ರೈತರ ಆರ್ಥಿಕ ಸಬಲೀಕರಣಕ್ಕೆ ಸರ್ಕಾರದ ಹೊಸ ಸಹಕಾರಿ ಕೃಷಿ ಸಾಲ ಯೋಜನೆ
ಬೆಂಗಳೂರು: ಕರ್ನಾಟಕ ಸರ್ಕಾರ ರಾಜ್ಯದ ರೈತರ ಆರ್ಥಿಕ ಸ್ಥಿತಿ ಸದೃಢಗೊಳಿಸಲು ಮಹತ್ವದ ಹೆಜ್ಜೆ ಇಟ್ಟಿದೆ. ಕೃಷಿ ಚಟುವಟಿಕೆಗಳನ್ನು ಉತ್ತೇಜಿಸಲು ಸಹಕಾರಿ ಬ್ಯಾಂಕುಗಳ ಮೂಲಕ ಶೂನ್ಯ ಬಡ್ಡಿ ಸಾಲದ ಮಿತಿಯನ್ನು ₹5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಅರ್ಹ ರೈತರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.
ಸಾಲದ ಪ್ರಕಾರ ಮತ್ತು ಬಡ್ಡಿ
ಅಲ್ಪಾವಧಿ ಸಾಲ: ₹3 ಲಕ್ಷ → ₹5 ಲಕ್ಷ (ಶೂನ್ಯ ಬಡ್ಡಿ)
ಮಧ್ಯಮ ಮತ್ತು ದೀರ್ಘಾವಧಿ ಸಾಲ: ₹10 ಲಕ್ಷ → ₹15 ಲಕ್ಷ (ಬಡ್ಡಿದರ ಶೇ.3)
ಸಾಲಕ್ಕೆ ಅರ್ಹವಾದ ಚಟುವಟಿಕೆಗಳು
ಕೃಷಿ ಚಟುವಟಿಕೆಗಳು
ಲಘು ನೀರಾವರಿ
ಭೂ ಅಭಿವೃದ್ಧಿ
ಕೃಷಿ ಯಾಂತ್ರೀಕರಣ
ತೋಟಗಾರಿಕೆ
ಪ್ಲಾಂಟೇಷನ್ ಅಭಿವೃದ್ಧಿ
ಸಾವಯವ ಕೃಷಿ
ಉಪಕಸುಬುಗಳು
ಪಶುಸಂಗೋಪನೆ
ಹೈನುಗಾರಿಕೆ
ಮೀನುಗಾರಿಕೆ
ರೇಷ್ಮೆ ಕೃಷಿ
ಜೇನು ಸಾಕಾಣಿಕೆ
ಇತರೆ ಚಟುವಟಿಕೆಗಳು
ಕುರಿ, ಮೇಕೆ ಸಾಕಾಣಿಕೆ
ಕೋಳಿ ಸಾಕಾಣಿಕೆ
ಹಂದಿ ಸಾಕಾಣಿಕೆ
ಗಮನ: ಈ ಚಟುವಟಿಕೆಗಳಿಗೆ ₹5 ಲಕ್ಷದವರೆಗೆ ಸಾಲ ಸಿಗಲಿದೆ.
ಅರ್ಹತೆ
ಅರ್ಜಿ ಸಲ್ಲಿಸುವವರು ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಥವಾ ಡಿಸಿಸಿ (DCC) ಬ್ಯಾಂಕ್ ಸದಸ್ಯರಾಗಿರಬೇಕು.
ರೈತರ ವಾಸಸ್ಥಳ ಅಥವಾ ಜಮೀನು ಇರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರ್ಹತೆ.
ಆಧಾರ್ ಕಾರ್ಡ್ ವಿಳಾಸ ವಾಸಸ್ಥಳದ ದೃಢೀಕರಣವಾಗಿ ಪರಿಗಣಿಸಲಾಗುತ್ತದೆ.
ಹಳೆಯ ಸಾಲ ಬಾಕಿ ಇರಬಾರದು
ಅಗತ್ಯ ದಾಖಲೆಗಳು
ಆಧಾರ್ ಕಾರ್ಡ್, ಪಾನ್ ಕಾರ್ಡ್
ಆರ್‌ಟಿಸಿ (ಪಹಣಿ) ದಾಖಲೆ
ಬ್ಯಾಂಕ್ ನಿರಾಕ್ಷೇಪಣಾ ಪತ್ರ (NoC)
ಫಾರ್ಮರ್ ಐಡಿ (FID)
ಬ್ಯಾಂಕ್ ಖಾತೆ ವಿವರ
ಎರಡು ಪಾಸ್‌ಪೋರ್ಟ್ ಅಳತೆಯ ಫೋಟೋ
ಅರ್ಜಿ ಸಲ್ಲಿಸುವ ವಿಧಾನ
ಸಹಕಾರಿ ಸಂಘದಲ್ಲಿ ಸದಸ್ಯತ್ವ ಪಡೆಯುವುದು.
ಸಂಘದಿಂದ ಅರ್ಜಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸುವುದು.
ಸಂಘದ ಸಾಮಾನ್ಯ ಸಭೆಯಲ್ಲಿ ಅರ್ಜಿ ಪರಿಶೀಲಿಸಿ ಅನುಮೋದನೆ.
ಅನುಮೋದನೆಯಾದ ಬಳಿಕ ಸಾಲದ ಮೊತ್ತ ನೇರವಾಗಿ ರೈತರಿಗೆ ಬ್ಯಾಂಕ್ ಖಾತೆಗೆ ಕಂತುಗಳಲ್ಲಿ ಜಮೆ.
ಗಮನ: ನಿಗದಿತ ಅವಧಿಯೊಳಗೆ ಸಾಲವನ್ನು ಮರುಪಾವತಿ ಮಾಡಿದ ರೈತರಿಗೆ ಮಾತ್ರ ಬಡ್ಡಿ ರಿಯಾಯಿತಿ ಲಭ್ಯ. ಸಮಯಕ್ಕೆ ತೀರಿಸದಿದ್ದರೆ ಸಾಮಾನ್ಯ ಬಡ್ಡಿದರ ಅನ್ವಯವಾಗುತ್ತದೆ. ಈ ಯೋಜನೆಯು ರೈತರ ಆರ್ಥಿಕ ಸ್ವಾವಲಂಬನೆಯನ್ನು ಹೆಚ್ಚಿಸುವ ಮತ್ತು ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಪ್ರಮುಖ ಆಯಾಮವಾಗಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ದೊಡ್ಡಬಳ್ಳಾಪುರ ತಾಲೂಕು
ಮಳೆಯಿಂದ ರಾಗಿ ಖರೀದಿ ಸ್ಥಗಿತ: ರೈತರು ಪರದಾಟ, ಟ್ರಾಕ್ಟರ್‌ಗಳಲ್ಲಿ ಸಿಲಿಂಗ್ ಹಾನಿ ಭೀತಿ
ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ ಕೃಷಿ ಉತ್ಪನ್ನ ಮಾರುಕಟ್ಟ... ಓದನ್ನು ಮುಂದುವರಿಸಿ
ಹನೂರುಗೆ 490 ಕೋಟಿ ರೂ.: ಸಣ್ಣ ನೀರಾವರಿ ಯೋಜನೆಗಳಿಗೆ ಭರ್ಜರಿ ಅನುದಾನ
ಬೆಂಗಳೂರು: ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರು ಮತ್ತ... ಓದನ್ನು ಮುಂದುವರಿಸಿ
ಅಮನಿ ಕೆರೆ ತೋಟಿ ಏತ ಯೋಜನೆ: ಡಿಸಿಎಂ ಡಿ.ಕೆ. ಶಿವಕುಮಾರ್ ರೈತರಿಗೆ ಬಾಕಿ ಪರಿಹಾರ ಶೀಘ್ರ ಬಿಡುಗಡೆ ಭರವಸೆ
ಬೆಂಗಳೂರು: “ಅಮನಿ ಕೆರೆ ತೋಟಿ ಏತ ನೀರಾವರಿ ಯೋಜನೆಯಲ್ಲಿ ಭೂಮಿ ಕಳ... ಓದನ್ನು ಮುಂದುವರಿಸಿ
ಕಬ್ಬು ಬೆಳೆಗಾರರಿಗೆ ₹100 ಹೆಚ್ಚುವರಿ ಹಣ ನೇರ ಜಮಾ ಮಾಡಲು ಜಿಲ್ಲಾಧಿಕಾರಿಗಳ ಸೂಚನೆ: ಡಾ. ಕುಮಾರ
ಮಂಡ್ಯ: ರಾಜ್ಯ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳು 2025-26ನೇ ಸ... ಓದನ್ನು ಮುಂದುವರಿಸಿ
ಹವಾಮಾನ ಹೊಡೆತ: ರಾಮನಗರದಲ್ಲಿ ಮಾವು ಬೆಳೆ ಅರ್ಧಕ್ಕೆ ಕುಸಿತ
ರಾಮನಗರ: ಮಾವು ಬೆಂಗಳೂರು ದಕ್ಷಿಣ ಜಿಲ್ಲೆಯ ರೈತರ ಪ್ರಮುಖ ತೋಟಗಾರ... ಓದನ್ನು ಮುಂದುವರಿಸಿ
ರೈತರಿಗೆ ಸಿಹಿ ಸುದ್ದಿ: ಪಿಎಂ ಕಿಸಾನ್ 22ನೇ ಕಂತಿನ ₹2,000 ಮಾರ್ಚ್ 13ಕ್ಕೆ ಜಮೆ ಸಾಧ್ಯತೆ
ನವದೆಹಲಿ: PM Kisan Samman Nidhi Yojana ಯೋಜನೆಯ 22ನೇ ಕಂತಿನ... ಓದನ್ನು ಮುಂದುವರಿಸಿ
ಬಜೆಟ್‌ನಲ್ಲಿ ರೈತರಿಗೆ ಭರ್ಜರಿ ಸುದ್ದಿ: ಶೂನ್ಯ ಬಡ್ಡಿಯಲ್ಲಿ ₹30,000 ಕೋಟಿ ಸಾಲ-ಸಿಎಂ ಸಿದ್ದರಾಮಯ್ಯ ಘೋಷಣೆ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ 20... ಓದನ್ನು ಮುಂದುವರಿಸಿ
ಬೇಸಿಗೆಗೂ ಮುನ್ನವೇ ಬೆಂಗಳೂರಿನಲ್ಲಿ ಏಳನೀರು ಬೆಲೆ ಏರಿಕೆ! ರೈತರಿಗೆ ತಕ್ಕಷ್ಟು ಲಾಭ ಬರ್ತಿದೆಯೆ?
ಬೆಂಗಳೂರು: ಬೇಸಿಗೆ ಬಿಸಿಲಿಗೆ ಅಲ್ಲದೆ ಫೆಬ್ರವರಿಯಲ್ಲಿಯೇ ಏಳನೀರು... ಓದನ್ನು ಮುಂದುವರಿಸಿ
“ಲೋನ್ ಕ್ಲಿಯರ್ ಮಾಡಿದ್ರೂ ಪಹಣಿಯಲ್ಲಿ‘ಲೋನ್’ ಕಾಣ್ತಿದೆಯಾ? ಮೊಬೈಲ್ʼನಲ್ಲೇ 2 ನಿಮಿಷದಲ್ಲಿ ಸರಿಪಡಿಸಬಹುದು!
ಬ್ಯಾಂಕ್‌ಗೆ ಸಾಲ ಮರುಪಾವತಿ ಮಾಡಿದರೂ, ನಿಮ್ಮ ಜಮೀನಿನ RTC (ಪಹಣಿ) ಪತ್ರದಲ್ಲಿ ಸಾಲದ... ಓದನ್ನು ಮುಂದುವರಿಸಿ
ರೈತರಿಗೆ ಮಹತ್ವದ ಸಲಹೆ : ನಿಮ್ಮ ಕೊಳವೆ ಅಥವಾ ತೆರೆದ ಬಾವಿಯಲ್ಲಿ ನೀರು ಎಷ್ಟು ಬರುತ್ತಿದೆ? ಸರಳವಾಗಿ ತಿಳಿದುಕೊಳ್ಳಿ!
ಬೆಂಗಳೂರು: ಜಮೀನಿನಲ್ಲಿ ಕೊಳವೆಬಾವಿ ತೆರೆದು ಪಂಪ್ ಅಳವಡಿಸಿದ ಹಲವ... ಓದನ್ನು ಮುಂದುವರಿಸಿ