ಎಲ್‌ಪಿಜಿ ಅಭಾವ : ನಿತ್ಯದ ಊಟಕ್ಕೂ ಸಂಕಷ್ಟ: ರೊಟ್ಟಿ ಅಂಗಡಿಗಳು ಬಂದ್
ರಾಯಚೂರು: ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಇರಾನ್–ಇಸ್ರೇಲ್ ಸಂಘರ್ಷದ ಪರಿಣಾಮ ಇದೀಗ ರಾಯಚೂರಿನ ಸ್ಥಳೀಯ ಜೀವನಕ್ಕೂ ತಟ್ಟಿದೆ. ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ಕೊರತೆಯಿಂದ ನಗರದ ಹಲವು ರೊಟ್ಟಿ ಕೇಂದ್ರಗಳು ಬೀಗ ಹಾಕುವ ಸ್ಥಿತಿಗೆ ತಲುಪಿವೆ. ಪ್ರತಿನಿತ್ಯ ಜೋಳದ ರೊಟ್ಟಿ, ಚಪಾತಿ, ಊಟ ಹಾಗೂ ಇತರೆ ಪದಾರ್ಥಗಳನ್ನು ಪೂರೈಸುತ್ತಿದ್ದ ಈ ಕೇಂದ್ರಗಳು, ಸಿಲಿಂಡರ್ ಲಭ್ಯವಿಲ್ಲದ ಕಾರಣ ಕಾರ್ಯ ನಿರ್ವಹಿಸಲು ಅಸಾಧ್ಯವಾಗಿದೆ.
ಕಾಲೇಜು ವಿದ್ಯಾರ್ಥಿಗಳು, ಬ್ಯಾಚುಲರ್‌ಗಳು ಹಾಗೂ ಕಡಿಮೆ ಆದಾಯದ ಜನರಿಗೆ ಪ್ರಮುಖ ಆಹಾರ ಆಧಾರವಾಗಿದ್ದ ರೊಟ್ಟಿ ಕೇಂದ್ರಗಳು ಮುಚ್ಚುತ್ತಿರುವುದರಿಂದ, ಸಾರ್ವಜನಿಕರಿಗೆ ಊಟದ ಸಮಸ್ಯೆ ಎದುರಾಗಿದೆ.ಕೆಲವು ದಿನಗಳಿಂದ ಅಡುಗೆ ಪ್ರಮಾಣವನ್ನು ಕಡಿಮೆ ಮಾಡಿಕೊಂಡಿದ್ದ ಕೇಂದ್ರಗಳು ಇದೀಗ ಸಂಪೂರ್ಣವಾಗಿ ಮುಚ್ಚಬೇಕಾದ ಪರಿಸ್ಥಿತಿ ಎದುರಿಸುತ್ತಿವೆ. ಮಾಲೀಕರು ಅಂಗಡಿಗಳ ಮುಚ್ಚುವ ಕುರಿತು ಪೋಸ್ಟರ್ ಮೂಲಕ ಗ್ರಾಹಕರಿಗೆ ಮಾಹಿತಿ ನೀಡಿದ್ದಾರೆ.
ಸಿಲಿಂಡರ್ ಪೂರೈಕೆ ಹೆಚ್ಚಳ ಕುರಿತು ಹೇಳಿಕೆಗಳು ಬಂದರೂ, ರಾಯಚೂರಿನಲ್ಲಿ ಇನ್ನೂ ಗ್ಯಾಸ್ ಲಭ್ಯವಾಗದ ಸ್ಥಿತಿ ಮುಂದುವರಿದಿದೆ. ಪೂರೈಕೆ ಸಾಮಾನ್ಯಗೊಂಡ ತಕ್ಷಣ ಸೇವೆ ಪುನರಾರಂಭಿಸಲಾಗುತ್ತದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಒಟ್ಟಿನಲ್ಲಿ, ಗ್ಯಾಸ್ ಕೊರತೆ ನಗರದಲ್ಲಿನ ದೈನಂದಿನ ಆಹಾರ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ: ಬೈಕ್ ಸವಾರ, ತಾಯಿ ಗಾಯ
ಚಿಕ್ಕಬಳ್ಳಾಪುರ: ಜಿಲ್ಲೆಯ ಬೂರಗಮಾಕಲಹಳ್ಳಿ ರಸ್ತೆಯಲ್ಲಿರುವ ಆಂಜನ... ಓದನ್ನು ಮುಂದುವರಿಸಿ
ಕ್ವಾಯಿಲ್ ಬಳಸಿ ನೀರು ಕಾಯಿಸುವಾಗ ದುರಂತ: 24 ವರ್ಷದ ಮಹಿಳೆ ಸಾವು
ಧಾರವಾಡ, ಏಪ್ರಿಲ್ 02: ಮನೆಯಲ್ಲಿ ನೀರು ಕಾಯಿಸುವ ವೇಳೆ ವಿದ್ಯುತ್... ಓದನ್ನು ಮುಂದುವರಿಸಿ
ಅಪರೂಪದ ಸಂಪ್ರದಾಯ : ಕಹಿ ಬೇವು ಸಿಹಿ ಆಗುವ ಜಾತ್ರೆ: ಚಿಕ್ಕಬಳ್ಳಾಪುರದಲ್ಲಿ ಭಕ್ತರ ಸಾಗರ
ಚಿಕ್ಕಬಳ್ಳಾಪುರ: ಅಪರೂಪದ ಸಂಪ್ರದಾಯ ಹಾಗೂ ವಿಶಿಷ್ಟ ಆಚರಣೆಗಾಗಿ ಪ... ಓದನ್ನು ಮುಂದುವರಿಸಿ
ಗ್ಯಾರಂಟಿ ಹಣ ಬಿಡುಗಡೆ ತಡೆ ಅರ್ಜಿ: ಹೈಕೋರ್ಟ್ ವಿಚಾರಣೆ ಏಪ್ರಿಲ್ 15ಕ್ಕೆ ಮುಂದೂಡಿಕೆ
ಬೆಂಗಳೂರು: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹ... ಓದನ್ನು ಮುಂದುವರಿಸಿ
“ಹಳ್ಳಿಗೆ ಲಕ್ಷ ಲಕ್ಷ ಹಣ” – ಕಾಂಗ್ರೆಸ್ ಮೇಲೆ ನಾರಾಯಣಸ್ವಾಮಿ ವಾಗ್ದಾಳಿ
ಬೆಂಗಳೂರು: ರಾಹುಲ್ ಗಾಂಧಿ ಇಂತಹ ಹೇಳಿಕೆಗಳನ್ನು ನೀಡಲು ಪ್ರಧಾನಮಂ... ಓದನ್ನು ಮುಂದುವರಿಸಿ
ಕಾರ್ಕಳ
ಉಡುಪಿ ಟೆಕ್ಕಿ ಸಾವು ಪ್ರಕರಣಕ್ಕೆ ಟ್ವಿಸ್ಟ್ : ‘ನಾನು ಕಾರಣ ಅಲ್ಲ’: ಸುದೀಪ್ ರೈ ಪತ್ನಿ ಸೌಮ್ಯಾ ಸ್ಪಷ್ಟನೆ
ಉಡುಪಿ: ಕಾರ್ಕಳದಲ್ಲಿ ಮದುವೆಯಾದ ಕೆಲವೇ ದಿನಗಳಲ್ಲಿ ಉದ್ಯಮಿ ಸುದೀ... ಓದನ್ನು ಮುಂದುವರಿಸಿ
ಧರ್ಮಸ್ಥಳ ಪ್ರಕರಣ: ಯೂಟ್ಯೂಬರ್ ಸಮೀರ್ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ
ಬೆಂಗಳೂರು: ಧರ್ಮಸ್ಥಳದಲ್ಲಿನ ಅಸಹಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿ... ಓದನ್ನು ಮುಂದುವರಿಸಿ
ಗುಡಿಬಂಡಾ
ಉರ್ದು ಉತ್ಸವದಿಂದ ಗುಡಿಬಂಡೆಯಲ್ಲಿ ಸಾಹಿತ್ಯ ಸಡಗರ-ಕವಿಗಳ ಕಾವ್ಯ ರಸದೊಂದಿಗೆ ಮನಸೆಳೆಯುವ ಉತ್ಸವ
ಗುಡಿಬಂಡೆ: ಪಟ್ಟಣದ ಬಾಪೂಜಿನಗರದ ಶಾದಿ ಮಹಲ್‌ನಲ್ಲಿ ಕರ್ನಾಟಕ ಉರ್... ಓದನ್ನು ಮುಂದುವರಿಸಿ
ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಫ್ಲೈಟ್ ರದ್ದು: ಪ್ರಯಾಣಿಕರ ಆಕ್ರೋಶ
ಬೆಂಗಳೂರು: ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ... ಓದನ್ನು ಮುಂದುವರಿಸಿ
ಗರ್ಭಗುಡಿಗೆ ನುಗ್ಗಿದ ಕಳ್ಳ: ವಿಗ್ರಹದ ಆಭರಣ ಕದ್ದ ದುಷ್ಕರ್ಮಿ
ಕಲಬುರಗಿ: ನಗರದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಕಳ್ಳತನ ನಡೆದಿರುವ... ಓದನ್ನು ಮುಂದುವರಿಸಿ