ಕೆಳಗಿನ ಶಂಕರಲಿಂಗ ದೇವಾಲಯದ ಲೆಕ್ಕಪತ್ರ ಮಾಹಿತಿ.

ಇಂಡಿ:  ತಾಲೂಕಿನ ಸುಕ್ಷೇತ್ರ ಅಗರಖೇಡ  ಗ್ರಾಮದ ಕೆಳಗಿನ ಶ್ರೀಶಂಕರಲಿಂಗ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ ಗಜಾನನ ವಿಸರ್ಜನಾ ಸಮಾರಂಭ ಹಾಗೂ ದೇವಾಲಯವು 14 ತಿಂಗಳುಗಳಿಂದ ನಿರಂತರವಾಗಿ ಕೆಲಸ ಕಾರ್ಯಗಳನ್ನು ನಡೆದು ಸಂಪೂರ್ಣವಾಗಿ ಜೀರ್ಣೋದ್ಧಾರಗೊಂಡು ದಿನಾಂಕ 05-09-2024 ರಂದು ಅನೇಕ ಪರಮಪೂಜ್ಯರ ಅಮೃತಹಸ್ತದೊಂದಿಗೆ ಹಾಗೂ ಗ್ರಾಮದ ಹಿರಿಯರು ಮತ್ತು ಗ್ರಾಮಸ್ಥರ ಸಮಕ್ಷಮದಲ್ಲಿ ಉದ್ಘಾಟನೆಗೊಂಡಿದ್ದು ಸಂತೋಷದ ಸಂಗತಿ ಹಾಗೂ ಹೆಮ್ಮೆಯ ವಿಷಯ ಕೆಳಗಿನ ಶ್ರೀ ಶಂಕರಲಿಂಗ ದೇವಾಲಯದ ಜಗಣೋದ್ಧಾರದ ಕಾರ್ಯವನ್ನು 5 ರಿಂದ 6 ಜನ ಹಿರಿಯರು ಮುಂದಾಳತ್ವ ವಹಿಸಿಕೊಂಡು ಆ ಕಾರ್ಯವನ್ನು ಮಾಡಿದ್ದಾರೆ. ಜೀರ್ಣೋದ್ಧಾರದ ನಿಮಿತ್ಯವಾಗಿ ಭಕ್ತರಿಂದ ಎಷ್ಟು ಕಾಣಿಕೆ ಬಂದಿದೆ ? ಹಾಗೂ ಅದರಲ್ಲಿ ಎಷ್ಟು ಖರ್ಚಾಗಿದೆ ? ಉಳಿದಿರುವ ಹಣ ಎಷ್ಟು? ಎಂಬ ವಿಷಯದ ಸಂಪೂರ್ಣ ಮಾಹಿತಿ ಮಾಧ್ಯಮಕ್ಕೆ ಸಲ್ಲಿಸಿದ್ದಾರೆ. ಈ ಕಾರ್ಯಕ್ರಮದ ಪಾವನ ಸಾನಿಧ್ಯ ಸ್ಥಾನವನ್ನು ಶ್ರೀಮನಿಪ್ರ ಶಿವಬಸವರಾಜೇಂದ್ರ ಮಹಾಶಿವಯೋಗಿಗಳು ಅಲಂಕರಿಸಿದ್ದರು. ಮುಖ್ಯ ಅತಿಥಿಗಳಾಗಿ ಮಲ್ಲಿಕಾರ್ಜುನ ತೋಳನೂರ, ಗೌಡಪ್ಪಗೌಡ ಪಾಟೀಲ, ಶ್ರೀಶೈಲ ಲಕ್ಷ್ಮಣ ಸಾವಳಗಿ, ಸತ್ಯಪ್ಪ ಕೌಲಗಿ,ಎನ್ ಎಸ್ ಕೊಳೆಕರ,ಸರಣಾಡಗೌಡ ನಿವೃತ್ತ ಡಿವೈಎಸ್ ಪಿ,ಎನ್ ಆರ್ ಪಾಟೀಲ, ವಿಜಯಕುಮಾರ ಬಿ ಕವಲಗಿ     ಶಂಕರ ಮೈಂದರ್ಗಿ, ಭೀಮಾಶಂಕರ ಆಳೂರ ಗ್ರಾಮ ಪಂಚಾಯಿತಿ ಉಪ ಅಧ್ಯಕ್ಷರು, ವಿಠ್ಠಲಗೌಡ ಕ ಪಾಟೀಲ,ಸದಸ್ಯರು, ವಿಲಾಸ ಶಿವಪುತ್ರ ಅಂದೇವಾಡಿ, ಹುಸೇನಿ ಕಾಣೆ, ಸಂಗರಾಜ ಎನ್ ಬಡಿಗೇರ, ಕಲ್ಲಪ್ಪ ಪೂಜಾರಿ ಮಹಾರಾಯರು, ಅಪ್ಪಣ್ಣ ಕ ಸಾವಳೆ, ಮಹಾದೇವ ಕೋರೆ, ರಾಮನಗೌಡ ಬಿರಾದಾರ, ಸದಾಶಿವ ಹತ್ತರಕಿ, ಕಾಳಪ್ಪ ಬಡಿಗೇರ ವಿಠ್ಠಲ ತೇಲಿ, ಬಾಬು ತೇಲಿ, ಸುಭಾಸ ತಮ್ಮಣ್ಣ ಸಿಂದೆ ಬಿಲ್ ಕಲೆಕ್ಟರ್,ಇನ್ನು ಅನೇಕ ಹಿರಿಯರು ವೇದಿಕೆ ಮೇಲೆ ಅಸೀನರಾಗಿದ್ದರು. ಈ ಸಂದರ್ಭದಲ್ಲಿ ಕೆಳಗಿನ ಶ್ರೀಶಂಕರಲಿಂಗ ದೇವಾಲಯದ ಜೀರ್ಣೋದ್ಧಾರದ ಲೆಕ್ಕಪತ್ರದ ಮಾಹಿತಿ ಒದಗಿಸಿ ಕೊಟ್ಟರು, ಅದರ ವಿವರ ಕೆಳಗಿನಂತೆ ಇರುತ್ತದೆ.
ಬಿಲ್ ಬುಕ್ 01) 7,17,154 ರೂ,02) 3,62,268 ರೂ 03) 4,32,564 ರೂ 04) 1,37,964 ರೂ 05) 1,23,889 ರೂ ಅಂದರೆ ಪಟ್ಟಿಯಿಂದ ಒಟ್ಟು ಜಮಾದ ಹಣ 17,73,839 ರೂ ಗಳು ಮಾತ್ರ, ಇದರೊಂದಿಗೆ ಮೇಲಿನ ಶ್ರೀಶಂಕರಲಿಂಗ ದೇವಾಲಯದ ಕಮಿಟಿಯಿಂದ ಕೊಟ್ಟ ಹಣ 3,00,000 ರೂ ಗಳು ಅಂದರೆ ಒಟ್ಟು ಕೆಳಗಿನ ಶಂಕರಲಿಂಗ ದೇವಾಲಯಕ್ಕೆ ಜಮಾ ಹಣ 20,73,839 ರೂ ಗಳು ಮಾತ್ರ ಆಗಿದೆ, ಆದರೆ ಅದರಲ್ಲಿನ ಖರ್ಚು ಈ ಕೆಳಗಿನಂತೆ ಇರುತ್ತದೆ, ದೇವಾಲಯದ ಜೀರ್ಣೋದ್ದಾರ ಮಾಡುವ ಸಲುವಾಗಿ ಒಟ್ಟು 14 ತಿಂಗಳ ಕಾಲ ಖರ್ಚು ಮಾಡಿದ ಹಣ 18,84,232 ರೂ ಗಳು,ಮತ್ತು ಕಾಣಿಕೆ ಅಂತ ಬಂದು ಬಿಲ್ ಬುಕ್ಕಿಗೆ ಜಮಾ ಆಗಿ ಖರ್ಚಾದ ಹಣ 7,15,816 ರೂ ಗಳು, ಅಂದರೆ ಒಟ್ಟು ಖರ್ಚು ಆಗಿರುವ ಹಣ 26,00,048,ರೂ ಗಳು, ಆಗಿರುತ್ತದೆ. ಅಂದರೆ ಜಮಾ ಆಗಿರುವ ಹಣ ಕಡಿಮೆಯಾಗಿ ಖರ್ಚು ಹೆಚ್ಚಾಗಿದೆ ಅದು ಹೇಗೆ ಅಂತ ಇನ್ನೊಮ್ಮೆ ನೋಡೋಣ,ಒಟ್ಟು ಖರ್ಚು-- ಒಟ್ಟು ಜಮಾ ಆದ ಹಣ,26,00,048--20,73,839=5,26,209 ರೂ ಗಳು ಮುಂದಾಳತ್ವ ವಹಿಸಿದವರ ಮೈಮೇಲೆ ಬಂದಿತು, ಈ ಸಂದರ್ಭದಲ್ಲಿ ಅವರು ಇನ್ನೊಬ್ಬರ ಹತ್ತಿರ ಸಾಲದ ರೂಪದಲ್ಲಿ1,67,750 ರೂ ಗಳು ಕೈಗಡ ತಂದು ಕೊಟ್ಟಿದ್ದಾರೆ. ಇನ್ನೂ ಉಳಿದ ಹಣ ಶ್ರೀ ಭೀಮನಗೌಡ.ಕ.ಪಾಟೀಲ ಇವರು ತಮ್ಮ ಕೈಯಿಂದ 3,58,459 ರೂ ಗಳು ಹಾಕಿದ್ದಾರೆ ಈ ರೀತಿಯಾಗಿ ಕೆಳಗಿನ ಶ್ರೀಶಂಕರಲಿಂಗ ದೇವಾಲಯದ ಜೀರ್ಣೋದ್ಧಾರದ ಕೆಲಸ ನಡೆದಿದೆ ಎಂದು ತಿಳಿದು ಬಂದಿರುವ ಸಂಗತಿ, ಕಾರ್ಯಕ್ರಮದ ಪಾವನ ಸಾನಿಧ್ಯ ಸ್ಥಾನವನ್ನು ಶ್ರೀ ಮನಿಪ್ರ ಶಿವಬಸವರಾಜೇಂದ್ರ ಮಹಾಶಿವಯೋಗಿಗಳು ವಿರಕ್ತಮಠ ಖೇಡಗಿ  ಅಲಂಕರಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಸರನಾಡಗೌಡ ನಿವೃತ್ತ ಡಿವೈಎಸ್ ಪಿ ಮಾತನಾಡಿದರು ನಂತರ ಶ್ರೀಗಳು  ಅಮೃತವಾಣಿಯಿಂದ ಆಶೀರ್ವಚನ ನೀಡುತ್ತಾ  ಗ್ರಾಮದಲ್ಲಿರುವ ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ನೀವೆಲ್ಲರೂ ಇರಬೇಕು, ಅದರೊಂದಿಗೆ ಗ್ರಾಮದ ಅಭಿವೃದ್ಧಿಯ ಕಾರ್ಯಗಳನ್ನು ಮಾಡುತ್ತಾ ಸಾಗಬೇಕು.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


ತುಕಾರಾಮ ಪವಾರ

11 months ago

   
Image 1
Image 1
ವಿಜಯಪುರ

ವಿಜಯಪುರ

ಇಂಡಿಯಲ್ಲಿ ಶಿಕ್ಷಕರ ದಿನೋತ್ಸವ ಆಯೋಜನೆ

ಇಂಡಿ: ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ವಿಜಯಪುರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಮ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

18 hours ago

   
Image 1
ವಿಜಯಪುರ

ಇಂಡಿ

ತಳವಾರ ಸಮಾಜಕ್ಕೆ ‌ನ್ಯಾಯ ಒದಗಿಸುವಲ್ಲಿ ಸ್ಥಳೀಯ ಜನಪ್ರತಿನಿಧಿಗಳು‌ ವಿಫಲ

ಇಂಡಿ : ತಳವಾರ ಸಮಾಜಕ್ಕೆ ‌ನ್ಯಾಯ ಒದಗಿಸುವಲ್ಲಿ ಸ್ಥಳೀಯ ಜನಪ್ರತಿ ನಿಧಿಗಳು‌, ರಾಜಕೀಯ ಪಕ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

4 months ago

   
Image 1
ವಿಜಯಪುರ

ವಿಜಯಪುರ

ಗ್ರಾಮ ಸ್ವಚ್ಚತೆಗೆ ಸಹಕಾರ ಅಗತ್ಯ: ಪಿಡಿಒ ಸಿದ್ರಾಯ

ಇಂಡಿ:   ಚರಂಡಿ ನೀರು ರಸ್ತೆ ಮೇಲೆ ಬಂದು ಸ್ವಚ್ಛತೆ ಇಲ್ಲದೆ ಇದರಿಂದ ಡೆಂಗಿ,... ಓದನ್ನು ಮುಂದುವರಿಸಿ


ತುಕಾರಾಮ ಪವಾರ

10 months ago

   
Image 1
ವಿಜಯಪುರ

ವಿಜಯಪುರ

ಗ್ರಾಮ ಸ್ವಚ್ಚತೆಗೆ ಸಹಕಾರ ಅಗತ್ಯ: ಪಿಡಿಒ ಸಿದ್ರಾಯ

ಇಂಡಿ:   ಚರಂಡಿ ನೀರು ರಸ್ತೆ ಮೇಲೆ ಬಂದು ಸ್ವಚ್ಛತೆ ಇಲ್ಲದೆ ಇದರಿಂದ ಡೆಂಗಿ,... ಓದನ್ನು ಮುಂದುವರಿಸಿ


ತುಕಾರಾಮ ಪವಾರ

10 months ago

   
Image 1 Image 2
ವಿಜಯಪುರ

ವಿಜಯಪುರ

ಭಾರತೀಯ ಬೌದ್ಧ ಮಹಾಸಭಾ ತಾಲೂಕಾ ಘಟಕದ ಪದಾಧಿಕಾರಿಗಳ ಆಯ್ಕೆ

ವಿಜಯಪುರ: ಭಾರತೀಯ ಬೌದ್ಧ ಮಹಾಸಭಾ  ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ&nb... ಓದನ್ನು ಮುಂದುವರಿಸಿ


ತುಕಾರಾಮ ಪವಾರ

11 months ago

   
Image 1 Image 2
ವಿಜಯಪುರ

ವಿಜಯಪುರ

ಭೀಮಾತೀರದಲ್ಲಿ ಹಾಡುಹಗಲೇ ಯುವಕನ ಬರ್ಬರ ಹತ್ಯೆ

ಇಂಡಿ:  ಭೀಮಾತೀರದಲ್ಲಿ ಯುವಕನ ಬರ್ಬರ ಹತ್ಯೆ ನಡೆದ ಘಟನೆ ವಿಜಯಪುರ ಜಿಲ್ಲೆಯ ಇ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

11 months ago

   
Image 1 Image 2
ವಿಜಯಪುರ

ವಿಜಯಪುರ

ಕೂಡಗಿ ಥರ್ಮಲ್ ವಿದ್ಯುತ್ ಕಾರ್ಖಾನೆಯ ಸಮಸ್ಯೆಗಳ ಪರಿಹಾರಕ್ಕೆ ಎಚ್ ಡಿ ಕುಮಾರಸ್ವಾಮಿ ಭರವಸೆ

ವಿಜಯಪೂರ: ಕೂಡಗಿ ಥರ್ಮಲ್ ವಿದ್ಯುತ್ ಕಾರ್ಖಾನೆಯ ಜಲ್ವಂತ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

1 year ago

   
Image 1
ವಿಜಯಪುರ

ವಿಜಯಪುರ

ವಿಜಯಪುರ ಜಿಲ್ಲೆಯ ಕೆಪಿಸಿಸಿ ವೈದ್ಯಕೀಯ ಘಟಕದ ಪದಾಧಿಕಾರಿಗಳ ಆಯ್ಕೆ

ವಿಜಯಪುರ: ಕೆ.ಪಿ.ಸಿ.ಸಿ. ವೈದ್ಯಕೀಯ ಘಟಕದ ರಾಜ್ಯಾಧ್ಯಕ್ಷರ ಹಾಗೂ ಕೆ.ಪಿ.ಸಿ.ಸಿ. ವೈದ್ಯಕೀ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

1 year ago

   
Image 1 Image 2
ವಿಜಯಪುರ

ಇಂಡಿ

ಸಮಯಕ್ಕೆ ಸರಿಯಾಗಿ ಬಾರದ ಬಸ್ಸುಗಳು ಪ್ರತಿಭಟನೆಗಿಳಿದ ವಿದ್ಯಾರ್ಥಿಗಳು

ಇಂಡಿ: ಸರಿಯಾದ ಸಮಯಕ್ಕೆ ಬಸ್ಸು ಬಾರದ ಕಾರಣ ರಸ್ತೆಗೆ ಇಳಿದು ವಿದ್ಯಾರ್ಥಿಗಳು ಪ್ರತಿಭಟನೆ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

1 year ago

   
Image 1 Image 2
ವಿಜಯಪುರ

ಇಂಡಿ

ಸಮಯಕ್ಕೆ ಸರಿಯಾಗಿ ಬಾರದ ಬಸ್ಸುಗಳು ಪ್ರತಿಭಟನೆಗಿಳಿದ ವಿದ್ಯಾರ್ಥಿಗಳು

ಇಂಡಿ: ಸರಿಯಾದ ಸಮಯಕ್ಕೆ ಬಸ್ಸು ಬಾರದ ಕಾರಣ ರಸ್ತೆಗೆ ಇಳಿದು ವಿದ್ಯಾರ್ಥಿಗಳು ಪ್ರತಿಭಟನೆ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

1 year ago

   
Image 1