ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇ ಟೋಲ್ ದರ ಏರಿಕೆ ಜಾರಿ
ರಾಮನಗರ: ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಸಂಚರಿಸುವ ವಾಹನ ಸವಾರರಿಗೆ ಏಪ್ರಿಲ್ 1ರಿಂದ ಟೋಲ್ ದರ ಏರಿಕೆಯ ಭಾರ ಬೀಳಲಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಟೋಲ್ ದರವನ್ನು 3 ಶೇಕಡಾ ಹೆಚ್ಚಳ ಮಾಡುವಂತೆ ಪ್ರಕಟಣೆ ಹೊರಡಿಸಿದೆ. 118 ಕಿಲೋಮೀಟರ್ ಉದ್ದದ ಈ ಹೆದ್ದಾರಿಯಲ್ಲಿ ರಾಮನಗರದ ಕಣಮಿಣಕಿ ಮತ್ತು ಮಂಡ್ಯದ ಗಣಂಗೂರು ಟೋಲ್ ಪ್ಲಾಜಾಗಳಲ್ಲಿ ಹೊಸ ದರ ಜಾರಿಗೆ ಬರಲಿದೆ.
ವಾಹನಗಳ ಪ್ರಕಾರ 5 ರೂಪಾಯಿಯಿಂದ 25 ರೂಪಾಯಿವರೆಗೆ ದರ ಏರಿಕೆ ಮಾಡಲಾಗಿದೆ. ಕಾರು ಮತ್ತು ಜೀಪುಗಳಿಗೆ ಇದ್ದ 175 ರೂಪಾಯಿ ದರವನ್ನು 180 ರೂಪಾಯಿಗೆ ಹೆಚ್ಚಿಸಲಾಗಿದೆ. ಲಘು ವಾಹನಗಳ ದರ 280 ರೂಪಾಯಿಯಿಂದ 285 ರೂಪಾಯಿಗೆ ಏರಿಕೆಯಾಗಿದೆ. ಟ್ರಕ್ ಮತ್ತು ಬಸ್‌ಗಳಿಗೆ 585 ರೂಪಾಯಿ ಇದ್ದ ದರವನ್ನು 600 ರೂಪಾಯಿಗೆ ಹೆಚ್ಚಿಸಲಾಗಿದೆ. ವಾಣಿಜ್ಯ ವಾಹನಗಳಿಗೆ 640 ರೂಪಾಯಿಯಿಂದ 655 ರೂಪಾಯಿಗೆ ಏರಿಕೆಯಾಗಿದೆ.
ಇನ್ನು ಭಾರಿ ವಾಹನಗಳ ದರ 920 ರೂಪಾಯಿಯಿಂದ 940 ರೂಪಾಯಿಗೆ ಹಾಗೂ ಮಲ್ಟಿ ಆಕ್ಸಲ್ ವಾಹನಗಳಿಗೆ 1,120 ರೂಪಾಯಿಯಿಂದ 1,145 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಈ ದರ ಏರಿಕೆಯಿಂದ ದಿನನಿತ್ಯ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಮತ್ತು ಸಾರಿಗೆ ವಲಯದ ಮೇಲೆ ಹೆಚ್ಚುವರಿ ಭಾರ ಬೀಳಲಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಮತ್ತೆ ಗ್ಯಾಸ್ ದರ ಏರಿಕೆ : ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಮತ್ತೊಂದು ಹೊಡೆತ
ದೆಹಲಿ: ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ಕೊರತೆಯ ನಡುವೆ ಬಳಕೆದಾರ... ಓದನ್ನು ಮುಂದುವರಿಸಿ
ವಾಹನ ಸವಾರರಿಗೆ ರಿಲೀಫ್ : ಹೊರರಾಜ್ಯದಲ್ಲಿ ಇನ್ಮುಂದೆ ದಂಡ ಇಲ್ಲ!
ಬೆಂಗಳೂರು: ಕರ್ನಾಟಕದ ವಾಹನ ಮಾಲೀಕರಿಗೆ ದೊಡ್ಡ ಸಮಸ್ಯೆಯಾಗಿದ್ದ ಪ... ಓದನ್ನು ಮುಂದುವರಿಸಿ
ರೇಷನ್ ಕಾರ್ಡ್‌ಗೆ ಹೊಸ ರೂಲ್ಸ್ – ಇ-ಕೆವೈಸಿ ಕಡ್ಡಾಯ
ನವದೆಹಲಿ: ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಕೇಂ... ಓದನ್ನು ಮುಂದುವರಿಸಿ
KSRTC ಗೆ ರಾಷ್ಟ್ರಮಟ್ಟದ ಪ್ರಶಸ್ತಿ: ಧ್ವನಿ ಸ್ಪಂದನ ಮತ್ತು AWATAR 4.0ಗೆ ಜಯ
ಬೆಂಗಳೂರು: KSRTC ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ತನ್ನ ಸಾಧನೆಯನ... ಓದನ್ನು ಮುಂದುವರಿಸಿ
“ಜೀರೋ ಕಾಸ್ಟ್” ಕ್ರೆಡಿಟ್ ಕಾರ್ಡ್ ಇಎಂಐ: ತಿಂಗಳ ಕಂತು ಕಡಿಮೆ, ಆದರೆ ಒಟ್ಟು ಪಾವತಿಸಬೇಕಾದ ಮೊತ್ತ ಹೆಚ್ಚಾಗಬಹುದು
ಇಂದಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ಶಾಪಿಂಗ್ ಹೆಚ್ಚುತ್ತಿರುವುದು ಸಾಮಾನ್ಯವಾಗ... ಓದನ್ನು ಮುಂದುವರಿಸಿ
ಪ್ರಯಾಣಿಕರಿಗೆ ಸಿಹಿ ಸುದ್ದಿ: ಯಶವಂತಪುರ–ತಾಳಗುಪ್ಪ ರೈಲು ಸೇರಿ 19 ಸೇವೆಗಳು ಖಾಯಂ
ಬೆಂಗಳೂರು: ರಾಜ್ಯದ ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿ ಲಭಿಸಿದೆ... ಓದನ್ನು ಮುಂದುವರಿಸಿ
ಯುದ್ಧದ ಮಧ್ಯೆ ಚಿನ್ನದ ಬೆಲೆ ಇಳಿಕೆ : ಬಂಗಾರ ಪ್ರಿಯರಿಗೆ ಸುವಾರ್ತೆ
ಬೆಂಗಳೂರು: ಕೊಲ್ಲಿ ರಾಷ್ಟ್ರಗಳಲ್ಲಿ ಯುದ್ಧದ ಬಿಸಿ ನಡುವೆಯೇ ಬಂಗಾ... ಓದನ್ನು ಮುಂದುವರಿಸಿ
"ಕಾರು, ಬಸ್, ಲಾರಿ ಎಲ್ಲರಿಗೂ ಟೋಲ್ ದರ ಏರಿಕೆ – Bengaluru-Mysuru Expressway ಸೇರಿದಂತೆ 8 ರಾಷ್ಟ್ರೀಯ ಹೆದ್ದಾರಿಗಳ ಮೇಲೆ ಪರಿಣಾಮ"
ನವದೆಹಲಿ: ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ದರಗಳಲ್ಲಿ ಸುಮಾರು 4–5% (ಸ... ಓದನ್ನು ಮುಂದುವರಿಸಿ
ಎಟಿಎಂ ವಹಿವಾಟಿನಲ್ಲಿ ಬೃಹತ್ ಬದಲಾವಣೆ: ಏಪ್ರಿಲ್ 1ರಿಂದ ಹೊಸ ನಿಯಮಗಳು ಜಾರಿ
ದೆಹಲಿ : ಏಪ್ರಿಲ್ 1ರಿಂದ ಎಟಿಎಂ ವಹಿವಾಟುಗಳಿಗೆ ಸಂಬಂಧಿಸಿದಂತೆ ಹ... ಓದನ್ನು ಮುಂದುವರಿಸಿ
ಸಿಲಿಕಾನ್ ವ್ಯಾಲಿ’ ಕೂಡ 5G ಹಿನ್ನಡೆ: ಗ್ರಾಮೀಣ ಹಳ್ಳಿಗಳು ಇನ್ನೂ ಕನೆಕ್ಷನ್ ಇಲ್ಲ
ಭಾರತದ ‘ಸಿಲಿಕಾನ್ ವ್ಯಾಲಿ’ ಎಂದೇ ಕರೆಯಲ್ಪಡುವ ಬೆಂಗಳೂರು ಕೇಂದ್ರದಲ್ಲಿದ್ದರೂ, ಕರ್ನಾ... ಓದನ್ನು ಮುಂದುವರಿಸಿ