ಮಾವಿನಕಾಯಿ ಸೀಜನ್ ನಲ್ಲಿ ಒಮ್ಮೆಯಾದರೂ ಟ್ರೈ ಮಾಡಿ ಮಾವಿನಕಾಯಿ ಚಟ್ನಿ..!! ಸೂಪರ್ ಟೇಸ್ಟ್
ಈ ಸೀಸನ್ ನಲ್ಲಿ ನೀವು ಮಾವಿನಕಾಯಿ ಚಟ್ನಿ ತಿಂದಿದ್ದೀರಾ? ತಿಂದಿಲ್ಲ ಅಂದರೆ ಈ ಸೂಪರ್ ರೆಸಿಪಿಯನ್ನು ನೀವು ಟ್ರೈ ಮಾಡಬೇಕು. ಮಾಡುತ್ತಿರುವಾಗಲೇ ಬಾಯಲ್ಲಿ ನೀರೂರಿಸುವಂತ ಚಟ್ನಿ. ಒಮ್ಮೆ ನೀವು ಮನೆಯಲ್ಲಿ ಟ್ರೈ ಮಾಡಿದರೆ ಮಾವಿನಕಾಯಿ ಸೀಸನ್ ಮುಗಿಯುವವರೆಗೂ ತಪ್ಪದೇ ಮಾಡುತ್ತಿರುತ್ತೀರ. ಮಾವಿನಕಾಯಿ-ಕೊಬ್ಬರಿ ಚಟ್ನಿ ಮಾಡುವುದು ಹೇಗೆಂದು ನೋಡೋಣ.
ಮಾವಿನಕಾಯಿ ಚಟ್ನಿ ಮಾಡಲು ಬೇಕಾಗುವ ಸಾಮಗ್ರಿಗಳು:
ಹುಳಿ ಮಾವಿನಕಾಯಿ: ಅರ್ಧ.
ತೆಂಗಿನತುರಿ: 1 ಕಪ್.
ಕಡಲೇಬೀಜ: 2 ಟೀ ಸ್ಪೂನ್.
ಹಸಿಮೆಣಸಿನಕಾಯಿ: 6.
ಜೀರಿಗೆ: 1 ಟೀ ಸ್ಪೂನ್.
ಬೆಳ್ಳುಳ್ಳಿ ಎಸಳು: 6-7.
ಕೊತ್ತಂಬರಿಸೊಪ್ಪು: ಸ್ವಲ್ಪ.
ಕರಿಬೇವು: ಸ್ವಲ್ಪ.
ಉಪ್ಪು: ರುಚಿಗೆ ತಕ್ಕಷ್ಟು.
ಎಣ್ಣೆ: 1 ಟೀ ಸ್ಪೂನ್.
ಸಾಸಿವೆ: 1 ಟೀ ಸ್ಪೂನ್.
ಕಡಲೇಬೇಳೆ – 1 ಟೀ ಸ್ಪೂನ್.
ಉದ್ದಿನಬೇಳೆ – 1 ಟೀ ಸ್ಪೂನ್.
ಒಣಮೆಣಸಿನಕಾಯಿ – 2.
ಇಂಗು: ಚಿಟಿಕೆ.
ಶುಂಠಿ ತುರಿ: ಕಾಲು ಟೀ ಸ್ಪೂನ್.
ಮಾಡುವ ವಿಧಾನ:
ಮೊದಲಿಗೆ ಅರ್ಧ ಹುಳಿ ಮಾವಿನಕಾಯಿಯನ್ನು ಸಣ್ಣದಾಗಿ ಕಟ್ ಮಾಡಿಟ್ಟುಕೊಳ್ಳಬೇಕು. ಸ್ಟೌವ್ ಮೇಲೆ ಒಂದು ಬಾಣಲಿ ಇಟ್ಟು ಇದಕ್ಕೆ 2 ಟೀ ಸ್ಪೂನ್ ಕಡಲೇಬೀಜ ಹಾಕಿ ಫ್ರೈ ಮಾಡಬೇಕು. ನಂತರ ಇದನ್ನು ಮಿಕ್ಸಿ ಜಾರಿಗೆ ಹಾಕಿಕೊಳ್ಳಬೇಕು. ಇದರ ಜೊತೆಗೆ 6 ಹಸಿಮೆಣಸಿನಕಾಯಿ, ಅರ್ಧ ಟೀ ಸ್ಪೂನ್ ಜೀರಿಗೆ, 6-7 ಬೆಳ್ಳುಳ್ಳಿ ಎಸಳು, ರುಚಿಗೆ ತಕ್ಕಷ್ಟು ಕಲ್ಲು ಉಪ್ಪು ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಬೇಕು. ಇದೇ ಮಿಶ್ರಣಕ್ಕೆ 1 ಕಪ್ ತೆಂಗಿನತುರಿ, ಕೊತ್ತಂಬರಿಸೊಪ್ಪು ಸ್ವಲ್ಪ, ಸ್ವಲ್ಪ ನೀರನ್ನು ಹಾಕಿ ಮತ್ತೆ ತರಿತರಿಯಾಗಿ ರುಬ್ಬಿಕೊಳ್ಳಬೇಕು. ಕೊನೆಯದಾಗಿ ಹಚ್ಚಿಟ್ಟಿರುವ ಹುಳಿಮಾವಿನಕಾಯಿ ಪೀಸ್ ಗಳನ್ನು ಹಾಕಿ ಚಟ್ನಿ ಹದಕ್ಕೆ ರುಬ್ಬಿಕೊಳ್ಳಬೇಕು. ಸ್ಟೌವ್ ಮೇಲೆ ಒಗ್ಗರಣೆಗೆ ಚಿಕ್ಕ ಬಾಣಲಿ ಇಟ್ಟು, ಇದಕ್ಕೆ 1 ಟೀ ಸ್ಪೂನ್ ಎಣ್ಣೆ ಹಾಕಿಕೊಂಡು ಕಾಯಿಸಿಕೊಳ್ಳಬೇಕು. ಎಣ್ಣೆ ಕಾದ ಬಳಿಕ 1 ಟೀ ಸ್ಪೂನ್ ಸಾಸಿವೆ, 1 ಟೀ ಸ್ಪೂನ್ ಕಡಲೇಬೇಳೆ, 1 ಟೀ ಸ್ಪೂನ್ ಉದ್ದಿನಬೇಳೆ, 2 ಒಣಮೆಣಸಿನಕಾಯಿ ಹಾಕಿ ಸ್ವಲ್ಪ ಫ್ರೈ ಮಾಡಿಕೊಳ್ಳಬೇಕು. ನಂತರ ಇದಕ್ಕೆ ಅರ್ಧ ಟೀ ಸ್ಪೂನ್ ಜೀರಿಗೆ, ಚಿಟಿಕೆ ಇಂಗು, ಸಣ್ಣಗೆ ತುರಿದ ಶುಂಠಿ ಕಾಲು ಟೀ ಸ್ಪೂನ್ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ಕೊನೆಯದಾಗಿ ಸ್ವಲ್ಪ ಕರಿಬೇವು, ಅರ್ಧ ಟೀ ಸ್ಪೂನ್ ಅರಿಶಿಣಪುಡಿ ಹಾಕಿ ಮಿಕ್ಸ್ ಮಾಡಿ ಸ್ಟೌವ್ ಆಫ್ ಮಾಡಿಕೊಳ್ಳಬೇಕು. ಒಗ್ಗರಣೆಯನ್ನು ಮಾವಿನಕಾಯಿ-ಕೊಬ್ಬರಿ ಚಟ್ನಿಗೆ ಹಾಕಿ ಮಿಕ್ಸ್ ಮಾಡಬೇಕು. ಈ ರೀತಿ ಮಾಡಿದರೆ ಬಿಸಿಬಿಸಿ ಅನ್ನಕ್ಕೆ ಸೂಪರ್ ಟೇಸ್ಟ್ ಕೊಡುವಂತಹ ಮಾವಿನಕಾಯಿ-ಕೊಬ್ಬರಿ ಚಟ್ನಿ ರೆಡಿಯಾಗುತ್ತದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ವಾವ್.. ಭಾನುವಾರದ ಸ್ಪೆಷಲ್ ರುಚಿಯಾದ ಮಟನ್ ಕೈಮಾ ಉಂಡೆ ಸಾರು
ಉಂಡೆಗೆ ಬೇಕಾಗುವ ಪದಾರ್ಥಗಳು ಏನೇನು...
ಮಟನ್ ಕೈಮಾ... ಓದನ್ನು ಮುಂದುವರಿಸಿ
ಬರೀ ಚಿಕನ್ ತಿಂದು ಬೋರ್ ಆಗಿದ್ಯಾ? ಸಂಡೇ ಸ್ಪೆಷಲ್.. ಎಂದಾದರೂ ಟೇಸ್ಟಿ ಮಾವಿನಕಾಯಿ ಚಿಕನ್ ಗ್ರೇವಿ ತಿಂದಿದ್ದೀರಾ!?..
ಚಿಕನ್ ಗೆ ಹಾಕುವ ಮಸಾಲೆ, ಖಾರ ಹಾಗೂ ಮಾವಿನಕಾಯಿಯಲ್ಲಿನ ಹುಳಿ ಡಿಫರೆಂಟ್ ಟೇಸ್ಟ್ ಕೊಡು... ಓದನ್ನು ಮುಂದುವರಿಸಿ
ಈ ಸೀಜನ್‍ನಲ್ಲಿ ಸಾಮಾನ್ಯವಾಗಿ ಸಿಗೋ ಮಾವಿನಕಾಯಿ ಜಲ್ʼಜೀರಾ ನೀರು ಒಮ್ಮೆ ಮಾಡಿ ನೋಡಿ ..!
ಬೇಸಿಗೆ ಅಂದ್ಮೇಲೆ ಮಾವಿನಕಾಯಿ ಸೀಜನ್ ಕೂಡ ಹೌದು. ಹೀಗಾಗಿ ಈ ಸೀಜನ್‍ನಲ್ಲಿ ಸಿಗೋ ಮಾವಿ... ಓದನ್ನು ಮುಂದುವರಿಸಿ
ಬೇಸಿಗೆ ಬಿಸಿಯಲ್ಲಿ ಗರಿಗರಿಯಾಗಿ, ರುಚಿಕರವಾಗಿ ಮನೆಯಲ್ಲೇ ಮಾಡಿ ಆಲೂಗಡ್ಡೆಯ ಹಪ್ಪಳ
ಊಟ ಮಾಡುವಾಗ ಅನ್ನ-ಸಾಂಬಾರ್ ಅಥವಾ ಅನ್ನ-ರಸಂ ಜೊತೆ ಸೈಡ್ಸ್ ಆಗಿ ಸಂಡಿಗೆ ಇದ್ದರೆ ಅದರ... ಓದನ್ನು ಮುಂದುವರಿಸಿ
ಪುಳಿಯೋಗರೆ, ಚಿತ್ರಾನ್ನ ತಿಂದು ಬೇಸರ ಆಗಿದ್ರೆ ನಾಲಿಗೆಗೆ ರುಚಿಸೋ ಮಸಾಲಾ ರೈಸ್ ಟ್ರೈ ಮಾಡಿ..ಈ ಮಸಾಲ ರೈಸ್ ಸಖತ್ ಟೇಸ್ಟಿ
ಒಂದೇ ರೀತಿಯ ರೈಸ್‌ಬಾತ್ ಅಂದ್ರೆ ಯಾರಿಗೆ ಹಿಡಿಸುತ್ತೆ ಹೇಳಿ. ರೈಸ್‌ಬಾತ್‌ಗಳು... ಓದನ್ನು ಮುಂದುವರಿಸಿ
ಮಕ್ಕಳ ಬಾಯಲ್ಲಿ ನೀರೂರಿಸುತ್ತೆ ʼಪೋಟ್ಯಾಟೋʼ ಲಾಲಿಪಾಪ್ :ರೆಸಿಪಿ ಮಾಡುವುದು ಹೇಗೆ
ಬೇಕಾಗುವಪದಾರ್ಥಗಳು :
ಬೇಯಿಸಿದ ಆಲೂಗಡ್ಡೆ 2-3, ಹೆಚ್ಚಿಕೊ... ಓದನ್ನು ಮುಂದುವರಿಸಿ
ಸುಲಭವಾಗಿ ಮಾಡಬಹುದು 'ವೆಜಿಟೆಬಲ್' ಕಬಾಬ್ ; ರೆಸಿಪಿ ಮಾಡುವುದು ಹೇಗೆ
ಕಬಾಬ್ ಎಂದ ಕೂಡಲೇ ಹೆಚ್ಚಿನವರಿಗೆ ನಾನ್ ವೆಜ್ ನೆನಪಿಗೆ ಬರುತ್ತದೆ. ಆದರೆ, ವೆಜಿಟೆಬಲ್... ಓದನ್ನು ಮುಂದುವರಿಸಿ
ಶ್ರೀರಾಮನವಮಿಯಂದು ಹಬ್ಬದ ವಿಶೇಷ ಪಾನಕ, ನೀರು ಮಜ್ಜಿಗೆ, ಕೋಸಂಬರಿ ಮಾಡೋದು ಹೇಗೆ.?
ಇಂದು ರಾಮನವಮಿ ಹಬ್ಬದ ಸಂಭ್ರಮ. ರಾಮನವಮಿ ಪ್ರಯುಕ್ತ ರಾಜ್ಯದ ಶ್ರೀ ರಾಮ ದೇವಾಲಯಗಳಲ್ಲಿ... ಓದನ್ನು ಮುಂದುವರಿಸಿ
ಈರುಳ್ಳಿ ಪಕೋಡ ಮಾಡಿ ಬೋರ್ ಆಗಿದ್ಯಾ ಹಾಗಿದ್ರೆ ಟ್ರೈ ಮಾಡಿ ಮಿಕ್ಸ್ ವೆಜಿಟೆಬಲ್ಸ್ ಪಕೋಡ
ಬೇಕಾಗುವ ಪದಾರ್ಥಗಳು:
ಅಕ್ಕಿಹಿಟ್ಟು – ೨ ಚಮಚ
ಕಡ್ಲ... ಓದನ್ನು ಮುಂದುವರಿಸಿ
ಮಟನ್‌ನಲ್ಲಿ ಡಿಫರೆಂಟಾಗಿ ಪುದಿನಾ ಮಟನ್ ಕರ್ರಿ ಮಾಡುವ ವಿಧಾನ ತಿಳಿಯೋಣ !!
ಪುದಿನಾ ಮಟನ್ ಕರ್ರಿ ಮಾಡಲು ಬೇಕಾಗುವ ಬೇಕಾಗುವ ಸಾಮಗ್ರಿಗಳು
... ಓದನ್ನು ಮುಂದುವರಿಸಿ