“ಹಳ್ಳಿಗೆ ಲಕ್ಷ ಲಕ್ಷ ಹಣ” – ಕಾಂಗ್ರೆಸ್ ಮೇಲೆ ನಾರಾಯಣಸ್ವಾಮಿ ವಾಗ್ದಾಳಿ

ಬೆಂಗಳೂರು: ರಾಹುಲ್ ಗಾಂಧಿ ಇಂತಹ ಹೇಳಿಕೆಗಳನ್ನು ನೀಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರಣವೇನಾ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ. ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆ ಸಂಭವಿಸಬಹುದು ಎಂದರು. ಭಾರತವು ಗಲ್ಫ್ ರಾಷ್ಟ್ರಗಳ ಮೇಲೆ ಅವಲಂಬಿತವಾಗಿರುವುದರಿಂದ ಇದರ ಪರಿಣಾಮ ದೇಶದ ಆರ್ಥಿಕತೆಗೆ ಬೀಳಬಹುದು ಎಂದು ಹೇಳಿದರು.

 

ಇದರ ನಡುವೆ ಕಾಂಗ್ರೆಸ್ಸಿನವರು ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಬೆಲೆ ಏರಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಜನವಿರೋಧಿ ನೀತಿಗಳಿಗೆ ಬಿಜೆಪಿಯನ್ನು ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು. ಬಾಗಲಕೋಟೆ ಚುನಾವಣೆಯನ್ನು ಕುರಿತು ಮಾತನಾಡಿದ ಅವರು, ಬಿಜೆಪಿಗೆ ಅಭೂತಪೂರ್ವ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಳ್ಳಿಗಳಲ್ಲಿ ಸೋಲು ಖಚಿತವೆಂದು ತಿಳಿದ ಬಳಿಕ ಮುಖ್ಯಮಂತ್ರಿ ಐದು ದಿನಗಳ ಕಾಲ ಅಲ್ಲೇ ತಂಗಿದ್ದಾರೆ ಎಂದು ಟೀಕಿಸಿದರು. ಕೆಲವೆಡೆ ರಸ್ತೆಗಳನ್ನು ಕೆಂಪು ಮಣ್ಣಿನಿಂದ ಮುಚ್ಚಿ ತಾತ್ಕಾಲಿಕ ಅಭಿವೃದ್ಧಿ ತೋರಿಸಲಾಗುತ್ತಿದೆ ಎಂದು ಆರೋಪಿಸಿದರು.

 

ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರ ಕೊರತೆ ಉಂಟಾಗಿದ್ದು, ಸರಕಾರಿ ನೌಕರರು ಮತ್ತು ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು. ಮುಖ್ಯಮಂತ್ರಿಗಳ ಭೇಟಿಗೆ ಮುನ್ನ ಪ್ರತಿ ಹಳ್ಳಿಗೂ ಲಕ್ಷಾಂತರ ರೂಪಾಯಿ ಹಂಚಿಕೆ ಮಾಡಲಾಗುತ್ತಿದೆ ಎಂಬ ಆರೋಪವನ್ನೂ ಮಾಡಿದರು. ಮುಸ್ಲಿಂ ಮತದಾರರು ಸಹ ಬಿಜೆಪಿ ಬೆಂಬಲಕ್ಕೆ ಬರುತ್ತಿದ್ದಾರೆ ಎಂದು ಅವರು ಹೇಳಿದರು. ದಾವಣಗೆರೆಯಲ್ಲಿ ಸಾದಿಕ್ ಪೈಲ್ವಾನರನ್ನು ಕಾಂಗ್ರೆಸ್ಸಿನವರು ತಪ್ಪು ದಾರಿಗೆ ಎಳೆದಿದ್ದಾರೆ ಎಂಬ ಭಾವನೆ ಇದೆ. ಇದರಿಂದ ಅಲ್ಲಿ ಮುಸ್ಲಿಂ ಮತದಾರರು ಮತ ಚಲಾಯಿಸದೇ ಇರಲು ನಿರ್ಧರಿಸಿದ್ದಾರೆ ಎಂದು ಹೇಳಿದರು.

 

ಇದಕ್ಕೂ ಜೊತೆಗೆ ಎಸ್‌ಡಿಪಿಐ ಅಭ್ಯರ್ಥಿಯೂ ಕಣದಲ್ಲಿದ್ದು, ನಲಪಾಡ್ ಅವರ ಹೇಳಿಕೆಗಳಿಂದ ಮುಸ್ಲಿಂ ಸಮುದಾಯದಲ್ಲಿ ಅಸಮಾಧಾನ ಹೆಚ್ಚಾಗಿದೆ ಎಂದರು. ಈ ಎಲ್ಲಾ ಬೆಳವಣಿಗೆಗಳು ಕಾಂಗ್ರೆಸ್ಸಿನ ಸೋಲಿಗೆ ಕಾರಣವಾಗಬಹುದು ಎಂದು ವಿಶ್ಲೇಷಿಸಿದರು. ಕಾಂಗ್ರೆಸ್ ಪಕ್ಷದಲ್ಲೇ ಅಭ್ಯರ್ಥಿ ಆಯ್ಕೆ ಕುರಿತು ಅಸಮಾಧಾನವಿದ್ದು, ಅಂತಿಮವಾಗಿ ಕಾಂಗ್ರೆಸ್ಸಿನವರೇ ಬಿಜೆಪಿ ಗೆಲುವಿಗೆ ಕಾರಣರಾಗುವ ಸಾಧ್ಯತೆ ಇದೆ ಎಂದು ಛಲವಾದಿ ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

8 hours ago

   
Image 1
Image 1
ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ: ಬೈಕ್ ಸವಾರ, ತಾಯಿ ಗಾಯ

ಚಿಕ್ಕಬಳ್ಳಾಪುರ: ಜಿಲ್ಲೆಯ ಬೂರಗಮಾಕಲಹಳ್ಳಿ ರಸ್ತೆಯಲ್ಲಿರುವ ಆಂಜನ... ಓದನ್ನು ಮುಂದುವರಿಸಿ


Edited by: ಬಾನು

6 hours ago

   
Image 1
ಧಾರವಾಡ

ಕ್ವಾಯಿಲ್ ಬಳಸಿ ನೀರು ಕಾಯಿಸುವಾಗ ದುರಂತ: 24 ವರ್ಷದ ಮಹಿಳೆ ಸಾವು

ಧಾರವಾಡ, ಏಪ್ರಿಲ್ 02: ಮನೆಯಲ್ಲಿ ನೀರು ಕಾಯಿಸುವ ವೇಳೆ ವಿದ್ಯುತ್... ಓದನ್ನು ಮುಂದುವರಿಸಿ


Edited by: ಬಾನು

6 hours ago

   
Image 1
ಚಿಕ್ಕಬಳ್ಳಾಪುರ

ಅಪರೂಪದ ಸಂಪ್ರದಾಯ : ಕಹಿ ಬೇವು ಸಿಹಿ ಆಗುವ ಜಾತ್ರೆ: ಚಿಕ್ಕಬಳ್ಳಾಪುರದಲ್ಲಿ ಭಕ್ತರ ಸಾಗರ

ಚಿಕ್ಕಬಳ್ಳಾಪುರ: ಅಪರೂಪದ ಸಂಪ್ರದಾಯ ಹಾಗೂ ವಿಶಿಷ್ಟ ಆಚರಣೆಗಾಗಿ ಪ... ಓದನ್ನು ಮುಂದುವರಿಸಿ


Edited by: ಬಾನು

6 hours ago

   
Image 1
ಬೆಂಗಳೂರು ನಗರ

ಗ್ಯಾರಂಟಿ ಹಣ ಬಿಡುಗಡೆ ತಡೆ ಅರ್ಜಿ: ಹೈಕೋರ್ಟ್ ವಿಚಾರಣೆ ಏಪ್ರಿಲ್ 15ಕ್ಕೆ ಮುಂದೂಡಿಕೆ

ಬೆಂಗಳೂರು: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಉಡುಪಿ

ಕಾರ್ಕಳ

ಉಡುಪಿ ಟೆಕ್ಕಿ ಸಾವು ಪ್ರಕರಣಕ್ಕೆ ಟ್ವಿಸ್ಟ್ : ‘ನಾನು ಕಾರಣ ಅಲ್ಲ’: ಸುದೀಪ್ ರೈ ಪತ್ನಿ ಸೌಮ್ಯಾ ಸ್ಪಷ್ಟನೆ

ಉಡುಪಿ: ಕಾರ್ಕಳದಲ್ಲಿ ಮದುವೆಯಾದ ಕೆಲವೇ ದಿನಗಳಲ್ಲಿ ಉದ್ಯಮಿ ಸುದೀ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಬೆಂಗಳೂರು ನಗರ

ಧರ್ಮಸ್ಥಳ ಪ್ರಕರಣ: ಯೂಟ್ಯೂಬರ್ ಸಮೀರ್ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ

ಬೆಂಗಳೂರು: ಧರ್ಮಸ್ಥಳದಲ್ಲಿನ ಅಸಹಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿ... ಓದನ್ನು ಮುಂದುವರಿಸಿ


Edited by: ಬಾನು

14 hours ago

   
Image 1
ಚಿಕ್ಕಬಳ್ಳಾಪುರ

ಗುಡಿಬಂಡಾ

ಉರ್ದು ಉತ್ಸವದಿಂದ ಗುಡಿಬಂಡೆಯಲ್ಲಿ ಸಾಹಿತ್ಯ ಸಡಗರ-ಕವಿಗಳ ಕಾವ್ಯ ರಸದೊಂದಿಗೆ ಮನಸೆಳೆಯುವ ಉತ್ಸವ

ಗುಡಿಬಂಡೆ: ಪಟ್ಟಣದ ಬಾಪೂಜಿನಗರದ ಶಾದಿ ಮಹಲ್‌ನಲ್ಲಿ ಕರ್ನಾಟಕ ಉರ್... ಓದನ್ನು ಮುಂದುವರಿಸಿ


Edited by: ಬಾನು

14 hours ago

   
Image 1
ಬೆಂಗಳೂರು ನಗರ

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಫ್ಲೈಟ್ ರದ್ದು: ಪ್ರಯಾಣಿಕರ ಆಕ್ರೋಶ

ಬೆಂಗಳೂರು: ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ... ಓದನ್ನು ಮುಂದುವರಿಸಿ


Edited by: ಬಾನು

18 hours ago

   
Image 1
ಕಲ್ಬುರ್ಗಿ

ಗರ್ಭಗುಡಿಗೆ ನುಗ್ಗಿದ ಕಳ್ಳ: ವಿಗ್ರಹದ ಆಭರಣ ಕದ್ದ ದುಷ್ಕರ್ಮಿ

ಕಲಬುರಗಿ: ನಗರದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಕಳ್ಳತನ ನಡೆದಿರುವ... ಓದನ್ನು ಮುಂದುವರಿಸಿ


Edited by: ಬಾನು

18 hours ago

   
Image 1
ರಾಯಚೂರು

ಎಲ್‌ಪಿಜಿ ಅಭಾವ : ನಿತ್ಯದ ಊಟಕ್ಕೂ ಸಂಕಷ್ಟ: ರೊಟ್ಟಿ ಅಂಗಡಿಗಳು ಬಂದ್

ರಾಯಚೂರು: ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಇರಾನ್–ಇಸ್... ಓದನ್ನು ಮುಂದುವರಿಸಿ


Edited by: ಬಾನು

18 hours ago

   
Image 1