ಮೊಬೈಲ್ ಸ್ಕ್ರೀನ್ ಗಾರ್ಡ್ ವಿಚಾರಕ್ಕೆ ಚಾಕು ಇರಿತ: ಚಿತ್ರದುರ್ಗದಲ್ಲಿ ಉದ್ವಿಗ್ನತೆ

ಚಿತ್ರದುರ್ಗ: ಮೊಬೈಲ್ ಸ್ಕ್ರೀನ್ ಗಾರ್ಡ್ ವಿಚಾರವಾಗಿ ಆರಂಭವಾದ ವಾಗ್ವಾದ ಚಾಕು ಇರಿತಕ್ಕೆ ತಿರುಗಿದ ಘಟನೆ ಚಿತ್ರದುರ್ಗ ನಗರದ ಸಂತೆ ಮೈದಾನ ಬಳಿ ನಡೆದಿದೆ. ವಿಕ್ರಮ್ ಚೌದ್ರಿ ಅವರ ಮೊಬೈಲ್ ಅಂಗಡಿಗೆ ಯುವಕನೊಬ್ಬ ಸ್ಕ್ರೀನ್ ಗಾರ್ಡ್ ಖರೀದಿಸಿದ್ದಾನೆ. ಬಳಿಕ ಅದನ್ನು ಬದಲಾಯಿಸಲು ಕೇಳಿದ ವೇಳೆ ಬೇರೆ ಬ್ರ್ಯಾಂಡ್ ಸ್ಕ್ರೀನ್ ಗಾರ್ಡ್‌ಗೆ ₹100 ಹೆಚ್ಚುವರಿ ಹಣ ಕೇಳಲಾಗಿದೆ ಎನ್ನಲಾಗಿದೆ. ಇದರಿಂದ ಉಂಟಾದ ಮಾತಿನ ಚಕಮಕಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು, ಕೊನೆಗೆ ಯುವಕ ಚಾಕುವಿನಿಂದ ಇರಿದಿದ್ದಾನೆ.

 

ಚಾಕು ಇರಿಯುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಗಾಯಗೊಂಡ ವಿಕ್ರಮ್ ಚೌದ್ರಿ ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ತಿಳಿಯುತ್ತಿದ್ದಂತೆಯೇ ಕೆಲವು ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಸ್ಪತ್ರೆ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ಆರೋಪಿಯನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿ ರಸ್ತೆ ಬಂದ್ ಮಾಡಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಆರೋಪಿಯನ್ನು ಬಂಧಿಸದಿದ್ದರೆ ಫೆಬ್ರವರಿ 26ರಂದು ಚಿತ್ರದುರ್ಗ ಬಂದ್ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

 

ಘಟನೆ ಹಿನ್ನೆಲೆಯಲ್ಲಿ ಉದ್ವಿಗ್ನತೆ ಉಂಟಾಗಿರುವುದರಿಂದ, ರಂಜಿತ್ ಬಂಡಾರು, ಜಿಲ್ಲಾ ಪೊಲೀಸ್ ಅಧೀಕ್ಷಕರು, ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಆರೋಗ್ಯ ವಿಚಾರಿಸಿದರು ಹಾಗೂ ಮಾಹಿತಿ ಸಂಗ್ರಹಿಸಿದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಒಟ್ಟಿನಲ್ಲಿ ಸಣ್ಣ ವಿಷಯವಾಗಿ ಆರಂಭವಾದ ಗಲಾಟೆ ಇದೀಗ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಸಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

6 hours ago

   
Image 1
Image 1
ಧಾರವಾಡ

ಹುಬ್ಬಳ್ಳಿ

ಹುಬ್ಬಳ್ಳಿ ಐಟಿಸಿ ಗೋದಾಮು ಬಳಿ ಭೀಕರ ಕೊಲೆ : ರಸ್ತೆ ಬದಿ ಶವ ಎಸೆದು ಸಾಕ್ಷ್ಯ ನಾಶಕ್ಕೆ ಯತ್ನ!

ಹುಬ್ಬಳ್ಳಿ: ನಗರದ ಐಟಿಸಿ ಗೋದಾಮು ಬಳಿ ನಡೆದ ಭೀಕರ ಕೊಲೆ ಪ್ರಕರಣವ... ಓದನ್ನು ಮುಂದುವರಿಸಿ


Edited by: ಬಾನು

6 hours ago

   
Image 1
ಮಂಡ್ಯ

ಮದ್ದೂರು

ಮದ್ದೂರಿನಲ್ಲಿ ಮನೆ ಕಳ್ಳತನ: 1.5 ಲಕ್ಷ ನಗದು, ಚಿನ್ನ-ಬೆಳ್ಳಿ ದೋಚಿ ಪರಾರಿ

ಮಂಡ್ಯ: ಮದ್ದೂರು ನಗರದ ವಿಶ್ವೇಶ್ವರಯ್ಯ ನಗರ 7ನೇ ರಸ್ತೆಯ ಮನೆಯೊಂ... ಓದನ್ನು ಮುಂದುವರಿಸಿ


Edited by: ಬಾನು

6 hours ago

   
Image 1
ಬೆಂಗಳೂರು ನಗರ

ಬಾಡಿಗೆ ಮನೆ ಮಾಲೀಕರೇ ಎಚ್ಚರ! ನಕಲಿ ಆಧಾರ್ ಬಳಸಿ ಬಾಡಿಗೆ ಮನೆ! ಕೆಆರ್ ಪುರದಲ್ಲಿ ವಿದೇಶಿಗರ ಬಂಧನ

ಬೆಂಗಳೂರು : ನಗರದಲ್ಲಿ ಬಾಡಿಗೆ ಮನೆ ಮಾಲೀಕರು ಹೆಚ್ಚಿನ ಎಚ್ಚರಿಕೆ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಕಲ್ಬುರ್ಗಿ

ಕಲಬುರಗಿ ಮಂಟಪದಲ್ಲಿ ಮದುವೆ ವೇಳೆ ಮಾರಕಾಸ್ತ್ರ ಹಿಡಿದು ಡ್ಯಾನ್ಸ್: ಮೂವರಿಗೆ SUMOTO ಪ್ರಕರಣ

ಕಲಬುರಗಿ: ನಗರದ ಶಕ್ತಿ ನಗರದಲ್ಲಿರುವ ಆದರ್ಶ ಕಲ್ಯಾಣ ಮಂಟಪದಲ್ಲಿ... ಓದನ್ನು ಮುಂದುವರಿಸಿ


Edited by: ಬಾನು

15 hours ago

   
Image 1
ಕೊಪ್ಪಳ

ಕನಕಗಿರಿ

ಅಪ್ರಾಪ್ತೆಗೆ ಹೆರಿಗೆ ಪ್ರಕರಣ ಸೋದರ ಮಾವನಿಂದ ಕೃತ್ಯ; ಪೋಕ್ಸೋ ಕೇಸ್ ದಾಖಲು

ಗಂಗಾವತಿ: ಕನಕಗಿರಿ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತೆಯ ಹೆರಿಗೆ ಸಂಬ... ಓದನ್ನು ಮುಂದುವರಿಸಿ


Edited by: ಬಾನು

16 hours ago

   
Image 1
ಬೆಂಗಳೂರು ನಗರ

ಬ್ಯಾಂಕ್ ಪೆಟ್ರೋಲ್ ಕಾರಣಕ್ಕೆ ಯಾರು ಓರ್ವ ಯುವಕನಿಗೆ ಹಲ್ಲೆ – ಸಾರ್ವಜನಿಕರಲ್ಲಿ ಆಕ್ರೋಶ

ಬೆಂಗಳೂರು: ಮಡಿವಾಳದ ಮಾರುತಿನಗರದಲ್ಲಿ 22 ಫೆಬ್ರವರಿ ಮಧ್ಯರಾತ್ರಿ... ಓದನ್ನು ಮುಂದುವರಿಸಿ


Edited by: ಬಾನು

18 hours ago

   
Image 1
ದಾವಣಗೆರೆ

ಚನ್ನಗಿರಿ

ಚನ್ನಗಿರಿ ದರೋಡೆ ಪ್ರಕರಣ ಭೇದನೆ: ತಮಿಳುನಾಡು ಗ್ಯಾಂಗ್ ಬಂಧನ, ₹14 ಲಕ್ಷ ವಸ್ತು ವಶ

ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ಕಾಕನೂರ ಗ್ರಾಮದ ಒಂಟಿ ಮನೆಯಲ್ಲ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಗದಗ

ಗದಗ ಬಸ್ ನಿಲ್ದಾಣದಲ್ಲಿ ಭೀಕರ ಅಪಘಾತ! ಮೂವರು ಮಹಿಳೆಯರಿಗೆ ಗಂಭೀರ ಗಾಯ

ಗದಗ: ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯ ಮತ್ತೆ ಅಮಾಯಕ ಜೀವಗಳನ್ನ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ಗ್ರಾಮಾಂತರ

ದೇವನಹಳ್ಳಿ

ಅಧಿಕಾರಿಗಳ ವೇಷದಲ್ಲಿ ಭೀಕರ ದರೋಡೆ; ದೇವನಹಳ್ಳಿಯಲ್ಲಿ 09 ಆರೋಪಿ ವಶಕ್ಕೆ

ದೇವನಹಳ್ಳಿ: ಬೆಂಗಳೂರಿನ ಗ್ರಾಮಾಂತರದೇವನಹಳ್ಳಿ ಪೊಲೀಸ್ ಠಾಣೆ ವ್ಯ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಮಂಡ್ಯ

ಪಾಂಡವಪುರ

ಮಂಡ್ಯ: ಸೈಜು ಕಲ್ಲಿನಿಂದ ದೌರ್ಜನ್ಯ, ವ್ಯಕ್ತಿಗೆ ಗಂಭೀರ ಗಾಯ

ಮಂಡ್ಯ: ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಡಿಂಕಾ ಗ್ರಾಮದಲ್ಲಿ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1