ತಾಳ್ಮೆಯಿಂದ ಇದ್ದಿದ್ದಕ್ಕೆ ಇವತ್ತು ಉತ್ತರ ಸಿಕ್ಕಿದೆ’ ಎಂದು ಬರೆದುಕೊಂಡ ನಿರ್ಮಾಪಕ ಉಮಾಪತಿ

ದರ್ಶನ್ ನಟನೆಯ ‘ರಾಬರ್ಟ್’ ಚಿತ್ರದ ಸಕ್ಸಸ್ ಬಳಿಕ ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ನಡುವೆ ವಾಗ್ವಾದ ನಡೆಯುತ್ತಲೆ ಇದೆ. ನಟ ದರ್ಶನ್ ಉಮಾಪತಿ ಅವರನ್ನು ಓಪನ್ ಸ್ಟೇಜ್ ಮೇಲೆ ತಗಡು ಎಂದಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದೀಗ ದರ್ಶನ್ ಕೊಲೆ ಕೇಸ್ ನಲ್ಲಿ ವಿಚಾರಣೆ ಎದುರಿಸುತ್ತಿದ್ದು ಇದೀಗ ನಿರ್ಮಾಪಕ ಉಮಾಪತಿ ಗೌಡ ಅವರು ತಮ್ಮ ಸ್ಟೇಟಸ್‌ನಲ್ಲಿ, ಘಟನೆಗೆ ಪ್ರತಿಕ್ರಿಯೆ ಎಂಬಂತೆ ಸ್ಟೇಟಸ್ ಹಾಕಿಕೊಂಡಿದ್ದಾರೆ. ಈ ಬಗ್ಗೆ ಉಮಾಪತಿ ಗೌಡ ‘ಅವತ್ತು ತಾಳ್ಮೆಯಿಂದ ಇದ್ದಿದ್ದಕ್ಕೆ ಇವತ್ತು ಉತ್ತರ ಸಿಕ್ಕಿದೆ’ ಎಂದು ಬರೆದುಕೊಂಡಿದ್ದರು. 

 

ಇದೀಗ ಮತ್ತೊಂದು ಪೋಸ್ಟ್ ಹಾಕಿರುವ ಉಮಾಪತಿ ಗೌಡ ‘ತಾಳ್ಮೆ ಕೆಲವೊಮ್ಮೆ ಶಕ್ತಿ’ಅಂತ ಬರೆದುಕೊಂಡಿದ್ದಾರೆ. ದರ್ಶನ್ ನಟನೆಯ ರಾಬರ್ಟ್ ಸಿನಿಮಾ ನಿರ್ಮಾಪಕ ಉಮಾಪತಿ ಗೌಡ ಇತ್ತೀಚೆಗೆ ಯಶಸ್ಸು ಕಂಡಿದ್ದ ದರ್ಶನ್ ನಟನೆಯ ‘ಕಾಟೇರ’ ಚಿತ್ರದ ಕಥೆಯ ಬಗ್ಗೆ ಮಾತನಾಡಿದ್ದರು. ‘ಕಾಟೇರ ಕತೆ ಕತೆ ನನ್ನದು’ ಎಂದಿದ್ದರು. ‘ತಗಡೆ, ಯಾವಾಗ್ಲೂ ನನ್ ಹತ್ರಾನೆ ಯಾಕೆ ಗುಮ್ಮಿಸ್ಕೋತೀಯಾ’ ಎಂದು ಕಾಟೇರ ಸಕ್ಸಸ್ ಮೀಟಲ್ಲಿ ದರ್ಶನ್ ಉಮಾಪತಿಗೆ ಹೇಳಿದ್ದರು. ಇನ್ನೂ ಖಾಸಗಿ ಚಾನಲ್ ಒಂದಕ್ಕೆ ಮಾತನಾಡಿರುವ ಉಮಾಪತಿ ಶ್ರೀನಿವಾಸ್ ಗೌಡ, ‘ನಮ್ಮ ಬೆರಳು ಬೇರೆಯವರ ಕಣ್ಣಿಗೆ ಚುಚ್ಚಿದರೆ ನೋವಾಗುತ್ತದೆ. ಅದೇ ರೀತಿ ನಮ್ಮದೇ ಕಣ್ಣಿಗೆ ಚುಚ್ಚಿದರೂ ನೋವಾಗುತ್ತದೆ. ಪೊಲೀಸ್​ ಇಲಾಖೆ ಬಗ್ಗೆ ಜನಗಳಿಗೆ ನಂಬಿಕೆ ಬಂದಿದೆ. 

 

ದೊಡ್ಡವರಿಗೂ, ಸಣ್ಣವರಿಗೆ ಒಂದೇ ನ್ಯಾಯ. ಮಾರುತಿ ಕಾರಲ್ಲಿ ಹೋಗುವವರಿಗೆ, ಲ್ಯಾಂಬೋರ್ಗಿನಿಯಲ್ಲಿ ಹೋಗುವವರಿಗೆ ಒಂದೇ ನ್ಯಾಯ ಇರಬೇಕು’ ಎಂದಿದ್ದಾರೆ ಉಮಾಪತಿ ಶ್ರೀನಿವಾಸ್. ‘ನಮ್ಮನ್ನು ನಂಬಿಕೊಂಡು ಬಂದವರ ಕೈ ಬಿಡಬಾರದು. ತಿನ್ನೋ ಅನ್ನಕ್ಕೆ ಮಣ್ಣು ಹಾಕುವ ಕೆಲಸ ಮಾಡಬಾರದು. ಸ್ವಲ್ಪ ಯೋಚಿಸಬೇಕಿತ್ತು. ತಾಳ್ಮೆ ಅನ್ನೋದು ತುಂಬಾನೇ ಅವಶ್ಯಕವಾಗುತ್ತದೆ. ಹಳ್ಳಕ್ಕೆ ಬಿದ್ದಿದ್ದಾರೆ, ಆಳಿಗೊಂದು ಕಲ್ಲು ಎಸೆಯಬಾರದು. ಅದನ್ನು ನಂಬಿದವನು ನಾನು’ ಎಂದಿದ್ದಾರೆ ಉಮಾಪತಿ ಶ್ರೀನಿವಾಸ್. ‘ನಾನು ಮೊದಲು ದರ್ಶನ್ ಗುಂಪಲ್ಲಿ ಇದ್ದೆ. ದೇವರು ನನ್ನನ್ನು ಹೊರಗೆ ಕರೆದುಕೊಂಡು ಬಂದ. ಗಿಡವಾಗಿ ಬಗ್ಗದು ಮರವಾಗಿ ಬಗ್ಗೋದಿಲ್ಲ. ತಪ್ಪು ಮಾಡಿದಾಗ ತಿದ್ದಿಕೊಳ್ಳಬೇಕು. ಕಾನೂನು ಕೈಗೆತ್ತಿಕೊಳ್ಳಬಾರದು’ ಎಂದಿದ್ದಾರೆ ಉಮಾಪತಿ ಶ್ರೀನಿವಾಸ್. ದರ್ಶನ್ ಅವರು ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಿತ್ತು ಎಂದಿದ್ದಾರೆ. 

 

 


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

3 months ago

   
Image 1
Image 1

ದರ್ಶನ್ ಕಿರಿಕ್ ಬಗ್ಗೆ ಕೊನೆಗೂ ಸತ್ಯ ಬಿಚ್ಚಿಟ್ಟ ನಿರ್ಮಾಪಕ ಭಾಮಾ ಹರೀಶ್..!

ನಟ ದರ್ಶನ್ ಚಿತ್ರರಂಗಕ್ಕೆ ಬಂದ ಆರಂಭದ ವರ್ಷಗಳಲ್ಲಿ ಮಾಡಿಕೊಂಡಿದ್ದ ಕಿರಿಕ್ ಬಗ್ಗೆ ನಿ... ಓದನ್ನು ಮುಂದುವರಿಸಿ


Edited by: ಬಾನು

3 months ago

   
Image 1

ಚಿಕ್ಕಣ್ಣನ ಬಳಿಕ ನಟ ಯಶಸ್ ಸೂರ್ಯಗೆ ನೋಟಿಸ್: ವಿಚಾರಣೆಗೆ ಹಾಜರಾಗಲು ಸೂಚನೆ

ರೇಣುಕಾಸ್ವಾಮಿ ಕೊಲೆ ಕೇಸ್ ​ನಲ್ಲಿ ನಟ ದರ್ಶನ್ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗ್ತ... ಓದನ್ನು ಮುಂದುವರಿಸಿ


Edited by: ಬಾನು

3 months ago

   
Image 1

ನಮ್ಮ ಬಾಸ್ ಜೈಲಿಂದ ಹೊರ ಬರದಿದ್ರೆ ನಾನು ಗ್ಯಾರಂಟಿ ಬದುಕಲ್ಲ – ದರ್ಶನ್ ಅಭಿಮಾನಿ ಅಳಲು!

ಡಿಬಾಸ್ ಜೈಲಿಂದ ಹೊರಗಡೆ ಬಂದಿಲ್ಲಾಂದ್ರೆ ನನ್ ಬದುಕಿರೋಲ್ಲ ಎಂದು ಹೇಳುವ ಮೂಲಕ ದರ್ಶನ್... ಓದನ್ನು ಮುಂದುವರಿಸಿ


Edited by: ಬಾನು

4 months ago

   
Image 1

ವಿಚಾರಣೆಯಲ್ಲಿ ಪಾರದರ್ಶಕತೆ ಬೇಕು.. ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ನಟ ಉಪೇಂದ್ರ ಫಸ್ಟ್ ರಿಯಾಕ್ಷನ್

ಬೆಂಗಳೂರು: ನಟ ದರ್ಶನ್ ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣವಾಗಿ ಅ... ಓದನ್ನು ಮುಂದುವರಿಸಿ


Edited by: ಬಾನು

4 months ago

   
Image 1

ರೇಣುಕಾಸ್ವಾಮಿ ಶವದ ಮೇಲಿದ್ದ ಚಿನ್ನವನ್ನೂ ಬಿಡದ ದರ್ಶನ್ ಆಪ್ತ..! ಬಂಗಾರವನ್ನೆಲ್ಲಾ ಪತ್ನಿಗೆ ನೀಡಿದ್ನಂತೆ ಆರೋಪಿ.!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಮುಂದುವರಿದಂತೆ... ಓದನ್ನು ಮುಂದುವರಿಸಿ


Edited by: ಬಾನು

4 months ago

   
Image 1

ಪಾರ್ಟಿಯಲ್ಲಿ ದರ್ಶನ್ ಜೊತೆಗಿದ್ದ ಹಾಸ್ಯ ನಟ ಚಿಕ್ಕಣ್ಣನಿಗೆ ನೋಟಿಸ್‌..!

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್‌ ಗ್ಯಾಂಗ... ಓದನ್ನು ಮುಂದುವರಿಸಿ


Edited by: ಬಾನು

4 months ago

   
Image 1

ರೇಣುಕಾ ಸ್ವಾಮಿ ಕೊಲೆ ಪ್ರಕರಣ ... ದರ್ಶನ್ ಬಂಧನ ಬೆನ್ನಲ್ಲೇ ಖ್ಯಾತ ಹಾಸ್ಯ ಕಲಾವಿದನಿಗೆ ಢವ ಢವ..!

ಬೆಂಗಳೂರು: ದಿನಗಳದಂತೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಭೀಕರ ಅಂಶ... ಓದನ್ನು ಮುಂದುವರಿಸಿ


Edited by: ಬಾನು

4 months ago

   
Image 1

ಎಲ್ಲೋದ್ರು ದರ್ಶನ್ ಫ್ರೆಂಡ್ಸ್.. ಸೋಶಿಯಲ್ ಮೀಡಿಯಾದಲ್ಲಿ ಶುರುವಾಯ್ತು ಟ್ರೆಂಡ್..!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ದರ... ಓದನ್ನು ಮುಂದುವರಿಸಿ


Edited by: ಬಾನು

4 months ago

   
Image 1
ಬೆಂಗಳೂರು ನಗರ

ದರ್ಶನ್ ಮತ್ತೊಂದು ಕರಾಳ ಮುಖ… ಸಹೋದರನ ಸಂಕಷ್ಟಕ್ಕೆ ನಿಂತಿಲ್ವಂತೆ ದಾಸ.. ದಿನಕರ್ ತೂಗುದೀಪ್ ಆಡಿಯೋ ವೈರಲ್!

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಬೆನ್ನಲ್ಲೇ ದಿನಕ್ಕೊಂದ... ಓದನ್ನು ಮುಂದುವರಿಸಿ


Edited by: ಬಾನು

4 months ago

   
Image 1

‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾದ ಸ್ಟೂಡೆಂಟ್ ಪಾರ್ಟಿ ವಿಡಿಯೋ ಸಾಂಗ್ ಬಿಡುಗಡೆ ... ಸ್ಟೂಡೆಂಟ್ ಜೊತೆ ಚಂದನ್​ ಶೆಟ್ಟಿ ಸಖತ್​ ಪಾರ್ಟಿ

ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾದ ಸ್ಟೂಡೆಂಟ್ ಪಾರ್ಟಿ ವಿಡಿಯೋ ಹಾಡು ಬಿಡುಗಡೆ... ಓದನ್ನು ಮುಂದುವರಿಸಿ


Edited by: ಬಾನು

4 months ago

   
Image 1