ಇಂಧನ ಆತಂಕದ ನಡುವೆ ಬಿಡದಿ ಗ್ರಾಮಗಳಲ್ಲಿ ಪೈಪ್‌ಲೈನ್ ಗ್ಯಾಸ್ ಸಂಪರ್ಕದಿಂದ ರಾಹತು

ರಾಮನಗರ: ಇರಾನ್–ಇಸ್ರೇಲ್ ಯುದ್ಧದ ಪರಿಣಾಮವಾಗಿ ಇಂಧನ ಕ್ಷೇತ್ರದಲ್ಲಿ ಉಂಟಾದ ಆತಂಕದ ನಡುವೆಯೂ, ಗ್ಯಾಸ್ ಸಿಲಿಂಡರ್‌ಗಳಿಗಾಗಿ ರಾಜ್ಯದ ಹಲವೆಡೆ ಜನರು ಸಾಲಿನಲ್ಲಿ ನಿಂತಿರುವ ದೃಶ್ಯಗಳು ಕಾಣಿಸುತ್ತಿವೆ. ಆದರೆ ಬಿಡದಿ ಭಾಗದ ಕೆಲವು ಗ್ರಾಮಗಳು ಈ ಸಂಕಷ್ಟದಿಂದ ಸಂಪೂರ್ಣವಾಗಿ ಮುಕ್ತವಾಗಿವೆ. ಬಿಡದಿ ಸುತ್ತಮುತ್ತಲಿನ ಸುಮಾರು 10 ಗ್ರಾಮಗಳಲ್ಲಿ ಸಿಲಿಂಡರ್ ಅವಲಂಬನೆ ಕಡಿಮೆಯಾಗಿದ್ದು, ಪೈಪ್‌ಲೈನ್ ಮೂಲಕ ನೈಸರ್ಗಿಕ ಅನಿಲ ಮನೆಮನೆಗೆ ಪೂರೈಕೆ ಮಾಡಲಾಗುತ್ತಿದೆ. ಗೈಲ್ ಇಂಡಿಯಾ ಲಿಮಿಟೆಡ್ ಸಹಭಾಗಿತ್ವದಲ್ಲಿ ಮಹಾರಾಷ್ಟ್ರ ನ್ಯಾಚುರಲ್ ಗ್ಯಾಸ್ ಲಿಮಿಟೆಡ್ ಸಂಸ್ಥೆ ಈ ಸೇವೆಯನ್ನು ಒದಗಿಸುತ್ತಿದೆ.

 

ಛತ್ರ, ಗೊಲ್ಲಹಳ್ಳಿ, ಬಾನಂದೂರು, ಇಟ್ಟಮಾಡು, ರಾಮನಹಳ್ಳಿ, ಅಬ್ಬನಕುಪ್ಪೆ, ವೃಷಭಾವತಿಪುರ ಮತ್ತು ಜೋಗರದೊಡ್ಡಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಪೈಪ್‌ಲೈನ್ ಗ್ಯಾಸ್ ಸಂಪರ್ಕ ಈಗಾಗಲೇ ಲಭ್ಯವಿದ್ದು, 24 ಗಂಟೆಗಳ ನಿರಂತರ ಸರಬರಾಜು ನಡೆಯುತ್ತಿದೆ. ಸುಮಾರು 1,500 ಮನೆಗಳಿಗೆ ಬಿಡದಿ ಭಾಗದಲ್ಲಿ, ರಾಮನಗರದಲ್ಲಿ 500 ಮನೆಗಳಿಗೆ ಮತ್ತು ಚನ್ನಪಟ್ಟಣದಲ್ಲಿ 1,500 ಮನೆಗಳಿಗೆ ಸಂಪರ್ಕ ಒದಗಿಸಲಾಗಿದೆ. ಈ ಪ್ರದೇಶದ ನಿವಾಸಿಗಳು ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಮಾಡುವ ಅಗತ್ಯವಿಲ್ಲದಂತಾಗಿದೆ.

 

ಬಿಡದಿಯ ಬೈರಮಂಗಲ ಕ್ರಾಸ್ ಬಳಿ ಗ್ಯಾಸ್ ಸ್ಟೋರೇಜ್ ಪ್ಲಾಂಟ್ ಸ್ಥಾಪನೆಯಾಗಿದ್ದು, ದೇಶೀಯ ನೈಸರ್ಗಿಕ ಅನಿಲದಿಂದ ಪಿಎನ್‌ಜಿ ಗ್ಯಾಸ್ ಪೂರೈಕೆ ನಡೆಯುತ್ತಿದೆ. ಕೈಗಾರಿಕಾ ಘಟಕಗಳಿಗೂ ಇದೇ ಮೂಲದಿಂದ ಅನಿಲ ಸರಬರಾಜು ಮಾಡಲಾಗುತ್ತಿದೆ. ಇನ್ನೂ ಸಂಪರ್ಕ ಪಡೆಯದ ಗ್ರಾಮಗಳಲ್ಲಿ ಸಿಲಿಂಡರ್ ಸಮಸ್ಯೆ ಎದುರಿಸುತ್ತಿರುವ ಜನರು ಪೈಪ್‌ಲೈನ್ ಗ್ಯಾಸ್ ಸಂಪರ್ಕಕ್ಕಾಗಿ ಕಂಪನಿಯನ್ನು ಸಂಪರ್ಕಿಸಿ ತ್ವರಿತ ಸೇವೆಗೆ ಒತ್ತಾಯ ಮಾಡುತ್ತಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

1 hour ago

   
Image 1
Image 1
ಚಿಕ್ಕಬಳ್ಳಾಪುರ

ಗುಂಡ್ಲುಪೇಟೆ

“ಗುಂಡ್ಲುಪೇಟೆ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಗೋಲಕದಲ್ಲಿ 12.58 ಲಕ್ಷ ರೂ. ಸಂಗ್ರಹ

ಗುಂಡ್ಲುಪೇಟೆ: ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಗೋಲಕ... ಓದನ್ನು ಮುಂದುವರಿಸಿ


Edited by: ಬಾನು

1 hour ago

   
Image 1
ಚಿಕ್ಕಬಳ್ಳಾಪುರ

ಯಾರೋ ಕಾಡುತ್ತಿದ್ದಾರೆ ಎನ್ನುವ ಭಯದಲ್ಲಿ ಮಹಿಳೆ ಸಾವು!

ಚಿಕ್ಕಬಳ್ಳಾಪುರ: ತೌಡನಹಳ್ಳಿ ಗ್ರಾಮದಲ್ಲಿ ಮಾನಸಿಕ ಅಸ್ವಸ್ಥತೆಯ ಲ... ಓದನ್ನು ಮುಂದುವರಿಸಿ


Edited by: ಬಾನು

1 hour ago

   
Image 1
ದಕ್ಷಿಣಕನ್ನಡ

ಮಂಗಳೂರು

ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯದಲ್ಲಿಯೂ “ಅಪೋಲೋ ಓಷನ್” ಎಲ್‌ಪಿಜಿ ಹಡಗು ಬಂದರ್‌ಗೆ ಆಗಮ

ಮಂಗಳೂರು: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆಯೂ... ಓದನ್ನು ಮುಂದುವರಿಸಿ


Edited by: ಬಾನು

1 hour ago

   
Image 1
ಬೆಂಗಳೂರು ಗ್ರಾಮಾಂತರ

ದೊಡ್ಡಬಳ್ಳಾಪುರ ತಾಲೂಕು

ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಹುಂಡಿಯಲ್ಲಿ 39.49 ಲಕ್ಷ ರೂ. ಕಾಣಿಕೆ

ದೊಡ್ಡಬಳ್ಳಾಪುರ: ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ... ಓದನ್ನು ಮುಂದುವರಿಸಿ


Edited by: ಬಾನು

1 hour ago

   
Image 1
ಬೀದರ್

ಪೆಟ್ರೋಲ್-ಡೀಸೆಲ್ ಕೊರತೆ, ಹಲವೆಡೆ ಬಂಕ್‌ಗಳು ಬಂದ್ – ಜನರಲ್ಲಿ ಆತಂಕ

ಬೀದರ್: ಇರಾನ್–ಇಸ್ರೇಲ್ ಯುದ್ಧ ಮತ್ತು ಇಂಧನ ಕೊರತೆ ವದಂತಿಗಳ ನಡು... ಓದನ್ನು ಮುಂದುವರಿಸಿ


Edited by: ಬಾನು

1 hour ago

   
Image 1
ಬೆಳಗಾವಿ

ಕಾಂಗ್ರೆಸ್ ನಾಯಕರಿಗೆ ಉಪಚುನಾವಣೆ ಹೊಣೆಗಾರಿಕೆ – ಹೈಕಮಾಂಡ್ ಸೂಚನೆ, ರಾಜಕೀಯ ಅಖಾಡ ಸಜ್ಜು

ಬೆಳಗಾವಿ: ಗಡಿಜಿಲ್ಲೆಯ ಪ್ರಮುಖ ಕಾಂಗ್ರೆಸ್ ನಾಯಕರಿಗೆ ಉಪಚುನಾವಣೆ... ಓದನ್ನು ಮುಂದುವರಿಸಿ


Edited by: ಬಾನು

1 hour ago

   
Image 1
ಮಂಡ್ಯ

ಮಂಡ್ಯ ಕುರುಬರ ಸಂಘದಲ್ಲಿ ಹೈಡ್ರಾಮಾ: ಅಧ್ಯಕ್ಷನಿಗೆ ಮುಖಕ್ಕೆ ಮಸಿ – ರಾಜೀನಾಮೆಗೆ ಆಗ್ರಹ”

ಮಂಡ್ಯ: ಮಂಡ್ಯ ಜಿಲ್ಲಾ ಕುರುಬರ ಸಂಘದಲ್ಲಿ ಭಾರಿ ಉಭಯೋಭಾಷಿ ಹೈಡ್ರ... ಓದನ್ನು ಮುಂದುವರಿಸಿ


Edited by: ಬಾನು

1 hour ago

   
Image 1
ಚಿಕ್ಕಬಳ್ಳಾಪುರ

ಇಂಧನ ಅಭಾವ ವದಂತಿ ಭೀತಿ : ಪೆಟ್ರೋಲ್-ಡೀಸೆಲ್ ದರ ಏರಿಕೆ, ಉದ್ದ ಸಾಲುಗಳಲ್ಲಿ ವಾಹನಗಳು

ಚಿಕ್ಕಬಳ್ಳಾಪುರ:  ಚಿಕ್ಕಬಳ್ಳಾಪುರದಲ್ಲಿ ಇತ್ತೀಚೆಗೆ ಪೆಟ್ರ... ಓದನ್ನು ಮುಂದುವರಿಸಿ


Edited by: ಬಾನು

1 hour ago

   
Image 1
ಬೆಂಗಳೂರು ಗ್ರಾಮಾಂತರ

ಆನೇಕಲ್ ತಾಲ್ಲೂಕು

“ಸಿಲಿಂಡರ್ ಕೊಡುತ್ತೀರಾ? ತಿಂಗಳ ಫ್ರೀ ಬಿರಿಯಾನಿ ನಿಮ್ಮದು!” ಆನೇಕಲ್ ಹೋಟೆಲ್ ವಿಶೇಷ”

ಆನೇಕಲ್:  ಬೆಂಗಳೂರು ಹೊರವಲಯದ ಆನೇಕಲ್ ಗಡಿಭಾಗದಲ್ಲಿರುವ ಒಂ... ಓದನ್ನು ಮುಂದುವರಿಸಿ


Edited by: ಬಾನು

1 hour ago

   
Image 1
ಬೆಂಗಳೂರು ನಗರ

ಸಿಎಂ ಕುಟುಂಬಕ್ಕೆ ಶಾಕ್ : ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ದಂಪತಿಗೆ ಹೈಕೋರ್ಟ್ ನೋಟಿಸ್

 ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿ... ಓದನ್ನು ಮುಂದುವರಿಸಿ


Edited by: ಬಾನು

4 hours ago

   
Image 1