ಫೆಬ್ರವರಿ 7, 2026, ಶನಿವಾರದ ರಾಶಿ ಭವಿಷ್ಯ
ಮೇಷ ರಾಶಿ – ಇಂದು ನೀವು ಬಹಳ ದಿನಗಳಿಂದ ಕಂಡಿದ್ದ ಪ್ರೀತಿಯ ಕನಸು ನನಸಾಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯಲಿದೆ. ಆದರೆ ಪ್ರಿಯತಮೆಯೊಂದಿಗೆ ಮಾತಿನ ಚಕಮಕಿ ಉಂಟಾಗುವ ಸಾಧ್ಯತೆ ಇರುವುದರಿಂದ ವಿವಾದಾತ್ಮಕ ವಿಷಯಗಳ ಚರ್ಚೆಯನ್ನು ತಪ್ಪಿಸುವುದು ಒಳಿತು. ಪತ್ನಿಯ ಸಹಾಯವನ್ನು ಗೌರವದಿಂದ ಸ್ವೀಕರಿಸಿದರೆ ಮನೆಯಲ್ಲಿ ಶಾಂತಿ ಕಾಪಾಡಿಕೊಳ್ಳಬಹುದು. ಉದ್ಯೋಗ ಸಂಬಂಧಿತ ಸಮಸ್ಯೆಗಳನ್ನು ನಿವಾರಣೆಗೆ ಹಣಕಾಸಿನ ಸಹಾಯ ನೀಡುವ ಪರಿಸ್ಥಿತಿ ಎದುರಾಗಬಹುದು. ಸಾಮಾಜಿಕ ಸಮಾರಂಭಗಳಲ್ಲಿ ಭಾಗವಹಿಸುವ ಮೂಲಕ ಪ್ರಭಾವಿ ವ್ಯಕ್ತಿಗಳೊಂದಿಗೆ ಬಾಂಧವ್ಯ ವೃದ್ಧಿಯಾಗುತ್ತದೆ. ವಿದೇಶದಲ್ಲಿ ವ್ಯಾಪಾರ ಆರಂಭಿಸಲು ಅಥವಾ ವಿಸ್ತರಿಸಲು ಹಣದ ಲಾಭ ದೊರೆಯುವ ಸೂಚನೆಗಳಿವೆ. ಅಜ್ಞಾತ ಮೂಲಗಳಿಂದ ಹಣ ಲಭಿಸಿ ಆರ್ಥಿಕ ಸಮಸ್ಯೆಗಳು ತಗ್ಗುವ ಸಾಧ್ಯತೆ ಇದೆ. ಆದರೆ ಸಂಗಾತಿಯ ಸೇವೆ ಹಾಗೂ ಭಾವನೆಗಳನ್ನು ನಿರ್ಲಕ್ಷಿಸಿದರೆ ಮನಶಾಂತಿಗೆ ಧಕ್ಕೆ ಉಂಟಾಗಬಹುದು. ನಿಮ್ಮ ಸಂಗಾತಿಯ ಮನಸ್ಸು ಮಗುವಿನಂತೆ ಮುಗ್ಧವಾಗಿರುವುದರಿಂದ ದ್ರೋಹ ಮಾಡದೇ ಸೌಮ್ಯವಾಗಿ ನಡೆದುಕೊಳ್ಳುವುದು ಅತ್ಯಂತ ಅಗತ್ಯ.
ವೃಷಭ ರಾಶಿ – ಇಂದು ಹಳೆಯ ಸಂಗಾತಿ ಆರ್ಥಿಕ ಸಂಕಷ್ಟದಿಂದ ಪಾರಾಗಲು ನೀವು ಸಹಾಯ ಮಾಡುವ ಸಾಧ್ಯತೆ ಇದೆ. ನಿಮ್ಮ ಪ್ರೀತಿಯ ಸಂಗಾತಿಗೆ ಶಾಶ್ವತ ಪರಿಹಾರ ನೀಡುವಲ್ಲಿ ಯಶಸ್ಸು ದೊರೆಯಲಿದೆ. ಆಪ್ತ ಸಂಬಂಧಿಕರ ಬೆಂಬಲದಿಂದ ಹೊಸ ಉದ್ಯಮ ಆರಂಭವಾಗುವ ಸೂಚನೆಗಳಿದ್ದು, ಈ ವ್ಯವಹಾರದಿಂದ ಧನಲಾಭವೂ ಲಭಿಸುತ್ತದೆ.ಒತ್ತಡದ ಕೆಲಸದ ನಡುವೆಯೂ ಕುಟುಂಬವನ್ನು ಮರೆತಬೇಡಿ. ಪತ್ನಿಯ ಕಷ್ಟ–ಸುಖಗಳನ್ನು ಅರಿತುಕೊಳ್ಳುವುದು ಅತ್ಯಂತ ಅಗತ್ಯ. ಕೆಲವರಿಗೆ ಹಣಕಾಸಿನ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದ್ದು, ಈ ಸಂದರ್ಭ ಮಾತಾ–ಪಿತೃಗಳ ಸಲಹೆ ನಿಮಗೆ ಮಾರ್ಗದರ್ಶನ ನೀಡುತ್ತದೆ. ಮಧ್ಯಸ್ಥಿಕೆ ವಹಿಸಿ ನೀಡುವ ಹಣಕ್ಕೆ ತೊಂದರೆ ಉಂಟಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ. ಪ್ರೀತಿ–ಪ್ರೇಮ ಮತ್ತು ಪ್ರಣಯಗಳು ನಿಮ್ಮ ಅಮೂಲ್ಯ ಸಮಯವನ್ನು ಹಾಳುಮಾಡುವ ಸಾಧ್ಯತೆ ಇದೆ. ಹಳೆಯ ಸಂಗಾತಿಯೊಂದಿಗೆ ಪುನರ್ಮಿಲನವಾಗುವ ಸಾಧ್ಯತೆಯೂ ಕಾಣಿಸುತ್ತದೆ.
ಮಿಥುನ ರಾಶಿ – ಸಾರ್ವಜನಿಕ ಇಲಾಖೆಯ ಉದ್ಯೋಗಿಗಳು ಅಧಿಕ ಪ್ರಸಂಗದಿಂದ ಸಾರ್ವಜನಿಕರಿಂದ ಟೀಕೆ ಅಥವಾ ತೊಂದರೆ ಎದುರಿಸಬಹುದು. ಎದುರಾಳಿಗಳು ನಿಮ್ಮನ್ನು ತುಳಿಯಲು ಪ್ರಯತ್ನಿಸುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ವರ್ತಿಸಿ. ವ್ಯಾಪಾರಿಗಳಿಗೆ ಇಂದು ಶುಭಫಲ ದೊರೆಯಲಿದೆ. ಉದ್ಯೋಗವಿಲ್ಲದವರಿಗೆ ಉದ್ಯೋಗ ಪ್ರಾಪ್ತಿಯಾಗುವ ಸೂಚನೆಗಳಿವೆ. ಭೂಮಿ–ಆಸ್ತಿ ಸಂಬಂಧಿತ ಸಮಸ್ಯೆಗಳು ನಿವಾರಣೆಯಾಗಲಿವೆ. ಕೋರ್ಟ್–ಕಚೇರಿ ಕೆಲಸಗಳಲ್ಲಿ ಜಯ ಸಾಧಿಸುವಿರಿ. ವಾಹನ ಖರೀದಿಯ ಯೋಗವಿದ್ದು, ವಿದೇಶ ಪ್ರವಾಸದ ಪ್ರಯತ್ನಗಳು ಚುರುಕುಗೊಳ್ಳುತ್ತವೆ. ಹಿಂದೆ ಮಾಡಿರುವ ಹಣದ ಹೂಡಿಕೆ ಇಂದು ದೊಡ್ಡ ಫಲ ನೀಡುವ ಲಕ್ಷಣಗಳಿದ್ದು, ಭವ್ಯ ಜೀವನದತ್ತ ದಾರಿ ತೆರೆಯಬಹುದು. ಆದರೆ ನಿಮ್ಮ ಸುತ್ತಲಿನ ಕೆಲವರು ಪಿಸುಮಾತು ಆಡಬಹುದು – ಗಮನಕೊಡದೆ ಮುಂದೆ ಸಾಗುವುದು ಒಳಿತು. ನೌಕರದಾರರಿಗೆ ಅಧಿಕಾರಿಗಳಿಂದ ಶುಭವಾರ್ತೆ ದೊರೆಯಲಿದೆ. ನೀವು ಇಚ್ಚಿಸಿದ ಕಾರ್ಯಗಳು ಕೈಗೂಡುವ ಸಮಯ ಇದು. ಖಾಸಗಿ ಉದ್ಯೋಗಸ್ಥರಿಗೆ ಅನಿರೀಕ್ಷಿತ ಪ್ರಗತಿ ಕಂಡುಬರುತ್ತದೆ. ಪ್ರೇಮ ಪ್ರಕರಣಗಳು ಹೊಸ ತಿರುವು ಪಡೆಯಲಿದ್ದು, ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿ ಧನಲಾಭವಾಗಲಿದೆ. ಪರಸ್ತ್ರೀ ಮೋಹದ ಸೂಚನೆ ಕಾಣಿಸಿಕೊಳ್ಳುವ ಕಾರಣ ವಿವೇಕ ಅಗತ್ಯ. ವಿವಾಹ ಯೋಗ ಕೂಡಿ ಬರುತ್ತಿದ್ದು, ದಂಪತಿಗಳಿಗೆ ಸಂತಾನ ಭಾಗ್ಯದ ಸೂಚನೆಗಳಿವೆ. ಮಾತಾ–ಪಿತೃಗಳಿಂದ ಧನ ಸಹಾಯ ದೊರೆಯಲಿದೆ. ನವದಂಪತಿಗಳಿಗೆ ಸ್ವಲ್ಪ ವೈರಾಗ್ಯ ಹೆಚ್ಚಾಗುವ ಸಾಧ್ಯತೆ ಇದೆ. ಗಣ್ಯ ವ್ಯಕ್ತಿಯ ಭೇಟಿಯಿಂದ ಉದ್ಯೋಗದಲ್ಲಿ ಇಚ್ಚಿಸಿದ ಸ್ಥಳಕ್ಕೆ ವರ್ಗಾವಣೆಯಾಗುವ ಯೋಗವಿದೆ. ಆದರೆ ಅನೈತಿಕ ಪ್ರೀತಿಯಿಂದ ದೂರವಿರುವುದು ಶ್ರೇಯಸ್ಕರ.
ಕರ್ಕಾಟಕ ರಾಶಿ – ಮದುವೆಯಾಗಿ ಬಹುಕಾಲವಾದರೂ ಮಕ್ಕಳಾಗಿಲ್ಲ ಎಂಬ ಚಿಂತೆ ಕೆಲವರಿಗೆ ಕಾಡಬಹುದು. ಆದರೆ ದೀರ್ಘಕಾಲದ ನಂತರ ಗರ್ಭಧಾರಣೆಯ ಶುಭಸುದ್ದಿ ಕೇಳಿ ಸಂತಸವಾಗುವ ಸೂಚನೆಗಳಿವೆ. ಪರಸ್ಪರ ಇಷ್ಟಪಟ್ಟಿರುವವರಿಗೆ ಮದುವೆ ಕಾರ್ಯ ನೆರವೇರುವ ಸಾಧ್ಯತೆ ಇದೆ. ಮದುವೆ ಯೋಗವೂ ಬಲವಾಗಿ ಕಾಣಿಸುತ್ತದೆ. ವ್ಯಾಪಾರಕ್ಕೆ ಹೂಡಿಕೆ ಮಾಡಿದ ಹಣಕಾಸಿನ ಬಗ್ಗೆ ಚಿಂತೆ ಉಂಟಾಗಬಹುದು. ಸಾಲಗಾರರಿಂದ ಕಿರುಕುಳ ಎದುರಾಗುವ ಸಾಧ್ಯತೆ ಇದ್ದರೂ ಆತ್ಮೀಯ ಬಂಧುಗಳಿಂದ ಹಣಕಾಸಿನ ನೆರವು ದೊರೆಯಲಿದೆ. ಇದರ ಫಲವಾಗಿ ಗೃಹ ಕಟ್ಟಡದ ಕೆಲಸ ಪೂರ್ಣಗೊಳ್ಳುವ ಯೋಗವಿದೆ. ಉದ್ಯೋಗ ಕ್ಷೇತ್ರದಲ್ಲಿ ಇಲ್ಲಸಲ್ಲದ ಆರೋಪಗಳು ಹಾಗೂ ಎದುರಾಳಿಗಳಿಂದ ತೊಂದರೆ ಎದುರಾಗಬಹುದು. ಕೆಲಸದ ಒತ್ತಡದಿಂದ ಕೆಲವರು ಉದ್ಯೋಗ ಬಿಟ್ಟು ಹೋಗುವ ಯೋಚನೆ ಮಾಡಬಹುದು. ಆದರೆ ಸದ್ಯಕ್ಕೆ ಉದ್ಯೋಗ ಬದಲಾವಣೆ ಮಾಡದೇ ಅಲ್ಲಿಯೇ ಮುಂದುವರೆಯುವುದು ಒಳಿತು. ಜಾಗರೂಕತೆಯಿಂದ ನಡೆದುಕೊಳ್ಳಿ. ವಸ್ತ್ರ ವ್ಯಾಪಾರಸ್ಥರಿಗೆ ಮುಂದಗತಿಯ ಲಾಭ ದೊರೆಯಲಿದೆ. ಗೃಹ ಕಟ್ಟಡ ಸಾಮಗ್ರಿಗಳ ಮಾರಾಟಗಾರರಿಗೆ ಧನಲಾಭವಾಗುತ್ತದೆ. ಸ್ವೀಟ್ ಮಾರ್ಟ್, ಬೇಕರಿ ಹಾಗೂ ಕಾಂಡಿಮೆಂಟ್ಸ್ ಮಾಲಕರಿಗೆ ವ್ಯಾಪಾರದಲ್ಲಿ ಅಧಿಕ ಲಾಭದ ಸೂಚನೆಗಳಿವೆ. ಉಪನ್ಯಾಸಕರ ಮಕ್ಕಳಿಗೆ ಮದುವೆ ಯೋಗ ಕಂಡುಬರುತ್ತದೆ. ಆದರೆ ಕೆಲವರಿಗೆ ಮಕ್ಕಳ ಹಠ ಮತ್ತು ಹಠಾತ್ ವರ್ತನೆಯಿಂದ ಮನಸ್ತಾಪವಾಗಬಹುದು. ಹೊರದೇಶಕ್ಕೆ ಹೊರಡುವ ಪ್ರಯತ್ನದಲ್ಲಿರುವವರಿಗೆ ಉದ್ಯೋಗ ಪ್ರಾಪ್ತಿಯಾಗುವ ಸಾಧ್ಯತೆ ಇದೆ.
ಸಿಂಹ ರಾಶಿ – ಹಿರಿಯರೊಂದಿಗೆ ಆಸ್ತಿ ವಿಚಾರವಾಗಿ ವಾದ–ವಿವಾದಗಳು ಉಂಟಾಗಿ ಮನಸ್ತಾಪವಾಗುವ ಸಾಧ್ಯತೆ ಇದೆ. ದಂಪತಿಗಳ ನಡುವೆ ಕಿರಿಕಿರಿ ಮತ್ತು ಅಸಮಾಧಾನ ಮುಂದುವರಿಯಬಹುದು. ಪ್ರೇಮಿಗಳಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗುವ ಕಾರಣ ಸಂಯಮದಿಂದ ವರ್ತಿಸುವುದು ಅಗತ್ಯ. ವ್ಯಾಪಾರದಲ್ಲಿ ಎದುರಾಳಿಗಳು ಹಾಗೂ ಪಕ್ಕದವರಿಂದ ತೊಂದರೆ ಎದುರಾಗಬಹುದು. ಆರ್ಥಿಕ ನಷ್ಟದಿಂದ ಮನಸ್ಸಿಗೆ ಚಿಂತೆ ಹೆಚ್ಚಾಗುತ್ತದೆ. ಟ್ರಾನ್ಸ್ಪೋರ್ಟ್ ವ್ಯಾಪಾರಿಗಳಿಗೆ ಹಣಕಾಸಿನ ಮುಗ್ಗಟ್ಟು ಮತ್ತು ವ್ಯವಹಾರದಲ್ಲಿ ಏರುಪೇರಿನ ಸೂಚನೆಗಳಿವೆ. ಆಸ್ತಿ ಖರೀದಿಯಲ್ಲಿ ಮೋಸ ಸಂಭವಿಸುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ವಹಿಸಿ. ಅವಿವಾಹಿತರಿಗೆ ವಿವಾಹ ಯೋಗ ಕಂಡುಬರುತ್ತದೆ. ಆದರೆ ಎರಡನೇ ಮದುವೆ ಬಯಸುವವರಿಗೆ ಅಡಚಣೆಗಳು ಎದುರಾಗಬಹುದು. ಪರಸ್ತ್ರಿ ಸಂಪರ್ಕದಿಂದ ಕುಟುಂಬದಲ್ಲಿ ಕಲಹ ಉಂಟಾಗುವ ಭೀತಿ ಇದೆ – ಜಾಗರೂಕರಾಗಿರಿ. ಉದ್ಯೋಗದಲ್ಲಿ ಸಹೋದ್ಯೋಗಿಗಳೊಂದಿಗೆ ಅನಾವಶ್ಯಕ ಜಗಳ ಬೇಡ. ಅಪಮಾನ ಅಥವಾ ಅವಮಾನಕ್ಕೆ ಒಳಗಾಗುವ ಸಂದರ್ಭಗಳು ಎದುರಾಗಬಹುದು. ಉದ್ಯೋಗ ಸ್ಥಳಾಂತರ ಬಯಸುವವರಿಗೆ ಇಂದು ಶುಭ ದಿನವಲ್ಲ. ಸದ್ಯದ ಪರಿಸ್ಥಿತಿಯನ್ನು ಸಹನಶೀಲತೆಯಿಂದ ಎದುರಿಸುವುದು ಒಳಿತು. ಮಕ್ಕಳು ವಿದ್ಯಾಭ್ಯಾಸದಲ್ಲಿ ಅನಾಸಕ್ತಿ ತೋರಿಸಿ, ಕೆಟ್ಟ ಸಹವಾಸಕ್ಕೆ ಒಳಗಾಗುವ ಸಾಧ್ಯತೆ ಇದೆ – ಗಮನ ಹರಿಸಿ. ಬಂಧುಗಳಿಂದ ಹಾಗೂ ಸಂಗಾತಿಯ ಮನೆಯಿಂದ ಕೆಟ್ಟ ಸುದ್ದಿ ಕೇಳುವ ಸಾಧ್ಯತೆ ಇದೆ. ಮಧ್ಯಸ್ಥಿಕೆ ವಹಿಸಿ ನೀಡುವ ಹಣಕ್ಕೆ ನೀವೇ ಜವಾಬ್ದಾರರಾಗಬೇಕಾದ ಪರಿಸ್ಥಿತಿ ಬರಬಹುದು, ಇದರಿಂದ ಭೀತಿ ಕಾಡಬಹುದು. ವಾಹನ ಅಪಘಾತ ಸಂಭವಿಸುವ ಸಾಧ್ಯತೆ ಇರುವುದರಿಂದ ಇಂದು ವಿಶೇಷ ಜಾಗ್ರತೆ ಅಗತ್ಯ.
ಕನ್ಯಾ ರಾಶಿ – ಉನ್ನತ ವ್ಯಾಸಂಗಕ್ಕಾಗಿ ವಿದೇಶ ಪ್ರವಾಸ ಕೈಗೊಳ್ಳುವ ಅವಕಾಶ ದೊರೆಯಲಿದೆ. ಈ ಬಾರಿ ಗಂಡು ಸಂತಾನ ಪ್ರಾಪ್ತಿಯ ಶುಭಸೂಚನೆ ಕಾಣಿಸುತ್ತದೆ. ಭೂಮಿ ಹಾಗೂ ಆಸ್ತಿ ವ್ಯವಹಾರಗಳಲ್ಲಿ ಉತ್ತಮ ಫಲಿತಾಂಶ ದೊರೆಯಲಿದ್ದು, ನಿವೇಶನ ಖರೀದಿಸುವ ಪ್ರಯತ್ನ ಯಶಸ್ವಿಯಾಗುತ್ತದೆ. ಕೆಲವರು ಕೃಷಿ ಭೂಮಿ ಖರೀದಿಸುವ ಯೋಗವೂ ಇದೆ. ಒಳ್ಳೆಯ ಕರ್ಮಕ್ಕೆ ಉತ್ತಮ ಫಲ ದೊರೆಯುವುದರಿಂದ ಮನೆಯಲ್ಲಿ ಶುಭಮಂಗಲ ಕಾರ್ಯಗಳು ನೆರವೇರಲಿವೆ. ಆದರೆ ಕೆಲವರಿಗೆ ಕೆಟ್ಟ ಕರ್ಮದ ಪರಿಣಾಮವಾಗಿ ಹಣಕಾಸಿನ ಸಮಸ್ಯೆಗಳು ಎದುರಾಗಬಹುದು; ಇದರಿಂದ ಮದುವೆ ವಿಳಂಬವಾಗುವ ಸಾಧ್ಯತೆ ಇದೆ. ದಂಪತಿಗಳು ಸಂತಾನಕ್ಕಾಗಿ ಮೊರೆ ಇಡಲಿದ್ದಾರೆ. ಮೊದಲ ಬಾರಿ ಗರ್ಭಧರಿಸಿರುವ ಗರ್ಭಿಣಿಯರು ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯ. ಲೇವಾದೇವಿಗಾರರಿಗೆ ಸಾಲ ಮರುಪಾವತಿಯಲ್ಲಿ ಕಷ್ಟಗಳು ಎದುರಾಗಬಹುದು. ಈ ಹಿಂದೆ ಮಾಡಿದ ಶ್ರಮಕ್ಕೆ ಇಂದು ಫಲ ಸಿಗುವ ದಿನ. ದಾಂಪತ್ಯ ಜೀವನದಲ್ಲಿ ಸಂತೋಷದ ಕ್ಷಣಗಳನ್ನು ಅನುಭವಿಸುವ ಅವಕಾಶ ದೊರೆಯಲಿದೆ. ಕೆಲಸ ಕಾರ್ಯಗಳಲ್ಲಿ ಏಕಾಗ್ರತೆ ರೂಢಿಸಿಕೊಳ್ಳಿ. ಒತ್ತಡವನ್ನು ನಿವಾರಿಸಿಕೊಳ್ಳಲು ಹೆಚ್ಚು ಜನರೊಂದಿಗೆ ಬೆರೆತು ಮಾತನಾಡುವುದು ಒಳಿತು. ಉದ್ಯೋಗ ಸಂಬಂಧಿತವಾಗಿ ಕೆಲ ಅಪಮಾನಕರ ಪ್ರಸಂಗಗಳು ಎದುರಾಗಬಹುದು. ಆದರೆ ನಿಮ್ಮ ಚತುರತೆ ಮತ್ತು ವಿವೇಕಕ್ಕೆ ಇಂದು ವಿಶೇಷ ಮಹತ್ವ ದೊರೆಯುತ್ತದೆ. ಆರ್ಥಿಕವಾಗಿ ಉತ್ತಮ ಸ್ಥಿತಿ ಕಂಡುಬರುತ್ತದೆ.
ತುಲಾ ರಾಶಿ – ಸಾಲ ಮರುಪಾವತಿ ಸಂಬಂಧಿತ ಕಾರ್ಯಾಚರಣೆಗಳು ಯಶಸ್ವಿಯಾಗುವ ದಿನ. ನವದಂಪತಿಗಳಿಗೆ ಗಂಡು ಸಂತಾನ ಪ್ರಾಪ್ತಿಯ ಶುಭಸೂಚನೆ ಕಂಡುಬರುತ್ತದೆ. ಸಂಗಾತಿಯೊಂದಿಗಿನ ಹಿಂದಿನ ಮನಸ್ತಾಪಗಳು ನಿಧಾನವಾಗಿ ಮರೆಯಾಗಲಿವೆ. ಆದರೆ ಸೋದರ–ಸೋದರಿಯರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆ ಇದೆ. ಕುಟುಂಬದೊಳಗಿನ ಕಲಹಗಳು ಮನಸ್ಸಿಗೆ ಒತ್ತಡ ತಂದಿಡಬಹುದು. ಅಗತ್ಯ ಕಾರ್ಯಗಳಲ್ಲಿ ಬಂಧುಗಳಿಂದ ಅಡಚಣೆ ಎದುರಾಗುವ ಸಾಧ್ಯತೆ ಇರುವುದರಿಂದ ಸಂಯಮ ಅಗತ್ಯ. ವೃತ್ತಿ ಕ್ಷೇತ್ರದಲ್ಲಿ ನೀಡಲಾದ ಟಾರ್ಗೆಟ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ಆದರೆ ಅಧಿಕಾರಿಗಳಿಂದ ಕೆಲ ಸಮಸ್ಯೆಗಳು ಎದುರಾಗಬಹುದು. ಕೆಲಸದ ಸ್ಥಳದಲ್ಲಿ ಚುಚ್ಚು ಮಾತುಗಳು ಹಾಗೂ ತಪ್ಪು ಮಾರ್ಗದರ್ಶನದಿಂದ ದೂರವಿರುವುದು ಒಳಿತು. ಆಸ್ತಿ ವ್ಯವಹಾರಗಳು ವ್ಯಾಜ್ಯಗಳಿಂದ ಕೂಡಿರುವ ಸಾಧ್ಯತೆ ಇರುವುದರಿಂದ ಜಾಗ್ರತೆ ವಹಿಸಿ. ಬಾಕಿ ಹಣಕಾಸುಗಳನ್ನು ಯಶಸ್ವಿಯಾಗಿ ವಸೂಲಿ ಮಾಡುವಿರಿ. ಕೆಲವು ಅಹಿತಕರ ಘಟನೆಗಳು ಮನಸ್ಸಿಗೆ ಕಿರಿಕಿರಿ ತಂದರೂ ಧೈರ್ಯ ಕಾಪಾಡಿಕೊಳ್ಳುವುದು ಒಳಿತು.
ವೃಶ್ಚಿಕ ರಾಶಿ – ವಿವಾಹ ಯೋಗ ಬಲವಾಗಿ ಕಾಣಿಸುತ್ತಿದ್ದು, ಮನಸ್ಸಿನಲ್ಲಿ ಇಟ್ಟುಕೊಂಡಿರುವ ಕಾರ್ಯಗಳು ಕೈಗೂಡುವ ಸಮಯ ಇದು. ಕುಟುಂಬದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗುತ್ತದೆ. ವ್ಯಾಪಾರದಲ್ಲಿ ಅಧಿಕ ಲಾಭ ದೊರೆಯುವ ಸೂಚನೆಗಳಿವೆ. ಆದರೆ ದಂಪತಿಗಳಿಗೆ ಆಗಾಗ ಆರೋಗ್ಯ ಸಮಸ್ಯೆಗಳು ಕಾಡಬಹುದು. ಆರೋಗ್ಯಕ್ಕಾಗಿ ಹೆಚ್ಚಿನ ಧನ ವೆಚ್ಚವಾಗುವ ಸಾಧ್ಯತೆ ಇದೆ. ಸಾಲಗಾರರಿಂದ ತೊಂದರೆ ಎದುರಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ. ಉದ್ಯೋಗ ಸ್ಥಳಾಂತರ ಬಯಸುವವರಿಗೆ ಇಂದು ಸೂಕ್ತ ದಿನವಲ್ಲ. ನೌಕರರಿಗೆ ಅಧಿಕಾರಿಗಳಿಂದ ಕಿರುಕುಳ ಅಥವಾ ಒತ್ತಡ ಎದುರಾಗಬಹುದು. ಉದ್ಯೋಗದ ಭದ್ರತೆಯ ಬಗ್ಗೆ ಆತಂಕ ಕಾಡುವ ಸಾಧ್ಯತೆ ಇದೆ. ಅಪಮಾನ ಅಥವಾ ಅವಮಾನದ ಸಂದರ್ಭಗಳು ಎದುರಾಗಬಹುದು. ಸತಿಪತಿಯರ ನಡುವೆ ವಿರಸ ಉಂಟಾಗುವ ಭೀತಿ ಇದೆ. ಅನಾವಶ್ಯಕ ಸಂಚಾರ ಅಥವಾ ತಪ್ಪು ನಡವಳಿಕೆಯಿಂದ ಕುಟುಂಬದಲ್ಲಿ ಅಸಮಾಧಾನ ಹೆಚ್ಚಾಗಬಹುದು. ಕೆಲವರಿಗೆ ನಂಬಿಕೆ ಇಟ್ಟ ಸ್ತ್ರೀ ಕಡೆಯಿಂದ ಮೋಸವಾಗುವ ಸಾಧ್ಯತೆ ಇದೆ. ತಂದೆ, ಸಹೋದರ ಹಾಗೂ ಸಹೋದರಿಯರೊಂದಿಗೆ ವಾಗ್ವಾದ ಸಂಭವಿಸಬಹುದು – ಸಂಯಮದಿಂದ ನಡೆದುಕೊಳ್ಳುವುದು ಒಳಿತು. ವಿದೇಶಕ್ಕೆ ಹೊರಡುವ ಕನಸು ನನಸಾಗುವ ಸೂಚನೆಗಳಿವೆ. ಎರಡನೇ ವಿವಾಹ ಬಯಸುವವರಿಗೆ ಶುಭ ಫಲ ದೊರೆಯಲಿದೆ. ಕೋರ್ಟ್–ಕಚೇರಿ ಸಂಬಂಧಿತ ಕೆಲಸಗಳಲ್ಲಿ ಅಲ್ಪ ಯಶಸ್ಸು ಮಾತ್ರ ದೊರೆಯುವ ಸಾಧ್ಯತೆ ಇದೆ.
ಧನುಸ್ಸು ರಾಶಿ – ಉದ್ಯೋಗಸ್ಥರಿಗೆ ನೆಮ್ಮದಿಯ ಕಾಲ ಆರಂಭವಾಗಲಿದೆ. ಸ್ನೇಹಿತರು ಹಾಗೂ ಸಹೋದರರಿಂದ ಹೊಸ ವ್ಯಾಪಾರ ಆರಂಭಿಸಲು ಹಣಕಾಸಿನ ನೆರವು ದೊರೆಯುವ ಸಾಧ್ಯತೆ ಇದೆ. ಆದರೆ ಪರಸ್ತ್ರೀ ಕಾರಣದಿಂದ ಹಣದ ಅಪವ್ಯಯವಾಗುವ ಸೂಚನೆ ಇರುವುದರಿಂದ ಜಾಗ್ರತೆ ಅಗತ್ಯ. ಮೊಬೈಲ್, ಎಲೆಕ್ಟ್ರಿಕಲ್ ಹಾಗೂ ಸ್ಟೇಷನರಿ ವ್ಯಾಪಾರಿಗಳಿಗೆ ಮತ್ತು ಈ ಕ್ಷೇತ್ರದ ಉದ್ಯೋಗಿಗಳಿಗೆ ಇದು ಉತ್ತಮ ಸಮಯ. ಜೀವ ವಿಮೆಯಲ್ಲಿ ಹೂಡಿಕೆ ಮಾಡಲು ಅನುಕೂಲಕರ ದಿನ. ಸ್ಟೇಷನರಿ, ಪುಸ್ತಕ ಹಾಗೂ ಕಂಪ್ಯೂಟರ್ ವ್ಯಾಪಾರಿಗಳಿಗೆ ಧನ ಲಾಭದ ಸೂಚನೆಗಳಿವೆ. ಮಕ್ಕಳು ತಪ್ಪು ಕಾರ್ಯಗಳತ್ತ ಆಕರ್ಷಿತರಾಗುವ ಸಾಧ್ಯತೆ ಇರುವುದರಿಂದ ಪೋಷಕರು ಗಮನ ಹರಿಸಬೇಕು. ಧಾರ್ಮಿಕ ಮಠಾಧಿಪತಿಗಳು ಹಣ ಗಳಿಸುವ ಅವಕಾಶ ಪಡೆಯಬಹುದು. ಕೋರ್ಟ್ ಸಂಬಂಧಿತ ತೀರ್ಪುಗಳು ತಾತ್ಕಾಲಿಕವಾಗಿ ತಡೆಗೊಳ್ಳುವ ಸಾಧ್ಯತೆ ಇದೆ. ಭೂಮಿ ಸಂಬಂಧಿತ ಕದನಗಳು ಮುಂದುವರಿಯಬಹುದು. ಸೋದರ ಮಾವನಿಂದ ಧನ ಸಹಾಯ ದೊರೆಯಲಿದೆ. ಹಳೆಯ ಸಾಲವನ್ನು ಮರುಪಾವತಿಸುವ ಕ್ಷಣ ಸಮೀಪಿಸುತ್ತಿದೆ. ಮೂರನೇ ವ್ಯಕ್ತಿಯ ಹಸ್ತಕ್ಷೇಪದಿಂದ ದಂಪತಿಗಳ ನಡುವೆ ಕಲಹ ಉಂಟಾಗುವ ಸಾಧ್ಯತೆ ಇದೆ – ಸಂಯಮ ಮತ್ತು ಸ್ಪಷ್ಟತೆ ಅಗತ್ಯ. ನಿರುದ್ಯೋಗಿಗಳಿಗೆ ಪರೀಕ್ಷೆಗಳಲ್ಲಿ ಅನುಕೂಲಕರ ಫಲಿತಾಂಶಗಳು ದೊರೆಯುವ ಸಾಧ್ಯತೆ ಇದೆ.
ಮಕರ ರಾಶಿ – ವ್ಯಾಪಾರ ವಹಿವಾಟುಗಳಲ್ಲಿ ಅಡಚಣೆಗಳು ಎದುರಾಗಬಹುದು. ಭೂಮಿ ವ್ಯವಹಾರಗಳಲ್ಲಿ ಹಣಕಾಸು ಅಪವ್ಯಯವಾಗದಂತೆ ಜಾಗ್ರತೆ ವಹಿಸುವುದು ಅತ್ಯಂತ ಅಗತ್ಯ. ಸಹೋದರನೊಂದಿಗೆ ಆಸ್ತಿ ಸಂಬಂಧಿತ ಸಮಸ್ಯೆ ಬಗೆಹರಿಯಲಿದೆ. ಅವಿವಾಹಿತರಿಗೆ ವಿವಾಹ ಯೋಗ ಕಂಡುಬರುತ್ತದೆ. ದಂಪತಿಗಳಿಗೆ ಸಂತಾನಯೋಗದ ಸುಂದರ ಅವಕಾಶವಿದೆ. ಪ್ರೇಮಿಗಳಲ್ಲಿ ಕೆಲವರು ವಿರಸತೆಯನ್ನು ತೋರಿಸಬಹುದು, ಆದರೆ ಇದರಿಂದ ಮನಸ್ಸಿಗೆ ತೀವ್ರ ಕಿರಿಕಿರಿ ತರುವುದಿಲ್ಲ. ಉದ್ಯೋಗದಲ್ಲಿ ಜವಾಬ್ದಾರಿ ಹೆಚ್ಚಾಗುತ್ತದೆ, ಸ್ಥಾನ ಬದಲಾವಣೆ ಸಂಭವಿಸಬಹುದು, ಆದರೆ ಹಿರಿಯ ಅಧಿಕಾರಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆಯುವುದು ಧೈರ್ಯ ಮತ್ತು ಪ್ರೋತ್ಸಾಹ ನೀಡುತ್ತದೆ. ಶತ್ರುಗಳಿಂದ ಹಾನಿಯ ಭೀತಿ ಇದೆ – ಎಚ್ಚರಿಕೆಯಿಂದ ವರ್ತಿಸಿ. ಕೋರ್ಟ್–ಕಚೇರಿ ಸಂಬಂಧಿತ ಕೆಲಸಗಳಲ್ಲಿ ಹಿನ್ನಡೆಗಳ ಸಾಧ್ಯತೆ ಇದೆ. ತಪ್ಪುಗಳಿಂದ ಅನಾವಶ್ಯಕ ತೊಂದರೆ ಉಂಟಾಗಬಹುದು. ಗುತ್ತಿಗೆದಾರರಿಗೆ ಆರ್ಥಿಕ ಪ್ರಗತಿ ಕಾಣುವ ಲಕ್ಷಣಗಳಿವೆ. ಷೇರು ಮಾರುಕಟ್ಟೆಯಲ್ಲಿ ಅಲ್ಪ ಅನುಕೂಲ. ನಟ–ನಟಿಯರಿಗೆ ಬೇಡಿಕೆ ಹೆಚ್ಚಾಗುವ ಸೂಚನೆಗಳಿವೆ.
ಕುಂಭ ರಾಶಿ – ವ್ಯಾಪಾರ ವ್ಯವಹಾರಗಳಲ್ಲಿ ಆರ್ಥಿಕ ಸ್ಥಿತಿಯಲ್ಲಿ ಗಣನೀಯ ಸುಧಾರಣೆ ಕಾಣಿಸುತ್ತದೆ. ನಿಮ್ಮ ಆರೋಗ್ಯ ಉತ್ತಮವಾಗಿದೆ. ವಿವಾಹ ಯೋಗ ಮತ್ತು ಸಂತಾನಯೋಗದ ಪುನರುತ್ಥಾನ ಕಾಣಿಸುತ್ತದೆ – ಪುತ್ರ ಯೋಗ ಬಲವಾಗಿ ಇದೆ. ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಉತ್ತಮ ಬದಲಾವಣೆಗಳು ಸಂಭವಿಸುತ್ತವೆ. ಹಳೆಯ ಅಳಿಸಿಹೋಗಿದ ಬಂಧುಗಳೊಂದಿಗೆ ಉತ್ತಮ ಬಾಂಧವ್ಯ ಪುನಃ ಸ್ಥಾಪನೆಯಾಗಲಿದೆ. ಪತಿ–ಪತ್ನಿಗಳ ನಡುವೆ ಪ್ರೇಮ ಮಧುರವಾಗಿದ್ದು, ಸಂಗಾತಿಯೊಂದಿಗೆ ಪ್ರೇಕ್ಷಣೀಯ ಸ್ಥಳಕ್ಕೆ ಭೇಟಿ ಸಾಧ್ಯ. ಮನೋಕಾಮನೆಗಳು ಈಡೇರಲು ಶಿಘ್ರ ಸಾಧ್ಯತೆ ಇದೆ. ಪ್ರೇಮಿಗಳಿಗೆ ಇದು ಉತ್ತಮ ದಿನ. ಸಿದ್ಧ ಉಡುಪು, ಸ್ಯಾರಿ ಸೆಂಟರ್ ವ್ಯಾಪಾರಿಗಳಿಗೆ ಧನಲಾಭದ ದಿನವಾಗಿದೆ. ಖಾಸಗಿ ಉದ್ಯೋಗಿಗಳಿಗೆ ಸಂಬಳ ಏರಿಕೆ, ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಉತ್ತಮ ಪ್ರಶಂಸೆ ದೊರೆಯಲಿದೆ. ಮಕ್ಕಳ ಮದುವೆ ಸಂಬಂಧಿ ಚರ್ಚೆ ಮಾಡುವುದು ಉತ್ತಮ ಸಮಯ. ಮಕ್ಕಳ ದೇಹಾಲಸ್ಯದಿಂದ ಕೆಲವರಿಗೆ ತೊಂದರೆ ಸಾಧ್ಯ. ಟ್ರಾವೆಲ್ಸ್ ವ್ಯವಹಾರದಲ್ಲಿ ಕೆಲವೊಂದು ಆರ್ಥಿಕ ನಷ್ಟಗಳು ಎದುರಾಗಬಹುದು. ಭೂಮಿ ಸಂಬಂಧಿತ ವ್ಯಾಜ್ಯಗಳಲ್ಲಿ ಜಯ ನಿಮ್ಮದಾಗುತ್ತದೆ. ಸರ್ಕಾರಿ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ, ಬಾಕಿ ಹಣ ವಸೂಲಾಗುತ್ತದೆ. ದಾಂಪತ್ಯ ಜೀವನದಲ್ಲಿ ನೆಮ್ಮದಿ ಅನುಭವಿಸುತ್ತೀರಿ. ಕಾನೂನು ಹೋರಾಟ ನಿಮ್ಮ ಪರವಾಗಿ ಜಯವಂತವಾಗಲಿದೆ. ಮದುವೆ ಬಯಸುವವರಿಗೆ ಯಶಸ್ಸಿನ ಸೂಚನೆ. ಸಿಮೆಂಟ್, ಕಬ್ಬಿಣ, ಮರಳು, ಇಟ್ಟಿಗೆ ವ್ಯಾಪಾರಗಳಲ್ಲಿ ಉತ್ತಮ ಅಭಿವೃದ್ಧಿ ಕಾಣಲಿದೆ.
ಮೀನ ರಾಶಿ –ಆಸ್ತಿ ಹಂಚಿಕೆಯ ವೇಳೆ ಮೋಸದ ಸಂಭವವಿದ್ದು, ಜಾಗ್ರತೆ ಅಗತ್ಯ. ಉದ್ಯೋಗದಲ್ಲಿ ಸಮಸ್ಯೆಗಳು ಎದುರಾದಾಗ ಚಾಣಾಕ್ಷತೆಯಿಂದ ಪಾರಾಗುವಿರಿ. ಹೊಸ ವ್ಯಾಪಾರ ಅಂಗಡಿ ಪ್ರಾರಂಭಿಸಿದವರು ನಿಧಾನವಾಗಿ ಭಾಗ್ಯೋದಯ ಅನುಭವಿಸಲಿದ್ದಾರೆ. ಪತಿ–ಪತ್ನಿಗಳ ನಡುವೆ ಸಾಮರಸ್ಯ ಹೆಚ್ಚಾಗಲಿದೆ. ಪ್ರೇಮಿಗಳು ಇಂದು ಸೇರಲು ಉತ್ಸಾಹ ಹೊಂದಿದ್ದಾರೆ. ಐ.ಟಿ ಉದ್ಯೋಗಸ್ಥರು ಒತ್ತಡದ ಮಧ್ಯೆ ಕೆಲಸ ನಿರ್ವಹಿಸಬೇಕಾಗುತ್ತದೆ. ಹಳೆಯ ಸಂಗಾತಿಯ ನೆನಪು ಕೆಲವರಿಗೆ ಮನಸ್ಸಿನಲ್ಲಿ ಕಾಡಬಹುದು. ಭೂಮಿ ಮತ್ತು ಕಟ್ಟಡ ವ್ಯವಹಾರಗಳಲ್ಲಿ ಧನಲಾಭದ ಸೂಚನೆ ಇದೆ. ಆಸ್ತಿ ವಿಚಾರದಲ್ಲಿ ಸಹೋದರಿಂದ ಮಾನಸಿಕ ಕಿರಿಕಿರಿ ಎದುರಾಗಬಹುದು. ಆರೋಗ್ಯದಲ್ಲಿ ಏರುಪೇರು, ಮೂಲವ್ಯಾಧಿ ಅಥವಾ ಪಾದ ಉರಿತದ ಸಮಸ್ಯೆ ಇರುವ ಸಂಭವವಿದೆ – ಎಚ್ಚರಿಕೆ ವಹಿಸಿ. ಮೋಹನ ಚಲಿಸುವಾಗ ಜಾಗೃತಿ ಅಗತ್ಯ. ಮಧ್ಯಸ್ಥಿಕೆ ವಹಿಸಿದ ವ್ಯವಹಾರಗಳಲ್ಲಿ ಎಚ್ಚರಿಕೆಯಿಂದ ನಡೆಯಿರಿ. ಹೊಸ ಒಪ್ಪಂದಗಳಿಗೆ ಅಂಗೀಕಾರ ಕೊಡಲು ಉತ್ತಮ ಸಮಯ. ಆದಾಯದ ಮೂಲ ಗೋಚರವಾಗಲಿದೆ. ಕಾನೂನು ವ್ಯಾಜ್ಯಗಳು ನಿಮ್ಮ ಪರವಾಗಿ ತೀರ್ಮಾನವಾಗುತ್ತವೆ. ಪ್ರೇಮ ಪ್ರಸಂಗಗಳಲ್ಲಿ ಯಶಸ್ಸು. ಕಷ್ಟದಲ್ಲಿರುವ ಬಂಧುಗಳಿಗೆ ಸಹಾಯ ಮಾಡುವ ಸಮಯ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಫೆಬ್ರವರಿ 13, 2026 – ಶುಕ್ರವಾರದ ರಾಶಿ ಭವಿಷ್ಯ
♈ಮೇಷ: ಕಛೇರಿಯಲ್ಲಿ ಉಂಟಾದ ಕೆಲವು ಗೊಂದಲಗಳು ನಿಮ್ಮ ಮನಸ್ಸನ್ನು... ಓದನ್ನು ಮುಂದುವರಿಸಿ
ಫೆಬ್ರವರಿ 12, 2026, ಗುರುವಾರದ ರಾಶಿ ಭವಿಷ್ಯ
ಮೇಷ ರಾಶಿ : ಜನರಿಗೆ ಶುಭ ವರ್ತನೆಗಳು – ಹಣ, ಪ್ರೀತಿ ಮತ್ತು ಆರೋಗ... ಓದನ್ನು ಮುಂದುವರಿಸಿ
ಫೆಬ್ರವರಿ 11, 2026 - ಬುಧವಾರದ ರಾಶಿ ಭವಿಷ್ಯ
ಮೇಷ ರಾಶಿ – ಇಂದು ಮೇಷ ರಾಶಿಯವರಿಗೆ ಪ್ರವಾಸಕ್ಕೆ ಅತ್ಯಂತ ಯೋಗ್ಯವ... ಓದನ್ನು ಮುಂದುವರಿಸಿ
ಫೆಬ್ರವರಿ 10, 2026 - ಮಂಗಳವಾರದ ರಾಶಿ ಭವಿಷ್ಯ
ಮೇಷ ರಾಶಿ: ಭೂ ವ್ಯವಹಾರ ಹಾಗೂ ಹೂಡಿಕೆಯಿಂದ ಧನಲಾಭದ ಸೂಚನೆಗಳಿವೆ.... ಓದನ್ನು ಮುಂದುವರಿಸಿ
ಫೆಬ್ರವರಿ 9, 2026, ಸೋಮವಾರದ ರಾಶಿ ಭವಿಷ್ಯ
ಮೇಷ ರಾಶಿ : ಇಂದು ಮಿಶ್ರ ಫಲಗಳ ದಿನ ಶತ್ರುಗಳಿಂದ ತೊಂದರೆ ಉಂಟಾಗು... ಓದನ್ನು ಮುಂದುವರಿಸಿ
ಈ ಸಂಖ್ಯೆಯಲ್ಲಿ ಜನಿಸಿದವರು ಐಶ್ವರ್ಯಕ್ಕೆ ಕಾರಣರಾಗುತ್ತಾರೆ; ಕುಟುಂಬಕ್ಕೆ ಧನಲಾಭದ ಯೋಗ
ಅಂಕಶಾಸ್ತ್ರದ ಪ್ರಕಾರ, ವ್ಯಕ್ತಿಯ ಜನ್ಮ ದಿನಾಂಕವು ಅವರ ಜೀವನ ಮಾತ್ರವಲ್ಲದೆ ಕುಟುಂಬದ... ಓದನ್ನು ಮುಂದುವರಿಸಿ
ಫೆಬ್ರವರಿ 5, 2026, ಗುರುವಾರದ ರಾಶಿ ಭವಿಷ್ಯ
ಮೇಷ ರಾಶಿ : ಇಂದು ಆತ್ಮವಿಶ್ವಾಸ ಹೆಚ್ಚಿರುತ್... ಓದನ್ನು ಮುಂದುವರಿಸಿ
ಫೆಬ್ರವರಿ 4, 2026, ಬುಧವಾರದ ರಾಶಿ ಭವಿಷ್ಯ
ಮೇಷ ರಾಶಿ : ಕೆಲಸದಲ್ಲಿ ಹೊಸ ಅವಕಾಶಗಳು ಕಾಣಿ... ಓದನ್ನು ಮುಂದುವರಿಸಿ
ಫೆಬ್ರವರಿ 2, 2026, ಸೋಮವಾರದ ರಾಶಿ ಭವಿಷ್ಯ
ಮೇಷ ರಾಶಿ : ಇಂದು ಹೊಸ ಆರಂಭಗಳಿಗೆ ಉತ್ತಮ ದಿನ. ಕೆಲಸದಲ್ಲ... ಓದನ್ನು ಮುಂದುವರಿಸಿ