ಐಪಿಎಲ್ ಪಂದ್ಯಕ್ಕೆ ಮೆಟ್ರೋ ಸೌಲಭ್ಯ ವಿಸ್ತರಣೆ: ಮಧ್ಯರಾತ್ರಿ 2ರವರೆಗೆ ಸೇವೆ!
ಬೆಂಗಳೂರು: ಐಪಿಎಲ್–2026 ಪಂದ್ಯಗಳ ಹಿನ್ನೆಲೆ, ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ಸಂಚಾರ ಸಮಯವನ್ನು ವಿಸ್ತರಿಸುವುದಾಗಿ ಘೋಷಿಸಿದೆ. ಏಪ್ರಿಲ್ 5ರಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಮಹತ್ವದ ಪಂದ್ಯವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ.
ಪಂದ್ಯ ವೀಕ್ಷಿಸಲು ಸಾವಿರಾರು ಅಭಿಮಾನಿಗಳು ಆಗಮಿಸುವ ನಿರೀಕ್ಷೆಯಿರುವುದರಿಂದ, ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಮೆಟ್ರೋ ಸೇವೆಯನ್ನು ರಾತ್ರಿ 11 ಗಂಟೆಯಿಂದ ಮಧ್ಯರಾತ್ರಿ 2 ಗಂಟೆಯವರೆಗೆ ವಿಸ್ತರಿಸಲಾಗಿದೆ. ಬಿಎಂಆರ್‌ಸಿಎಲ್ ಮಾಹಿತಿ ಪ್ರಕಾರ, ವೈಟ್‌ಫೀಲ್ಡ್ (ಕಾಡುಗೋಡಿ) ಮತ್ತು ಬೊಮ್ಮಸಂದ್ರ ನಿಲ್ದಾಣಗಳಿಂದ ಕೊನೆಯ ರೈಲುಗಳು ರಾತ್ರಿ 12:30ಕ್ಕೆ ಹೊರಡಲಿವೆ. ಚೆಲ್ಲಘಟ್ಟ, ರೇಷ್ಮೆ ಸಂಸ್ಥೆ ಹಾಗೂ ಮಾದಾವರ ನಿಲ್ದಾಣಗಳಿಂದ ರಾತ್ರಿ 12:45ಕ್ಕೆ ಸೇವೆ ಲಭ್ಯವಿರಲಿದೆ.
ಆರ್.ವಿ. ರಸ್ತೆ ನಿಲ್ದಾಣದಿಂದ ರಾತ್ರಿ 2:00ಕ್ಕೆ ಕೊನೆಯ ರೈಲು ಹೊರಡಲಿದ್ದು, ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮಜೆಸ್ಟಿಕ್)ದಿಂದ ನಾಲ್ಕು ದಿಕ್ಕುಗಳಿಗೆ ರಾತ್ರಿ 1:30ಕ್ಕೆ ಕೊನೆಯ ರೈಲುಗಳು ಸಂಚರಿಸಲಿವೆ. ಪ್ರೇಕ್ಷಕರ ಅನುಕೂಲಕ್ಕಾಗಿ ಡಿಜಿಟಲ್ ಐಪಿಎಲ್ ಟಿಕೆಟ್‌ಗಳಲ್ಲಿ ಕ್ಯೂಆರ್ ಕೋಡ್ ವ್ಯವಸ್ಥೆ ಕಲ್ಪಿಸಲಾಗಿದೆ. ಕಬ್ಬನ್ ರಸ್ತೆ ಭಾಗದಿಂದ ಪ್ರವೇಶಿಸುವವರು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣವನ್ನು, ಲಿಂಕ್ ರಸ್ತೆ ಭಾಗದಿಂದ ಬರುವವರು ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣವನ್ನು ಬಳಸುವಂತೆ ಸೂಚಿಸಲಾಗಿದೆ.
ಇದಲ್ಲದೆ, ಹಲವು ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಪಾರ್ಕಿಂಗ್ ಸೌಲಭ್ಯ ಒದಗಿಸಲಾಗಿದೆ. ಎರಡು ಚಕ್ರ ವಾಹನಗಳಿಗೆ ₹30 ಮತ್ತು ಕಾರುಗಳಿಗೆ ₹60 ಶುಲ್ಕ ನಿಗದಿ ಮಾಡಲಾಗಿದೆ. ಒಟ್ಟಾರೆ, ಐಪಿಎಲ್ ಪಂದ್ಯ ಹಿನ್ನೆಲೆ ನಗರ ಸಂಚಾರ ಸುಗಮಗೊಳಿಸಲು ಮೆಟ್ರೋ ಇಲಾಖೆ ವಿಶೇಷ ವ್ಯವಸ್ಥೆಗಳನ್ನು ಮಾಡಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಮತ್ತೆ ಗ್ಯಾಸ್ ದರ ಏರಿಕೆ : ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಮತ್ತೊಂದು ಹೊಡೆತ
ದೆಹಲಿ: ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ಕೊರತೆಯ ನಡುವೆ ಬಳಕೆದಾರ... ಓದನ್ನು ಮುಂದುವರಿಸಿ
ವಾಹನ ಸವಾರರಿಗೆ ರಿಲೀಫ್ : ಹೊರರಾಜ್ಯದಲ್ಲಿ ಇನ್ಮುಂದೆ ದಂಡ ಇಲ್ಲ!
ಬೆಂಗಳೂರು: ಕರ್ನಾಟಕದ ವಾಹನ ಮಾಲೀಕರಿಗೆ ದೊಡ್ಡ ಸಮಸ್ಯೆಯಾಗಿದ್ದ ಪ... ಓದನ್ನು ಮುಂದುವರಿಸಿ
ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇ ಟೋಲ್ ದರ ಏರಿಕೆ ಜಾರಿ
ರಾಮನಗರ: ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಸಂಚರಿಸುವ ವ... ಓದನ್ನು ಮುಂದುವರಿಸಿ
ರೇಷನ್ ಕಾರ್ಡ್‌ಗೆ ಹೊಸ ರೂಲ್ಸ್ – ಇ-ಕೆವೈಸಿ ಕಡ್ಡಾಯ
ನವದೆಹಲಿ: ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಕೇಂ... ಓದನ್ನು ಮುಂದುವರಿಸಿ
KSRTC ಗೆ ರಾಷ್ಟ್ರಮಟ್ಟದ ಪ್ರಶಸ್ತಿ: ಧ್ವನಿ ಸ್ಪಂದನ ಮತ್ತು AWATAR 4.0ಗೆ ಜಯ
ಬೆಂಗಳೂರು: KSRTC ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ತನ್ನ ಸಾಧನೆಯನ... ಓದನ್ನು ಮುಂದುವರಿಸಿ
“ಜೀರೋ ಕಾಸ್ಟ್” ಕ್ರೆಡಿಟ್ ಕಾರ್ಡ್ ಇಎಂಐ: ತಿಂಗಳ ಕಂತು ಕಡಿಮೆ, ಆದರೆ ಒಟ್ಟು ಪಾವತಿಸಬೇಕಾದ ಮೊತ್ತ ಹೆಚ್ಚಾಗಬಹುದು
ಇಂದಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ಶಾಪಿಂಗ್ ಹೆಚ್ಚುತ್ತಿರುವುದು ಸಾಮಾನ್ಯವಾಗ... ಓದನ್ನು ಮುಂದುವರಿಸಿ
ಪ್ರಯಾಣಿಕರಿಗೆ ಸಿಹಿ ಸುದ್ದಿ: ಯಶವಂತಪುರ–ತಾಳಗುಪ್ಪ ರೈಲು ಸೇರಿ 19 ಸೇವೆಗಳು ಖಾಯಂ
ಬೆಂಗಳೂರು: ರಾಜ್ಯದ ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿ ಲಭಿಸಿದೆ... ಓದನ್ನು ಮುಂದುವರಿಸಿ
ಯುದ್ಧದ ಮಧ್ಯೆ ಚಿನ್ನದ ಬೆಲೆ ಇಳಿಕೆ : ಬಂಗಾರ ಪ್ರಿಯರಿಗೆ ಸುವಾರ್ತೆ
ಬೆಂಗಳೂರು: ಕೊಲ್ಲಿ ರಾಷ್ಟ್ರಗಳಲ್ಲಿ ಯುದ್ಧದ ಬಿಸಿ ನಡುವೆಯೇ ಬಂಗಾ... ಓದನ್ನು ಮುಂದುವರಿಸಿ
"ಕಾರು, ಬಸ್, ಲಾರಿ ಎಲ್ಲರಿಗೂ ಟೋಲ್ ದರ ಏರಿಕೆ – Bengaluru-Mysuru Expressway ಸೇರಿದಂತೆ 8 ರಾಷ್ಟ್ರೀಯ ಹೆದ್ದಾರಿಗಳ ಮೇಲೆ ಪರಿಣಾಮ"
ನವದೆಹಲಿ: ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ದರಗಳಲ್ಲಿ ಸುಮಾರು 4–5% (ಸ... ಓದನ್ನು ಮುಂದುವರಿಸಿ
ಎಟಿಎಂ ವಹಿವಾಟಿನಲ್ಲಿ ಬೃಹತ್ ಬದಲಾವಣೆ: ಏಪ್ರಿಲ್ 1ರಿಂದ ಹೊಸ ನಿಯಮಗಳು ಜಾರಿ
ದೆಹಲಿ : ಏಪ್ರಿಲ್ 1ರಿಂದ ಎಟಿಎಂ ವಹಿವಾಟುಗಳಿಗೆ ಸಂಬಂಧಿಸಿದಂತೆ ಹ... ಓದನ್ನು ಮುಂದುವರಿಸಿ