ಧರ್ಮಸ್ಥಳ ಪ್ರಕರಣ: ಯೂಟ್ಯೂಬರ್ ಸಮೀರ್ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ
ಬೆಂಗಳೂರು: ಧರ್ಮಸ್ಥಳದಲ್ಲಿನ ಅಸಹಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತಕ ಬುದ್ಧಿಮತ್ತೆ ಬಳಸಿ ವಿಡಿಯೋ ನಿರ್ಮಿಸಿ ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡಿದ್ದ ಆರೋಪದಡಿ ದಾಖಲಾಗಿದ್ದ ಪ್ರಕರಣದ ತನಿಖೆಗೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಯೂಟ್ಯೂಬರ್ ಎಂ.ಡಿ. ಸಮೀರ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ, ತನಿಖೆಗೆ ತಡೆ ನೀಡುವುದರ ಜೊತೆಗೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಮುಂದಿನ ವಿಚಾರಣೆಯನ್ನು ಏಪ್ರಿಲ್ 22ಕ್ಕೆ ಮುಂದೂಡಲಾಗಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಸಮೀರ್ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾದ ವಿಡಿಯೋ ಆಧರಿಸಿ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದಾರೆ ಎಂದು ವಾದಿಸಿದರು. ಸಾರ್ವಜನಿಕರ ನೆಮ್ಮದಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪವನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, “ಸಾರ್ವಜನಿಕರ ನೆಮ್ಮದಿ ಹಾಳಾಗಿದೆ ಎಂದು ಹೇಗೆ ಹೇಳಬಹುದು? ಯಾರ ನೆಮ್ಮದಿ ಹಾಳಾಗಿದೆ ಎಂಬುದು ಸ್ಪಷ್ಟವಾಗಬೇಕು” ಎಂದು ಪ್ರಶ್ನಿಸಿದೆ.
ಸರ್ಕಾರದ ಪರ ವಕೀಲರು ವಾದ ಮಂಡಿಸಿ, ಇದು ಸ್ವಯಂಪ್ರೇರಿತ ಪ್ರಕರಣವಲ್ಲ, ಧರ್ಮಸ್ಥಳ ಪ್ರಕರಣದ ತನಿಖೆಗೆ ಸಂಬಂಧಿಸಿದ ವಿಷಯವಾಗಿದೆ ಎಂದು ತಿಳಿಸಿದರು. ಕೃತಕ ಬುದ್ಧಿಮತ್ತೆ ಬಳಸಿ ತಪ್ಪು ಮಾಹಿತಿ ಹರಡುವ ಮೂಲಕ ಸಾರ್ವಜನಿಕರನ್ನು ತಪ್ಪು ದಾರಿಗೆಳೆಯಲಾಗಿದೆ ಎಂದು ಅವರು ಹೇಳಿದರು. ಸಮೀರ್ ವಿರುದ್ಧ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿದ್ದು, ತನಿಖೆ ಮುಂದುವರಿಯಲು ಅವಕಾಶ ನೀಡಬೇಕು ಎಂದು ಸರ್ಕಾರಿ ವಕೀಲರು ಮನವಿ ಮಾಡಿದರು. ಸಾರ್ವಜನಿಕರಲ್ಲಿ ಗೊಂದಲ ಮತ್ತು ದ್ವೇಷದ ವಾತಾವರಣ ಸೃಷ್ಟಿಸುವ ಪ್ರಯತ್ನ ನಡೆದಿದೆ ಎಂಬ ಆರೋಪವನ್ನೂ ಅವರು ಪೀಠದ ಗಮನಕ್ಕೆ ತಂದರು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ: ಬೈಕ್ ಸವಾರ, ತಾಯಿ ಗಾಯ
ಚಿಕ್ಕಬಳ್ಳಾಪುರ: ಜಿಲ್ಲೆಯ ಬೂರಗಮಾಕಲಹಳ್ಳಿ ರಸ್ತೆಯಲ್ಲಿರುವ ಆಂಜನ... ಓದನ್ನು ಮುಂದುವರಿಸಿ
ಕ್ವಾಯಿಲ್ ಬಳಸಿ ನೀರು ಕಾಯಿಸುವಾಗ ದುರಂತ: 24 ವರ್ಷದ ಮಹಿಳೆ ಸಾವು
ಧಾರವಾಡ, ಏಪ್ರಿಲ್ 02: ಮನೆಯಲ್ಲಿ ನೀರು ಕಾಯಿಸುವ ವೇಳೆ ವಿದ್ಯುತ್... ಓದನ್ನು ಮುಂದುವರಿಸಿ
ಅಪರೂಪದ ಸಂಪ್ರದಾಯ : ಕಹಿ ಬೇವು ಸಿಹಿ ಆಗುವ ಜಾತ್ರೆ: ಚಿಕ್ಕಬಳ್ಳಾಪುರದಲ್ಲಿ ಭಕ್ತರ ಸಾಗರ
ಚಿಕ್ಕಬಳ್ಳಾಪುರ: ಅಪರೂಪದ ಸಂಪ್ರದಾಯ ಹಾಗೂ ವಿಶಿಷ್ಟ ಆಚರಣೆಗಾಗಿ ಪ... ಓದನ್ನು ಮುಂದುವರಿಸಿ
ಗ್ಯಾರಂಟಿ ಹಣ ಬಿಡುಗಡೆ ತಡೆ ಅರ್ಜಿ: ಹೈಕೋರ್ಟ್ ವಿಚಾರಣೆ ಏಪ್ರಿಲ್ 15ಕ್ಕೆ ಮುಂದೂಡಿಕೆ
ಬೆಂಗಳೂರು: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹ... ಓದನ್ನು ಮುಂದುವರಿಸಿ
“ಹಳ್ಳಿಗೆ ಲಕ್ಷ ಲಕ್ಷ ಹಣ” – ಕಾಂಗ್ರೆಸ್ ಮೇಲೆ ನಾರಾಯಣಸ್ವಾಮಿ ವಾಗ್ದಾಳಿ
ಬೆಂಗಳೂರು: ರಾಹುಲ್ ಗಾಂಧಿ ಇಂತಹ ಹೇಳಿಕೆಗಳನ್ನು ನೀಡಲು ಪ್ರಧಾನಮಂ... ಓದನ್ನು ಮುಂದುವರಿಸಿ
ಕಾರ್ಕಳ
ಉಡುಪಿ ಟೆಕ್ಕಿ ಸಾವು ಪ್ರಕರಣಕ್ಕೆ ಟ್ವಿಸ್ಟ್ : ‘ನಾನು ಕಾರಣ ಅಲ್ಲ’: ಸುದೀಪ್ ರೈ ಪತ್ನಿ ಸೌಮ್ಯಾ ಸ್ಪಷ್ಟನೆ
ಉಡುಪಿ: ಕಾರ್ಕಳದಲ್ಲಿ ಮದುವೆಯಾದ ಕೆಲವೇ ದಿನಗಳಲ್ಲಿ ಉದ್ಯಮಿ ಸುದೀ... ಓದನ್ನು ಮುಂದುವರಿಸಿ
ಗುಡಿಬಂಡಾ
ಉರ್ದು ಉತ್ಸವದಿಂದ ಗುಡಿಬಂಡೆಯಲ್ಲಿ ಸಾಹಿತ್ಯ ಸಡಗರ-ಕವಿಗಳ ಕಾವ್ಯ ರಸದೊಂದಿಗೆ ಮನಸೆಳೆಯುವ ಉತ್ಸವ
ಗುಡಿಬಂಡೆ: ಪಟ್ಟಣದ ಬಾಪೂಜಿನಗರದ ಶಾದಿ ಮಹಲ್‌ನಲ್ಲಿ ಕರ್ನಾಟಕ ಉರ್... ಓದನ್ನು ಮುಂದುವರಿಸಿ
ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಫ್ಲೈಟ್ ರದ್ದು: ಪ್ರಯಾಣಿಕರ ಆಕ್ರೋಶ
ಬೆಂಗಳೂರು: ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ... ಓದನ್ನು ಮುಂದುವರಿಸಿ
ಗರ್ಭಗುಡಿಗೆ ನುಗ್ಗಿದ ಕಳ್ಳ: ವಿಗ್ರಹದ ಆಭರಣ ಕದ್ದ ದುಷ್ಕರ್ಮಿ
ಕಲಬುರಗಿ: ನಗರದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಕಳ್ಳತನ ನಡೆದಿರುವ... ಓದನ್ನು ಮುಂದುವರಿಸಿ
ಎಲ್‌ಪಿಜಿ ಅಭಾವ : ನಿತ್ಯದ ಊಟಕ್ಕೂ ಸಂಕಷ್ಟ: ರೊಟ್ಟಿ ಅಂಗಡಿಗಳು ಬಂದ್
ರಾಯಚೂರು: ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಇರಾನ್–ಇಸ್... ಓದನ್ನು ಮುಂದುವರಿಸಿ