ಬುಧವಾರ ರಾಶಿ ಭವಿಷ್ಯ -ಜೂನ್-12,2024
ಮೇಷ ರಾಶಿ : ನಿಮ್ಮನ್ನು ಯಾರಾದರೂ ಬಳಸಿಕೊಂಡು ಕೈಬಿಡಬಹುದು. ನೀವಿಂದು ಮಂಗಲಕಾರ್ಯಗಳಿಗೆ ಹಣವನ್ನು ನೀಡುವಿರಿ. ದೂರದ ಊರಿಗೆ ಪ್ರಯಾಣಹೊಗುವ ಸಾಧ್ಯತೆ ಇದೆ. ಕೆಲಸವು ಬಹಳ ನಿಧಾನವಾಗುವುದು. ಬೇಸರವೂ ಬರಬಹುದು. ಉದ್ಯೋಗಕ್ಕೆ ಸಂಬಂಧಪಟ್ಟ ನಿರ್ಧಾರವನ್ನು ಒಬ್ಬರೇ ತೆಗೆದುಕೊಳ್ಳಬೇಡಿ. ವಿದ್ಯಾಭ್ಯಾಸದ ಬಗದಗೆ ಅತಿಯಾದ ಚಿಂತೆ ಬೇಡ. ಆಗುವುದು ಆಗಿಯೇ ಆಗುವುದು ಎಂಬ ಸತ್ಯ ತಿಳಿದಿರಿಲಿ. ಆರೋಗ್ಯವು ಹಾಳಾಗಬಹುದು. ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಹಿನ್ನಡೆಯಾಗುವುದು. ಸಹೋದ್ಯೋಗಿಗಳ ವರ್ತನೆಯು ಇಷ್ಟವಾಗದೇ ಸಿಟ್ಟಾಗುವಿರಿ.
ವೃಷಭ ರಾಶಿ : ನಿಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಲ್ಲ ಕಡೆ ಎಂದು ಅನ್ನಿಸುತ್ತಿರಬಹುದು. ಅದನ್ನು ಆಲೋಚನೆಯಿಂದ ದೂರವಿರಿಸಿ. ಇಂದು ದುಃಸ್ವಪ್ನವು ನಿಮ್ಮನ್ನು ಚಿಂತಿತರನ್ನಾಗಿ ಮಾಡುವುದು. ಸೌಂದರ್ಯಪ್ರಜ್ಞೆಯು ನಿಮಗೆ ವರದಾನವೆಂದೇ ತಿಳಿಯುತ್ತದೆ. ನಿಮ್ಮ ಬಗ್ಗೆ ನಿಮ್ಮ ಶತ್ರಗಳು ವಿವರವನ್ನು ಕಲೆಹಾಕಬಹುದು. ಅತಿಯಾದ ನಿರ್ಲಕ್ಷ್ಯ ಬೇಡ. ಯಾವ ನಕಾರಾತ್ಮಕ ಆಲೋಚನೆಗಳಿಗೂ ಸ್ಪಂದಿಸಲಾರಿರಿ. ನಿಯಮಪಾಲನೆಯಲ್ಲಿ ನೀವು ನಿಸ್ಸೀಮರು. ಅನಾದರದಿಂದ ನಿಮಗೆ ಬೇಸರವಾದೀತು. ಎಲ್ಲ ಸಮಸ್ಯೆಯೂ ನಿಮ್ಮದೇ ಎಂಬಂತೆ ಇರುವಿರಿ.
ಮಿಥುನ ರಾಶಿ : ಕೃಷಿಗೆ ಸಂಬಂಧಪಟ್ಟ ಕೆಲಸಗಳನ್ನು ಮಾಡಲು ಬಯಸುತ್ತೀರಿ. ನಿಮ್ಮ ಸ್ವಂತ ವಾಹನದಲ್ಲಿ ಇಂದು ಎಲ್ಲಿಗೂ ಪ್ರಯಾಣ ಮಾಡಬೇಡಿ. ನ್ಯಾಯಸಮ್ಮತವಲ್ಲದ ಕೆಲಸದಲ್ಲಿ ತೊಡಗುವಿರಿ. ನಿಮಗೆ ಅದನ್ನು ಹಿತಶತ್ರುಗಳೇ ಮಾಡುವಂತೆ ಮಾಡುತ್ತಾರೆ. ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಕೀಳರಿಮೆ ಬರಬಹುದು. ಅನ್ಯರು ಮಾಡುವ ಕುಚೋದ್ಯವು ನಿಮಗೆ ಸಹಿಸಲಾಗದು. ಉತ್ತಮವಾದ ವಿದ್ಯಾಭ್ಯಾಸವನ್ನು ಮಾಡಲು ಮನಸ್ಸು ಮಾಡುವಿರಿ. ಹೊಸದಾದ ವಾಹನವನ್ನು ಖರೀದಿಸುವಿರಿ. ಪ್ರಭಾವೀವ್ಯಕ್ತಿಗಳು ನಿಮ್ಮನ್ನು ಭೇಟಿಯಾಗಲು ಬರಬಹುದು. ಉದ್ಯಮದಲ್ಲಿ ಕ್ರಿಯಾಶೀಲತೆಯನ್ನು ಬಯಸುವಿರಿ.
ಕಟಕ ರಾಶಿ : ನಿಮಗೆ ಗೌರವ ಸಿಗದ ಜಾಗದಲ್ಲಿ ಹೆಚ್ಚು ಕಾಲ ಇರಲಾರಿರಿ. ಎತ್ತರದ ಯಾವುದಾರೂ ಪ್ರದೇಶಕ್ಕೆ ಹೋಗಬೇಕು ಎಂದು ಅನ್ನಿಸಬಹುದು. ಉದ್ಯೋಗದ ಸ್ಥಳದಲ್ಲಿ ಶಿಸ್ತಿನ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ಬೇಕೆನಿಸಿದ ವಸ್ತುವನ್ನು ಶ್ರಮದಿಂದ ಪಡೆಯುವಿರಿ. ನಿಮಗೆ ಹಿತವಚನವು ಮನಸ್ಸಿಗೆ ಬೇಸರವನ್ನೇ ತರಿಸುವುದು. ವಾಹನ ಖರೀದಿಯು ನಿಮಗೆ ಅನಿವಾರ್ಯ ಎನಿಸುವುದು. ಅಪಕ್ವಮನುಷ್ಯರ ಜೊತೆ ಮಾತುಕತೆಗಳು ಬೇಡ. ಅಪಮಾನವಾದೀತು. ಸಮಾರಂಭಗಳಲ್ಲಿ ಬಂಧುಗಳು ನಿಮ್ಮನ್ನು ಭೇಟಿಯಾಗುವರು. ನಿಮ್ಮ ವಿರೋಧಿಗಳಗೆ ಮಾತಿನಿಂದ ಉತ್ತರಿಸಿ ಉಪಯೋಗವಿಲ್ಲ. ಕೃತಿಯಿಂದ ತೋರಿಸಿ.
ಸಿಂಹ ರಾಶಿ : ಆಕಾಶಕ್ಕೆ ಏಣಿ ಹಾಕಲು ಹೋಗುವುದು ಬೇಡ. ಕೈಲಾಗುವಷಗಟನ್ನು ಇಷ್ಟು ದಿನ ಮನಸ್ಸಿನಲ್ಲಯೇ ಇಟ್ಟುಕೊಂಡ ಬಯಕೆಯನ್ನು ಹೊರ ಹಾಕುವಿರಿ. ನಿಮ್ಮ ಸ್ವಭಾವವು ನಿಮ್ಮವರಿಗೆ ತಿಲಕಿಯುವುದು. ಅನಿರೀಕ್ಷಿತವಾಗಿ ಬಂಧುಗಳ ಭೇಟಿಯಾಗಲಿದೆ. ಆದರೂ ನಿಮ್ಮ ಯೋಜಿತವಾದ ಕಾರ್ಯಗಳು ನಿರ್ಬಿಡೆಯಿಂದ ಸಾಗುವುದು. ಆಭರಣವನ್ನು ಖರೀದಿಸಲು ಇಚ್ಛೆ ಇರುವುದು. ನಿಮ್ಮ ಮನಸ್ಸಿಗೆ ಹಿಡಿಸಿದವರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ನಿಮ್ಮಿಂದ ಆಗದ್ದನ್ನು ಮತ್ಯಾರೋ ಮಾಡಬಹುದು. ಪ್ರಭಾವಿ ವ್ಯಕ್ತಿತ್ವವು ನಿಮಗೆ ಅನುಸರಣೀಯವಾಗಬಹುದು. ಮಕ್ಕಳ ಪ್ರೀತಿಯನ್ನು ಪಡೆದುಕೊಳ್ಳುವಿರಿ. ಪ್ರೀತಿಯಲ್ಲಿ ಸಣ್ಣ ಕಲಹವಾಗಬಹುದು. ಸಂಗಾತಿಯ ಪ್ರೀತಿಯನ್ನು ನೀವು ಅರಗಿಸಿಕೊಳ್ಳಲಾರಿರಿ.
ಕನ್ಯಾ ರಾಶಿ : ನಿಮ್ಮ ಬೆಂಬಲಕ್ಕೆ ಯಾರೂ ಬಾರದೇ ಇಂದು ವಾದವು ವ್ಯರ್ಥವಾಗುವುದು. ಸರಿಯಾದ ಮಾಹಿತಿ ಪಡೆದು ಹೂಡಿಕೆ ಮಾಡಿ. ಯಾರ ಒತ್ತಾಯಕ್ಕೂ ಮಣಿಯಬೇಡಿ. ತಂದೆ-ತಾಯಿಯರು ಒತ್ತಾಯ ಮಾಡಿದರೂ ಅವರ ಮಾತಿಗೆ ಬೆಲೆ ಕೊಡದೇ ಮನೆಯಿಂದ ದೂರಾಗುವಿರಿ. ವ್ಯಸನಿಗಳಾಗುವ ಸಾಧ್ಯತೆ ಇದೆ. ಆರೋಗ್ಯದ ವ್ಯತ್ಯಾಸದಿಂದ ಸಾಲವನ್ನು ಮಾಡುವ ಸ್ಥಿತಿಯು ಅನಿರೀಕ್ಷಿತವಾಗಿ ಎದುರಾಗಬಹುದು. ಚಂಚಲವಾದ ಮನಸ್ಸು ನಿಮ್ಮನ್ನು ಓದಲು ಬಿಡದು. ಸೌಂದರ್ಯಕ್ಕೆ ಮರುಳಾಗುವಿರಿ. ಅನಾಮಧೇಯ ಕರೆಗಳಿಂದ ತೊಂದರೆಯಾಗಬಹುದು. ಅವುಗಳಿಂದ ದೂರವಿರುವುದು ಉಚಿತ. ನಿಮ್ಮ ಅಹಂಕಾರಕ್ಕೆ ಪೆಟ್ಟುಬೀಳುವುದು. ಯಾವ ವಿವರಗಳನ್ನೂ ಕೊಡಬೇಡಿ. ಅದನ್ನು ಹೊಂದಿಸುವುದು ಕಷ್ಟವಾದೀತು. ವಾಗ್ವಾದವಾಗುವುದೆಂಬ ಭಯವೂ ನಿಮ್ಮನ್ನು ಕಾಡುವುದು. ನಿಮ್ಮ ಆರ್ಥಿಕತೆಯನ್ನು ಗೌಪ್ಯವಾಗಿ ಇಡಬೇಕು ಎನಿಸುವುದು.
ತುಲಾ ರಾಶಿ : ನೀವು ಏನೂ ಗೊತ್ತಿಲ್ಲದವರಂತೆ ವರ್ತಿಸಿ, ಮುಂಬರುವ ಸಂಕಟದಿಂದ ಬಚಾವಾಗುವಿರಿ. ಸಾಮಾಜಿಕ ಕಾರ್ಯದಲ್ಲಿ ತೊಡಗುವ ಮನಸ್ಸಿದ್ದರೂ ದೇಹವು ಅದಕ್ಕೆ ಸಹಕರಿಸದೇ ಇರಬಹುದು. ಆಗಿರುವುದನ್ನು ನೆನಪಿಸಿಕೊಂಡು ಸಂಕಟಪಡುವ, ದುಃಖಿಸುವ ಅಗತ್ಯವಿಲ್ಲ. ದೇವರ ಸೃಷ್ಟಿಯಲ್ಲಿ ಎಲ್ಲವೂ ಸಹಜವೇ ಎಂಬ ಸಂಗತಿಯನ್ನು ತಿಳಿಯಿರಿ. ವಾಹನವನ್ನು ಖರೀದಿಸಲಿದ್ದು ತಂದೆಯಿಂದ ಸಾಲವನ್ನು ಪಡೆಯುವಿರಿ. ಯಾರನ್ನಾದರೂ ಪ್ರೀತಿಸಬೇಕಿತ್ತು ಎಂಬ ಭಾವ ನಿಮಗೆ ಬರಲಿದೆ. ಯಾರಮೇಲಾದರೂ ಪ್ರೀತಿಯು ಉಂಟಾಗಬಹುದು. ಸುಮ್ಮನೇ ಕುಳಿತು ಸಮಯವನ್ನು ವ್ಯರ್ಥಮಾಡಬೇಡಿ. ಆರ್ಥಿಕ ವಿಚಾರಕ್ಕೆ ಯಾರಾದರೂ ಮಧ್ಯ ಪ್ರವೇಶಿಸುವುದರಿಂದ ಸಿಟ್ಟಾಗುವಿರಿ. ಯಾರನ್ನೂ ಸರಿಯಾಗಿ ಅರ್ಥಮಾಡಿಕೊಳ್ಳದೇ ನಿಮ್ಮ ಬಳಿ ಅವರನ್ನು ಬಿಟ್ಟುಕೊಳ್ಳಬೇಡಿ.
ವೃಶ್ಚಿಕ ರಾಶಿ : ಸ್ನೇಹಿತರು ನಿಮಗೆ ಉತ್ತಮ ಕೆಲಸ ಹಾಗು ಸಂಬಳದ ಸ್ಥಳವನ್ನು ತಿಳಿಸಬಹುದು. ಎಲ್ಲರನ್ನೂ ಮೆಚ್ಚಿಸುವ ಪ್ರಯತ್ನವು ವ್ಯರ್ಥವೇ ಸರಿ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸವನ್ನು ಮಾಡಿ. ಯಾರಿಗೂ ಭರವಸೆಯನ್ನು ನೀಡಲು ಹೋಗಬೇಡಿ. ಮನೆಗೆ ಬಂದವರ ಎದುರು ಜಗಳವಾಡುವಿರಿ. ಅವರೇ ನಿಮ್ಮನ್ನು ಸಮಾಧಾನ ಮಾಡಬೇಕಾದೀತು. ನಿಮ್ಮ ಮಾತನ್ನು ಎಲ್ಲರೂ ಕೇಳರು. ಕೇಳುವ ಹಾಗೆ ನಿಮ್ಮ ಮಾತಿರಲಿ. ಓಡಾಟ ಬೇಡವೆಂದು ಕುಳಿತ ನಿಮಗೆ ಅನಿವಾರ್ಯದ ಪ್ರಯಾಣವು ಬರಲಿದೆ. ಅಪರಿಚಿತರ ವ್ಯವಹಾರವನ್ನು ಜಾಣ್ಮೆಯಿಂದ ಮಾಡಿ. ಅದು ನಿಮ್ಮನ್ನು ಹೈರಾಣ ಮಾಡುವುದು. ಗೃಹನಿರ್ಮಾಣದ ದಾಖಲಾತಿಗೆ ನೀವು ಓಡಾಟ ಮಾಡಬೇಕಾಗುವುದು. ಸಾರ್ವಜನಿಕ ಮನ್ನಣೆಯನ್ನು ಗಳಿಸವಿರಿ. ಉದ್ಯಮದ ವಿಸ್ತರಣೆಗೆ ನಿಮ್ಮ ಕ್ರಮವು ಯಶಸ್ವಿಯಾಗುವುದು.
ಧನು ರಾಶಿ : ಕುಟುಂಬದ ಕಾಳಜಿಯೇ ನಿಮ್ಮೆದುರು ಮತ್ತೆ ಮತ್ತೆ ಬರಬಹುದು. ಸಜ್ಜನರ ಸಹವಾಸ ಸಿಗಲಿದೆ. ಅನ್ಯಚಿಂತೆಯಿಂದ ಕೆಲಸಗಳು ಹಾಗೆಯೇ ಉಳಿದಿರಬಹುದು. ಸಮಾಜಕ್ಕೆಂದು ನಿಮ್ಮನ್ನು ನೀವು ಸಮರ್ಪಣೆ ಮಾಡಿಕೊಳ್ಳುವ ಮನಸ್ಸು ಮಾಡುವಿರಿ. ಅದು ನಿಮಗೆ ಮುಳುವಾದೀತು. ಉದ್ವೇಗದ ಮಾತುಗಳು ನಿಮ್ಮ ಮಾನಸಿಕ ಸ್ಥಿತಿಯನ್ನು ತೋರಿಸುತ್ತದೆ. ಆರ್ಥಿಕವಾದ ದುರ್ಬಲತೆ ನಿಮ್ಮನ್ನು ಕಾಡಬಹುದು. ಗೊತ್ತಿಲ್ಲದ ವಿಚಾರವನ್ನು ತಿಳಿಯಲು ಪ್ರಯತ್ನಿಸಿ. ಪ್ರಪಂಚದ ಬೇರೆ ಬೇರೆ ಸ್ಥಳಗಳಿಗೆ ಹೋಗುವ ಆಸೆಯುಳ್ಳವರಾಗಿರುವಿರಿ. ಧಾರ್ಮಿಕ ಕಾರ್ಯಗಳನ್ನು ಮಾಡಲು ಒಲವು ಬರಲಿದೆ. ಕುಟುಂಬದವರು ನಿಮ್ಮನ್ನು ಬಹಳ ಪ್ರೀತಿಸುವರು. ಅವರಿಗೆ ಸ್ವಲ್ಪ ಸಮಯ ಕೊಡಿ. ಹಣವನ್ನು ಉಳಿಸಲು ಪ್ರಯತ್ನಶೀಲರಾಗುವಿರಿ. ಒಂದು ರೀತಿಯಲ್ಲಿ ನಿಮಗೆ ಆತಂಕದ ದಿನವೂ ಇದಾಗಬಹುದು. ನೀವು ಕೆಲವು ಅಪೂರ್ಣ ಕಾರ್ಯಗಳನ್ನು ಮಾಡಿ ಮುಗಿಸುವಿರಿ.
ಮಕರ ರಾಶಿ : ಇದನ್ನು ಯಾರಿಗೂ ತಿಳಿಸಲು ಇಷ್ಟಪಡುವುದಿಲ್ಲ. ನಿಮ್ಮನ್ನು ಇಷ್ಟಪಟ್ಟವರಿಗೆ ಇಂದು ನಿಮ್ಮಿಂದ ಅಸಮಾಧಾನವಾಗುವ ಸಾಧ್ಯತೆ ಇದೆ. ಅಧಿಕಾರದ ಆಸೆಯಿಂದ ಮತ್ಯಾರನ್ನೋ ಕೆಟ್ಟವರನ್ನಾಗಿ ಮಾಡುವುದು ಸರಿಯಲ್ಲ. ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ, ಬೇಕಾದ ಶ್ರಮವಹಿಸಿ. ಅನಾರೋಗ್ಯವು ನಿಮ್ಮ ಮಾನಸಿಕ ನೆಮ್ಮದಿಯನ್ನು ಹಾಳುಮಾಡಬಹುದು. ಅನಾಯಸದಿಂದ ಬಂದ ಹಣವು ನಿಮಗೆ ದಕ್ಕದು. ಬೇಡದ ಕಾರ್ಯಕ್ಕೆ ವಿನಿಯೋಗವಾಗಲಿದೆ. ಮಾತನ್ನು ಯೋಗ್ಯವಾಗಿ, ಯೋಗ್ಯಸ್ಥಾನದಲ್ಲಿ ಆಡಿರಿ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಹೋರಾಡುವಿರಿ. ಯಾರನ್ನೂ ಒತ್ತಾಯಿಸದೇ ಕೆಲಸವನ್ನು ಮಾಡಿಸಿಕೊಳ್ಳಿ. ಕೃಷಿಯಲ್ಲಿ ಲಾಭ ಗಳಿಸಬೇಕೆಂದು ನಾನಾ ಪ್ರಯತ್ನವನ್ನು ಮಾಡುವಿರಿ. ಇಂದಿನ ಆದಾಯಕ್ಕೆ ತಕ್ಕಂತೆ ಖರ್ಚೂ ಇರಲಿದೆ. ವೃತ್ತಿಯ ಕುರಿತು ಯಾರಾದರೂ ಕೇಳಿಯಾರು. ಆದಾಯವನ್ನೂ ಕೇಳಬಹುದು.
ಕುಂಭ ರಾಶಿ : ಹಣದ ತೊಂದರೆ ಎದ್ದು ಕಾಣಿಸುತ್ತದೆ. ಇದರಿಂದ ಚಿಂತೆಯೂ ಆಗಬಹುದು. ಮನೆಯವರ ಸಹಾಯವು ಅನಿವಾರ್ಯವಾದರೆ ಸಿಗಲಿದೆ. ಮನೆಯವರ ಜೊತೆ ಹೆಚ್ಚು ಸಮಯವನ್ನು ಕಳೆಯಲು ಇಚ್ಛಿಸುವಿರಿ. ಒತ್ತಡವನ್ನು ತಂದುಕೊಳ್ಳದೇ ಕೆಲಸವನ್ನು ಮಾಡಿ. ಇಲ್ಲವಾದರೆ ಆರೋಗ್ಯದ ಮೇಲೆ ಹೆಚ್ಚು ಪ್ರಭಾವವನ್ನು ಬೀರಬಹುದು. ಗೊತ್ತಿದ್ದರೂ ಕೇಳದೇ ಯಾರಿಗೂ ಏನನ್ನೂ ಹೇಳಬೇಡಿ. ವಸ್ತುಗಳ ಖರೀದಿಯಿಂದ ಉಂಟಾದ ಧನದ ವ್ಯಯವು ನಿಮ್ಮಲ್ಲಿ ಆತಂಕವನ್ನು ಉಂಟುಮಾಡಲಿದೆ. ಕಥೆಯನ್ನು ಹೇಳವ ಆಸಕ್ತಿ ಹೆಚ್ಚಾಗಬಹುದು. ಬರವಣಿಗೆಯ ವಿಚಾರದಲ್ಲಿ ಹೆಚ್ಚು ಮನಸ್ಸನ್ನು ಕೊಡಿ. ಬೇಸರಿಸದೇ ಬಂದುದನ್ನು ಬಂದಂತೆ ಎದುರಿಸವುದು ನಿಮಗೆ ಸ್ವಭಾವಸಿದ್ಧ. ವಾಚಾಳಿತನವು ನಿಮ್ಮ ಸ್ನೇಹಕ್ಕೆ ತೊಂದರೆಯಾಗಬಹುದು. ಕಾರ್ಯಕ್ಷೇತ್ರದಲ್ಲಿ, ನೀವು ಬಯಸಿದ ಕೆಲಸವನ್ನು ಮಾಡುವಿರಿ. ನೀವು ಶುಭ ಕಾರ್ಯಗಳಿಗೆ ಹಣವನ್ನು ಖರ್ಚು ಮಾಡುತ್ತೀರಿ. ಕಾರ್ಯನಿರ್ವಹಣೆಗೆ ಪ್ರಶಂಸೆಯು ಸಿಗಲಿದೆ. ಗ್ರಾಹಕರಿಂದ ಮೋಸ ಹೋಗಬೇಕಾದೀತು.
ಮೀನ ರಾಶಿ : ಮನಸ್ಸು ಮತ್ತು ದೇಹಕ್ಕೂ ಶ್ರಮವಾಗಬಹುದು. ಯೋಗ ಹಾಗೂ ಧ್ಯಾನದಿಂದ ಶ್ರಮದ ಪರಿಹಾರವಾಗಲಿದೆ. ಯಾವುದೂ ಸರಿಯಿಲ್ಲ ಎಂದು ಹೇಳುವ ಬದಲು ಏನು ಸರಿಯಿದೆ? ಹೇಗೆ ಸರಿ ಮಾಡಬಹುದು ಎನ್ನುವ ಬಗ್ಗೆ ಗಮನ ಕೊಡಿ. ಸಂಸ್ಥೆಯು ನಿಮ್ಮ ನೇತೃತ್ವದಲ್ಲಿ ಚೆನ್ನಾಗಿ ನಡೆಯಬಹದು. ಅವುಗಳ ಕುರಿತು ಅತಿಯಾಗಿ ಆಲೋಚಿಸಿದಷ್ಟೂ ಸಮಸ್ಯೆಗಳು ಹಾಗೇ ಇರುತ್ತವೆ. ಹೊಸ ಉದ್ಯೋಗದ ಸೃಷ್ಟಿಗೆ ಹೆಚ್ಚು ಮನಸ್ಸು ಮಾಡುವಿರಿ. ವಾಹನದಿಂದ ಅಪಘಾತವಾಗುವ ಸಾಧ್ಯತೆ. ವೃತ್ತಿಯ ಸ್ಥಳದಲ್ಲಿ ನೀವು ಸಂತೋಷವಾಗಿ ಕೆಲಸಮಾಡುವಿರಿ. ಸ್ನೇಹಿತರ ಮಾತಿನಿಂದ ವಿದೇಶಕ್ಕೆ ಹೋಗುವ ಆಸೆ ಅತಿಯಾಗುವುದು. ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ಸಕಾರಾತ್ಮಕ ನಿಲುವು ಇರಲಿ. ಮಕ್ಕಳು ನಿಮ್ಮ ಜೊತೆ ವಾಗ್ವಾದ ಬರಬಹುದು. ಒಳ್ಳೆಯ ಸುದ್ದಿಯು ನಿಮ್ಮ ಉತ್ಸಾಹವನ್ನು ಹೆಚ್ಚಿಸುವುದು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಮಂಗಳವಾರ- ರಾಶಿ ಭವಿಷ್ಯ ಜೂನ್-18,2024
ಮೇಷ ರಾಶಿ: ದಂಪತಿಗಳಿಗೆ ಸಂತಾನದ ಯೋಚನೆ,ಮದುವೆ ಕಾರ್ಯಗಳಲ್ಲಿ ಅಡತ... ಓದನ್ನು ಮುಂದುವರಿಸಿ
ಸೋಮವಾರ- ರಾಶಿ ಭವಿಷ್ಯ ಜೂನ್-17,2024
ಮೇಷ ರಾಶಿ : ಬಹುದಿನದ ಕಾನೂನು ಹೋರಾಟ ಜಯಕಾಣುವಿರಿ,ಪತ್ರಿಕೋದ್ಯಮಿ... ಓದನ್ನು ಮುಂದುವರಿಸಿ
ಭಾನುವಾರ ರಾಶಿ ಭವಿಷ್ಯ -ಜೂನ್-16,2024
ಮೇಷ ರಾಶಿ : ಕೆಲಸದಲ್ಲಿ ನಿಮಗೆ ಉತ್ತಮ ಲಾಭ ಇರಲಿದೆ. ಕುಟುಂಬ ವ್ಯ... ಓದನ್ನು ಮುಂದುವರಿಸಿ
ಶನಿವಾರ ರಾಶಿ ಭವಿಷ್ಯ-ಜೂನ್-15,2024
ಮೇಷ ರಾಶಿ: ಉಳಿದೆಲ್ಲ ಸಮಸ್ಯೆಗಿಂತ ಗುರಿಯೇ ನಿಮಗೆ ಮುಖ್ಯವಾಗಿರಲಿ... ಓದನ್ನು ಮುಂದುವರಿಸಿ
ಶುಕ್ರವಾರ ರಾಶಿ ಭವಿಷ್ಯ -ಜೂನ್-14,2024.
ಮೇಷ ರಾಶಿ: ಮನೆಯಲ್ಲಿ ತಯಾರಿಸಿ ವ್ಯಾಪಾರ-ವಹಿವಾಟು ಮಾಡುವವರಿಗೆ ಅ... ಓದನ್ನು ಮುಂದುವರಿಸಿ
ಗುರುವಾರ- ರಾಶಿ ಭವಿಷ್ಯ ಜೂನ್-13,2024.
ಮೇಷ ರಾಶಿ : ವಾಹನ ಅಪಘಾತ ಸಂಭವ ಜಾಗ್ರತೆಯಿಂದ ಸಂಚರಿಸಿ ,ಕುಟುಂಬದ... ಓದನ್ನು ಮುಂದುವರಿಸಿ
ಮಂಗಳವಾರ ರಾಶಿ ಭವಿಷ್ಯ -ಜೂನ್-11,2024
ಮೇಷ ರಾಶಿ: ರಂಗಭೂಮಿ ಕಲಾವಿದರಿಗೆ ಚಲನಚಿತ್ರದಲ್ಲಿ ನಟನೆ ಮಾಡುವ ಅ... ಓದನ್ನು ಮುಂದುವರಿಸಿ
ಸೋಮವಾರ ರಾಶಿ ಭವಿಷ್ಯ -ಜೂನ್-10,2024
ಮೇಷ ರಾಶಿ: ನಂಬಿದ ಸಹೋದ್ಯೋಗಿಯಿಂದ ನೌಕರದಾರರಿಗೆ ಮುಂಬಡ್ತಿಯಿಂದ... ಓದನ್ನು ಮುಂದುವರಿಸಿ
ಭಾನುವಾರ ರಾಶಿ ಭವಿಷ್ಯ -ಜೂನ್-9,2024
ಮೇಷ: ಶಿಕ್ಷಕರಿಗೆ ಖಾಯಂ ಭಾಗ್ಯ ಲಭಿಸಲಿದೆ, ಕೆಲವರಿಗೆ ಅತಿಥಿ ಶಿಕ... ಓದನ್ನು ಮುಂದುವರಿಸಿ
ಶನಿವಾರ ರಾಶಿ ಭವಿಷ್ಯ-ಜೂನ್-8,2024
ಮೇಷ ರಾಶಿ: ಮಾನಸಿಕ ವೇದನೆ, ವ್ಯಾಪಾರಿಗಳಿಗೆ ಧನ ಲಾಭ, ಮಿತ್ರರಿಂದ... ಓದನ್ನು ಮುಂದುವರಿಸಿ