ ಸಂಭ್ರಮ. ರಾಮನವಮಿ ಪ್ರಯುಕ್ತ ರಾಜ್ಯದ ಶ್ರೀ ರಾಮ ದೇವಾಲಯಗಳಲ್ಲಿ... ಓದನ್ನು ಮುಂದುವರಿಸಿ


Edited by: ಮಾಲತಿ

4 months ago

   
Image 1

ಈರುಳ್ಳಿ ಪಕೋಡ ಮಾಡಿ ಬೋರ್‌ ಆಗಿದ್ಯಾ ಹಾಗಿದ್ರೆ ಟ್ರೈ ಮಾಡಿ ಮಿಕ್ಸ್‌ ವೆಜಿಟೆಬಲ್ಸ್‌ ಪಕೋಡ

ಬೇಕಾಗುವ ಪದಾರ್ಥಗಳು:

ಅಕ್ಕಿಹಿಟ್ಟು – ೨ ಚಮಚ

ಕಡ್ಲ... ಓದನ್ನು ಮುಂದುವರಿಸಿ


Edited by: ಮಾಲತಿ

5 months ago

   
Image 1

ಮಟನ್‌ನಲ್ಲಿ ಡಿಫರೆಂಟಾಗಿ ಪುದಿನಾ ಮಟನ್‌ ಕರ್ರಿ ಮಾಡುವ ವಿಧಾನ ತಿಳಿಯೋಣ !!

ಪುದಿನಾ ಮಟನ್‌ ಕರ್ರಿ ಮಾಡಲು ಬೇಕಾಗುವ ಬೇಕಾಗುವ ಸಾಮಗ್ರಿಗಳು

... ಓದನ್ನು ಮುಂದುವರಿಸಿ


Edited by: ಮಾಲತಿ

5 months ago

   
Image 1