ತುಂಗಭದ್ರಾ ಜಲಾಶಯದ ಗೇಟ್‌ಗಳ ಬದಲಾವಣೆಗೆ ಸರ್ಕಾರ ತೀವ್ರ ಕ್ರಮ -ರೈತರಿಗೆ ನಿರಾಳತೆ
ಕೊಪ್ಪಳ: ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್ ಸಂಖ್ಯೆ 19 ಕಿತ್ತುಹೋದ ಘಟನೆಯ ನಂತರ, ಕಳೆದ ಎರಡು ವರ್ಷಗಳಿಂದ ಸಂಕಷ್ಟ ಅನುಭವಿಸುತ್ತಿದ್ದ ನಾಲ್ಕು ಜಿಲ್ಲೆಗಳ ರೈತರಿಗೆ ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. 2024ರ ಆಗಸ್ಟ್ 10ರಂದು ಸಂಭವಿಸಿದ ಘಟನೆಯಲ್ಲಿ ಗೇಟ್‌ಗಳ ಅವಧಿ ಮೀರಿದರೂ ಅವುಗಳನ್ನು ಬದಲಾಯಿಸದೇ ಇರುವುದು ಮತ್ತು ಚೈನ್ ಡಿಲಿಂಕ್ ಆಗಿರುವುದು ಪ್ರಮುಖ ಕಾರಣವೆಂದು ತಜ್ಞರು ಅಭಿಪ್ರಾಯಪಟ್ಟಿದ್ದರು. ಈ ಹಿನ್ನೆಲೆ ಸರ್ಕಾರ ಸಂಪೂರ್ಣ ಗೇಟ್‌ಗಳ ಬದಲಾವಣೆಗೆ ಮುಂದಾಗಿದೆ.
ಸುಮಾರು ₹42 ಕೋಟಿ ವೆಚ್ಚದಲ್ಲಿ 33 ಗೇಟ್‌ಗಳ ಬದಲಾವಣೆ ಕಾಮಗಾರಿ ಆರಂಭಗೊಂಡರೂ, ಪ್ರಾರಂಭದಲ್ಲಿ ಹಳೆಯ ಚೈನ್‌ಗಳನ್ನು ಮುಂದುವರಿಸಲು ನಿರ್ಧಾರವಿತ್ತು. ಆದರೆ ರೈತರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಸರ್ಕಾರ ತನ್ನ ನಿರ್ಧಾರವನ್ನು ಪರಿಷ್ಕರಿಸಿದೆ. ಈಗ ಎಲ್ಲಾ ಗೇಟ್‌ಗಳಿಗೆ ಹೊಸ ಚೈನ್‌ಗಳನ್ನು ಅಳವಡಿಸಲು ₹5.5 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗಿದೆ ಮತ್ತು ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದೆ. ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.
ಕಾಮಗಾರಿ ವೇಗ ಪಡೆದುಕೊಂಡಿದ್ದು, ಈಗಾಗಲೇ 18 ಗೇಟ್‌ಗಳ ಡಿಮೆಟಲಿಂಗ್ ಪೂರ್ಣಗೊಂಡಿದೆ. ಐದು ಹೊಸ ಗೇಟ್‌ಗಳನ್ನು ಅಳವಡಿಸಲಾಗಿದ್ದು, ಉಳಿದ ಗೇಟ್‌ಗಳ ಕೆಲಸ ಮುಂದುವರಿಯುತ್ತಿದೆ. ಗುತ್ತಿಗೆ ಪಡೆದ ಕಂಪನಿಗೆ ಮೇ ಅಂತ್ಯದೊಳಗೆ ಎಲ್ಲಾ ಗೇಟ್‌ಗಳನ್ನು ಅಳವಡಿಸಲು ಗಡುವು ನೀಡಲಾಗಿದೆ. ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೇ ಅಂತ್ಯ ಅಥವಾ ಜೂನ್ ಮೊದಲ ವಾರದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರೈತರು ಆತಂಕಪಡಬೇಕಾಗಿಲ್ಲ ಎಂದು ತಿಳಿಸಲಾಗಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಅಕ್ರಮ ಪಂಪ್‌ಸೆಟ್ ಸಂಪರ್ಕ ಸಕ್ರಮಕ್ಕೆ 3 ತಿಂಗಳ ಗಡುವು: ಸಚಿವ ಕೆ.ಜೆ. ಜಾರ್ಜ್ ಎಚ್ಚರಿಕೆ
ಬೆಂಗಳೂರು: ಅನಧಿಕೃತವಾಗಿ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪ... ಓದನ್ನು ಮುಂದುವರಿಸಿ
ಯುಗಾದಿ ಮುನ್ನ ಹೂ ಬೆಳೆಗಾರರಿಗೆ ಮಳೆ ಹೊಡೆತ: ಬೆಲೆ ಪತನ ಗದಗ ರೈತರಿಗೆ ಭಾರೀ ನಷ್ಟ
ಗದಗ: ಯುಗಾದಿ ಹಬ್ಬದ ಸಂಭ್ರಮಕ್ಕೆ ಸಜ್ಜಾಗಿದ್ದ ಗದಗ ಜಿಲ್ಲೆಯ ಹೂ... ಓದನ್ನು ಮುಂದುವರಿಸಿ
ರೈತರಿಗೆ ಹೊಸ ಆದಾಯದ ಮಾರ್ಗ: ಕಾಡಿನ ರಾಜ ಮಹೋಗಾನಿ: 15 ವರ್ಷದಲ್ಲಿ ₹2 ಕೋಟಿ ಆದಾಯದ ಸಾಧ್ಯತೆ
ಸಾಂಪ್ರದಾಯಿಕ ಕೃಷಿಯೊಂದಿಗೆ ಹೊಸ ಪ್ರಯೋಗಗಳಿಗೆ ಮುಂದಾಗುತ್ತಿರುವ ರೈತರಿಗೆ ಮಹೋಗಾನಿ ಬ... ಓದನ್ನು ಮುಂದುವರಿಸಿ
PM Kisan ಹೊಸ ನಿಯಮ: ಫಾರ್ಮರ್ ಐಡಿ ಇಲ್ಲದಿದ್ದರೆ ₹2,000 ಕಂತು ಹಣ ಲಭ್ಯವಿಲ್ಲ
ಬೆಂಗಳೂರು: ದೇಶದ ಸಣ್ಣ ಮತ್ತು ಮಧ್ಯಮ ರೈತರಿಗೆ ಆರ್ಥಿಕ ನೆರವು ನೀ... ಓದನ್ನು ಮುಂದುವರಿಸಿ
ಕೋಲಾರ ಎಪಿಎಂಸಿ ಮಾರುಕಟ್ಟೆ ಖಾಲಿ: ಇರಾನ್–ಇಸ್ರೇಲ್ ಯುದ್ಧದಿಂದ ಟೊಮಾಟೊ ಹಾಗೂ ತರಕಾರಿಗಳ ವ್ಯಾಪಾರ ಸ್ಥಗಿತ
ಕೋಲಾರ, ಮಾ. 21: ಮಧ್ಯಪ್ರಾಚ್ಯದ ಇರಾನ್–ಇಸ್ರೇಲ್ ಯುದ್ಧದ ಪರಿಣಾಮ... ಓದನ್ನು ಮುಂದುವರಿಸಿ
ದಾವಣಗೆರೆ ಈರುಳ್ಳಿ ಮಾರುಕಟ್ಟೆ: ಬೆಲೆ ಕುಸಿತ ರೈತರಿಗೆ ಸಂಕಷ್ಟ, ಯುದ್ಧದ ಪ್ರಭಾವ ಸ್ಪಷ್ಟ
ದಾವಣಗೆರೆ: ಜಾಗತಿಕ ಯುದ್ಧದ ಪರಿಣಾಮ ದಾವಣಗೆರೆಯ ಈರುಳ್ಳಿ ಮಾರುಕಟ... ಓದನ್ನು ಮುಂದುವರಿಸಿ
ದೊಡ್ಡಬಳ್ಳಾಪುರ ತಾಲೂಕು
ಮಳೆಯಿಂದ ರಾಗಿ ಖರೀದಿ ಸ್ಥಗಿತ: ರೈತರು ಪರದಾಟ, ಟ್ರಾಕ್ಟರ್‌ಗಳಲ್ಲಿ ಸಿಲಿಂಗ್ ಹಾನಿ ಭೀತಿ
ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ ಕೃಷಿ ಉತ್ಪನ್ನ ಮಾರುಕಟ್ಟ... ಓದನ್ನು ಮುಂದುವರಿಸಿ
ಹನೂರುಗೆ 490 ಕೋಟಿ ರೂ.: ಸಣ್ಣ ನೀರಾವರಿ ಯೋಜನೆಗಳಿಗೆ ಭರ್ಜರಿ ಅನುದಾನ
ಬೆಂಗಳೂರು: ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರು ಮತ್ತ... ಓದನ್ನು ಮುಂದುವರಿಸಿ
ಅಮನಿ ಕೆರೆ ತೋಟಿ ಏತ ಯೋಜನೆ: ಡಿಸಿಎಂ ಡಿ.ಕೆ. ಶಿವಕುಮಾರ್ ರೈತರಿಗೆ ಬಾಕಿ ಪರಿಹಾರ ಶೀಘ್ರ ಬಿಡುಗಡೆ ಭರವಸೆ
ಬೆಂಗಳೂರು: “ಅಮನಿ ಕೆರೆ ತೋಟಿ ಏತ ನೀರಾವರಿ ಯೋಜನೆಯಲ್ಲಿ ಭೂಮಿ ಕಳ... ಓದನ್ನು ಮುಂದುವರಿಸಿ
ರೈತರ ಆರ್ಥಿಕ ಸಬಲೀಕರಣಕ್ಕೆ ಸರ್ಕಾರದ ಹೊಸ ಸಹಕಾರಿ ಕೃಷಿ ಸಾಲ ಯೋಜನೆ
ಬೆಂಗಳೂರು: ಕರ್ನಾಟಕ ಸರ್ಕಾರ ರಾಜ್ಯದ ರೈತರ ಆರ್ಥಿಕ ಸ್ಥಿತಿ ಸದೃಢ... ಓದನ್ನು ಮುಂದುವರಿಸಿ