‘ಕೆಡಿ’ ಹಾಡು ವಿವಾದ – ನೋರಾ ಫತೇಹಿಗೆ ಮತ್ತೆ ನೋಟಿಸ್
ಬೆಂಗಳೂರು: ನಿರ್ದೇಶಕ ಪ್ರೇಮ್ ಅವರ ‘ಕೆಡಿ’ ಚಿತ್ರದ ‘ಸೆರಗ ಸರ್ಸೆ’ ಹಾಡು ವಿವಾದಕ್ಕೆ ಗುರಿಯಾಗಿದ್ದು, ಇದೀಗ ಪ್ರಕರಣ ಮತ್ತಷ್ಟು ಗಂಭೀರಗೊಂಡಿದೆ. ಧ್ರುವ ಸರ್ಜಾ ನಾಯಕನಾಗಿ ನಟಿಸಿರುವ ಈ ಬಹುತಾರಾ ಪ್ಯಾನ್ ಇಂಡಿಯಾ ಸಿನಿಮಾದ ಹಾಡಿನ ಸಾಹಿತ್ಯ ಹಾಗೂ ಚಿತ್ರೀಕರಣ ಅಶ್ಲೀಲವಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ, ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ನಿರ್ದೇಶಕ ಪ್ರೇಮ್, ಸಾಹಿತ್ಯಕಾರ ರಖೀಬ್ ಆಲಂ, ನಿರ್ಮಾಪಕ ಕೆವಿಎನ್ ವೆಂಕಟೇಶ್ ಹಾಗೂ ಹಾಡಿನಲ್ಲಿ ಅಭಿನಯಿಸಿರುವ ನೋರಾ ಫತೇಹಿ ಮತ್ತು ಸಂಜಯ್ ದತ್ ಅವರಿಗೆ ನೋಟಿಸ್ ಜಾರಿ ಮಾಡಿದೆ.
ವಿವಾದದ ತೀವ್ರತೆಯನ್ನು ಗಮನಿಸಿ, ಆಯೋಗ ಮತ್ತೊಮ್ಮೆ ನಟಿ ನೋರಾ ಫತೇಹಿಗೆ ನೋಟಿಸ್ ನೀಡಿ, ಏಪ್ರಿಲ್ 27ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಇದೇ ವೇಳೆ ನಟ ಸಂಜಯ್ ದತ್ ಏಪ್ರಿಲ್ 8ರಂದು ಆಯೋಗದ ಮುಂದೆ ಹಾಜರಾಗಬೇಕಿದೆ. ಇದಕ್ಕೂ ಮುನ್ನ ನಿರ್ದೇಶಕ ಪ್ರೇಮ್, ನಿರ್ಮಾಪಕ ವೆಂಕಟೇಶ್ ಹಾಗೂ ಸಾಹಿತ್ಯಕಾರ ರಖೀಬ್ ಆಲಂ ಲಿಖಿತ ಕ್ಷಮಾಪಣೆ ಸಲ್ಲಿಸಿ, ಮಹಿಳಾ ಸಬಲೀಕರಣಕ್ಕಾಗಿ ಮೂರು ತಿಂಗಳ ಸೇವಾ ಕಾರ್ಯಗಳಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ. ಪ್ರೇಮ್ ವಿಡಿಯೋ ಮೂಲಕ ಕ್ಷಮೆ ಕೇಳಿ, ವಿವಾದಿತ ಹಾಡನ್ನು ಹಿಂಪಡೆದು ಹೊಸ ಸಾಹಿತ್ಯದೊಂದಿಗೆ ಮರುಬಿಡುಗಡೆ ಮಾಡುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಬಹು ನಿರೀಕ್ಷೆ ಮೂಡಿಸಿರುವ ‘ಕೆಡಿ’ ಸಿನಿಮಾದಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದು, ಏಪ್ರಿಲ್ 30ರಂದು ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ. ಚಿತ್ರದಲ್ಲಿ ಸಂಜಯ್ ದತ್, ಶಿಲ್ಪಾ ಶೆಟ್ಟಿ, ಜೀಸು ಸೇನ್ಗುಪ್ತ, ರವಿಚಂದ್ರನ್ ಸೇರಿದಂತೆ ಹಲವು ನಟರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ನ್ಯಾಷನಲ್ ಕ್ರಶ್ ರಶ್ಮಿಕಾ ತವರಿನಲ್ಲಿ ವಿಜಯ್ ಜೋಡಿ – ಕೊಡಗಿನಲ್ಲಿ ಸಂಭ್ರಮ
ಕೊಡಗು: ಸ್ಯಾಂಡಲ್‌ವುಡ್‌ನಿಂದ ಸಿನಿ ಪಯಣ ಆರಂಭಿಸಿ ನ್ಯಾಷನಲ್ ಕ್ರ... ಓದನ್ನು ಮುಂದುವರಿಸಿ
ಜೈಲರ್ 2 ಗೇಸ್ಟ್ ರೋಲ್ ತಿರಸ್ಕರಿಸಿದ ಶಾರುಖ್ ಖಾನ್
ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್ 2’ ಚಿತ್ರದ... ಓದನ್ನು ಮುಂದುವರಿಸಿ
ನನಗೆ ನಾಲ್ಕು ಮಕ್ಕಳು ಇಲ್ಲ!” – ತ್ರಿಷಾ ಪೋಸ್ಟ್ ನೆಟ್ಟಿಗರ ಗಮನ ಸೆಳೆದು
ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಕೃಷ್ಣನ್ ಇತ್ತೀಚೆಗೆ... ಓದನ್ನು ಮುಂದುವರಿಸಿ
“ಪ್ರೀತಿಯೇ ಎಲ್ಲವೂ ಅಲ್ಲ…” – ಇನ್‌ಸ್ಟಾ ಪೋಸ್ಟ್‌ಗೆ ಹೊಸ ಅರ್ಥ? ತ್ರಿಷಾ ಹೇಳಿಕೆಯಿಂದ ಕುತೂಹಲ
ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಕೃಷ್ಣನ್ ಮತ್ತೊಮ್ಮೆ... ಓದನ್ನು ಮುಂದುವರಿಸಿ
ತಮಿಳು ನಟಿ ಸುಭಾಷಿಣಿ ಆತ್ಮಹತ್ಯೆ – ಪತಿಯೊಂದಿಗೆ ವಾಗ್ವಾದ ಹಿನ್ನೆಲೆ ಶಾಕ್!
ಚೆನ್ನೈನಲ್ಲಿ ನಡೆದ ದಾರುಣ ಘಟನೆಯಲ್ಲಿ ತಮಿಳು ಧಾರಾವಾಹಿ ನಟಿ ಸುಭಾಷಿಣಿ ಆತ್ಮಹತ್ಯೆಗೆ... ಓದನ್ನು ಮುಂದುವರಿಸಿ
‘ಬಾಸ್’ ಚಿತ್ರಕ್ಕೆ ಕೋರ್ಟ್ ಬ್ರೇಕ್ – ರೇಣುಕಾಸ್ವಾಮಿ ಪ್ರಕರಣದ ನೆರಳು!
ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಆಧರಿಸಿ ನಿರ್ಮಿಸಲಾಗಿದ್ದ ‘ಬಾಸ್’ ಚಿತ್ರಕ್ಕೆ ನ್ಯ... ಓದನ್ನು ಮುಂದುವರಿಸಿ
ಪೀರಿಯಡ್ಸ್ ಬಗ್ಗೆ ಧೈರ್ಯವಾದ ಮಾತು – ಶ್ರೀಲೀಲಾ ಹೇಳಿಕೆ ವೈರಲ್!
ಮಹಿಳೆಯರ ಆರೋಗ್ಯ ಮತ್ತು ನೈರ್ಮಲ್ಯ ಕುರಿತು ಸಮಾಜದಲ್ಲಿ ಹೊಸ ಚರ್ಚೆಗಳು ನಡೆಯುತ್ತಿರುವ... ಓದನ್ನು ಮುಂದುವರಿಸಿ
ಧನುಷ್–ನಯನತಾರಾ ವಿವಾದಕ್ಕೆ ಹೊಸ ಟ್ವಿಸ್ಟ್ – ವಿಘ್ನೇಶ್ ಶಿವನ್ ಭಾವನಾತ್ಮಕ ಹೇಳಿಕೆ!
ತಮಿಳು ಚಿತ್ರರಂಗದಲ್ಲಿ ಚರ್ಚೆಗೆ ಗ್ರಾಸವಾದ ಧನುಷ್, ನಯನತಾರಾ ಮತ್ತು ವಿಘ್ನೇಶ್ ಶಿವನ್... ಓದನ್ನು ಮುಂದುವರಿಸಿ
‘ಮಹಿಳೆಯ ದೇಹ ಮಾರಾಟ ಆಗುತ್ತಿದೆ!’ – ಪಾಪರಾಜಿಗಳ ವಿರುದ್ಧ ಜಾನ್ವಿ ಕಪೂರ್ ಗರಂ
ಚಿತ್ರರಂಗದಲ್ಲಿ ಪಾಪರಾಜಿ ಸಂಸ್ಕೃತಿ ಕುರಿತು ಚರ್ಚೆ ಮತ್ತೆ ತೀವ್ರಗೊಂಡಿದೆ. ಕನ್ನಡ ನಟ... ಓದನ್ನು ಮುಂದುವರಿಸಿ
ರಾಜಕೀಯ ರಂಗದಲ್ಲಿ ದಳಪತಿ ವಿಜಯ್ – ಪ್ರಚಾರದಲ್ಲಿ ಸ್ಟೈಲಿಶ್ ಕ್ಷಣ ವೈರಲ್!
ದಕ್ಷಿಣ ಭಾರತದ ಖ್ಯಾತ ನಟ ದಳಪತಿ ವಿಜಯ್ ಇದೀಗ ರಾಜಕೀಯ ಕ್ಷೇತ್ರದಲ್ಲಿ ತಮ್ಮ ಅದೃಷ್ಟ ಪ... ಓದನ್ನು ಮುಂದುವರಿಸಿ