ನಿಮಗೆ ಗೊತ್ತೇ..? ಹುಣಸೆ ಹಣ್ಣಿನ ಹುಳಿಗಿದೆ ಸೌಂದರ್ಯವನ್ನು ದುಪ್ಪಟ್ಟು ಮಾಡುವ ಪವರ್.!

ತಜ್ಞರ ಅಭಿಪ್ರಾಯದಲ್ಲಿ ಹುಣಸೆ ಹಣ್ಣು ನಿಮ್ಮ ಮುಖದ ಹೊಳಪನ್ನು ಹೆಚ್ಚು ಮಾಡಿ ನಿಮ್ಮ ಸೌಂದರ್ಯವನ್ನು ದ್ವಿಗುಣ ಮಾಡುವ ಅತ್ಯದ್ಭುತ ನೈಸರ್ಗಿಕ ಆಹಾರ ಪದಾರ್ಥ. ಇದಕ್ಕೆ ಕಾರಣ ಹುಣಸೆ ಹಣ್ಣಿನಲ್ಲಿ ಕಂಡು ಬರುವ ವಿಟಮಿನ್ ‘ ಸಿ ‘, ವಿಟಮಿನ್ ‘ ಇ ‘ ಮತ್ತು ಹಲವು ಬಗೆಯ ಆಂಟಿ – ಆಕ್ಸಿಡೆಂಟ್ ಮತ್ತು ಫ್ಲೇವನಾಯ್ಡ್ ಗಳ ಪ್ರಭಾವ. ಇವುಗಳ ಸಹಾಯದಿಂದ ಹುಣಸೆ ಹಣ್ಣು ನಮ್ಮ ಚರ್ಮದ ಉರಿಯೂತವನ್ನು ಕಡಿಮೆ ಮಾಡಿ ಚರ್ಮದ ಮೇಲೆ ಕಂಡು ಬರುವ ಕಲೆಗಳನ್ನು ಇಲ್ಲವಾಗಿಸಿ ಚರ್ಮವನ್ನು ನಯವಾಗಿ ಸುಂದರವಾಗಿ ಕಾಣುವಂತೆ ಮಾಡುತ್ತದೆ. 

 

ಈ ಲೇಖನದಲ್ಲಿ ಹುಣಸೆ ಹಣ್ಣನ್ನು ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚು ಮಾಡಿಕೊಳ್ಳಲು 4 ಬಗೆಗಳಲ್ಲಿ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ತಿಳಿಸಲಾಗಿದೆ. ತ್ವಚೆಗೆ ಹೊಳಪು ನೀಡುವ ಹುಣಸೆ ಹಣ್ಣಿನ ಫೇಸ್ ಪ್ಯಾಕ್. ಹುಣಸೆಹಣ್ಣು ಒಂದು ನೈಸರ್ಗಿಕವಾದ ಬ್ಲೀಚಿಂಗ್ ಏಜೆಂಟ್ ಎಂದು ನಮಗೆಲ್ಲರಿಗೂ ಗೊತ್ತು. ಏಕೆಂದರೆ, ಇದರಲ್ಲಿ ಯಾವುದೇ ರಾಸಾಯನಿಕ ಅಂಶಗಳಿಲ್ಲ. ಮೇಲಾಗಿ ಎಲ್ಲಾ ಕಾಲದಲ್ಲೂ ಸುಲಭವಾಗಿ ಸಿಗುವ ಮತ್ತು ಅಷ್ಟೇನೂ ದುಬಾರಿಯಲ್ಲದ ಮತ್ತು ಬಹಳ ವರ್ಷಗಳಿಂದ ನಮ್ಮ ನಂಬಿಕೆಯನ್ನು ಉಳಿಸಿಕೊಂಡಿರುವ ಒಂದು ಹುಳಿಯಾದ ಹಣ್ಣು. ತನ್ನಲ್ಲಿರುವ ಕೆಲವು ಅತ್ಯದ್ಭುತ ಗುಣ ಲಕ್ಷಣಗಳಿಂದ ನಮ್ಮ ದೇಹದ ಚರ್ಮದ ಮೇಲಿನ ಕೊಳಕನ್ನು ನಿವಾರಣೆ ಮಾಡಿ ಸೌಂದರ್ಯವನ್ನು ಹೆಚ್ಚು ಮಾಡುವ ಶಕ್ತಿ ಪಡೆದಿದೆ. 

 

ಹುಣಸೆ ಹಣ್ಣಿನ ಸೌಂದರ್ಯ ಭರಿತ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಲು ಸ್ವಲ್ಪ ಹುಣಸೆ ಹಣ್ಣಿನ ತಿರುಳನ್ನು 1 ಟೇಬಲ್ ಚಮಚ ನಿಂಬೆ ಹಣ್ಣಿನ ರಸ ಮತ್ತು ಜೇನು ತುಪ್ಪದೊಂದಿಗೆ ಮಿಶ್ರಣ. ಮಾಡಿ ಫೇಸ್ ಪ್ಯಾಕ್ ತಯಾರು ಮಾಡಿ ನಿಮ್ಮ ಸಂಪೂರ್ಣ ಮುಖದ ಭಾಗಕ್ಕೆ ಎಲ್ಲಾ ಕಡೆ ಹರಡುವಂತೆ ಲೇಪನ ಮಾಡಿ ಸುಮಾರು 20 ನಿಮಿಷಗಳ ಕಾಲ ಇದನ್ನು ಹಾಗೆ ಬಿಟ್ಟು ನಂತರ ತಂಪಾದ ನೀರಿನಿಂದ ಮುಖ ತೊಳೆದುಕೊಂಡು ಒಂದು ಕಾಟನ್ ಟವೆಲ್ ನಿಂದ ಮುಖವನ್ನು ಒರೆಸಿಕೊಳ್ಳಿ. ಹುಣಸೆ ಹಣ್ಣಿನ ಫೇಸ್ ಸ್ಕ್ರಬ್. ಹುಣಸೆ ಹಣ್ಣಿನಲ್ಲಿ ನಿಮ್ಮ ಚರ್ಮದ ಮೇಲಿನ ಧೂಳು ಮತ್ತು ಕೊಳಕಿನ ಅಂಶವನ್ನು ನಿವಾರಣೆ ಮಾಡುವ ಗುಣವಿದೆ. ಏಕೆಂದರೆ ಹುಣಸೆ ಹಣ್ಣಿನಲ್ಲಿ ಆಲ್ಫಾ – ಹೈಡ್ರಾಕ್ಸಿ ಆಸಿಡ್ ಎಂಬ ಅಂಶವಿದೆ. ಇದು ನಿಮ್ಮ ಚರ್ಮದ ಮೇಲಿನ ಸತ್ತ ಜೀವ ಕೋಶಗಳನ್ನು ನಿವಾರಣೆ ಮಾಡಿ ನಿಮ್ಮ ಚರ್ಮವನ್ನು ಸ್ವಚ್ಛ ಮಾಡಿ ಚರ್ಮದ ತೇವಾಂಶವನ್ನು ಕಾಪಾಡುತ್ತದೆ.

 

ಹುಣಸೆ ಹಣ್ಣಿನ ಫೇಸ್ ಸ್ಕ್ರಬ್ ತಯಾರು ಮಾಡಲು ನೀವು ಮೊದಲು ಒಂದು ಬಟ್ಟಲಿಗೆ 1 ಟೇಬಲ್ ಚಮಚ ಹುಣಸೆ ಹಣ್ಣಿನ ರಸಕ್ಕೆ 1 ಟೀ ಚಮಚ ಅಡುಗೆಗೆ ಬಳಸುವ ಉಪ್ಪನ್ನು ಹಾಕಿ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಒಂದು ಟೇಬಲ್ ಚಮಚದಷ್ಟು ಗಟ್ಟಿ ಮೊಸರು ಅಥವಾ ಹಾಲಿನ ಕೆನೆಯನ್ನು ಮಿಶ್ರಣ ಮಾಡಿ. ಎಲ್ಲವನ್ನೂ ಚೆನ್ನಾಗಿ ಕಲಸಿದ ಮೇಲೆ ನಿಮ್ಮ ಮುಖದ ಕೋಮಲ ತ್ವಚೆಯ ಮೇಲೆ ಈ ಮಿಶ್ರಣವನ್ನು ವೃತ್ತಾಕಾರದಲ್ಲಿ ನಯವಾಗಿ ಮಸಾಜ್ ಮಾಡಿ. ಸುಮಾರು ಅರ್ಧ ಗಂಟೆ ಕಳೆದ ನಂತರ ತಂಪಾದ ನೀರಿನಿಂದ ಮುಖ ತೊಳೆದುಕೊಳ್ಳಿ. ಕಡಲೆ ಹಿಟ್ಟು ಮತ್ತು ಹುಣಸೆ ಹಣ್ಣಿನ ಫೇಸ್ ಪ್ಯಾಕ್. ಮುಖದ ಸೌಂದರ್ಯಕ್ಕೆ ಕಡಲೆ ಹಿಟ್ಟನ್ನು ಬಳಸುವುದು ಸಾಮಾನ್ಯ. 

 

ಏಕೆಂದರೆ ನೀವು ಅದಾಗಲೇ ಕಡಲೆ ಹಿಟ್ಟನ್ನು ಎಷ್ಟೋ ಬಾರಿ ಬಳಕೆ ಮಾಡಿರುತ್ತೀರಿ. ಆದರೆ ಇದರಲ್ಲಿ ಹುಣಸೆ ಹಣ್ಣು ಒಂದು ಹೊಸ ಸೇರ್ಪಡೆ ಅಷ್ಟೇ. ನಿಮ್ಮ ಮನೆಯಲ್ಲಿ ಸ್ವತಃ ನೀವು ನಿಮ್ಮ ಮುಖದ ಸೌಂದರ್ಯಕ್ಕೆ ಫೇಸ್ ಪ್ಯಾಕ್ ತಯಾರು ಮಾಡಲು 1 ಟೇಬಲ್ ಚಮಚ ಹುಣಸೆ ಹಣ್ಣಿನ ರಸಕ್ಕೆ 1 ಟೇಬಲ್ ಚಮಚ ಹಸಿ ಜೇನು ತುಪ್ಪ ಮತ್ತು 2 ಟೇಬಲ್ ಚಮಚದಷ್ಟು ಕಡಲೆ ಹಿಟ್ಟನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಮುಖದ ಮೇಲೆ ಹಾಗೂ ಕುತ್ತಿಗೆ ಭಾಗದಲ್ಲಿ ಹರಡುವಂತೆ ಚೆನ್ನಾಗಿ ಹಚ್ಚಿ ಮಸಾಜ್ ಮಾಡಿ. ಸುಮಾರು 20 ನಿಮಿಷಗಳು ಇದು ಒಣಗಿದ ನಂತರ ತಣ್ಣೀರಿನಲ್ಲಿ ಮುಖ ತೊಳೆದುಕೊಳ್ಳಿ. ಹುಣಸೆ ಹಣ್ಣಿನ ಫೇಸ್ ಟೋನರ್. 

 

ಮುಖ್ಯವಾಗಿ ಮುಖದ ಚರ್ಮದ ಭಾಗದಲ್ಲಿ ಮಧ್ಯ ವಯಸ್ಸಿನವರು ಹೊಂದಿರುವಂತೆ ಅಲ್ಲಲ್ಲಿ ಗೀರುಗಳು ಮತ್ತು ಸುಕ್ಕುಗಳು ಕಂಡು ಬಂದರೆ ನೀವು ಫೇಸ್ ಟೋನರ್ ಉಪಯೋಗಿಸಬೇಕಾಗಿ ಬರುತ್ತದೆ. ನಿಮಗೆ ಸಹಾಯ ಮಾಡಲೆಂದು ಇರುವ ಹುಣಸೆ ಹಣ್ಣನ್ನು ನೀವು ಉಪಯೋಗಿಸಿಕೊಳ್ಳಿ. ಏಕೆಂದರೆ, ಇದರಲ್ಲಿ ನಿಮ್ಮ ಯೌವನವನ್ನು ಕಾಪಾಡುವ ಹಾಗೂ ಚರ್ಮದ ಸುಕ್ಕನ್ನು ನಿವಾರಣೆ ಮಾಡುವ ಗುಣ ಲಕ್ಷಣವಿದೆ. ಹುಣಸೇ ಹಣ್ಣಿನ ಫೇಸ್ ಟೋನರ್ ತಯಾರು ಮಾಡಲು ಮೊದಲಿಗೆ ನೀರಿನಲ್ಲಿ ಒಂದು ಹಿಡಿ ಹುಣಸೆ ಹಣ್ಣನ್ನು ಹಾಕಿ ಚೆನ್ನಾಗಿ ಕುದಿಸಿ ಅದರಿಂದ ರಸ ತೆಗೆದುಕೊಳ್ಳಿ. 

 

ಇದರಲ್ಲಿ ಎರಡು ಟೇಬಲ್ ಚಮಚದಷ್ಟು ಹುಣಸೆ ಹಣ್ಣಿನ ರಸವನ್ನು ಎರಡು ಟೇಬಲ್ ಚಮಚ ಚಹಾ ಪುಡಿಯನ್ನು ಹಾಕಿ ತಯಾರು ಮಾಡಿದ ನೀರಿನೊಂದಿಗೆ ಮಿಶ್ರಣ ಮಾಡಿ. ಒಂದು ಹತ್ತಿಯ ಉಂಡೆಯನ್ನು ತೆಗೆದುಕೊಂಡು ಅದರಲ್ಲಿ ಈ ಮೇಲಿನ ಎರಡು ದ್ರವಗಳನ್ನು ಅದ್ದಿ ಅದನ್ನು ಚರ್ಮದ ಮೇಲೆ ಎಲ್ಲಿ ಸುಕ್ಕು ಕಂಡು ಬಂದಿರುತ್ತದೆಯೋ, ಆ ಜಾಗದಲ್ಲಿ ಹಚ್ಚುತ್ತಾ ಬನ್ನಿ. ಕೇವಲ ಒಂದು ವಾರದ ಅಂತರದಲ್ಲಿ ನಿಮಗೆ ಒಳ್ಳೆಯ ಫಲಿತಾಂಶ ಲಭ್ಯವಾಗುತ್ತದೆ. ಅಂದರೆ ನಿಮ್ಮ ಚರ್ಮದ ಮೇಲಿನ ಸುಕ್ಕು ಮಾಯವಾಗಿ ಪಳಪಳನೆ ಹೊಳೆಯುವ ಕೋಮಲ ತ್ವಚೆ ನಿಮ್ಮದಾಗುತ್ತದೆ. 

 

 


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

3 months ago

   
Image 1
Image 1

ನಿಮ್ಮ ಮೂತ್ರಪಿಂಡದಲ್ಲಿ ಕಲ್ಲುಗಳು ಇವೆಯೇ..? ಮೂತ್ರಪಿಂಡದ ಕಲ್ಲು ಹೊರ ಹಾಕಲು ನಿತ್ಯ ಈ ಜ್ಯೂಸ್ ಕುಡಿಯಿರಿ…!

ನಿಮ್ಮ ಮೂತ್ರಪಿಂಡದಲ್ಲಿ ಕಲ್ಲುಗಳು ಇವೆಯೇ..? ಹಾಗಿದ್ರೆ ಈ ಸುದ್ದಿ ಪೂರ್ತಿ ಓದಿ.. ವೀ... ಓದನ್ನು ಮುಂದುವರಿಸಿ


Edited by: ಬಾನು

2 months ago

   
Image 1

ವೀಳ್ಯದೆಲೆಯನ್ನು ಸುಣ್ಣದ ಜೊತೆಗಲ್ಲ, ತುಳಸಿ ಬೀಜದ ಜೊತೆಗೆ ತಿಂದ್ರೆ ಆರೋಗ್ಯಕ್ಕೆ ಒಳ್ಳೆಯದಂತೆ

ವೀಳ್ಯದೆಲೆ ಮತ್ತು ಸುಣ್ಣದ ಜೊತೆ ವೀಳ್ಯದೆಲೆಯನ್ನು ತಿನ್ನುವುದು ಆರೋಗ್ಯಕ್ಕೆ ಪ್ರಯೋಜನ... ಓದನ್ನು ಮುಂದುವರಿಸಿ


Edited by: ಬಾನು

2 months ago

   
Image 1
ಬೆಂಗಳೂರು ನಗರ

ತ್ಯಾಗದ ಪ್ರತೀಕ ಬಕ್ರೀದ್​ ಹಬ್ಬದ ಮಹತ್ವ ಇಲ್ಲಿದೆ...

ಬಕ್ರೀದ್… ಮುಸ್ಲಿಂ ಧರ್ಮೀಯರ ಪ್ರಮುಖ ಹಬ್ಬ. ವಿಶ್ವದಾದ್ಯಂತ ಇರುವ ಮುಸ್ಲಿಂ ಧರ್ಮೀಯರು... ಓದನ್ನು ಮುಂದುವರಿಸಿ


Edited by: ಬಾನು

2 months ago

   
Image 1

ಪುರುಷರೇ ಗಮನಿಸಿ… ನೀರಿನಲ್ಲಿ ನೆನೆಸಿದ ಒಣದ್ರಾಕ್ಷಿ ಸೇವಿಸೋದ್ರಿಂದ ಎಷ್ಟೆಲ್ಲಾ ಪ್ರಯೋಜಕಾರಿ ಗೊತ್ತಾ !?

ಒಣದ್ರಾಕ್ಷಿಯನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಸೇವಿಸುವುದರಿಂದ ಸಾಕಷ್ಟ... ಓದನ್ನು ಮುಂದುವರಿಸಿ


Edited by: ಬಾನು

3 months ago

   
Image 1

ಮಂಡಕ್ಕಿ ಅಥವಾ ಕಡಲೆಪುರಿ ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜಕಾರಿ!

ಮನೆಯಲ್ಲಿ ಮಂಡಕ್ಕಿ ಮಸಾಲ ತಯಾರಿಸಿ ಡಬ್ಬದಲ್ಲಿ ಶೇಖರಿಸಿಟ್ಟಿರುತ್ತಾರೆ. ಸಂಜೆಯ ಸ್ನಾಕ... ಓದನ್ನು ಮುಂದುವರಿಸಿ


Edited by: ಬಾನು

3 months ago

   
Image 1

ನೀವು ಚಪಾತಿ ಪ್ರೇಮಿಗಳಾ? ಹಾಗಾದರೆ ಒಬ್ಬ ವ್ಯಕ್ತಿ ಒಂದು ದಿನಕ್ಕೆ ಎಷ್ಟು ಚಪಾತಿ ತಿನ್ನಬೇಕು? ತಪ್ಪದೇ ತಿಳಿಯಿರಿ!

ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಇದಕ್ಕಾಗಿ ನೀವು ತಿನ್ನುವ ರೊಟ್ಟಿಯ ಪ್ರಮಾಣದ ಬಗ್... ಓದನ್ನು ಮುಂದುವರಿಸಿ


Edited by: ಬಾನು

3 months ago

   
Image 1

ಹಾಲಿನ ಜೊತೆಗೆ ಅರಿಶಿನ ಬೆರೆಸಿ ಕುಡಿದ್ರೆ ಈ ಕಾಯಿಲೆಗಳೆಲ್ಲಾ ಮಾಯ... ಆರೋಗ್ಯಕ್ಕೆ ಹತ್ತಾರು ಲಾಭ

ಹಾಲಿಗೆ ಅರಿಶಿನ ಸೇರಿಸಿ ಕುಡಿಯುವ ರೂಢಿ ನಮ್ಮ ಭಾರತೀಯ ಸಂಪ್ರದಾಯದಲ್ಲಿ ಮೊದಲಿನಿಂದಲೂ... ಓದನ್ನು ಮುಂದುವರಿಸಿ


Edited by: ಬಾನು

3 months ago

   
Image 1

ಕರ್ಬೂಜ ಬೀಜ ಎಸೆದು ಮೂರ್ಖರಾಗಬೇಡಿ… ಬೀಜಗಳಲ್ಲೂ ಅಡಗಿದೆ ಆರೋಗ್ಯ ಪ್ರಯೋಜನ; ತಿಳಿದ್ರೆ ಶಾಕ್ ಆಗ್ತೀರಿ!

ದೇಹವನ್ನು ತಂಪಗಾಗಿಸಲು ನೀವು ಸವಿಯಬಹುದಾದ ಫ್ರೆಶ್ ಜ್ಯೂಸ್‌ಗಳ ಪೈಕಿ ಕರ್ಬೂಜ ಹಣ್ಣು ಕ... ಓದನ್ನು ಮುಂದುವರಿಸಿ


Edited by: ಬಾನು

3 months ago

   
Image 1

ಬಿಪಿ ಇಲ್ಲವೆಂದು ಹೆಚ್ಚು ಉಪ್ಪು ಸೇವನೆ ಮಾಡುವವರೇ ಎಚ್ಚರ! ಹಾಗಿದ್ರೆ ಈ ಸುದ್ದಿ ಮಿಸ್ ಮಾಡ್ದೆ ನೋಡಿ!

ಬಿಪಿ ಸಮಸ್ಯೆ ಇಲ್ಲದವರು “ನಮಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ ನಾವು ಹೆಚ್ಚಿನ ಪ್ರಮಾಣದ... ಓದನ್ನು ಮುಂದುವರಿಸಿ


Edited by: ಬಾನು

3 months ago

   
Image 1

ಪಪ್ಪಾಯಿ ಎಲೆಯ ರಸ ಕುಡಿದರೆ ಸಾಕು ಈ ಎಲ್ಲಾ ರೋಗಗಳಿಂದ ಸಿಗುವುದು ಮುಕ್ತಿ

ಹಣ್ಣನ್ನು ಹೊರತುಪಡಿಸಿ, ಪಪ್ಪಾಯಿ ಗಿಡದ ಅತಿ ಹೆಚ್ಚು ಬಳಕೆಯಾದ ಭಾಗವೆಂದರೆ ಎಲೆ. ಪಪ್ಪ... ಓದನ್ನು ಮುಂದುವರಿಸಿ


Edited by: ಬಾನು

3 months ago

   
Image 1