ರಾಗಿ ಖರೀದಿ ಕೇಂದ್ರಕ್ಕೆ ಚಾಲನೆ; ಪ್ರತಿ ಕ್ವಿಂಟಲ್‌ಗೆ ₹4,876 ಬೆಂಬಲ ಬೆಲೆ
ಗುಡಿಬಂಡೆ: ತಾಲೂಕಿನ ರೈತರ ಬಹುದಿನಗಳ ನಿರೀಕ್ಷೆ ಈಡೇರಿದ್ದು, ಬಾಲೇನಹಳ್ಳಿ ಗ್ರಾಮದಲ್ಲಿ ಸರ್ಕಾರಿ ರಾಗಿ ಖರೀದಿ ಕೇಂದ್ರಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಈ ಬಾರಿ ಸರ್ಕಾರವು ಪ್ರತಿ ಕ್ವಿಂಟಲ್ ರಾಗಿಗೆ ₹4,876 ಬೆಂಬಲ ಬೆಲೆಯನ್ನು ನಿಗದಿಪಡಿಸಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ತಹಸೀಲ್ದಾರ್ ಸಿಗ್ಬತ್ತುಲ್ಲಾ ಅವರು ರಾಗಿ ರಾಶಿಗೆ ಸಂಪ್ರದಾಯಬದ್ಧವಾಗಿ ಪೂಜೆ ಸಲ್ಲಿಸುವ ಮೂಲಕ ಖರೀದಿ ಪ್ರಕ್ರಿಯೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೈತರು ಕಷ್ಟಪಟ್ಟು ಬೆಳೆದ ಬೆಳೆಗೆ ಸರ್ಕಾರವು ಉತ್ತಮ ಬೆಲೆ ನೀಡುತ್ತಿದೆ. ಹೀಗಾಗಿ ರೈತರು ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಅಥವಾ ದಲಾಲರ ಬಲೆಗೆ ಬೀಳಬಾರದು. ನೇರವಾಗಿ ಖರೀದಿ ಕೇಂದ್ರಕ್ಕೆ ಬಂದು ತಮ್ಮ ಉತ್ಪನ್ನವನ್ನು ಮಾರಾಟ ಮಾಡಿ ನ್ಯಾಯಯುತ ಬೆಲೆ ಪಡೆಯಬೇಕು ಎಂದು ಖಡಕ್ ಸೂಚನೆ ನೀಡಿದರು. ಮಧ್ಯವರ್ತಿಗಳ ಹಾವಳಿಯನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಇದೇ ವೇಳೆ ಭರವಸೆ ನೀಡಿದರು.
ಆಹಾರ ಮತ್ತು ಖರೀದಿ ಇಲಾಖೆಯ ಅಧಿಕಾರಿಗಳು ಈ ಕುರಿತು ಹೆಚ್ಚಿನ ಮಾಹಿತಿ ನೀಡಿ, ರಾಗಿ ಖರೀದಿಗೆ ಮಾರ್ಚ್ 31 ಕೊನೆಯ ದಿನಾಂಕವಾಗಿದೆ ಎಂದು ತಿಳಿಸಿದರು. ತಾಲೂಕಿನಾದ್ಯಂತ ಈಗಾಗಲೇ 37,839 ಕ್ವಿಂಟಲ್ ರಾಗಿ ನೋಂದಣಿಯಾಗಿದ್ದು, ದಿನಕ್ಕೆ 1,500 ರಿಂದ 2,000 ಕ್ವಿಂಟಲ್ ರಾಗಿ ಖರೀದಿ ಮಾಡುವ ಗುರಿ ಹೊಂದಲಾಗಿದೆ. ಮುಂದಿನ 40 ದಿನಗಳ ಅವಧಿಯಲ್ಲಿ ನೋಂದಾಯಿತ ಎಲ್ಲಾ ರೈತರಿಂದಲೂ ರಾಗಿ ಖರೀದಿಸುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ರೈತರ ಅನುಕೂಲಕ್ಕಾಗಿ ಖರೀದಿ ಕೇಂದ್ರಗಳ ಮುಂದೆ ನೋಡಲ್ ಅಧಿಕಾರಿಗಳ ಹೆಸರು ಮತ್ತು ದೂರವಾಣಿ ಸಂಖ್ಯೆಗಳನ್ನು ಒಳಗೊಂಡ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ಅಲ್ಲದೆ, ಕೇಂದ್ರಕ್ಕೆ ಬರುವ ರೈತರಿಗಾಗಿ ಕುಡಿಯುವ ನೀರು, ನೆರಳು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಸರ್ಕಾರದ ಈ ನೇರ ಖರೀದಿ ಯೋಜನೆಯಿಂದ ರೈತರಿಗೆ ಆರ್ಥಿಕವಾಗಿ ಹೆಚ್ಚಿನ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಈ ವೇಳೆ ಖರೀದಿ ಅಧಿಕಾರಿ ಮಂಜುನಾಥ್, ಗುಡಿಬಂಡೆ ಆಹಾರ ನಿರೀಕ್ಷಕಿ ಪುಷ್ಪ, ಖರೀದಿ ಅಧಿಕಾರಿಗಳಾದ ಸಾಗರ್, ಜಯಂತ್ ಸೇರಿದಂತೆ ಹಲವರು ಇದ್ದರು.
ವರದಿ ಸತೀಶ ಬಾಬು ಎ
ಗುಡಿಬಂಡೆ ತಾಲ್ಲೂಕ್
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಕೈತುಂಬಾ ಸಂಬಳದ ಐಟಿ ಉದ್ಯೋಗ ಬಿಟ್ಟು ಮೀನು ಸಾಕಣೆ ಉದ್ಯಮದಲ್ಲಿ ಯಶಸ್ವಿ ಎಂಜಿನಿಯರ್
ಮಧ್ಯಪ್ರದೇಶ: ಜಬಲ್ಪುರದ ಭವಾನಿ ಝಾ ತಮ್ಮ ಶ್ರದ್ಧೆ, ನಿಷ್ಠೆ ಮತ್ತ... ಓದನ್ನು ಮುಂದುವರಿಸಿ
ಕೃಷಿಕ ಯುವಕರ ಪರ ಕುಣಿಗಲ್ ಶಾಸಕ ಧ್ವನಿ – ಸಿಎಂ ಗಮನಕ್ಕೆ ವಿಶೇಷ ಮನವಿ
ತುಮಕೂರು: ಗ್ರಾಮೀಣ ಭಾಗದ ಯುವಕರ ವಿವಾಹ ಸಮಸ್ಯೆಯನ್ನು ಪ್ರಸ್ತಾಪಿ... ಓದನ್ನು ಮುಂದುವರಿಸಿ
ರೈತರ ಮಗನನ್ನು ಮದುವೆಯಾದ ಮಹಿಳೆಗೆ ಸರ್ಕಾರಿ ಉದ್ಯೋಗದಲ್ಲಿ 20% ಮೀಸಲು: CMಗೆ ರೈತರ ಮನವಿ
ಬೆಂಗಳೂರು: ರೈತರ ಮಗನನ್ನು ವಿವಾಹವಾಗುವ ಮಹಿಳೆಯರಿಗೆ ಸರ್ಕಾರಿ ಉದ... ಓದನ್ನು ಮುಂದುವರಿಸಿ
ಬೇಸಿಗೆ ಹಾಲು ಹೆಚ್ಚಿಸಲು ಹಸುಗೆ ಈ ಮೇವಿನ ಮಿಶ್ರಣ ಸಾಕು!
ಬೇಸಿಗೆ ಹಾಲು ಉತ್ಪಾದನೆ: ನೈಸರ್ಗಿಕ ವಿಧಾನಗಳೇ ಉತ್ತಮ
ಬೇಸ... ಓದನ್ನು ಮುಂದುವರಿಸಿ
ಅನ್ನದಾತರಿಗೆ ಶಾಕ್: 30 ಲಕ್ಷ ರೈತರಿಗೆ PM ಕಿಸಾನ್ ₹2,000 ಸಹಾಯಧನ ಸ್ಥಗಿತ! ಕಾರಣವೇನು?
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ (PM-Kisan) ನಿಧಿ ಯೋಜನೆಯ 22ನೇ ಕಂತಿಗಾಗಿ... ಓದನ್ನು ಮುಂದುವರಿಸಿ
ಅತ್ಯಂತ ದುಬಾರಿ ಅಣಬೆ ಯರ್ಸಗುಂಬಾ: ಕೊಪ್ಪಳ ಮೇಳದಲ್ಲಿ ಜನರ ಕಣ್ಣಿಗೆ ಸದ್ದು
ಕೊಪ್ಪಳ: ಜಗತ್ತಿನಲ್ಲೇ ಅತ್ಯಂತ ದುಬಾರಿ ಅಣಬೆ ಎಂದು ಕರೆಯಲಾಗುವ <... ಓದನ್ನು ಮುಂದುವರಿಸಿ
ಮೃತರ ಕುಟುಂಬಗಳಿಗೆ ಗುಡ್ ನ್ಯೂಸ್: ಮಾರ್ಚ್ ಅಂತ್ಯದೊಳಗೆ “ಪೌತಿ ಖಾತೆ” ಮುಕ್ತಾಯಕ್ಕೆ ಸೂಚನೆ
ಧಾರವಾಡ: ಧಾರವಾಡದಲ್ಲಿ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸ... ಓದನ್ನು ಮುಂದುವರಿಸಿ
ಈ ಬೆಳೆಯಿಂದ ಕೋಟ್ಯಾಧಿಪತಿಗಳಾಗೋದು ಫಿಕ್ಸ್!”“ರೈತರನ್ನು ಶ್ರೀಮಂತರನ್ನಾಗಿಸಲು ಕೇಂದ್ರದ ಮಾಸ್ಟರ್ ಪ್ಲ್ಯಾನ್
ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ಯೋಜನೆ ರೂಪಿಸಿದೆ.... ಓದನ್ನು ಮುಂದುವರಿಸಿ
ಮಣ್ಣಲ್ಲೇ ಚಿನ್ನ.. ವೈಜ್ಞಾನಿಕ ಕಿನ್ನೋ ಕೃಷಿಯಿಂದ ಲಕ್ಷಾಂತರ ರೂ. ಆದಾಯ ಪಡೆದ ರೈತ – ಅಜಯ್ ವಿಷ್ಣೋಯ್
ಪಂಜಾಬ್: ಕೃಷಿಯಲ್ಲಿ ನವೀನ ತಂತ್ರಜ್ಞಾನ ಅಳವಡಿಸಿಕೊಂಡು ಯಶಸ್ಸು ಸ... ಓದನ್ನು ಮುಂದುವರಿಸಿ
ಸಮಗ್ರ ಕೃಷಿಯಿಂದ ಯಶಸ್ಸು – ಯುವ ರೈತ ಅಮೇಶ್ ವಿಶಾಲ್ ಪ್ಲಮ್ ಹಣ್ಣುಗಳ ಹೊಟ್ಟೆಗೊಳ್ಳುವ ಯೋಜನೆ
ಬಿಹಾರ: ಬಿಹಾರದ ನಳಂದ ಜಿಲ್ಲೆ, ಸರ್ಮೇರಾ ಬ್ಲಾಕ್‌ನ ತಾಲ್... ಓದನ್ನು ಮುಂದುವರಿಸಿ