‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾದ ಸ್ಟೂಡೆಂಟ್ ಪಾರ್ಟಿ ವಿಡಿಯೋ ಸಾಂಗ್ ಬಿಡುಗಡೆ ... ಸ್ಟೂಡೆಂಟ್ ಜೊತೆ ಚಂದನ್​ ಶೆಟ್ಟಿ ಸಖತ್​ ಪಾರ್ಟಿ

ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾದ ಸ್ಟೂಡೆಂಟ್ ಪಾರ್ಟಿ ವಿಡಿಯೋ ಹಾಡು ಬಿಡುಗಡೆ ಆಗಿದೆ. ಈ ಸಿನಿಮಾಗೆ ಅರುಣ್ ಅಮುಕ್ತ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸುವ ಮೂಲಕ ಈ ಹಾಡನ್ನು ಬಿಡುಗಡೆ ಮಾಡಲಾಯಿತು. ಈ ಸಿನಿಮಾದಲ್ಲಿ ಚಂದನ್​ ಶೆಟ್ಟಿ  ಅಭಿನಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಭಾಗಿ ಆಗಿದ್ದರು. ಅವರ ಜೊತೆ ಅರುಣ್ ಅಮುಕ್ತ, ಚೇತನ್ ಕುಮಾರ್ ಕೂಡ ಭಾಗಿಯಾಗಿ ಸಿನಿಮಾ ಮತ್ತು ಸಾಂಗ್​ ಬಗ್ಗೆ ಮಾಹಿತಿ ನೀಡಿದರು. ಈ ಹಾಡಿಗೆ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದು, ವಿಜೇತ್ ಕೃಷ್ಣ ಸಂಗೀತ ನೀಡಿದ್ದಾರೆ.  ಚಂದನ್​ ಶೆಟ್ಟಿ ಜೊತೆ ಅಮರ್, ಭಾವನಾ, ವಿವಾನ್, ಮನಸ್ವಿ, ಭವ್ಯ, ಅರವಿಂದ್​ ರಾವ್, ಸುನೀಲ್ ಪುರಾಣಿಕ್, ಸಿಂಚನಾ, ಪ್ರಶಾಂತ್ ಸಂಬರ್ಗಿ, ರಘು ರಾಮನಕೊಪ್ಪ, ಕಾಕ್ರೋಚ್ ಸುಧಿ ಮುಂತಾದವರು ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

 

ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರತಂಡ ಬಿಡುಗಡೆ ಮಾಡಿರುವ ಸ್ಟೂಡೆಂಟ್ ಪಾರ್ಟಿ ಹಾಡು ರ‍್ಯಾಪ್​ ಶೈಲಿಯಲ್ಲಿದೆ. ಈ ಹಾಡಿಗೆ ಚಂದನ್ ಶೆಟ್ಟಿ ಹಾಗೂ ವಿಜೇತ್ ಕೃಷ್ಣ ಧ್ವನಿ ನೀಡಿದ್ದಾರೆ. ವಿಜೇತ್ ಕೃಷ್ಣ ಮತ್ತು ಚಂದನ್ ಶೆಟ್ಟಿ ಕಾಂಬಿನೇಷನ್​ನಲ್ಲಿ ಬಂದ 2ನೇ ಸಾಂಗ್​ ಇದು. ವಿಶೇಷ ಏನೆಂದರೆ, ದಶಕದ ಹಿಂದೆ ವಿಜೇತ್ ಕೃಷ್ಣ, ಚಂದನ್ ಶೆಟ್ಟಿ, ಚೇತನ್ ಕುಮಾರ್ ರೂಮ್​ಮೇಟ್ಸ್​ ಆಗಿದ್ದರಂತೆ. ಈ ಮೊದಲು ವಿಜೇತ್ ಮತ್ತು ಚಂದನ್ ಶೆಟ್ಟಿ ಜೊತೆಯಾಗಿ ‘3 ಪೆಗ್​..’ ಹಾಡು ನೀಡಿದ್ದರು. ಅದು ಪಾರ್ಟಿಪ್ರಿಯರ ಮನ ಗೆದ್ದಿತ್ತು. ಅದೇ ರೀತಿ ಈಗ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾದ ಪಾರ್ಟಿ ಸಾಂಗ್​ ಕೂಡ ಹಿಟ್​ ಆಗಲಿದೆ ಎಂಬುದು ತಂಡದ ಭರವಸೆ.

 

ಈ ಹಾಡಿನಲ್ಲಿ ಕಾಣಿಸಿಕೊಂಡಿರುವ ಮನೋಜ್ ವಿವಾನ್, ಭಾವನಾ ಅಪ್ಪು, ಮನಸ್ವಿ, ಅಮರ್ ಸಹ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. ಸಾಹಿತ್ಯ ಬರೆದಿರುವ ಚೇತನ್ ಕುಮಾರ್ ಅವರು ಮಾತನಾಡಿದರು. ವಿಜೇತ್ ಕೃಷ್ಣ ಅವರ ಸಂಗೀತ ಅಂದ್ರೆ ತಮಗೆ ಇಷ್ಟ ಎಂದು ಅವರು ಹೇಳಿದರು. ಆ ಪ್ರೀತಿಯ ಕಾರಣದಿಂದಲೇ ಈ ಸಾಂಗ್​ ಬರೆದಿರುವುದಾಗಿ ಹೇಳಿದ ಅವರು ಸಾಂಗ್​ ಸೂಪರ್​ ಹಿಟ್​ ಆಗಲಿ ಎಂದು ಶುಭ ಕೋರಿದರು.

 

ಸುಬ್ರಮಣ್ಯ ಕುಕ್ಕೆ ಹಾಗೂ ಎ.ಸಿ. ಶಿವಲಿಂಗೇಗೌಡ ಅವರು ‘ವೆರೈಟಿ ಕ್ರಿಯೇಷನ್ಸ್’ ಬ್ಯಾನರ್ ಮೂಲಕ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾವನ್ನು ನಿರ್ಮಿಸಿದ್ದಾರೆ. ಭರ್ಜರಿ ಚೇತನ್ ಹಾಗೂ ವಾಸುಕಿ ವೈಭವ್ ಸಾಹಿತ್ಯ ಬರೆದಿದ್ದಾರೆ. ಶ್ರೀಕಾಂತ್ ಜಿ. ಕಶ್ಯಪ್ ಅವರು ಕಾರ್ಯಕಾರಿ ನಿರ್ಮಾಪಕನಾಗಿ ಕೆಲಸ ಮಾಡಿದ್ದಾರೆ. ಕುಮಾರ್ ಗೌಡ ಅವರ ಛಾಯಾಗ್ರಹಣ, ಪವನ್ ಗೌಡ ಅವರ ಸಂಕಲನ ಈ ಚಿತ್ರಕ್ಕಿದೆ. ಟೈಗರ್ ಶಿವು, ನರಸಿಂಹ ಅವರು ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾಗೆ ಸಾಹಸ ನಿರ್ದೇಶನ ಮಾಡಿದ್ದಾರೆ. ವಿಜೇತ್ ಕೃಷ್ಣ ಮತ್ತು ವಾಸು ದೀಕ್ಷಿತ್ ಅವರ ಸಂಗೀತ ನಿರ್ದೇಶನ ಈ ಸಿನಿಮಾಗಿದೆ. ಬಿಡುಗಡೆ ಆಗಿರುವ ಹಾಡಿಗೆ ಅರುಣ್ ಸುರೇಶ್​ ಛಾಯಾಗ್ರಹಣ ಮಾಡಿದ್ದಾರೆ.

 


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

4 months ago

   
Image 1
Image 1

ದರ್ಶನ್ ಕಿರಿಕ್ ಬಗ್ಗೆ ಕೊನೆಗೂ ಸತ್ಯ ಬಿಚ್ಚಿಟ್ಟ ನಿರ್ಮಾಪಕ ಭಾಮಾ ಹರೀಶ್..!

ನಟ ದರ್ಶನ್ ಚಿತ್ರರಂಗಕ್ಕೆ ಬಂದ ಆರಂಭದ ವರ್ಷಗಳಲ್ಲಿ ಮಾಡಿಕೊಂಡಿದ್ದ ಕಿರಿಕ್ ಬಗ್ಗೆ ನಿ... ಓದನ್ನು ಮುಂದುವರಿಸಿ


Edited by: ಬಾನು

3 months ago

   
Image 1

ಚಿಕ್ಕಣ್ಣನ ಬಳಿಕ ನಟ ಯಶಸ್ ಸೂರ್ಯಗೆ ನೋಟಿಸ್: ವಿಚಾರಣೆಗೆ ಹಾಜರಾಗಲು ಸೂಚನೆ

ರೇಣುಕಾಸ್ವಾಮಿ ಕೊಲೆ ಕೇಸ್ ​ನಲ್ಲಿ ನಟ ದರ್ಶನ್ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗ್ತ... ಓದನ್ನು ಮುಂದುವರಿಸಿ


Edited by: ಬಾನು

4 months ago

   
Image 1

ತಾಳ್ಮೆಯಿಂದ ಇದ್ದಿದ್ದಕ್ಕೆ ಇವತ್ತು ಉತ್ತರ ಸಿಕ್ಕಿದೆ’ ಎಂದು ಬರೆದುಕೊಂಡ ನಿರ್ಮಾಪಕ ಉಮಾಪತಿ

ದರ್ಶನ್ ನಟನೆಯ ‘ರಾಬರ್ಟ್’ ಚಿತ್ರದ ಸಕ್ಸಸ್ ಬಳಿಕ ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ... ಓದನ್ನು ಮುಂದುವರಿಸಿ


Edited by: ಬಾನು

4 months ago

   
Image 1

ನಮ್ಮ ಬಾಸ್ ಜೈಲಿಂದ ಹೊರ ಬರದಿದ್ರೆ ನಾನು ಗ್ಯಾರಂಟಿ ಬದುಕಲ್ಲ – ದರ್ಶನ್ ಅಭಿಮಾನಿ ಅಳಲು!

ಡಿಬಾಸ್ ಜೈಲಿಂದ ಹೊರಗಡೆ ಬಂದಿಲ್ಲಾಂದ್ರೆ ನನ್ ಬದುಕಿರೋಲ್ಲ ಎಂದು ಹೇಳುವ ಮೂಲಕ ದರ್ಶನ್... ಓದನ್ನು ಮುಂದುವರಿಸಿ


Edited by: ಬಾನು

4 months ago

   
Image 1

ವಿಚಾರಣೆಯಲ್ಲಿ ಪಾರದರ್ಶಕತೆ ಬೇಕು.. ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ನಟ ಉಪೇಂದ್ರ ಫಸ್ಟ್ ರಿಯಾಕ್ಷನ್

ಬೆಂಗಳೂರು: ನಟ ದರ್ಶನ್ ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣವಾಗಿ ಅ... ಓದನ್ನು ಮುಂದುವರಿಸಿ


Edited by: ಬಾನು

4 months ago

   
Image 1

ರೇಣುಕಾಸ್ವಾಮಿ ಶವದ ಮೇಲಿದ್ದ ಚಿನ್ನವನ್ನೂ ಬಿಡದ ದರ್ಶನ್ ಆಪ್ತ..! ಬಂಗಾರವನ್ನೆಲ್ಲಾ ಪತ್ನಿಗೆ ನೀಡಿದ್ನಂತೆ ಆರೋಪಿ.!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಮುಂದುವರಿದಂತೆ... ಓದನ್ನು ಮುಂದುವರಿಸಿ


Edited by: ಬಾನು

4 months ago

   
Image 1

ಪಾರ್ಟಿಯಲ್ಲಿ ದರ್ಶನ್ ಜೊತೆಗಿದ್ದ ಹಾಸ್ಯ ನಟ ಚಿಕ್ಕಣ್ಣನಿಗೆ ನೋಟಿಸ್‌..!

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್‌ ಗ್ಯಾಂಗ... ಓದನ್ನು ಮುಂದುವರಿಸಿ


Edited by: ಬಾನು

4 months ago

   
Image 1

ರೇಣುಕಾ ಸ್ವಾಮಿ ಕೊಲೆ ಪ್ರಕರಣ ... ದರ್ಶನ್ ಬಂಧನ ಬೆನ್ನಲ್ಲೇ ಖ್ಯಾತ ಹಾಸ್ಯ ಕಲಾವಿದನಿಗೆ ಢವ ಢವ..!

ಬೆಂಗಳೂರು: ದಿನಗಳದಂತೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಭೀಕರ ಅಂಶ... ಓದನ್ನು ಮುಂದುವರಿಸಿ


Edited by: ಬಾನು

4 months ago

   
Image 1

ಎಲ್ಲೋದ್ರು ದರ್ಶನ್ ಫ್ರೆಂಡ್ಸ್.. ಸೋಶಿಯಲ್ ಮೀಡಿಯಾದಲ್ಲಿ ಶುರುವಾಯ್ತು ಟ್ರೆಂಡ್..!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ದರ... ಓದನ್ನು ಮುಂದುವರಿಸಿ


Edited by: ಬಾನು

4 months ago

   
Image 1
ಬೆಂಗಳೂರು ನಗರ

ದರ್ಶನ್ ಮತ್ತೊಂದು ಕರಾಳ ಮುಖ… ಸಹೋದರನ ಸಂಕಷ್ಟಕ್ಕೆ ನಿಂತಿಲ್ವಂತೆ ದಾಸ.. ದಿನಕರ್ ತೂಗುದೀಪ್ ಆಡಿಯೋ ವೈರಲ್!

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಬೆನ್ನಲ್ಲೇ ದಿನಕ್ಕೊಂದ... ಓದನ್ನು ಮುಂದುವರಿಸಿ


Edited by: ಬಾನು

4 months ago

   
Image 1