ಅಹಿಂದದ ಮುಂದಿನ ನಾಯಕ ಯಾರು? ಸತೀಶ್ ಜಾರಕಿಹೊಳಿಯ ಹೆಸರೇ ಮುನ್ನಲೆ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಕ ರಾಜ್ಯದಲ್ಲಿ ಅಹಿಂದ ನಾಯಕತ್ವವನ್ನು ಯಾರು ವಹಿಸಲಿದ್ದಾರೆ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಹೆಸರು ಮುನ್ನಲೆಗೆ ಬರುತ್ತಿದೆ. 2028ರ ಮುಖ್ಯಮಂತ್ರಿ ಸ್ಥಾನವನ್ನು ಗುರಿಯಾಗಿಸಿಕೊಂಡಿರುವ ಸತೀಶ್, ಅಹಿಂದ ನಾಯಕನ ಪಟ್ಟಕ್ಕಾಗಿ ತಂತ್ರಗಾರಿಕೆಯನ್ನು ಆರಂಭಿಸಿದ್ದಾರೆ ಎನ್ನಲಾಗಿದೆ.
2004-06ರ ಅವಧಿಯಲ್ಲಿ ಧರ್ಮಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಜವಳಿ ಸಚಿವರಾಗಿದ್ದ ಸತೀಶ್ ಜಾರಕಿಹೊಳಿ, ಯಮಕನಮರಡಿ ವಿಧಾನಸಭಾ ಕ್ಷೇತ್ರದಿಂದ 2008, 2013, 2018 ಹಾಗೂ 2023ರಲ್ಲಿ ಸತತ ನಾಲ್ಕು ಬಾರಿ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2013-18ರ ಅವಧಿಯಲ್ಲಿ ಅಬಕಾರಿ ಮತ್ತು ಸಣ್ಣ ಕೈಗಾರಿಕೆ ಇಲಾಖೆ ಸಚಿವರಾಗಿದ್ದ ಅವರು, 2018-19ರಲ್ಲಿ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಸಚಿವರಾಗಿಯೂ ಕಾರ್ಯನಿರ್ವಹಿಸಿದರು. ಪ್ರಸ್ತುತ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದಾರೆ.
ಅಹಿಂದ ರಾಜಕೀಯದಲ್ಲಿ ಪಾತ್ರ
ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಮತ್ತು ದಲಿತ) ಸಮುದಾಯ ಕಾಂಗ್ರೆಸ್ ಪಕ್ಷದ ಪ್ರಮುಖ ಮತಬ್ಯಾಂಕ್ ಆಗಿದೆ. ಈ ಸಮುದಾಯಗಳ ಬೆಂಬಲವನ್ನು ಏಕೀಕರಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದರು. ಅವರ ಬಳಿಕ ಈ ಮತಗಳು ಚದುರದಂತೆ ನೋಡಿಕೊಳ್ಳುವುದು ಪಕ್ಷಕ್ಕೆ ಸವಾಲಾಗಿದೆ. ಇತ್ತೀಚೆಗೆ ಯತೀಂದ್ರ ಸಿದ್ದರಾಮಯ್ಯ ಅವರು ಸತೀಶ್ ಜಾರಕಿಹೊಳಿ ಅಹಿಂದ ನಾಯಕತ್ವ ವಹಿಸಲು ಸಮರ್ಥರು ಎಂಬ ಹೇಳಿಕೆ ನೀಡಿದ್ದು ಚರ್ಚೆಗೆ ಕಾರಣವಾಯಿತು. ಕಾಂಗ್ರೆಸ್ ಒಳಗಿರುವ ಕೆಲ ನಾಯಕರು ಕೂಡ ಇದನ್ನು ಸಮರ್ಥಿಸುತ್ತಿದ್ದಾರೆ ಎನ್ನಲಾಗಿದೆ.
ಸತೀಶ್ ಜಾರಕಿಹೊಳಿಯ ಪ್ಲಸ್ ಅಂಶಗಳು
ಅಹಿಂದ ಚಳುವಳಿಯಲ್ಲಿ ಅನುಭವ
ಮಾನವ ಬಂಧುತ್ವ ವೇದಿಕೆಯ ಮೂಲಕ ಸಂಘಟನೆ ನಿರ್ಮಾಣ
ವಾಲ್ಮೀಕಿ ಸಮುದಾಯದ ಬೆಂಬಲ (ರಾಜ್ಯದಲ್ಲಿ ಶೇ.7ರಷ್ಟು ಮತಶಕ್ತಿ)
ರಾಜಕೀಯ ತಂತ್ರಗಾರಿಕೆ ಹಾಗೂ ಸಂಘಟನೆ ಸಾಮರ್ಥ್ಯ
ಪಕ್ಷಕ್ಕೆ ಸಂಪನ್ಮೂಲ ಕ್ರೋಡೀಕರಿಸುವ ವೈಯಕ್ತಿಕ ಶಕ್ತಿ
ಗಂಭೀರ ಆರೋಪಗಳಿಲ್ಲದ ಸ್ವಚ್ಛ ಇಮೇಜ್
ಮೈನಸ್ ಅಂಶಗಳು
ಸಿದ್ದರಾಮಯ್ಯ ಮಟ್ಟದ ಮಾತಿನ ಕಲೆ ಮತ್ತು ಜನಸಂಪರ್ಕದ ಶೈಲಿ ಕೊರತೆ ಎಂಬ ಅಭಿಪ್ರಾಯ
ಉತ್ತರ ಕರ್ನಾಟಕದಲ್ಲಿ ಪ್ರಭಾವ ಇದ್ದರೂ ಹಳೆ ಮೈಸೂರು ಮತ್ತು ಕರಾವಳಿ ಭಾಗದಲ್ಲಿ ಪ್ರಭಾವ ಕಡಿಮೆ
ಅಹಿಂದ ಸಮುದಾಯದ ಪೂರ್ಣ ನಂಬಿಕೆ ಸಂಪಾದಿಸುವ ಸವಾಲು
ಮುಂದಿನ ಸವಾಲು
ಸಿದ್ದರಾಮಯ್ಯ ಬಳಿಕ ಅಹಿಂದ ಸಮುದಾಯವನ್ನು ಒಂದೇ ವೇದಿಕೆಯಲ್ಲಿ ಕಾಯ್ದುಕೊಳ್ಳಲು ಸಮರ್ಥ ನಾಯಕತ್ವದ ಅಗತ್ಯ ಇದೆ. ಈ ಹಿನ್ನೆಲೆ ಸತೀಶ್ ಜಾರಕಿಹೊಳಿ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಆದರೆ ಅಹಿಂದ ಸಮುದಾಯ ಅವರನ್ನು ಎಷ್ಟು ಮಟ್ಟಿಗೆ ಒಪ್ಪಿಕೊಳ್ಳುತ್ತದೆ ಹಾಗೂ ಅವರು ರಾಜ್ಯಮಟ್ಟದ ನಾಯಕತ್ವವನ್ನು ಹೇಗೆ ಕಟ್ಟಿಕೊಳ್ಳುತ್ತಾರೆ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.
ರಾಜಕೀಯ ಪಯಣ ಮತ್ತು ಹಿನ್ನೆಲೆ
1997ರಿಂದ 2008ರವರೆಗೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಸತೀಶ್ ಜಾರಕಿಹೊಳಿ ತಮ್ಮ ರಾಜಕೀಯ ಪಯಣ ಆರಂಭಿಸಿದರು. ಅದಕ್ಕೂ ಮೊದಲು ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಹಾಗೂ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಜೊತೆಗೆ ಕರ್ನಾಟಕ ರಾಜ್ಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಮಹಾಮಂಡಳಿ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಬಾಲಕರು ಕೆರೆಗೆ ಈಜಲು ಹೋಗಿ ನೀರುಪಾಲು, ಪೊಲೀಸರ ಶೋಧ ಕಾರ್ಯ ನಿರಂತರ
ಗದಗ: ಚಿಂಚಲಿ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಕೆರೆಯಲ್ಲಿ ಈಜಲು ಇ... ಓದನ್ನು ಮುಂದುವರಿಸಿ
ರಕ್ತ ಚಂದ್ರಗ್ರಹಣ: ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ದರ್ಶನ ಸಮಯ ತಾತ್ಕಾಲಿಕ ಬದಲಾವಣೆ
ದಕ್ಷಿಣ ಕನ್ನಡ: ಮಾರ್ಚ್ 3 ರಂದು ಸಂಭವಿಸುವ ರಕ್ತ ಚಂದ್ರಗ್ರಹಣ ಹಿ... ಓದನ್ನು ಮುಂದುವರಿಸಿ
4 ಗ್ರಾಮ ಪಂಚಾಯಿತಿಗಳನ್ನು ಕೈ ಬಿಡದಿದ್ದರೆ ಪಾದಯಾತ್ರೆ – ಕುಮಾರಸ್ವಾಮಿ: “ಮೂಲಭೂತ ಸೌಕರ್ಯ ಇಲ್ಲದಿದ್ದರೆ ಕೈಗಾರಿಕೆ ಬರುವುದಿಲ್ಲ”
ಮಂಡ್ಯ: ಮದ್ದೂರು ನಗರಸಭೆಯಿಂದ ನಾಲ್ಕು ಗ್ರಾಮ ಪಂಚಾಯಿತಿಗಳನ್ನು ಕ... ಓದನ್ನು ಮುಂದುವರಿಸಿ
ಬಜೆಟ್ ಬಳಿಕ ಕುರ್ಚಿ ಗುದ್ದಾಟ: ಅಂತಿಮ ಘಟಕ್ಕೆ ತಲುಪಲಿದೆ – ಬಸವರಾಜ ಬೊಮ್ಮಾಯಿ
ಹಾವೇರಿ: ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ, ಕರ್... ಓದನ್ನು ಮುಂದುವರಿಸಿ
ಒತ್ತುವರಿ ಮಾಡಿ ಗಣಿಗಾರಿಕೆ ನಡೆಸಿದವರಿಗೆ ಗುಡ್ ನ್ಯೂಸ್ : ಒತ್ತುವರಿ ಗಣಿಗಾರಿಕೆ ದಂಡ ಪಾವತಿ ಸಡಿಲಿಕೆ
ಬೆಂಗಳೂರು: ರಾಜ್ಯ ಸರ್ಕಾರವು ಕಟ್ಟಡ ಕಲ್ಲುಗಣಿ ಗುತ್ತಿಗೆದಾರರು ಹ... ಓದನ್ನು ಮುಂದುವರಿಸಿ
ಹೊರೆ ಹೇಳೋದಕ್ಕಿಂತ ಮೊದಲು ಯೋಚನೆ ಬೇಕಿತ್ತು: ಗ್ಯಾರಂಟಿ ಬಗ್ಗೆ ಡಿಕೆ ಸುರೇಶ್ ಟೀಕೆ
ಬೆಂಗಳೂರು: ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಆರ್ಥಿಕ ಹೊರೆ ಆಗಿದ... ಓದನ್ನು ಮುಂದುವರಿಸಿ
ನಿಗಮ, ಮಂಡಳಿ ಅಧ್ಯಕ್ಷರ ಅವಧಿ ವಿಸ್ತರಣೆ: ಸರ್ಕಾರದಿಂದ ಆದೇಶ
ಬೆಂಗಳೂರು, ಫೆ. 28: ರಾಜ್ಯ ಸರ್ಕಾರವು ನಿಗಮ, ಮಂಡಳಿ ಹಾಗೂ ವಿವಿಧ... ಓದನ್ನು ಮುಂದುವರಿಸಿ
ನನ್ನ ಪರವಾಗಿ ಯಾರೂ ದೆಹಲಿಗೆ ಹೋಗಬೇಡಿ”: ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ
ಬೆಂಗಳೂರು, ಫೆ. 27: “ನನ್ನ ಪರವಾಗಿ ಯಾರೂ ದೆಹಲಿಗೆ ಹೋಗುವುದು ಬೇ... ಓದನ್ನು ಮುಂದುವರಿಸಿ
ರಾಜ್ಯದಲ್ಲಿ ಗುಡುಗು ಮಳೆಯ ಎಚ್ಚರಿಕೆ; ಹಾಸನ, ಕೊಡಗು, ಮೈಸೂರು ಯೆಲ್ಲೋ ಅಲರ್ಟ್
ಬೆಂಗಳೂರು : ರಾಜ್ಯದ ಕೆಲ ಭಾಗಗಳಲ್ಲಿ ಕೆಲವು ದಿನಗಳಿಂದ ತಾಪಮಾನ ಹ... ಓದನ್ನು ಮುಂದುವರಿಸಿ
ನಾಗರಿಕರೇ ಎಚ್ಚರ : ಗಾಳಿ ಕಳೆದುಹೋಗುತ್ತಿದೆ: ಬೆಂಗಳೂರು ಜನರಿಗೆ ಆರೋಗ್ಯ ಎಚ್ಚರಿಕೆ
ಬೆಂಗಳೂರು : ರಾಜ್ಯದ ಪ್ರಮುಖ ನಗರಗಳಲ್ಲಿ ಗಾಳಿಯ ಗುಣಮಟ್ಟ ಹೆಚ್ಚಾ... ಓದನ್ನು ಮುಂದುವರಿಸಿ