ಕರ್ಬೂಜ ಬೀಜ ಎಸೆದು ಮೂರ್ಖರಾಗಬೇಡಿ… ಬೀಜಗಳಲ್ಲೂ ಅಡಗಿದೆ ಆರೋಗ್ಯ ಪ್ರಯೋಜನ; ತಿಳಿದ್ರೆ ಶಾಕ್ ಆಗ್ತೀರಿ!

ದೇಹವನ್ನು ತಂಪಗಾಗಿಸಲು ನೀವು ಸವಿಯಬಹುದಾದ ಫ್ರೆಶ್ ಜ್ಯೂಸ್‌ಗಳ ಪೈಕಿ ಕರ್ಬೂಜ ಹಣ್ಣು ಕೂಡ ಒಂದಾಗಿದೆ. ಆದರೆ ನಾವು ಕರ್ಬೂಜ ಹಣ್ಣನ್ನು ಕತ್ತರಿಸುವ ಸಂದರ್ಭದಲ್ಲಿ ಸಿಪ್ಪೆಯ ಜೊತೆಯಲ್ಲಿ ಅದರ ಬೀಜವನ್ನು ಎಸೆದುಬಿಡುತ್ತೇವೆ. ಈ ರೀತಿ ಮಾಡುವುದರಿಂದ ನೀವು ನಿಮಗೆ ತಿಳಿಯದಂತೆ ನಿಮ್ಮ ದೇಹಕ್ಕೆ ಸೇರಬೇಕಿದ್ದ ಉತ್ತಮ ಪೋಷಕಾಂಶವನ್ನು ಕಳೆದುಕೊಂಡಂತೆಯೇ ಸರಿ. ಖರ್ಬೂಜದ ಬೀಜಗಳು ವಿಟಮಿನ್ ಎ. ಕೆ ,ಸಿ , ಬಿ1, ಇ ಹಾಗೂ ಸತು, ಪ್ರೊಟೀನ್, ಆರೋಗ್ಯಕರ ಕೊಬ್ಬುಗಳು ಮತ್ತು ಕಾರ್ಬೋಹೈಡ್ರೇಟ್ ಅಂಶಗಳನ್ನು ಹೇರಳವಾಗಿ ಹೊಂದಿರುತ್ತದೆ. ಭಾರತೀಯ ಅಡುಗೆ ಮನೆಗಳಲ್ಲಿ ಕರ್ಬೂಜದ ಬೀಜಗಳನ್ನು ನಾನಾ ರೀತಿಯಲ್ಲಿ ಬಳಕೆ ಮಾಡುತ್ತಾರೆ. ಕರ್ಬೂಜದ ಬೀಜಗಳ ಪ್ರಯೋಜನಗಳನ್ನು ನಾವಿಲ್ಲಿ ತಿಳಿದುಕೊಳ್ಳೋಣ. 

 

ಕರ್ಬೂಜದ ಬೀಜಗಳನ್ನು ಅಡುಗೆಯಲ್ಲಿ ಬಳಕೆ ಮಾಡುವ ಮುನ್ನ ಇದನ್ನು ಚೆನ್ನಾಗಿ ತೊಳೆದು ಒಣಗಿಸಿಕೊಳ್ಳಬೇಕು. ಬೀಜಗಳನ್ನು ತಿರುಳಿನಿಂದ ಬೇರ್ಪಡಿಸಿದ ಬಳಿಕ ಅದನ್ನು ಚೆನ್ನಾಗಿ ತೊಳೆದುಕೊಳ್ಳಿ. ಸಂಪೂರ್ಣವಾಗಿ ಬೀಜಗಳು ತಿರುಳಿನಿಂದ ಹೊರಬಂದ ಬಳಿಕ ಸಾಮಾನ್ಯ ಶಾಖದಲ್ಲಿ ಅದನ್ನು ಒಣಗಿಸಲು ಬಿಡಿ. ಬೀಜದ ತೇವಾಂಶಗಳೆಲ್ಲ ಮಾಯವಾಗಿ ಅವುಗಳು ಒಣಗಿದ ಬಳಿಕ ನೀವು ಬೀಜಗಳನ್ನು ನೇರವಾಗಿ ಹಾಗೆಯೇ ಸೇವಿಸಬಹುದು. ಇಲ್ಲವಾದಲ್ಲಿ ಸಲಾಡ್ಗಳಲ್ಲಿ, ಬ್ರೆಡ್, ಬನ್ ಇಲ್ಲವೇ ಕೇಕ್ಗಳಲ್ಲಿ ಸಿಂಪಡಿಸಿ ಕೂಡ ತಿನ್ನಬಹುದು. ನೀವು ಯಾವುದೇ ಸಿಹಿತಿಂಡಿಗಳು, ಸ್ಮೂದಿಗಳಲ್ಲಿ ಕೂಡ ಕರ್ಬೂಜದ ಬೀಜಗಳನ್ನು ಬಳಕೆ ಮಾಡಬಹುದಾಗಿದೆ. 

 

ಸಸ್ಯಾಹಾರಿಗಳು ತಮ್ಮ ದೇಹದಲ್ಲಿ ಪ್ರೊಟೀನ್ ಶೇಖರಣೆಯನ್ನು ಹೆಚ್ಚಿಸಿಕೊಳ್ಳಲು ಕರ್ಬೂಜದ ಬೀಜಗಳು ಒಳ್ಳೆಯ ಕೊಡುಗೆ ನೀಡುತ್ತವೆ. ಅಲ್ಲದೇ ಹಾರ್ಮೋನ್ಗಳ ಆರೋಗ್ಯಕ್ಕೆ ಕೂಡ ಸಹಾಯ ಮಾಡುತ್ತವೆ. ದೇಹದಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಕೂಡ ಈ ಬೀಜಗಳಿಗೆ ಇದೆ. ಈ ಬೀಜಗಳು ಗಾತ್ರದಲ್ಲಿ ಚಿಕ್ಕದಾಗಿದ್ದರೂ ಸಹ ಹೃದಯದ ಆರೋಗ್ಯವನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಕರ್ಬೂಜದ ಬೀಜಗಳು ಉತ್ತಮ ಪೋಷಕಾಂಶಗಳನ್ನು ಅಗಾಧ ಪ್ರಮಾಣದಲ್ಲಿ ಹೊಂದಿರುವುದರಿಂದ ಸೂಪರ್ ಫುಡ್ ಎಂದೇ ಕರೆಯಬಹುದಾಗಿದೆ. ವಿಟಮಿನ್ ಎ, ಸಿ ಹಾಗೂ ಇ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲೂ ಕರ್ಬೂಜದ ಬೀಜಗಳು ಸಹಕಾರಿಯಾಗಿವೆ. ಇವುಗಳು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತವೆ. 

 

ಆರೋಗ್ಯ ಪ್ರಯೋಜನಗಳು: ಮೂಳೆಗಳ ಆರೋಗ್ಯ ವೃದ್ಧಿಸಲು ಖನಿಜಾಂಶಗಳ ಪೂರೈಕೆ : ಕರ್ಬೂಜದ ಬೀಜಗಳಲ್ಲಿ ಕಂಡುಬರುವ ಮೆಗ್ನಿಷಿಯಂ, ಪೊಟ್ಯಾಷಿಯಂ ಹಾಗೂ ಸತುವಿನಂತಹ ಖನಿಜಗಳು ಆರೋಗ್ಯಕರ ಮೂಳೆಗಳು ಹಾಗೂ ಹಲ್ಲುಗಳನ್ನು ನೀಡುತ್ತವೆ. ಅಗಾಧ ಪ್ರಮಾಣದ ಪ್ರೊಟೀನ್ : ಕರ್ಬೂಜ ಹಣ್ಣಿನ ಬೀಜಗಳಲ್ಲಿ ಪ್ರೊಟೀನ್ ಅಗಾಧ ಪ್ರಮಾಣದಲ್ಲಿ ಇರುತ್ತದೆ. ಇವುಗಳು ಸ್ನಾಯುಗಳ ದುರಸ್ತಿ, ಬೆಳವಣಿಗೆ ಮಾತ್ರವಲ್ಲದೇ ಒಟ್ಟಾರೆ ದೇಹದ ಬೆಳವಣಿಗೆಗೆ ಸಹಾಯ ಮಾಡುತ್ತದೆ. 

 

ಸಸ್ಯಾಹಾರಿಗಳು ತಮ್ಮ ಆಹಾರದಲ್ಲಿ ಪ್ರೊಟೀನ್ ಸೇವನೆ ಹೆಚ್ಚಿಸಿಕೊಳ್ಳಬೇಕು ಎಂದರೆ ಕರ್ಬೂಜದ ಬೀಜ ಉತ್ತಮ ಆಯ್ಕೆಯಾಗಿದೆ. ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ: ಕರ್ಬೂಜದ ಬೀಜಗಳಲ್ಲಿ ಇರುವ ಸಫೋನಿನ್ಗಳು ಹಾಗೂ ಫೈಟೊಸ್ಟೆರಾಲ್ಗಳು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತವೆ.ಸಫೋನಿನ್ಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. 

 

ಹೃದಯದ ಆರೋಗ್ಯ : ಕರ್ಬೂಜದ ಬೀಜಗಳಲ್ಲಿ ಒಮೆಗಾ 3 ಹಾಗೂ ಒಮೆಗಾ 6 ಫ್ಯಾಟಿ ಆ್ಯಸಿಡ್ಗಳಿದ್ದು ಇವುಗಳು ಹೃದಯದ ಆರೋಗ್ಯವನ್ನು ಕಾಪಾಡುವ ಕೆಲಸ ಮಾಡುತ್ತವೆ. ಈ ಆರೋಗ್ಯಕರ ಕೊಬ್ಬುಗಳು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಮಾಡುವ ಮೂಲಕ ಹೃದ್ರೋಗದ ಅಪಾಯಗಳನ್ನು ಕಡಿಮೆ ಮಾಡುತ್ತದೆ. ವಯಸ್ಸಾಗುವಿಕೆಯನ್ನು ಕಡಿಮೆ ಮಾಡುತ್ತದೆ : ಕರ್ಬೂಜದ ಬೀಜಗಳಲ್ಲಿ ಇರುವ ಕೊಬ್ಬನಾಮ್ಲಗಳು ಚರ್ಮವನ್ನು ಪೋಷಿಸುವ ಕಾರ್ಯ ಮಾಡುತ್ತವೆ. ನೆರಳಾತೀತ ಕಿರಣಗಳಿಂದ ಮುಖಕ್ಕಾದ ಹಾನಿಯನ್ನು ಕಡಿಮೆ ಮಾಡುವ ಜೊತೆಯಲ್ಲಿ ವಯಸ್ಸಾಗುವಿಕೆಯನ್ನು ಮರೆಮಾಡುತ್ತದೆ.

 

 


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

3 months ago

   
Image 1
Image 1

ನಿಮ್ಮ ಮೂತ್ರಪಿಂಡದಲ್ಲಿ ಕಲ್ಲುಗಳು ಇವೆಯೇ..? ಮೂತ್ರಪಿಂಡದ ಕಲ್ಲು ಹೊರ ಹಾಕಲು ನಿತ್ಯ ಈ ಜ್ಯೂಸ್ ಕುಡಿಯಿರಿ…!

ನಿಮ್ಮ ಮೂತ್ರಪಿಂಡದಲ್ಲಿ ಕಲ್ಲುಗಳು ಇವೆಯೇ..? ಹಾಗಿದ್ರೆ ಈ ಸುದ್ದಿ ಪೂರ್ತಿ ಓದಿ.. ವೀ... ಓದನ್ನು ಮುಂದುವರಿಸಿ


Edited by: ಬಾನು

2 months ago

   
Image 1

ವೀಳ್ಯದೆಲೆಯನ್ನು ಸುಣ್ಣದ ಜೊತೆಗಲ್ಲ, ತುಳಸಿ ಬೀಜದ ಜೊತೆಗೆ ತಿಂದ್ರೆ ಆರೋಗ್ಯಕ್ಕೆ ಒಳ್ಳೆಯದಂತೆ

ವೀಳ್ಯದೆಲೆ ಮತ್ತು ಸುಣ್ಣದ ಜೊತೆ ವೀಳ್ಯದೆಲೆಯನ್ನು ತಿನ್ನುವುದು ಆರೋಗ್ಯಕ್ಕೆ ಪ್ರಯೋಜನ... ಓದನ್ನು ಮುಂದುವರಿಸಿ


Edited by: ಬಾನು

2 months ago

   
Image 1
ಬೆಂಗಳೂರು ನಗರ

ತ್ಯಾಗದ ಪ್ರತೀಕ ಬಕ್ರೀದ್​ ಹಬ್ಬದ ಮಹತ್ವ ಇಲ್ಲಿದೆ...

ಬಕ್ರೀದ್… ಮುಸ್ಲಿಂ ಧರ್ಮೀಯರ ಪ್ರಮುಖ ಹಬ್ಬ. ವಿಶ್ವದಾದ್ಯಂತ ಇರುವ ಮುಸ್ಲಿಂ ಧರ್ಮೀಯರು... ಓದನ್ನು ಮುಂದುವರಿಸಿ


Edited by: ಬಾನು

2 months ago

   
Image 1

ಪುರುಷರೇ ಗಮನಿಸಿ… ನೀರಿನಲ್ಲಿ ನೆನೆಸಿದ ಒಣದ್ರಾಕ್ಷಿ ಸೇವಿಸೋದ್ರಿಂದ ಎಷ್ಟೆಲ್ಲಾ ಪ್ರಯೋಜಕಾರಿ ಗೊತ್ತಾ !?

ಒಣದ್ರಾಕ್ಷಿಯನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಸೇವಿಸುವುದರಿಂದ ಸಾಕಷ್ಟ... ಓದನ್ನು ಮುಂದುವರಿಸಿ


Edited by: ಬಾನು

3 months ago

   
Image 1

ಮಂಡಕ್ಕಿ ಅಥವಾ ಕಡಲೆಪುರಿ ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜಕಾರಿ!

ಮನೆಯಲ್ಲಿ ಮಂಡಕ್ಕಿ ಮಸಾಲ ತಯಾರಿಸಿ ಡಬ್ಬದಲ್ಲಿ ಶೇಖರಿಸಿಟ್ಟಿರುತ್ತಾರೆ. ಸಂಜೆಯ ಸ್ನಾಕ... ಓದನ್ನು ಮುಂದುವರಿಸಿ


Edited by: ಬಾನು

3 months ago

   
Image 1

ನೀವು ಚಪಾತಿ ಪ್ರೇಮಿಗಳಾ? ಹಾಗಾದರೆ ಒಬ್ಬ ವ್ಯಕ್ತಿ ಒಂದು ದಿನಕ್ಕೆ ಎಷ್ಟು ಚಪಾತಿ ತಿನ್ನಬೇಕು? ತಪ್ಪದೇ ತಿಳಿಯಿರಿ!

ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಇದಕ್ಕಾಗಿ ನೀವು ತಿನ್ನುವ ರೊಟ್ಟಿಯ ಪ್ರಮಾಣದ ಬಗ್... ಓದನ್ನು ಮುಂದುವರಿಸಿ


Edited by: ಬಾನು

3 months ago

   
Image 1

ಹಾಲಿನ ಜೊತೆಗೆ ಅರಿಶಿನ ಬೆರೆಸಿ ಕುಡಿದ್ರೆ ಈ ಕಾಯಿಲೆಗಳೆಲ್ಲಾ ಮಾಯ... ಆರೋಗ್ಯಕ್ಕೆ ಹತ್ತಾರು ಲಾಭ

ಹಾಲಿಗೆ ಅರಿಶಿನ ಸೇರಿಸಿ ಕುಡಿಯುವ ರೂಢಿ ನಮ್ಮ ಭಾರತೀಯ ಸಂಪ್ರದಾಯದಲ್ಲಿ ಮೊದಲಿನಿಂದಲೂ... ಓದನ್ನು ಮುಂದುವರಿಸಿ


Edited by: ಬಾನು

3 months ago

   
Image 1

ನಿಮಗೆ ಗೊತ್ತೇ..? ಹುಣಸೆ ಹಣ್ಣಿನ ಹುಳಿಗಿದೆ ಸೌಂದರ್ಯವನ್ನು ದುಪ್ಪಟ್ಟು ಮಾಡುವ ಪವರ್.!

ತಜ್ಞರ ಅಭಿಪ್ರಾಯದಲ್ಲಿ ಹುಣಸೆ ಹಣ್ಣು ನಿಮ್ಮ ಮುಖದ ಹೊಳಪನ್ನು ಹೆಚ್ಚು ಮಾಡಿ ನಿಮ್ಮ ಸೌ... ಓದನ್ನು ಮುಂದುವರಿಸಿ


Edited by: ಬಾನು

3 months ago

   
Image 1

ಬಿಪಿ ಇಲ್ಲವೆಂದು ಹೆಚ್ಚು ಉಪ್ಪು ಸೇವನೆ ಮಾಡುವವರೇ ಎಚ್ಚರ! ಹಾಗಿದ್ರೆ ಈ ಸುದ್ದಿ ಮಿಸ್ ಮಾಡ್ದೆ ನೋಡಿ!

ಬಿಪಿ ಸಮಸ್ಯೆ ಇಲ್ಲದವರು “ನಮಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ ನಾವು ಹೆಚ್ಚಿನ ಪ್ರಮಾಣದ... ಓದನ್ನು ಮುಂದುವರಿಸಿ


Edited by: ಬಾನು

3 months ago

   
Image 1

ಪಪ್ಪಾಯಿ ಎಲೆಯ ರಸ ಕುಡಿದರೆ ಸಾಕು ಈ ಎಲ್ಲಾ ರೋಗಗಳಿಂದ ಸಿಗುವುದು ಮುಕ್ತಿ

ಹಣ್ಣನ್ನು ಹೊರತುಪಡಿಸಿ, ಪಪ್ಪಾಯಿ ಗಿಡದ ಅತಿ ಹೆಚ್ಚು ಬಳಕೆಯಾದ ಭಾಗವೆಂದರೆ ಎಲೆ. ಪಪ್ಪ... ಓದನ್ನು ಮುಂದುವರಿಸಿ


Edited by: ಬಾನು

3 months ago

   
Image 1