ಗ್ಯಾಸ್ ಕೊರತೆ: ಅಗತ್ಯ ಸೇವೆಗಳಿಗೆ ಶೇ.100 ಪೂರೈಕೆ – ಸರ್ಕಾರದ ಹೊಸ ಗೈಡ್‌ಲೈನ್
ಬೆಂಗಳೂರು: ರಾಜ್ಯದಲ್ಲಿ ಉಂಟಾದ ಕಮರ್ಷಿಯಲ್ ಗ್ಯಾಸ್ ಕೊರತೆ ಹಿನ್ನೆಲೆ, ಕರ್ನಾಟಕ ಸರ್ಕಾರ ಗ್ಯಾಸ್ ವಿತರಣೆಗೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಅಗತ್ಯ ಸೇವಾ ವಲಯಗಳಿಗೆ ಆದ್ಯತೆ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಶೇ.100 ಗ್ಯಾಸ್ ಪೂರೈಕೆ ಮಾಡುವಂತೆ ನಿರ್ದೇಶನ ನೀಡಲಾಗಿದೆ.
ನಾಳೆಯಿಂದಲೇ ಈ ನಿಯಮ ಜಾರಿಗೆ ಬರಲಿದ್ದು, ವಿವಿಧ ವಲಯಗಳಿಗೆ ಗ್ಯಾಸ್ ವಿತರಣೆ ಪ್ರಮಾಣವನ್ನು ಸ್ಪಷ್ಟವಾಗಿ ನಿಗದಿಪಡಿಸಿ ಏಜೆನ್ಸಿ ಕಂಪನಿಗಳಿಗೆ ಸೂಚಿಸಲಾಗಿದೆ. ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ಆಸ್ಪತ್ರೆಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಸಂಪೂರ್ಣ (100%) ಗ್ಯಾಸ್ ಪೂರೈಕೆ ಒದಗಿಸಲಾಗುತ್ತದೆ. ಸೀಡ್ ಪ್ರೊಸೆಸಿಂಗ್ ಘಟಕಗಳು, ಆಯಿಲ್ ಉತ್ಪಾದನಾ ಕಂಪನಿಗಳು, ಏರ್‌ಲೈನ್ಸ್ ಮತ್ತು ರೈಲ್ವೆ ವಲಯಗಳಿಗೆ ಶೇ.70 ಗ್ಯಾಸ್ ವಿತರಣೆ ಮಾಡಲಾಗುತ್ತದೆ. ವೃದ್ಧಾಶ್ರಮಗಳಿಗೂ ಶೇ.70 ಪೂರೈಕೆ ನೀಡಲಾಗುತ್ತದೆ.
ಇನ್ನೊಂದೆಡೆ, ಇಂಡಸ್ಟ್ರಿಯಲ್ ಕ್ಯಾಂಟೀನ್‌ಗಳು, ಕಾರ್ಪೋರೇಟ್ ಗೆಸ್ಟ್ ಹೌಸ್‌ಗಳು ಹಾಗೂ ಫುಡ್ ಪ್ರೊಸೆಸಿಂಗ್ ಕಂಪನಿಗಳಿಗೆ ಕೇವಲ ಶೇ.10 ಗ್ಯಾಸ್ ಮಾತ್ರ ನೀಡಲಾಗುತ್ತದೆ. ಇದೇ ರೀತಿ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿಗೂ ಶೇ.10 ಗ್ಯಾಸ್ ವಿತರಣೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಗ್ಯಾಸ್ ಕೊರತೆ ಹಿನ್ನೆಲೆ ಅಗತ್ಯ ಸೇವೆಗಳಿಗೆ ಯಾವುದೇ ವ್ಯತ್ಯಯ ಉಂಟಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಬ್ಯಾಂಕ್ ಲಾಕರ್‌ನಲ್ಲೇ ಚಿನ್ನ ಕಳವು! 9 ದಿನಗಳಲ್ಲಿ ಆಭರಣ ಮಿಸ್ಸಿಂಗ್
ಬೆಂಗಳೂರು: ನಗರದ ಸದಾಶಿವನಗರದ ಆರ್‌ಎಂವಿ ಎಕ್ಸ್ಟೆಂಶನ್‌ನಲ್ಲಿರುವ... ಓದನ್ನು ಮುಂದುವರಿಸಿ
ಯುಗಾದಿ ಹಬ್ಬಕ್ಕೆ ಬಂಪರ್ : ಚಿನ್ನ-ಬೆಳ್ಳಿ ದರದಲ್ಲಿ ಕುಸಿತ: ಮಧ್ಯಪ್ರಾಚ್ಯ ಯುದ್ಧದ ಪರಿಣಾಮ, ಚಿನ್ನ ಇಳಿಕೆ
ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಉಂಟಾದ ಯುದ್ಧ ಪರಿಸ್ಥಿತಿಯ ಪರಿಣಾ... ಓದನ್ನು ಮುಂದುವರಿಸಿ
ಆನೇಕಲ್ ತಾಲ್ಲೂಕು
ಟ್ರಾಫಿಕ್‌ಗೆ ಬೈ ಬೈ: 700ಕ್ಕೂ ಹೆಚ್ಚು ಡ್ರೋನ್ ಹಾರಾಟದಿಂದ ವೈದ್ಯಕೀಯ ಮಾದರಿ ಸಾಗಣೆ ಹೊಸ ಮೈಲುಗಲ್ಲು
ಬೆಂಗಳೂರು: ನಾರಾಯಣ ಹೆಲ್ತ್ ಮತ್ತು ಏರ್‌ಬೌಂಡ್ ಸಂಸ್ಥೆಗಳು ಡ್ರೋನ... ಓದನ್ನು ಮುಂದುವರಿಸಿ
ಬಿಪಿಎಲ್ ಕಾರ್ಡ್ ಆದಾಯ ಮಿತಿ ₹3 ಲಕ್ಷಕ್ಕೆ ಹೆಚ್ಚಿಸುವ ಬಗ್ಗೆ ಸರ್ಕಾರ ಚಿಂತನೆ
ಬೆಂಗಳೂರು: ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸಿಹ... ಓದನ್ನು ಮುಂದುವರಿಸಿ
ವಾಹನ ಮಾಲೀಕರೇ ಎಚ್ಚರ: ಸರ್ಕಾರಿ ಸಾರಿಗೆ ಇಲಾಖೆ ಘೋಷಿಸಿದೆ ಹೊಸ ಎಫ್ಸಿ ನಿಯಮಗಳು!
ಬೆಂಗಳೂರು: ಬೆಂಗಳೂರಿನ ಆರ್‌ಟಿಓ ಕಚೇರಿಗಳಲ್ಲಿ ಹೊರರಾಜ್ಯದ ವಾಹನಗ... ಓದನ್ನು ಮುಂದುವರಿಸಿ
ಪ್ರಯಾಣಿಕರಿಗೆ ಸುಲಭ ಸುದ್ದಿ : ಬಿಎಂಟಿಸಿ ನಗದು ರಹಿತ ಟಿಕೆಟ್: ‘ನಮ್ಮ ಮೆಟ್ರೋ’ ಕಾರ್ಡ್ ಬಳಸಿ ಸುಲಭ ಸಂಚಾರ
ಬೆಂಗಳೂರು: ಪ್ರಯಾಣಿಕರಿಗೆ ಸಿಹಿ ಸುದ್ದಿ! ಬೃಹತ್ ಬೆಂಗಳೂರು ಮಹಾನ... ಓದನ್ನು ಮುಂದುವರಿಸಿ
ಮನೆ ಬಳಕೆಯ LPG ಗ್ರಾಹಕರಿಗೆ ಮೊದಲ ಆದ್ಯತೆ, ಬುಕ್ಕಿಂಗ್ ಅವಧಿ 25 ದಿನಕ್ಕೆ ಹೆಚ್ಚಳ
ದೆಹಲಿ: ಕೇಂದ್ರ ಸರ್ಕಾರವು ದೇಶದಲ್ಲಿ ಎಲ್‌ಪಿಜಿ (LPG) ಸಿಲಿಂಡರ್... ಓದನ್ನು ಮುಂದುವರಿಸಿ
ಇದು ಸರಿಯಲ್ಲ": LPG ದರ ಹೆಚ್ಚಳಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
ಬೆಂಗಳೂರು : ಕೇಂದ್ರ ಸರ್ಕಾರ ವಾಣಿಜ್ಯ ಬಳಕೆಯ ಎಲ್.ಪಿ.ಜಿ ಸಿಲಿಂಡ... ಓದನ್ನು ಮುಂದುವರಿಸಿ
ಗಲ್ಫ್ ಯುದ್ಧದ ಎಫೆಕ್ಟ್: ಬೆಂಗಳೂರಿನಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ – ಹೋಟೆಲ್ ಬಂದ್ ಭೀತಿಯ ಎಚ್ಚರಿಕೆ
ಬೆಂಗಳೂರು : ನಗರದಲ್ಲಿ ಗಲ್ಫ್ ರಾಷ್ಟ್ರಗಳ ಯುದ್ಧದ ಪರಿಣಾಮ... ಓದನ್ನು ಮುಂದುವರಿಸಿ
ಇರಾನ್–ಇಸ್ರೇಲ್ ಉದ್ವಿಗ್ನತೆ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 21 ಅಂತಾರಾಷ್ಟ್ರೀಯ ವಿಮಾನ ರದ್ದು
ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಲ್... ಓದನ್ನು ಮುಂದುವರಿಸಿ