ಜೈಲರ್ 2 ಗೇಸ್ಟ್ ರೋಲ್ ತಿರಸ್ಕರಿಸಿದ ಶಾರುಖ್ ಖಾನ್
ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್ 2’ ಚಿತ್ರದ ಚಿತ್ರೀಕರಣ ಅಂತಿಮ ಹಂತಕ್ಕೆ ತಲುಪಿದ್ದು, ಸಿನಿಮಾ ಮೇಲೆ ಭಾರೀ ನಿರೀಕ್ಷೆ ಮೂಡಿಸಿದೆ. ಮೊದಲ ಭಾಗದ ಯಶಸ್ಸಿನ ಬಳಿಕ, ಈ ಸೀಕ್ವೆಲ್‌ನಲ್ಲಿ ಇನ್ನಷ್ಟು ಸ್ಟಾರ್ ಪವರ್ ಸೇರಿಸಲಾಗುತ್ತಿದೆ. ಶಿವರಾಜ್‌ಕುಮಾರ್, ಮೋಹನ್ಲಾಲ್, ಜಾಕಿ ಶ್ರಾಫ್ ಸೇರಿದಂತೆ ಹಲವು ಖ್ಯಾತ ನಟರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದ್ದು, ಚಿತ್ರದ ಹೈಪ್ ಮತ್ತಷ್ಟು ಹೆಚ್ಚಾಗಿದೆ. ಇದರ ನಡುವೆ, ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಕೂಡ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ವಿಶೇಷವಾಗಿ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಎಐ ಚಿತ್ರ ಈ ಗಾಸಿಪ್‌ಗೆ ಹೆಚ್ಚು ಬಲ ನೀಡಿತ್ತು.
ಆದರೆ ಇದೀಗ ಈ ಊಹಾಪೋಹಗಳಿಗೆ ತೆರೆ ಬಿದ್ದಿದ್ದು, ಶಾರುಖ್ ಖಾನ್ ‘ಜೈಲರ್ 2’ನಲ್ಲಿ ನಟಿಸುವುದಿಲ್ಲ ಎಂಬ ಮಾಹಿತಿ ಹೊರಬಂದಿದೆ. ಚಿತ್ರತಂಡವು ಸುಮಾರು ಐದು ದಿನಗಳ ಶೂಟಿಂಗ್‌ಗಾಗಿ ಅವರನ್ನು ಸಂಪರ್ಕಿಸಿದ್ದರೂ, ಅವರು ಈ ಆಫರ್ ಅನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಶಾರುಖ್ ಖಾನ್ ತಮ್ಮ ‘ಕಿಂಗ್’ ಸಿನಿಮಾದ ಮೇಲೆ ಸಂಪೂರ್ಣ ಗಮನ ಹರಿಸುತ್ತಿದ್ದು, ಅದಕ್ಕಾಗಿ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಕಾರಣದಿಂದ ಮತ್ತೊಂದು ಸಿನಿಮಾಗಾಗಿ ಲುಕ್ ಬದಲಾಯಿಸಲು ಇಚ್ಛಿಸದಿರುವುದು ಹಾಗೂ ‘ಕಿಂಗ್’ ಬಿಡುಗಡೆಗೊಳ್ಳುವವರೆಗೆ ಬೇರೆ ಯಾವುದೇ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಬಾರದು ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ.
ಹಿಂದೆ ‘ರಾ.ವನ್’ ಸಿನಿಮಾದಲ್ಲಿ ರಜನಿಕಾಂತ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಆ ಪಾತ್ರ ಭಾರೀ ಮೆಚ್ಚುಗೆ ಪಡೆದಿತ್ತು. ಈ ಹಿನ್ನೆಲೆ ‘ಜೈಲರ್ 2’ನಲ್ಲಿ ಶಾರುಖ್ ಕಾಣಿಸಿಕೊಳ್ಳುವ ಮೂಲಕ ಆ ಸಂಬಂಧ ಮುಂದುವರಿಯಲಿದೆ ಎಂಬ ನಿರೀಕ್ಷೆ ಇದ್ದರೂ, ಅದು ಇದೀಗ ನೆರವೇರಿಲ್ಲ. ಇದರಿಂದ ಕೆಲ ಅಭಿಮಾನಿಗಳಿಗೆ ನಿರಾಸೆ ಉಂಟಾದರೂ, ಈಗಾಗಲೇ ಹಲವು ಸ್ಟಾರ್‌ಗಳ ಉಪಸ್ಥಿತಿಯಿಂದ ‘ಜೈಲರ್ 2’ ಮೇಲೆ ಇರುವ ಕ್ರೇಜ್ ಕಡಿಮೆಯಾಗಿಲ್ಲ. ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಜೂನ್‌ನಲ್ಲಿ ಬಿಡುಗಡೆ ಮಾಡುವ ಯೋಜನೆ ಇದೆ. ಇನ್ನೊಂದೆಡೆ, ‘ಕಿಂಗ್’ ಸಿನಿಮಾದ ಚಿತ್ರೀಕರಣ ವೇಗವಾಗಿ ಸಾಗುತ್ತಿದ್ದು, ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದಾರೆ
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ನ್ಯಾಷನಲ್ ಕ್ರಶ್ ರಶ್ಮಿಕಾ ತವರಿನಲ್ಲಿ ವಿಜಯ್ ಜೋಡಿ – ಕೊಡಗಿನಲ್ಲಿ ಸಂಭ್ರಮ
ಕೊಡಗು: ಸ್ಯಾಂಡಲ್‌ವುಡ್‌ನಿಂದ ಸಿನಿ ಪಯಣ ಆರಂಭಿಸಿ ನ್ಯಾಷನಲ್ ಕ್ರ... ಓದನ್ನು ಮುಂದುವರಿಸಿ
‘ಕೆಡಿ’ ಹಾಡು ವಿವಾದ – ನೋರಾ ಫತೇಹಿಗೆ ಮತ್ತೆ ನೋಟಿಸ್
ಬೆಂಗಳೂರು: ನಿರ್ದೇಶಕ ಪ್ರೇಮ್ ಅವರ ‘ಕೆಡಿ’ ಚಿತ್ರದ ‘ಸೆರಗ ಸರ್ಸೆ... ಓದನ್ನು ಮುಂದುವರಿಸಿ
ನನಗೆ ನಾಲ್ಕು ಮಕ್ಕಳು ಇಲ್ಲ!” – ತ್ರಿಷಾ ಪೋಸ್ಟ್ ನೆಟ್ಟಿಗರ ಗಮನ ಸೆಳೆದು
ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಕೃಷ್ಣನ್ ಇತ್ತೀಚೆಗೆ... ಓದನ್ನು ಮುಂದುವರಿಸಿ
“ಪ್ರೀತಿಯೇ ಎಲ್ಲವೂ ಅಲ್ಲ…” – ಇನ್‌ಸ್ಟಾ ಪೋಸ್ಟ್‌ಗೆ ಹೊಸ ಅರ್ಥ? ತ್ರಿಷಾ ಹೇಳಿಕೆಯಿಂದ ಕುತೂಹಲ
ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಕೃಷ್ಣನ್ ಮತ್ತೊಮ್ಮೆ... ಓದನ್ನು ಮುಂದುವರಿಸಿ
ತಮಿಳು ನಟಿ ಸುಭಾಷಿಣಿ ಆತ್ಮಹತ್ಯೆ – ಪತಿಯೊಂದಿಗೆ ವಾಗ್ವಾದ ಹಿನ್ನೆಲೆ ಶಾಕ್!
ಚೆನ್ನೈನಲ್ಲಿ ನಡೆದ ದಾರುಣ ಘಟನೆಯಲ್ಲಿ ತಮಿಳು ಧಾರಾವಾಹಿ ನಟಿ ಸುಭಾಷಿಣಿ ಆತ್ಮಹತ್ಯೆಗೆ... ಓದನ್ನು ಮುಂದುವರಿಸಿ
‘ಬಾಸ್’ ಚಿತ್ರಕ್ಕೆ ಕೋರ್ಟ್ ಬ್ರೇಕ್ – ರೇಣುಕಾಸ್ವಾಮಿ ಪ್ರಕರಣದ ನೆರಳು!
ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಆಧರಿಸಿ ನಿರ್ಮಿಸಲಾಗಿದ್ದ ‘ಬಾಸ್’ ಚಿತ್ರಕ್ಕೆ ನ್ಯ... ಓದನ್ನು ಮುಂದುವರಿಸಿ
ಪೀರಿಯಡ್ಸ್ ಬಗ್ಗೆ ಧೈರ್ಯವಾದ ಮಾತು – ಶ್ರೀಲೀಲಾ ಹೇಳಿಕೆ ವೈರಲ್!
ಮಹಿಳೆಯರ ಆರೋಗ್ಯ ಮತ್ತು ನೈರ್ಮಲ್ಯ ಕುರಿತು ಸಮಾಜದಲ್ಲಿ ಹೊಸ ಚರ್ಚೆಗಳು ನಡೆಯುತ್ತಿರುವ... ಓದನ್ನು ಮುಂದುವರಿಸಿ
ಧನುಷ್–ನಯನತಾರಾ ವಿವಾದಕ್ಕೆ ಹೊಸ ಟ್ವಿಸ್ಟ್ – ವಿಘ್ನೇಶ್ ಶಿವನ್ ಭಾವನಾತ್ಮಕ ಹೇಳಿಕೆ!
ತಮಿಳು ಚಿತ್ರರಂಗದಲ್ಲಿ ಚರ್ಚೆಗೆ ಗ್ರಾಸವಾದ ಧನುಷ್, ನಯನತಾರಾ ಮತ್ತು ವಿಘ್ನೇಶ್ ಶಿವನ್... ಓದನ್ನು ಮುಂದುವರಿಸಿ
‘ಮಹಿಳೆಯ ದೇಹ ಮಾರಾಟ ಆಗುತ್ತಿದೆ!’ – ಪಾಪರಾಜಿಗಳ ವಿರುದ್ಧ ಜಾನ್ವಿ ಕಪೂರ್ ಗರಂ
ಚಿತ್ರರಂಗದಲ್ಲಿ ಪಾಪರಾಜಿ ಸಂಸ್ಕೃತಿ ಕುರಿತು ಚರ್ಚೆ ಮತ್ತೆ ತೀವ್ರಗೊಂಡಿದೆ. ಕನ್ನಡ ನಟ... ಓದನ್ನು ಮುಂದುವರಿಸಿ
ರಾಜಕೀಯ ರಂಗದಲ್ಲಿ ದಳಪತಿ ವಿಜಯ್ – ಪ್ರಚಾರದಲ್ಲಿ ಸ್ಟೈಲಿಶ್ ಕ್ಷಣ ವೈರಲ್!
ದಕ್ಷಿಣ ಭಾರತದ ಖ್ಯಾತ ನಟ ದಳಪತಿ ವಿಜಯ್ ಇದೀಗ ರಾಜಕೀಯ ಕ್ಷೇತ್ರದಲ್ಲಿ ತಮ್ಮ ಅದೃಷ್ಟ ಪ... ಓದನ್ನು ಮುಂದುವರಿಸಿ