ನ್ಯಾಷನಲ್ ಕ್ರಶ್ ರಶ್ಮಿಕಾ ತವರಿನಲ್ಲಿ ವಿಜಯ್ ಜೋಡಿ – ಕೊಡಗಿನಲ್ಲಿ ಸಂಭ್ರಮ
ಕೊಡಗು: ಸ್ಯಾಂಡಲ್‌ವುಡ್‌ನಿಂದ ಸಿನಿ ಪಯಣ ಆರಂಭಿಸಿ ನ್ಯಾಷನಲ್ ಕ್ರಶ್ ಆಗಿ ಮಿಂಚಿರುವ ನಟಿ ರಶ್ಮಿಕಾ ಮಂದಣ್ಣ, ಮದುವೆಯ ಬಳಿಕ ಮೊದಲ ಬಾರಿಗೆ ಪತಿ ವಿಜಯ್ ದೇವರಕೊಂಡ ಜೊತೆ ತವರು ಮನೆಗೆ ಭೇಟಿ ನೀಡಿದ್ದಾರೆ. ಕೊಡಗು ಜಿಲ್ಲೆಯ ವಿರಾಜಪೇಟೆ ಸಮೀಪದ ಕದನೂರು ಗ್ರಾಮದಲ್ಲಿರುವ ತಮ್ಮ ನಿವಾಸದಲ್ಲಿ ಕುಟುಂಬದೊಂದಿಗೆ ಸಮಯ ಕಳೆಯುತ್ತಾ, ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ. ಏಪ್ರಿಲ್ 5ರಂದು ನಡೆದ ಹುಟ್ಟುಹಬ್ಬದ ಹಿನ್ನೆಲೆ, ಮದುವೆಯಾದ ನಂತರ ಮೊದಲ ಬಾರಿಗೆ ಮಗಳು-ಅಳಿಯ ಮನೆಗೆ ಆಗಮಿಸುತ್ತಿರುವ ಸಂದರ್ಭದಲ್ಲೇ ರಶ್ಮಿಕಾ ತಂದೆ ಮದನ್ ಮಂದಣ್ಣ ಮನೆಯನ್ನು ವಿಶೇಷವಾಗಿ ನವೀಕರಿಸಿ ಆತ್ಮೀಯ ಸ್ವಾಗತ ಕೋರಿದ್ದಾರೆ. ಕುಟುಂಬದ ಸಾನ್ನಿಧ್ಯದಲ್ಲಿ ನಡೆದ ಈ ಆಚರಣೆ ಗಮನ ಸೆಳೆಯಿತು.
ಹುಟ್ಟುಹಬ್ಬದ ಪ್ರಯುಕ್ತ ರಶ್ಮಿಕಾ–ವಿಜಯ್ ದಂಪತಿ ಕೊಡಗಿನ ಆರಾಧ್ಯ ದೈವವಾದ ಕಕ್ಕಬ್ಬೆ ಗ್ರಾಮದ ಪಾಡಿ ಇಗ್ಗುತ್ತಪ್ಪ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಯಾವುದೇ ಸೆಲೆಬ್ರಿಟಿ ಮೆರಗು ತೋರದೆ ಸಾಮಾನ್ಯರಂತೆ ದೇವಸ್ಥಾನಕ್ಕೆ ಭೇಟಿ ನೀಡಿದ ಜೋಡಿಯನ್ನು ಕಂಡು ಭಕ್ತರು ಆಶ್ಚರ್ಯ ವ್ಯಕ್ತಪಡಿಸಿದರು. ಇದೇ ವೇಳೆ, ರಶ್ಮಿಕಾಗೆ ತಂದೆ ಮದನ್ ಮಂದಣ್ಣ ಅವರು ಅಮೂಲ್ಯ ಉಡುಗೊರೆಯಾಗಿ ‘ಸೆರೆನಿಟಿ’ ಹೆಸರಿನ ಸುಸಜ್ಜಿತ ಬಂಗಲೆಯನ್ನು ನೀಡಿದ್ದಾರೆ. ವಿರಾಜಪೇಟೆ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಆಸ್ತಿ ಅಧಿಕೃತವಾಗಿ ರಶ್ಮಿಕಾ ಹೆಸರಿಗೆ ವರ್ಗಾವಣೆಯಾಗಿದೆ. ಮದುವೆಗೂ ಮುಂಚೆಯೇ ಹೈದರಾಬಾದ್‌ನಲ್ಲಿ ನೆಲೆಸಿರುವ ರಶ್ಮಿಕಾ, ತೆಲುಗು ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್ ದೇವರಕೊಂಡ ಜೊತೆ ‘ರಣಬಾಲಿ’ ಸಿನಿಮಾದಲ್ಲಿ ನಟಿಸುತ್ತಿದ್ದು, ಇತ್ತೀಚೆಗೆ ವಿಜಯ್ ಈ ಚಿತ್ರದ ಮೇಕಿಂಗ್ ವಿಡಿಯೋ ಹಂಚಿಕೊಂಡಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
‘ಕೆಡಿ’ ಹಾಡು ವಿವಾದ – ನೋರಾ ಫತೇಹಿಗೆ ಮತ್ತೆ ನೋಟಿಸ್
ಬೆಂಗಳೂರು: ನಿರ್ದೇಶಕ ಪ್ರೇಮ್ ಅವರ ‘ಕೆಡಿ’ ಚಿತ್ರದ ‘ಸೆರಗ ಸರ್ಸೆ... ಓದನ್ನು ಮುಂದುವರಿಸಿ
ಜೈಲರ್ 2 ಗೇಸ್ಟ್ ರೋಲ್ ತಿರಸ್ಕರಿಸಿದ ಶಾರುಖ್ ಖಾನ್
ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್ 2’ ಚಿತ್ರದ... ಓದನ್ನು ಮುಂದುವರಿಸಿ
ನನಗೆ ನಾಲ್ಕು ಮಕ್ಕಳು ಇಲ್ಲ!” – ತ್ರಿಷಾ ಪೋಸ್ಟ್ ನೆಟ್ಟಿಗರ ಗಮನ ಸೆಳೆದು
ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಕೃಷ್ಣನ್ ಇತ್ತೀಚೆಗೆ... ಓದನ್ನು ಮುಂದುವರಿಸಿ
“ಪ್ರೀತಿಯೇ ಎಲ್ಲವೂ ಅಲ್ಲ…” – ಇನ್‌ಸ್ಟಾ ಪೋಸ್ಟ್‌ಗೆ ಹೊಸ ಅರ್ಥ? ತ್ರಿಷಾ ಹೇಳಿಕೆಯಿಂದ ಕುತೂಹಲ
ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಕೃಷ್ಣನ್ ಮತ್ತೊಮ್ಮೆ... ಓದನ್ನು ಮುಂದುವರಿಸಿ
ತಮಿಳು ನಟಿ ಸುಭಾಷಿಣಿ ಆತ್ಮಹತ್ಯೆ – ಪತಿಯೊಂದಿಗೆ ವಾಗ್ವಾದ ಹಿನ್ನೆಲೆ ಶಾಕ್!
ಚೆನ್ನೈನಲ್ಲಿ ನಡೆದ ದಾರುಣ ಘಟನೆಯಲ್ಲಿ ತಮಿಳು ಧಾರಾವಾಹಿ ನಟಿ ಸುಭಾಷಿಣಿ ಆತ್ಮಹತ್ಯೆಗೆ... ಓದನ್ನು ಮುಂದುವರಿಸಿ
‘ಬಾಸ್’ ಚಿತ್ರಕ್ಕೆ ಕೋರ್ಟ್ ಬ್ರೇಕ್ – ರೇಣುಕಾಸ್ವಾಮಿ ಪ್ರಕರಣದ ನೆರಳು!
ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಆಧರಿಸಿ ನಿರ್ಮಿಸಲಾಗಿದ್ದ ‘ಬಾಸ್’ ಚಿತ್ರಕ್ಕೆ ನ್ಯ... ಓದನ್ನು ಮುಂದುವರಿಸಿ
ಪೀರಿಯಡ್ಸ್ ಬಗ್ಗೆ ಧೈರ್ಯವಾದ ಮಾತು – ಶ್ರೀಲೀಲಾ ಹೇಳಿಕೆ ವೈರಲ್!
ಮಹಿಳೆಯರ ಆರೋಗ್ಯ ಮತ್ತು ನೈರ್ಮಲ್ಯ ಕುರಿತು ಸಮಾಜದಲ್ಲಿ ಹೊಸ ಚರ್ಚೆಗಳು ನಡೆಯುತ್ತಿರುವ... ಓದನ್ನು ಮುಂದುವರಿಸಿ
ಧನುಷ್–ನಯನತಾರಾ ವಿವಾದಕ್ಕೆ ಹೊಸ ಟ್ವಿಸ್ಟ್ – ವಿಘ್ನೇಶ್ ಶಿವನ್ ಭಾವನಾತ್ಮಕ ಹೇಳಿಕೆ!
ತಮಿಳು ಚಿತ್ರರಂಗದಲ್ಲಿ ಚರ್ಚೆಗೆ ಗ್ರಾಸವಾದ ಧನುಷ್, ನಯನತಾರಾ ಮತ್ತು ವಿಘ್ನೇಶ್ ಶಿವನ್... ಓದನ್ನು ಮುಂದುವರಿಸಿ
‘ಮಹಿಳೆಯ ದೇಹ ಮಾರಾಟ ಆಗುತ್ತಿದೆ!’ – ಪಾಪರಾಜಿಗಳ ವಿರುದ್ಧ ಜಾನ್ವಿ ಕಪೂರ್ ಗರಂ
ಚಿತ್ರರಂಗದಲ್ಲಿ ಪಾಪರಾಜಿ ಸಂಸ್ಕೃತಿ ಕುರಿತು ಚರ್ಚೆ ಮತ್ತೆ ತೀವ್ರಗೊಂಡಿದೆ. ಕನ್ನಡ ನಟ... ಓದನ್ನು ಮುಂದುವರಿಸಿ
ರಾಜಕೀಯ ರಂಗದಲ್ಲಿ ದಳಪತಿ ವಿಜಯ್ – ಪ್ರಚಾರದಲ್ಲಿ ಸ್ಟೈಲಿಶ್ ಕ್ಷಣ ವೈರಲ್!
ದಕ್ಷಿಣ ಭಾರತದ ಖ್ಯಾತ ನಟ ದಳಪತಿ ವಿಜಯ್ ಇದೀಗ ರಾಜಕೀಯ ಕ್ಷೇತ್ರದಲ್ಲಿ ತಮ್ಮ ಅದೃಷ್ಟ ಪ... ಓದನ್ನು ಮುಂದುವರಿಸಿ