ನನ್ನ ಪರವಾಗಿ ಯಾರೂ ದೆಹಲಿಗೆ ಹೋಗಬೇಡಿ”: ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ

ಬೆಂಗಳೂರು, ಫೆ. 27: “ನನ್ನ ಪರವಾಗಿ ಯಾರೂ ದೆಹಲಿಗೆ ಹೋಗುವುದು ಬೇಡ,” ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು. ನಗರದ ಖಾಸಗಿ ಹೋಟೆಲ್ ಹಾಗೂ ಅರಮನೆ ಮೈದಾನದ ಗಾಯತ್ರಿ ವಿಹಾರ ಆವರಣದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ವಿಚಾರದಲ್ಲಿ ತಾವು ಯಾವುದೇ ಮನವಿ ಮಾಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು.

 

ಗುರುವಾರ ಸಚಿವರು ಹಾಗೂ ಶಾಸಕರು ಸಭೆ ಸೇರಿ ದೆಹಲಿಗೆ ತೆರಳಿ ನಿಮ್ಮ ಪರವಾಗಿ ಮನವಿ ಮಾಡುವ ಕುರಿತು ಚರ್ಚಿಸಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ದಯವಿಟ್ಟು ನನ್ನ ವಿಚಾರಕ್ಕೆ ಯಾರೂ ಹೋಗಬೇಡಿ. ನಿಮ್ಮ ವೈಯಕ್ತಿಕ ಸಮಸ್ಯೆಗಳು ಇದ್ದರೆ, ಮಂತ್ರಿ ಸ್ಥಾನ ಅಥವಾ ಹುದ್ದೆಗಾಗಿ ಮನವಿ ಮಾಡಬೇಕಿದ್ದರೆ ಹೋಗಿ. ಆದರೆ ನನ್ನ ವಿಷಯಕ್ಕೆ ದೆಹಲಿಗೆ ಹೋಗುವುದು ಬೇಡ,” ಎಂದು ಹೇಳಿದರು.

 

ಶಕ್ತಿ ಪ್ರದರ್ಶನವಿಲ್ಲ

ನಟ ಬಾಲಕೃಷ್ಣ ಅವರ ಜನ್ಮದಿನದ ನೆಪದಲ್ಲಿ 40ಕ್ಕೂ ಹೆಚ್ಚು ಶಾಸಕರು ಸೇರಿ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ ಎಂಬ ಆರೋಪವನ್ನು ತಳ್ಳಿಹಾಕಿದ ಶಿವಕುಮಾರ್, “ಯಾವುದೇ ಶಕ್ತಿ ಪ್ರದರ್ಶನ ನಡೆಯುತ್ತಿಲ್ಲ. ಕೆಲವರು ವಿಶ್ರಾಂತಿಗೆ, ಕೆಲವರು ಅಧ್ಯಯನಕ್ಕೆ ವಿದೇಶಕ್ಕೆ ಹೋಗುತ್ತಾರೆ. ಕೆಲವರು ದೆಹಲಿಗೆ ಹೋಗುತ್ತಾರೆ, ಕೆಲವರು ಭೋಜನ ಕೂಟಗಳಲ್ಲಿ ಭಾಗವಹಿಸುತ್ತಾರೆ. ಅದು ಅವರ ವೈಯಕ್ತಿಕ ವಿಷಯ, ಪಕ್ಷದೊಂದಿಗೆ ಸಂಬಂಧವಿಲ್ಲ,” ಎಂದರು.

 

“ನಾವು ಹಳಬರು, ಹೊಸಬರಿಗೆ ಅವಕಾಶ ಬೇಕು”

ತಮ್ಮನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಕೆಲವು ಶಾಸಕರು ಹೇಳಿಕೆ ನೀಡಿರುವ ಕುರಿತು ಕೇಳಿದಾಗ, “ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಯಾರೂ ನನ್ನೊಂದಿಗೆ ಮಾತನಾಡಿಲ್ಲ. ಕೆಲವರಿಗೆ ಮಂತ್ರಿಯಾಗುವ ಆಸೆ ಇರುತ್ತದೆ. ನಾನು, ಜಿ. ಪರಮೇಶ್ವರ್, ಎಚ್.ಕೆ. ಪಾಟೀಲ್, ಎಚ್.ಸಿ. ಮಹದೇವಪ್ಪ ಹಾಗೂ ಸಿದ್ದರಾಮಯ್ಯ ಸೇರಿದಂತೆ ನಾವು ಈಗ ಹಳಬರು. ಚಿಕ್ಕ ವಯಸ್ಸಿನಲ್ಲೇ ಮಂತ್ರಿಯಾದವರು. ಈಗ ಹೊಸಬರು ಅವಕಾಶ ಕೇಳುವುದು ಸಹಜ. ಈ ವಿಷಯವನ್ನು ದೆಹಲಿಯವರ ಗಮನಕ್ಕೆ ತರುತ್ತೇನೆ,” ಎಂದು ಹೇಳಿದರು.

“ಕೊನೆಗೂ ನ್ಯಾಯ ಸಿಕ್ಕಿದೆ”

ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಜಾಮೀನು ಸಿಕ್ಕಿರುವ ಬಗ್ಗೆ ಮಾತನಾಡಿದ ಅವರು, “ಯಾರನ್ನಾದರೂ ಕಿರುಕುಳ ನೀಡಲು ಒಂದು ಮಿತಿ ಇರಬೇಕು. ರಾಜಕೀಯ ಉದ್ದೇಶದಿಂದ ಮುಕ್ತಾಯಗೊಂಡಿದ್ದ ಪ್ರಕರಣವನ್ನು ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರ ಸಿಬಿಐಗೆ ಹಸ್ತಾಂತರಿಸಿ ತೊಂದರೆ ನೀಡಲಾಗುತ್ತಿತ್ತು. ಅವರಿಗೆ ಕ್ಷೇತ್ರ ಪ್ರವೇಶಕ್ಕೂ ನಿರ್ಬಂಧ ಹೇರಲಾಗಿತ್ತು. ನ್ಯಾಯಾಲಯವು ಎಲ್ಲಾ ವಿಚಾರಗಳನ್ನು ಗಮನಿಸಿ ಜಾಮೀನು ನೀಡಿದೆ. ಅವರಿಗೆ ಈಗ ನ್ಯಾಯ ಸಿಕ್ಕಿದೆ. ನ್ಯಾಯಾಲಯದ ತೀರ್ಪಿಗೆ ಗೌರವ ಸಲ್ಲಿಸುತ್ತೇವೆ,” ಎಂದು ಹೇಳಿದರು.

 

ಹಂತ ಹಂತವಾಗಿ ನೇಮಕಾತಿ

ಸಚಿವ ಸಂಪುಟದಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದ ಅವರು, “2022ರ ನ್ಯಾಯಾಲಯದ ಆದೇಶದಂತೆ ಹಳೆ ಮೀಸಲಾತಿ ಆಧಾರದಲ್ಲಿ ಮೊದಲ ಹಂತದಲ್ಲಿ 56 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಒಟ್ಟು 1 ಲಕ್ಷಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ ಮಾಡುವ ಉದ್ದೇಶವಿದೆ. 2.84 ಲಕ್ಷ ಖಾಲಿ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು. ನ್ಯಾಯಾಲಯದ ಆದೇಶಕ್ಕೆ ತಲೆಬಾಗಿ ಕಾನೂನುಬದ್ಧವಾಗಿ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತದೆ,” ಎಂದು ಹೇಳಿದರು.

 

ಕಾವೇರಿ ಆರನೇ ಹಂತಕ್ಕೆ ಒಪ್ಪಿಗೆ

ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನಿನ್ನೆ ಸಚಿವ ಸಂಪುಟ ಸಭೆಯಲ್ಲಿ ಕಾವೇರಿ ಆರನೇ ಹಂತದ ಕುಡಿಯುವ ನೀರಿನ ಯೋಜನೆಗೆ ಐತಿಹಾಸಿಕ ಒಪ್ಪಿಗೆ ನೀಡಲಾಗಿದೆ. ಭವಿಷ್ಯದ ಬೆಂಗಳೂರಿನ ಬೆಳವಣಿಗೆ ಗಮನದಲ್ಲಿಟ್ಟು 7 ಸಾವಿರ ಕೋಟಿ ರೂ. ವೆಚ್ಚದಲ್ಲಿ ಯೋಜನೆ ಜಾರಿಗೆ ತರಲಾಗುತ್ತಿದೆ. ಜೈಕಾ ಸಂಸ್ಥೆಯ ನೆರವು ಪಡೆಯಲಾಗುತ್ತಿದೆ. ನಾನು ಸಚಿವನಾದ ಬಳಿಕ ಕಾವೇರಿಯಿಂದ 6 ಟಿಎಂಸಿ ನೀರನ್ನು ಬೆಂಗಳೂರಿಗೆ ಒದಗಿಸಲು ಅನುಮೋದನೆ ನೀಡಿದ್ದೆ,” ಎಂದು ತಿಳಿಸಿದರು. ಜಿಬಿಎ ಚುನಾವಣೆಯ ಕುರಿತು ಕೇಳಿದ ಪ್ರಶ್ನೆಗೆ, “ನ್ಯಾಯಾಲಯದ ಆದೇಶದಂತೆ ಪ್ರಕ್ರಿಯೆ ನಡೆಯುತ್ತಿದೆ,” ಎಂದು ಉತ್ತರಿಸಿದರು.

 


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

1 day ago

   
Image 1
Image 1
ಗದಗ

ಬಾಲಕರು ಕೆರೆಗೆ ಈಜಲು ಹೋಗಿ ನೀರುಪಾಲು, ಪೊಲೀಸರ ಶೋಧ ಕಾರ್ಯ ನಿರಂತರ

ಗದಗ: ಚಿಂಚಲಿ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಕೆರೆಯಲ್ಲಿ ಈಜಲು ಇ... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1
ದಕ್ಷಿಣಕನ್ನಡ

ರಕ್ತ ಚಂದ್ರಗ್ರಹಣ: ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ದರ್ಶನ ಸಮಯ ತಾತ್ಕಾಲಿಕ ಬದಲಾವಣೆ

ದಕ್ಷಿಣ ಕನ್ನಡ: ಮಾರ್ಚ್ 3 ರಂದು ಸಂಭವಿಸುವ ರಕ್ತ ಚಂದ್ರಗ್ರಹಣ ಹಿ... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1
ಮಂಡ್ಯ

4 ಗ್ರಾಮ ಪಂಚಾಯಿತಿಗಳನ್ನು ಕೈ ಬಿಡದಿದ್ದರೆ ಪಾದಯಾತ್ರೆ – ಕುಮಾರಸ್ವಾಮಿ: “ಮೂಲಭೂತ ಸೌಕರ್ಯ ಇಲ್ಲದಿದ್ದರೆ ಕೈಗಾರಿಕೆ ಬರುವುದಿಲ್ಲ”

ಮಂಡ್ಯ: ಮದ್ದೂರು ನಗರಸಭೆಯಿಂದ ನಾಲ್ಕು ಗ್ರಾಮ ಪಂಚಾಯಿತಿಗಳನ್ನು ಕ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಹಾವೇರಿ

ಬಜೆಟ್ ಬಳಿಕ ಕುರ್ಚಿ ಗುದ್ದಾಟ: ಅಂತಿಮ ಘಟಕ್ಕೆ ತಲುಪಲಿದೆ – ಬಸವರಾಜ ಬೊಮ್ಮಾಯಿ

ಹಾವೇರಿ: ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ, ಕರ್... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಬೆಂಗಳೂರು ನಗರ

ಒತ್ತುವರಿ ಮಾಡಿ ಗಣಿಗಾರಿಕೆ ನಡೆಸಿದವರಿಗೆ ಗುಡ್ ನ್ಯೂಸ್ : ಒತ್ತುವರಿ ಗಣಿಗಾರಿಕೆ ದಂಡ ಪಾವತಿ ಸಡಿಲಿಕೆ

ಬೆಂಗಳೂರು: ರಾಜ್ಯ ಸರ್ಕಾರವು ಕಟ್ಟಡ ಕಲ್ಲುಗಣಿ ಗುತ್ತಿಗೆದಾರರು ಹ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಬೆಂಗಳೂರು ನಗರ

ಹೊರೆ ಹೇಳೋದಕ್ಕಿಂತ ಮೊದಲು ಯೋಚನೆ ಬೇಕಿತ್ತು: ಗ್ಯಾರಂಟಿ ಬಗ್ಗೆ ಡಿಕೆ ಸುರೇಶ್ ಟೀಕೆ

ಬೆಂಗಳೂರು: ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಆರ್ಥಿಕ ಹೊರೆ ಆಗಿದ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಬೆಂಗಳೂರು ನಗರ

ಅಹಿಂದದ ಮುಂದಿನ ನಾಯಕ ಯಾರು? ಸತೀಶ್ ಜಾರಕಿಹೊಳಿಯ ಹೆಸರೇ ಮುನ್ನಲೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಕ ರಾಜ್ಯದಲ್ಲಿ ಅ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಬೆಂಗಳೂರು ನಗರ

ನಿಗಮ, ಮಂಡಳಿ ಅಧ್ಯಕ್ಷರ ಅವಧಿ ವಿಸ್ತರಣೆ: ಸರ್ಕಾರದಿಂದ ಆದೇಶ

ಬೆಂಗಳೂರು, ಫೆ. 28: ರಾಜ್ಯ ಸರ್ಕಾರವು ನಿಗಮ, ಮಂಡಳಿ ಹಾಗೂ ವಿವಿಧ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಬೆಂಗಳೂರು ನಗರ

ರಾಜ್ಯದಲ್ಲಿ ಗುಡುಗು ಮಳೆಯ ಎಚ್ಚರಿಕೆ; ಹಾಸನ, ಕೊಡಗು, ಮೈಸೂರು ಯೆಲ್ಲೋ ಅಲರ್ಟ್

ಬೆಂಗಳೂರು : ರಾಜ್ಯದ ಕೆಲ ಭಾಗಗಳಲ್ಲಿ ಕೆಲವು ದಿನಗಳಿಂದ ತಾಪಮಾನ ಹ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ನಾಗರಿಕರೇ ಎಚ್ಚರ : ಗಾಳಿ ಕಳೆದುಹೋಗುತ್ತಿದೆ: ಬೆಂಗಳೂರು ಜನರಿಗೆ ಆರೋಗ್ಯ ಎಚ್ಚರಿಕೆ

ಬೆಂಗಳೂರು : ರಾಜ್ಯದ ಪ್ರಮುಖ ನಗರಗಳಲ್ಲಿ ಗಾಳಿಯ ಗುಣಮಟ್ಟ ಹೆಚ್ಚಾ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1