“ಪ್ರೀತಿಯೇ ಎಲ್ಲವೂ ಅಲ್ಲ…” – ಇನ್‌ಸ್ಟಾ ಪೋಸ್ಟ್‌ಗೆ ಹೊಸ ಅರ್ಥ? ತ್ರಿಷಾ ಹೇಳಿಕೆಯಿಂದ ಕುತೂಹಲ
ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಕೃಷ್ಣನ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ನಟ ವಿಜಯ್ ಜೊತೆಗಿನ ಅವರ ಆತ್ಮೀಯತೆ ಮತ್ತು ಇತ್ತೀಚೆಗೆ ಹರಿದಾಡುತ್ತಿರುವ ಸಂಬಂಧದ ಗಾಸಿಪ್‌ಗಳು ಈಗ ಭಾರೀ ಚರ್ಚೆಗೆ ಕಾರಣವಾಗಿವೆ. ವಿಜಯ್ ಮತ್ತು ತ್ರಿಷಾ ನಡುವಿನ ಸಂಬಂಧದ ಬಗ್ಗೆ ಹಲವು ಬಾರಿ ಊಹಾಪೋಹಗಳು ಕೇಳಿಬಂದಿದ್ದರೂ, ಈ ಕುರಿತು ಇಬ್ಬರೂ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಇದೇ ವೇಳೆ, ವಿಜಯ್ ಪತ್ನಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ನಟಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಆರೋಪ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬೆಳವಣಿಗೆ ಈ ವಿಚಾರಕ್ಕೆ ಮತ್ತಷ್ಟು ತೀವ್ರತೆ ನೀಡಿದೆ.
ಈ ನಡುವೆ, ತ್ರಿಷಾ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡ “ಪ್ರೀತಿಯೇ ಎಲ್ಲವೂ ಅಲ್ಲ, ಆದರೆ ಪ್ರೀತಿ ಇಲ್ಲದೆ ಎಲ್ಲವೂ ಅರ್ಥಹೀನ” ಎಂಬ ಸಾಲುಗಳು ನೆಟ್ಟಿಗರ ಗಮನ ಸೆಳೆದಿವೆ. ವಿಜಯ್ ಜೊತೆಗಿನ ಅವರ ಹೆಸರು ಚರ್ಚೆಯಲ್ಲಿರುವ ಸಮಯದಲ್ಲೇ ಈ ಪೋಸ್ಟ್ ಹಂಚಿಕೊಂಡಿರುವುದು ಅಭಿಮಾನಿಗಳಲ್ಲಿ ಹೊಸ ಪ್ರಶ್ನೆಗಳನ್ನು ಹುಟ್ಟಿಸಿದೆ.
ತ್ರಿಷಾ ತಮಿಳು ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರಾಗಿದ್ದು, ಹಲವು ಭಾಷೆಗಳಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿದ್ದಾರೆ. ಕನ್ನಡದಲ್ಲಿಯೂ ಪುನೀತ್ ರಾಜ್‌ಕುಮಾರ್ ಜೊತೆ ‘ಪವರ್’ ಸಿನಿಮಾದಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದಾರೆ. ವಿಜಯ್ ಮತ್ತು ತ್ರಿಷಾ ನಡುವೆ ಎರಡು ದಶಕಗಳ ಸಿನಿ ಸ್ನೇಹವಿದ್ದು, ‘ಗಿಲ್ಲಿ’, ‘ತಿರುಪಾಚಿ’, ‘ಆತಿ’, ‘ಕುರುವಿ’, ‘ಲಿಯೋ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಆನ್‌ಸ್ಕ್ರೀನ್ ಜೋಡಿ ಅಭಿಮಾನಿಗಳಿಂದ ಸದಾ ಮೆಚ್ಚುಗೆ ಪಡೆದಿದೆ. ಇನ್ನೊಂದೆಡೆ, ವಿಜಯ್ ಮತ್ತು ಸಂಗೀತಾ ಅವರ ವಿವಾಹಕ್ಕೆ ಸುಮಾರು 26 ವರ್ಷಗಳಾಗಿರುವ ಹಿನ್ನೆಲೆ, ವೈಯಕ್ತಿಕ ಜೀವನದ ಈ ಬೆಳವಣಿಗೆಗಳು ಅಭಿಮಾನಿಗಳಲ್ಲಿ ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿವೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ನ್ಯಾಷನಲ್ ಕ್ರಶ್ ರಶ್ಮಿಕಾ ತವರಿನಲ್ಲಿ ವಿಜಯ್ ಜೋಡಿ – ಕೊಡಗಿನಲ್ಲಿ ಸಂಭ್ರಮ
ಕೊಡಗು: ಸ್ಯಾಂಡಲ್‌ವುಡ್‌ನಿಂದ ಸಿನಿ ಪಯಣ ಆರಂಭಿಸಿ ನ್ಯಾಷನಲ್ ಕ್ರ... ಓದನ್ನು ಮುಂದುವರಿಸಿ
‘ಕೆಡಿ’ ಹಾಡು ವಿವಾದ – ನೋರಾ ಫತೇಹಿಗೆ ಮತ್ತೆ ನೋಟಿಸ್
ಬೆಂಗಳೂರು: ನಿರ್ದೇಶಕ ಪ್ರೇಮ್ ಅವರ ‘ಕೆಡಿ’ ಚಿತ್ರದ ‘ಸೆರಗ ಸರ್ಸೆ... ಓದನ್ನು ಮುಂದುವರಿಸಿ
ಜೈಲರ್ 2 ಗೇಸ್ಟ್ ರೋಲ್ ತಿರಸ್ಕರಿಸಿದ ಶಾರುಖ್ ಖಾನ್
ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್ 2’ ಚಿತ್ರದ... ಓದನ್ನು ಮುಂದುವರಿಸಿ
ನನಗೆ ನಾಲ್ಕು ಮಕ್ಕಳು ಇಲ್ಲ!” – ತ್ರಿಷಾ ಪೋಸ್ಟ್ ನೆಟ್ಟಿಗರ ಗಮನ ಸೆಳೆದು
ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಕೃಷ್ಣನ್ ಇತ್ತೀಚೆಗೆ... ಓದನ್ನು ಮುಂದುವರಿಸಿ
ತಮಿಳು ನಟಿ ಸುಭಾಷಿಣಿ ಆತ್ಮಹತ್ಯೆ – ಪತಿಯೊಂದಿಗೆ ವಾಗ್ವಾದ ಹಿನ್ನೆಲೆ ಶಾಕ್!
ಚೆನ್ನೈನಲ್ಲಿ ನಡೆದ ದಾರುಣ ಘಟನೆಯಲ್ಲಿ ತಮಿಳು ಧಾರಾವಾಹಿ ನಟಿ ಸುಭಾಷಿಣಿ ಆತ್ಮಹತ್ಯೆಗೆ... ಓದನ್ನು ಮುಂದುವರಿಸಿ
‘ಬಾಸ್’ ಚಿತ್ರಕ್ಕೆ ಕೋರ್ಟ್ ಬ್ರೇಕ್ – ರೇಣುಕಾಸ್ವಾಮಿ ಪ್ರಕರಣದ ನೆರಳು!
ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಆಧರಿಸಿ ನಿರ್ಮಿಸಲಾಗಿದ್ದ ‘ಬಾಸ್’ ಚಿತ್ರಕ್ಕೆ ನ್ಯ... ಓದನ್ನು ಮುಂದುವರಿಸಿ
ಪೀರಿಯಡ್ಸ್ ಬಗ್ಗೆ ಧೈರ್ಯವಾದ ಮಾತು – ಶ್ರೀಲೀಲಾ ಹೇಳಿಕೆ ವೈರಲ್!
ಮಹಿಳೆಯರ ಆರೋಗ್ಯ ಮತ್ತು ನೈರ್ಮಲ್ಯ ಕುರಿತು ಸಮಾಜದಲ್ಲಿ ಹೊಸ ಚರ್ಚೆಗಳು ನಡೆಯುತ್ತಿರುವ... ಓದನ್ನು ಮುಂದುವರಿಸಿ
ಧನುಷ್–ನಯನತಾರಾ ವಿವಾದಕ್ಕೆ ಹೊಸ ಟ್ವಿಸ್ಟ್ – ವಿಘ್ನೇಶ್ ಶಿವನ್ ಭಾವನಾತ್ಮಕ ಹೇಳಿಕೆ!
ತಮಿಳು ಚಿತ್ರರಂಗದಲ್ಲಿ ಚರ್ಚೆಗೆ ಗ್ರಾಸವಾದ ಧನುಷ್, ನಯನತಾರಾ ಮತ್ತು ವಿಘ್ನೇಶ್ ಶಿವನ್... ಓದನ್ನು ಮುಂದುವರಿಸಿ
‘ಮಹಿಳೆಯ ದೇಹ ಮಾರಾಟ ಆಗುತ್ತಿದೆ!’ – ಪಾಪರಾಜಿಗಳ ವಿರುದ್ಧ ಜಾನ್ವಿ ಕಪೂರ್ ಗರಂ
ಚಿತ್ರರಂಗದಲ್ಲಿ ಪಾಪರಾಜಿ ಸಂಸ್ಕೃತಿ ಕುರಿತು ಚರ್ಚೆ ಮತ್ತೆ ತೀವ್ರಗೊಂಡಿದೆ. ಕನ್ನಡ ನಟ... ಓದನ್ನು ಮುಂದುವರಿಸಿ
ರಾಜಕೀಯ ರಂಗದಲ್ಲಿ ದಳಪತಿ ವಿಜಯ್ – ಪ್ರಚಾರದಲ್ಲಿ ಸ್ಟೈಲಿಶ್ ಕ್ಷಣ ವೈರಲ್!
ದಕ್ಷಿಣ ಭಾರತದ ಖ್ಯಾತ ನಟ ದಳಪತಿ ವಿಜಯ್ ಇದೀಗ ರಾಜಕೀಯ ಕ್ಷೇತ್ರದಲ್ಲಿ ತಮ್ಮ ಅದೃಷ್ಟ ಪ... ಓದನ್ನು ಮುಂದುವರಿಸಿ