‘ಲವ್ ಮಾಕ್ಟೇಲ್ 3’ ವಿವಾದಕ್ಕೆ ಕೊನೆ: ಸ್ಯಾಂಡಲ್ವುಡ್ ಕಥೆ ಸ್ಫಷ್ಟ
ಸ್ಯಾಂಡಲ್ವುಡ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ‘ಲವ್ ಮಾಕ್ಟೇಲ್ 3’ ಕಥೆ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. ಗುರು ದೇಶಪಾಂಡೆ ಮತ್ತು ರಾಘವೇಂದ್ರ ನಾಯ್ಕ್ ಅವರ ಆರೋಪಗಳಿಂದ ಶುರುವಾದ ಈ ಗಲಾಟೆ, ಇದೀಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸಭೆಯಲ್ಲಿ ಸುಖಾಂತ್ಯ ಕಂಡಿದೆ. ಚಿತ್ರದ ಕಥೆ ತಮ್ಮದೇ ಎಂದು ಗುರು ದೇಶಪಾಂಡೆ ಆರೋಪ ಮಾಡಿದ್ದರೆ, ಅದನ್ನು ಕೃಷ್ಣ ತಳ್ಳಿಹಾಕಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದರು. ಅಲ್ಲದೆ, ಸುದ್ದಿಗೋಷ್ಠಿಯಲ್ಲಿ ವೈಯಕ್ತಿಕ ವಿಷಯಗಳನ್ನು ಹೊರತೆಗೆದು ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿತ್ತು.
ಮಾರ್ಚ್ 27 ರಂದು ಜಯಮಾಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಕೃಷ್ಣ, ಗುರು ದೇಶಪಾಂಡೆ ಮತ್ತು ರಾಘವೇಂದ್ರ ನಾಯ್ಕ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು. ಎಲ್ಲರೂ ತಮ್ಮ ವಾದ ಮಂಡಿಸಿದ ನಂತರ, ಪ್ರಕರಣಕ್ಕೆ ಅಂತಿಮ ತೀರ್ಮಾನ ಕೈಗೊಳ್ಳಲಾಯಿತು. ಸಭೆಯಲ್ಲಿ ಕೃಷ್ಣ, ಗುರು ದೇಶಪಾಂಡೆ ವಿರುದ್ಧ ಮಾಡಿದ ವೈಯಕ್ತಿಕ ಹೇಳಿಕೆಗಳಿಗೆ ಕ್ಷಮೆ ಕೇಳಿದ್ದು ಪ್ರಮುಖ ತಿರುವು ಎನಿಸಿದೆ. ಇನ್ನು ಇಬ್ಬರೂ ಒಂದೇ ಘಟನೆಯಿಂದ ಸ್ಫೂರ್ತಿ ಪಡೆದಿದ್ದರೂ, ಕಥೆ ಮತ್ತು ಚಿತ್ರಕಥೆ ಸಂಪೂರ್ಣ ಭಿನ್ನವಾಗಿವೆ ಎಂಬ ನಿರ್ಣಯಕ್ಕೆ ಬರಲಾಗಿದೆ. ಈ ಮೂಲಕ, ಹಲವು ದಿನಗಳಿಂದ ಮುಂದುವರಿದಿದ್ದ ವಿವಾದಕ್ಕೆ ತೆರೆ ಬಿದ್ದಿದೆ. ಆದರೆ, ರಾಘವೇಂದ್ರ ನಾಯ್ಕ್ ಅವರ ‘ಕೂಡಲಸಂಗಮ’ ಪ್ರಾಜೆಕ್ಟ್ ಮುಂದುವರಿಯುತ್ತದೆಯೇ ಎಂಬ ಕುತೂಹಲ ಇನ್ನೂ ಉಳಿದಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
“ನಾನು ಇನ್ನೂ ಸಿಂಗಲ್” – ವದಂತಿಗಳಿಗೆ ಬ್ರೇಕ್ ಹಾಕಿದ ಸಾಯಿ ಪಲ್ಲವಿ
ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಕೆಲವು ದಿನಗಳಿಂದ ನಟಿ ಸಾಯಿ ಪಲ್ಲವಿ ಅವರ ಮದುವೆ ಕುರಿತ... ಓದನ್ನು ಮುಂದುವರಿಸಿ
ನಟ ವಿಜಯ್ ₹603 ಕೋಟಿ ಆಸ್ತಿ ಬಹಿರಂಗ – ಅಫಿಡವಿಟ್‌ನಲ್ಲಿ ದೊಡ್ಡ ರಿವೀಲ್
ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ನಟ &n... ಓದನ್ನು ಮುಂದುವರಿಸಿ
‘ಧುರಂಧರ್ 2’ ಬಾಕ್ಸ್ ಆಫೀಸ್ ಸುನಾಮಿ – 10 ದಿನದಲ್ಲಿ ದಾಖಲೆ ಭಂಗ - ಇಂಡಿಯನ್ ಸಿನೆಮಾಗೆ ಮತ್ತೊಂದು ಹೆಮ್ಮೆಯ ಕ್ಷಣ
ಮುಂಬೈ: ನಿರ್ದೇಶಕ Aditya Dhar ಅವರ ‘ಧುರಂಧರ್: ದಿ ರಿವೆಂಜ್’ ಚಿತ್ರವು ಜಾಗತಿಕ ಬಾಕ... ಓದನ್ನು ಮುಂದುವರಿಸಿ
ನಟ ವಿಜಯ್ ಆದಾಯ ವಿವರ ಬಹಿರಂಗ – ಅಭಿಮಾನಿಗಳಿಗೆ ಶಾಕ್
ತಮಿಳುನಾಡು ಹಾಗೂ ದೇಶದ ನಾನಾ ಭಾಗಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟ ವಿಜಯ್... ಓದನ್ನು ಮುಂದುವರಿಸಿ
ಸಂಗೀತ ಲೋಕಕ್ಕೆ ಶಾಕ್ - “ಹಾಡಲು ಆಗುತ್ತಿಲ್ಲ” – ಅಲ್ಕಾ ಯಾಗ್ನಿಕ್ ಭಾವುಕ ಹೇಳಿಕೆ ಮತ್ತೆ ಹಾಡುತ್ತಾರಾ?
ಬಾಲಿವುಡ್‌ನ ಖ್ಯಾತ ಹಿನ್ನೆಲೆ ಗಾಯಕಿ ಅಲ್ಕಾ ಯಾಜ್ಞಿಕ್ ಅವರ ಆರೋಗ್ಯದ ಬಗ್ಗೆ ಆ... ಓದನ್ನು ಮುಂದುವರಿಸಿ
‘ಧುರಂಧರ್ 2’: 10ನೇ ದಿನದಲ್ಲೇ ಬಾಕ್ಸ್‌ಆಫೀಸ್ ದಾಖಲೆಗಳನ್ನು ಧ್ವಂಸಿಸಿದ ರಣವೀರ್ ಸಿಂಗ್ ಸಿನಿಮಾ
ರಣವೀರ್ ಸಿಂಗ್ ಅಭಿನಯದ ಹಾಗೂ ಆದಿತ್ಯ ಧರ್ ನಿರ್ದೇಶನದ ‘ಧುರಂಧರ್: ದಿ ರಿವೆಂಜ್’ (Dhu... ಓದನ್ನು ಮುಂದುವರಿಸಿ
‘ನೀಲಿರ’ ಟ್ರೇಲರ್ ಬಿಡುಗಡೆ: ವೆಟ್ರಿಮಾರನ್ ದ್ವೇಷಚಿತ್ರಗಳ ವಿರುದ್ಧ ಟೀಕೆ – ಸಿನಿಮಾ ಜಗತ್ತಿನಲ್ಲಿ ಚರ್ಚೆ
ಇತ್ತೀಚೆಗೆ ಶ್ರೀಲಂಕಾ ನಾಗರಿಕ ಯುದ್ಧದ ಹಿನ್ನೆಲೆಯ ಮೇಲೆ ಆಧಾರಿತ ‘ನೀಲಿರ್’ ಚಿತ್ರದ ಟ... ಓದನ್ನು ಮುಂದುವರಿಸಿ
‘ಜೆಟ್ಟಿ’ ನಟನ ವಿರುದ್ಧ 3.15 ಕೋಟಿ ವಂಚನೆ ಆರೋಪ: ಯುವಕ ಆತ್ಮಹತ್ಯೆ ಯತ್ನ – ಡೆತ್ ನೋಟ್ ವೈರಲ್
ಚಿತ್ತೂರು: ನಟರಿಗಾಗಿ ಪ್ರೀತಿಯನ್ನು ತೀರಿಸಬೇಕೆಂದು ಯತ್ನಿಸುತ್ತಿ... ಓದನ್ನು ಮುಂದುವರಿಸಿ
ಮೋನಾಲಿಸಾ-ಸನೋಜ್ ಮಿಶ್ರಾ ವಿವಾದ: ಲೈಂಗಿಕ ಕಿರುಕುಳದ ಆರೋಪದಿಂದ ಕಾನೂನು ಹಂತಕ್ಕೆ
ಬಾಲಿವುಡ್ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಮೊನಾಲಿಸಾ ಭೋಸ್ಲೆ ಮತ್ತು ನಿರ್ದೇಶಕ... ಓದನ್ನು ಮುಂದುವರಿಸಿ
ಅಕ್ಷಯ್ ಕುಮಾರ್ ಪಾಪರಾಜಿಗಳಿಗೆ ತೆರೆದ ಹೃದಯ: ಫೋಟೋ ಕ್ಲಿಕ್ಕಿಸಿದರೆ ಏನಾದರೂ ಸಮಸ್ಯೆ?
ಬಾಲಿವುಡ್‌ನಿಂದ ಸ್ಯಾಂಡಲ್ವುಡ್‌ವರೆಗೆ ಪಾಪರಾಜಿ ಸಂಸ್ಕೃತಿ ದಿನದಿಂದ ದಿನಕ್ಕೆ ಜೋರಾಗು... ಓದನ್ನು ಮುಂದುವರಿಸಿ