ಹವಾಮಾನ ಹೊಡೆತ: ರಾಮನಗರದಲ್ಲಿ ಮಾವು ಬೆಳೆ ಅರ್ಧಕ್ಕೆ ಕುಸಿತ

ರಾಮನಗರ: ಮಾವು ಬೆಂಗಳೂರು ದಕ್ಷಿಣ ಜಿಲ್ಲೆಯ ರೈತರ ಪ್ರಮುಖ ತೋಟಗಾರಿಕಾ ಬೆಳೆಯಾಗಿದ್ದು, ರಾಜ್ಯದಲ್ಲಿಯೇ ಮಾವು ಬೆಳೆಯಲ್ಲಿ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಈ ಬಾರಿ ಉತ್ತಮ ಬೆಳೆಯ ನಿರೀಕ್ಷೆಯಲ್ಲಿ ಜಿಲ್ಲೆಯ ರೈತರು ಇದ್ದರು. ಆದರೆ ಹವಾಮಾನ ವೈಪರೀತ್ಯದಿಂದಾಗಿ ಮಾವು ಬೆಳೆ ರೈತರಿಗೆ ಕೈಕೊಟ್ಟಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

 

ಜಿಲ್ಲೆಯಾದ್ಯಂತ ಮಾವಿನ ಮರಗಳಲ್ಲಿ ವ್ಯಾಪಕವಾಗಿ ಹೂ ಬಿಟ್ಟಿದ್ದರಿಂದ ಈ ಬಾರಿ ಉತ್ತಮ ಬೆಳೆ ಬರಬಹುದು ಎಂಬ ನಿರೀಕ್ಷೆ ರೈತರಿಗೆ ಇತ್ತು. ಆದರೆ ಸರಿಯಾದ ಇಬ್ಬನಿ ಬೀಳದೇ, ಮಳೆಯೂ ಬಾರದ ಪರಿಣಾಮ ಹೂಗಳು ಹಾಳಾಗಿ ಕಾಯಿ ಕಟ್ಟಿಲ್ಲ. ಇದರಿಂದ ಅರ್ಧದಷ್ಟು ಬೆಳೆ ನಷ್ಟವಾಗಿರುವುದಾಗಿ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

 

ಬೆಂಗಳೂರು ದಕ್ಷಿಣ ಜಿಲ್ಲೆಯಾದ್ಯಂತ ಸುಮಾರು 26 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಬೆಳೆಯಲಾಗುತ್ತದೆ. ರಾಮನಗರ, ಕನಕಪುರ, ಚನ್ನಪಟ್ಟಣ ಹಾಗೂ ಮಾಗಡಿ ತಾಲ್ಲೂಕುಗಳಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಮಾವು ಬೆಳೆಯುತ್ತಾರೆ. ಇಲ್ಲಿ ಬಾದಾಮಿ, ಸೇಂದೂರ, ನೀಲಂ, ಮಲ್ಲಿಕಾ, ಮಲಗೋಬ ಸೇರಿದಂತೆ ಹಲವು ತಳಿಗಳ ಮಾವನ್ನು ಬೆಳೆಯಲಾಗುತ್ತಿದೆ.

 

ಪ್ರಾರಂಭದಲ್ಲಿ ತೋಟಗಳಲ್ಲಿ ಶೇ.50ರಷ್ಟು ಹೂ ಬಂದಿದ್ದರಿಂದ ಈ ಬಾರಿ ಉತ್ತಮ ಉತ್ಪಾದನೆ ಸಾಧ್ಯ ಎಂದು ರೈತರು ನಿರೀಕ್ಷಿಸಿದ್ದರು. ಕೆಲ ದಲ್ಲಾಳಿಗಳು ಈಗಾಗಲೇ ತೋಟಗಳಿಗೆ ಭೇಟಿ ನೀಡಿ ಮುಂಗಡವಾಗಿ ಹಣ ನೀಡಿ ಮಾವು ಖರೀದಿಸಲು ಮುಂದಾಗಿದ್ದರು. ಜಿಲ್ಲೆಯ ಮಾವು ರಾಜ್ಯದ ಮಾರುಕಟ್ಟೆಗೆ ಮೊದಲಿಗೆ ಲಗ್ಗೆ ಇಡುವುದರಿಂದ ರೈತರು ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿದ್ದರು.

 

ಕಳೆದ ವರ್ಷ ಜಿಲ್ಲೆಯಲ್ಲಿ ಸುಮಾರು 1.8 ಲಕ್ಷ ಟನ್ ಮಾವು ಉತ್ಪಾದನೆ ಆಗಿತ್ತು. ಈ ಬಾರಿ 2 ಲಕ್ಷ ಟನ್ ಉತ್ಪಾದನೆ ನಿರೀಕ್ಷಿಸಲಾಗಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ಆ ನಿರೀಕ್ಷೆ ಭಂಗವಾಗಿದೆ. ಕಳೆದ ಬಾರಿ ಉತ್ತಮ ಬೆಳೆ ಬಂದರೂ ಸರಿಯಾದ ಬೆಲೆ ಸಿಗದೆ ರೈತರು ಸಂಕಷ್ಟ ಎದುರಿಸಿದ್ದರು. ಈ ಬಾರಿ ಬೆಳೆ ಸರಿಯಾಗಿ ಬಾರದೇ ಮತ್ತೊಮ್ಮೆ ರೈತರು ಸಂಕಷ್ಟಕ್ಕೆ ಸಿಲುಕಿರುವುದು ವಿಷಾದಕರ ಸಂಗತಿಯಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಮಾವಿನ ಹೂಗಳು ಹಾಳಾಗಿ ಕಾಯಿ ಕಟ್ಟದೇ, ಜಿಲ್ಲೆಯ ರೈತರು ಅರ್ಧದಷ್ಟು ಬೆಳೆ ನಷ್ಟದ ಆತಂಕ ವ್ಯಕ್ತಪಡಿಸಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

1 week ago

   
Image 1
Image 1
ಬೆಂಗಳೂರು ಗ್ರಾಮಾಂತರ

ದೊಡ್ಡಬಳ್ಳಾಪುರ ತಾಲೂಕು

ಮಳೆಯಿಂದ ರಾಗಿ ಖರೀದಿ ಸ್ಥಗಿತ: ರೈತರು ಪರದಾಟ, ಟ್ರಾಕ್ಟರ್‌ಗಳಲ್ಲಿ ಸಿಲಿಂಗ್ ಹಾನಿ ಭೀತಿ

ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ ಕೃಷಿ ಉತ್ಪನ್ನ ಮಾರುಕಟ್ಟ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ಹನೂರುಗೆ 490 ಕೋಟಿ ರೂ.: ಸಣ್ಣ ನೀರಾವರಿ ಯೋಜನೆಗಳಿಗೆ ಭರ್ಜರಿ ಅನುದಾನ

ಬೆಂಗಳೂರು: ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರು ಮತ್ತ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ಅಮನಿ ಕೆರೆ ತೋಟಿ ಏತ ಯೋಜನೆ: ಡಿಸಿಎಂ ಡಿ.ಕೆ. ಶಿವಕುಮಾರ್ ರೈತರಿಗೆ ಬಾಕಿ ಪರಿಹಾರ ಶೀಘ್ರ ಬಿಡುಗಡೆ ಭರವಸೆ

ಬೆಂಗಳೂರು: “ಅಮನಿ ಕೆರೆ ತೋಟಿ ಏತ ನೀರಾವರಿ ಯೋಜನೆಯಲ್ಲಿ ಭೂಮಿ ಕಳ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ರೈತರ ಆರ್ಥಿಕ ಸಬಲೀಕರಣಕ್ಕೆ ಸರ್ಕಾರದ ಹೊಸ ಸಹಕಾರಿ ಕೃಷಿ ಸಾಲ ಯೋಜನೆ

ಬೆಂಗಳೂರು: ಕರ್ನಾಟಕ ಸರ್ಕಾರ ರಾಜ್ಯದ ರೈತರ ಆರ್ಥಿಕ ಸ್ಥಿತಿ ಸದೃಢ... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1
ಮಂಡ್ಯ

ಕಬ್ಬು ಬೆಳೆಗಾರರಿಗೆ ₹100 ಹೆಚ್ಚುವರಿ ಹಣ ನೇರ ಜಮಾ ಮಾಡಲು ಜಿಲ್ಲಾಧಿಕಾರಿಗಳ ಸೂಚನೆ: ಡಾ. ಕುಮಾರ

ಮಂಡ್ಯ: ರಾಜ್ಯ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳು 2025-26ನೇ ಸ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1

ರೈತರಿಗೆ ಸಿಹಿ ಸುದ್ದಿ: ಪಿಎಂ ಕಿಸಾನ್ 22ನೇ ಕಂತಿನ ₹2,000 ಮಾರ್ಚ್ 13ಕ್ಕೆ ಜಮೆ ಸಾಧ್ಯತೆ

ನವದೆಹಲಿ: PM Kisan Samman Nidhi Yojana ಯೋಜನೆಯ 22ನೇ ಕಂತಿನ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1
ಬೆಂಗಳೂರು ನಗರ

ಬಜೆಟ್‌ನಲ್ಲಿ ರೈತರಿಗೆ ಭರ್ಜರಿ ಸುದ್ದಿ: ಶೂನ್ಯ ಬಡ್ಡಿಯಲ್ಲಿ ₹30,000 ಕೋಟಿ ಸಾಲ-ಸಿಎಂ ಸಿದ್ದರಾಮಯ್ಯ ಘೋಷಣೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ 20... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1
ಬೆಂಗಳೂರು ನಗರ

ಬೇಸಿಗೆಗೂ ಮುನ್ನವೇ ಬೆಂಗಳೂರಿನಲ್ಲಿ ಏಳನೀರು ಬೆಲೆ ಏರಿಕೆ! ರೈತರಿಗೆ ತಕ್ಕಷ್ಟು ಲಾಭ ಬರ್ತಿದೆಯೆ?

ಬೆಂಗಳೂರು: ಬೇಸಿಗೆ ಬಿಸಿಲಿಗೆ ಅಲ್ಲದೆ ಫೆಬ್ರವರಿಯಲ್ಲಿಯೇ ಏಳನೀರು... ಓದನ್ನು ಮುಂದುವರಿಸಿ


Edited by: ಬಾನು

2 weeks ago

   
Image 1

“ಲೋನ್ ಕ್ಲಿಯರ್ ಮಾಡಿದ್ರೂ ಪಹಣಿಯಲ್ಲಿ‘ಲೋನ್’ ಕಾಣ್ತಿದೆಯಾ? ಮೊಬೈಲ್ʼನಲ್ಲೇ 2 ನಿಮಿಷದಲ್ಲಿ ಸರಿಪಡಿಸಬಹುದು!

ಬ್ಯಾಂಕ್‌ಗೆ ಸಾಲ ಮರುಪಾವತಿ ಮಾಡಿದರೂ, ನಿಮ್ಮ ಜಮೀನಿನ RTC (ಪಹಣಿ) ಪತ್ರದಲ್ಲಿ ಸಾಲದ... ಓದನ್ನು ಮುಂದುವರಿಸಿ


Edited by: ಬಾನು

2 weeks ago

   
Image 1
ಬೆಂಗಳೂರು ನಗರ

ರೈತರಿಗೆ ಮಹತ್ವದ ಸಲಹೆ : ನಿಮ್ಮ ಕೊಳವೆ ಅಥವಾ ತೆರೆದ ಬಾವಿಯಲ್ಲಿ ನೀರು ಎಷ್ಟು ಬರುತ್ತಿದೆ? ಸರಳವಾಗಿ ತಿಳಿದುಕೊಳ್ಳಿ!

ಬೆಂಗಳೂರು: ಜಮೀನಿನಲ್ಲಿ ಕೊಳವೆಬಾವಿ ತೆರೆದು ಪಂಪ್ ಅಳವಡಿಸಿದ ಹಲವ... ಓದನ್ನು ಮುಂದುವರಿಸಿ


Edited by: ಬಾನು

3 weeks ago

   
Image 1