ಬ್ಯಾಂಕ್ ಲಾಕರ್‌ನಲ್ಲೇ ಚಿನ್ನ ಕಳವು! 9 ದಿನಗಳಲ್ಲಿ ಆಭರಣ ಮಿಸ್ಸಿಂಗ್

ಬೆಂಗಳೂರು: ನಗರದ ಸದಾಶಿವನಗರದ ಆರ್‌ಎಂವಿ ಎಕ್ಸ್ಟೆಂಶನ್‌ನಲ್ಲಿರುವ ಎಸ್‌ಬಿಐ ಬ್ಯಾಂಕ್ ಶಾಖೆಯಲ್ಲಿ ಲಾಕರ್‌ನಲ್ಲಿ ಇಟ್ಟಿದ್ದ ಚಿನ್ನಾಭರಣ ಕಳವುಗೊಂಡಿರುವ ಘಟನೆ ಬೆಳಕಿಗೆ ಬಂದಿದೆ.

 

ದೂರುದಾರರಾದ ಸುಜಾತಾ ಅವರು ತಮ್ಮ ಮದುವೆಗಾಗಿ 160 ಗ್ರಾಂ ತೂಕದ ಚಿನ್ನಾಭರಣ, ಜುಮುಕಿ ಹಾಗೂ ಚಿನ್ನದ ಬಳೆ ಸೇರಿದಂತೆ ಹಲವು ಆಭರಣಗಳನ್ನು ಬ್ಯಾಂಕ್ ಲಾಕರ್‌ನಲ್ಲಿ ಭದ್ರವಾಗಿ ಇಟ್ಟಿದ್ದರು. ಆದರೆ, ಲಾಕರ್‌ನಲ್ಲಿ ಹಣ ಮತ್ತು ಚಿನ್ನವನ್ನು ಇಟ್ಟ ಬಳಿಕ ಕೇವಲ 9 ದಿನಗಳಲ್ಲೇ ಆಭರಣಗಳು ಕಣ್ಮರೆಯಾಗಿರುವುದು ಗಮನಕ್ಕೆ ಬಂದಿದೆ.

 

ಈ ಬಗ್ಗೆ ಸುಜಾತಾ ಅವರು ತಕ್ಷಣವೇ ಬ್ಯಾಂಕ್ ಮ್ಯಾನೇಜರ್‌ಗೆ ಮಾಹಿತಿ ನೀಡಿದ್ದಾರೆ. ಮ್ಯಾನೇಜರ್ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ, ಮೊದಲಿಗೆ ಚಿನ್ನಾಭರಣ ಲಾಕರ್‌ನಲ್ಲಿ ಇಟ್ಟಿರುವುದು ದೃಢಪಟ್ಟಿದೆ. ಆದರೆ ಬಳಿಕ ಅವು ಹೇಗೆ ಕಾಣೆಯಾಗಿವೆ ಎಂಬುದು ಇನ್ನೂ ಅನುಮಾನಾಸ್ಪದವಾಗಿದೆ.

 

ಘಟನೆ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳತನದ ಹಿನ್ನೆಲೆ ಮತ್ತು ಭದ್ರತಾ ಲೋಪಗಳ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಘಟನೆ ಬ್ಯಾಂಕ್ ಲಾಕರ್‌ಗಳ ಭದ್ರತೆ ಕುರಿತು ಗ್ರಾಹಕರಲ್ಲಿ ಆತಂಕ ಮೂಡಿಸಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

16 hours ago

   
Image 1
Image 1
ಬೆಂಗಳೂರು ನಗರ

ಗ್ಯಾಸ್ ಕೊರತೆ: ಅಗತ್ಯ ಸೇವೆಗಳಿಗೆ ಶೇ.100 ಪೂರೈಕೆ – ಸರ್ಕಾರದ ಹೊಸ ಗೈಡ್‌ಲೈನ್

ಬೆಂಗಳೂರು: ರಾಜ್ಯದಲ್ಲಿ ಉಂಟಾದ ಕಮರ್ಷಿಯಲ್ ಗ್ಯಾಸ್ ಕೊರತೆ ಹಿನ್ನ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಬೆಂಗಳೂರು ನಗರ

ಯುಗಾದಿ ಹಬ್ಬಕ್ಕೆ ಬಂಪರ್ : ಚಿನ್ನ-ಬೆಳ್ಳಿ ದರದಲ್ಲಿ ಕುಸಿತ: ಮಧ್ಯಪ್ರಾಚ್ಯ ಯುದ್ಧದ ಪರಿಣಾಮ, ಚಿನ್ನ ಇಳಿಕೆ

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಉಂಟಾದ ಯುದ್ಧ ಪರಿಸ್ಥಿತಿಯ ಪರಿಣಾ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ಗ್ರಾಮಾಂತರ

ಆನೇಕಲ್ ತಾಲ್ಲೂಕು

ಟ್ರಾಫಿಕ್‌ಗೆ ಬೈ ಬೈ: 700ಕ್ಕೂ ಹೆಚ್ಚು ಡ್ರೋನ್ ಹಾರಾಟದಿಂದ ವೈದ್ಯಕೀಯ ಮಾದರಿ ಸಾಗಣೆ ಹೊಸ ಮೈಲುಗಲ್ಲು

ಬೆಂಗಳೂರು: ನಾರಾಯಣ ಹೆಲ್ತ್ ಮತ್ತು ಏರ್‌ಬೌಂಡ್ ಸಂಸ್ಥೆಗಳು ಡ್ರೋನ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ಬಿಪಿಎಲ್ ಕಾರ್ಡ್ ಆದಾಯ ಮಿತಿ ₹3 ಲಕ್ಷಕ್ಕೆ ಹೆಚ್ಚಿಸುವ ಬಗ್ಗೆ ಸರ್ಕಾರ ಚಿಂತನೆ

ಬೆಂಗಳೂರು: ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸಿಹ... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1
ಬೆಂಗಳೂರು ನಗರ

ವಾಹನ ಮಾಲೀಕರೇ ಎಚ್ಚರ: ಸರ್ಕಾರಿ ಸಾರಿಗೆ ಇಲಾಖೆ ಘೋಷಿಸಿದೆ ಹೊಸ ಎಫ್ಸಿ ನಿಯಮಗಳು!

ಬೆಂಗಳೂರು: ಬೆಂಗಳೂರಿನ ಆರ್‌ಟಿಓ ಕಚೇರಿಗಳಲ್ಲಿ ಹೊರರಾಜ್ಯದ ವಾಹನಗ... ಓದನ್ನು ಮುಂದುವರಿಸಿ


Edited by: ಬಾನು

6 days ago

   
Image 1
ಬೆಂಗಳೂರು ನಗರ

ಪ್ರಯಾಣಿಕರಿಗೆ ಸುಲಭ ಸುದ್ದಿ : ಬಿಎಂಟಿಸಿ ನಗದು ರಹಿತ ಟಿಕೆಟ್: ‘ನಮ್ಮ ಮೆಟ್ರೋ’ ಕಾರ್ಡ್ ಬಳಸಿ ಸುಲಭ ಸಂಚಾರ

ಬೆಂಗಳೂರು: ಪ್ರಯಾಣಿಕರಿಗೆ ಸಿಹಿ ಸುದ್ದಿ! ಬೃಹತ್ ಬೆಂಗಳೂರು ಮಹಾನ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1

ಮನೆ ಬಳಕೆಯ LPG ಗ್ರಾಹಕರಿಗೆ ಮೊದಲ ಆದ್ಯತೆ, ಬುಕ್ಕಿಂಗ್‌ ಅವಧಿ 25 ದಿನಕ್ಕೆ ಹೆಚ್ಚಳ

ದೆಹಲಿ: ಕೇಂದ್ರ ಸರ್ಕಾರವು ದೇಶದಲ್ಲಿ ಎಲ್‌ಪಿಜಿ (LPG) ಸಿಲಿಂಡರ್... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1
ಬೆಂಗಳೂರು ನಗರ

ಇದು ಸರಿಯಲ್ಲ": LPG ದರ ಹೆಚ್ಚಳಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ಬೆಂಗಳೂರು : ಕೇಂದ್ರ ಸರ್ಕಾರ ವಾಣಿಜ್ಯ ಬಳಕೆಯ ಎಲ್.ಪಿ.ಜಿ ಸಿಲಿಂಡ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1
ಬೆಂಗಳೂರು ನಗರ

ಗಲ್ಫ್ ಯುದ್ಧದ ಎಫೆಕ್ಟ್: ಬೆಂಗಳೂರಿನಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ – ಹೋಟೆಲ್ ಬಂದ್ ಭೀತಿಯ ಎಚ್ಚರಿಕೆ

ಬೆಂಗಳೂರು :  ನಗರದಲ್ಲಿ ಗಲ್ಫ್ ರಾಷ್ಟ್ರಗಳ ಯುದ್ಧದ ಪರಿಣಾಮ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1
ಬೆಂಗಳೂರು ನಗರ

ಇರಾನ್–ಇಸ್ರೇಲ್ ಉದ್ವಿಗ್ನತೆ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 21 ಅಂತಾರಾಷ್ಟ್ರೀಯ ವಿಮಾನ ರದ್ದು

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ  ನಲ್... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1