Ugadi 2024: ಹಿಂದೂಗಳ ಪ್ರಮುಖ ಹಬ್ಬ ಯುಗಾದಿ ಹಬ್ಬದ ಮಹತ್ವ ಮತ್ತು ಆಚರಣೆಯನ್ನು ತಿಳಿಯೋಣ!
ದಕ್ಷಿಣ ಭಾರತದಾದ್ಯಂತ ಆಚರಿಸಲಾಗುವ ಪ್ರಮುಖ ಹಬ್ಬಗಳಲ್ಲಿ ಯುಗಾದಿ ಕೂಡ ಒಂದು. ಕರ್ನಾಟಕ, ಆಂದ್ರಪ್ರದೇಶ, ತೆಲಂಗಾಣ ಸೇರಿದಂತೆ ಇನ್ನಿತರ ದಕ್ಷಿಣ ಭಾರತದ ರಾಜ್ಯಗಳಲ್ಲಿ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಯುಗಾದಿ ಹಬ್ಬವನ್ನು ಹಲವೆಡೆ ಉಗಾದಿ ಎಂತಲೂ ಕರೆಯುತ್ತಾರೆ. ಈ ಹಬ್ಬವನ್ನು ಹಿಂದೂಗಳು ಚೈತ್ರ ಮಾಸದ ಮೊದಲ ದಿನದಂದು ಆಚರಿಸುತ್ತಾರೆ. ಈ ಹಬ್ಬವು ವಸಂತ ಕಾಲದ ಆಗಮನವನ್ನು ಸೂಚಿಸುವುದರಿಂದ ದಕ್ಷಿಣ ಭಾರತದ ರಾಜ್ಯಗಳಲ್ಲಿ ಬಹಳ ವಿಜೃಂಭಣೆಯಿಂದ ಯುಗಾದಿಯನ್ನು ಆಚರಿಸುತ್ತಾರೆ. ಯುಗ ಮತ್ತು ಆದಿ ಎನ್ನುವ ಎರಡು ಸಂಸ್ಕೃತ ಪದಗಳಿಂದ ರೂಪುಗೊಂಡ ಈ ಯುಗಾದಿಯು ಹೊಸ ಯುಗದ ಆರಂಭವನ್ನು ಸೂಚಿಸುತ್ತದೆ. ಈ ವರ್ಷ ಯುಗಾದಿಯನ್ನು ಏಪ್ರಿಲ್ 09 ರಂದು ಮಂಗಳವಾರ ಆಚರಿಸಲಾಗುವುದು. ಈ ದಿನದ ಶುಭ ಮುಹೂರ್ತ, ಮಹತ್ವ ಮತ್ತು ಪೂಜೆ ವಿಧಿ – ವಿಧಾನಗಳು ಹೀಗಿವೆ..
ಹಿಂದೂ ಪುರಾಣಗಳ ಪ್ರಕಾರ, ಈ ದಿನ, ಬ್ರಹ್ಮ ದೇವನು ಬ್ರಹ್ಮಾಂಡದ ಸೃಷ್ಟಿಯನ್ನು ಪ್ರಾರಂಭಿಸಿದನು. ಇಂದಿಗೂ ಆಂಧ್ರಪ್ರದೇಶದಂತಹ ರಾಜ್ಯದಲ್ಲಿ ಯುಗಾದಿಯಂದು ಬ್ರಹ್ಮ ದೇವನನ್ನು ಪೂಜಿಸುತ್ತಾರೆ ಮತ್ತು ಈ ದಿನದಂದು ಭಗವಾನ್ ವಿಷ್ಣುವು ಮತ್ಸ್ಯ ಅವತಾರದಲ್ಲಿ ಅವತರಿಸಿದನು. ಆ ಸಮಯವನ್ನು ಯುಗಾದಿ ಹಬ್ಬವೆಂದು ಆಚರಿಸಲಾಗುತ್ತದೆ. ಭಾರತದಲ್ಲಿ ವಸಂತ ಋತು ಉತ್ತುಂಗದಲ್ಲಿರುವಾಗ ಮತ್ತು ರೈತರು ಹೊಸ ಬೆಳೆಯನ್ನು ಪಡೆದುಕೊಳ್ಳುವ ಸಮಯದಲ್ಲಿ ಯುಗಾದಿಯನ್ನು ಆಚರಿಸಲಾಗುವುದು.
ದಕ್ಷಿಣ ಭಾರತದಲ್ಲಿ ಯುಗಾದಿ ಹಬ್ಬಕ್ಕೆ ಹೆಚ್ಚಿನ ಮಹತ್ವವಿದೆ. ಈ ಹಬ್ಬವನ್ನು ಚೈತ್ರ ಮಾಸದ ಮೊದಲ ದಿನದಂದು ಆಚರಿಸಲಾಗುತ್ತದೆ. ಏಕೆಂದರೆ ಈ ಹಬ್ಬದ ಸಮಯದಲ್ಲಿ ವಸಂತ ಋತುವು ಆರಂಭವಾಗುತ್ತದೆ. ಈ ಕಾರಣದಿಂದಾಗಿ ಹವಾಮಾನವು ತುಂಬಾ ಆಹ್ಲಾದಕರವಾಗಿರುತ್ತದೆ, ಇದರೊಂದಿಗೆ, ಈ ಸಮಯದಲ್ಲಿ ಹೊಸ ಬೆಳೆಯ ಬಗ್ಗೆ ಜನರು ಮನಸ್ಸಿನಲ್ಲಿ ಸಂತೋಷವನ್ನು ಹೊಂದಿರುತ್ತಾರೆ. ಈ ಕಾರಣಗಳಿಂದಾಗಿ ಯುಗಾದಿ ಹಬ್ಬದ ದಿನವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಯುಗಾದಿ ಹಬ್ಬವು ಜನರಿಗೆ ಅದೃಷ್ಟ, ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ ಎನ್ನುವ ನಂಬಿಕೆಯಿದೆ. ಆದ್ದರಿಂದ ದಕ್ಷಿಣ ಭಾರತದ ರಾಜ್ಯಗಳಲ್ಲಿ ಯುಗಾದಿಯ ದಿನದಂದು ಜನರು ಅಂಗಡಿಗಳನ್ನು ತೆರೆಯುವುದು, ಕಟ್ಟಡ ನಿರ್ಮಾಣವನ್ನು ಪ್ರಾರಂಭಿಸುವುದು ಮುಂತಾದ ಹೊಸ ಕೆಲಸಗಳನ್ನು ಪ್ರಾರಂಭಿಸುತ್ತಾರೆ.
ಯುಗಾದಿ ಹಬ್ಬದ ಮುಂಜಾನೆ ಬೇಗ ಎದ್ದು ಕಡಲೆ ಹಿಟ್ಟನ್ನು ಮತ್ತು ಎಣ್ಣೆಯನ್ನು ಮೈಗೆ ಹಚ್ಚಿಕೊಂಡು ಸ್ನಾನ ಮಾಡಬೇಕು.
– ನಂತರ ಕೈಯಲ್ಲಿ ಶ್ರೀಗಂಧ, ಅಕ್ಷತೆ, ಹೂವುಗಳು ಮತ್ತು ನೀರನ್ನು ತೆಗೆದುಕೊಂಡು ಬ್ರಹ್ಮದೇವನ ಮಂತ್ರಗಳನ್ನು ಪಠಿಸುತ್ತಾ ಬ್ರಹ್ಮದೇವನ ಪೂಜೆಯನ್ನು ಮಾಡಬೇಕು.
ಯುಗಾದಿ ಹಬ್ಬದ ಪೂಜೆ ವಿಧಾನ:
ಈ ದಿನ ಮನೆಯ ಮುಂದೆ ವಿಶೇಷವಾದ ರಂಗೋಲಿಗಳನ್ನು ಹಾಕುತ್ತಾರೆ ಅಥವಾ ಸ್ವಸ್ತಿಕ ಚಿಹ್ನೆಯನ್ನು ಹಾಕುತ್ತಾರೆ. ಯುಗಾದಿಯಂದು ಇದನ್ನು ಮನೆಯ ಮುಂದೆ ಹಾಕುವುದರಿಂದ ಆ ಮನೆಗೆ ಧನಾತ್ಮಕ ಶಕ್ತಿಗಳ ಆಗಮನವಾಗುತ್ತದೆ ಎನ್ನುವ ನಂಬಿಕೆಯಿದೆ.
ಈ ದಿನ, ವಿಶೇಷ ಪಾನೀಯವನ್ನು ತಯಾರಿಸುವುದು ಸಹ ವಾಡಿಕೆ. ಇದನ್ನು ಪಚಡಿ ಎಂದು ಕರೆಯಲಾಗುತ್ತದೆ. ಪಚಡಿ ಎಂಬ ಈ ಪಾನೀಯವನ್ನು ಹೊಸ ಹುಣಸೆಹಣ್ಣು, ಮಾವು, ತೆಂಗಿನಕಾಯಿ, ಬೇವಿನ ಹೂವುಗಳು, ಬೆಲ್ಲದಂತಹ ವಸ್ತುಗಳನ್ನು ಬೆರೆಸಿ ಮಡಕೆಯಲ್ಲಿ ತಯಾರಿಸಲಾಗುತ್ತದೆ. ಈ ಪಾನೀಯವನ್ನು ಕುಟುಂಬದ ಸದಸ್ಯರು ಕುಡಿಯುವುದು ಮಾತ್ರವಲ್ಲದೇ, ಎಲ್ಲರಿಗೂ ಹಂಚಲಾಗುತ್ತದೆ.
ಈ ದಿನ ನೀವು ಬ್ರಹ್ಮ ದೇವನ ಬದಲು ನಿಮ್ಮ ನೆಚ್ಚಿನ ದೇವರನ್ನು ಅಥವಾ ನಿಮ್ಮ ಮನೆ ದೇವರನ್ನು ಕೂಡ ಪೂಜಿಸಿ ಆಶೀರ್ವಾದವನ್ನು ಪಡೆದುಕೊಳ್ಳಬಹುದು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ನಿಮ್ಮ ಮೂತ್ರಪಿಂಡದಲ್ಲಿ ಕಲ್ಲುಗಳು ಇವೆಯೇ..? ಮೂತ್ರಪಿಂಡದ ಕಲ್ಲು ಹೊರ ಹಾಕಲು ನಿತ್ಯ ಈ ಜ್ಯೂಸ್ ಕುಡಿಯಿರಿ…!
ನಿಮ್ಮ ಮೂತ್ರಪಿಂಡದಲ್ಲಿ ಕಲ್ಲುಗಳು ಇವೆಯೇ..? ಹಾಗಿದ್ರೆ ಈ ಸುದ್ದಿ ಪೂರ್ತಿ ಓದಿ.. ವೀ... ಓದನ್ನು ಮುಂದುವರಿಸಿ
ವೀಳ್ಯದೆಲೆಯನ್ನು ಸುಣ್ಣದ ಜೊತೆಗಲ್ಲ, ತುಳಸಿ ಬೀಜದ ಜೊತೆಗೆ ತಿಂದ್ರೆ ಆರೋಗ್ಯಕ್ಕೆ ಒಳ್ಳೆಯದಂತೆ
ವೀಳ್ಯದೆಲೆ ಮತ್ತು ಸುಣ್ಣದ ಜೊತೆ ವೀಳ್ಯದೆಲೆಯನ್ನು ತಿನ್ನುವುದು ಆರೋಗ್ಯಕ್ಕೆ ಪ್ರಯೋಜನ... ಓದನ್ನು ಮುಂದುವರಿಸಿ
ತ್ಯಾಗದ ಪ್ರತೀಕ ಬಕ್ರೀದ್ ಹಬ್ಬದ ಮಹತ್ವ ಇಲ್ಲಿದೆ...
ಬಕ್ರೀದ್… ಮುಸ್ಲಿಂ ಧರ್ಮೀಯರ ಪ್ರಮುಖ ಹಬ್ಬ. ವಿಶ್ವದಾದ್ಯಂತ ಇರುವ ಮುಸ್ಲಿಂ ಧರ್ಮೀಯರು... ಓದನ್ನು ಮುಂದುವರಿಸಿ
ಪುರುಷರೇ ಗಮನಿಸಿ… ನೀರಿನಲ್ಲಿ ನೆನೆಸಿದ ಒಣದ್ರಾಕ್ಷಿ ಸೇವಿಸೋದ್ರಿಂದ ಎಷ್ಟೆಲ್ಲಾ ಪ್ರಯೋಜಕಾರಿ ಗೊತ್ತಾ !?
ಒಣದ್ರಾಕ್ಷಿಯನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಸೇವಿಸುವುದರಿಂದ ಸಾಕಷ್ಟ... ಓದನ್ನು ಮುಂದುವರಿಸಿ
ಮಂಡಕ್ಕಿ ಅಥವಾ ಕಡಲೆಪುರಿ ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜಕಾರಿ!
ಮನೆಯಲ್ಲಿ ಮಂಡಕ್ಕಿ ಮಸಾಲ ತಯಾರಿಸಿ ಡಬ್ಬದಲ್ಲಿ ಶೇಖರಿಸಿಟ್ಟಿರುತ್ತಾರೆ. ಸಂಜೆಯ ಸ್ನಾಕ... ಓದನ್ನು ಮುಂದುವರಿಸಿ
ನೀವು ಚಪಾತಿ ಪ್ರೇಮಿಗಳಾ? ಹಾಗಾದರೆ ಒಬ್ಬ ವ್ಯಕ್ತಿ ಒಂದು ದಿನಕ್ಕೆ ಎಷ್ಟು ಚಪಾತಿ ತಿನ್ನಬೇಕು? ತಪ್ಪದೇ ತಿಳಿಯಿರಿ!
ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಇದಕ್ಕಾಗಿ ನೀವು ತಿನ್ನುವ ರೊಟ್ಟಿಯ ಪ್ರಮಾಣದ ಬಗ್... ಓದನ್ನು ಮುಂದುವರಿಸಿ
ಹಾಲಿನ ಜೊತೆಗೆ ಅರಿಶಿನ ಬೆರೆಸಿ ಕುಡಿದ್ರೆ ಈ ಕಾಯಿಲೆಗಳೆಲ್ಲಾ ಮಾಯ... ಆರೋಗ್ಯಕ್ಕೆ ಹತ್ತಾರು ಲಾಭ
ಹಾಲಿಗೆ ಅರಿಶಿನ ಸೇರಿಸಿ ಕುಡಿಯುವ ರೂಢಿ ನಮ್ಮ ಭಾರತೀಯ ಸಂಪ್ರದಾಯದಲ್ಲಿ ಮೊದಲಿನಿಂದಲೂ... ಓದನ್ನು ಮುಂದುವರಿಸಿ
ನಿಮಗೆ ಗೊತ್ತೇ..? ಹುಣಸೆ ಹಣ್ಣಿನ ಹುಳಿಗಿದೆ ಸೌಂದರ್ಯವನ್ನು ದುಪ್ಪಟ್ಟು ಮಾಡುವ ಪವರ್.!
ತಜ್ಞರ ಅಭಿಪ್ರಾಯದಲ್ಲಿ ಹುಣಸೆ ಹಣ್ಣು ನಿಮ್ಮ ಮುಖದ ಹೊಳಪನ್ನು ಹೆಚ್ಚು ಮಾಡಿ ನಿಮ್ಮ ಸೌ... ಓದನ್ನು ಮುಂದುವರಿಸಿ
ಕರ್ಬೂಜ ಬೀಜ ಎಸೆದು ಮೂರ್ಖರಾಗಬೇಡಿ… ಬೀಜಗಳಲ್ಲೂ ಅಡಗಿದೆ ಆರೋಗ್ಯ ಪ್ರಯೋಜನ; ತಿಳಿದ್ರೆ ಶಾಕ್ ಆಗ್ತೀರಿ!
ದೇಹವನ್ನು ತಂಪಗಾಗಿಸಲು ನೀವು ಸವಿಯಬಹುದಾದ ಫ್ರೆಶ್ ಜ್ಯೂಸ್‌ಗಳ ಪೈಕಿ ಕರ್ಬೂಜ ಹಣ್ಣು ಕ... ಓದನ್ನು ಮುಂದುವರಿಸಿ
ಬಿಪಿ ಇಲ್ಲವೆಂದು ಹೆಚ್ಚು ಉಪ್ಪು ಸೇವನೆ ಮಾಡುವವರೇ ಎಚ್ಚರ! ಹಾಗಿದ್ರೆ ಈ ಸುದ್ದಿ ಮಿಸ್ ಮಾಡ್ದೆ ನೋಡಿ!
ಬಿಪಿ ಸಮಸ್ಯೆ ಇಲ್ಲದವರು “ನಮಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ ನಾವು ಹೆಚ್ಚಿನ ಪ್ರಮಾಣದ... ಓದನ್ನು ಮುಂದುವರಿಸಿ