ಉರ್ದು ಉತ್ಸವದಿಂದ ಗುಡಿಬಂಡೆಯಲ್ಲಿ ಸಾಹಿತ್ಯ ಸಡಗರ-ಕವಿಗಳ ಕಾವ್ಯ ರಸದೊಂದಿಗೆ ಮನಸೆಳೆಯುವ ಉತ್ಸವ
ಗುಡಿಬಂಡೆ: ಪಟ್ಟಣದ ಬಾಪೂಜಿನಗರದ ಶಾದಿ ಮಹಲ್‌ನಲ್ಲಿ ಕರ್ನಾಟಕ ಉರ್ದು ಅಕಾಡೆಮಿ ಹಾಗೂ ಉರ್ದು ಸಾಹಿತ್ಯ ಪರಿಷತ್ತು ವತಿಯಿಂದ ಉರ್ದು ಉತ್ಸವ ಮತ್ತು ಕವಿ ಗೋಷ್ಟಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸೈಯದ್ ಹಸೇನ್ ಅಫ್ಜಲ್ ಸಾಬ್, ಶೇಕ್ ಹಬೀಬ್ ಸಾಬ್, ಅಸ್ಲಾಂ ಬನಾರಸಿ, ಜಮೀಲ್ ಅಹ್ಮದ್ ಬನಾರಸಿ, ಸೈಫ್ ಉಲ್ಲಾ ಹರ್ಷದ್, ಅಕ್ರಮುಲ್ಲ ಬೇಗ್, ಆಯುಬ್ ಬೇಗ್ ಡ್ಯಾನಿಶ್, ಮೋಹಿಸಿನ್ ಅಲಿಪುರಿ ಸೇರಿದಂತೆ ಅನೇಕ ಹೆಸರಾಂತ ಉರ್ದು ಶಾಯರಿಗಳು ಮತ್ತು ಕವಿಗಳು ಭಾಗವಹಿಸಿ ತಮ್ಮ ಕವನಗಳ ಮೂಲಕ ಮನರಂಜಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಉರ್ದು ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮೊಹಮ್ಮದ್ ನಾಸೀರ್ ಅವರು, ಉರ್ದು ಭಾಷೆಯ ಅಭಿವೃದ್ಧಿಗಾಗಿ ಅಕಾಡೆಮಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು. ಉರ್ದು ಶಾಲೆಗಳ ದಾಖಲಾತಿ ಹೆಚ್ಚಳವಾಗಬೇಕು ಹಾಗೂ ಗುಡಿಬಂಡೆಯಲ್ಲಿ ಉರ್ದು ಅಂಗನವಾಡಿಗಳನ್ನು ಸ್ಥಾಪಿಸುವ ಅಗತ್ಯವಿದೆ ಎಂದು ತಿಳಿಸಿದರು.
ಕರ್ನಾಟಕ ಉರ್ದು ಅಕಾಡೆಮಿ ಜಿಲ್ಲಾ ಸದಸ್ಯರಾದ ಡಾ. ನಾತಿಕ್ ಆಲಿಪುರಿ ಅವರು ಮಾತನಾಡಿ, ಉರ್ದು ಕೇವಲ ಒಂದು ಸಮುದಾಯದ ಭಾಷೆಯಲ್ಲ, ಅದು ದೇಶದ ಐಕ್ಯತೆಯನ್ನು ಬಲಪಡಿಸುವ ಭಾಷೆಯಾಗಿದೆ ಎಂದು ಹೇಳಿದರು. ಇನ್ನೊಂದೆಡೆ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರವೀಂದ್ರ ಗೌಡ ಅವರು, ಉರ್ದು ಶಾಲೆಗಳ ಉಳಿವಿಗಾಗಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಉರ್ದು ಶಾಲೆಯ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಗಮನಸೆಳೆದರು. ಈ ಸಂದರ್ಭದಲ್ಲಿ ಡಾ. ನಾತಿಕ್ ಆಲಿಪುರಿ, ಮಹಮ್ಮದ್ ನಾಸೀರ್, ಅಬ್ದುಲ್ ಸುಹಾನ್ ಸಾಬ್, ಅಬ್ದುಲ್ ವಹಾಬ್, ಬಶೀರ್ ಅಹ್ಮದ್, ರಿಜ್ವಾನ್ ಪಾಷಾ, ಖಲೀಲ್ ಪಾಶ, ರವೀಂದ್ರ ಗೌಡ ಸೇರಿದಂತೆ ಅನೇಕ ಗಣ್ಯರು, ಶಿಕ್ಷಕರು, ಸಿಬ್ಬಂದಿಗಳು ಮತ್ತು ನಾಗರಿಕರು ಉಪಸ್ಥಿತರಿದ್ದರು.
ವರದಿ: ಮೊಹಮ್ಮದ್ ನಾಸೀರ್, ಗುಡಿಬಂಡೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ: ಬೈಕ್ ಸವಾರ, ತಾಯಿ ಗಾಯ
ಚಿಕ್ಕಬಳ್ಳಾಪುರ: ಜಿಲ್ಲೆಯ ಬೂರಗಮಾಕಲಹಳ್ಳಿ ರಸ್ತೆಯಲ್ಲಿರುವ ಆಂಜನ... ಓದನ್ನು ಮುಂದುವರಿಸಿ
ಕ್ವಾಯಿಲ್ ಬಳಸಿ ನೀರು ಕಾಯಿಸುವಾಗ ದುರಂತ: 24 ವರ್ಷದ ಮಹಿಳೆ ಸಾವು
ಧಾರವಾಡ, ಏಪ್ರಿಲ್ 02: ಮನೆಯಲ್ಲಿ ನೀರು ಕಾಯಿಸುವ ವೇಳೆ ವಿದ್ಯುತ್... ಓದನ್ನು ಮುಂದುವರಿಸಿ
ಅಪರೂಪದ ಸಂಪ್ರದಾಯ : ಕಹಿ ಬೇವು ಸಿಹಿ ಆಗುವ ಜಾತ್ರೆ: ಚಿಕ್ಕಬಳ್ಳಾಪುರದಲ್ಲಿ ಭಕ್ತರ ಸಾಗರ
ಚಿಕ್ಕಬಳ್ಳಾಪುರ: ಅಪರೂಪದ ಸಂಪ್ರದಾಯ ಹಾಗೂ ವಿಶಿಷ್ಟ ಆಚರಣೆಗಾಗಿ ಪ... ಓದನ್ನು ಮುಂದುವರಿಸಿ
ಗ್ಯಾರಂಟಿ ಹಣ ಬಿಡುಗಡೆ ತಡೆ ಅರ್ಜಿ: ಹೈಕೋರ್ಟ್ ವಿಚಾರಣೆ ಏಪ್ರಿಲ್ 15ಕ್ಕೆ ಮುಂದೂಡಿಕೆ
ಬೆಂಗಳೂರು: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹ... ಓದನ್ನು ಮುಂದುವರಿಸಿ
“ಹಳ್ಳಿಗೆ ಲಕ್ಷ ಲಕ್ಷ ಹಣ” – ಕಾಂಗ್ರೆಸ್ ಮೇಲೆ ನಾರಾಯಣಸ್ವಾಮಿ ವಾಗ್ದಾಳಿ
ಬೆಂಗಳೂರು: ರಾಹುಲ್ ಗಾಂಧಿ ಇಂತಹ ಹೇಳಿಕೆಗಳನ್ನು ನೀಡಲು ಪ್ರಧಾನಮಂ... ಓದನ್ನು ಮುಂದುವರಿಸಿ
ಕಾರ್ಕಳ
ಉಡುಪಿ ಟೆಕ್ಕಿ ಸಾವು ಪ್ರಕರಣಕ್ಕೆ ಟ್ವಿಸ್ಟ್ : ‘ನಾನು ಕಾರಣ ಅಲ್ಲ’: ಸುದೀಪ್ ರೈ ಪತ್ನಿ ಸೌಮ್ಯಾ ಸ್ಪಷ್ಟನೆ
ಉಡುಪಿ: ಕಾರ್ಕಳದಲ್ಲಿ ಮದುವೆಯಾದ ಕೆಲವೇ ದಿನಗಳಲ್ಲಿ ಉದ್ಯಮಿ ಸುದೀ... ಓದನ್ನು ಮುಂದುವರಿಸಿ
ಧರ್ಮಸ್ಥಳ ಪ್ರಕರಣ: ಯೂಟ್ಯೂಬರ್ ಸಮೀರ್ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ
ಬೆಂಗಳೂರು: ಧರ್ಮಸ್ಥಳದಲ್ಲಿನ ಅಸಹಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿ... ಓದನ್ನು ಮುಂದುವರಿಸಿ
ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಫ್ಲೈಟ್ ರದ್ದು: ಪ್ರಯಾಣಿಕರ ಆಕ್ರೋಶ
ಬೆಂಗಳೂರು: ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ... ಓದನ್ನು ಮುಂದುವರಿಸಿ
ಗರ್ಭಗುಡಿಗೆ ನುಗ್ಗಿದ ಕಳ್ಳ: ವಿಗ್ರಹದ ಆಭರಣ ಕದ್ದ ದುಷ್ಕರ್ಮಿ
ಕಲಬುರಗಿ: ನಗರದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಕಳ್ಳತನ ನಡೆದಿರುವ... ಓದನ್ನು ಮುಂದುವರಿಸಿ
ಎಲ್‌ಪಿಜಿ ಅಭಾವ : ನಿತ್ಯದ ಊಟಕ್ಕೂ ಸಂಕಷ್ಟ: ರೊಟ್ಟಿ ಅಂಗಡಿಗಳು ಬಂದ್
ರಾಯಚೂರು: ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಇರಾನ್–ಇಸ್... ಓದನ್ನು ಮುಂದುವರಿಸಿ