ರೈತರ ಮಗನನ್ನು ಮದುವೆಯಾದ ಮಹಿಳೆಗೆ ಸರ್ಕಾರಿ ಉದ್ಯೋಗದಲ್ಲಿ 20% ಮೀಸಲು: CMಗೆ ರೈತರ ಮನವಿ
ಬೆಂಗಳೂರು: ರೈತರ ಮಗನನ್ನು ವಿವಾಹವಾಗುವ ಮಹಿಳೆಯರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇ.20ರಷ್ಟು ಮೀಸಲು ನೀಡುವ ಯೋಜನೆ ಜಾರಿಗೊಳಿಸಬೇಕು ಎಂದು ವಿವಿಧ ರೈತ ಸಂಘಟನೆಗಳು ಸರ್ಕಾರದ ಮುಂದೆ ಬೇಡಿಕೆ ಇಟ್ಟಿವೆ. ಮುಖ್ಯಮಂತ್ರಿ Siddaramaiah ಅವರು ವಿಧಾನಸೌಧದಲ್ಲಿ ನಡೆಸಿದ 2026-27ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ರೈತ ಮುಖಂಡರು ಈ ಹಕ್ಕೊತ್ತಾಯವನ್ನು ಮಂಡಿಸಿದರು. ರೈತ ಯುವಕರಿಗೆ ವಧು ಸಿಗದಿರುವುದು ಗಂಭೀರ ಸಾಮಾಜಿಕ ಸಮಸ್ಯೆಯಾಗಿದ್ದು, ಕೃಷಿಯಿಂದ ಯುವಕರು ವಿಮುಖರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ತಿಳಿಸಿದರು. ಈ ಹಿನ್ನೆಲೆ ರೈತರ ಮಕ್ಕಳನ್ನು ಮದುವೆಯಾಗುವ ಮಹಿಳೆಯರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲು ನೀಡಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ, ರೈತರ ಮಗನನ್ನು ವಿವಾಹವಾಗುವ ಮಹಿಳೆಯರ ಹೆಸರಿನಲ್ಲಿ 10 ಲಕ್ಷ ರೂ. ಠೇವಣಿ ಇಡುವುದು ಹಾಗೂ ಕೃಷಿ ಮತ್ತು ಕೃಷಿ ಸಂಬಂಧಿತ ಸಣ್ಣ ಉದ್ಯಮ ಆರಂಭಿಸಲು ಬಡ್ಡಿರಹಿತ ಸಾಲ ನೀಡುವಂತೆ ಬಜೆಟ್‌ನಲ್ಲಿ ಘೋಷಿಸಬೇಕು ಎಂಬುದಾಗಿ ಸಂಘಟನೆಗಳು ಮನವಿ ಸಲ್ಲಿಸಿವೆ. ಸಭೆಯಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ, ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್, ನೀತಿ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್, ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಹಣಕಾಸು ಇಲಾಖೆಯ ಅಧಿಕಾರಿಗಳು ಹಾಗೂ ರೈತ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ರೈತ ಸಂಘಟನೆಗಳ ಪ್ರಮುಖ ಬೇಡಿಕೆಗಳು
ಕೃಷಿ ಭೂಮಿ ಫಲವತ್ತತೆ ಮತ್ತು ಜಲಮೂಲಗಳ ಪುನಃಶ್ಚೇತನಕ್ಕಾಗಿ ಕೆರೆಗಳ ಹೂಳು ತೆಗೆದು ರೈತರ ಜಮೀನಿಗೆ ಸಾಗಿಸಲು ಕ್ರಮ
ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯ ಸರ್ಕಾರ ನೀಡುತ್ತಿರುವ ವಾರ್ಷಿಕ 4,000 ರೂ. ಸಹಾಯಧನ ಮುಂದುವರಿಕೆ
ಭೂಸುಧಾರಣೆ ತಿದ್ದುಪಡಿ ಕಾಯಿದೆ ರದ್ದುಪಡಿಸುವುದು
ಎಪಿಎಂಸಿಗಳಲ್ಲಿ ರೈತರ ಉತ್ಪನ್ನಗಳಿಗೆ ಅಡಮಾನ ಸಾಲ ಯೋಜನೆ ಬಲಪಡಿಸುವುದು
ಕಳಪೆ ಕೀಟನಾಶಕ, ನಕಲಿ ಬೀಜ ಮತ್ತು ಗೊಬ್ಬರ ಮಾರಾಟಗಾರರ ವಿರುದ್ಧ ಕಠಿಣ ಕಾನೂನು ಜಾರಿ
ಎಲ್ಲಾ ಬೆಳೆಗಳಿಗೆ ಬೆಳೆ ವಿಮೆ ಜಾರಿಗೊಳಿಸುವುದು
ಬ್ಯಾಂಕ್‌ಗಳ ಕೃಷಿ ಸಾಲ ನೀತಿ ಬದಲಾವಣೆ ಮಾಡಿ, ಭೂಮಿ ಮೌಲ್ಯದ ಶೇ.75ರಷ್ಟು ಸಾಲ ನೀಡುವ ವ್ಯವಸ್ಥೆ
ಕಬ್ಬಿಗೆ ಸಮರ್ಪಕ ಬೆಲೆ ನಿಗದಿ ಮಾಡಿ, ಕಟಾವು ಹಾಗೂ ಸಾಗಾಣಿಕೆ ವೆಚ್ಚವನ್ನು ಸಕ್ಕರೆ ಕಾರ್ಖಾನೆಗಳಿಂದ ಭರಿಸುವ ವ್ಯವಸ್ಥೆ
ರೈತರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಮೇಲ್ಕಂಡ ಬೇಡಿಕೆಗಳನ್ನು 2026-27ನೇ ಸಾಲಿನ ಬಜೆಟ್‌ನಲ್ಲಿ ಪರಿಗಣಿಸಬೇಕೆಂದು ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಗುಡಿಬಂಡಾ
ರಾಗಿ ಖರೀದಿ ಕೇಂದ್ರಕ್ಕೆ ಚಾಲನೆ; ಪ್ರತಿ ಕ್ವಿಂಟಲ್‌ಗೆ ₹4,876 ಬೆಂಬಲ ಬೆಲೆ
ಗುಡಿಬಂಡೆ: ತಾಲೂಕಿನ ರೈತರ ಬಹುದಿನಗಳ ನಿರೀಕ್ಷೆ ಈಡೇರಿದ್ದು, ಬಾಲ... ಓದನ್ನು ಮುಂದುವರಿಸಿ
ಕೈತುಂಬಾ ಸಂಬಳದ ಐಟಿ ಉದ್ಯೋಗ ಬಿಟ್ಟು ಮೀನು ಸಾಕಣೆ ಉದ್ಯಮದಲ್ಲಿ ಯಶಸ್ವಿ ಎಂಜಿನಿಯರ್
ಮಧ್ಯಪ್ರದೇಶ: ಜಬಲ್ಪುರದ ಭವಾನಿ ಝಾ ತಮ್ಮ ಶ್ರದ್ಧೆ, ನಿಷ್ಠೆ ಮತ್ತ... ಓದನ್ನು ಮುಂದುವರಿಸಿ
ಕೃಷಿಕ ಯುವಕರ ಪರ ಕುಣಿಗಲ್ ಶಾಸಕ ಧ್ವನಿ – ಸಿಎಂ ಗಮನಕ್ಕೆ ವಿಶೇಷ ಮನವಿ
ತುಮಕೂರು: ಗ್ರಾಮೀಣ ಭಾಗದ ಯುವಕರ ವಿವಾಹ ಸಮಸ್ಯೆಯನ್ನು ಪ್ರಸ್ತಾಪಿ... ಓದನ್ನು ಮುಂದುವರಿಸಿ
ಬೇಸಿಗೆ ಹಾಲು ಹೆಚ್ಚಿಸಲು ಹಸುಗೆ ಈ ಮೇವಿನ ಮಿಶ್ರಣ ಸಾಕು!
ಬೇಸಿಗೆ ಹಾಲು ಉತ್ಪಾದನೆ: ನೈಸರ್ಗಿಕ ವಿಧಾನಗಳೇ ಉತ್ತಮ
ಬೇಸ... ಓದನ್ನು ಮುಂದುವರಿಸಿ
ಅನ್ನದಾತರಿಗೆ ಶಾಕ್: 30 ಲಕ್ಷ ರೈತರಿಗೆ PM ಕಿಸಾನ್ ₹2,000 ಸಹಾಯಧನ ಸ್ಥಗಿತ! ಕಾರಣವೇನು?
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ (PM-Kisan) ನಿಧಿ ಯೋಜನೆಯ 22ನೇ ಕಂತಿಗಾಗಿ... ಓದನ್ನು ಮುಂದುವರಿಸಿ
ಅತ್ಯಂತ ದುಬಾರಿ ಅಣಬೆ ಯರ್ಸಗುಂಬಾ: ಕೊಪ್ಪಳ ಮೇಳದಲ್ಲಿ ಜನರ ಕಣ್ಣಿಗೆ ಸದ್ದು
ಕೊಪ್ಪಳ: ಜಗತ್ತಿನಲ್ಲೇ ಅತ್ಯಂತ ದುಬಾರಿ ಅಣಬೆ ಎಂದು ಕರೆಯಲಾಗುವ <... ಓದನ್ನು ಮುಂದುವರಿಸಿ
ಮೃತರ ಕುಟುಂಬಗಳಿಗೆ ಗುಡ್ ನ್ಯೂಸ್: ಮಾರ್ಚ್ ಅಂತ್ಯದೊಳಗೆ “ಪೌತಿ ಖಾತೆ” ಮುಕ್ತಾಯಕ್ಕೆ ಸೂಚನೆ
ಧಾರವಾಡ: ಧಾರವಾಡದಲ್ಲಿ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸ... ಓದನ್ನು ಮುಂದುವರಿಸಿ
ಈ ಬೆಳೆಯಿಂದ ಕೋಟ್ಯಾಧಿಪತಿಗಳಾಗೋದು ಫಿಕ್ಸ್!”“ರೈತರನ್ನು ಶ್ರೀಮಂತರನ್ನಾಗಿಸಲು ಕೇಂದ್ರದ ಮಾಸ್ಟರ್ ಪ್ಲ್ಯಾನ್
ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ಯೋಜನೆ ರೂಪಿಸಿದೆ.... ಓದನ್ನು ಮುಂದುವರಿಸಿ
ಮಣ್ಣಲ್ಲೇ ಚಿನ್ನ.. ವೈಜ್ಞಾನಿಕ ಕಿನ್ನೋ ಕೃಷಿಯಿಂದ ಲಕ್ಷಾಂತರ ರೂ. ಆದಾಯ ಪಡೆದ ರೈತ – ಅಜಯ್ ವಿಷ್ಣೋಯ್
ಪಂಜಾಬ್: ಕೃಷಿಯಲ್ಲಿ ನವೀನ ತಂತ್ರಜ್ಞಾನ ಅಳವಡಿಸಿಕೊಂಡು ಯಶಸ್ಸು ಸ... ಓದನ್ನು ಮುಂದುವರಿಸಿ
ಸಮಗ್ರ ಕೃಷಿಯಿಂದ ಯಶಸ್ಸು – ಯುವ ರೈತ ಅಮೇಶ್ ವಿಶಾಲ್ ಪ್ಲಮ್ ಹಣ್ಣುಗಳ ಹೊಟ್ಟೆಗೊಳ್ಳುವ ಯೋಜನೆ
ಬಿಹಾರ: ಬಿಹಾರದ ನಳಂದ ಜಿಲ್ಲೆ, ಸರ್ಮೇರಾ ಬ್ಲಾಕ್‌ನ ತಾಲ್... ಓದನ್ನು ಮುಂದುವರಿಸಿ