ಶನಿವಾರ ರಾಶಿ ಭವಿಷ್ಯ-ಜೂನ್-15,2024

ಮೇಷ ರಾಶಿ: ಉಳಿದೆಲ್ಲ ಸಮಸ್ಯೆಗಿಂತ ಗುರಿಯೇ ನಿಮಗೆ ಮುಖ್ಯವಾಗಿರಲಿ. ನಿಮ್ಮ ಕಾರ್ಯದ ಶಿಸ್ತಿಗೆ ಸಹೋದ್ಯೋಗಿಗಳ ಸಹಾಯ ಪಡೆಯಿರಿ. ನಿಮ್ಮ ಮೇಲೆ ವಿಶ್ವಾಸವು ಮೂಡುವ ದಿನವಾಗಿದೆ. ಅದನ್ನು ಉಳಿಸಿಕೊಳ್ಳುವ ಪ್ರಯತ್ನವನ್ನೂ ಅನವರತ ಮಾಡಬೇಕಾದ ಸ್ಥಿತಿಯೂ ಇದೆ. ಕೃತಕವಾಗಿ ಬರುವ ಧಾರ್ಮಿಕ ಶ್ರದ್ಧೆಯಿಂದ ಯಾವ ಪರಿಣಾಮವಾಗದು. ನಿಮ್ಮ ಅನುಕೂಲಕ್ಕೆ ತಕ್ಕ ನಿಯಮಗಳನ್ನು ಬೇರೆಯವರ ಮೇಲೆ ಹೇರಬೇಡಿ. ಆಹಾರಕ್ಕಾಗಿ ದೂರ ಪ್ರಯಾಣ ಮಾಡಬೇಕಾದೀತು. ನಿಮಗೆ ಸಹಕಾರ ನೀಡದವರೆಲ್ಲ ಕೆಟ್ಟವರಲ್ಲ. ಕ್ಷಮೆಯಿಂದ ನೀವು ದೊಡ್ಡವರಾಗುವಿರಿ. ಮನೆಯ ಕಾರ್ಯದಲ್ಲಿ ಇಂದು ಮಗ್ನರಾಗುವಿರಿ. ನಿಮ್ಮ ಬಗ್ಗಯೇ ನೀವು ಹೇಳಿಕೊಳ್ಳುವುದು ಉಚಿತವಾಗದು. ಕೆಲವು ಸಂದರ್ಭವು ನಿಮ್ಮ ನಿಯಂತ್ರಣವನ್ನು ಮೀರಿ ತಪ್ಪು ಆಗಬಹುದು. 

 

ವೃಷಭ ರಾಶಿ: ಸಾಲಕ್ಕೆ ಸಂಬಂಧಿಸಿದ ವಿಷಯಗಳು ಇತ್ಯರ್ಥವಾಗಲಿವೆ. ನಕಾರಾತ್ಮಕ ಪ್ರತಿಕ್ರಿಯೆಯನ್ನು ಕೊಟ್ಟು ಎಲ್ಲರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ. ಅಧಿಕಾರದ ಆಮಿಷಕ್ಕೆ ತುತ್ತಾಗಿ ಇಲ್ಲದ ಕೆಲಸವನ್ನು ಮಾಡಬೇಕಾಗಬಹುದು. ಯಾರ ಮಾತನ್ನೂ ತಳ್ಳಿಹಾಕದೇ ಗಂಭೀರವಾಗಿ ಪರಿಗಣಿಸುವಿರಿ. ಉದ್ಯೋಗಿಗಳು ಬಹಳ ಪರಿಶ್ರಮದಿಂದ ಲಾಭವನ್ನು ಪಡೆಯಬೇಕಾಗಿದೆ. ಮಾಡಲು ಸಾಧ್ಯವಾಗುವ ಕೆಲಸಕ್ಕೆ ಕಾರಣವನ್ನು ಹುಡುಕುತ್ತ ಅವಕಾಶವಂಚಿತರಾಗಬೇಡಿ. ನೆಮ್ಮದಿಯು ಕೆಡಲು ಮಾರ್ಗಗಳು ಹಲವು ಇದ್ದರೂ ಅಲ್ಲಿ ಒಳ್ಳೆಯದನ್ನು ಆರಿಸಿಕೊಳ್ಳಿ. ಸ್ನೇಹಿತರನ್ನು ದೂರ ಮಾಡಿಕೊಂಡು ಒಂಟಿಯಾಗಿ ಇರಲು ಇಚ್ಛಿಸುವಿರಿ. ಯಾರ ಮೇಲೂ ಹಗುರಾದ ಮನೋಭಾವ ಬೇಡ. ದುಃಸ್ವಪ್ನವು ನಿಮ್ಮ ನಿದ್ರೆಯನ್ನು ಕೆಡಿಸೀತು. 

 

ಮಿಥುನ ರಾಶಿ:  ನಿಮ್ಮ ಕೆಲಸದ ಗುಣಮಟ್ಟವನ್ನು ಸುಧಾರಿಸಲು ಪ್ರಯತ್ನಿಸಿ. ಪರಿಣಾಮಗಳನ್ನು ಪರಿಗಣಿಸಿ ಮುನ್ನಡೆಯಬೇಕು. ನಿಮಗೆ ಇನ್ನೊಬ್ಬರ ವ್ಯಕ್ತಿತ್ವ ಇಷ್ಟವಾಗದಿದ್ದರೆ ಅವರ ಬಳಿಯೇ ಹೇಳಿ. ಅದನ್ನು ಯಾರದೋ ಸಮೀಪ ಸಲ್ಲದ ಮಾತುಗಳನ್ನು ಆಡಿ ಅವರ ಮಾನವನ್ನು ಕಳೆಯಬೇಡಿ. ನಿಮ್ಮ ಆಯ್ಕೆ ಗುಣಮಟ್ಟದ್ದೇ ಆಗಿರಲಿದೆ. ದಾಂಪತ್ಯದ ಕಲಹದಲ್ಲಿ ಮಕ್ಕಳು ನಿಮ್ಮ ಪರವಾಗಿ ಇರುವರು.ಕಣ್ಣಿನ ತೊಂದರೆಯು ಸ್ವಲ್ಪ ಕಡಿಮೆ ಆದಂತೆ ತೋರುತ್ತದೆ. ನಿಮ್ಮ ಹಣವು ಕರಗುವ ಬಗ್ಗೆ ಚಿಂತೆ ಆಗಲಿದೆ. ನಿಮ್ಮ ಬಗ್ಗೆ ಆಡಿಕೊಳ್ಳುತ್ತಿರುವವರು ಸುಮ್ಮನಾಗುವರು. ಹೃದಯವೈಶಾಲ್ಯದಿಂದ ಪ್ರಶಂಸೆ ಸಿಗುವುದು. ವಾಹನದ ಮೇಲಿನ ವ್ಯಾಮೋಹ ಕಡಿಮೆಯಾಗುವುದು. ಸಂಗಾತಿಯ ವರ್ತನೆಯು ಹಿಡಿಸದೇ ಇದ್ದೀತು. 

 

ಕರ್ಕಾಟಕ ರಾಶಿ:  ಪದೇ ಪದೇ ಆಗಿಹೋದುದರ ಬಗ್ಗೆ ಯೋಚಿಸಿ ಮಾನಸಿಕವಾಗಿ ಹಿಂಸೆ ಮಾಡಿಕೊಳ್ಳುವಿರಿ. ನಿಮ್ಮ ಇಷ್ಟದ ಜನರಿಂದ ನೀವು ಬೆಂಬಲವನ್ನು ಪಡೆಯುತ್ತಿರುವಿರಿ. ಎಲ್ಲರ ಜೊತೆ ಬೆರೆಯಬೇಕು ಎನ್ನುವ ಇಚ್ಛೆ ಇದ್ದರೂ ನಿಮ್ಮನ್ನು ಸೇರಿಕೊಳ್ಳದೇ ಇರುವರು. ಕೆಲಸವೂ ಇಲ್ಲದೇ ಸುಮ್ಮನೆಯೂ ಇರಲಾಗದೇ ಸುತ್ತಾಡುವಿರಿ. ಎಂದಿನ ಉತ್ಸಾಹವಿಲ್ಲದೇ ಇಂದು ಇರದು. ದೂರದ ಊರಿನ ಉದ್ಯೋಗವನ್ನು ಮಾಡಲು ಹಿಂಜರಿಯುವಿರಿ. ಆತ್ಮೀಯರ ಮಾತು ನಿಮಗೆ ಕಹಿ ಎನ್ನಿಸಲೂಬಹುದು. ದೇಹ ಆರೋಗ್ಯವಾಗಿದ್ದರೂ ಮನಸ್ಸು ನಿಮ್ಮನ್ನು ಕಟ್ಟಿಹಾಕುವುದು. ಪ್ರೇಮವು ಕಾಮವಾಗಿ ಪರಿವರ್ತನೆ ಆಗಬಹುದು. ಸಂಬಂಧದಲ್ಲಿನ ಕೆಲವು ಸವಾಲುಗಳನ್ನು ನೀವು ಎದುರಿಸುವುದು ಅನಿವಾರ್ಯವಾದೀತು. ಮಕ್ಕಳಿಗಾಗಿ ಹಣವನ್ನು ಖರ್ಚು ಮಾಡುವಿರಿ. ಯಾರಾದರೂ ಪ್ರಾಬಲ್ಯವನ್ನು ಸಾಧಿಸಬಹುದು. 

 

ಸಿಂಹ ರಾಶಿ: ನೀವು ಆತ್ಮವಿಶ್ವಾಸವು ಶಕ್ತಿಯಿಂದ ತುಂಬಿರುವಿರಿ. ಬಹಳ ದಿನಗಳ ಅನಂತರ ಹೊರಗಿನ‌ ಸುತ್ತಾಟವು ಹಿತವೆನಿಸುವುದು. ಸಮಯವನ್ನು ಮಾಡಿಕೊಂಡು ತಂದೆ ಹಾಗೂ ತಾಯಿಯರನ್ನು ಭೇಟಿಯಾಗಿ ನೆಮ್ಮದಿ ಕಾಣುವಿರಿ. ಅವರ ಮಾತುಗಳು ನಿಮಗೆ ಸಂಕಟವನ್ನು ತಂದರೂ ಅವರ ಮನಸ್ಸು ಹಗುರಾಗುವುದು. ನಿಯಮಿತ ಕಾರ್ಯಗಳನ್ನು ಮಾಡುತ್ತ ಸಂತೋಷವಾಗಿ ಇರುವಿರಿ. ನಿಮ್ಮ ಮೇಲಿನ ಆರೋಪಕ್ಕೆ ಹುರುಳಿಲ್ಲದೇ ಸ್ತಬ್ಧವಾಗಲಿದೆ. ಅವಕಾಶಗಳನ್ನು ಬಿಟ್ಟುಕೊಡುವುದು ಔದಾರ್ಯವಲ್ಲ, ಆಲಸ್ಯವಾಗುವುದು. ಕೆಲ ದಿನಗಳಿಂದ ನಿಮ್ಮ ಆರೋಗ್ಯ ಹದಗೆಟ್ಟಿದ್ದು, ಮನಸ್ಸೂ ಸರಿಯಾಗಿರದು. ಎಲ್ಲರ ಜೊತೆ ವಾದಕ್ಕಿಳಿಯುವ ಮನಸ್ಸಿನಲ್ಲಿ ಇರುವಿರಿ. ಶಿಸ್ತಿನಿಂದ ಇಂದಿನ ಕಾರ್ಯವನ್ನು ಮಾಡುವಿರಿ. ಮಕ್ಕಳಿಂದ ಅನಾದರವಾಗಬಹುದು. ನಿಮ್ಮ ಬಗ್ಗೆ ಸುಳ್ಳು ವಿಚಾರವನ್ನು ಹೇಳುವರು. 

 

ಕನ್ಯಾ ರಾಶಿ: ಇಂದು ಅನುಕೂಲಕರ ಸಮಯ. ಅನಗತ್ಯ ಮೋಜಿನಲ್ಲಿ ಸಮಯ ವ್ಯರ್ಥ ಮಾಡಬಾರದು. ಇಂದಿನ ನಿಮ್ಮ ನಡೆ ಬಹಳ ಗೌಪ್ಯವಾಗಿದ್ದು ನಿಮ್ಮ ಹೆಜ್ಜೆಯನ್ನು ಯಾರೂ ಗುರುತಿಸಲಾರರು. ಕೃಷಿಯು ನಿಮಗೆ ಹಿಡಿಸದ ಕೆಲಸವಾದರೂ ಅದನ್ನು ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾದೀತು. ಸಂಗಾತಿಯ ಮಾನಸಿಕತೆಯನ್ನು ಅರ್ಥಮಾಡಿಕೊಳ್ಳಲಾಗದು. ಪರಿಚಿತ ವ್ಯಕ್ತಿಯೊಡನೆಯೇ ಕಲಹವಾಗಲಿದೆ. ಇನ್ನೊಬ್ಬರ ಮಾತಿಗೆ ಕಿವಿಗೊಟ್ಟು ನಿಮ್ಮದನ್ನು ಕಳೆದುಕೊಳ್ಳುವ ಕೆಲಸಕ್ಕೆ ಕೈ ಹಾಕಬೇಡಿ. ಯಾರನ್ನೋ ಮೆಚ್ಚಿಸಲು ಕೆಲಸಮಾಡಬೇಕಾಗುವುದು. ತಪ್ಪುಗಳನ್ನು ಸರಿ ಮಾಡಿಯೇ ನಿಮಗೆ ಇಂದಿನ ಶ್ರಮವೆಲ್ಲ ವ್ಯರ್ಥವಾಗುವುದು. ಯಾವುದೇ ಊಹೆಗಳಿಗೆ ಬೆಲೆ ಕೊಡದೇ ಸ್ಪಷ್ಟವಾದುದನ್ನು ನಂಬಿ. 

 

ತುಲಾ ರಾಶಿ: ಹೊಸ ಕೆಲಸವನ್ನು ಪ್ರಾರಂಭಿಸುವುದು ನಿಮಗೆ ಸಂತೋಷವನ್ನು ನೀಡುತ್ತದೆಯಾದರೂ ಕ್ರಮಬದ್ಧ ಮಾಡಿಕೊಳ್ಳದಿದ್ದರೆ ಅದೂ ಗೊಂದಲವಾದೀತು. ಇಬ್ಬರ ನಡುವಿನ ಕಲಹದಲ್ಲಿ ತುಪ್ಪವನ್ನು ಸುರಿಯುವ ಕೆಲಸಕ್ಕೆ ಹೋಗಬೇಡಿ. ಕಾಲವು ಕೂಡಿಬಂದಾಗ ಎಲ್ಲವೂ ತನ್ನಿಂದ ತಾನೇ ಆಗುತ್ತದೆ. ನಿಮ್ಮ ಪ್ರಯತ್ನದಿಂದಲೇ ಎಲ್ಲವೂ ಸಿದ್ಧಿಸಬೇಕು ಎನ್ನುವುದು ಮೂರ್ಖತನ. ಜನರೊಡನೆ ಬಾಂಧವ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಿ. ಅವರ ಸಹಾಯ ಮುಂದೊಂದುದಿನ ಬೇಕಾದೀತು. ನಿಮ್ಮ ಗುರಿಯ ಬಗ್ಗೆ ಅಸ್ಪಷ್ಟತೆ ಇರಲಿ. ದೀರ್ಘಕಾಲದ ವೈರವು ಮುಕ್ತಾಯವಾಗುವುದು. ಮಾತನ್ನು ಚೆನ್ನಾಗಿ ಬಲ್ಲವರಾಗಿದ್ದರು ಕಟುವಾದ ಮಾತುಗಳನ್ನು ಆಡಬೇಡಿ. ಹೊಸ ಉದ್ಯೋಗಿಗಳನ್ನು ನಿಯೋಜಿಸಿಕೊಂಡು ಕಾರ್ಯವನ್ನು ವಿಸ್ತರಿಸಿ ಲಾಭವನ್ನು ಪಡೆಯುವ ದೀರ್ಘಕಾಲದ ಯೋಜನೆಯ ಕನಸನ್ನು ಕಾಣುವಿರಿ. ನೇರವಾಗಿ ಯಾರನ್ನೂ ದೂರುವುದಿಲ್ಲ. 

 

ವೃಶ್ಚಿಕ ರಾಶಿ: ಯಾವುದೇ ಪ್ರತಿಕೂಲ ಪರಿಸ್ಥಿತಿಯಲ್ಲಿ ನಿಮ್ಮ ಆತ್ಮಸ್ಥೈರ್ಯವು ಕುಸಿಯದಂತೆ ಇರಬೇಕಾಗುವುದು. ನಿಮ್ಮನ್ನು ಸಕಾರಾತ್ಮಕವಾಗಿ ಇಟ್ಟುಕೊಂಡು ಮುಂದಾಗಿ. ವೈವಾಹಿಕ ಜೀವನ ಸುಖಮಯವಾಗಿರಲು ನಿಮ್ಮ ಮಾತುಗಳೂ ಮುಖ್ಯ. ಕಳ್ಳರ ಭೀತಿಯು ಕಾಡಬಹುದು. ನಿಮ್ಮನ್ನು ಯಾರಾದರೂ ಮೋಸಗೊಳಿಸಲೂಬಹುದು. ಅನಾರೋಗ್ಯಕ್ಕೆ ಕಾರಣವು ಸಿಗದೇ ವಿವಿಧ ಔಷಧಗಳನ್ನು ಮಾಡುವಿರಿ. ಪ್ರಣಯ ಪ್ರಸಂಗದಲ್ಲಿ ಆಕಸ್ಮಿಕ ತಿರುವು ನಿಮಗೆ ಸಂತೋಷವನ್ನು ತರಬಹುದು. ಬಹಳ ಚಂಚಲವಾದ ಮನಸ್ಸನ್ನು ಶುಭವಾದ ಕಾರ್ಯದಲ್ಲಿ ಜೋಡಿಸಿ. ತಾಳ್ಮೆಯಿಂದ ಇದ್ದರೆ ಎಲ್ಲವನ್ನೂ ಸಾಧಿಸಲು ಸಾಧ್ಯ. ನಿಮ್ಮ ಸಂಕಟವನ್ನು ಹೇಳಿಕೊಂಡರೂ ತೊಂದರೆ, ಸುಮ್ಮನೆ ಇದ್ದರೂ ತೊಂದರೆ ಆಗುವುದು. ಅಪರಿಚಿತ ಕರೆಗಳು ಹೆಚ್ಚಾಗುವುದು. 

 

ಧನು ರಾಶಿ: ನಿಮ್ಮನ್ನು ನೀವೇ ಏಕಾಂಗಿ ಎಂದು ಲೆಕ್ಕಿಸುವುದು ಬೇಡ. ನಿಮ್ಮ ವೃತ್ತಿಜೀವನವನ್ನು ಮುನ್ನಡೆಸಲು ಮಾರ್ಗದರ್ಶನವನ್ನು ಪಡೆಯುತ್ತೀರಿ. ನಿಮ್ಮ ಕರ್ಮಗಳು ಇತರರಿಗೆ ಮಾದರಿಯಾದೀತು. ಯಾರ ಮಧ್ಯದಲ್ಲಿಯೂ ನೀವು ವಾದದ ನಿರ್ಣಾಯಕರಾಗಿ ಹೋಗಬೇಡಿ. ಸಂಗಾತಿಯ ತಪ್ಪುಗಳನ್ನು ಹೇಳುವ ರೀತಿಯಲ್ಲಿ ಹೇಳಿ. ನೋವಾಗದ ರೀತಿಯಲ್ಲಿ ಹೇಳಿದರೆ ಸಂಬಂಧವು ಚೆನ್ನಾಗಿರುವುದು. ಇರುವುದರಲ್ಲಿ ತೃಪ್ತಿ ಇರಲಿ. ಆಗದವರಿಗೆ ನೀವು ಇಂದು ಸಹಾಯ ಮಾಡಲಿದ್ದೀರಿ. ನಿಮ್ಮ ಗುಣಮಟ್ಟವನ್ನು ಕಾಯ್ದಿರಿಸಿಕೊಳ್ಳುವುದು ಕಷ್ಟವಾದೀತು. ಇಂದು ಶತ್ರುವಿನ ಆಗಲಿಕೆಯಿಂದ ಸಂತೋಷವಾಗುವುದು‌. ನಿಮ್ಮ ವಿದ್ಯಾಭ್ಯಾಸದ ಸಾಮರ್ಥ್ಯವನ್ನು ತೋರಿಸುವಿರಿ. ನಿಮ್ಮ ನಿಮಗೆ ಸಿಕ್ಕ ಬೆಂಬಲವನ್ನು ಇನ್ನೊಬ್ಬರಿಗೂ ಕೊಡುವ ಮನಸ್ಸು ಮಾಡಿ. ಅತಿಯಾದ ಸಲುಗೆಯಿಂದ ನಿಮಗೆ ತೊಂದರೆ ಆಗಬಹುದು.

 

ಮಕರ ರಾಶಿ:  ನಿಮ್ಮ ಸಾಂಸಾರಿಕ ತೊಂದರೆಗೆ ನಿಮ್ಮ ಸಹೋದರ ಸಹೋದರಿಯರಿಂದ ಸರಿಯಾದ ಪರಿಹಾರವು ಪ್ರಾಪ್ತವಾಗಲಿದೆ. ನಿಮ್ಮ ಪ್ರಯತ್ನಕ್ಕೆ ಯೋಗ್ಯವಾದ ಫಲವು ಸಿಗಬಹುದು. ವೃತ್ತಿಯಲ್ಲಿ ಹೆಚ್ಚಿನ ಪ್ರಗತಿ ಇರಲಿದೆ. ದುಡುಕಿನ ನಿರ್ಧಾರದಿಂದ ದುಃಖಪಡಬೇಕಾದೀತು. ಶತ್ರುಗಳು ನಿಮ್ಮ ಸಂಪತ್ತನ್ನು ಕರಗಿಸಲು ತಂತ್ರವನ್ನು ಹೆಣೆಯಬಹುದು. ಕೆಳಸ್ತರದವರ ಜೊತೆ ಬಹಳ ಅಸಹ್ಯವಾಗಿ ನಡೆದುಕೊಳ್ಳುವುದು ಬೇಡ. ಇಂದಿನ ಕಛೇರಿಯ ಕೆಲಸದಲ್ಲಿ ಪೂರ್ಣ ಮನಸ್ಸು ಇರಲಾರದು. ಹಳೆಯ ಸ್ನೇಹಿತರನ್ನು ನೀವು ಭೇಟಿಯಾಗಿ ಎಲ್ಲ ಸಂಗತಿಗಳನ್ನು ಹಂಚಿಕೊಳ್ಳುವಿರಿ. ಚರಾಸ್ತಿಯ ವಿಷಯದಲ್ಲಿ ನೀವು ಅಸ್ವತಂತ್ರರಾಗಿ ಇರುವಿರಿ. ಮನೆಯ ಕಾರ್ಯದಲ್ಲಿ ನಿಮಗೆ ಒತ್ತಡವು ಅಧಿಕವಾಗಿ ಇರಲಿದೆ. ಯಾವುದೋ ಅಜ್ಞಾತ ಸಂಸ್ಥೆಯಲ್ಲಿ ಹಣ ಹೂಡಿಕೆಯನ್ನು ಮಾಡಲು ಹೋಗುವಿರಿ

 

ಕುಂಭ ರಾಶಿ: ಆಧ್ಯಾತ್ಮಿಕ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಸ್ವಲ್ಪ ಸಮಯವನ್ನು ಕಳೆದು ನೆಮ್ಮದಿಯನ್ನು ಪಡೆಯುವಿರಿ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಹೆಚ್ಚು ಶ್ರಮವಹಿಸಬೇಕಾದೀತು. ಪ್ರೀತಿಯಲ್ಲಿ ಆಕಸ್ಮಿಕ ತಿರುವಿನಿಂದ ಹತಾಶರಾಗುವಿರಿ. ಸ್ವತಂತ್ರವಾಗಿ ತೀರ್ಮಾನವನ್ನು ತೆಗದುಕೊಳ್ಳಲು ಕಷ್ಟವಾದರೂ ನೀವೇ ತೆಗೆದುಕೊಳ್ಳಿ. ನಿಮ್ಮ ಇಚ್ಛೆಗೆ ಅನುಸಾರವಾಗಿ ನಡೆಯುವುದು ಕಷ್ಟವಾಗುವುದು. ಇಂದು ಕಷ್ಟಕರವಾಗಿದ್ದರೂ ಪ್ರಯಾಣವನ್ನು ಮಾಡಲೇ ಬೇಕಾಗಿದೆ. ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ನಿಮ್ಮ ಆರೋಗ್ಯದ ಸಮಸ್ಯೆಯನ್ನು ತಳ್ಳಿಹಾಕುವುದು ಬೇಡ. ಗುರಿಯ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ವೈಫಲ್ಯಕ್ಕೆ ಕಾರಣವಾಗುವುದು. 

 

ಮೀನ ರಾಶಿ: ಯಾರಾದರೂ ಸಾಲವನ್ನು ಕೇಳಿ ಬರಬಹುದು. ನಯವಾಗಿ ತಳ್ಳಿಹಾಕುವಿರಿ. ಕೋಪಗೊಳ್ಳುವ ಬದಲು ಶಾಂತರೀತಿಯಿಂದ ಸಮಸ್ಯೆಯನ್ನು ಪರಿಹರಿಸಿ. ಸಮಸ್ಯೆಗಳು ಬಂದಾಗ ಉದ್ವೇಗಕ್ಕೆ ಒಳಗಗಾದೇ ಬಗೆಹರಿಸಿಕೊಳ್ಳಿ. ರಾಜಕೀಯ ವ್ಯಕ್ತಿಗಳ ಸಹವಾಸದಿಂದ ನಿಮ್ಮ ಕಾರ್ಯಗಳು ಸಲೀಸಾಗಿ ಆಗಲಿದೆ. ಅಪಮಾನವಾಗುವ ಘಟನೆಗಳು ನಡೆಯಬಹುದು. ಆರ್ಥಿಕ ಸಂಕಷ್ಟಕ್ಕೆ ನಿಮ್ಮ ಉಪಾಯಗಳನ್ನು ಆರಂಭಿಸುವಿರಿ. ಆಸ್ತಿ ವ್ಯವಹಾರದಲ್ಲಿ ಸ್ವಲ್ಪಮಟ್ಟಿಗೆ ಕಲಹಾದಿಗಳು ಆಗಿ ಬಗೆ ಹರಿಯುವುದು. ಉದ್ಯೋಗದ ಸ್ಥಳದಲ್ಲಿ ಸಹೋದ್ಯೋಗಿಗಳ ನೆರವು ಸಿಗಲಿದೆ. ಕುಟುಂಬದ ಜೊತೆ ಸಮಯವನ್ನು ಕಳೆಯಬೇಕು ಎಂದುಕೊಂಡರೂ ಅದು ಆಗದು. 

 


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

4 months ago

   
Image 1
Image 1

ಮಂಗಳವಾರ- ರಾಶಿ ಭವಿಷ್ಯ ಜೂನ್-18,2024

ಮೇಷ ರಾಶಿ: ದಂಪತಿಗಳಿಗೆ ಸಂತಾನದ ಯೋಚನೆ,ಮದುವೆ ಕಾರ್ಯಗಳಲ್ಲಿ ಅಡತ... ಓದನ್ನು ಮುಂದುವರಿಸಿ


Edited by: ಬಾನು

4 months ago

   
Image 1

ಸೋಮವಾರ- ರಾಶಿ ಭವಿಷ್ಯ ಜೂನ್-17,2024

ಮೇಷ ರಾಶಿ : ಬಹುದಿನದ ಕಾನೂನು ಹೋರಾಟ ಜಯಕಾಣುವಿರಿ,ಪತ್ರಿಕೋದ್ಯಮಿ... ಓದನ್ನು ಮುಂದುವರಿಸಿ


Edited by: ಬಾನು

4 months ago

   
Image 1

ಭಾನುವಾರ ರಾಶಿ ಭವಿಷ್ಯ -ಜೂನ್-16,2024

ಮೇಷ ರಾಶಿ : ಕೆಲಸದಲ್ಲಿ ನಿಮಗೆ ಉತ್ತಮ ಲಾಭ ಇರಲಿದೆ. ಕುಟುಂಬ ವ್ಯ... ಓದನ್ನು ಮುಂದುವರಿಸಿ


Edited by: ಬಾನು

4 months ago

   
Image 1

ಶುಕ್ರವಾರ ರಾಶಿ ಭವಿಷ್ಯ -ಜೂನ್-14,2024.

ಮೇಷ ರಾಶಿ: ಮನೆಯಲ್ಲಿ ತಯಾರಿಸಿ ವ್ಯಾಪಾರ-ವಹಿವಾಟು ಮಾಡುವವರಿಗೆ ಅ... ಓದನ್ನು ಮುಂದುವರಿಸಿ


Edited by: ಬಾನು

4 months ago

   
Image 1

ಗುರುವಾರ- ರಾಶಿ ಭವಿಷ್ಯ ಜೂನ್-13,2024.

ಮೇಷ ರಾಶಿ : ವಾಹನ ಅಪಘಾತ ಸಂಭವ ಜಾಗ್ರತೆಯಿಂದ ಸಂಚರಿಸಿ ,ಕುಟುಂಬದ... ಓದನ್ನು ಮುಂದುವರಿಸಿ


Edited by: ಬಾನು

4 months ago

   
Image 1

ಬುಧವಾರ ರಾಶಿ ಭವಿಷ್ಯ -ಜೂನ್-12,2024

ಮೇಷ ರಾಶಿ : ನಿಮ್ಮನ್ನು ಯಾರಾದರೂ ಬಳಸಿಕೊಂಡು ಕೈಬಿಡಬಹುದು. ನೀವಿ... ಓದನ್ನು ಮುಂದುವರಿಸಿ


Edited by: ಬಾನು

4 months ago

   
Image 1

ಮಂಗಳವಾರ ರಾಶಿ ಭವಿಷ್ಯ -ಜೂನ್-11,2024

ಮೇಷ ರಾಶಿ: ರಂಗಭೂಮಿ ಕಲಾವಿದರಿಗೆ ಚಲನಚಿತ್ರದಲ್ಲಿ ನಟನೆ ಮಾಡುವ ಅ... ಓದನ್ನು ಮುಂದುವರಿಸಿ


Edited by: ಬಾನು

4 months ago

   
Image 1

ಸೋಮವಾರ ರಾಶಿ ಭವಿಷ್ಯ -ಜೂನ್-10,2024

ಮೇಷ ರಾಶಿ: ನಂಬಿದ ಸಹೋದ್ಯೋಗಿಯಿಂದ ನೌಕರದಾರರಿಗೆ ಮುಂಬಡ್ತಿಯಿಂದ... ಓದನ್ನು ಮುಂದುವರಿಸಿ


Edited by: ಬಾನು

4 months ago

   
Image 1

ಭಾನುವಾರ ರಾಶಿ ಭವಿಷ್ಯ -ಜೂನ್-9,2024

ಮೇಷ: ಶಿಕ್ಷಕರಿಗೆ ಖಾಯಂ ಭಾಗ್ಯ ಲಭಿಸಲಿದೆ, ಕೆಲವರಿಗೆ ಅತಿಥಿ ಶಿಕ... ಓದನ್ನು ಮುಂದುವರಿಸಿ


Edited by: ಬಾನು

4 months ago

   
Image 1

ಶನಿವಾರ ರಾಶಿ ಭವಿಷ್ಯ-ಜೂನ್-8,2024

ಮೇಷ ರಾಶಿ: ಮಾನಸಿಕ ವೇದನೆ, ವ್ಯಾಪಾರಿಗಳಿಗೆ ಧನ ಲಾಭ, ಮಿತ್ರರಿಂದ... ಓದನ್ನು ಮುಂದುವರಿಸಿ


Edited by: ಬಾನು

4 months ago

   
Image 1