ಸಂಪುಟ ವಿಸ್ತರಣೆ ಚರ್ಚೆ ಮಧ್ಯೆ ಡಿ.ಕೆ.ಶಿ. ಮಾತು: ಗೂಟ ಹೊಡೆಯುವ ರಾಜಕಾರಣ ಎಷ್ಟು ದಿನ?
ಬೆಂಗಳೂರು: ಡಿ. ಕೆ. ಶಿವಕುಮಾರ್ ಅವರು, “ಮಹದೇವಪ್ಪ ಅವರು ಕೂಡ ನಮ್ಮ ಹೈಕಮಾಂಡ್ ಆಗಿರುವುದರಿಂದ ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಅವರಿಗೆ ತಿಳಿದಿರಬಹುದು. ಹೀಗಾಗಿ ಅವರು ದಲಿತ ಸಿಎಂ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಆದರೆ ಈ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ” ಎಂದು ಸ್ಪಷ್ಟಪಡಿಸಿದರು. ಕುಮಾರಪಾರ್ಕ್ ಸರಕಾರಿ ನಿವಾಸ ಹಾಗೂ ಸುತ್ತೂರು ಸದನದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ರಾಜಕಾರಣದಲ್ಲಿ ಬದಲಾವಣೆ, ಅಧಿಕಾರ ಹಸ್ತಾಂತರ ಹಾಗೂ ದಲಿತ ಸಿಎಂ ಚರ್ಚೆ ಕುರಿತು ಕೇಳಿದಾಗ, “ಮಹದೇವಪ್ಪ ಅವರ ಹೇಳಿಕೆ ನೋಡಿದ್ದೇನೆ. ಅದರ ಹೊರತಾಗಿ ಯಾವುದೇ ಚರ್ಚೆ ನಡೆದಿಲ್ಲ” ಎಂದರು.
ಇಲಾಖೆಯ ಕೆಲಸಕ್ಕಾಗಿ ದೆಹಲಿಗೆ ಭೇಟಿ
ಹೈಕಮಾಂಡ್ ಕರೆಸಿದೆಯೇ ಎಂಬ ಪ್ರಶ್ನೆಗೆ, “ನನಗೆ ಯಾವುದೇ ಕರೆ ಬಂದಿಲ್ಲ. ನಮ್ಮ ಇಲಾಖೆಗೆ ಸಂಬಂಧಿಸಿದ ಕೆಲಸಗಳಿಗಾಗಿ ದೆಹಲಿಗೆ ಹೋಗಬೇಕಾಗಿದೆ. ನಗರಾಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ₹1 ಲಕ್ಷ ಕೋಟಿ ಅನುದಾನ ನೀಡಲಾಗುತ್ತಿದೆ. ದೊಡ್ಡ ನಗರಗಳಿಗೆ ನೀಡುವುದಿಲ್ಲ ಎನ್ನುತ್ತಿದ್ದಾರೆ. ಈ ಬಗ್ಗೆ ಚರ್ಚಿಸಿ 2 ಮತ್ತು 3ನೇ ಹಂತದ ನಗರಗಳ ಅಭಿವೃದ್ಧಿಗೆ ಪ್ರಸ್ತಾವನೆ ಸಿದ್ಧಪಡಿಸಲು ಸೂಚಿಸುತ್ತೇನೆ” ಎಂದು ಹೇಳಿದರು.
ಸಚಿವರು, ಶಾಸಕರನ್ನು ನಿಯಂತ್ರಿಸಬೇಕಿರುವುದು ಸಿಎಂ
ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಸಚಿವರ ಹೇಳಿಕೆಗಳ ಬಗ್ಗೆ ಮೌನವಾಗಿದ್ದೀರಾ ಎಂಬ ಪ್ರಶ್ನೆಗೆ, “ಸಚಿವರನ್ನು ನಿಯಂತ್ರಿಸಬೇಕಿರುವುದು ಮುಖ್ಯಮಂತ್ರಿಗಳು. ಶಾಸಕರನ್ನೂ ಅವರೇ ನೋಡಿಕೊಳ್ಳಬೇಕು. ಪಕ್ಷದ ವಿಚಾರವಾಗಿ ದೆಹಲಿಗೆ ಮಾಹಿತಿ ನೀಡುವ ಕೆಲಸ ನಾನು ಮಾಡುತ್ತಿದ್ದೇನೆ” ಎಂದರು. ಸತೀಶ್ ಜಾರಕಿಹೊಳಿ ಕುರಿತು ಕೇಳಿದಾಗ, “ಅವರು ನಮ್ಮ ಹಿರಿಯ ನಾಯಕರು. ವಾರಕ್ಕೊಮ್ಮೆ ಮಾತನಾಡುತ್ತೇವೆ. ನಾವು ಸಮಾನ ಮನಸ್ಕರು. ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಲು ಯೋಜನೆ ರೂಪಿಸುತ್ತಿದ್ದೇವೆ” ಎಂದು ಹೇಳಿದರು.
ಹೊಸ ಪೀಳಿಗೆಗೆ ಅವಕಾಶ
ನೂತನ ಶಾಸಕರಿಗೆ ಮಂತ್ರಿ ಸ್ಥಾನ ನೀಡಬೇಕು ಎಂಬ ಪತ್ರ ಕುರಿತು ಕೇಳಿದಾಗ, “ನನಗೆ ಆ ಪತ್ರ ತಲುಪಿಲ್ಲ. ಎಲ್ಲರಿಗೂ ಮಂತ್ರಿಯಾಗುವ ಆಸೆ ಇರುತ್ತದೆ. ನಾನು ಮೊದಲ ಬಾರಿಗೆ ಶಾಸಕರಾದಾಗಲೇ ಮಂತ್ರಿಯಾಗಿದ್ದೆ. ಹೊಸ ಪೀಳಿಗೆ, ಹೊಸ ಆಲೋಚನೆಗಳು ಬರಬೇಕು. ಹೊಸಬರನ್ನು ನಾವು ತಯಾರು ಮಾಡಬೇಕು. ಈ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ” ಎಂದರು. ಮಂತ್ರಿಮಂಡಲ ವಿಸ್ತರಣೆ ಕುರಿತು, “ನಾನು ಮಂತ್ರಿಮಂಡಲ ಮಾಡುತ್ತೇನೆ ಎಂದು ಹೇಳಿಲ್ಲ. ಸಂಪುಟ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಅದಕ್ಕಾಗಿ ಕೆಲವರು ಪತ್ರ ಬರೆಯುತ್ತಾರೆ, ದೆಹಲಿಗೆ ಹೋಗುತ್ತಾರೆ. ಅವರಿಗೂ ಆಸೆ ಇರುತ್ತದೆ” ಎಂದು ಹೇಳಿದರು.
ಅಭಿವೃದ್ಧಿ ಕಾರ್ಯಗಳು
ಬೆಂಗಳೂರಿನ ರಸ್ತೆ ಅಭಿವೃದ್ಧಿಗೆ ₹5065 ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಮುಖ್ಯಮಂತ್ರಿಗಳಿಂದ ₹2000 ಕೋಟಿ ಅನುದಾನ ದೊರೆತಿದೆ. 75% ಕಾಮಗಾರಿ ಪೂರ್ಣಗೊಂಡಿದ್ದು, ಏಪ್ರಿಲ್ ಅಂತ್ಯದೊಳಗೆ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಬೇಡ ಎಂದು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು. 10 ಲಕ್ಷ ಇ-ಖಾತಾ ದಾಖಲೆ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. 30 ಸಾವಿರ ಬೀದಿವ್ಯಾಪಾರಿಗಳು ನೋಂದಣಿ ಮಾಡಿಕೊಂಡಿದ್ದು, ಅವರಿಗೆ ವ್ಯಾಪಾರ ವಾಹನ ನೀಡುವ ಕಲ್ಯಾಣ ಯೋಜನೆ ಜಾರಿಗೆ ತರಲಾಗುವುದು ಎಂದು ತಿಳಿಸಿದರು. ಖಾಲಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಬಿಜೆಪಿ ಪ್ರತಿಭಟನೆ ಕುರಿತು, “ಶೀಘ್ರದಲ್ಲೇ ನೇಮಕಾತಿ ಮಾಡುತ್ತೇವೆ. ನಿರುದ್ಯೋಗಿ ಯುವಕರಿಗೆ ತೊಂದರೆ ಆಗಬಾರದು ಎಂದು ಯುವನಿಧಿ ಯೋಜನೆ ನೀಡಿದ್ದೇವೆ. ಒಳಮೀಸಲಾತಿ ಸೇರಿದಂತೆ ಕೆಲವು ವಿಚಾರಗಳಿಂದ ವಿಳಂಬವಾಗಿದೆ” ಎಂದು ಹೇಳಿದರು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಅನುಮತಿ ಬದ್ಧವಿಲ್ಲದ ಯುವಕರು ಬೀದಿಗೆ ಇಳಿದು ಖಾಲಿ ಹುದ್ದೆ ಹೋರಾಟ
ಧಾರವಾಡ : ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಶ್ರೀನಗರ ವೃತ್ತದಲ... ಓದನ್ನು ಮುಂದುವರಿಸಿ
ರಾಮನಗರ ಮಾಯಗಾನಹಳ್ಳಿಯಲ್ಲಿ ಕಾಡಾನೆಗಳ ಪ್ರವೇಶ: ಸಿಸಿ ಕ್ಯಾಮೆರಾದಲ್ಲಿ ಸೆರೆ, ಗ್ರಾಮಸ್ಥರಲ್ಲಿ ಆತಂಕ
ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲ್ಲೂಕಿನ ಮಾಯಗಾನ... ಓದನ್ನು ಮುಂದುವರಿಸಿ
ಕೊಪ್ಪಳ ರೈತ ಪ್ರತಿಭಟನೆ: ಕಾರ್ಖಾನೆ ವಿಸ್ತರಣೆಗೆ ಆಕ್ರೋಶ, ಟ್ರ್ಯಾಕ್ಟರ್ ಶವಯಾತ್ರೆ
ಕೊಪ್ಪಳ: ಜಿಲ್ಲೆಯ ಬಲ್ಡೋಟಾ ಕಾರ್ಖಾನೆ ವಿಸ್ತರಣೆಯನ್ನು ವಿರೋಧಿಸಿ... ಓದನ್ನು ಮುಂದುವರಿಸಿ
ಶಿವಮೊಗ್ಗ ಬಾಲಕ ಸಂಕೇತ್ ಕೊಲೆ: ಸರ್ಕಾರ 15 ಲಕ್ಷ ರೂ. ಪರಿಹಾರ ಘೋಷಣೆ
ಶಿವಮೊಗ್ಗ: ಕೊಲೆಯಾದ ಬಾಲಕ ಸಂಕೇತ್ ಕುಟುಂಬಕ್ಕೆ ರಾಜ್ಯ ಸರ್ಕಾರ ಒ... ಓದನ್ನು ಮುಂದುವರಿಸಿ
ಶಿರಸಿ
ಮುರೆಗಾರ್ ಜಲಪಾತದಲ್ಲಿ ನದಿ ತಿರುವು ಯೋಜನೆ ವಿರುದ್ಧ ಗಂಗಾರತಿ ಮತ್ತು ಸತ್ಯಾಗ್ರಹ
ಶಿರಸಿ, ಉತ್ತರ ಕರ್ನಾಟಕ: ಬೇಡ್ತಿ–ಶರಾವತಿ ನದಿ ತಿರುವು ಯೋಜನೆಯ ಭ... ಓದನ್ನು ಮುಂದುವರಿಸಿ
“ಆಡಿಯೋ ಸಂಪೂರ್ಣ ನಿಜ, ತನಿಖೆ ನಂತರ ಸತ್ಯ ಹೊರಬರುತ್ತದೆ” – ಸ್ನೇಹಮಯಿ ಕೃಷ್ಣ
ಬೆಂಗಳೂರು : ನಟ ನಟೇಶ್ ನೀಡಿದ ದೂರಿನ ಹಿನ್ನೆಲೆಯಲ್ಲಿ ನೋಟಿಸ್ ಪಡ... ಓದನ್ನು ಮುಂದುವರಿಸಿ
ಬಿಜೆಪಿ ಸಂಘಟನೆಗೆ ಬೂಸ್ಟ್! ಫೆಬ್ರವರಿ 26ಕ್ಕೆ ರಾಜ್ಯಮಟ್ಟದ ಪದಾಧಿಕಾರಿ ತರಬೇತಿ – ಪಿ. ರಾಜೀವ್
ಬೆಂಗಳೂರು: ಫೆಬ್ರವರಿ 26 ರಂದು ಬೆಂಗಳೂರು ಸ್ಕೌಟ್ಸ್ ಮತ್ತು ಗೈಡ್... ಓದನ್ನು ಮುಂದುವರಿಸಿ
ಸಂಕೇತ್ ಕೊಲೆ ಪ್ರಕರಣಕ್ಕೆ ಹೊಸ ತಿರುವು? ಆಳವಾದ ತನಿಖೆ ಬೇಕೆಂದ ಸಿ.ಟಿ. ರವಿ
ಬೆಂಗಳೂರು: ಸಿ.ಟಿ. ರವಿ ಅವರು ಶಿವಮೊಗ್ಗದಲ್ಲಿ 10ನೇ ತರಗತಿ ವಿದ್... ಓದನ್ನು ಮುಂದುವರಿಸಿ
“ನಾವ್ ಯಾರ್ ಗೊತ್ತಾ? ನಿನ್ನ ತಲೆ ಒಡಿತಿವಿ” – ಯೂತ್ ಕಾಂಗ್ರೆಸ್ ಉಪಾಧ್ಯಕ್ಷೆ ಮೇಲೆ ಲಾಂಗ್ ಹಿಡಿದು ದಾಳಿ ಯತ್ನ, ವಿಡಿಯೋ ವೈರಲ್
ಬೆಂಗಳೂರು: Indian Youth Congress ಉಪಾಧ್ಯಕ್ಷೆ ದಿವ್ಯಾ ಆರ್.ಕ... ಓದನ್ನು ಮುಂದುವರಿಸಿ
ಪ್ರತಿಭಟನೆಗಳ ತಾಣ ಫ್ರೀಡಂ ಪಾರ್ಕ್ ಈಗ ಬಾಡಿಗೆಗೆ?
ಬೆಂಗಳೂರು: ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರು... ಓದನ್ನು ಮುಂದುವರಿಸಿ