ಪುಳಿಯೋಗರೆ, ಚಿತ್ರಾನ್ನ ತಿಂದು ಬೇಸರ ಆಗಿದ್ರೆ ನಾಲಿಗೆಗೆ ರುಚಿಸೋ ಮಸಾಲಾ ರೈಸ್‌ ಟ್ರೈ ಮಾಡಿ..ಈ ಮಸಾಲ ರೈಸ್‌ ಸಖತ್‌ ಟೇಸ್ಟಿ

ಒಂದೇ ರೀತಿಯ ರೈಸ್‌ಬಾತ್‌ ಅಂದ್ರೆ ಯಾರಿಗೆ ಹಿಡಿಸುತ್ತೆ ಹೇಳಿ.  ರೈಸ್‌ಬಾತ್‌ಗಳು ಮಾಡೋದು ತುಂಬಾ ಸುಲಭ, ಇದು ಹೊಟ್ಟೆ ತುಂಬುವಂತೆ ಮಾಡುತ್ತದೆ ಕೂಡ. ಹಾಗಂತ ಯಾವಾಗ್ಲೂಅದಕ್ಕಾಗಿ ಭಿನ್ನ ರುಚಿಯನ್ನು ಟ್ರೈ ಮಾಡ್ಲೇಬೇಕು. ಪಲಾವ್‌, ಪುಳಿಯೋಗರೆ, ಚಿತ್ರಾನ್ನ, ವಾಂಗಿಬಾತ್‌ ಇದೆಲ್ಲಾ ಬಿಟ್ಟು ಇನ್ನೇನು ಮಾಡಬಹುದು ಎಂದು ನಿಮಗೂ ಅನ್ನಿಸಿರಬಹುದು.

 

ಹಲವು ಬಾರಿ ಮನೆಯಲ್ಲಿ ತರಕಾರಿ ಇರುವುದಿಲ್ಲ, ಇನ್ನೂ ಕೆಲವೊಮ್ಮೆ ಮಾಡಿದ ಅನ್ನ ಮಿಕ್ಕಿರುತ್ತದೆ. ಅದನ್ನು ಎಸೆಯಲು ಮನಸ್ಸು ಬರುವುದಿಲ್ಲ. ಇನ್ನೂ ಕೆಲವೊಮ್ಮೆ ವಿಶೇಷವಾಗಿ ಏನಾದ್ರೂ ಮಾಡಬೇಕು ಅನ್ನಿಸುತ್ತೆ, ಈ ಯಾವುದೇ ಸಂದರ್ಭಕ್ಕಾದ್ರೂ ಹೊಂದುವುದೇ ಮಸಾಲಾ ರೈಸ್‌. ಅನ್ನ ಬೇಯಿಸಿಟ್ಟುಕೊಂಡರೆ ಸಾಕು 5 ನಿಮಿಷಗಳಲ್ಲಿ ತಯಾರಾಗೋ ಈ ಮಸಾಲ ರೈಸ್‌ ಸಖತ್‌ ಟೇಸ್ಟಿ ಆಗಿರೋದು ಸುಳ್ಳಲ್ಲ.

 

ಮಸಾಲಾ ರೈಸ್

ಬೇಕಾಗುವ ಸಾಮಗ್ರಿಗಳು: ಎಣ್ಣೆ - ಎರಡು ಚಮಚ, ಅನ್ನ - ಎರಡು ಕಪ್‌ಗಳು, ಕೊತ್ತಂಬರಿ ಪುಡಿ - ಎರಡು ಚಮಚ, ಗೋಡಂಬಿ - 5 ರಿಂದ 6, ಖಾರದ ಪುಡಿ - ಒಂದು ಚಮಚ, ಕಾಳುಮೆಣಸು - ಎರಡು, ಈರುಳ್ಳಿ ಪೇಸ್ಟ್ - ಅರ್ಧ ಕಪ್, ಕರಿಬೇವು - 5 ರಿಂದ 6, ಜಾಯಿಕಾಯಿ - 1, ಶೇಂಗಾ - ಎರಡು ಚಮಚ, ಪುದಿನಾ - ಒಂದು ಚಮಚ, ಟೊಮೆಟೊ ಪೇಸ್ಟ್ - ಮೂರು ಚಮಚ, ಅರಿಶಿನ - ಕಾಲು ಚಮಚ, ಕೊತ್ತಂಬರಿ ಪುಡಿ - ಅರ್ಧ ಚಮಚ, ಗರಂ ಮಸಾಲಾ - ಅರ್ಧ ಚಮಚ,

 

ತಯಾರಿಸುವ ವಿಧಾನ: ಮೊದಲು ಅನ್ನ ಬೇಯಿಸಿಟ್ಟುಕೊಳ್ಳಿ. ಒಂದು ಕಡಾಯಿಯನ್ನು ಪಾತ್ರೆಯ ಮೇಲೆ ಇರಿಸಿ, ಬಿಸಿಯಾದ ಮೇಲೆ ಎಣ್ಣೆ ಹಾಕಿ. ನಂತರ ಸಾಸಿವೆ, ಜೀರಿಗೆ, ಉದ್ದಿನಬೇಳೆ, ಕಡಲೆಬೇಳೆ ಹಾಕಿ ಒಗ್ಗರಣೆ ತಯಾರಿಸಿಕೊಳ್ಳಿ. ಶೇಂಗಾ ಮತ್ತು ಗೋಡಂಬಿ ಸೇರಿಸಿ ಅವುಗಳನ್ನು ಫ್ರೈ ಮಾಡಿಕೊಳ್ಳಿ. ನಂತರ ಹಸಿರು ಮೆಣಸಿನಕಾಯಿ, ಕಾಳುಮೆಣಸು ಸೇರಿಸಿ ಕೈಯಾಡಿಸಿ. ತೆಳುವಾಗಿ ಹೆಚ್ಚಿಕೊಂಡ ಈರುಳ್ಳಿ ಹಾಕಿ ಬಣ್ಣ ಬದಲಾಗುವವರೆಗೂ ಹುರಿದುಕೊಳ್ಳಿ. ಇದಕ್ಕೆ ಪುದಿನಾ ಮತ್ತು ಟೊಮೆಟೊ ಪೇಸ್ಟ್ ಹಾಕಿ ಎಲ್ಲವನ್ನೂ ಚೆನ್ನಾಗಿ ಫ್ರೈ ಮಾಡಿ. ಕರಿಬೇವು, ಕೊತ್ತಂಬರಿ ಪುಡಿ, ಗರಂ ಮಸಾಲ, ಅರಿಶಿನ ಸೇರಿಸಿ ಮಿಶ್ರಣ ಮಾಡಿ, ಸ್ವಲ್ಪ ಉಪ್ಪು ಸೇರಿಸಿ. ಈ ನಿಮ್ಮ ಮುಂದೆ ಮಸಾಲೆ ರೆಡಿ. ಇದಕ್ಕೆ ಅನ್ನವನ್ನು ಸೇರಿಸಿ, ಪುಳಿಯೋಗರೆ ರೀತಿ ಚೆನ್ನಾಗಿ ಕಲೆಸಿ. ಮೇಲಿನಿಂದ ಕೊತ್ತಂಬರಿ ಸೊಪ್ಪು ಉದುರಿಸಿ.

 

ನಿಮ್ಮ ಮನೆಯಲ್ಲಿ ಅನ್ನ ಉಳಿದಿದ್ದರೆ ಪಟ್‌ ಅಂತ ಮಸಾಲೆ ರೈಸ್‌ ತಯಾರಿಸಬಹುದು. ಗೋಡಂಬಿ, ಶೇಂಗಾ ಮುಂತಾದುವನ್ನು ಹಾಕಿರುವ ಕಾರಣ ಇದು ಮಕ್ಕಳಿಗೆ ಸಖತ್‌ ಇಷ್ಟವಾಗುತ್ತದೆ. ವಿಶೇಷವಾಗಿ, ಇದು ಉತ್ತಮ ಲಂಚ್ ಬಾಕ್ಸ್ ರೆಸಿಪಿ. ರಾತ್ರಿಯ ಊಟದಲ್ಲಿ ತಿನ್ನಲು ಉತ್ತಮ ಆಯ್ಕೆ ಎಂದು ಹೇಳಬಹುದು. ಮನೆಯಲ್ಲಿ ತರಕಾರಿ ಇಲ್ಲದಿದ್ದಾಗ ಈ ಮಸಾಲಾ ರೈಸ್ ಬೆಸ್ಟ್‌ ಆಯ್ಕೆ. ಕೇವಲ ಒಂದು ಈರುಳ್ಳಿ ಮತ್ತು ಒಂದು ಟೊಮೆಟೊ ಇದ್ರೆ ಸೂಪರ್‌ ಟೇಸ್ಟಿ ಮಸಾಲಾ ರೈಸ್‌ ಮಾಡಬಹುದು. ಈ ಮಸಾಲಾ ರೈಸ್ ಒಮ್ಮೆ ಟ್ರೈ ಮಾಡಿ ನೋಡಿ ನಿಮಗೆ ಖಂಡಿತ ಇಷ್ಟ ಆಗುತ್ತೆ

 


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

4 months ago

   
Image 1
Image 1

ವಾವ್.. ಭಾನುವಾರದ ಸ್ಪೆಷಲ್ ರುಚಿಯಾದ ಮಟನ್ ಕೈಮಾ ಉಂಡೆ ಸಾರು

ಉಂಡೆಗೆ ಬೇಕಾಗುವ ಪದಾರ್ಥಗಳು ಏನೇನು... 

ಮಟನ್ ಕೈಮಾ... ಓದನ್ನು ಮುಂದುವರಿಸಿ


Edited by: ಬಾನು

3 months ago

   
Image 1

ಬರೀ ಚಿಕನ್ ತಿಂದು ಬೋರ್ ಆಗಿದ್ಯಾ? ಸಂಡೇ ಸ್ಪೆಷಲ್.. ಎಂದಾದರೂ ಟೇಸ್ಟಿ ಮಾವಿನಕಾಯಿ ಚಿಕನ್ ಗ್ರೇವಿ ತಿಂದಿದ್ದೀರಾ!?..

ಚಿಕನ್ ಗೆ ಹಾಕುವ ಮಸಾಲೆ, ಖಾರ ಹಾಗೂ ಮಾವಿನಕಾಯಿಯಲ್ಲಿನ ಹುಳಿ ಡಿಫರೆಂಟ್ ಟೇಸ್ಟ್ ಕೊಡು... ಓದನ್ನು ಮುಂದುವರಿಸಿ


Edited by: ಬಾನು

3 months ago

   
Image 1

ಮಾವಿನಕಾಯಿ ಸೀಜನ್‌ ನಲ್ಲಿ ಒಮ್ಮೆಯಾದರೂ ಟ್ರೈ ಮಾಡಿ ಮಾವಿನಕಾಯಿ ಚಟ್ನಿ..!! ಸೂಪರ್‌ ಟೇಸ್ಟ್

ಈ ಸೀಸನ್ ನಲ್ಲಿ ನೀವು ಮಾವಿನಕಾಯಿ ಚಟ್ನಿ ತಿಂದಿದ್ದೀರಾ? ತಿಂದಿಲ್ಲ ಅಂದರೆ ಈ ಸೂಪರ್ ರ... ಓದನ್ನು ಮುಂದುವರಿಸಿ


Edited by: ಮಾಲತಿ

4 months ago

   
Image 1

ಈ ಸೀಜನ್‍ನಲ್ಲಿ ಸಾಮಾನ್ಯವಾಗಿ ಸಿಗೋ ಮಾವಿನಕಾಯಿ ಜಲ್‌ʼಜೀರಾ ನೀರು ಒಮ್ಮೆ ಮಾಡಿ ನೋಡಿ ..!

ಬೇಸಿಗೆ ಅಂದ್ಮೇಲೆ ಮಾವಿನಕಾಯಿ ಸೀಜನ್ ಕೂಡ ಹೌದು. ಹೀಗಾಗಿ ಈ ಸೀಜನ್‍ನಲ್ಲಿ ಸಿಗೋ ಮಾವಿ... ಓದನ್ನು ಮುಂದುವರಿಸಿ


Edited by: ಮಾಲತಿ

4 months ago

   
Image 1

ಬೇಸಿಗೆ ಬಿಸಿಯಲ್ಲಿ ಗರಿಗರಿಯಾಗಿ, ರುಚಿಕರವಾಗಿ ಮನೆಯಲ್ಲೇ ಮಾಡಿ ಆಲೂಗಡ್ಡೆಯ ಹಪ್ಪಳ

ಊಟ ಮಾಡುವಾಗ ಅನ್ನ-ಸಾಂಬಾರ್ ಅಥವಾ ಅನ್ನ-ರಸಂ ಜೊತೆ ಸೈಡ್ಸ್ ಆಗಿ ಸಂಡಿಗೆ ಇದ್ದರೆ ಅದರ... ಓದನ್ನು ಮುಂದುವರಿಸಿ


Edited by: ಬಾನು

4 months ago

   
Image 1

ಮಕ್ಕಳ ಬಾಯಲ್ಲಿ ನೀರೂರಿಸುತ್ತೆ ʼಪೋಟ್ಯಾಟೋʼ ಲಾಲಿಪಾಪ್ :ರೆಸಿಪಿ ಮಾಡುವುದು ಹೇಗೆ

ಬೇಕಾಗುವಪದಾರ್ಥಗಳು :

ಬೇಯಿಸಿದ ಆಲೂಗಡ್ಡೆ 2-3, ಹೆಚ್ಚಿಕೊ... ಓದನ್ನು ಮುಂದುವರಿಸಿ


Edited by: ಬಾನು

4 months ago

   
Image 1

ಸುಲಭವಾಗಿ ಮಾಡಬಹುದು 'ವೆಜಿಟೆಬಲ್' ಕಬಾಬ್ ; ರೆಸಿಪಿ ಮಾಡುವುದು ಹೇಗೆ

ಕಬಾಬ್ ಎಂದ ಕೂಡಲೇ ಹೆಚ್ಚಿನವರಿಗೆ ನಾನ್ ವೆಜ್ ನೆನಪಿಗೆ ಬರುತ್ತದೆ. ಆದರೆ, ವೆಜಿಟೆಬಲ್... ಓದನ್ನು ಮುಂದುವರಿಸಿ


Edited by: ಬಾನು

4 months ago

   
Image 1

ಶ್ರೀರಾಮನವಮಿಯಂದು ಹಬ್ಬದ ವಿಶೇಷ ಪಾನಕ, ನೀರು ಮಜ್ಜಿಗೆ, ಕೋಸಂಬರಿ ಮಾಡೋದು ಹೇಗೆ.?

ಇಂದು ರಾಮನವಮಿ ಹಬ್ಬದ ಸಂಭ್ರಮ. ರಾಮನವಮಿ ಪ್ರಯುಕ್ತ ರಾಜ್ಯದ ಶ್ರೀ ರಾಮ ದೇವಾಲಯಗಳಲ್ಲಿ... ಓದನ್ನು ಮುಂದುವರಿಸಿ


Edited by: ಮಾಲತಿ

4 months ago

   
Image 1

ಈರುಳ್ಳಿ ಪಕೋಡ ಮಾಡಿ ಬೋರ್‌ ಆಗಿದ್ಯಾ ಹಾಗಿದ್ರೆ ಟ್ರೈ ಮಾಡಿ ಮಿಕ್ಸ್‌ ವೆಜಿಟೆಬಲ್ಸ್‌ ಪಕೋಡ

ಬೇಕಾಗುವ ಪದಾರ್ಥಗಳು:

ಅಕ್ಕಿಹಿಟ್ಟು – ೨ ಚಮಚ

ಕಡ್ಲ... ಓದನ್ನು ಮುಂದುವರಿಸಿ


Edited by: ಮಾಲತಿ

5 months ago

   
Image 1

ಮಟನ್‌ನಲ್ಲಿ ಡಿಫರೆಂಟಾಗಿ ಪುದಿನಾ ಮಟನ್‌ ಕರ್ರಿ ಮಾಡುವ ವಿಧಾನ ತಿಳಿಯೋಣ !!

ಪುದಿನಾ ಮಟನ್‌ ಕರ್ರಿ ಮಾಡಲು ಬೇಕಾಗುವ ಬೇಕಾಗುವ ಸಾಮಗ್ರಿಗಳು

... ಓದನ್ನು ಮುಂದುವರಿಸಿ


Edited by: ಮಾಲತಿ

5 months ago

   
Image 1