ಮತ್ತೆ ಜೈಲಿಗೆ ಹೋಗ್ತಾರಾ ಸೂರಜ್ ರೇವಣ್ಣ? ಅರ್ಜಿ ವಜಾದಿಂದ ಕಾನೂನು ಸಂಕಷ್ಟ
ಬೆಂಗಳೂರು: ಜೆಡಿಎಸ್ ಎಂಎಲ್‌ಸಿ ಡಾ. ಸೂರಜ್ ರೇವಣ್ಣ ವಿರುದ್ಧ ದಾಖಲಾಗಿರುವ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಿಂದ ತಮ್ಮನ್ನು ಕೈಬಿಡುವಂತೆ ಕೋರಿ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾ ಮಾಡಿದೆ.
ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಿಂದ ಬಿಡುಗಡೆ ಮಾಡುವಂತೆ ಸೂರಜ್ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ವಿಶೇಷ ಕೋರ್ಟ್ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಆದೇಶ ಹೊರಡಿಸಿದ್ದಾರೆ. ಜೆಡಿಎಸ್ ಕಾರ್ಯಕರ್ತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಸೂರಜ್ ರೇವಣ್ಣರನ್ನು ಬಂಧಿಸಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿತ್ತು. ಬಳಿಕ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಸುಮಾರು ಒಂದು ತಿಂಗಳ ಕಾಲ ಜೈಲಿನಲ್ಲಿದ್ದ ಅವರು ನಂತರ ಬಿಡುಗಡೆಗೊಂಡಿದ್ದರು.
ಪ್ರಕರಣದ ಹಿನ್ನೆಲೆ
2024ರ ಜೂನ್ 22ರಂದು ಸಂತ್ರಸ್ತನು ಸೂರಜ್ ರೇವಣ್ಣ ಅವರು ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರು ನೀಡಿದ್ದನು. ಈ ದೂರಿನ ಆಧಾರದಲ್ಲಿ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಿವಿಧ ಕಲಂಗಳು ಅಡಿ ಪ್ರಕರಣ ದಾಖಲಿಸಲಾಗಿತ್ತು. ಆರಂಭದಲ್ಲಿ ಸಂತ್ರಸ್ತನು ಹಾಸನ ಜಿಲ್ಲಾ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದರೂ, ನಂತರ ಪ್ರಕರಣವನ್ನು ಹೊಳೆನರಸೀಪುರ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿತ್ತು. ಜೂನ್ 23ರಂದು ಸೂರಜ್ ರೇವಣ್ಣರನ್ನು ಬಂಧಿಸಲಾಗಿತ್ತು.
ಇದೇ ವೇಳೆ, ಸುಳ್ಳು ಆರೋಪ ಮಾಡಿ ಹಣಕ್ಕಾಗಿ ಪೀಡಿಸಲಾಗಿದೆ ಎಂದು ಸೂರಜ್ ರೇವಣ್ಣ ಅವರ ಆಪ್ತ ಶಿವಕುಮಾರ್ ಸಂತ್ರಸ್ತನ ವಿರುದ್ಧ ಪ್ರತಿ ದೂರು ದಾಖಲಿಸಿದ್ದರು. ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಐದು ಕೋಟಿ ರೂಪಾಯಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಈ ಬೆಳವಣಿಗೆಗಳ ಹಿನ್ನೆಲೆ ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿತ್ತು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ಅಮೆರಿಕ ರಾಯಭಾರಿ ಸರ್ಜಿಯೋ ಗೋರ್: ಎಐ, ಪಾಲುದಾರಿಕೆ ಚರ್ಚೆ – ನಂತರ ಮಸಾಲೆ ದೋಸೆ, ಆಟೋ ರೈಡ್!
ಬೆಂಗಳೂರು: ಅಮೆರಿಕದ ಸರ್ಜಿಯೋ ಗೋರ್ ಮಂಗಳವಾರ ಸಿದ್ದರಾಮಯ್ಯ ಅವರನ... ಓದನ್ನು ಮುಂದುವರಿಸಿ
ಬಿಜೆಪಿ ನಾಯಕ ಆರ್. ಅಶೋಕ್: ಬಾಂಗ್ಲಾ ನಿವಾಸಿಗಳ ವಾಸ್ತವ್ಯ ಬಹಿರಂಗಪಡಿಸಬೇಕು – ಕಂಗ್ರೆಸಿಗೆ ಒತ್ತಾಯ
ಬೆಂಗಳೂರು: ನಗರದಲ್ಲಿನ ಕೋಗಿಲು ಕ್ರಾಸ್ ಪ್ರದೇಶ ಮತ್ತೆ ರಾಜಕೀಯ ಆ... ಓದನ್ನು ಮುಂದುವರಿಸಿ
ವಿಧಾನಸೌಧ ಮಾಧ್ಯಮ ನಿರ್ಬಂಧ-“ಪ್ರಶ್ನೆ ಕೇಳುವ ಪತ್ರಕರ್ತರನ್ನು ಕಂಡರೆ ಸರ್ಕಾರಕ್ಕೆ ನಡುಕ ಏಕೆ?” ಜೆಡಿಎಸ್ ಕಿಡಿ
ಬೆಂಗಳೂರು: ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧ ಹೇರ... ಓದನ್ನು ಮುಂದುವರಿಸಿ
ವಿಧಾನಸೌಧದಲ್ಲಿ ಮಾಧ್ಯಮ ನಿರ್ಬಂಧ: ನಿಖಿಲ್ ಕುಮಾರಸ್ವಾಮಿ ತೀವ್ರ ಆಕ್ರೋಶ
ಬೆಂಗಳೂರು: ನಿಖಿಲ್ ಕುಮಾರಸ್ವಾಮಿ, ಜನತಾ ದಳ ಯುವ ಘಟಕದ ಅಧ್ಯಕ್ಷರ... ಓದನ್ನು ಮುಂದುವರಿಸಿ
ಕಸ ವಿಲೇವಾರಿಗೆ ಅಡ್ಡಿಪಡಿಸುವವರ ಶಾಸಕರ ಮನೆ–ಕಚೇರಿಯ ಮುಂದೆ ಕಸ ಸುರಿಯುತ್ತೇವೆ, DCM ಎಚ್ಚರಿಕೆ ಬಲ
ಬೆಂಗಳೂರು: ಡಿ.ಕೆ. ಶಿವಕುಮಾರ್ ಡಿಸಿಎಂ ಅವರು ಕಸದ ವಿಲೇವಾರಿಗೆ ಅ... ಓದನ್ನು ಮುಂದುವರಿಸಿ
ಸಿಎಂಗೆ ವಿಷಯ ತಂದು ಸರಿಪಡಿಸುವ ಭರವಸೆ: ವಿಧಾನಸೌಧ ಮಾಧ್ಯಮ ನಿರ್ಬಂಧಕ್ಕೆ ಚಲುವರಾಯಸ್ವಾಮಿ ಪ್ರತಿಕ್ರಿಯೆ
ಬೆಂಗಳೂರು: N. ಚೆಲುವರಾಯಸ್ವಾಮಿ ಸಚಿವರು, ವಿಧಾನಸೌಧದಲ್ಲಿ ಮಾಧ್ಯ... ಓದನ್ನು ಮುಂದುವರಿಸಿ
ವಿಧಾನಸೌಧದಲ್ಲಿ ಮಾಧ್ಯಮ ನಿರ್ಬಂಧ: ಬಿ.ವೈ. ವಿಜಯೇಂದ್ರ ತಕ್ಷಣ ಹಿಂಪಡೆಯಲು ಆಗ್ರಹ
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರವು ವಿಧಾನಸೌಧದೊಳಗೆ ಮಾಧ್ಯ... ಓದನ್ನು ಮುಂದುವರಿಸಿ
ಸಫಾರಿ ಶೇ.50ರಷ್ಟರಲ್ಲಿ ಪುನಾರಂಭ: ರೈತರು ಅರಣ್ಯ ಕಚೇರಿಗೆ ಮುತ್ತಿಗೆ ಹಾಕುವ ಎಚ್ಚರಿಕೆ
ಬೆಂಗಳೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಮತ್ತು ಬಂಡೀಪುರ ರಾಷ... ಓದನ್ನು ಮುಂದುವರಿಸಿ
ಗ್ರಾಹಕರಿಗೆ ನ್ಯಾಯ: ಚೆಕ್ ಬಾಕಿ ಮೊತ್ತ 4.95 ಲಕ್ಷ ರೂ. ಬಡ್ಡಿ ಸಹಿತ ಪಾವತಿಸಲು ಕರ್ನಾಟಕ ಬ್ಯಾಂಕ್‌ಗೆ ನ್ಯಾಯಾಲಯದ ಆದೇಶ
ಶಿವಮೊಗ್ಗ: ನಗರದಲ್ಲಿ 5.50 ಲಕ್ಷ ರೂಪಾಯಿ ಚೆಕ್ ಜಮೆ ಸಂಬಂಧಿತ ಸೇ... ಓದನ್ನು ಮುಂದುವರಿಸಿ
ಗುಲಾಬಿ ವಿತರಣೆಯಲ್ಲಿ ರೆಕಾರ್ಡ್: ಬೆಂಗಳೂರು ವಿಮಾನ ನಿಲ್ದಾಣದ ಅದ್ಭುತ ಸಾಧನೆ
ಬೆಂಗಳೂರು: ಪ್ರೇಮಿಗಳ ದಿನದ ಅಂಗವಾಗಿ ಜಾಗತಿಕ ಬೇಡಿಕೆಯನ್ನು ಯಶಸ್... ಓದನ್ನು ಮುಂದುವರಿಸಿ