ಗುರುವಾರ- ರಾಶಿ ಭವಿಷ್ಯ ಜನವರಿ-29,2026
ಮೇಷ: ನಕಾರತ್ಮಕ ವಿಚಾರಗಳಿಗೆ ಸಮಯ ವ್ಯರ್ಥ ವಸ್ತು ಖರೀದಿಯಲ್ಲಿ ಚರ್ಚೆ ಅವಮಾನ ಕಲಹ ಆಗಬಹುದು . ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಹಿನ್ನಡೆ ಅನಾನುಕೂಲವಾಗುತ್ತೆ. ಬೇರೆಯವರನ್ನು ಯಾವಾಗಲೂ ಮಾತಿನಿಂದ ಅವಮಾನಿಸುವ ಅಭ್ಯಾಸ ದೂರಮಾಡಬೇಕು. ಕುಟುಂಬದಲ್ಲಿ ಆಶಾಂತಿ ವಾತಾವರಣ ಆತುರದ ಮಾತು ತಪ್ಪಾಗಬಹುದು ವಿಷ್ಣು ಸಹಸ್ರನಾಮ ಶ್ರವಣ ಮಾಡಬೇಕು
ವೃಷಭ: ಇಂದು ಸಹೋದರರಲ್ಲಿ ಭಿನ್ನಾಭಿಪ್ರಾಯದ ಮಾತುಗಳಿರಬಹುದು . ಸತ್ಯಕ್ಕೆ ಹತ್ತಿರವಾದ ಉಪಯುಕ್ತವಾದ ಚರ್ಚೆ ಮಾಡುವುದು ಉತ್ತಮ , ಕುಟುಂಬದ ಮೂಲವನ್ನು ಸರಿಯಾಗಿ ಹುಡುಕಿ ಸರಿಪಡಿಸಬೇಕಾಗಬಹುದು ದೀರ್ಘಕಾಲದ ತೊಂದರೆಯಿರುವವರಿಗೆ ಸ್ವಲ್ಪ ಚೇತರಿಕೆ ಆಗಬಹುದು, ಅನಗತ್ಯ ವಸ್ತು ವಿಷಯಗಳಿಗೆ ಕಲಹವಾಗಬಹುದು ನಿಮ್ಮ ಮೊಂಡು ಸ್ವಭಾವವನ್ನು ಪರಿವರ್ತಿಸಿಕೊಳ್ಳಲು ಪ್ರಯತ್ನಿಸಿ ಸಾಲಗ್ರಾಮ ರೂಪೀ ವಿಷ್ಣುವಿನ ಆರಾಧನೆ ಮಾಡಬೇಕು.
ಮಿಥುನ: ಸ್ಥಿರ ಮನಸ್ಸಿಲ್ಲದೆ ಅನೇಕ ಗೊಂದಲಗಳಿಗೆ ನೀವು ಸಿಲುಕಬಹುದು. ಸಾಯಂಕಾಲದ ಚರ್ಚೆ ನಿಮಗೆ ಅನುಕೂಲಕರವಾಗಲಿದೆ. ಜೊತೆಗಿದ್ದ ಸ್ನೇಹತರು ನಿಮ್ಮ ಸ್ವಭಾವದಿಂದ ದೂರವಾಗಬಹುದು. ನೀವು ಎಷ್ಟು ನಯವಾಗಿರುತ್ತಿರೋ ಅಷ್ಟು ಗೌರವ ನಿಮ್ಮದಾಗುತ್ತದೆ. ದಿನದ ಆರಂಭದಲ್ಲಿ ನಿಮಗೆ ತೊಂದರೆ ಬೇಸರದ ಸೂಚನೆಯಿರಬಹುದು, ಮನಿಮ್ಮ ಮನಸ್ಸು ಅಧೈರ್ಯದಿಂದ ಕೂಡಿರುತ್ತದೆ. ಭಗವದ್ಗೀತಾ ಶ್ಲೋಕ ಪಠಿಸಬೇಕು.
ಕಟಕ: ನಿಮ್ಮ ಮಕ್ಕಳ ಬಗ್ಗೆ ಎಚ್ಚರಿಕೆಯಿರಲಿ, ಕೆಲವು ವಿಚಾರಗಳಲ್ಲಿ ಮನೆಯಲ್ಲಿ ನಿಮ್ಮನ್ನು ಪರಿಗಣಿಸುವುದಿಲ್ಲ, ಬೇರೆಯವರ ವಿಚಾರಕ್ಕೆ ತಲೆಹಾಕಿ ಅವಮಾನವಾಗಬಹುದು, ಮದುವೆ ವಿಚಾರ ಚರ್ಚೆಯಾಗಲಿದೆ. ಮಹಿಳೆಯರು ಸೌಂದರ್ಯವರ್ಧಕ ವಸ್ತು ಖರೀದಿಯಲ್ಲಿ ಆಸಕ್ತಿ ತೋರಬಹುದು. ನಿಮ್ಮ ಕೆಲಸ ಒತ್ತಡವನ್ನು ಬೇರೆಯವರಿಗೆ ವಹಿಸಬೇಡಿ. ಮನೋಭವ ಮಂತ್ರ ಉಪಾಸನೆ ಮಾಡಬೇಕು.
ಸಿಂಹ: ಆರೋಗ್ಯದಲ್ಲಿ ತುಂಬಾ ಏರು ಪೇರು ಕಾಣಬಹುದು.ನಿಮ್ಮ ಮನಸ್ಸಿಗೆ ಸಮಾಧಾನವಾಗುವಂತೆ ಕೆಲಸ ಮಾಡಿ, ಎಲ್ಲಾ ಕೆಲಸಗಳು ಸುಲಭವಾಗಿ ನಡೆಯಬಹುದು. ಸಾಯಂಕಾಲದಲ್ಲಿ ವ್ಯಾವಹಾರಿಕ ಹಣದ ವಿಚಾರಕ್ಕೆ ಕಲಹ ಜಗಳಬೇಡಮನೆಯಲ್ಲಿ ಗಾಜಿನ ಪದಾರ್ಥ ಒಡೆಯಬಹುದು ಎಚ್ಚರವಹಿಸಿ, ವ್ಯಕ್ತಿತ್ವ ಸ್ವಭಾವದಲ್ಲಿ ಕೆಲವು ಬದಲಾವಣೆಗಳಾಗಬಹುದು, ರುದ್ರ ಮಂತ್ರ ಶ್ರವಣ ಮಾಡಬೇಕು
ಕನ್ಯಾ: ಬಂಧುಗಳಲ್ಲಿದ್ದ ವಿರಸ ಭಿನ್ನಾಭಿಪ್ರಾಯ ದೂರವಾಗುತ್ತದೆ. ಸಾಕು ಪ್ರಾಣಿಯ ಬಗ್ಗೆ ಸ್ವಲ್ಪ ಎಚ್ಚರಿಕೆ ವಹಿಸಿ. ಸರ್ಕಾರಿ ಕೆಲಸ ಮಾಡುವವರಿಗೆ ಬಡ್ತಿ ಸಿಗಲಿದೆ. ಮುದ್ರಕರಿಗೆ ಶುಭ ದಿನ. ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಕೆಲವು ಗೊಂದಲಗಳು ಕಾಡಬಹುದು. ಅರಿಯದ ವಿಚಾರಗಳಲ್ಲಿ ಸಿಲುಕಬಹುದು. ಮನೆಯಲ್ಲಿ ಮಂಗಳಕಾರ್ಯದ ವಿಚಾರ ಪ್ರಸ್ತಾಪಿಸಬಹುದು. ಈಶ್ವರನ ಆರಾಧನೆ ಮಾಡಬೇಕು
ತುಲಾ: ಮನೆಯಲ್ಲಿ ಕಹಿವಿಚಾರಗಳನ್ನು ಮಾತನಾಡಬೇಡಿ, ದಾಂಪತ್ಯದಲ್ಲಿ ವಿರಸ ಬಿರುಕು ತೋರುತ್ತದೆ ಹೊಂದಾಣಿಕೆ ಅಗತ್ಯ. ನಿಗೂಢ ವಿಷಯಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಆಯಾಸದಿಂದ ಕಿರಿಕಿರಿ ಆಗಬಹುದು. ಹೊಟ್ಟೆಗೆ ಸಂಬಂಧಿಸಿದ ತೊಂದರೆಯಾಗಬಹುದು. ಉದ್ಯಮಿಗಳಿಗೆ ಹಣದ ಏರುಪೇರಿನಿಂದ ತೊಂದರೆ. ಐಕ್ಯಮತ್ಯ ಮಂತ್ರ ಶ್ರವಣ ಮಾಡಬೇಕು
ವೃಶ್ಚಿಕ: ವಸ್ತು ಖರೀದಿ ಅಥವಾ ವ್ಯಾಪಾರದಲ್ಲಿ ಲಾಭವಿದೆ. ಸಾಯಂಕಾಲದ ವೇಳೆಗೆ ಅಶುಭವಾರ್ತೆ ಮನೆಯಲ್ಲಿ ಆತಂಕ. ಶುಭಕಾರ್ಯಕ್ಕೆ ಹೋಗಲು ಮನಸ್ಸಿರುವುದಿಲ್ಲ, ನೌಕರಿಯ ಬಗ್ಗೆ ಸ್ನೇಹಿತರಿಂದ ತೊಂದರೆಯಿದೆ. ಕುಟುಂಬದ ನಿರ್ವಹಣೆ ಹಣದ ದೃಷ್ಟಿಯಿಂದ ಕಷ್ಟವಾಗಬಹುದು. ತಂದೆಯವರ ಸಂಪೂರ್ಣ ಸಹಾಯ ಸಹಕಾರ ಸಿಗಲಿದೆ. ಗುರು ದತ್ತಾತ್ರೇಯರನ್ನು ಪ್ರಾರ್ಥಿಸಬೇಕು
ಧನಸ್ಸು: ಮನಸ್ಸಿನಿಂದ ವೃತ್ತಿ ಉದ್ಯೋಗದ ಚಿಂತೆ ದೂರವಾಗುತ್ತದೆ. ನಿಮ್ಮ ಪರಿಶ್ರಮವು ಲೆಕ್ಕಕ್ಕೆ ಬರುವುದಿಲ್ಲ , ಉದ್ಯೋಗದಲ್ಲಿ ಸ್ಥಾನ ಮಾನಗಳು ಸಿಗಬಹುದು. ಪ್ರಯಾಣದಲ್ಲಿ ತೊಂದರೆಯಿದೆ ಎಚ್ಚರಿಕೆವಹಿಸಿ. ಬರಬೇಕಾದ ಬಾಕಿ ಹಣವಿದ್ದರೆ ಇಂದು ಯೋಗವಿದೆ. ವಿದ್ಯಾರ್ಥಿಗಳಿಗೆ ಯಶಸ್ಸಿದೆ. ಕುಲದೇವತಾ ಆರಾಧನೆ ಮಾಡಬೇಕು
ಮಕರ : ಇಂದು ಮಾನಸಿಕ ಒತ್ತಡ-ಕೋಪ ಕಾಣಬಹುದು, ತಲೆ ನೋವಿನ ಸಮಸ್ಯೆ ಕಾಡಬಹುದು, ಏನೋ ನಿಮಗಾಗದ ಮಾತು ಕೇಳಿ ಬೇಸರವಾಗಬಹುದು, ನಕಾರಾತ್ಮಕ ಆಲೋಚನೆಗಳು ಬರದಂತೆ ತಡೆಯಿರಿ. ಮೇಲಾಧಿಕಾರಿಗಳಿಂದ ನಿಂದನೆಗೊಳಗಾಗುತ್ತೀರಿ, ಎಲ್ಲಾ ಅನುಕೂಲಗಳಿದ್ದರೂ ಅನುಭವಿಸುವ ಯೋಗವಿರುವುದಿಲ್ಲ, ನವಗ್ರಹ ಪೀಟಾ ಪರಿಹಾರ ಸ್ತೋತ್ರ ಪಠಿಸಬೇಕು
ಕುಂಭ:ಇಂದು ಉದ್ಯೋಗ ಹುಡುಕುತ್ತಿರುವವರಿಗೆ ಅನುಕೂಲ, ವ್ಯಾಪಾರದಾರರಿಗೆ ಲಾಭವಿದೆ. ಈ ದಿನ ಧನಲಾಭವಿದೆ. ದೈಹಿಕ ತೊಂದರೆಯಿದೆ ಚಿಕಿತ್ಸೆ ಅಗತ್ಯ. ವೈವಾಹಿಕ ಜೀವನದಲ್ಲಿ ಬಿರುಕು ಉಂಟಾಗಬಹುದು. ಶತ್ರುಗಳ ಕಾಟ ಉಂಟಾಗಬಹುದು, ಪ್ರತ್ಯಂಗಿರಾ ದೇವಿ ಉಪಾಸನೆ ಮಾಡಿ
ಮೀನ :ಇಂದು ಒಂದಕ್ಕಿಂತ ಹೆಚ್ಚು ಕೆಲಸಗಳನ್ನು ಮಾಡಲು ಪ್ರಯತ್ನಿಸಿ ವಿಫಲರಾಗುತ್ತೀರಿ, ಇಷ್ಟಾರ್ಥಗಳು ಈಡೇರುತ್ತವೆ ದುರಾಸೆ ತಪ್ಪಿದ್ದಲ್ಲ, ನಿಮ್ಮ ದಿನಚರಿಯಲ್ಲಿ ಸ್ವಲ್ಪ ಬದಲಾವಣೆಯಾಗಬಹುದು. ಹಳೆಯ ರೋಗಗಳಿಂದ ಮುಕ್ತಿ ಸಿಗಲಿದೆ. ಬೇಕಾದವರಿಗಾಗಿ ಸ್ವಲ್ಪ ಸಮಯ ಮೀಸಲಾಗಿಡುತ್ತೀರಿ. ಭಾವನೆಗಳನ್ನು ನಿಯಂತ್ರಿಸಿ, ಬಂಡಿಕೇಶ್ವರನನ್ನು ಪ್ರಾರ್ಥಿಸಬೇಕು
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಫೆಬ್ರವರಿ 1, 2026, ಭಾನುವಾರದ ರಾಶಿ ಭವಿಷ್ಯ
ಮೇಷ ರಾಶಿ : ಇಂದು ಆತ್ಮವಿಶ್ವಾಸ ಹೆಚ್ಚಿರುತ್... ಓದನ್ನು ಮುಂದುವರಿಸಿ
ಶನಿವಾರ ರಾಶಿ ಭವಿಷ್ಯ - ಜನವರಿ-31,2026
ಮೇಷ : ಇಂದು ಆತ್ಮವಿಶ್ವಾಸ ಹೆಚ್ಚಿರುತ್ತದೆ. ಕೆಲಸದಲ್ಲಿ ಹೊಸ ಜವಾ... ಓದನ್ನು ಮುಂದುವರಿಸಿ
ಶುಕ್ರವಾರ ರಾಶಿ ಭವಿಷ್ಯ -ಜನವರಿ-30,2026
ಮೇಷ : ಉತ್ಸಾಹ ಹೆಚ್ಚಿರುತ್ತದೆ. ಹೊಸ ಕೆಲಸ ಆರಂಭಿಸಲು ಉತ್ತಮ ದಿನ... ಓದನ್ನು ಮುಂದುವರಿಸಿ
ಮಂಗಳವಾರ- ರಾಶಿ ಭವಿಷ್ಯ ಜೂನ್-18,2024
ಮೇಷ ರಾಶಿ: ದಂಪತಿಗಳಿಗೆ ಸಂತಾನದ ಯೋಚನೆ,ಮದುವೆ ಕಾರ್ಯಗಳಲ್ಲಿ ಅಡತ... ಓದನ್ನು ಮುಂದುವರಿಸಿ
ಸೋಮವಾರ- ರಾಶಿ ಭವಿಷ್ಯ ಜೂನ್-17,2024
ಮೇಷ ರಾಶಿ : ಬಹುದಿನದ ಕಾನೂನು ಹೋರಾಟ ಜಯಕಾಣುವಿರಿ,ಪತ್ರಿಕೋದ್ಯಮಿ... ಓದನ್ನು ಮುಂದುವರಿಸಿ
ಭಾನುವಾರ ರಾಶಿ ಭವಿಷ್ಯ -ಜೂನ್-16,2024
ಮೇಷ ರಾಶಿ : ಕೆಲಸದಲ್ಲಿ ನಿಮಗೆ ಉತ್ತಮ ಲಾಭ ಇರಲಿದೆ. ಕುಟುಂಬ ವ್ಯ... ಓದನ್ನು ಮುಂದುವರಿಸಿ
ಶನಿವಾರ ರಾಶಿ ಭವಿಷ್ಯ-ಜೂನ್-15,2024
ಮೇಷ ರಾಶಿ: ಉಳಿದೆಲ್ಲ ಸಮಸ್ಯೆಗಿಂತ ಗುರಿಯೇ ನಿಮಗೆ ಮುಖ್ಯವಾಗಿರಲಿ... ಓದನ್ನು ಮುಂದುವರಿಸಿ
ಶುಕ್ರವಾರ ರಾಶಿ ಭವಿಷ್ಯ -ಜೂನ್-14,2024.
ಮೇಷ ರಾಶಿ: ಮನೆಯಲ್ಲಿ ತಯಾರಿಸಿ ವ್ಯಾಪಾರ-ವಹಿವಾಟು ಮಾಡುವವರಿಗೆ ಅ... ಓದನ್ನು ಮುಂದುವರಿಸಿ
ಗುರುವಾರ- ರಾಶಿ ಭವಿಷ್ಯ ಜೂನ್-13,2024.
ಮೇಷ ರಾಶಿ : ವಾಹನ ಅಪಘಾತ ಸಂಭವ ಜಾಗ್ರತೆಯಿಂದ ಸಂಚರಿಸಿ ,ಕುಟುಂಬದ... ಓದನ್ನು ಮುಂದುವರಿಸಿ
ಬುಧವಾರ ರಾಶಿ ಭವಿಷ್ಯ -ಜೂನ್-12,2024
ಮೇಷ ರಾಶಿ : ನಿಮ್ಮನ್ನು ಯಾರಾದರೂ ಬಳಸಿಕೊಂಡು ಕೈಬಿಡಬಹುದು. ನೀವಿ... ಓದನ್ನು ಮುಂದುವರಿಸಿ