ಸುಲಭವಾಗಿ ಮಾಡಬಹುದು 'ವೆಜಿಟೆಬಲ್' ಕಬಾಬ್ ; ರೆಸಿಪಿ ಮಾಡುವುದು ಹೇಗೆ
ಕಬಾಬ್ ಎಂದ ಕೂಡಲೇ ಹೆಚ್ಚಿನವರಿಗೆ ನಾನ್ ವೆಜ್ ನೆನಪಿಗೆ ಬರುತ್ತದೆ. ಆದರೆ, ವೆಜಿಟೆಬಲ್ ನಲ್ಲೂ ಕಬಾಬ್ ಮಾಡಬಹುದು. ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ವೆಜಿಟೆಬಲ್ ಕುರಿತ ಮಾಹಿತಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು:
ಕ್ಯಾರೆಟ್ -6, ಫ್ರೆಂಚ್ ಬೀನ್ಸ್ -200 ಗ್ರಾಂ, ಆಲೂಗಡ್ಡೆ -500 ಗ್ರಾಂ, ಬಾಳೆಕಾಯಿ -2, ಬೀಟ್ ರೂಟ್ -2, ಈರುಳ್ಳಿ -6 ಕೊತ್ತಂಬರಿ ಸೊಪ್ಪು -1/2 ಕಂತೆ, ಕಡಲೆ ಹಿಟ್ಟು -6 ಚಮಚ, ಒಣ ಬ್ರೆಡ್ ಚೂರು -6 ಚಮಚ, ಬ್ರೆಡ್ ಸ್ಲೈಸ್ -12, ಕ್ರೀಮ್ -2 ಚಮಚ, ಉಪ್ಪು - ರುಚಿಗೆ ತಕ್ಕಷ್ಟು, ಎಣ್ಣೆ -ಕರಿಯಲು ತಕ್ಕಷ್ಟು,
ಪೇಸ್ಟ್ ತಯಾರಿಕೆಗೆ ಬೇಕಾದ ಪದಾರ್ಥಗಳು:
ಹಸಿ ಶುಂಠಿ -1 ಇಂಚಿನಷ್ಟು ಚೂರು, ಹಸಿ ಮೆಣಸಿನ ಕಾಯಿ -8, ಬೆಳ್ಳುಳ್ಳಿ -8 ಎಸಳು, ಗಸಗಸೆ -2 ಚಮಚ, ಮೆಣಸಿನಪುಡಿ -2 ಚಮಚ, ಜೀರಿಗೆ ½ ಚಮಚ, ಸೋಂಪು – 1/2 ಚಮಚ, ಏಲಕ್ಕಿ -4, ಕಾಳು ಮೆಣಸು -1 ಚಮಚ, ವಿನಿಗರ್ -4 ಚಮಚ, ದಾಲ್ಚಿನ್ನಿ - 1 ತುಂಡು, ಲವಂಗ -4,
ತಯಾರಿಸುವ ವಿಧಾನ:
ಈರುಳ್ಳಿಯನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಆಲೂಗಡ್ಡೆಯನ್ನು ನೀರಿನಲ್ಲಿ ತೊಳೆದು ಒಂದು ಪಾತ್ರೆಯಲ್ಲಿ ಹಾಕಿರಿ. ನೀರು ಸುರಿದು ಬೇಯಿಸಲು ಒಲೆಯ ಮೇಲೆ ಇಡಿ. ಬೆಂದ ಬಳಿಕ ಸಿಪ್ಪೆ ಬಿಡಿಸಿ ಕೈಯಿಂದ ಪುಡಿ ಮಾಡಿಕೊಳ್ಳಿ. ಕ್ಯಾರೆಟ್, ಬೀಟ್ ರೂಟ್ ಗಳ ಸಿಪ್ಪೆ ತೆಗೆದುಕೊಳ್ಳಿ. ಬೀನ್ಸ್, ನಾರು ಬಿಡಿಸಿ ಹೆಚ್ಚಿಕೊಳ್ಳಿ. ಅವುಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಬೇಯಿಸಿಕೊಳ್ಳಿ. ನಂತರ ಬಾಳೇಕಾಯಿಯನ್ನು ಸಿಪ್ಪೆ ಸಮೇತ(ಆಲೂಗಡ್ಡೆಯಂತೆ) ಬೇಯಿಸಿಕೊಳ್ಳಿ. ಬೆಂದ ಮೇಲೆ ಸಿಪ್ಪೆ ಬಿಡಿಸಿ ಕೈಯಿಂದ ಹಿಚುಕಿ ಪುಡಿ ಮಾಡಿಕೊಳ್ಳಿ.
ಬೇಯಿಸಿದ ಬೀಟ್ ರೂಟ್ ಮತ್ತು ಕ್ಯಾರೆಟ್ ಗಳನ್ನು ತುರಿಯುವ ಮಣೆಯಿಂದ ತುರಿದುಕೊಳ್ಳಿ. ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ ಒಲೆಯ ಮೇಲಿಡಿ, ಕಾದ ಮೇಲೆ ಹೆಚ್ಚಿದ ಈರುಳ್ಳಿಯನ್ನು ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ಅದಕ್ಕೆ ಅರೆದುಕೊಂಡ ಪೇಸ್ಟ್, ಉಪ್ಪಿನ ಪುಡಿ, ಸ್ವಲ್ಪ ಸಕ್ಕರೆ, ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು ಹಾಕಿ ಮೊಗಚು ಕೈಯಿಂದ ಕಲೆಸಿರಿ. ನಂತರ ಬೇಯಿಸಿಕೊಂಡ ತರಕಾರಿಗಳು ಮತ್ತು ಪುಡಿ ಮಾಡಿದ ಆಲೂಗಡ್ಡೆ, ಬಾಳೆಕಾಯಿ ಹಾಕಿ ಮಿಶ್ರಣ ಮಾಡಿ. ನೀರಿನಂಶ ಆರಿದ ಮೇಲೆ ಬಾಣಲಿಯನ್ನು ಕೆಳಗಿಳಿಸಿರಿ.
ಬಳಿಕ ನೀರಿನಲ್ಲಿ ನೆನೆಸಿ ಹಿಂಡಿದ ಬ್ರೆಡ್ ಸ್ಲೈಸ್, ಕಡಲೆ ಹಿಟ್ಟು ಮತ್ತು ಒಣಗಿದ ಬ್ರೆಡ್ ಚೂರುಗಳನ್ನು ಹಾಕಿ ಚೆನ್ನಾಗಿ ಕಲೆಸಿಕೊಳ್ಳಿ. ಆಮೇಲೆ ಅದನ್ನು ನಾದಿ ಉಂಡೆಗಳನ್ನು ಮಾಡಿ. ಒಂದು ಬಾಣಲಿಯಲ್ಲಿ ಎಣ್ಣೆಯನ್ನು ಹಾಕಿ ಒಲೆಯ ಮೇಲಿಡಿ. ಕಾದ ಮೇಲೆ ಉಂಡೆಗಳನ್ನು ಮಾಡಿ ಎಣ್ಣೆಯಲ್ಲಿ ಹಾಕಿ ಕರಿಯಿರಿ. ಕೆಂಪಗೆ ಬೆಂದಮೇಲೆ ಜಾಲರಿಯಿಂದ ತೆಗೆಯಿರಿ. ಅದರ ಮೇಲೆ ಸ್ವಲ್ಪ ಉಪ್ಪಿನ ಪುಡಿ, ಕಾಳು ಮೆಣಸು ಪುಡಿ, ಲಿಂಬೆರಸ, ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಸಿಹಿ ಚಟ್ನಿಯೊಂದಿಗೆ ಬಡಿಸಿರಿ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ವಾವ್.. ಭಾನುವಾರದ ಸ್ಪೆಷಲ್ ರುಚಿಯಾದ ಮಟನ್ ಕೈಮಾ ಉಂಡೆ ಸಾರು
ಉಂಡೆಗೆ ಬೇಕಾಗುವ ಪದಾರ್ಥಗಳು ಏನೇನು...
ಮಟನ್ ಕೈಮಾ... ಓದನ್ನು ಮುಂದುವರಿಸಿ
ಬರೀ ಚಿಕನ್ ತಿಂದು ಬೋರ್ ಆಗಿದ್ಯಾ? ಸಂಡೇ ಸ್ಪೆಷಲ್.. ಎಂದಾದರೂ ಟೇಸ್ಟಿ ಮಾವಿನಕಾಯಿ ಚಿಕನ್ ಗ್ರೇವಿ ತಿಂದಿದ್ದೀರಾ!?..
ಚಿಕನ್ ಗೆ ಹಾಕುವ ಮಸಾಲೆ, ಖಾರ ಹಾಗೂ ಮಾವಿನಕಾಯಿಯಲ್ಲಿನ ಹುಳಿ ಡಿಫರೆಂಟ್ ಟೇಸ್ಟ್ ಕೊಡು... ಓದನ್ನು ಮುಂದುವರಿಸಿ
ಮಾವಿನಕಾಯಿ ಸೀಜನ್ ನಲ್ಲಿ ಒಮ್ಮೆಯಾದರೂ ಟ್ರೈ ಮಾಡಿ ಮಾವಿನಕಾಯಿ ಚಟ್ನಿ..!! ಸೂಪರ್ ಟೇಸ್ಟ್
ಈ ಸೀಸನ್ ನಲ್ಲಿ ನೀವು ಮಾವಿನಕಾಯಿ ಚಟ್ನಿ ತಿಂದಿದ್ದೀರಾ? ತಿಂದಿಲ್ಲ ಅಂದರೆ ಈ ಸೂಪರ್ ರ... ಓದನ್ನು ಮುಂದುವರಿಸಿ
ಈ ಸೀಜನ್‍ನಲ್ಲಿ ಸಾಮಾನ್ಯವಾಗಿ ಸಿಗೋ ಮಾವಿನಕಾಯಿ ಜಲ್ʼಜೀರಾ ನೀರು ಒಮ್ಮೆ ಮಾಡಿ ನೋಡಿ ..!
ಬೇಸಿಗೆ ಅಂದ್ಮೇಲೆ ಮಾವಿನಕಾಯಿ ಸೀಜನ್ ಕೂಡ ಹೌದು. ಹೀಗಾಗಿ ಈ ಸೀಜನ್‍ನಲ್ಲಿ ಸಿಗೋ ಮಾವಿ... ಓದನ್ನು ಮುಂದುವರಿಸಿ
ಬೇಸಿಗೆ ಬಿಸಿಯಲ್ಲಿ ಗರಿಗರಿಯಾಗಿ, ರುಚಿಕರವಾಗಿ ಮನೆಯಲ್ಲೇ ಮಾಡಿ ಆಲೂಗಡ್ಡೆಯ ಹಪ್ಪಳ
ಊಟ ಮಾಡುವಾಗ ಅನ್ನ-ಸಾಂಬಾರ್ ಅಥವಾ ಅನ್ನ-ರಸಂ ಜೊತೆ ಸೈಡ್ಸ್ ಆಗಿ ಸಂಡಿಗೆ ಇದ್ದರೆ ಅದರ... ಓದನ್ನು ಮುಂದುವರಿಸಿ
ಪುಳಿಯೋಗರೆ, ಚಿತ್ರಾನ್ನ ತಿಂದು ಬೇಸರ ಆಗಿದ್ರೆ ನಾಲಿಗೆಗೆ ರುಚಿಸೋ ಮಸಾಲಾ ರೈಸ್ ಟ್ರೈ ಮಾಡಿ..ಈ ಮಸಾಲ ರೈಸ್ ಸಖತ್ ಟೇಸ್ಟಿ
ಒಂದೇ ರೀತಿಯ ರೈಸ್‌ಬಾತ್ ಅಂದ್ರೆ ಯಾರಿಗೆ ಹಿಡಿಸುತ್ತೆ ಹೇಳಿ. ರೈಸ್‌ಬಾತ್‌ಗಳು... ಓದನ್ನು ಮುಂದುವರಿಸಿ
ಮಕ್ಕಳ ಬಾಯಲ್ಲಿ ನೀರೂರಿಸುತ್ತೆ ʼಪೋಟ್ಯಾಟೋʼ ಲಾಲಿಪಾಪ್ :ರೆಸಿಪಿ ಮಾಡುವುದು ಹೇಗೆ
ಬೇಕಾಗುವಪದಾರ್ಥಗಳು :
ಬೇಯಿಸಿದ ಆಲೂಗಡ್ಡೆ 2-3, ಹೆಚ್ಚಿಕೊ... ಓದನ್ನು ಮುಂದುವರಿಸಿ
ಶ್ರೀರಾಮನವಮಿಯಂದು ಹಬ್ಬದ ವಿಶೇಷ ಪಾನಕ, ನೀರು ಮಜ್ಜಿಗೆ, ಕೋಸಂಬರಿ ಮಾಡೋದು ಹೇಗೆ.?
ಇಂದು ರಾಮನವಮಿ ಹಬ್ಬದ ಸಂಭ್ರಮ. ರಾಮನವಮಿ ಪ್ರಯುಕ್ತ ರಾಜ್ಯದ ಶ್ರೀ ರಾಮ ದೇವಾಲಯಗಳಲ್ಲಿ... ಓದನ್ನು ಮುಂದುವರಿಸಿ
ಈರುಳ್ಳಿ ಪಕೋಡ ಮಾಡಿ ಬೋರ್ ಆಗಿದ್ಯಾ ಹಾಗಿದ್ರೆ ಟ್ರೈ ಮಾಡಿ ಮಿಕ್ಸ್ ವೆಜಿಟೆಬಲ್ಸ್ ಪಕೋಡ
ಬೇಕಾಗುವ ಪದಾರ್ಥಗಳು:
ಅಕ್ಕಿಹಿಟ್ಟು – ೨ ಚಮಚ
ಕಡ್ಲ... ಓದನ್ನು ಮುಂದುವರಿಸಿ
ಮಟನ್‌ನಲ್ಲಿ ಡಿಫರೆಂಟಾಗಿ ಪುದಿನಾ ಮಟನ್ ಕರ್ರಿ ಮಾಡುವ ವಿಧಾನ ತಿಳಿಯೋಣ !!
ಪುದಿನಾ ಮಟನ್ ಕರ್ರಿ ಮಾಡಲು ಬೇಕಾಗುವ ಬೇಕಾಗುವ ಸಾಮಗ್ರಿಗಳು
... ಓದನ್ನು ಮುಂದುವರಿಸಿ