ಒತ್ತುವರಿ ಮಾಡಿ ಗಣಿಗಾರಿಕೆ ನಡೆಸಿದವರಿಗೆ ಗುಡ್ ನ್ಯೂಸ್ : ಒತ್ತುವರಿ ಗಣಿಗಾರಿಕೆ ದಂಡ ಪಾವತಿ ಸಡಿಲಿಕೆ
ಬೆಂಗಳೂರು: ರಾಜ್ಯ ಸರ್ಕಾರವು ಕಟ್ಟಡ ಕಲ್ಲುಗಣಿ ಗುತ್ತಿಗೆದಾರರು ಹಾಗೂ ಲೈಸೆನ್ಸ್‌ದಾರರಿಗೆ ಮಹತ್ವದ ಸಡಿಲಿಕೆ ನೀಡಿದೆ. One Time Settlement (OTS) ಯೋಜನೆಯಡಿ ಗುತ್ತಿಗೆ ಅಥವಾ ಲೈಸೆನ್ಸ್ ಪ್ರದೇಶಗಳಲ್ಲಿ ಅನಧಿಕೃತ ಉಪಖನಿಜ ಉತ್ಪಾದನೆ, ಖನಿಜ ಸಾಗಾಣಿಕೆಗೆ ಪರವಾನಗಿ ಪಡೆಯದೇ ಸಾಗಾಣಿಕೆ, ಮತ್ತು ಒತ್ತುವರಿ ಗಣಿಗಾರಿಕೆ ಮಾಡಿದ ಪ್ರಕರಣಗಳಿಗೆ ವಿಧಿಸಲಾದ ದಂಡಗಳನ್ನು ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.
ಒತ್ತುವರಿ ಮಾಡಿ ಗಣಿಗಾರಿಕೆ ನಡೆಸಿದವರಿಗೆ
ಸಂಕ್ರಮಣಕ್ಕೆ ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು, 2025ರ ನಿಯಮ 44-A ಜಾರಿಗೆ ತಂದಲಾಗಿದೆ. 2006-07 ರಿಂದ ಸಂಚಿತ ಆಡಿಟ್ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ಉಪಖನಿಜ ಉತ್ಪಾದನೆ, ರಾಜಧನ ಪಾವತಿಸದೇ ಸಾಗಾಣಿಕೆ, ಒತ್ತುವರಿ ಗಣಿಗಾರಿಕೆ ಮಾಡಿದ ಪ್ರಕರಣಗಳಿಗೆ ಈ ಯೋಜನೆ ಅನ್ವಯವಾಗಲಿದೆ. ಈಗಾಗಲೇ ಸಂಪೂರ್ಣ ದಂಡ ಪಾವತಿಸಿದ ಪ್ರಕರಣಗಳಿಗೆ ಮರುದಂಡ ವಿಧಿಸಲಾಗುವುದಿಲ್ಲ; ಭಾಗಶಃ ಪಾವತಿಸಿದರೆ ಉಳಿಕೆ ಮೊತ್ತವನ್ನು OTS ಅಡಿಯಲ್ಲಿ ಪರಿಗಣಿಸಲಾಗುತ್ತದೆ.
ಅನಧಿಕೃತ ಸಾಗಾಣಿಕೆ ಮಾಡಿದ ಕಟ್ಟಡ ಕಲ್ಲಿನ ಪ್ರಮಾಣವನ್ನು ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ (KSRSAC) ನೀಡುವ ಡಿಜಿಪಿಎಸ್ ಮತ್ತು ಡ್ರೋನ್ ಸರ್ವೆ ವರದಿಗಳ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ನೋಟೀಸ್ ಜಾರಿಯಾದ ನಂತರ 6 ತಿಂಗಳೊಳಗೆ ದಂಡ ಪಾವತಿಸಬೇಕು ಮತ್ತು 4 ಸಮಾನ ಕಂತುಗಳಲ್ಲಿ ಪಾವತಿಸಲು ಅವಕಾಶ ನೀಡಲಾಗಿದೆ.
ಒಂದು ವೇಳೆ OTS ಯೋಜನೆಯಲ್ಲಿನ ನಿಗದಿತ ಅವಧಿಯಲ್ಲಿ ದಂಡ ಪಾವತಿಸದಿದ್ದರೆ, ಗುತ್ತಿಗೆ ರದ್ದುಪಡಿಸುವ ಕ್ರಮ ಕೈಗೊಳ್ಳಲಾಗುತ್ತದೆ. ರದ್ದುಪಡಿಸುವ ಮೊದಲು ಗುತ್ತಿಗೆದಾರರಿಗೆ ಸ್ಪಷ್ಟೀಕರಣ ನೀಡಲು ಅವಕಾಶ ನೀಡಲಾಗುತ್ತದೆ. ಬಾಕಿ ಇರುವವರನ್ನು ಹೊಸ ಗುತ್ತಿಗೆ ಮಂಜೂರಾತಿ ಹಾಗೂ ಟೆಂಡರ್/ಹರಾಜು ಪ್ರಕ್ರಿಯೆಯಿಂದ ದೂರವಿಡಲಾಗುತ್ತದೆ. ಸರ್ಕಾರದ ಈ ನಿರ್ಧಾರದಿಂದ ಬಾಕಿ ಉಳಿದ ದಂಡ ಪ್ರಕರಣಗಳನ್ನು ಇತ್ಯರ್ಥಪಡಿಸಲು ಗುತ್ತಿಗೆದಾರರಿಗೆ ಅವಕಾಶ ದೊರೆತಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಬಾಲಕರು ಕೆರೆಗೆ ಈಜಲು ಹೋಗಿ ನೀರುಪಾಲು, ಪೊಲೀಸರ ಶೋಧ ಕಾರ್ಯ ನಿರಂತರ
ಗದಗ: ಚಿಂಚಲಿ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಕೆರೆಯಲ್ಲಿ ಈಜಲು ಇ... ಓದನ್ನು ಮುಂದುವರಿಸಿ
ರಕ್ತ ಚಂದ್ರಗ್ರಹಣ: ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ದರ್ಶನ ಸಮಯ ತಾತ್ಕಾಲಿಕ ಬದಲಾವಣೆ
ದಕ್ಷಿಣ ಕನ್ನಡ: ಮಾರ್ಚ್ 3 ರಂದು ಸಂಭವಿಸುವ ರಕ್ತ ಚಂದ್ರಗ್ರಹಣ ಹಿ... ಓದನ್ನು ಮುಂದುವರಿಸಿ
4 ಗ್ರಾಮ ಪಂಚಾಯಿತಿಗಳನ್ನು ಕೈ ಬಿಡದಿದ್ದರೆ ಪಾದಯಾತ್ರೆ – ಕುಮಾರಸ್ವಾಮಿ: “ಮೂಲಭೂತ ಸೌಕರ್ಯ ಇಲ್ಲದಿದ್ದರೆ ಕೈಗಾರಿಕೆ ಬರುವುದಿಲ್ಲ”
ಮಂಡ್ಯ: ಮದ್ದೂರು ನಗರಸಭೆಯಿಂದ ನಾಲ್ಕು ಗ್ರಾಮ ಪಂಚಾಯಿತಿಗಳನ್ನು ಕ... ಓದನ್ನು ಮುಂದುವರಿಸಿ
ಬಜೆಟ್ ಬಳಿಕ ಕುರ್ಚಿ ಗುದ್ದಾಟ: ಅಂತಿಮ ಘಟಕ್ಕೆ ತಲುಪಲಿದೆ – ಬಸವರಾಜ ಬೊಮ್ಮಾಯಿ
ಹಾವೇರಿ: ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ, ಕರ್... ಓದನ್ನು ಮುಂದುವರಿಸಿ
ಹೊರೆ ಹೇಳೋದಕ್ಕಿಂತ ಮೊದಲು ಯೋಚನೆ ಬೇಕಿತ್ತು: ಗ್ಯಾರಂಟಿ ಬಗ್ಗೆ ಡಿಕೆ ಸುರೇಶ್ ಟೀಕೆ
ಬೆಂಗಳೂರು: ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಆರ್ಥಿಕ ಹೊರೆ ಆಗಿದ... ಓದನ್ನು ಮುಂದುವರಿಸಿ
ಅಹಿಂದದ ಮುಂದಿನ ನಾಯಕ ಯಾರು? ಸತೀಶ್ ಜಾರಕಿಹೊಳಿಯ ಹೆಸರೇ ಮುನ್ನಲೆ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಕ ರಾಜ್ಯದಲ್ಲಿ ಅ... ಓದನ್ನು ಮುಂದುವರಿಸಿ
ನಿಗಮ, ಮಂಡಳಿ ಅಧ್ಯಕ್ಷರ ಅವಧಿ ವಿಸ್ತರಣೆ: ಸರ್ಕಾರದಿಂದ ಆದೇಶ
ಬೆಂಗಳೂರು, ಫೆ. 28: ರಾಜ್ಯ ಸರ್ಕಾರವು ನಿಗಮ, ಮಂಡಳಿ ಹಾಗೂ ವಿವಿಧ... ಓದನ್ನು ಮುಂದುವರಿಸಿ
ನನ್ನ ಪರವಾಗಿ ಯಾರೂ ದೆಹಲಿಗೆ ಹೋಗಬೇಡಿ”: ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ
ಬೆಂಗಳೂರು, ಫೆ. 27: “ನನ್ನ ಪರವಾಗಿ ಯಾರೂ ದೆಹಲಿಗೆ ಹೋಗುವುದು ಬೇ... ಓದನ್ನು ಮುಂದುವರಿಸಿ
ರಾಜ್ಯದಲ್ಲಿ ಗುಡುಗು ಮಳೆಯ ಎಚ್ಚರಿಕೆ; ಹಾಸನ, ಕೊಡಗು, ಮೈಸೂರು ಯೆಲ್ಲೋ ಅಲರ್ಟ್
ಬೆಂಗಳೂರು : ರಾಜ್ಯದ ಕೆಲ ಭಾಗಗಳಲ್ಲಿ ಕೆಲವು ದಿನಗಳಿಂದ ತಾಪಮಾನ ಹ... ಓದನ್ನು ಮುಂದುವರಿಸಿ
ನಾಗರಿಕರೇ ಎಚ್ಚರ : ಗಾಳಿ ಕಳೆದುಹೋಗುತ್ತಿದೆ: ಬೆಂಗಳೂರು ಜನರಿಗೆ ಆರೋಗ್ಯ ಎಚ್ಚರಿಕೆ
ಬೆಂಗಳೂರು : ರಾಜ್ಯದ ಪ್ರಮುಖ ನಗರಗಳಲ್ಲಿ ಗಾಳಿಯ ಗುಣಮಟ್ಟ ಹೆಚ್ಚಾ... ಓದನ್ನು ಮುಂದುವರಿಸಿ