ಚನ್ನಗಿರಿ ದರೋಡೆ ಪ್ರಕರಣ ಭೇದನೆ: ತಮಿಳುನಾಡು ಗ್ಯಾಂಗ್ ಬಂಧನ, ₹14 ಲಕ್ಷ ವಸ್ತು ವಶ
ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ಕಾಕನೂರ ಗ್ರಾಮದ ಒಂಟಿ ಮನೆಯಲ್ಲಿ ವೃದ್ಧ ದಂಪತಿಯನ್ನು ಕಟ್ಟಿ ಹಿಂಸೆ ನೀಡಿ ಸುಮಾರು ₹8.40 ಲಕ್ಷ ಮೌಲ್ಯದ ಚಿನ್ನಾಭರಣವನ್ನು ದೋಚಿದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಬಂಧಿತ ಆರೋಪಿಗಳಲ್ಲಿ ತಮಿಳುನಾಡಿನ ಹೊಸೂರು ಬತ್ತಪಲ್ಲಿಯ ಶಿವಕುಮಾರ್, ಸೇಲಂ ಜಿಲ್ಲೆಯ ಕೇಶವನ್, ದಿಂಡಿಗಲ್ ಜಿಲ್ಲೆಯ ಅರುಣ್ ಪ್ರಶಾಂತ್, ತಿರುವಣ್ಣಾಮಲೈನ ಅರಸು ಮತ್ತು ನಾಮಕ್ಕಲ್‌ನ ಕಲಾದೇವಿ ಸೇರಿದ್ದಾರೆ. ಬಂಧಿತರಿಂದ ಒಟ್ಟು ₹14 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
2025ರ ಸೆಪ್ಟೆಂಬರ್ 6ರಂದು ಐವರು ಮುಸುಕುಧಾರಿಗಳು ರಾತ್ರಿ ವೇಳೆ ಮನೆಗೆ ಒಳನುಗ್ಗಿದರು. ಟಿವಿ ನೋಡುತ್ತಿದ್ದ ಮಾದಪ್ಪ ಅವರನ್ನು ಪಂಚೆಯಿಂದ ಕಟ್ಟಿ, ಅಡುಗೆಮನೆಯಲ್ಲಿ ಇದ್ದ ಸಾವಿತ್ರಮ್ಮ ಅವರನ್ನು ಹಗ್ಗದಿಂದ ಬಿಗಿದು ದರೋಡೆ ನಡೆಸಿದರು. ಮೈಮೇಲಿದ್ದ ಚಿನ್ನಾಭರಣ ಮಾತ್ರವಲ್ಲದೆ, ಕಪಾಟಿನಲ್ಲಿದ್ದ ಒಡವೆಗಳನ್ನೂ ಕದ್ದೊಯ್ದರು. ಸರ್ಕಾರಿ ನೌಕರರಾಗಿದ್ದ ದಂಪತಿ ನಿವೃತ್ತಿ ಬಳಿಕ ಪುತ್ರನೊಂದಿಗೆ ತೋಟದ ಮನೆಯಲ್ಲಿ ವಾಸವಾಗುತ್ತಿದ್ದರು. ಘಟನೆಯ ಸಮಯದಲ್ಲಿ ಪುತ್ರ ಕೆಲಸದ ನಿಮಿತ್ತ ಮನೆ ಹೊರಗಿದ್ದರು.
ಪೊಲೀಸರು ಆರೋಪಿಗಳನ್ನು ಬಂಧಿಸಲು ತಮಿಳುನಾಡಿನಲ್ಲಿ ಕಾರ್ಯಾಚರಣೆ ನಡೆಸಿ ಕೊನೆಗೂ ಬಂಧಿಸಿದ್ದಾರೆ. ಚಿತ್ರದುರ್ಗ ಮಾರ್ಗದಿಂದ ಚನ್ನಗಿರಿಗೆ ಪ್ರವೇಶಿಸಿದ ಈ ಗ್ಯಾಂಗ್ ಇನ್ನೂ ಹಲವು ದರೋಡೆಗಳಲ್ಲಿ ಭಾಗಿಯಾಗಿರಬಹುದು ಎಂದು ಪೊಲೀಸ್ ಹೇಳಿಕೆ. ಬೆಂಗಳೂರಿನ ಕೆಲವು ಪೊಲೀಸ್ ಠಾಣೆಗಳಲ್ಲೂ ಇವರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಸ್ಥಳೀಯರ ಸಹಕಾರವಿದೆಯೇ ಎಂಬುದರ ಬಗ್ಗೆ ತನಿಖೆ ಮುಂದುವರಿಯುತ್ತಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಹುಬ್ಬಳ್ಳಿ
ಹುಬ್ಬಳ್ಳಿ ಐಟಿಸಿ ಗೋದಾಮು ಬಳಿ ಭೀಕರ ಕೊಲೆ : ರಸ್ತೆ ಬದಿ ಶವ ಎಸೆದು ಸಾಕ್ಷ್ಯ ನಾಶಕ್ಕೆ ಯತ್ನ!
ಹುಬ್ಬಳ್ಳಿ: ನಗರದ ಐಟಿಸಿ ಗೋದಾಮು ಬಳಿ ನಡೆದ ಭೀಕರ ಕೊಲೆ ಪ್ರಕರಣವ... ಓದನ್ನು ಮುಂದುವರಿಸಿ
ಮೊಬೈಲ್ ಸ್ಕ್ರೀನ್ ಗಾರ್ಡ್ ವಿಚಾರಕ್ಕೆ ಚಾಕು ಇರಿತ: ಚಿತ್ರದುರ್ಗದಲ್ಲಿ ಉದ್ವಿಗ್ನತೆ
ಚಿತ್ರದುರ್ಗ: ಮೊಬೈಲ್ ಸ್ಕ್ರೀನ್ ಗಾರ್ಡ್ ವಿಚಾರವಾಗಿ ಆರಂಭವಾದ ವಾ... ಓದನ್ನು ಮುಂದುವರಿಸಿ
ಮದ್ದೂರು
ಮದ್ದೂರಿನಲ್ಲಿ ಮನೆ ಕಳ್ಳತನ: 1.5 ಲಕ್ಷ ನಗದು, ಚಿನ್ನ-ಬೆಳ್ಳಿ ದೋಚಿ ಪರಾರಿ
ಮಂಡ್ಯ: ಮದ್ದೂರು ನಗರದ ವಿಶ್ವೇಶ್ವರಯ್ಯ ನಗರ 7ನೇ ರಸ್ತೆಯ ಮನೆಯೊಂ... ಓದನ್ನು ಮುಂದುವರಿಸಿ
ಬಾಡಿಗೆ ಮನೆ ಮಾಲೀಕರೇ ಎಚ್ಚರ! ನಕಲಿ ಆಧಾರ್ ಬಳಸಿ ಬಾಡಿಗೆ ಮನೆ! ಕೆಆರ್ ಪುರದಲ್ಲಿ ವಿದೇಶಿಗರ ಬಂಧನ
ಬೆಂಗಳೂರು : ನಗರದಲ್ಲಿ ಬಾಡಿಗೆ ಮನೆ ಮಾಲೀಕರು ಹೆಚ್ಚಿನ ಎಚ್ಚರಿಕೆ... ಓದನ್ನು ಮುಂದುವರಿಸಿ
ಕಲಬುರಗಿ ಮಂಟಪದಲ್ಲಿ ಮದುವೆ ವೇಳೆ ಮಾರಕಾಸ್ತ್ರ ಹಿಡಿದು ಡ್ಯಾನ್ಸ್: ಮೂವರಿಗೆ SUMOTO ಪ್ರಕರಣ
ಕಲಬುರಗಿ: ನಗರದ ಶಕ್ತಿ ನಗರದಲ್ಲಿರುವ ಆದರ್ಶ ಕಲ್ಯಾಣ ಮಂಟಪದಲ್ಲಿ... ಓದನ್ನು ಮುಂದುವರಿಸಿ
ಕನಕಗಿರಿ
ಅಪ್ರಾಪ್ತೆಗೆ ಹೆರಿಗೆ ಪ್ರಕರಣ ಸೋದರ ಮಾವನಿಂದ ಕೃತ್ಯ; ಪೋಕ್ಸೋ ಕೇಸ್ ದಾಖಲು
ಗಂಗಾವತಿ: ಕನಕಗಿರಿ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತೆಯ ಹೆರಿಗೆ ಸಂಬ... ಓದನ್ನು ಮುಂದುವರಿಸಿ
ಬ್ಯಾಂಕ್ ಪೆಟ್ರೋಲ್ ಕಾರಣಕ್ಕೆ ಯಾರು ಓರ್ವ ಯುವಕನಿಗೆ ಹಲ್ಲೆ – ಸಾರ್ವಜನಿಕರಲ್ಲಿ ಆಕ್ರೋಶ
ಬೆಂಗಳೂರು: ಮಡಿವಾಳದ ಮಾರುತಿನಗರದಲ್ಲಿ 22 ಫೆಬ್ರವರಿ ಮಧ್ಯರಾತ್ರಿ... ಓದನ್ನು ಮುಂದುವರಿಸಿ
ಗದಗ ಬಸ್ ನಿಲ್ದಾಣದಲ್ಲಿ ಭೀಕರ ಅಪಘಾತ! ಮೂವರು ಮಹಿಳೆಯರಿಗೆ ಗಂಭೀರ ಗಾಯ
ಗದಗ: ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯ ಮತ್ತೆ ಅಮಾಯಕ ಜೀವಗಳನ್ನ... ಓದನ್ನು ಮುಂದುವರಿಸಿ
ದೇವನಹಳ್ಳಿ
ಅಧಿಕಾರಿಗಳ ವೇಷದಲ್ಲಿ ಭೀಕರ ದರೋಡೆ; ದೇವನಹಳ್ಳಿಯಲ್ಲಿ 09 ಆರೋಪಿ ವಶಕ್ಕೆ
ದೇವನಹಳ್ಳಿ: ಬೆಂಗಳೂರಿನ ಗ್ರಾಮಾಂತರದೇವನಹಳ್ಳಿ ಪೊಲೀಸ್ ಠಾಣೆ ವ್ಯ... ಓದನ್ನು ಮುಂದುವರಿಸಿ
ಪಾಂಡವಪುರ
ಮಂಡ್ಯ: ಸೈಜು ಕಲ್ಲಿನಿಂದ ದೌರ್ಜನ್ಯ, ವ್ಯಕ್ತಿಗೆ ಗಂಭೀರ ಗಾಯ
ಮಂಡ್ಯ: ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಡಿಂಕಾ ಗ್ರಾಮದಲ್ಲಿ... ಓದನ್ನು ಮುಂದುವರಿಸಿ