ತಳವಾರ ಸಮಾಜಕ್ಕೆ ‌ನ್ಯಾಯ ಒದಗಿಸುವಲ್ಲಿ ಸ್ಥಳೀಯ ಜನಪ್ರತಿನಿಧಿಗಳು‌ ವಿಫಲ

ಇಂಡಿ : ತಳವಾರ ಸಮಾಜಕ್ಕೆ ‌ನ್ಯಾಯ ಒದಗಿಸುವಲ್ಲಿ ಸ್ಥಳೀಯ ಜನಪ್ರತಿ ನಿಧಿಗಳು‌, ರಾಜಕೀಯ ಪಕ್ಷಗಳು ಹಾಗೂ ಸರಕಾರ ಎಡುವುತ್ತಿವೆ.‌ ಕಳೆದ 4 ವರ್ಷದ ಹಿಂದೆ ರಾಜ್ಯ ಮತ್ತು ಕೇಂದ್ರ ಸರಕಾರ ತಳವಾರ ಸಮಾಜವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಿದ್ದು, ಇಲ್ಲಿಯವರೆಗೆ ಯಾವ ಕ್ಷೇತ್ರದಲ್ಲೂ ಆ ಸಮಾಜಕ್ಕೆ ನ್ಯಾಯ ಸಿಕ್ಕಿಲ್ಲ.‌ ಅದಕ್ಕೆ ನೇರ ಕಾರಣ ಜನಪ್ರತಿನಿಧಿಗಳು ಎಂದು ದೇವರ ಹಿಪ್ಪರಗಿ ತಾಲೂಕು ತಳವಾರ ಸಮಾಜದ ಅಧ್ಯಕ್ಷ ರಾಜು ಮೇಟಗಾರ ಆಕ್ರೋಶ ವ್ಯಕ್ತಪಡಿಸಿದರು.

ರವಿವಾರ ಪಟ್ಟಣದ ಕಾಳಿಕಾದೇವಿ ಮಂಗಲ ಕಾರ್ಯಾಲಯದಲ್ಲಿ ತಳವಾರ ಸಮಾಜದ ಯುವಶಕ್ತಿ ಏರ್ಪಡಿಸಿದ ಗೌಪ್ಯ ಸಭೆಯಲ್ಲಿ ಮುಖ್ಯ ವಕ್ತಾರರಾಗಿ‌‌ ಮಾತನಾಡಿದರು.

ಸಮಾಜ ಮುಖ್ಯವಾಹಿನಿಯಲ್ಲಿ‌ ಕಾಣಬೇಕಾದರೆ ಶಿಕ್ಷಣ, ಸಂಘಟನೆ, ಹೋರಾಟ ಮುಖ್ಯ. ಸಮುದಾಯದಲ್ಲಿರುವ ಆಂತರಿಕ ಸಂಘರ್ಷ, ದ್ವೇಷ, ಅಸೂಹೆ, ಸ್ವಾರ್ಥ, ಅಹಂ ವನ್ನು ಸಮಾಜದ ಹಿತದೃಷ್ಟಿಯಿಂದ ತ್ಯಾಗ ಮಾಡಿ ಒಕ್ಕೊರಲಿನ ಶಕ್ತಿ ಪ್ರದರ್ಶನ ಮಾಡಬೇಕು ಎಂದು ಹೇಳಿದರು.

ಇನ್ನೂ ಇದೆ ಸಂದರ್ಭದಲ್ಲಿ ಸಮಾಜದ ಮುಖಂಡ ಹಾಗೂ ತಾ.ಪಂ‌ ಮಾಜಿ ಸದಸ್ಯ ಸಿದ್ದರಾಮ ತಳವಾರ ಮಾತಾನಾಡಿದ ಅವರು, ತಳವಾರ ಸಮಾಜಕ್ಕೆ ತನ್ನದೆಯಾದ ಇತಿಹಾಸ ಪರಂಪರೆ ಇದೆ.‌ ಈ ನಾಡು ಕಟ್ಟುವಲ್ಲಿ ಹಾಗೂ ನಾಡಿನ ಶ್ರಯೋಭಿವೃದ್ಧಿಯಲ್ಲಿ ತಳವಾರ ಸಮಾಜದ ಪಾತ್ರ ಬಹಳವಿದೆ, ಅದನ್ನು ಮರೆಯುವಂತಿಲ್ಲ. ಪ್ರಸ್ತುತ್ ಜಿಲ್ಲೆಯಲ್ಲಿ 2 ಲಕ್ಷಕ್ಕಿಂತ ಹೆಚ್ಚಿನ ಮತದಾರರು ಇರುವ ನಮ್ಮ ಸಮುದಾಯಕ್ಕೆ ರಾಜಕೀಯ ಕ್ಷೇತ್ರದಲ್ಲಿ ಕಡೆಗಣಿಸಲಾಗುತ್ತಿದೆ. ಯಾವ ಪಕ್ಷದಲ್ಲಿ ಸೂಕ್ತವಾದ ಸ್ಥಾನಮಾನ ದೊರೆಯುತ್ತಿಲ್ಲ. ಅದಕ್ಕೆ ಬರುವ ದಿನಮಾನಗಳಲ್ಲಿ ತಳವಾರ್ ಸಮಾಜ ಒಳ್ಳೆಯ ಉತ್ತರ ಕೊಡಲಿಕ್ಕೆ ಯುವಶಕ್ತಿ ಸಿದ್ದರಾಗಿರಬೇಕು ಎಂದು ಹೇಳಿದರು.

ಇನ್ನೂ ವಿಶೇಷವಾಗಿ ತಳವಾರ ಸಮಾಜದ ಇತಿಹಾಸ ಪರಂಪರೆ ಬೆಳವಣೆಗೆ, ತಳವಾರ ಸಮಾಜ ಎದುರುಸುತ್ತೀರುವ ಸವಾಲುಗಳು, ತಳವಾರ. ಸಮಾಜದ ರಾಜಕೀಯ ಚಿಂತನೆಗಳು, ಸೋಷಿಯಲ್ ಮಿಡಿಯಾದಲ್ಲಿ ಸಮಾಜದ ಬಗ್ಗೆ ತಪ್ಪು ಮಾಹಿತಿ ಹಂಚಿಕೆಯಾಗುತ್ತೀರುವ ಹಾಗೂ ಸರಕಾರಿ ಸೌಲಭ್ಯ ಮತ್ತು ಮೀಸಲಾತಿ ಕುರಿತು ಎಸ್, ಬಿ ಕೆಂಬೋಗಿ, ಆನಂದ ಗೊರಗುಂಡಗಿ, ನಾಗರಾಜ ಕೌಲಗಿ, ಅಂಬಣ್ಣ ನಾಯಕೋಡಿ ಸೇರಿದಂತೆ ಅನೇಕ ಯುವ ಮುಖಂಡರು ಮಾತನಾಡಿದರು.

ಟಿ ಎಸ್ ಎಸ್ ಅಧ್ಯಕ್ಷ ಸೋಮು ಜಮಾದಾರ, ನಾಯಕ ತಳವಾರ ಜನಾಂಗದ ಹಿತರಕ್ಷಣಾ ಸಮಿತಿ ತಾಲ್ಲೂಕು ಅಧ್ಯಕ್ಷ ರೇವಣ್ಣ ಹತ್ತಳ್ಳಿ, ಸುರೇಶ ತಳವಾರ, ಶಿವಾನಂದ ಬಮ್ಮನಹಳ್ಳಿ, ಸುನೀಲ ವಾಲಿಕಾರ, ಚಂದ್ರು ತಳವಾರ, ರವಿ ರಾಯಜಿ, ಸಾಯಬಣ್ಣ ತಳವಾರ, ಶ್ರೀಶೈಲ ತಳವಾರ, ಧರ್ಮರಾಜ ತಳವಾರ, ರಾಜು ತಳವಾರ,ಸುರೇಶ್ ತಳವಾರ, ಮಹೇಶ್ ಅರ್ಜನಾಳ, ಚಂದು ದೌಲಿ, ರಾಜು ರೋಡಗಿ ಅಲಮೇಲ, ಮಂಜು ವಾಲಿಕಾರ ಅಲಮೇಲ, ಸಿದ್ದರಾಮ ನಾಟೀಕಾರ, ರಮೇಶ್ ದಳವಾಯಿ, ಜಟ್ಟಪ್ಪ ಬಳೂರಗಿ, ಬಸು ದಳವಾಯಿ, ಆನಂದ ತಳವಾರ, ಸದಣ್ಣಾ ಗುಡ್ಡೆವಾಡಿ, ಬಸವರಾಜ ಪಡನೂರ, ಮಂಜು ಜಮಾದಾರ, ಶಿವಮೂರ್ತಿ ಕಕ್ಕಳಮೇಲಿ ಶಿವಾನಂದ ವಾಲಿಕಾರ,ಸಂತು ಸುಲಾಪುರ, ಅಜಯ್ ವಾಲಿಕಾರ ರಮೇಶ್ ಜಮಾದಾರ, ಮಹೇಶ್ ಚಂದಕೋಟೆ ಸೇರಿದಂತೆ ಅನೇಕ ಯುವಕರು ಉಪಸ್ಥಿತರಿದ್ದರು.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


ತುಕಾರಾಮ ಪವಾರ

4 months ago

   
Image 1
Image 1
ವಿಜಯಪುರ

ವಿಜಯಪುರ

ಇಂಡಿಯಲ್ಲಿ ಶಿಕ್ಷಕರ ದಿನೋತ್ಸವ ಆಯೋಜನೆ

ಇಂಡಿ: ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ವಿಜಯಪುರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಮ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

18 hours ago

   
Image 1
ವಿಜಯಪುರ

ವಿಜಯಪುರ

ಗ್ರಾಮ ಸ್ವಚ್ಚತೆಗೆ ಸಹಕಾರ ಅಗತ್ಯ: ಪಿಡಿಒ ಸಿದ್ರಾಯ

ಇಂಡಿ:   ಚರಂಡಿ ನೀರು ರಸ್ತೆ ಮೇಲೆ ಬಂದು ಸ್ವಚ್ಛತೆ ಇಲ್ಲದೆ ಇದರಿಂದ ಡೆಂಗಿ,... ಓದನ್ನು ಮುಂದುವರಿಸಿ


ತುಕಾರಾಮ ಪವಾರ

10 months ago

   
Image 1
ವಿಜಯಪುರ

ವಿಜಯಪುರ

ಗ್ರಾಮ ಸ್ವಚ್ಚತೆಗೆ ಸಹಕಾರ ಅಗತ್ಯ: ಪಿಡಿಒ ಸಿದ್ರಾಯ

ಇಂಡಿ:   ಚರಂಡಿ ನೀರು ರಸ್ತೆ ಮೇಲೆ ಬಂದು ಸ್ವಚ್ಛತೆ ಇಲ್ಲದೆ ಇದರಿಂದ ಡೆಂಗಿ,... ಓದನ್ನು ಮುಂದುವರಿಸಿ


ತುಕಾರಾಮ ಪವಾರ

10 months ago

   
Image 1 Image 2
ವಿಜಯಪುರ

ವಿಜಯಪುರ

ಭಾರತೀಯ ಬೌದ್ಧ ಮಹಾಸಭಾ ತಾಲೂಕಾ ಘಟಕದ ಪದಾಧಿಕಾರಿಗಳ ಆಯ್ಕೆ

ವಿಜಯಪುರ: ಭಾರತೀಯ ಬೌದ್ಧ ಮಹಾಸಭಾ  ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ&nb... ಓದನ್ನು ಮುಂದುವರಿಸಿ


ತುಕಾರಾಮ ಪವಾರ

11 months ago

   
Image 1
ವಿಜಯಪುರ

ವಿಜಯಪುರ

ಕೆಳಗಿನ ಶಂಕರಲಿಂಗ ದೇವಾಲಯದ ಲೆಕ್ಕಪತ್ರ ಮಾಹಿತಿ.

ಇಂಡಿ:  ತಾಲೂಕಿನ ಸುಕ್ಷೇತ್ರ ಅಗರಖೇಡ  ಗ್ರಾಮದ ಕೆಳಗಿನ ಶ್ರೀಶಂಕರ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

11 months ago

   
Image 1 Image 2
ವಿಜಯಪುರ

ವಿಜಯಪುರ

ಭೀಮಾತೀರದಲ್ಲಿ ಹಾಡುಹಗಲೇ ಯುವಕನ ಬರ್ಬರ ಹತ್ಯೆ

ಇಂಡಿ:  ಭೀಮಾತೀರದಲ್ಲಿ ಯುವಕನ ಬರ್ಬರ ಹತ್ಯೆ ನಡೆದ ಘಟನೆ ವಿಜಯಪುರ ಜಿಲ್ಲೆಯ ಇ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

11 months ago

   
Image 1 Image 2
ವಿಜಯಪುರ

ವಿಜಯಪುರ

ಕೂಡಗಿ ಥರ್ಮಲ್ ವಿದ್ಯುತ್ ಕಾರ್ಖಾನೆಯ ಸಮಸ್ಯೆಗಳ ಪರಿಹಾರಕ್ಕೆ ಎಚ್ ಡಿ ಕುಮಾರಸ್ವಾಮಿ ಭರವಸೆ

ವಿಜಯಪೂರ: ಕೂಡಗಿ ಥರ್ಮಲ್ ವಿದ್ಯುತ್ ಕಾರ್ಖಾನೆಯ ಜಲ್ವಂತ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

1 year ago

   
Image 1
ವಿಜಯಪುರ

ವಿಜಯಪುರ

ವಿಜಯಪುರ ಜಿಲ್ಲೆಯ ಕೆಪಿಸಿಸಿ ವೈದ್ಯಕೀಯ ಘಟಕದ ಪದಾಧಿಕಾರಿಗಳ ಆಯ್ಕೆ

ವಿಜಯಪುರ: ಕೆ.ಪಿ.ಸಿ.ಸಿ. ವೈದ್ಯಕೀಯ ಘಟಕದ ರಾಜ್ಯಾಧ್ಯಕ್ಷರ ಹಾಗೂ ಕೆ.ಪಿ.ಸಿ.ಸಿ. ವೈದ್ಯಕೀ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

1 year ago

   
Image 1 Image 2
ವಿಜಯಪುರ

ಇಂಡಿ

ಸಮಯಕ್ಕೆ ಸರಿಯಾಗಿ ಬಾರದ ಬಸ್ಸುಗಳು ಪ್ರತಿಭಟನೆಗಿಳಿದ ವಿದ್ಯಾರ್ಥಿಗಳು

ಇಂಡಿ: ಸರಿಯಾದ ಸಮಯಕ್ಕೆ ಬಸ್ಸು ಬಾರದ ಕಾರಣ ರಸ್ತೆಗೆ ಇಳಿದು ವಿದ್ಯಾರ್ಥಿಗಳು ಪ್ರತಿಭಟನೆ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

1 year ago

   
Image 1 Image 2
ವಿಜಯಪುರ

ಇಂಡಿ

ಸಮಯಕ್ಕೆ ಸರಿಯಾಗಿ ಬಾರದ ಬಸ್ಸುಗಳು ಪ್ರತಿಭಟನೆಗಿಳಿದ ವಿದ್ಯಾರ್ಥಿಗಳು

ಇಂಡಿ: ಸರಿಯಾದ ಸಮಯಕ್ಕೆ ಬಸ್ಸು ಬಾರದ ಕಾರಣ ರಸ್ತೆಗೆ ಇಳಿದು ವಿದ್ಯಾರ್ಥಿಗಳು ಪ್ರತಿಭಟನೆ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

1 year ago

   
Image 1