ಫೆಬ್ರವರಿ 10, 2026 - ಮಂಗಳವಾರದ ರಾಶಿ ಭವಿಷ್ಯ
ಮೇಷ ರಾಶಿ: ಭೂ ವ್ಯವಹಾರ ಹಾಗೂ ಹೂಡಿಕೆಯಿಂದ ಧನಲಾಭದ ಸೂಚನೆಗಳಿವೆ. ರಿಯಲ್ ಎಸ್ಟೇಟ್ ಮಧ್ಯವರ್ತಿಗಳು ನೇರ ನಡೆ–ನುಡಿಯಿಂದಲೇ ಲಾಭ ಪಡೆಯುವ ಸಾಧ್ಯತೆ ಇದೆ. ಆದರೆ ಅಧಿಕಾರಿವರ್ಗದವರು ಕೆಲ ಆತಂಕಗಳನ್ನು ಎದುರಿಸಬೇಕಾಗಬಹುದು. ಕುಟುಂಬದಲ್ಲಿ ವಿವಾಹಯೋಗಕ್ಕೆ ಸಂಬಂಧಿಸಿದಂತೆ ಕೆಲವು ವಿಘ್ನಗಳು ಎದುರಾಗುವ ಸೂಚನೆ ಇದೆ. ಉಪನ್ಯಾಸಕರಿಗೆ ಈ ವಾರದೊಳಗೆ ಒಂದು ಸಿಹಿ ಸುದ್ದಿ ಸಿಗಲಿದೆ. ಮದುವೆ ಕುರಿತು ಹೊಸ ಆಶಾಭಾವನೆ ಮನದಲ್ಲಿ ಮೂಡಬಹುದು. ಶತ್ರುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಹಾಗೂ ಭದ್ರತೆ ಅಗತ್ಯ. ವೃತ್ತಿ ಕ್ಷೇತ್ರದಲ್ಲಿ ಕೆಲವು ವೈಫಲ್ಯಗಳು ಕಂಡುಬರಬಹುದು. ಸಂಬಳಕ್ಕೆ ಸಂಬಂಧಿಸಿದಂತೆ ಮ್ಯಾನೇಜರ್‌ರೊಂದಿಗೆ ಅಸಮಾಧಾನ ಉಂಟಾಗುವ ಸಾಧ್ಯತೆ ಇದೆ. ಆರೋಗ್ಯದ ದೃಷ್ಟಿಯಿಂದ ಹೃದಯ ಮತ್ತು ಮೂತ್ರ ಸಂಬಂಧಿ ಸಮಸ್ಯೆಗಳ ಬಗ್ಗೆ ಜಾಗ್ರತೆ ವಹಿಸಬೇಕು. ದಾಂಪತ್ಯ ಜೀವನದಲ್ಲಿ ವಾದ–ವಿವಾದಗಳು ಉಂಟಾಗುವ ಸಾಧ್ಯತೆ ಇದೆ. ಹೋಟೆಲ್ ಮತ್ತು ಸಿದ್ಧ ಉಡುಪು ವ್ಯಾಪಾರದಲ್ಲಿ ಧನಹಾನಿ ಸಂಭವಿಸಬಹುದು. ಪ್ರೇಮಿಗಳ ನಡುವೆ ಅನುಮಾನಗಳು ಮೂಡುವ ಸಾಧ್ಯತೆ ಇದೆ. ವಿಶೇಷವಾಗಿ, ವಜಾಗೊಂಡ ಅಥವಾ ಅಮಾನತುಗೊಂಡ ಕಾರ್ಮಿಕರಿಗೆ ತಮ್ಮ ಮಾತೃ ಇಲಾಖೆಗೆ ಮರಳಿ ಸೇರುವ ಸುವರ್ಣ ಅವಕಾಶ ದೊರೆಯುವ ಸೂಚನೆಗಳಿವೆ.
ವೃಷಭ ರಾಶಿ: ಮಗಳ ಕುಟುಂಬಕ್ಕೆ ಸಂಬಂಧಿಸಿದಂತೆ ಒಂದು ಶುಭ ಸಂದೇಶವನ್ನು ಪಡೆಯುವಿರಿ. ಪ್ರೇಮಿಗಳ ಪಾಲಿಗೆ ಕುಟುಂಬದವರಿಂದ ಮದುವೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಆರಕ್ಷಕ ವರ್ಗದವರು ಹಾಗೂ ಕಾವಲು ಪಡೆಯುವವರಿಗೆ ಸಂತಸದ ಸುದ್ದಿಗಳು ಸಿಗಲಿವೆ. ಧನ ಲಾಭ ಕಂಡುಬಂದರೂ ಉಳಿತಾಯದಲ್ಲಿ ಶೂನ್ಯ ಸ್ಥಿತಿ ಎದುರಾಗುವ ಸೂಚನೆ ಇದೆ. ದಿನಗೂಲಿ ನೌಕರರಿಗೆ ಖಾಯಂ ಉದ್ಯೋಗದ ಅವಕಾಶಗಳು ಕಾಣಿಸಿಕೊಳ್ಳಬಹುದು. ವೃತ್ತಿ ಕ್ಷೇತ್ರದಲ್ಲಿ ಏರುಪೇರುಗಳು ಎದುರಾಗುವ ಸಾಧ್ಯತೆ ಇದೆ. ಆರೋಗ್ಯದ ದೃಷ್ಟಿಯಿಂದ ದೇಹದಲ್ಲಿ ನಿಶ್ಯಕ್ತಿ ಕಾಡುವ ಸಾಧ್ಯತೆ ಇದೆ. ವಿದೇಶ ಪ್ರಯಾಣಕ್ಕೆ ಸಂಬಂಧಿಸಿದಂತೆ ಅಡಚಣೆಗಳು ಎದುರಾಗಬಹುದು. ಕೆಲವರಿಗೆ ಉದ್ಯೋಗದಲ್ಲಿ ಬದಲಾವಣೆ ಸಂಭವಿಸಬಹುದು. ವರ್ಗಾವಣೆಯ ವಿಷಯದಲ್ಲಿ ವಿಳಂಬ ಅಥವಾ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಮಕ್ಕಳ ಕಾರಣದಿಂದ ಧನ–ಸಂಪತ್ತನ್ನು ನೀಚಕಾರ್ಯಗಳಿಗೆ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು. ಯತ್ನಿಸಿದ ಉದ್ಯೋಗದಲ್ಲಿ ವಿಘ್ನಗಳು ಎದುರಾಗುವ ಸೂಚನೆ ಇದೆ. ಕೆಲವರಿಗೆ ವಾಹನ ಅಪಘಾತದ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ. ಪ್ರೇಮಿಗಳ ನಡುವೆ ಸರಸ–ಸಾಮರಸ್ಯ ಹೆಚ್ಚಾಗಲಿದೆ. ಆದರೆ ಕೆಲವರು ಚರ್ಮದ ಕಾಯಿಲೆ ತೊಂದರೆಯಿಂದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಮಿಥುನ ರಾಶಿ: ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳ ಮೂಲಕ ಆದಾಯ ದ್ವಿಗುಣವಾಗುವ ಸಾಧ್ಯತೆ ಇದೆ. ನ್ಯಾಯಾಂಗ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳಿಗೆ ಬಡ್ತಿ ಹಾಗೂ ವರ್ಗಾವಣೆ ಸಂಭವಿಸುವ ಸೂಚನೆ ಇದೆ. ಸದ್ಯಕ್ಕೆ ಬೇರೆ ವ್ಯವಹಾರಗಳ ಕಡೆ ಗಮನ ಹರಿಸದೇ, ಈಗಾಗಲೇ ಮಾಡುತ್ತಿರುವ ವ್ಯವಹಾರವನ್ನೇ ಮುಂದುವರಿಸುವುದು ಒಳಿತು. ಹಳೆಯ ಸಾಲವನ್ನು ಮರುಪಾವತಿ ಮಾಡುವ ಅವಕಾಶ ದೊರೆಯಲಿದೆ. ಸ್ನೇಹಿತರಿಂದ ಸಹಾಯ ಮತ್ತು ಬೆಂಬಲ ಲಭ್ಯವಾಗಲಿದೆ. ಆಯುರ್ವೇದ ಪಂಡಿತರಿಗೆ ಪತ್ನಿ ಹಾಗೂ ಬಂಧು ವರ್ಗದವರಿಂದ ಧನಲಾಭವಾಗುವ ಸಾಧ್ಯತೆ ಇದೆ. ವಾಣಿಜ್ಯ ಸಂಕೀರ್ಣ ನಿರ್ಮಾಣ ಯೋಜನೆಗೆ ಸಂಬಂಧಿಸಿದ ಕಾರ್ಯಗಳು ಮುಂದುವರಿಯಲಿವೆ. ವಾಕ್ ಸಮರದಿಂದ ದಂಡ ಕಟ್ಟುವ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇರುವುದರಿಂದ ಮಾತಿನಲ್ಲೂ ಸಂಯಮ ಅಗತ್ಯ. ರಿಯಲ್ ಎಸ್ಟೇಟ್ ಉದ್ಯಮದಾರರಿಗೆ ಹಲವು ರೀತಿಯಲ್ಲಿ ಧನಲಾಭ ಕಂಡುಬರಲಿದೆ.
ಕರ್ಕಾಟಕ ರಾಶಿ: ಉನ್ನತ ವ್ಯಾಸಂಗ ಅಧ್ಯಯನಕ್ಕಾಗಿ ವಿದೇಶ ಪ್ರವಾಸ ಮಾಡುವ ಯೋಗವಿದೆ. ಉದ್ಯೋಗಕ್ಕಾಗಿ ಪ್ರಯತ್ನಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ ಸಾಧಿಸುವ ಸಾಧ್ಯತೆ ಇದೆ. ಹಾಲು ಉತ್ಪನ್ನ ಮಾರಾಟಗಾರರಿಗೆ ದಿಡೀರನೆ ಹಾಲು ಕೊಡುವವರನ್ನು ಕಳೆದುಕೊಳ್ಳುವ ಭೀತಿ ಕಾಡಬಹುದು. ಸಂಗಾತಿಯೊಂದಿಗೆ ಕಿರು ಪ್ರವಾಸ ಮಾಡುವ ಅವಕಾಶ ದೊರೆಯಲಿದೆ. ಆದರೆ ಬಂಧುಗಳ ಮುಖಾಂತರ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಕುಟುಂಬ ಸದಸ್ಯರು ದೂರವಾಗುವ ಸಂದರ್ಭಗಳು ಉಂಟಾಗಿ ಏಕಾಂಗಿ ಭಾವನೆ ಕಾಡಬಹುದು. ಶಿಕ್ಷಕ ವೃಂದಕ್ಕೆ ಒಂದು ಸಿಹಿ ಸುದ್ದಿ ಸಿಗಲಿದೆ. ಆದರೆ ಮಿತ್ರರಿಂದ ಧನಹಾನಿ ಹಾಗೂ ಆತ್ಮೀಯರಿಂದ ಮಾನಹಾನಿಯ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ. ಎಷ್ಟೇ ಪ್ರಯತ್ನಿಸಿದರೂ ಕೆಲವು ವಿಷಯಗಳಲ್ಲಿ ಯಶಸ್ಸು ಕೈ ತಪ್ಪಿದಂತೆ ನಿರಾಸೆ ಮೂಡಬಹುದು. ಆದರೂ ಬಂಧುಗಳಿಂದ ಸಮಾಧಾನ ಸಿಗಲಿದೆ. ವ್ಯಾಪಾರದಲ್ಲಿ ವಿಳಂಬ ಸಂಭವಿಸುವ ಸಾಧ್ಯತೆ ಇದೆ ಮತ್ತು ಕೆಲವೊಂದರಲ್ಲಿ ನಷ್ಟವೂ ಆಗಬಹುದು. ಮಕ್ಕಳಿಗೆ ಐಶ್ವರ್ಯ ವೃದ್ಧಿಯ ಸೂಚನೆಗಳಿವೆ. ಶುಭ ಕಾರ್ಯಗಳಿಂದ ಮನಸ್ಸಿಗೆ ಸಂತಸ ಲಭಿಸುತ್ತದೆ. ಆಸ್ತಿ ಸಂಪಾದನೆಗೆ ಯೋಗವಿದ್ದು, ಕೆಲವರಿಗೆ ನಿವೃತ್ತಿ ಜೀವನ ಸುಖಕರವಾಗುವ ಸೂಚನೆಗಳು ಕಂಡುಬರುತ್ತವೆ.
ಸಿಂಹ ರಾಶಿ: ಈ ವಾರ ಸಿಂಹ ರಾಶಿಯವರಿಗೆ ಒತ್ತಡ ಮತ್ತು ಸವಾಲುಗಳ ಮಿಶ್ರ ಫಲಗಳು ಕಂಡುಬರುತ್ತವೆ. ಕಾರ್ಖಾನೆ ಮಾಲಕರಿಗೆ ಕುಶಲಕರ್ಮಿಗಳ ಕೊರತೆ ಎದುರಾಗುವ ಸಾಧ್ಯತೆ ಇದೆ. ಮಗನ ಪ್ರಯತ್ನಕ್ಕೆ ಸಂಬಂಧಿಸಿದಂತೆ ಒಂದು ಶುಭ ಸಂದೇಶವನ್ನು ಪಡೆಯುವಿರಿ. ಜನಪ್ರತಿನಿಧಿಗಳಿಗೆ ರಾಜಕೀಯ ವಿದ್ಯಮಾನಗಳಿಂದ ಆತಂಕ ಕಾಡಬಹುದು. ಕೆಲವರಿಗೆ ನಿವೃತ್ತಿ ಜೀವನದ ಬಗ್ಗೆ ಜಿಗುಪ್ಸೆ ಉಂಟಾಗುವ ಸಾಧ್ಯತೆ ಇದೆ. ತಂದೆ–ಮಗನ ನಡುವೆ ಕಾದಾಟ ಸಂಭವಿಸಬಹುದು. ಕೆಲ ಸಂದರ್ಭಗಳಲ್ಲಿ ಕುಟುಂಬ ಸದಸ್ಯರಿಂದ ವಿರೋಧ ಎದುರಿಸಬೇಕಾದೀತು. ಕಾರ್ಖಾನೆ ಮತ್ತು ಯಂತ್ರ ಉದ್ಯಮಗಳ ವ್ಯವಹಾರದಲ್ಲಿ ತೀವ್ರ ಆರ್ಥಿಕ ಸಂಕಷ್ಟ ಎದುರಾಗುವ ಸೂಚನೆ ಇದೆ. ಸಾಲದ ಭಯ ಮತ್ತು ಆತಂಕ ಮನಸ್ಸನ್ನು ಕಾಡಲಿದೆ. ಅಪಘಾತ ಸಂಭವಿಸುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಜಾಗ್ರತೆ ವಹಿಸುವುದು ಅವಶ್ಯಕ. ಉದ್ಯೋಗ ಕ್ಷೇತ್ರದಲ್ಲಿ ಅಪಮಾನಕರ ಸಂದರ್ಭಗಳು ಎದುರಾಗಬಹುದು. ಪತಿ–ಪತ್ನಿಯರ ನಡುವೆ ಬಿನ್ನಾಭಿಪ್ರಾಯಗಳು ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ಕಂಪ್ಯೂಟರ್ ಹಾಗೂ ಬಿಡಿಭಾಗ ವ್ಯಾಪಾರಿಗಳಿಗೆ ಮಂದಗತಿಯ ನಡುವೆಯೂ ಕೆಲವು ಅನುಕೂಲಕರ ಸಂದರ್ಭಗಳು ಕಂಡುಬರಲಿವೆ.
ಕನ್ಯಾ ರಾಶಿ: ಆಪ್ತರೊಬ್ಬರ ಹಣಕಾಸು ನೆರವಿನಿಂದ ನಿವೇಶನ ಖರೀದಿಸುವ ಯೋಗವಿದೆ. ಆದರೆ ಅಧಿಕಾರಿಗಳು ಕಾರ್ಯಕ್ಷೇತ್ರದಲ್ಲಿ ಅಡ್ಡಿ ಹಾಗೂ ಆತಂಕಗಳನ್ನು ಎದುರಿಸಬೇಕಾಗಬಹುದು. ವಿದೇಶ ಪ್ರಯಾಣಕ್ಕೆ ಪ್ರಯತ್ನಿಸಿದವರಿಗೆ ಶುಭವಾರ್ತೆ ದೊರೆಯಲಿದೆ. ಧನಾಗಮನ ಇದ್ದರೂ ಉಳಿತಾಯ ಶೂನ್ಯವಾಗುವ ಸಾಧ್ಯತೆ ಇದೆ. ರಿಯಲ್ ಎಸ್ಟೇಟ್ ಉದ್ಯಮದಾರರಿಗೆ ಸ್ವಲ್ಪ ಚೇತರಿಕೆಯ ಸೂಚನೆಗಳು ಕಂಡುಬರುತ್ತವೆ. ಬಂಧುಗಳೊಂದಿಗೆ ಪುನರ್ಮಿಲನವಾಗುವ ಅವಕಾಶ ದೊರೆಯಲಿದೆ. ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿಯ ಕಾಲ ಆರಂಭವಾಗುತ್ತಿದೆ. ಆದರೆ ಸಹೋದರರೊಂದಿಗೆ ಅನಾವಶ್ಯಕ ವೈಮನಸ್ಸು ಉಂಟಾಗುವ ಸಾಧ್ಯತೆ ಇದೆ. ಮತ್ತೆ ಕುಟುಂಬದೊಂದಿಗೆ ಸೇರುವ ಬಯಕೆ ಮನಸ್ಸಿನಲ್ಲಿ ಮೂಡಲಿದೆ. ಪ್ರೇಮಿಗಳ ಮದುವೆ ಆಸೆ ತಾತ್ಕಾಲಿಕವಾಗಿ ಭಂಗವಾಗುವ ಸೂಚನೆ ಇದೆ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಕಷ್ಟ–ನಷ್ಟಗಳ ಸಮತೋಲನ ಎದುರಾಗಲಿದೆ. ಆಸ್ತಿ–ಪಾಸ್ತಿ ಖರೀದಿಯಲ್ಲಿ ಅಡಚಣೆಗಳು ಎದುರಾಗುವ ಸಾಧ್ಯತೆ ಇದೆ. ಮಗಳ ಕುಟುಂಬದಲ್ಲಿ ವಿವಾದ ಹಾಗೂ ತಕರಾರುಗಳು ಉಂಟಾಗುವ ಸಂಭವ ಇರುವುದರಿಂದ ಸಂಯಮ ಅಗತ್ಯ.
ತುಲಾ ರಾಶಿ: ಸಾಲ ಸೌಲಭ್ಯ ಪಡೆಯುವ ಅವಕಾಶ ದೊರೆಯಲಿದೆ. ಅಧಿಕಾರಿಗಳಿಗೆ ನಿರೀಕ್ಷೆಗೆ ಮೀರಿದ ಗಿಫ್ಟ್ ಲಭ್ಯವಾಗಬಹುದು. ಸಾಲದಿಂದ ಮುಕ್ತಿ ಸಿಗಲಿದೆ ಮತ್ತು ವಿವಿಧ ಮೂಲಗಳಿಂದ ಧನಲಾಭ ದೊರೆಯಲಿದೆ. ಆದರೂ ಖರ್ಚಿನಲ್ಲಿ ಹಿಡಿತ ವಹಿಸುವುದು ಅತ್ಯಂತ ಅವಶ್ಯಕ. ಹಿರಿಯ ಅಧಿಕಾರಿಗಳಿಂದ ಪ್ರೋತ್ಸಾಹ ದೊರೆಯುವ ಸಾಧ್ಯತೆ ಇದೆ. ಇಷ್ಟಪಟ್ಟಿರುವ ಸ್ಥಾನಕ್ಕೆ ವರ್ಗಾವಣೆ ಸಾಧ್ಯತೆ ಇದೆ. ಸಂಗಾತಿಗೆ ಒಲವಿನ ಉಡುಗೊರೆ ನೀಡುವ ಅವಕಾಶ ಲಭಿಸುತ್ತದೆ. ಆದರೆ ಆಸ್ತಿ ಪಾಲುದಾರಿಕೆ ಸಂಬಂಧಿ ವಿಚಾರಗಳಲ್ಲಿ ಕುಟುಂಬದ ಹಿರಿಯರ ಉದ್ವೇಗ ಉಂಟಾಗಬಹುದು. ಕುಟುಂಬದ ಸದಸ್ಯರೊಂದಿಗೆ ವಿರಸ ಮೂಡಬಹುದು. ಆಸ್ತಿಪಾಸ್ತಿ ಮಾರಾಟದಲ್ಲಿ ಅಡಚಣೆ ಎದುರಿಸಬೇಕಾಗಬಹುದು. ಅತ್ತೆ-ಮಾವನವರೊಂದಿಗೆ ಭಿನ್ನಾಭಿಪ್ರಾಯಗಳು ಮೂಡುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿ: ರಾಜಕಾರಣಿಗಳಿಗೆ ಸುವರ್ಣ ಅವಕಾಶಗಳು ಎದುರಾಗುತ್ತವೆ; ಅವುಗಳನ್ನು ಸದುಪಯೋಗಪಡಿಸಿಕೊಳ್ಳುವ ಬಗ್ಗೆ ಗಮನ ಹರಿಸುವುದು ಮುಖ್ಯ. ಭೂ ವ್ಯವಹಾರದಲ್ಲಿ ಲಾಭದ ಸೂಚನೆ ಇದೆ. ಸಣ್ಣ ಕೈಗಾರಿಕೆ ಪ್ರಾರಂಭಿಸಲು ಉತ್ತಮ ಸಮಯವಾಗಿದೆ. ಈ ರಾಶಿಯವರು ಬಂಗಾರದಂತಹ ಹೆಂಡತಿ ಹೊಂದಿದ್ದರೂ, ಪರ ಸ್ತ್ರೀ ಸಹವಾಸವನ್ನು ಇಷ್ಟಪಡುವ ಪ್ರಯತ್ನಗಳು ಕಾಣಬಹುದು. ಶುಭ–ಮಂಗಳ ಕಾರ್ಯಗಳು ಜರುಗುವ ಸಾಧ್ಯತೆ ಇದೆ. ವಿದೇಶದಲ್ಲಿ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಅಗತ್ಯ ಕೆಲಸಗಳು ಕೈಗೂಡಲಿವೆ. ಆಕಸ್ಮಿಕ ಧನ ಸಂಪಾದನೆಯಿಂದ ಸಾಲದ ಭಾರದಿಂದ ಮುಕ್ತಿ ದೊರೆಯಬಹುದು. ಪತ್ನಿಯಿಂದ ಸಹಕಾರ ಹಾಗೂ ಪ್ರೀತಿ–ವಿಶ್ವಾಸವು ಮನಸ್ಸಿಗೆ ಹಿತ ತರಲಿದೆ. ನವವಿವಾಹಿತರಿಗೆ ಸಂತಾನದ ಭಾಗ್ಯ ಕಾಣಿಸುತ್ತದೆ. ಪ್ರಯಾಣದ ವೇಳೆ ಅಪಘಾತ ಸಂಭವಿಸಬಹುದಾಗಿದೆ. ಮಕ್ಕಳಿಂದ ನೀಚ ಕಾರ್ಯಗಳಿಂದ ಅವಮಾನ ಎದುರಾಗುವ ಸಾಧ್ಯತೆ ಇದೆ. ಹಿತಶತ್ರುಗಳಿಂದ ಕಿರಿಕಿರಿ ಎದುರಾಗಬಹುದು. ಉದ್ಯೋಗದಲ್ಲಿ ಒತ್ತಡ ಉಂಟಾಗುತ್ತದೆ. ಕೆಲವರ ಪತ್ನಿಯು ವೈರಾಗ್ಯ ಮನೋಭಾವ ತೋರಬಹುದು. ಕೆಲವರಿಗೆ ಆಕಸ್ಮಿಕ ಧನಲಾಭವೂ ಸಂಭವಿಸಲಿದೆ.
ಧನು ರಾಶಿ: ಆತ್ಮವಿಶ್ವಾಸ ಮತ್ತು ಧನಾತ್ಮಕ ಮನೋಭಾವವು ಪ್ರೇಯಸಿಯ ಹೃದಯ ಗೆಲುವಿಗೆ ಕಾರಣವಾಗಲಿದೆ. ಹಾಲು ಉತ್ಪನ್ನ ಮಾರಾಟಗಾರರಿಗೆ ಧನ ಲಾಭ ಕಾಣಲಿದೆ. ವಿಮಾ ಸಲಹೆಗಾರರು ಮತ್ತು ಉದ್ಯೋಗಿಗಳಿಗೂ ಧನ ಲಾಭ ಸಿಗಲಿದೆ. ಉದ್ಯೋಗ ಬದಲಾವಣೆ ಈ ಸಮಯದಲ್ಲಿ ಬೇಡ; ಈಗ ಉದ್ಯೋಗದಲ್ಲಿ ಪ್ರಗತಿಯ ಕಾಲವಾಗಿದೆ. ಹಣಕಾಸಿನ ಸಂಸ್ಥೆ ನಡೆಸುತ್ತಿದ್ದರೆ ಆರ್ಥಿಕ ಚೇತರಿಕೆ ಆಗಲಿದೆ. ಸಾಲ ಮರುಪಾವತಿಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ವೃತ್ತಿರಂಗದಲ್ಲಿ ಪ್ರಮೋಷನ್ ಭಾಗ್ಯದಿಂದ ಸಂತಸ ಅನುಭವವಾಗಲಿದೆ. ಆರೋಗ್ಯದಲ್ಲಿ ಸುಧಾರಣೆ ಕಾಣಿಸುತ್ತದೆ. ವ್ಯಾಪಾರ–ವ್ಯವಹಾರಗಳಲ್ಲಿ ಸಾಕಷ್ಟು ಲಾಭದಾಯಕ ಅವಕಾಶಗಳಿವೆ, ಆದರೆ ಖರ್ಚು ಹೆಚ್ಚುವ ಆತಂಕವೂ ಇರಲಿದೆ. ಭೂಮಿ ವ್ಯವಹಾರ, ಷೇರು ಮಾರುಕಟ್ಟೆ ಮತ್ತು ಯಂತ್ರೋಪಕರಣ ತಯಾರಿಕೆಯ ಉದ್ಯಮಗಳಲ್ಲಿ ಉತ್ತಮ ಆದಾಯ ಕಾಣಲಿದೆ. ಬೆಳ್ಳಿ ಮತ್ತು ಸುವರ್ಣ ವ್ಯಾಪಾರಸ್ಥರಿಗೆ ಆರ್ಥಿಕ ಚೇತರಿಕೆಯ ಸೂಚನೆ ಇದೆ.
ಮಕರ ರಾಶಿ: ವರ್ಗಾವಣೆ ಅಥವಾ ಪ್ರಮೋಷನ್ ಸಂಬಂಧಿತ ಪ್ರಯತ್ನಗಳಲ್ಲಿ ಯಶಸ್ಸು ಸಿಗಲಿದೆ. ನೌಕರರಿಗೆ ವಿವಿಧ ಮೂಲಗಳಿಂದ ಧನ ಲಾಭ ದೊರೆಯಲಿದೆ. ಮಕ್ಕಳ ಸಾಧನೆಯ ಪ್ರಗತಿಯಿಂದ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗಸ್ಥರಿಗೆ ಸ್ಥಿರತೆಯ ಬಗ್ಗೆ ಭಯ ಕಾಡಬಹುದು. ಪುಸ್ತಕ, ಬೇಕರಿ, ಕಾಂಡಿಮೆಂಟ್ ಮತ್ತು ಕ್ಯಾಂಟೀನ್ ನಡೆಸುವವರಿಗೆ ಲಾಭದ ಅವಕಾಶವಿದೆ. ಮನೆ ಬದಲಾಯಿಸುವುದು ಉತ್ತಮವಾಗಿದೆ. ಸಂಗಾತಿಯ ಮನಸ್ಸಿನಲ್ಲಿ ಚಂಚಲತೆ ಕಾಣುವುದರಿಂದ ಕೆಲಷ್ಟು ಆತಂಕ ಎದುರಾಗಬಹುದು. ಸರ್ಕಾರಿ ನೌಕರಿಯ ಈಡೇರಿಕೆ ಸಾಧ್ಯವಾಗಿದೆ. ದಾಯಾದಿಗಳಿಂದ ಆಸ್ತಿ ಸಂಬಂಧಿ ತೊಂದರೆಗಳು ಎದುರಾಗಬಹುದು. ಉದ್ಯೋಗದಲ್ಲಿ ಪ್ರಭಾವಶಾಲಿ ವ್ಯಕ್ತಿಯ ಪ್ರಭಾವ ಬೀರಲಿದೆ. ನಂಬಿಕಸ್ಥರಿಂದ ಧನ ಮತ್ತು ಮಾನ ಹಾನಿ ಸಂಭವಿಸಬಹುದು. ಮೀನುಗಾರಿಕೆಯ ವ್ಯಾಪಾರದಲ್ಲಿ ಆದಾಯ ಚೇತರಿಕೆ ಕಾಣಲಿದೆ. ರಾಜಕಾರಣಿಗಳು ಉನ್ನತ ಮಟ್ಟದ ಯಶಸ್ಸು ಸಾಧಿಸುತ್ತಾರೆ.
ಕುಂಭ ರಾಶಿ: ವ್ಯಾಪಾರದ ಅಭಿವೃದ್ಧಿಗೆ ಬೇಕಾದ ಆರ್ಥಿಕ ಬಲದೊಂದಿಗೆ ಕೆಲವು ಹೊಸ ಉಪಾಯಗಳನ್ನು ಅಳವಡಿಸಿಕೊಳ್ಳುವುದು ಉತ್ತಮ. ಜೂಜಾಟದ ಯಾವುದೇ ಚಟುವಟಿಕೆಗಳನ್ನು ಮಾಡಬೇಡಿ. ಮರಗೆಲಸ ವ್ಯಾಪಾರಿಗಳಿಗೆ ಉತ್ತಮ ಧನ ಲಾಭ ಸಿಗಲಿದೆ. ಮಹಿಳಾ ರಾಜಕಾರಣಿಗಳಿಗೆ ಉನ್ನತ ಮಟ್ಟದ ಯಶಸ್ಸು ದೊರೆಯಲಿದೆ. ರಕ್ಷಣಾ ಇಲಾಖೆಯ ಉದ್ಯೋಗಿಗಳಿಗೆ ಧನಲಾಭ ಲಭ್ಯವಾಗಲಿದೆ. ಹೈನುಗಾರರಿಗೆ ಒಳ್ಳೆಯ ಲಾಭ ಸಿಗಲಿದೆ. ಮಕ್ಕಳಿಗೆ ಉದ್ಯೋಗ ಪ್ರಾಪ್ತಿ ಸಾಧ್ಯ. ಮಂಗಳಕಾರ್ಯ ಮತ್ತು ಯತ್ನಗಳಲ್ಲಿ ಜಯ ಸಿಗಲಿದೆ. ಉದ್ಯೋಗದಲ್ಲಿ ಬದಲಾವಣೆ ಮತ್ತು ಬಡ್ತಿ ಸಂಭವಿಸಬಹುದು. ದಾಂಪತ್ಯ ಜೀವನದಲ್ಲಿ ಕೆಲವರು ಬಿರುಕು ಅನುಭವಿಸಬಹುದು. ಶತ್ರುಗಳಿಂದ ಶಾಂತ ಸಂದೇಶ ಸಿಗಲಿದೆ. ಬಹು ದಿನದಿಂದ ಕಾಡುತ್ತಿದ್ದ ರೋಗದ ಬಾಧೆಯಿಂದ ಮುಕ್ತಿ ದೊರೆಯಲಿದೆ.
ಮೀನ ರಾಶಿ: ಆಹಾರ ಪದಾರ್ಥದ ವ್ಯಾಪಾರ ಮಾಡುವವರಿಗೆ ಆದಾಯ ಹೆಚ್ಚಾಗಲಿದೆ. ನ್ಯಾಯಾಂಗ ಇಲಾಖೆಯ ಉದ್ಯೋಗಿಗಳಿಗೆ ಬಡ್ತಿ ಜೊತೆಗೆ ವರ್ಗಾವಣೆ ಸಂಭವಿಸಬಹುದು. ಪ್ರೇಮಿಗಳ ಮದುವೆಯ ಪ್ರಯತ್ನದಲ್ಲಿ ತಾಳ್ಮೆ ವಹಿಸುವುದು ಮುಖ್ಯ. ಮೀನುಗಾರರಿಗೆ ಅದೃಷ್ಟದ ದಿನಗಳೊಂದಿಗೆ ಧನ ಲಾಭ ಸಾಧ್ಯ. ಪಾಲುದಾರಿಕೆಯ ವ್ಯಾಪಾರದಲ್ಲಿ ಕೆಲವು ಅಲ್ಪ ಹಿನ್ನಡೆಗಳು ಕಾಣಬಹುದು. ವಿದ್ಯಾರ್ಜನೆಗಾಗಿ ವಿದೇಶ ಪ್ರವಾಸ ಯಶಸ್ವಿಯಾಗುವ ಸಾಧ್ಯತೆ ಇದೆ. ನೂತನ ವಾಹನ ಖರೀದಿ ಸಾಧ್ಯ. ವೈದ್ಯರಿಗೆ ಧನಾಗಮನ ಸಿಗಲಿದೆ. ಪುಸ್ತಕ ವ್ಯಾಪಾರದಲ್ಲಿ ಲಾಭದ ಅವಕಾಶಗಳಿವೆ. ರಾಜಕಾರಣಿಗಳಿಗೆ ಹೆಚ್ಚಿನ ಜವಾಬ್ದಾರಿ, ಆದರೆ ಅನುಕೂಲವೂ ದೊರೆಯಲಿದೆ. ರಂಗಭೂಮಿ ಕಲಾವಿದರಿಗೆ ಉತ್ತಮ ಅವಕಾಶಗಳು ಎದುರಾಗುತ್ತವೆ. ಮಕ್ಕಳಿಂದ ಸಿಹಿಸುದ್ದಿ ಲಭ್ಯ. ವ್ಯಾಪಾರಸ್ಥರಿಗೆ ಹಾಗೂ ರಾಜಕಾರಣಿಗಳಿಗೆ ಅನುಕೂಲ ಸಿಗಲಿದೆ. ಗರ್ಭಿಣಿಯರು ಜಾಗ್ರತೆ ವಹಿಸುವುದು ಮುಖ್ಯ. ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ ಸಂಭವಿಸಬಹುದು. ಧನಪ್ರಾಪ್ತಿಗೆ ಯೋಗವಿದೆ. ನಿವೇಶನ ಖರೀದಿಸುವ ಅವಕಾಶ, ಮತ್ತು ಕಂಕಣಬಲ ಪ್ರಾಪ್ತಿಯ ಸೂಚನೆಗಳೂ ಕಂಡುಬರುತ್ತವೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಫೆಬ್ರವರಿ 13, 2026 – ಶುಕ್ರವಾರದ ರಾಶಿ ಭವಿಷ್ಯ
♈ಮೇಷ: ಕಛೇರಿಯಲ್ಲಿ ಉಂಟಾದ ಕೆಲವು ಗೊಂದಲಗಳು ನಿಮ್ಮ ಮನಸ್ಸನ್ನು... ಓದನ್ನು ಮುಂದುವರಿಸಿ
ಫೆಬ್ರವರಿ 12, 2026, ಗುರುವಾರದ ರಾಶಿ ಭವಿಷ್ಯ
ಮೇಷ ರಾಶಿ : ಜನರಿಗೆ ಶುಭ ವರ್ತನೆಗಳು – ಹಣ, ಪ್ರೀತಿ ಮತ್ತು ಆರೋಗ... ಓದನ್ನು ಮುಂದುವರಿಸಿ
ಫೆಬ್ರವರಿ 11, 2026 - ಬುಧವಾರದ ರಾಶಿ ಭವಿಷ್ಯ
ಮೇಷ ರಾಶಿ – ಇಂದು ಮೇಷ ರಾಶಿಯವರಿಗೆ ಪ್ರವಾಸಕ್ಕೆ ಅತ್ಯಂತ ಯೋಗ್ಯವ... ಓದನ್ನು ಮುಂದುವರಿಸಿ
ಫೆಬ್ರವರಿ 9, 2026, ಸೋಮವಾರದ ರಾಶಿ ಭವಿಷ್ಯ
ಮೇಷ ರಾಶಿ : ಇಂದು ಮಿಶ್ರ ಫಲಗಳ ದಿನ ಶತ್ರುಗಳಿಂದ ತೊಂದರೆ ಉಂಟಾಗು... ಓದನ್ನು ಮುಂದುವರಿಸಿ
ಈ ಸಂಖ್ಯೆಯಲ್ಲಿ ಜನಿಸಿದವರು ಐಶ್ವರ್ಯಕ್ಕೆ ಕಾರಣರಾಗುತ್ತಾರೆ; ಕುಟುಂಬಕ್ಕೆ ಧನಲಾಭದ ಯೋಗ
ಅಂಕಶಾಸ್ತ್ರದ ಪ್ರಕಾರ, ವ್ಯಕ್ತಿಯ ಜನ್ಮ ದಿನಾಂಕವು ಅವರ ಜೀವನ ಮಾತ್ರವಲ್ಲದೆ ಕುಟುಂಬದ... ಓದನ್ನು ಮುಂದುವರಿಸಿ
ಫೆಬ್ರವರಿ 7, 2026, ಶನಿವಾರದ ರಾಶಿ ಭವಿಷ್ಯ
ಮೇಷ ರಾಶಿ – ಇಂದು ನೀವು ಬಹಳ ದಿನಗಳಿಂದ ಕಂಡಿದ್ದ ಪ್ರೀತಿಯ ಕನಸು... ಓದನ್ನು ಮುಂದುವರಿಸಿ
ಫೆಬ್ರವರಿ 5, 2026, ಗುರುವಾರದ ರಾಶಿ ಭವಿಷ್ಯ
ಮೇಷ ರಾಶಿ : ಇಂದು ಆತ್ಮವಿಶ್ವಾಸ ಹೆಚ್ಚಿರುತ್... ಓದನ್ನು ಮುಂದುವರಿಸಿ
ಫೆಬ್ರವರಿ 4, 2026, ಬುಧವಾರದ ರಾಶಿ ಭವಿಷ್ಯ
ಮೇಷ ರಾಶಿ : ಕೆಲಸದಲ್ಲಿ ಹೊಸ ಅವಕಾಶಗಳು ಕಾಣಿ... ಓದನ್ನು ಮುಂದುವರಿಸಿ
ಫೆಬ್ರವರಿ 2, 2026, ಸೋಮವಾರದ ರಾಶಿ ಭವಿಷ್ಯ
ಮೇಷ ರಾಶಿ : ಇಂದು ಹೊಸ ಆರಂಭಗಳಿಗೆ ಉತ್ತಮ ದಿನ. ಕೆಲಸದಲ್ಲ... ಓದನ್ನು ಮುಂದುವರಿಸಿ