ರೇಣುಕಾಸ್ವಾಮಿ ಶವದ ಮೇಲಿದ್ದ ಚಿನ್ನವನ್ನೂ ಬಿಡದ ದರ್ಶನ್ ಆಪ್ತ..! ಬಂಗಾರವನ್ನೆಲ್ಲಾ ಪತ್ನಿಗೆ ನೀಡಿದ್ನಂತೆ ಆರೋಪಿ.!
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಮುಂದುವರಿದಂತೆ ಬೆಚ್ಚಿ ಬೀಳಿಸುವ ಸಂಗತಿಗಳು ಬಯಲಾಗುತ್ತಲೇ ಇದ್ದು, ಆರೋಪಿಗಳು ರೇಣುಕಾಸ್ವಾಮಿಯನ್ನು ಕೊಂದ ನಂತರ ಅವರ ಮೈ ಮೇಲಿದ್ದ ಚಿನ್ನದ ಆಭರಣಗಳನ್ನು ದೋಚಿದ್ದ ವಿಚಾರ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿಗಳಾದ ದರ್ಶನ್ ಮತ್ತು ಸಹಚರರನ್ನು ಕೋರ್ಟ್‌ನಲ್ಲಿ ಹಾಜರುಪಡಿಸಿದ್ದಾಗ ವಾದ ಮಂಡಿಸಿದ್ದ ಪೊಲೀಸ್ ಪರ ವಿಶೇಷ ಅಭಿಯೋಜಕರು, ಆರೋಪಿಗಳು ರೇಣುಕಾಸ್ವಾಮಿಗೆ ವಿದ್ಯುತ್ ಶಾಕ್ ಕೊಟ್ಟು ಕ್ರೌರ್ಯ ಮೆರೆದಿದ್ದರು ಎಂಬ ಭಯಾನಕ ಸಂಗತಿಯನ್ನು ಬಹಿರಂಗಪಡಿಸಿದ್ದರು.
ಆರೋಪಿಗಳ ತಂಡವು ಇದೀಗ ಅದಕ್ಕಿಂತಲೂ ಹೇಯ ಕೃತ್ಯ ಎಸಗಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಚಿನ್ನದ ಆಭರಣಗಳನ್ನು ಆತ ದೋಚಿದ್ದ. ರೇಣುಕಾಸ್ವಾಮಿ ಅಪಹರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚಿತ್ರದುರ್ಗ ಜಿಲ್ಲೆಯ ದರ್ಶನ್ ಅಭಿಮಾನಿ ಬಳಗದ ಅಧ್ಯಕ್ಷ ರಾಘವೇಂದ್ರ ಎಂಬಾತನ ಪೈಶಾಚಿಕ ಕೃತ್ಯ ಪೊಲೀಸರ ವಿಚಾರಣೆ ವೇಳೆ ಬಯಲಾಗಿದೆ. ರಾಘವೇಂದ್ರ, ರೇಣುಕಾ ಸ್ವಾಮಿಯನ್ನು ಅಪಹರಿಸಿ ಪಟ್ಟಣಗೆರೆಯ ಶೆಡ್‌ಗೆ ಎಳೆದೊಯ್ದು ಹಲ್ಲೆ ನಡೆಸಿದ್ದ. ಅಲ್ಲದೆ, ರೇಣುಕಾಸ್ವಾಮಿಯನ್ನು ಕೊಂದ ನಂತರ ಅವರ ಮೈ ಮೇಲಿದ್ದ ಚಿನ್ನದ ಆಭರಣಗಳನ್ನು ಆತ ದೋಚಿದ್ದ ಎಂದು ಗೊತ್ತಾಗಿದೆ.
ಹಣದಾಸೆಗೆ ರಾಘವೇಂದ್ರ ಶೆಡ್‌ಗೆ ಮರಳಿ ಬಂದಿದ್ದ. ತೀವ್ರ ಥಳಿತಕ್ಕೊಳಗಾಗಿ ರೇಣುಕಾಸ್ವಾಮಿ ಕೊಲೆಯಾದ ಕೂಡಲೇ ರಾಘವೇಂದ್ರ, ಪಟ್ಟಣಗೆರೆಯ ಶೆಡ್‌ನಿಂದ ಕಾಲ್ಕಿತ್ತಿದ್ದ. ಬಳಿಕ ಇತರೆ ಆರೋಪಿಗಳು ಆತನಿಗೆ ಕರೆ ಮಾಡಿ 10 ಲಕ್ಷ ರೂ. ಹಣ ಕೊಡುತ್ತೇವೆ ಎಂದು ಹೇಳಿದಾಗ ಹಣದಾಸೆಗೆ ರಾಘವೇಂದ್ರ ಶೆಡ್‌ಗೆ ಮರಳಿ ಬಂದಿದ್ದ. ರೇಣುಕಾಸ್ವಾಮಿಯ ಶವ ಎಸೆಯಲು ರಾಘವೇಂದ್ರ ಸಹ ಇತರೆ ಆರೋಪಿಗಳ ಜತೆಗೆ ಹೋಗಿದ್ದ. ಶವ ಎಸೆಯುವುದಕ್ಕೂ ಮುನ್ನ ರೇಣುಕಾಸ್ವಾ ಮಿಯ ಮೈ ಮೇಲಿದ್ದ ಚಿನ್ನದ ಆಭರಣಗಳನ್ನು ರಾಘವೇಂದ್ರ ದೋಚಿದ್ದ. ಚಿನ್ನದ ಉಂಗುರ, ಚಿನ್ನದ ಸರ, ಬೆಳ್ಳಿ ಕಡಗ ಮತ್ತು ಕೈಗಡಿಯಾರ ತೆಗೆದುಕೊಂಡಿದ್ದ ಎಂದು ಪೊಲೀಸ್ ಮೂಲಗಳು ಹೇಳಿವೆ. ಪತ್ನಿಗೆ ಕೊಟ್ಟಿದ್ದ.
ಶವ ಎಸೆದ ನಂತರ ರಾಘವೇಂದ್ರ ತನ್ನ ಪತ್ನಿಗೆ ಕರೆ ಮಾಡಿ ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆಸಿಕೊಂಡಿದ್ದ. ಬಳಿಕ ಬೆಂಗಳೂರಿನ ಲಾಡ್ಜ್‌ನಲ್ಲಿ ರೂಂ ಮಾಡಿ, ಪತ್ನಿಯನ್ನು ಅಲ್ಲಿಇರಿಸಿದ್ದ. ರೇಣುಕಾಸ್ವಾಮಿಯ ಶವದ ಮೇಲಿಂದ ದೋಚಿದ್ದ ಆಭರಣಗಳನ್ನು ಪತ್ನಿಗೆ ಕೊಟ್ಟಿದ್ದ. ಆತನ ಪತ್ನಿಯು ಆ ಆಭರಣಗಳನ್ನು ಚಿತ್ರದುರ್ಗಕ್ಕೆ ತೆಗೆದುಕೊಂಡು ಹೋಗಿದ್ದಳು. ರಾಘವೇಂದ್ರ ವಿಚಾರಣೆ ವೇಳೆ ಈ ವಿಚಾರ ತಿಳಿಸಿದ್ದು, ಈ ಸುಳಿವು ಆಧರಿಸಿ ಆತನ ಪತ್ನಿಯಿಂದ ಆಭರಣಗಳನ್ನು ವಶಪಡಿಸಿಕೊಂಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಬಿರಿಯಾನಿ ವಿವಾದ; ಊಟ.. ತಿಂಡಿ.. ಚಟ ಎಲ್ಲವೂ ನನ್ನ ಪರ್ಸನಲ್: ಡಾಲಿ ತಿರುಗೇಟು
ಬೆಂಗಳೂರು : ನಟ ಧನಂಜಯ್ ಇತ್ತೀಚಿಗಷ್ಟೇ ಬಿರಿಯಾನಿ ತಿನ್ನುವ ಮೂಲ... ಓದನ್ನು ಮುಂದುವರಿಸಿ
ಆನೇಕಲ್ ತಾಲ್ಲೂಕು
ದುನಿಯಾ ವಿಜಯ್, ರಚಿತಾ ರಾಮ್ ನಟನೆಯ ಲ್ಯಾಂಡ್ ಲಾರ್ಡ್ ಚಿತ್ರಕ್ಕೆ ಮನಸೋತ ಆನೇಕಲ್ ತಾಲ್ಲೂಕಿನ ಜನತೆ
ಆನೇಕಲ್ : ತಾಲ್ಲೂಕಿನ ಸರ್ಜಾಪುರ ಹೋಬಳಿಯ ದೊಮ್ಮಸಂದ್ರದಲ್ಲ... ಓದನ್ನು ಮುಂದುವರಿಸಿ
ದರ್ಶನ್ ಕಿರಿಕ್ ಬಗ್ಗೆ ಕೊನೆಗೂ ಸತ್ಯ ಬಿಚ್ಚಿಟ್ಟ ನಿರ್ಮಾಪಕ ಭಾಮಾ ಹರೀಶ್..!
ನಟ ದರ್ಶನ್ ಚಿತ್ರರಂಗಕ್ಕೆ ಬಂದ ಆರಂಭದ ವರ್ಷಗಳಲ್ಲಿ ಮಾಡಿಕೊಂಡಿದ್ದ ಕಿರಿಕ್ ಬಗ್ಗೆ ನಿ... ಓದನ್ನು ಮುಂದುವರಿಸಿ
ಚಿಕ್ಕಣ್ಣನ ಬಳಿಕ ನಟ ಯಶಸ್ ಸೂರ್ಯಗೆ ನೋಟಿಸ್: ವಿಚಾರಣೆಗೆ ಹಾಜರಾಗಲು ಸೂಚನೆ
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗ್ತ... ಓದನ್ನು ಮುಂದುವರಿಸಿ
ತಾಳ್ಮೆಯಿಂದ ಇದ್ದಿದ್ದಕ್ಕೆ ಇವತ್ತು ಉತ್ತರ ಸಿಕ್ಕಿದೆ’ ಎಂದು ಬರೆದುಕೊಂಡ ನಿರ್ಮಾಪಕ ಉಮಾಪತಿ
ದರ್ಶನ್ ನಟನೆಯ ‘ರಾಬರ್ಟ್’ ಚಿತ್ರದ ಸಕ್ಸಸ್ ಬಳಿಕ ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ... ಓದನ್ನು ಮುಂದುವರಿಸಿ
ನಮ್ಮ ಬಾಸ್ ಜೈಲಿಂದ ಹೊರ ಬರದಿದ್ರೆ ನಾನು ಗ್ಯಾರಂಟಿ ಬದುಕಲ್ಲ – ದರ್ಶನ್ ಅಭಿಮಾನಿ ಅಳಲು!
ಡಿಬಾಸ್ ಜೈಲಿಂದ ಹೊರಗಡೆ ಬಂದಿಲ್ಲಾಂದ್ರೆ ನನ್ ಬದುಕಿರೋಲ್ಲ ಎಂದು ಹೇಳುವ ಮೂಲಕ ದರ್ಶನ್... ಓದನ್ನು ಮುಂದುವರಿಸಿ
ವಿಚಾರಣೆಯಲ್ಲಿ ಪಾರದರ್ಶಕತೆ ಬೇಕು.. ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ನಟ ಉಪೇಂದ್ರ ಫಸ್ಟ್ ರಿಯಾಕ್ಷನ್
ಬೆಂಗಳೂರು: ನಟ ದರ್ಶನ್ ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣವಾಗಿ ಅ... ಓದನ್ನು ಮುಂದುವರಿಸಿ
ಪಾರ್ಟಿಯಲ್ಲಿ ದರ್ಶನ್ ಜೊತೆಗಿದ್ದ ಹಾಸ್ಯ ನಟ ಚಿಕ್ಕಣ್ಣನಿಗೆ ನೋಟಿಸ್..!
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಗ್ಯಾಂಗ... ಓದನ್ನು ಮುಂದುವರಿಸಿ
ರೇಣುಕಾ ಸ್ವಾಮಿ ಕೊಲೆ ಪ್ರಕರಣ ... ದರ್ಶನ್ ಬಂಧನ ಬೆನ್ನಲ್ಲೇ ಖ್ಯಾತ ಹಾಸ್ಯ ಕಲಾವಿದನಿಗೆ ಢವ ಢವ..!
ಬೆಂಗಳೂರು: ದಿನಗಳದಂತೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಭೀಕರ ಅಂಶ... ಓದನ್ನು ಮುಂದುವರಿಸಿ
ಎಲ್ಲೋದ್ರು ದರ್ಶನ್ ಫ್ರೆಂಡ್ಸ್.. ಸೋಶಿಯಲ್ ಮೀಡಿಯಾದಲ್ಲಿ ಶುರುವಾಯ್ತು ಟ್ರೆಂಡ್..!
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ದರ... ಓದನ್ನು ಮುಂದುವರಿಸಿ