ಬರೀ ಚಿಕನ್ ತಿಂದು ಬೋರ್ ಆಗಿದ್ಯಾ? ಸಂಡೇ ಸ್ಪೆಷಲ್.. ಎಂದಾದರೂ ಟೇಸ್ಟಿ ಮಾವಿನಕಾಯಿ ಚಿಕನ್ ಗ್ರೇವಿ ತಿಂದಿದ್ದೀರಾ!?..

ಚಿಕನ್ ಗೆ ಹಾಕುವ ಮಸಾಲೆ, ಖಾರ ಹಾಗೂ ಮಾವಿನಕಾಯಿಯಲ್ಲಿನ ಹುಳಿ ಡಿಫರೆಂಟ್ ಟೇಸ್ಟ್ ಕೊಡುತ್ತದೆ. ಮತ್ತೆ ಮತ್ತೆ ಮಾಡಿಕೊಂಡು ತಿನ್ನುವಂತೆ ಇರುತ್ತದೆ ಇದರ ರುಚಿ. ಈ ಚಿಕನ್ ಗ್ರೇವಿ ಚಪಾತಿ, ಪೂರಿ, ಅನ್ನ, ಘೀ ರೈಸ್ ಎಲ್ಲದಕ್ಕೂ ಸೂಪರ್ ಆಗಿರುತ್ತದೆ. ಮಾವಿನಕಾಯಿ ಚಿಕನ್ ಗ್ರೇವಿ ಮಾಡುವುದು ಹೇಗೆಂದು ನೋಡೋಣ.

 

ಚಿಕನ್ – ಅರ್ಧ ಕೆ.ಜಿ 

ಹುಳಿ ಮಾವಿನಕಾಯಿ – ಕಾಲು ಕಪ್

ದನಿಯಾ – 1 ಟೀ ಸ್ಪೂನ್

ಲವಂಗ – 3 ಚಕ್ಕೆ

ಗೋಡಂಬಿ – 7-8

ಅರ್ಧ ಇಂಚು ಏಲಕ್ಕಿ

ಬೆಳ್ಳುಳ್ಳಿ – 8 ಎಸಳು

ಶುಂಠಿ – ಅರ್ಧ ಇಂಚು

ಹಸಿಮೆಣಸಿನಕಾಯಿ – 4

ಎಣ್ಣೆ – 6 ಟೀ ಸ್ಪೂನ್

ಈರುಳ್ಳಿ – 2

ಉಪ್ಪು – ರುಚಿಗೆ ತಕ್ಕಷ್ಟು

ಅಚ್ಚಖಾರದಪುಡಿ – ಅರ್ಧ ಟೀ ಸ್ಪೂನ್

ಅರಿಶಿಣಪುಡಿ – ಅರ್ಧ ಟೀ ಸ್ಪೂನ್

ಕೊತ್ತಂಬರಿಸೊಪ್ಪು - ಸ್ವಲ್ಪ

4 ಕರಿಮೆಣಸು 

ಕಾಲು ಟೀ ಸ್ಪೂನ್ ಜೀರಿಗೆ 

 

 ಮೊದಲಿಗೆ ಸ್ಟೌವ್ ಮೇಲೆ ಒಂದು ಬಾಣಲಿ ಇಟ್ಟು ಅದಕ್ಕೆ 1 ಟೀ ಸ್ಪೂನ್ ದನಿಯಾ, 3 ಲವಂಗ, ಕಾಲು ಟೀ ಸ್ಪೂನ್ ಕರಿಮೆಣಸು, ಅರ್ಧ ಟೀ ಸ್ಪೂನ್ ಜೀರಿಗೆ, ಅರ್ಧ ಇಂಚು ಚಕ್ಕೆ, ಏಲಕ್ಕಿ 3, 4 ಒಣಮೆಣಸಿನಕಾಯಿ ಹಾಕಿ ಲೋ ಫ್ಲೇಮ್ ನಲ್ಲಿ ಡ್ರೈ ರೋಸ್ಟ್ ಮಾಡಬೇಕು. ಇದು ಸ್ವಲ್ಪ ತಣ್ಣಗಾದ ಮೇಲೆ ಮಿಕ್ಸಿ ಜಾರಿಗೆ ಹಾಕಬೇಕು. ನೆನೆಸಿಟ್ಟು 7-8 ಗೋಡಂಬಿ (10 ನಿಮಿಷ ಗೋಡಂಬಿ ನೆನೆಸಿಟ್ಟುಕೊಳ್ಳಬೇಕು), ನೀರು ಸ್ವಲ್ಪ ಹಾಕಿ ಮೆತ್ತಗೆ ಪೇಸ್ಟ್ ಮಾಡಿಕೊಳ್ಳಬೇಕು. ಈ ಪೇಸ್ಟ್ ಬೌಲ್ ನಲ್ಲಿ ಹಾಕಿಕೊಳ್ಳಬೇಕು. ಮಿಕ್ಸಿ ಜಾರಿಗೆ 8 ಬೆಳ್ಳುಳ್ಳಿ ಎಸಳು, ಅರ್ಧ ಇಂಚು ಶುಂಠಿ, 3-4 ಹಸಿಮೆಣಸಿನಕಾಯಿ ಹಾಕಿ ಮೆತ್ತಗೆ ಪೇಸ್ಟ್ ಮಾಡಿಕೊಳ್ಳಬೇಕು. 

 

ಸ್ಟೌವ್ ಮೇಲೆ ಒಂದು ಪ್ಯಾನ್ ಇಟ್ಟು ಇದಕ್ಕೆ 6 ಟೀ ಸ್ಪೂನ್ ಎಣ್ಣೆ ಹಾಕಿಕೊಳ್ಳಬೇಕು. ಎಣ್ಣೆ ಕಾದ ಬಳಿಕ 1 ಕಪ್ ಸಣ್ಣದಾಗಿ ಹಚ್ಚಿರುವ ಈರುಳ್ಳಿಯನ್ನು ಹಾಕಿ, ಸ್ವಲ್ಪ ಉಪ್ಪು ಸೇರಿಸಿ ಹಸಿವಾಸನೆ ಹೋಗುವವರೆಗೂ ಫ್ರೈ ಮಾಡಬೇಕು. ನಂತರ ಸ್ವಲ್ಪ ಕರಿಬೇವು ಹಾಕಿ ಈರುಳ್ಳಿ ಗೋಲ್ಡನ್ ಕಲರ್ ಬರುವವರೆಗೂ ಫ್ರೈ ಮಾಡಿ ಹಸಿಮೆಣಸಿನಕಾಯಿ-ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿವಾಸನೆ ಹೋಗುವವರೆಗೂ ಫ್ರೈ ಮಾಡಬೇಕು. ನಂತರ ಇದಕ್ಕೆ ಚೆನ್ನಾಗಿ ತೊಳೆದಿರುವ ಅರ್ಧ ಕೆ.ಜಿ ಚಿಕನ್ ಹಾಕಿ ಮೀಡಿಯಂ ಫ್ಲೇಮ್ ನಲ್ಲಿ ಬೇಯಿಸಿಕೊಳ್ಳಬೇಕು. 

 

5 ನಿಮಿಷದ ನಂತರ ಅರ್ಧ ಟೀ ಸ್ಪೂನ್ ಅಚ್ಚಖಾರದಪುಡಿ, ಅರ್ಧ ಟೀ ಸ್ಪೂನ್ ಅರಿಶಿಣಪುಡಿ, 3 ಟೀ ಸ್ಪೂನ್ ನೀರು ಹಾಕಿ ಚೆನ್ನಾಗಿ ಖಾರ ಹಿಡಿಯುವವರೆಗೂ ಬೇಯಿಸಿಕೊಳ್ಳಬೇಕು. ನಂತರ ಚಿಕನ್ ಗೆ ಗೋಡಂಬಿ-ಮಸಾಲೆ ಪೇಸ್ಟ್ ಹಾಕಬೇಕು. ಇದಕ್ಕೆ ಒಂದೂವರೆ ಕಪ್ ಬಿಸಿ ನೀರು ಹಾಕಿ ತಟ್ಟೆ ಮುಚ್ಚಿ ಕೆಲ ಕಾಲ ಬೇಯಿಸಿಕೊಳ್ಳಬೇಕು. ಚಿಕನ್ ಚೆನ್ನಾಗಿ ಬೆಂದ ಮೇಲೆ ಕಾಲು ಕಪ್ ಸಣ್ಣದಾಗಿ ಕಟ್ ಮಾಡಿರುವ ಹುಳಿ ಮಾವಿನಕಾಯಿ, ಅರ್ಧ ಟೀ ಸ್ಪೂನ್ ಗರಂ ಮಸಾಲ ಹಾಕಿ ಮತ್ತೆ ಬೇಯಿಸಿಕೊಳ್ಳಬೇಕು. ಮಾವಿನಕಾಯಿ ಮೆತ್ತಗೆ ಆಗುವವರೆಗೂ ಬೇಯಿಸಿ, ಕೊನೆಯಲ್ಲಿ ಸ್ವಲ್ಪ ಕೊತ್ತಂಬರಿಸೊಪ್ಪು ಹಾಕಿ ಸ್ಟೌವ್ ಆಫ್ ಮಾಡಿದರೆ ಮಾವಿನಕಾಯಿ ಚಿಕನ್ ಗ್ರೇವಿ ತಿನ್ನುವುದಕ್ಕೆ ರೆಡಿ ಆಗುವುದು.

 

 


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

1 year ago

   
Image 1
Image 1

ಈ ಭಾನುವಾರ ಸ್ಪೆಷಲ್: ಮನೆಪದ್ದತಿಯಲ್ಲಿ ಹೋಟೆಲ್ ಸ್ಟೈಲ್ ವೆಜ್ ಬಿರಿಯಾನಿ ರೆಸಿಪಿ

ವೆಜ್ ಬಿರಿಯಾನಿ (Veg Biryani) ಎಲ್ಲಾ ಆಹಾರ ಪ್ರಿಯರ ಮೆಚ್ಚಿನ ಭೋಜನ. ಮನೆಯಲ್ಲಿಯೇ ಹ... ಓದನ್ನು ಮುಂದುವರಿಸಿ


Edited by: ಬಾನು

2 months ago

   
Image 1

ವಾವ್.. ಭಾನುವಾರದ ಸ್ಪೆಷಲ್ ರುಚಿಯಾದ ಮಟನ್ ಕೈಮಾ ಉಂಡೆ ಸಾರು

ಉಂಡೆಗೆ ಬೇಕಾಗುವ ಪದಾರ್ಥಗಳು ಏನೇನು... 

ಮಟನ್ ಕೈಮಾ... ಓದನ್ನು ಮುಂದುವರಿಸಿ


Edited by: ಬಾನು

1 year ago

   
Image 1

ಮಾವಿನಕಾಯಿ ಸೀಜನ್‌ ನಲ್ಲಿ ಒಮ್ಮೆಯಾದರೂ ಟ್ರೈ ಮಾಡಿ ಮಾವಿನಕಾಯಿ ಚಟ್ನಿ..!! ಸೂಪರ್‌ ಟೇಸ್ಟ್

ಈ ಸೀಸನ್ ನಲ್ಲಿ ನೀವು ಮಾವಿನಕಾಯಿ ಚಟ್ನಿ ತಿಂದಿದ್ದೀರಾ? ತಿಂದಿಲ್ಲ ಅಂದರೆ ಈ ಸೂಪರ್ ರ... ಓದನ್ನು ಮುಂದುವರಿಸಿ


Edited by: ಮಾಲತಿ

1 year ago

   
Image 1

ಈ ಸೀಜನ್‍ನಲ್ಲಿ ಸಾಮಾನ್ಯವಾಗಿ ಸಿಗೋ ಮಾವಿನಕಾಯಿ ಜಲ್‌ʼಜೀರಾ ನೀರು ಒಮ್ಮೆ ಮಾಡಿ ನೋಡಿ ..!

ಬೇಸಿಗೆ ಅಂದ್ಮೇಲೆ ಮಾವಿನಕಾಯಿ ಸೀಜನ್ ಕೂಡ ಹೌದು. ಹೀಗಾಗಿ ಈ ಸೀಜನ್‍ನಲ್ಲಿ ಸಿಗೋ ಮಾವಿ... ಓದನ್ನು ಮುಂದುವರಿಸಿ


Edited by: ಮಾಲತಿ

2 years ago

   
Image 1

ಬೇಸಿಗೆ ಬಿಸಿಯಲ್ಲಿ ಗರಿಗರಿಯಾಗಿ, ರುಚಿಕರವಾಗಿ ಮನೆಯಲ್ಲೇ ಮಾಡಿ ಆಲೂಗಡ್ಡೆಯ ಹಪ್ಪಳ

ಊಟ ಮಾಡುವಾಗ ಅನ್ನ-ಸಾಂಬಾರ್ ಅಥವಾ ಅನ್ನ-ರಸಂ ಜೊತೆ ಸೈಡ್ಸ್ ಆಗಿ ಸಂಡಿಗೆ ಇದ್ದರೆ ಅದರ... ಓದನ್ನು ಮುಂದುವರಿಸಿ


Edited by: ಬಾನು

2 years ago

   
Image 1

ಪುಳಿಯೋಗರೆ, ಚಿತ್ರಾನ್ನ ತಿಂದು ಬೇಸರ ಆಗಿದ್ರೆ ನಾಲಿಗೆಗೆ ರುಚಿಸೋ ಮಸಾಲಾ ರೈಸ್‌ ಟ್ರೈ ಮಾಡಿ..ಈ ಮಸಾಲ ರೈಸ್‌ ಸಖತ್‌ ಟೇಸ್ಟಿ

ಒಂದೇ ರೀತಿಯ ರೈಸ್‌ಬಾತ್‌ ಅಂದ್ರೆ ಯಾರಿಗೆ ಹಿಡಿಸುತ್ತೆ ಹೇಳಿ.  ರೈಸ್‌ಬಾತ್‌ಗಳು... ಓದನ್ನು ಮುಂದುವರಿಸಿ


Edited by: ಬಾನು

2 years ago

   
Image 1

ಮಕ್ಕಳ ಬಾಯಲ್ಲಿ ನೀರೂರಿಸುತ್ತೆ ʼಪೋಟ್ಯಾಟೋʼ ಲಾಲಿಪಾಪ್ :ರೆಸಿಪಿ ಮಾಡುವುದು ಹೇಗೆ

ಬೇಕಾಗುವಪದಾರ್ಥಗಳು :

ಬೇಯಿಸಿದ ಆಲೂಗಡ್ಡೆ 2-3, ಹೆಚ್ಚಿಕೊ... ಓದನ್ನು ಮುಂದುವರಿಸಿ


Edited by: ಬಾನು

2 years ago

   
Image 1

ಸುಲಭವಾಗಿ ಮಾಡಬಹುದು 'ವೆಜಿಟೆಬಲ್' ಕಬಾಬ್ ; ರೆಸಿಪಿ ಮಾಡುವುದು ಹೇಗೆ

ಕಬಾಬ್ ಎಂದ ಕೂಡಲೇ ಹೆಚ್ಚಿನವರಿಗೆ ನಾನ್ ವೆಜ್ ನೆನಪಿಗೆ ಬರುತ್ತದೆ. ಆದರೆ, ವೆಜಿಟೆಬಲ್... ಓದನ್ನು ಮುಂದುವರಿಸಿ


Edited by: ಬಾನು

2 years ago

   
Image 1

ಶ್ರೀರಾಮನವಮಿಯಂದು ಹಬ್ಬದ ವಿಶೇಷ ಪಾನಕ, ನೀರು ಮಜ್ಜಿಗೆ, ಕೋಸಂಬರಿ ಮಾಡೋದು ಹೇಗೆ.?

ಇಂದು ರಾಮನವಮಿ ಹಬ್ಬದ ಸಂಭ್ರಮ. ರಾಮನವಮಿ ಪ್ರಯುಕ್ತ ರಾಜ್ಯದ ಶ್ರೀ ರಾಮ ದೇವಾಲಯಗಳಲ್ಲಿ... ಓದನ್ನು ಮುಂದುವರಿಸಿ


Edited by: ಮಾಲತಿ

2 years ago

   
Image 1

ಈರುಳ್ಳಿ ಪಕೋಡ ಮಾಡಿ ಬೋರ್‌ ಆಗಿದ್ಯಾ ಹಾಗಿದ್ರೆ ಟ್ರೈ ಮಾಡಿ ಮಿಕ್ಸ್‌ ವೆಜಿಟೆಬಲ್ಸ್‌ ಪಕೋಡ

ಬೇಕಾಗುವ ಪದಾರ್ಥಗಳು:

ಅಕ್ಕಿಹಿಟ್ಟು – ೨ ಚಮಚ

ಕಡ್ಲ... ಓದನ್ನು ಮುಂದುವರಿಸಿ


Edited by: ಮಾಲತಿ

2 years ago

   
Image 1