ಸಫಾರಿ ಶೇ.50ರಷ್ಟರಲ್ಲಿ ಪುನಾರಂಭ: ರೈತರು ಅರಣ್ಯ ಕಚೇರಿಗೆ ಮುತ್ತಿಗೆ ಹಾಕುವ ಎಚ್ಚರಿಕೆ
ಬೆಂಗಳೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನವನಗಳಲ್ಲಿ ಅರಣ್ಯ ಇಲಾಖೆ ನಾಳೆಯಿಂದಲೇ ಸಫಾರಿಯನ್ನು ಪುನಾರಂಭಿಸಲು ತೀರ್ಮಾನಿಸಿದೆ. ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅರಣ್ಯ ಸಚಿವ ಈಶ್ವರ ಖಂಡ್ರೆ, ತಾತ್ಕಾಲಿಕ ಸ್ಥಗಿತದ ಬಳಿಕ ರಚಿಸಿದ ತಾಂತ್ರಿಕ ಸಮಿತಿಯ ಮಧ್ಯಂತರ ವರದಿ ಆಧರಿಸಿ ಶೇ.50ರಷ್ಟು ಸಫಾರಿಗೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದರು. ಸಂಪೂರ್ಣ ವರದಿ ಬಂದ ಬಳಿಕ ಪೂರ್ಣ ಪ್ರಮಾಣದ ಅನುಮತಿ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಈ ಹಿಂದೆ ಬಳಸುತ್ತಿದ್ದ ಶೇ.50 ವಾಹನಗಳನ್ನೇ ಮುಂದುವರಿಸಲು ತೀರ್ಮಾನಿಸಲಾಗಿದ್ದು, ಸಫಾರಿ ಅವಧಿಯಲ್ಲಿಯೂ ಬದಲಾವಣೆ ಮಾಡಲಾಗಿದೆ. ಬಂಡೀಪುರದಲ್ಲಿ ಸಫಾರಿ ಸಮಯವನ್ನು 8 ಗಂಟೆಯಿಂದ 5 ಗಂಟೆಗೆ ಇಳಿಕೆ ಮಾಡಲಾಗಿದ್ದು, ಸುಂಕದಕಟ್ಟೆಯಲ್ಲಿ 6 ಗಂಟೆ ಹಾಗೂ ನಾಗರಹೊಳೆಯಲ್ಲಿ ಮೊದಲ ಹಂತದಲ್ಲಿ 4 ಗಂಟೆ ಕಾಲ ಮಾತ್ರ ಸಫಾರಿಗೆ ಅವಕಾಶ ನೀಡಲಾಗಿದೆ. ಜೊತೆಗೆ ರಿಸಾರ್ಟ್‌ಗಳು ಮತ್ತು ಹೋಂಸ್ಟೇಗಳಲ್ಲಿ ಕ್ಯಾಂಪ್‌ಫೈರ್ ನಿಷೇಧಿಸಲಾಗಿದೆ.
ಬಂಡೀಪುರ ಸಫಾರಿಗೆ ಗ್ರೀನ್ ಸಿಗ್ನಲ್ ಸಿಕ್ಕ ಬೆನ್ನಲ್ಲೇ ಗಡಿನಾಡಿನ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಳೆ ಬಂಡೀಪುರದ ಮೇಲುಕಾಮನಹಳ್ಳಿ ಅರಣ್ಯ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ. ಹುಲಿ ಹಾಗೂ ಚಿರತೆ ದಾಳಿಯಿಂದ ರಾಜ್ಯದ ಹಲವು ಭಾಗಗಳಲ್ಲಿ ಸಾವು–ನೋವುಗಳು ಹೆಚ್ಚಿದ ಹಿನ್ನೆಲೆ ಸಫಾರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು.
ಇದರ ಪರಿಣಾಮವಾಗಿ ಕೇರಳ ಮತ್ತು ತಮಿಳುನಾಡು ಸೇರಿದಂತೆ ಇತರ ರಾಜ್ಯಗಳಿಗೆ ಪ್ರವಾಸೋದ್ಯಮ ಲಾಭವಾಗಿದ್ದು, ರಣಥಂಬೋರ್ ರಾಷ್ಟ್ರೀಯ ಉದ್ಯಾನವನ ಮತ್ತು ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನಗಳಲ್ಲಿ ಸಫಾರಿ ಬುಕ್ಕಿಂಗ್ ಹೆಚ್ಚಾಗಿದೆ ಎಂದು ಕರ್ನಾಟಕ ಇಕೋ-ಟೂರಿಸಂ ರೆಸಾರ್ಟ್ಸ್ ಅಸೋಸಿಯೇಶನ್ ದೂರಿದೆ. ಬಂಡೀಪುರ–ನಾಗರಹೊಳೆ ವ್ಯಾಪ್ತಿಯ ಸುಮಾರು 35 ರಿಸಾರ್ಟ್‌ಗಳಿಗೆ ದಿನಕ್ಕೆ ಸರಾಸರಿ 3 ಕೋಟಿ ರೂ. ನಷ್ಟವಾಗುತ್ತಿದ್ದು, ಪರಿಸರ ಪ್ರವಾಸೋದ್ಯಮದ ಮೇಲೆ ಅವಲಂಬಿತ 8,000ಕ್ಕೂ ಹೆಚ್ಚು ಜನರ ಜೀವನೋಪಾಯದ ಮೇಲೆ ಪರಿಣಾಮ ಬಿದ್ದಿದೆ ಎಂದು ವರದಿಯಾಗಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ಅಮೆರಿಕ ರಾಯಭಾರಿ ಸರ್ಜಿಯೋ ಗೋರ್: ಎಐ, ಪಾಲುದಾರಿಕೆ ಚರ್ಚೆ – ನಂತರ ಮಸಾಲೆ ದೋಸೆ, ಆಟೋ ರೈಡ್!
ಬೆಂಗಳೂರು: ಅಮೆರಿಕದ ಸರ್ಜಿಯೋ ಗೋರ್ ಮಂಗಳವಾರ ಸಿದ್ದರಾಮಯ್ಯ ಅವರನ... ಓದನ್ನು ಮುಂದುವರಿಸಿ
ಬಿಜೆಪಿ ನಾಯಕ ಆರ್. ಅಶೋಕ್: ಬಾಂಗ್ಲಾ ನಿವಾಸಿಗಳ ವಾಸ್ತವ್ಯ ಬಹಿರಂಗಪಡಿಸಬೇಕು – ಕಂಗ್ರೆಸಿಗೆ ಒತ್ತಾಯ
ಬೆಂಗಳೂರು: ನಗರದಲ್ಲಿನ ಕೋಗಿಲು ಕ್ರಾಸ್ ಪ್ರದೇಶ ಮತ್ತೆ ರಾಜಕೀಯ ಆ... ಓದನ್ನು ಮುಂದುವರಿಸಿ
ವಿಧಾನಸೌಧ ಮಾಧ್ಯಮ ನಿರ್ಬಂಧ-“ಪ್ರಶ್ನೆ ಕೇಳುವ ಪತ್ರಕರ್ತರನ್ನು ಕಂಡರೆ ಸರ್ಕಾರಕ್ಕೆ ನಡುಕ ಏಕೆ?” ಜೆಡಿಎಸ್ ಕಿಡಿ
ಬೆಂಗಳೂರು: ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧ ಹೇರ... ಓದನ್ನು ಮುಂದುವರಿಸಿ
ವಿಧಾನಸೌಧದಲ್ಲಿ ಮಾಧ್ಯಮ ನಿರ್ಬಂಧ: ನಿಖಿಲ್ ಕುಮಾರಸ್ವಾಮಿ ತೀವ್ರ ಆಕ್ರೋಶ
ಬೆಂಗಳೂರು: ನಿಖಿಲ್ ಕುಮಾರಸ್ವಾಮಿ, ಜನತಾ ದಳ ಯುವ ಘಟಕದ ಅಧ್ಯಕ್ಷರ... ಓದನ್ನು ಮುಂದುವರಿಸಿ
ಕಸ ವಿಲೇವಾರಿಗೆ ಅಡ್ಡಿಪಡಿಸುವವರ ಶಾಸಕರ ಮನೆ–ಕಚೇರಿಯ ಮುಂದೆ ಕಸ ಸುರಿಯುತ್ತೇವೆ, DCM ಎಚ್ಚರಿಕೆ ಬಲ
ಬೆಂಗಳೂರು: ಡಿ.ಕೆ. ಶಿವಕುಮಾರ್ ಡಿಸಿಎಂ ಅವರು ಕಸದ ವಿಲೇವಾರಿಗೆ ಅ... ಓದನ್ನು ಮುಂದುವರಿಸಿ
ಸಿಎಂಗೆ ವಿಷಯ ತಂದು ಸರಿಪಡಿಸುವ ಭರವಸೆ: ವಿಧಾನಸೌಧ ಮಾಧ್ಯಮ ನಿರ್ಬಂಧಕ್ಕೆ ಚಲುವರಾಯಸ್ವಾಮಿ ಪ್ರತಿಕ್ರಿಯೆ
ಬೆಂಗಳೂರು: N. ಚೆಲುವರಾಯಸ್ವಾಮಿ ಸಚಿವರು, ವಿಧಾನಸೌಧದಲ್ಲಿ ಮಾಧ್ಯ... ಓದನ್ನು ಮುಂದುವರಿಸಿ
ವಿಧಾನಸೌಧದಲ್ಲಿ ಮಾಧ್ಯಮ ನಿರ್ಬಂಧ: ಬಿ.ವೈ. ವಿಜಯೇಂದ್ರ ತಕ್ಷಣ ಹಿಂಪಡೆಯಲು ಆಗ್ರಹ
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರವು ವಿಧಾನಸೌಧದೊಳಗೆ ಮಾಧ್ಯ... ಓದನ್ನು ಮುಂದುವರಿಸಿ
ಗ್ರಾಹಕರಿಗೆ ನ್ಯಾಯ: ಚೆಕ್ ಬಾಕಿ ಮೊತ್ತ 4.95 ಲಕ್ಷ ರೂ. ಬಡ್ಡಿ ಸಹಿತ ಪಾವತಿಸಲು ಕರ್ನಾಟಕ ಬ್ಯಾಂಕ್‌ಗೆ ನ್ಯಾಯಾಲಯದ ಆದೇಶ
ಶಿವಮೊಗ್ಗ: ನಗರದಲ್ಲಿ 5.50 ಲಕ್ಷ ರೂಪಾಯಿ ಚೆಕ್ ಜಮೆ ಸಂಬಂಧಿತ ಸೇ... ಓದನ್ನು ಮುಂದುವರಿಸಿ
ಗುಲಾಬಿ ವಿತರಣೆಯಲ್ಲಿ ರೆಕಾರ್ಡ್: ಬೆಂಗಳೂರು ವಿಮಾನ ನಿಲ್ದಾಣದ ಅದ್ಭುತ ಸಾಧನೆ
ಬೆಂಗಳೂರು: ಪ್ರೇಮಿಗಳ ದಿನದ ಅಂಗವಾಗಿ ಜಾಗತಿಕ ಬೇಡಿಕೆಯನ್ನು ಯಶಸ್... ಓದನ್ನು ಮುಂದುವರಿಸಿ
ಮತ್ತೆ ಜೈಲಿಗೆ ಹೋಗ್ತಾರಾ ಸೂರಜ್ ರೇವಣ್ಣ? ಅರ್ಜಿ ವಜಾದಿಂದ ಕಾನೂನು ಸಂಕಷ್ಟ
ಬೆಂಗಳೂರು: ಜೆಡಿಎಸ್ ಎಂಎಲ್‌ಸಿ ಡಾ. ಸೂರಜ್ ರೇವಣ್ಣ ವಿರುದ್ಧ ದಾಖ... ಓದನ್ನು ಮುಂದುವರಿಸಿ